ಈ ಆಟಕ್ಕೆ ಕಾಗದದ ಹತ್ತಿಪ್ಪತ್ತು ಚೂರು ಅಥವಾ ಎಲೆ ಬೇಕು. ಎಷ್ಟು ಜನರಾದರೂ ಆಟಬಹುದು, ವಾಲೆಗಳನ್ನು ಒಂದೆಡೆ ಒಂದರ ಮೇಲೊಂದರಂತೆ ಇಟ್ಟು ಅವು ಹಾರಿಹೋಗದಂತೆ ಒಂದು ಚಿಕ್ಕ ಕಲ್ಲನ್ನಿಡಬೇಕು. ಅದರ ಸುತ್ತ ಸುಮಾರು ಒಂದು ಅಡಿ ತ್ರಿಜ್ಯದ ವರ್ತುಳವನ್ನು ತೆಗೆಯಬೇಕು.

ಅನಂತರ ಆಟಗಾರರು ಒಬ್ಬೊಬ್ಬರಾಗಿ ಕಲ್ಲಿನಿಂದಾಗಲೀ, ಚೆಂಡಿನಿಂದಾಗಲೀ ವಾಲೆಗಳಿಗೆ ಗುರಿಯಿಡಬೇಕು. ವರ್ತುಳದ ಹೊರಗೆ ಹೋದ ಎಲೆಗಳಷ್ಟು ಅಂಕ ಕಲ್ಲಿ ಗುರಿಯಿಟ್ಟವನಿಗೆ ಮತ್ತೆ ಎಲೆಗಳನ್ನೆಲ್ಲ ಮೊದಲಿನಂತೆ ಇಟ್ಟು ಎರಡನೆಯವನು ಆಡಬೇಕು. ಎಲ್ಲರೂ ಆಡಿದ ಮೇಲೆ ಪ್ರತಿಯೊಬ್ಬರು ದೊರಕಿಸಿದ ಅಂಕಗಳನ್ನು ಲೆಕ್ಕ ಮಾಡಿ ಹೆಚ್ಚು ಅಂಕ ಗಳಿಸಿದವರು ಒಂದು ಹಂಡಿ ಮಾಡಿದಂತೆ, ಆಟಗಾರರು ಕಡಿಮೆ ಜನವಿದ್ದಾಗ ಎರಡೋ ಮೂರೋ ಅವಕಾಶ ಪಡೆದು ಗಳಿಸಿದ ಅಂಕಗಳನ್ನು ಲೆಕ್ಕ ಮಾಡುವರು.