ಹತ್ತಾರು ಹಲ್ಪೆ (ಚಪ್ಪಟೆ ಕಲ್ಲು) ಅಥವಾ ಮಡಕೆಚೂರುಗಳನ್ನು ಒಂದು ಸ್ಥಳದಲ್ಲಿ ಒಂದರ ಮೇಲೊಂದರಂತೆ ಇಡಬೇಕು. ಹಲ್ಪೆಯಿಟ್ಟ ಸ್ಥಳದಿಂದ ಸು. ೫ – ೬ ಅಡಿ ಅಂತರದಲ್ಲಿ ಒಂದು ಪಕ್ಷದವರೂ ಅಷ್ಟೇ ಅಂತರದಲ್ಲಿ ಇನ್ನೊಂದು ಬದಿಗೆ ಇನ್ನೊಂದು ಪಕ್ಷದವರೂ ನಿಲ್ಲಬೇಕು. ಒಂದು ಪಕ್ಷದ ಆಟಗಾರರು ಒಬ್ಬೊಬ್ಬರೇ ಚೆಂಡೆಸೆದು ಹಲ್ಪೆಯನ್ನು ಕೆಡುವಲು ಪ್ರಯತ್ನಿಸುವರು.ಚೆಂಡು ತಾಗಿ ಹಲ್ಪೆ ಉದುರಿದ ಕೂಡಲೆ ಆ ಪಕ್ಷದ ಎಲ್ಲರೂ ಓಡುವರು. ವಿರುದ್ಧ ಪಕ್ಷದವರು ಅವರನ್ನು ಮುಟ್ಟಲು ಓಡುವರು. ಹಲ್ಪೆ ಉದುರಿಸಿದವರಲ್ಲಿ ಒಬ್ಬರು ಓಡಿ ಬಂದು, ಹಲ್ಪೆಯನ್ನು ಪೂರ್ಣ ಪೇರಿಸಿದರೆ ಅವರು ಗೆದ್ದಂತೆ. ಹಲ್ಪೆ ಪೇರಿಸುವ ಮೊದಲೇ ವಿರುದ್ಧ ಪಕ್ಷದವರು ಮುಟ್ಟಿದರೆ ಮುಟ್ಟಿಸಿಕೊಂಡವರ ಮೇಲೆ ಲಗೋರಿ.

ಈ ಆಟದಲ್ಲಿ ಓಡಿಸಿಕೊಂಡು ಹೋಗಿ ಮುಟ್ಟುವ ಬದಲಿಗೆ ಚೆಂಡಿನಿಂದ ಹೊಡೆಯುವ ಪದ್ಧತಿಯೂ ಇದೆ. ಓಡಿಸಿ ಮುಟ್ಟುವದೇ ಹೆಚ್ಚು ಜನಪ್ರೀಯ. ಈ ಆಟಕ್ಕೆ ಇನ್ನೊಂದು ಹೆಸರು “ಕಿರ್ ಮುಳೆ”.