ಕಾಯಿಸಿಪ್ಪೆಯನ್ನು ಒಂದರ ಮೇಲೊಂದರಂತೆ ಕವಚಿಟ್ಟು ಪೇರಿಸುವರು. ಇದೇ ಬೋರೆ. ಬೋರೆ ಕಾಯಲು ಒಬ್ಬ ನಿಲ್ಲುತ್ತಾನೆ. ಉಳಿದವರು ಕಳ್ಳರು ಚಿಂದಿ ಬಟ್ಟೆಯಿಂದ ಮಾಡಿದ ಒಂದು ಚೆಂಡನ್ನು ತೆಗೆದುಕೊಂಡು ಬೇರೆ ಕಾಯುವವನು ಕಳ್ಳರಿಗೆ ಹೊಡೆಯುವನು. ಕಳ್ಳರಲ್ಲಿ ಚೆಂಡಿನ ಪೆಟ್ಟು ತಿಂಧವರು ಬೇರೆ ಕಾಯಬೇಕು. ಪೆಟ್ಟು ತಿನ್ನದೆ ತಪ್ಪಿಸಕೊಂಡು ಅದೇ ಚೆಂಡು ಹೆಕ್ಕಿ ಬೇರೆ ಉರುಳಿಸಲು ಪ್ರಯತ್ನಿಸುವರು. ಬೋರೆ ಉರುಳಿಸಿದರೆ ಅವನು ಒಂದು ಹಂಡಿ ಗೆದ್ದಂತೆ. ಮತ್ತೆ ಬೋರೆ ತಯಾರಿಸಿ ಮೊದಲಿದ್ದವನೇ ಬೋರೆ ಕಾಯಲು ನಿಲ್ಲಬೇಕು. ಆತನು ಕಳ್ಳನೊಬ್ಬನಿಗೆ ಗುರಿಯಿಡುವವರೆಗೆ ಬೋರೆ ಕಾಯಬೇಕು.