ಒಂದು ಬದಿಗೆ ಚೂಪು ಇರುವ ಮೂರು ನಾಲ್ಕು ಫೂಟು ದೊಡ್ಡ ಕೋಲನ್ನು ಒಬ್ಬ ಆಟಗಾರ ಕೆಸರಿನಲ್ಲಿ ಒಗೆಯುತ್ತಾನೆ. ಅದು ನೆಟ್ಟಗೆ ನಿಲ್ಲದಿದ್ದರೆ ಇನ್ನೊಬ್ಬ ಒಗೆಯುತ್ತಾನೆ. ನೆಟ್ಟಗೆ ನಿಂತ ಕೋಲನ್ನು ಇತರರು ಒಬ್ಬೊಬ್ಬರಾಗಿ ತಮ್ಮ ಕೋಲುಗಳನ್ನೊಗೆದು ಬೀಳಿಸಲು ಪ್ರಯತ್ನಿಸುತ್ತಾರೆ. ಯಾರು ಪ್ರಯತ್ನಿಸಿ ಕೆಡವುವರೋ ಅವರೇ ವಿಜೇತರು.