ಗುರುವಿನ ಮುಖದಿಂದ ಗುರುತು ಕಂಡವರಿಂದ
ಗುರಿಕಂಡು ನೀ ಬಾಳು ಕುರಿಯೇ
ಜ್ಞಾನ ಪರಿಪರಿ ವರ್ಣದ ಕುರಿಗಳ
ಮೇಯಿಸುವ ಕುರುಬನ ನೀ ಸೇರೋ ಕುರಿಯೇ || ಗುರುವಿನ ||

ವೇದ ಶಾಸ್ತ್ರಗಳಿಂಬೋ ಗಾದೆಗೆ ಒಳಗಾಗಿ
ಬಾಧೇ ನೀ ಪಡಬೇಡ ಕುರಿಯೆ
ಆದಿ ಅನಾದಿಗೆ ಆಧಾರವಾಗಿರುವ
ಹಾದಿಯ ನೀ ಸೇರೋ ಕುರಿಯೇ || ಗುರುವಿನ ||

ಬುದ್ದಿ ಇಲ್ಲದೆ ನೀನು ಭುವನವ ತಿರುಗಳು
ಒದ್ದಾಡಿ ಸಾಯುವೆ ಕುರಿಯೆ
ನಿನ್ನ ಸದ್ದು ಅಡಗಲು ಮುನ್ನೆಯ ಮದ ದೂತರವರು
ಗುದ್ದೇಳೆದೈವರು ಕುರಿಯೇ