ಅಂಗಳದಲ್ಲಿ ಹಲವಾರು ಆಟಗಾರರು. ಪ್ರತಿಯೊಬ್ಬರು ಒಂದೊಂದು ಬಗರಿ ಇಟ್ಟುಕೊಂಡು ಆಟಕ್ಕೆ ಬರುತ್ತಾರೆ. ಅಂಗಳದಲ್ಲಿ ನಡುವೆ ನಿರ್ದಿಷ್ಟ ಅಳತೆಯ ಒಂದು ವರ್ತುಳವನ್ನು ತೆಗೆದು, ಅದರಲ್ಲಿ ಒಂದು ಚಕ್ಕೆ ಇಡುತ್ತಾರೆ. ಹಾಗೂ ಪ್ರತಿಯೊಬ್ಬರು ತ್ವರಿತವಾಗಿ ಒಂದರ ಹೊಂದೊಂದರಂತೆ ಬಗರಿಗಳನ್ನು ಚಕ್ಕೆಯ ಕಡೆಗೆ ಓಡಿಸುತ್ತಾರೆ. ಬಗರಿಗಳು ವೇಗವಾಗಿ ತಿರುಗಿ ಚಕ್ಕೆಯನ್ನು ವರ್ತುಳದ ಹೊರಗೆ ಹಾಕಿದೊಡನೆ ತಮ್ಮ ತಮ್ಮ ಬಗರಿಗಳನ್ನು ದಾರದಿಂದ ಎಳೆದು ಕೈಮೇಲೆ ತೆಗೆದು ಕೊಳ್ಳುತ್ತಾರೆ. ಈ ಕಾರ್ಯದಲ್ಲಿ ಹಿಂದೆ ಬಿದ್ದು ಕೊನೆಯಲ್ಲಿ ಉಳಿದವನು ಮುಂದಿನ ಆಟಕ್ಕೆ ಬಗರಿ ಒಡ್ಡುವವನಾಗುತ್ತಾನೆ.

ತಮ್ಮ ಬಗರಿಯನ್ನು ಆಟಕ್ಕೆ ಒಡ್ಡಬೇಕಾದುದರಿಂದ ತಪ್ಪಿಸಿಕೊಳ್ಳಲು ಎಲ್ಲರೂ ಹೆಚ್ಚು ಜಾಗರೂಕರಾಗಿ ಬಗರಿ ಎಸೆಯುವ, ಎತ್ತುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಆಟ ತುಂಬಾ ಲವಲವಿಕೆಯಿಂದ ಕೂಡಿದ್ದು ಉತ್ತಮ ಮನರಂಜಕ ನೋಟವನ್ನು ಒದಗಿಸುತ್ತದೆ.