ಪ್ರತಿಯೊಬ್ಬ ಆಟಗಾರ ಅಷ್ಟಷ್ಟೇ ಗೇರು (ಗೊವೆ) ಬೀಜಗಳನ್ನು ತರಬೇಕು. ಒಟ್ಟಾದ ಎಲ್ಲ ಬೀಜಗಳನ್ನೂ ಒಂದು ಸ್ಥಳದಲ್ಲಿ ಗುಂಪಾಗಿ ಇಟ್ಟು ಅದರ ಸುತ್ತ ನಿರ್ದಿಷ್ಟ ಅಳತೆಯ ವರ್ತುಳ ತೆಗೆಯುವರು. ಪ್ರತಿಯೊಬ್ಬರು ದೊಡ್ಡ ಗೇರುಬೀಜವನ್ನಾಗಲ, ಚಪ್ಪಟೆ ಕಲ್ಲಿ ಅಥವಾ ಹಂಚಿನ ತುಂಡನ್ನಾಗಲೀ “ಬೆಟ್ಟೆ” ಯಾಗಿ ತಂದಿರುತ್ತಾರೆ. ಒಬ್ಬರು ಎಲ್ಲರ ಬೆಟ್ಟೆಗಳನ್ನೂ ಕೂಡಿಸಿ ಬೊಗಸೆಯಲ್ಲಿಟ್ಟು, ಬೀಜವಿದ್ದ ಸ್ಥಳದಿಂದ ದೂರ ಚಲ್ಲುತ್ತಾರೆ. ಅವು ಸಿಡಿದು ಬೇರೆ ಬೇರೆ ಸ್ಥಳದಲ್ಲಿ ಬೀಳುತ್ತವೆ. ಬೀಜದ ಸಮೀಪ ಬಿದ್ದ ಬೆಟ್ಟೆಯವರು ಕ್ರಮವಾಗಿ ಬೀಜಕ್ಕೆ ಗುರಿ ಕಟ್ಟುತ್ತಾರೆ. ಯಾರೊಬ್ಬರು ಬೆಟ್ಟ ಒಗೆದವನಿಗೆ ಸೇರುತ್ತದೆ. ಒಂದು ಸುತ್ತಿನ ಬಟ್ಟೆ ಒಗೆಯುವದು ಮುಗಿದಾಗ ಎಲ್ಲರ ಬೆಟ್ಟಗಳು ಇನ್ನೊಂದು ದಿಕ್ಕಿನಲ್ಲಿ ಪಸರಿಸಿ ಬಿದ್ದಿರುತ್ತವೆ. ಎರಡನೆಯ ಸುತ್ತಿನಲ್ಲಿಯೂ ಬೀಜದ ಸಮೀಪವಿದ್ದವರು ಕ್ರಮವಾಗಿ ಬೀಜಕ್ಕೆ ಗುರಿ ಕಟ್ಟುತ್ತಾರೆ. ಹೀಗೆ ಬೀಜಗಳೆಲ್ಲ ಮುಗಿಯುವವರೆಗೆ ಆಡುತ್ತಾರೆ. ಬೀಜ ಖರ್ಚಾದ ಮೇಲೆ ಆಟ ಮುಗಿಯಿತು. ಹೆಚ್ಚ ಬೀಜ ದೊರಕಿಸಿದವರು ಗೆದ್ದಂತೆ.