ಈ ಆಟಕ್ಕೆ ದೊಟ್ಟ ಬೈಲು ಬೇಕು. ದೊಡ್ಡ ಬೈಲಿನಲ್ಲಿ ಸರಿ ಸಂಖ್ಯೆಯಲ್ಲಿದ್ದ ಆಟಗಾರರು ಎರಡು ಪಂಗಡಗಳಾಗಿ ನಿಲ್ಲುವರು. ಒಬ್ಬರು ಹಾಯುವವರು; ಇನ್ನೊಬ್ಬರು ಕಟ್ಟುವವರು. ಹಾಯುವವರು ಐದಿ ಗೆರೆಟೆಯ ಚೂರುಗಳನ್ನು ತೆಗೆದುಕೊಂಡು, ಚಿತ್ರದಲ್ಲಿ ತೋರಿಸಿದಂತೆ ನೆಲದ ಮೇಲೆ ನಿಲ್ಲಿಸುವರು. 

ಗೆರೆಟೆಯನ್ನು ನಿಲ್ಲಿಸಿದ ಸ್ಥಳವೇ ಮಂಡ. ಚಿಕ್ಕಕಲ್ಲಿ ಅಥವಾ ಸುರಿಗೆ ಕಾಯನ್ನು ಕಾಯಿ ಕತ್ತದ ನಾರು, ಕಂಬಳಿ ಚೂರು ಅಥವಾ ಗೋಣಿ ತಟ್ಟಿನ ಚೂರು ಸುತ್ತಿ ಸುತ್ತಳಿಯಿಂದ ಬಿಗಿದು ಚೆಂಡು ತಯಾರಿಸಿಕೊಳ್ಳುವರು. ಈ ಚೆಂಡಿನಿಂದ ಗೆರಟೆಯ ಪುಳಿಗೆ ಜೋರಾಗಿ ಹೊಡೆಯಬೇಕು. ಆಗ ಗೆರಟೆಯ ಚೂರುಗಳು ಮಂಡದಿಂದ ದೂರದೂರದಲ್ಲಿ ಸಿಡಿಯುವವು. ಆಟ ಕಟ್ಟುವವರು ಗೆರಟಿ ಚೂರು ಸಿಡಿದ ಸ್ಥಳವನ್ನು ನೋಡಿ, ಲಗುಬಗುಯಿಂದ ದೂರ ಓಡುವರು. ಆಗ ಹಾಯುವ ಪಕ್ಷದವರೊಬ್ಬರು ಮಂಡದಲ್ಲಿ ನಿಂತಿರುವ ಆಟಗಾರನಿಗೆ ಚೆಂಡು ಹಕ್ಕಿ ಒಗೆಯುವರು. ಒಮ್ಮೊಮ್ಮೆ ಚೆಂಡು ಸಮೀಪ ಬಿದ್ದಾಗ ಆಟಗಾರನೇ ಚೆಂಡನ್ನು ಹೆಕ್ಕಿ ಮಂಡದಲ್ಲಿ ನಿಂತು ಓಡುವ ಆಟಗಾರರಿಗೆ ಹೊಡೆಯಬಹುದು. ಹೊಡೆತವು ಕಟ್ಟುವ ಈ ಆಟಗಾರರಿಗೆ ತಾಗಿದರೆ ಆಗ ಒಂದು “ಹುಯ್ಲ” ಆಗುವದು. ಹೊಡೆತ ತಾಗದಿದ್ದರೆ ದೂರದಲ್ಲಿ ನಿಂತ ಆಟ ಕಟ್ಟುವವರಿಗೆ ಚೆಂಡಿನಿಂದ ಗುರಿಯುಡುವನು. ಕಟ್ಟುವವರು ಅವನ ಹೊಡೆತದಿಂದ ತಪ್ಪಿಸಿಕೊಳ್ಳವರು. ಆಗ ಕಟ್ಟುವವರ ಹಿಂದೆ ನಿಂತ ಹಾಯುವ ಪಕ್ಷದವರು ಚೆಂಡು ಹೆಕ್ಕಿ ಆಟಗಾರನಿಗೆ ಕಜೊಡುವರು. ಹೆಕ್ಕಿ ಕೊಡುವಾಗ ಚೆಂಡು ಹಾಯುವವರ ಕೈತಪ್ಪಿ ಬಿದ್ದರೆ, ಕಟ್ಟುವವರು ತಮ್ಮ ಚೆಂಡನ್ನು ಕಾಲಿನಿಂದ ತೊರಿ ದೂರಕ್ಕೆ ಎಸೆಯುವರು. ಆಗ ಕಟ್ಟುವ ಪಕ್ಷದ ಇತರರು ಮಂಡಕ್ಕೆ ಬಂದು ದೂರ ಸಿಡಿದ ಗೆರಟಿ ಚೂರುಗಳನ್ನು ಒಟ್ಟಿಗೆ ಮಾಡಲು ಉಪಕ್ರಮಿಸುವರು. ಈ ನಡುವೆ ಹಾಯುವ ಪಕ್ಷದವನು ಚೆಂಡನ್ನು ಮಂಡಕ್ಕೆ ಆಟಗಾರನಡೆಗೆ ಎಸೆಯುವಾಗ, ಚೆಂಡು ನೆಲದಿಂದೆತ್ತರಕ್ಕೆ ಹಾರಿದರೆ, ಕಟ್ಟುವ ಪಕ್ಷದವರು ಅದನ್ನು ಹಿಡಿದು ದೂರ ಎಸೆದು ಗೆರಟೆ ಚೂರುಗಳನ್ನು ಒಟ್ಟು ಮಾಡಿ “ನಗೋರಿ” ಎನ್ನುವರು. ಆಗ ಕಟ್ಟುವ ಪಕ್ಷದವರು ಗೆದ್ದರು. ಹಾಯುವ ಪಕ್ಷದ ಮುಖ್ಯಸ್ಥ ತಾನೇ ಚೆಂಡು ಹೆಕ್ಕಿಕೊಳ್ಳಲು ಮಂಡದಿಂದ ದೂರ ಸರಿಯಬಹುದಷ್ಟೇ, ಆಗ ಅವನ ಕೈಗೆ ಚೆಂಡು ಸಿಗುವ ಮೊದಲೇ ಅಥವಾ ಚೆಂಡು ಹಿಡಿದು ಮಂಡ ಮುಟ್ಟುವ ಮೊದಲೇ ನಾಲ್ಕಾರು ಜನ ಕಟ್ಟುವವರು ಅವನು ಚೆಂಡು ಹೆಕ್ಕದಂತೆ ಅಥವಾ ಮಂಡಕ್ಕೆ ಹೋಗದಂತೆ ಗಟ್ಟಿಯಾಗಿ ಅಪ್ಪಿಕೊಳ್ಳುವರು. ಈ ಸಂದರ್ಭದಲ್ಲಿ ಉಳಿದ ಕಟ್ಟುವ ಆಟಗಾರರು “ನಗೋರಿ” ಕಟ್ಟುವರು. ಇದಕ್ಕೆ ವ್ಯತರಿಕ್ತವಾಗಿ ಹಾಯುವ ಪಕ್ಷದವರು ಕೊಟ್ಟ ಚೆಂಡು ಆಟಗಾರನ ಕೈಗೆ ತಕ್ಷಣ ಸಿಕ್ಕು ಕಟ್ಟುವ ಪಕ್ಷದವರು ಗೆರಟೆ ಚೂರು ಹೆಕ್ಕುವಾಗ, ಇಲ್ಲವೆ ಹೊಡೆತ ತಪ್ಪಿಸಿಕೊಳ್ಳಲು ಓಡುವಾಗ, ಆಟಗಾರ ಹೊಡೆದ ಚೆಂಡು ಕಟ್ಟುವ ಪಕ್ಷದವರಲ್ಲಿ ಯಾರಿಗಾದರೂ ಬಡಿದರೆ ಕಟ್ಟುವ ಪಕ್ಷದ ಮೇಲೆ “ಹುಯ್ಲ” ಆಗುವದು. ಆಗ ಆಡಿದ ಆಟಗಾರನೇ ಮತ್ತೆ ಆಡುವನು. ವಿರುದ್ಧ ಪಕ್ಷದವರು ನಗೋರಿ ಮಾಡಿದರೆ ಹಾಯುವವರಲ್ಲಿ ಇನ್ನೊಬ್ಬನು ಆಡುವನು. ಹೀಗೆ ಹಾಯುವವರೆಲ್ಲ ಆಡಿ ತೀರಿದ ಮೇಲೆ ಕಟ್ಟಿವವರು ಹಾಯುವರು.