ಮೊದಲಾಗಿ ಪಲಂಬರುಮರಸುಮಕ್ಕಳ್ ಸತ್ತರಾನೆ ಕುದುರೆ ಪದಾತಿ ಸತ್ತುದರ್ಕೆ ಪ್ರಮಾಣಂ ಮೇರೆಯುಮಿಲ್ಲ ಮಹಾಘೋರತರಂ ಕಾಳೆಗಮಾಗಿರ್ಕ್ಕುಮೆಂದು ಪೇೞ್ದೊಡವಂ ಕೇಳ್ದಂತಪ್ಟೊಡಬ್ಬಾ ನೀಮರಸನಲ್ಲಿಗೆ ಪೋಗಿ ಇಂತೆಂದು ನುಡಿಯಿಂ ನಿಮ್ಮ ಮಗಳಿಂತೆಂದು ಪೇೞ್ದಟ್ಟಿದೊಳೆನ್ನಂ ಗುರುದತ್ತಂಗೆ ಕುಡುವೊಡೆ ಕುಡುಗೆಯುೞದ ಪುರುಷರ್ಕ್ಕಳೆಲ್ಲಂ ಮೊಱೆಯಲ್ಲದವರೆನಗ ತಮ್ಮ ಮೆಚ್ಚಲ್ಲದಾಳೀಗಳೆ ತಮಂಬಡುವೆನೆಂದಟ್ಟಿದೊಳೆಂದಭಯಮತಿ ಕಲ್ಪಿಸಿದ ಮಾತೆಲ್ಲಮನರಸಂಗೆ ದಾದಿ ಪೇೞ್ದೊಡೆ ಅರಸನುಂ ಕೇಳ್ದು ತನ್ನ ಪ್ರಧಾನರಪ್ಪ ನಾಲ್ವರುಂ ಪೆರ್ಗಡೆಳಂ ಕಲ್ಪಿಸಿ ಗುರುದತ್ತನಲ್ಲಿಗೆ ಕೂಸಂ ಕೊಟ್ಟೆನೆಂದಟ್ಟಿದೊಡಾತನುಂ ತನ್ನ ಬಲಮಂ ಕಾದಲೀಯದೆ ಬಾರಿಸಿದಂ ಧಾತ್ರಿವಾಹನನುಂ ತನ್ನ ಬಲಮಂ ಬಾರಿಸಿದನಿಂತೆರಡುಂ ಪಡೆಗಳ್ ಸಂಗ್ರಾಮಮನುಪಸಂಹರಿಸಿ ಸತ್ತವರ್ಗ್ಗೆ ನೊಂದವರ್ಗ್ಗೆ ತಕ್ಕ ವಿಯಂ ಮಾಡಿದ ಬೞಕ್ಕೆ ಕೆಲವು ದಿವಸದಿಂ ಪ್ರಶಸ್ತ ದಿವಸ ವಾರ ನಕ್ಷತ್ರದಿಂ ಹೋರಾಮುಹೂರ್ತದೊಳ್ ಕೂಸಿನನುಕೂದೊಳ್ ಮಗಾವಿಭೂತಿಯಿಂ ಪಾಣಿಗ್ರಹಣ ಪುರಸ್ಸರಮಭಯಮತಿ ಕನ್ನೆಯಂ ಗುರುದತ್ತ ನೃಪತಿಗೆ ಕೊಟ್ಟು ಸನ್ನಾನದಾನಾದಿಗಳಿಂದಾತನಂ ಪೂಜಿಸಿದನಾತನುಂ ಚಂಪಾನಗರದೊಳ್ ಪಲವು ದಿವಸಮಿರ್ದ್ದಿನ್ನೆಮ್ಮ ನಾೞ್ಕೆ ಪೋಪಮೆಮದರಸನಂ ಬೆಸಗೊಳಲಟ್ಟಿದೊಡರಸನುಂ ಕೂಸಿಂಗೆ ತಕ್ಕ ಪೆಂಡವಾಸದ ಪಲಂಬರುಮಗ್ಗಳದ ಸೂಳೆಯರ್ಕಳುಮಂ

ಸಮೇತ ಕನ್ನೆಯನ್ನು (ನಿನ್ನನ್ನು) ವಶಮಾಡುವೆನೆಂದು ಗರ್ಜಿಸಿ ಪ್ರಳಯಕಾಲದ ಸಮುದ್ರವೇ ಮೇರೆದಪ್ಪಿ ಹರಿಯಿತೋ ಎಂಬಂತೆ ಚತುರಂಗ ಸೈನ್ಯಸಮೇತನಾಗಿ ಬಂದು ಪಟ್ಟಣವನ್ನು ಮೂರು ಸುತ್ತಾಗಿ ಮುತ್ತಿಗೆ ಹಾಕಿದ್ದಾನೆ. ನಿಮ್ಮ ರಾಜನು (ತಂದೆ) ತನ್ನಲ್ಲಿರತಕ್ಕ ಸೈನ್ಯದೊಡನೆ ಹೊರಟು ಯುದ್ಧಕ್ಕೆ ಸೈನ್ಯವನ್ನೊಡ್ಡಿ ನಿಂತಿದ್ದಾನೆ. ಹೀಗೆ ಎರಡೂ ಸೈನ್ಯಗಳು ಇಂದಿಗೆ ಏಳು ದಿವಸಗಳಿಂದ ಕಾದಾಡುತ್ತಿವೆ. ಸಾಮಂತರೂ ಮಹಾಸಾಮಂತರು ಮೊದಲಾಗಿ ಹಲವರು ರಾಜ ಕುಮಾರರು ಸತ್ತುಹೋದರು. ಆನೆ, ಕುದುರೆ, ಕಾಲಾಳುಗಳು ಸತ್ತುದಕ್ಕೆ ಲೆಕ್ಕವೂ ಇಲ್ಲ, ಮೇರೆಯೂ ಇಲ್ಲ, ಬಹಳ ಭಯಂಕರವಾದ ಯುದ್ಧವಾಗುತ್ತಿದೆ – – ಎಂದು ದಾದಿ ಹೇಳಿದಳು. ಅದನ್ನು ಆಕೆ ಕೇಳಿ, ಅವ್ವಾ, ನೀವು ರಾಜನ ಬಳಿಗೆ ಹೋಗಿ ಹೀಗೆನ್ನಿರಿ – “ನಿಮ್ಮ ಮಗಳು ನನ್ನೊಡನೆ ಹೀಗೆ ಹೇಳಿ ಕಳುಹಿಸಿರುತ್ತಾಳೆ – ನನ್ನನ್ನು ಗುರುದತ್ತನಿಗೆ ಕೊಡುವುದಾದರೆ ಕೊಡಲಿ. ಉಳಿದ ಗಂಡಸರೆಲ್ಲರೂ ನಂಟತನಕ್ಕೆ ಆಗದವರು. ನನಗೆ ಅವನು ತಮ್ಮ ದೃಷ್ಟಿಯಿಂದ ಮೆಚ್ಚಲ್ಲವಾದರೆ, ಈಗಲೇ ತಪಸ್ಸನ್ನು ಕೈಗೊಳ್ಳುವೆನು – ಎಂದು ಹೇಳಿ ನನ್ನನ್ನು ಕಳುಹಿಸಿದ್ದಾಳೆ.* ಹೀಗೆ ಅಭಯಮತಿ ಹೇಳಿಕೊಟ್ಟ ಮಾತನ್ನೆಲ್ಲ ದಾದಿಯು ಅರಸನಿಗೆ ಹೇಳಿದಳು. ಅರಸನು ಕೇಳಿ, ತನ್ನ ಮುಖ್ಯಸ್ಥರಾದ ನಾಲ್ಕು ಮಂದಿ ಅಕಾರಿಗಳಿಗೆ ಸಂಗತಿಯನ್ನು ತಿಳಿಸಿ, ‘ಕನ್ಯೆಯನ್ನು ಗುರುದತ್ತನಿಗೆ ಕೊಡುತ್ತೇನೆ’ ಎಂದು ಅವರನ್ನು ಗುರುದತ್ತನಲ್ಲಿಗೆ ಕಳುಹಿಸಿದನು. ಇದರಿಂದ ಗುರುದತ್ತನು ತನ್ನ ಸೈನ್ಯವು ಯುದ್ಧಮಾಡದಂತೆ ತಡೆದನು. ಧಾತ್ರಿವಾಹನನೂ ತನ್ನ ಸೈನ್ಯವನ್ನು ತಡೆದನು. ಹೀಗೆ ಎರಡೂ ಸೈನ್ಯಗಳು ಯುದ್ಧವನ್ನು ನಿಲ್ಲಿಸಿ, ಸತ್ತವರಿಗೂ ನೊಂದವರಿಗೂ ತಕ್ಕುದಾದ ವಿಯನ್ನು ಮಾಡಿದನಂತರ ಕೆಲವು ದಿವಸಗಳು ಕಳೆಯಲು ಧಾತ್ರಿವಾಹನನು ಶುಭಕರವಾದ ದಿನ, ವಾರ, ನಕ್ಷತ್ರ, ಹೋರೆ, ಮುಹೂರ್ತದಲ್ಲಿ ಕನ್ಯೆಯ ಅನುಕೂಲದಂತೆ ಬಹಳ ವೈಭವದಿಂದ ಕರಗ್ರಹಣ ಪೂರ್ವಕವಾಗಿ ಅಭಯಮತಿ ಕನ್ಯೆಯನ್ನು ಗುರುದತ್ತ

ಕರಿಕರಿಣಿ ತುರಗಾಶ್ವ ರಥ ಶಿಬಿಕಾದ್ಯನೇಕ ವಾಹನಂಗಳುಮಂ ಮುತ್ತಿನ ಮಾಣಿಕದ ಪೊನ್ನ ಮೂದೆಱದ ಪಲವುಂ ನಾನಾಪ್ರಕಾರದನರ್ಘ್ಯಮಪ್ಪ ತುಡುಗೆಗಳುಮಂ ಬೞವೞಗೊಟ್ಟಿರ್ವರುಮಂ ಪರಸಿಯವರ ನಾೞ್ಕೆ ಕೞಪಿದಂ ಮತ್ತೆ ಗುರುದತ್ತನೃಪತಿಯುಂ ಕತಿಪಯ ದಿವಸಂಗಳಿಂ ತನ್ನ ಪೊೞಲಂ ಹಸ್ತಿನಾಪುರಮನೆಯ್ದಿ ಮಹಾವಿಭೂತಿಯಿಂ ಪೊಕ್ಕಿರ್ದಿಷ್ಟವಿಷಯ ಕಾಮಭೋಗಂಗಳಂ ಪಲಕಾಲಮಭಯಮತಿಯೊಳ್ ಅನುನಯದಿಂದನುಭವಿಸುತ್ತಿರೆಯಾಕೆಗೆ ಸುವರ್ಣಭದ್ರನೆಂಬೊಂ ಮಗಂ ಪುಟ್ಟಿದನಿಂತು ಸಂತೋಷದಿಂ ಕಾಲಂ ಸಲೆ ಮತ್ತೊಂದು ದಿವಸಂ ಹಸ್ತಿನಾಪುರದ ಸಾರೆ ಧರಣಿಭೂಷಣಮೆಂಬ ಪರ್ವತದೊಳಮೃತಾಸ್ರವರೆಂಬ ಗುರುಗಳುಂ ಅಯ್ನೂರ್ವರ್ ಋಷಿಯರಿರ್ದರೆಂಬುದಂ ಕೇಳ್ದು ಪುತ್ರ ಮಿತ್ರ ಕಳತ್ರ ಪರಿವಾರ ಸಮೇತಂ ವಂದನಾಭಕ್ತಿಗೆ ಪೋಗಿ ಗೆಂಟಱೊಳ್ ವಾಹನಂಗಳಿಂದಿೞದು ಬಲಗೊಂಡು ಬಂದರ್ಚಿಸಿ ಗುರುಭಕ್ತಿಗೆಯ್ದು ಭಟಾರರಂ ಬಂದಿಸಿಯುೞದ ಋಷಿಯರ್ಕಳುಮಂ ಗುರುಪರಿವಿಡಿಯಿಂದಂ ಬಂದಿಸಿ ಪಿರಿದು ಬೇಗಂ ಧರ್ಮಮಂ ಕೇಳ್ದು ತದನಚಿತರಮಿಂತೆಂದು ಬೆಸಗೊಂಡಂ ಭಟಾರಾ ಎನ್ನ ಮುನ್ನಿನ ಭವಂಗಳೆನಗಱಯೆ ಬೆಸಸಿಮೆನೆ

ರಾಜನಿಗೆ ಕೊಟ್ಟನು. ಅವನನ್ನು ಸನ್ಮಾನ ದಾನ ಮುಂತಾದವುಗಳಿಂದ ಸತ್ಕರಿಸಿದನು. ಗುರುದತ್ತನು ಚಂಪಾನಗರದಲ್ಲಿ ಹಲವು ದಿವಸ ಇದ್ದು “ಇನ್ನು ನಮ್ಮ ನಾಡಿಗೆ ಹೋಗೋಣ* ಎಂದು ಧಾತ್ರಿವಾಹನ ರಾಜನನ್ನು ಕೇಳಿ ಅನುಮತಿ ಪಡೆಯಲು ಹೇಳಿ ಕಳುಹಿಸಿದನು. ರಾಜನು ತನ್ನ ಮಗಳಿಗೆ ಯೋಗ್ಯವಾದ ರಾಣೀವಾಸದ ಹಲವರು ಶ್ರೇಷ್ಠದಾಸಿಯರನ್ನೂ ಆನೆ, ಹೆಣ್ಣಾನೆ, ವೇಗವಾಗಿ ಓಡುವ ಕುದುರೆ, ರಥ, ಪಲ್ಲಕ್ಕಿ – ಮುಂತಾದ ಅನೇಕ ವಾಹನಗಳನ್ನೂ ಮುತ್ತು, ಮಾಣಿಕ್ಯ, ಚಿನ್ನ – ಈ ಮೂರು ವಿಧದ ಹಲವು ಹಲವಾರು ರೀತಿಯ ಅಮೂಲ್ಯವಾದ ಆಭರಣಗಳನ್ನೂ ಬಳುವಳಿ ಕೊಟ್ಟು ಇಬ್ಬರನ್ನೂ ಆಶೀರ್ವದಿಸಿ, ಅವರ ನಾಡಿಗೆ ಕಳುಹಿಸಿದನು. ಆಮೇಲೆ, ಗುರುದತ್ತ ರಾಜನು ಕೆಲವು ದಿವಸಗಳಲ್ಲಿ ತನ್ನ ಪಟ್ಟಣವಾದ ಹಸ್ತಿನಾಪುರಕ್ಕೆ ಹೋಗಿ ಬಹಳ ವೈಭವದಿಂದ ಪ್ರವೇಶಿಸಿ, ಅಭಯಮತಿಯೊಂದಿಗೆ ಮೆಚ್ಚುಗೆಯಾದ ವಿಷಯದ ಇಚ್ಛೆಯ ಸುಖಗಳನ್ನು ಹಲವು ಕಾಲ ಮನಸ್ಸಿಗೊಪ್ಪುವಂತೆ ಅನುಭವಿಸುತ್ತ ಇದ್ದನು. ಹೀಗಿರಲು ಆಕೆಗೆ ಸುವರ್ಣಭದ್ರನೆಂಬ ಮಗನು ಹುಟ್ಟಿದನು. ಹೀಗೆ ಸಂತೋಷದಿಂದ ಕಾಲ ಕಳೆಯುತ್ತಿದ್ದಿತು. ಅನಂತರ, ಒಂದು ದಿವಸ ಹಸ್ತಿನಾಪುರದ ಬಳಿಯ ಧರಣಿ ಭೂಷಣವೆಂಬ ಪರ್ವತದಲ್ಲಿ ಅಮೃತಾಸ್ರವರೆಂಬ ಗುರುಗಳೂ ಐನೂರು ಮಂದಿ ಋಷಿಗಳೂ ಇದ್ದಾರೆ ಎಂಬುದನ್ನು ಕೇಳಿ, ಗುರುದತ್ತರಾಜನು ತನ್ನ ಪುತ್ರ ಮಿತ್ರ ಪತ್ನೀ ಪರಿವಾರವನ್ನು ಕೂಡಿಕೊಂಡು ಭಕ್ತಿಯಿಂದ ವಂದಿಸುವುದಕ್ಕಾಗಿ ಹೋದನು. ದೂರದಲ್ಲಿಯೇ ವಾಹನಗಳಿಂದ ಇಳಿದು ಪ್ರದಕ್ಷಿಣೆ ಬಂದು ಪೂಜಿಸಿ, ಗುರುಭಕ್ತಿಯನ್ನು ಮಾಡಿ, ಋಷಿಗಳನ್ನು ವಂದಿಸಿ ಉಳಿದ ಋಷಿಗಳನ್ನೂ ಗುರುತ್ವದ ಅನುಕ್ರಮದಿಂದ ನಮಸ್ಕರಿಸಿ ಬಹಳ ಹೊತ್ತಿನವರೆಗೆ ಧರ್ಮಶ್ರವಣವನ್ನು ಮಾಡಿದನು. ಆಮೇಲೆ ಅವರೊಡನೆ – “ಪೂಜ್ಯರೇ, ನನ್ನ ಹಿಂದಿನ ಜನ್ಮಗಳ ವಿಚಾರವನ್ನು ನನಗೆ ತಿಳಿಯುವಂತೆ ಅಪ್ಪಣೆ ಕೊಡಿ* ಎಂದನು. ಆಗ ಋಷಿಗಳು ಹೀಗೆಂದರು. “ನೀನು ಈ ಜನ್ಮದಿಂದ ತೊಡಗಿ ಹಿಂದೆ ನಾಲ್ಕನೆಯ ಜನ್ಮದಲ್ಲಿ ಸಾವಸ್ತಿ ಎಂಬ ಪಟ್ಟಣದಲ್ಲಿ

ಭಟಾರರಿಂತೆಂದು ಪೇೞ್ದರೀ ಭವದಿಂ ತೊಟ್ಟು ನಾಲ್ಕನೆಯ ಭವದಂದು ನೀಂ ಸಾವಸ್ತಿಯೆಂಬ ಪೊೞಲೊಳ್ ಉಪರಿಚರನೆಂಬ ಮಂಡಳಿಕನಯ್ ಜಲಕ್ರೀಡೆಯಾಡುತ್ತಿರ್ಪನ್ನೆಗಂ ವಜ್ರದಾಡನೆಂಬ ವಿದ್ಯಾಧರನಿಂ ಕೊಲೆಪಟ್ಟೆಯಾಗಿ ಸತ್ತಾ ಪೊೞಲೊಳ್ ಪೆರ್ವಾವಾಗಿ ಪುಟ್ಟಿದೆಯಲ್ಲಿಂದಂ ಸತ್ತು ಭವನವಾಸಿಗಲೋಕದೊಳ್ ಧರಣೀಂದ್ರನಾಗಿ ಪುಟ್ಟಿದೆಯಲ್ಲಿಂ ಬಂದೀಗಳ್ ಗುರುದತ್ತನೆಯಾದೆಯೆಂದು ಆತನ ನಾಲ್ಕು ಭವಂಗಳಂ ಸವಿಸ್ತರಂ ಭಟಾರರ್ ಪೇೞೆ ಕೇಳ್ದಾದಮನುಂ ವೈರಾಗ್ಯಮನೊಡೆಯೊನಾದೊಂ ಮತ್ತಭಯಮತಿಯುಂ ಎನ್ನ ಭವಮುಮಂ ಭಟಾರಾ ಎನಗೆ ಬೆಸಸಿಮೆಂದು ಬೆಸಗೊಂಡೊಡೆ ಭಟಾರರಿಂತೆಂದು ಪೇೞ್ದರ್ ಚಂಪಾನಗರದೊಳೊರ್ವಂ ಪುಳುಂಗಾಱಂ ಗರುಡವೇಗನೆಂಬೊನಾತಂಗೆ ನೀಂ ಮುನ್ನಿನ ಭವದೊಳ್ ಪೆಂಡತಿಯಯ್ ಗೋಮತಿಯೆಂಬೆಯೊಂದು ದಿವಸಂ ಸಮಾಗುಪ್ತರೆಂಬ ಭಟಾರರ್ ಪಲಂಬರ್ ರಿಸಿಯರ್ವೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಚಂಪಾನಗರಕ್ಕೆವಂದೊಡವರ ಪಕ್ಕದೆ ನೀಂ ಪೋಗಿ ಧರ್ಮಮಂ ಕೇಳ್ದು ಕೊಲ್ಲದ ಕಳ್ಳದ ಮಧು ಮದ್ಯಮಾಂಸಗಳುಮಯ್ದು ಪಾಲ್ಮರನ ಪಣ್ಣುಂ ಗಿಣ್ಣುಮಾಳಂಬೆಯುಂ ಇಂತಿವೆಲ್ಲಮಂ ತಿನ್ನದ ಬ್ರತಗಳುಮಂ ಕೈಕೊಂಡು ಭಟಾರರಂ ವಂದಿಸಿ ಮನೆಗೆ ಪೋಗೆಯನ್ನೆಗಂ ನಿನ್ನ ಭರ್ತಾರಂ ಬೇಂಟೆಯಾಡಿ ಪಲವುಂ ಲಾವುಗೆಯುಂಕೆ ಕೊರಸುಂ ಮೊದಲಾಗೊಡೆಯ ಪಕ್ಷಜಾತಿಗಳಂ ಬಲೆಯನೊಡ್ಡಿ ಪಿಡಿದು ಕಟ್ಟಿ ಬಾೞೆವಾೞೆ ಮನೆಯೊಳ್ ತಂದಿಟ್ಟು ಮತ್ತೆ

ಉಪರಿಚರನೆಂಬ ಮಾಂಡಳಿಕನಾಗಿದ್ದಿ. ನೀನು ನೀರಿನಲ್ಲಿ ಆಡುತ್ತಿದ್ದ ವೇಳೆಯಲ್ಲಿ ವಜ್ರದಾಡನೆಂಬ ವಿದ್ಯಾಧರನು ನಿನ್ನನ್ನು ಕೊಂದನು. ಹಾಗೆ ಸತ್ತು ಆ ಪಟ್ಟಣದಲ್ಲಿ ಹೆಬ್ಬಾವಾಗಿ ನೀನು ಹುಟ್ಟಿದೆ. ಆಮೇಲೆ ಸತ್ತು ಭವನವಾಸಿಗಳ ಲೋಕದಲ್ಲಿ ಧರಣೀಂದ್ರನಾಗಿ ಹುಟ್ಟಿರುತ್ತೀಯೆ. ಅಲ್ಲಿಂದ ಬಂದು ಈಗ ಈ ಜನ್ಮದಲ್ಲಿ ನೀನು ಗುರುದತ್ತನೆಂಬವನಾಗಿರುವೆ*. ಋಷಿಗಳು ಈ ರೀತಿಯಾಗಿ ಅವನ ನಾಲ್ಕು ಜನ್ಮಗಳ ಸಂಗತಿಯನ್ನು ವಿಸ್ತಾರವಾಗಿ ತಿಳಿಸಿದರು. ಅದನ್ನು ಕೇಳಿ ಗುರುದತ್ತನು ಅತ್ಯಂತ ವೈರಾಗ್ಯವುಳ್ಳವನಾದನು. ಆಮೇಲೆ ಅಭಯಮತಿ ಅಮೃತಾಸ್ರವ ಮುನಿಗಳೊಡನೆ, “ಪೂಜ್ಯರೇ, ನನ್ನ ಪೂರ್ವ ಜನ್ಮ ವೃತ್ತಾಂತವನ್ನೂ ನನಗೆ ತಿಳಿಸಿರಿ* ಎಂದು ಕೇಳಲು, ಋಷಿಗಳು ಹೀಗೆಂದರು – “ಚಂಪಾನಗರದಲ್ಲಿ ಗರುಡವೇಗನೆಂಬ ಹಕ್ಕಿಗಳನ್ನು ಹಿಡಿವವನೊಬ್ಬನು ಇದ್ದನು. ಹಿಂದಿನ ಜನ್ಮದಲ್ಲಿ ನೀನು ಗೋಮತಿ ಎಂಬವಳಾಗಿದ್ದು ಗರುಡವೇಗನ ಹೆಂಡತಿಯಾಗಿದ್ದೆ. ಒಂದು ದಿವಸ ಸಮಾಗುಪ್ತರೆಂಬ ಋಷಿಗಳು ಹಲವು ಮಂದಿ ಋಷಿಗಳನ್ನು ಕೂಡಿಕೊಂಡ್ತು ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರಮಾಡುತ್ತ ಚಂಪಾನಗರಕ್ಕೆ ಬಂದರು. ನೀವು ಅವರ ಬಳಿಗೆ ಹೋಗಿ ಅವರ ಸಮೀಪ ಧರ್ಮವಿಚಾರವನ್ನು ಕೇಳಿದೆ. ಕೊಲ್ಲದಿರುವ, ಕಳವು ಮಾಡದಿರುವ, ಜೇನು – ಹೆಂಡ – ಮಾಂಸಗಳು ಐದು ಬಗೆಯ ಹಾಲುಮರಗಳ ಹಣ್ಣು, ಹಸು ಕರುಹಾಕಿದ ಹೊಸತರಲ್ಲಿ ಕೊಡತಕ್ಕ ಗಿಣ್ಣಿನ ಹಾಲು, ಅಳಂಬೆ (ನಾಯಿಕೊಡೆ) – ಇವೆಲ್ಲವನ್ನು ತಿನ್ನದಿರುವ ವ್ರತಗಳನ್ನು ಸ್ವೀಕರಿಸಿ ಋಷಿಗಳನ್ನು ವಂದಿಸಿ ಮನೆಗೆ ಹೋಗಿರುವ ವೇಳೆಗೆ ನಿನ್ನ ಗಂಡನು ಬೇಟೆಯಾಡಿ ಮನೆಗೆ ಬಂದಿದ್ದನು. ಅವನು ಹಲವು ಲಾವಗೆ, ಉಂಕೆ (ಒಂದು ಬಗೆಯ ಹಕ್ಕಿ), ಕೊರಸು – ಮುಂತಾದ ಹಕ್ಕಿಯ ಜಾತಿಗಳನ್ನು

ಬೇಂಟೆಗೆ ವೋದನನ್ನೆಗಂ ನೀನವಂ ಕಂಡು ಕಾರುಣ್ಯಭಾವದಿಂದನಿತುಮಂ ಬಿಟ್ಟು ಕಳೆದೊಡವು ಪಾಱ ಪೋದವು ಮತ್ತೆ ನಿನ್ನ ಭರ್ತಾರಂ ಬಂದು ಪಕ್ಕಿಗಳಂ ಕಾಣದೆ ಬಿಟ್ಟು ಕಳೆದರಾರೆಂದು ಬೆಸಗೊಂಡೊಡಾಂ ಬಿಟ್ಟು ಕಳೆದೆನೆಂದೊಡೆ ಇಂತಪ್ಪ ಧರ್ಮಾರ್ಥಿಯೆನ್ನ ಮನೆಯೊಳಿರಲ್ವೇಡೆಂದು ಬಯ್ದು ಪೊಯ್ದಟ್ಟಿಕಳೆದೊಂ ನೀನುಂ ಮನೆಯಿಂದಂ ಪೊಱಮಟ್ಟು ಪೋಗಿ ನಂಟರ ಮನೆಯೊಳಿರ್ದೆಯನ್ನೆಗಮೊಂದು ದಿವಸಮಾ ಚಂಪಾಪುರವನಾಳ್ವೊಂ ಧಾತ್ರಿವಾಹನನೆಂಬೊನರಸನು ಮಾತನ ಮಹಾದೇವಿ ಶ್ರೀಮತಿಯುಮಂತಿರ್ವರುಂ ಮಹಾವಿಭೂತಿಯಿಂ ಪೊೞಲಂ ಪೊಱಮಟ್ಟವರ ಶ್ರೀಯುಂ ವಿಭೂತಿಯುಮಂ ಕಂಡಿವರ್ಗಾಂ ಪುಟ್ಟಿದೊಡೊಳ್ಳಿತ್ತೆಂದು ಮನದೊಳ್ ಬಗೆದಿರ್ದು ಕೆಲವು ದಿವಸದಿಂ ಸತ್ತು ಶ್ರೀಮತಿಯ ಗರ್ಭದೊಳ್ ನೆಲೆಸಿರೆಯಾಕೆಗೆಲ್ಲಾ ಜೀವಂಗಳಂ ದಯೆಗೆಯ್ವ ಬಯಕೆಯಾದುದರಸಂ ಕೇಳ್ದು ತನ್ನ ಪೊೞಲೊಳಂ ನಾಡೊಳಮಾರಪ್ಪೊಡಂ ಜೀವಂಗಳಂ ಕೊಲ್ಲದಂತು ಗೋಸನೆಗಳೆಯಿಸಿದನದು ಕಾರಣದಿಂ ನಿನಗಭಯಮತಿಯೆಂದಾ ತಾಯುಂ ತಂದೆಯುಂ ಪೆಸರನಿಟ್ಟು ಬಾೞ್ದರ್ ಎಂದಿರ್ವರ ಭವಂಗಳುಮಂ ಭಟಾರರ್ ಪೇೞ್ದೊಡರಸನುಮರಸಿಯುಂ ಕೇಳ್ದು ಸಂಸಾರ ಶರೀರ ಭೋಗ ವೈರಾಗ್ಯಮನೊಡೆಯರಾಗಿ ಶ್ರೀದತ್ತನೆಂಬ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಪಲಂಬರರಸುಮಕ್ಕಳ್ವೆರಸಮೃತಾಸ್ರವ ಭಟಾರರ ಪಕ್ಕದೆ ಗುರುದತ್ತ ಮಹಾರಾಜಂ

ಬಲೆಹಾಕಿ ಹಿಡಿದು, ಕಟ್ಟಿ ಬದುಕಿದೊಂಡಿದ್ದ ಹಾಗೆಯೇ ಮನೆಗೆ ತಂದು ಇಟ್ಟು ಮತ್ತೆ ಬೇಟೆಗೆ ಹೋದನು. ಅಷ್ಟರಲ್ಲಿ ನೀನು ಆ ಹಕ್ಕಿಗಳನ್ನು ಕಂಡು ದಯಾಭಾವನೆಯಿಂದ ಅವಷ್ಟನ್ನೂ ಬಿಟ್ಟು ಬಿಟ್ಟೆ. ಆಗ ಅವು ಹಾರಿಹೋದವು. ಆಮೇಲೆ ನಿನ್ನ ಗಂಡನು ಬಂದನು. ಹಕ್ಕಿಗಳನ್ನು ಕಾಣದೆ ಅವನ್ನು ಬಿಟ್ಟುಬಿಟ್ಟವರು ಯಾರೆಂದು ಕೇಳಿದನು. ‘ನಾನು ಬಿಟ್ಟು ಬಿಟ್ಟೆ’ನೆಂದು ನೀನು ಹೇಳಿದೆ. ಆಗ ಗರುಡವೇನು – ‘ಈ ರೀತಿಯ ಧರ್ಮಾರ್ಥಿಯಾದವಳು ನನ್ನ ಮನೆಯಲ್ಲಿ ಇರುವುದು ಬೇಡ’ ಎಂದು ಬೈದು, ಹೊಡೆದು ಹೊರಗೆ ಅಟ್ಟಿಬಿಟ್ಟನು. ನೀನು ಮನೆಯಿಂದ ಹೊರಟುಹೋಗಿ ನಂಟರ ಮನೆಯನ್ನು ಸೇರಿಕೊಂಡಿದ್ದೆ. ಹೀಗಿರಲು ಒಂದು ದಿವಸ ಚಂಪಾಪುರವನ್ನು ಆಳತಕ್ಕ ಧಾತ್ರಿವಾಹನನೆಂಬ ರಾಜನು ಮತ್ತು ಅವನ ಮಹಾರಾಣಿ ಶ್ರೀಮತಿ – ಅಂತು ಇಬ್ಬರೂ ಬಹಳ ವೈಭವದಿಂದ ಪಟ್ಟಣದ ಹೊರಗೆ ಹೊರಟಿದ್ದರು. ಅವರ ಶ್ರೀಮಂತಿಕೆಯನ್ನೂ ವೈಭವವನ್ನೂ ಕಂಡು, ನಾನು ಇವರಿಗೆ ಹುಟ್ಟಿದರೆ ಒಳ್ಳೆಯದಿತ್ತೆಂದು ಮನಸ್ಸಿನಲ್ಲಿ ಭಾವಿಸಿದೆ. ಕೆಲವು ದಿವಸಗಳಲ್ಲಿ ನೀನು ಸತ್ತು ಶ್ರೀಮತಿಯ ಬಸಿರಲ್ಲಿ ನೆಲಸಿದೆ. ಇದರಿಂದ ಆಕೆಗೆ ಎಲ್ಲಾ ಜೀವಿಗಳಲ್ಲಿಯೂ ದೆಯೆಯನ್ನು ತೋರಿಸುವ ಅಪೇಕ್ಷೆಯುಂಟಾಯಿತು. ಈ ಸಂಗತಿಯನ್ನು ರಾಜನು ಕೇಳಿ, ತನ್ನ ಪಟ್ಟಣದಲ್ಲಿಯೂ ನಾಡಿನಲ್ಲಿಯೂ ಯಾರೇ ಆಗಲಿ, ಜೀವಿಗಳನ್ನು ಕೊಲ್ಲಕೂಡದು – ಎಂದು ಡಂಗುರ ಸಾರಿಸಿದನು. ಆ ಕಾರಣದಿಂದ ನಿನಗೆ ಆ ತಾಯಿಯೂ ತಂದೆಯೂ ಅಭಯಮತಿ ಎಂದು ಹೆಸರನ್ನಿಟ್ಟು ಬಾಳಿದರು* – ಎಂದು ಋಷಿಗಳು ಅವರಿಬ್ಬರ ಜನ್ಮವೃತ್ತಾಂತಗಳನ್ನು ಹೇಳಿದರು. ರಾಜನೂ ರಾಣಿಯೂ ಎನ್ನು ಕೇಳಿ ಸಂಸಾರದಲ್ಲಿಯೂ ಶರೀರ ಸುಖದಲ್ಲಿಯೂ ವೈರಾಗ್ಯವುಳ್ಳವರಾದರು. ಶ್ರೀದತ್ತನೆಂಬ ಹಿರಿಯ ಮಗನಿಗೆ ರಾಜ್ಯದ ಪಟ್ಟವನ್ನು ಕಟ್ಟಿ ಹಲವು ಮಂದಿ ರಾಜಕುಮಾರರೊಂದಿಗೆ ಅಮೃತಾಸ್ರವ ಋಷಿಗಳ ಬಳಿಯಲ್ಲಿ ಗುರುದತ್ತಮಹಾರಾಜನು ತಪಸ್ಸನ್ನು ಸ್ವೀಕರಿಸಿದನು. ಅಭಯಮತಿಯು ಆ

ತಪಂಬಟ್ಟನುಭಯಮತಿಯುಮಾ ಭಟಾರರೆ ಗುರುಗಳಾಗೆ ಸುವ್ರತೆಯೆಂಬ ಕಂತಿಯರೆ ಕಂತಿಯರಾಗೆ ತಪಂಬಟ್ಟು ಸಮ್ಯಕ್ತ್ವಪೂರ್ವಕಂ ಮಹಾವ್ರತಂಗಳಂ ಕೈಕೊಂಡಾಚಾರಮಾರಾಧನೆ ಮೊದಲಾಗೊಡೆಯ ಚರಣಗ್ರಂಥಂಗಳಂ ಕಲ್ತು ಪಲಕಾಲಮುಗ್ರೋಗ್ರ ತಪಶ್ಚರಣಂಗೆಯ್ದು ನೋಂಪಿಗಳಿಂದಂ ಗಿಡಿಗಿಡಿಜಂತ್ರಂ ಮಿಳಿಮಿಳಿನೇತ್ರಮಾಗಿ ತಮ್ಮ ಮೆಯ್ಯಂ ತವಿಸಿ ಪಶ್ಚಾತ್ಕಾಲದೊಳ್ ಸಂನ್ಯಸನಂಗೆಯ್ದು ಸಮಾಮರಣದಿಂ ಮುಡಿಪಿ ಕಾಪಿಷ್ಟಮೆಂಬೆಂಟನೆಯ ಸ್ವರ್ಗದೊಳ್ ಸ್ವಯಂಪ್ರಭಮೆಂಬ ವಿಮಾನದೊಳ್ ಪದಿನಾಲ್ಕು ಸಾಗರೋಪಮಾಯುಷ್ಯಮನೊಡೆಯನಮಿತಕಾಂತನೆಂಬೊಂ ದೇವನಾಗಿ ಪುಟ್ಟಿದೊಳಿತ್ತ ಗುರುದತ್ತ ಭಟಾರರುಂ ಪನ್ನೆರಡುವರುಷಂಬರೆಗಂ ಗುರುಗಳನಗಲದಿರ್ದು ದ್ವಾದಶಾಂಗ ಚತುರ್ದಶ ಪೂರ್ವಮಪ್ಪಾಗಮಮೆಲ್ಲಮಂ ಕಲ್ತು ಗುರುಗಳಂ ಬೆಸಗೊಂಡವರನುಮತದಿಂದೇಕ ವಿಹಾರಿಯಾಗಿ ಘೋರ ವೀರ ತಪಶ್ಚರಣಂಗೆಯ್ಯುತ್ತಂ ಗ್ರಾಮೇಕರಾತ್ರಂ ನಗರೇ ಪಂಚರಾತ್ರಂ ಅಟವ್ಯಾಂ ದಶರಾತ್ರಮೆಂಬೀ ನ್ಯಾಯದಿಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಕ್ರಮದಿಂ ಸುರಾಷ್ಟ್ರಮನೆಯ್ದಿಯಲ್ಲಿ ದ್ರೋಣಿಮಂತಮೆಂಬ ಪರ್ವತದ ಸಾರೆ ಹಳಮುಖನೆಂಬ ಪಾರ್ವನಿರ್ಪ ಪಲ್ಲಿಖೇಡಮೆಂಬೂರನೆಯ್ದುವನ್ನೆಗಮೆಡೆಯೊಳ್ ನೇಸರ್ಪಟ್ಟೊಡೆ ಯತ್ರಾಸ್ತಮಿತವಾಸಿಗಳೆಲ್ಲ ನೇಸರ್ಟಟ್ಟಿತ್ತಲ್ಲಿಯೆ ನಿಲ್ಪರಪ್ಪುದಱಂದೂರ ಪೊಱ ಪೊೞಲ ಪೊಲದೊಳ್ ಬಟ್ಟೆಯ ಕಣ್ಣೊಳ್

ಋಷಿಗಳೇ ಗುರುಗಳಾಗಿರಲು ಸುವ್ರತೆ ಎಂಬ ಕಂತಿಯರೇ ತಪಸ್ಸಿಗೆ ದಾರಿ ತೋರುವವರಾಗಿರಲು ತಪಸ್ಸನ್ನು ಕೈಗೊಂಡಳು. ಅವಳು ಜೈನಧರ್ಮತತ್ವಪೂರ್ವಕ ಮಹಾವ್ರತಗಳನ್ನು ಸ್ವೀಕರಿಸಿ, ಆಚಾರ – ಆರಾಧನೆ ಮುಂತಾಗಿರತಕ್ಕ ಚರಣಗ್ರಂಥಗಳನ್ನು ಕಲಿತು ಹಲವು ಕಾಲ ಕಠೋರವಾದ ತಪಸ್ಸನ್ನು ಮಾಡಿ ಉಪವಾಸಾದಿ ವ್ರತಗಳಿಂದ ಅತ್ಯಂತ ಕೃಶರಾಗಿ ಗುಳಿಬಿದ್ದ ಕಣ್ಣುಳ್ಳವರಾದರು. ತಮ್ಮ ಶರೀರವನ್ನು ಕ್ಷೀಣಗೊಳಿಸಿ ಅನಂತರದ ಕಾಲದಲ್ಲಿ ಸಂನ್ಯಾಸವನ್ನು ಆಚರಿಸಿ ಸಮಾಮರಣದಿಂದ ಸತ್ತು ಕಾಪಿಷ್ಟವೆಂಬ ಎಂಟನೆಯ ಸ್ವರ್ಗದಲ್ಲಿ ಸ್ವಯಂಪ್ರಭವೆಂಬ ಏಳಂತಸ್ತಿನ ವಿಮಾನದಲ್ಲಿ ಹದಿನಾಲ್ಕು ಸಾಗರದಷ್ಟು ಆಯುಷ್ಯವುಳ್ಳ ಅಮಿತಕಾಂತನೆಂಬ ದೇವನಾಗಿ ಜನಿಸಿದಳು. ಇತ್ತ ಗುರುದತ್ತ ಋಷಿಗಳು ಹನ್ನೆರಡು ವರ್ಷಗಳವರೆಗೆ ಗುರುಗಳೊಡನೆಯೇ ಇದ್ದು ಹನ್ನೆರಡು ಅಂಗಗಳೂ ಪದಿನಾಲ್ಕು ಪೂರ್ವಗಳೂ ಉಳ್ಳ ಶಾತ್ತ್ರಗಳನ್ನೆಲ್ಲ ಕಲಿತು ಗುರುಗಳನ್ನು ಕೇಳಿ ಅವರ ಒಪ್ಪಿಗೆ ಪಡೆದು ಒಬ್ಬರೇ ಸಂಚಾರ ಮಾಡುವವರಾಗಿ ಉಗ್ರವೂ ಶ್ರೇಷ್ಠವೂ ಆದ ತಪಸ್ಸನ್ನು ಮಾಡುತ್ತ “ಗ್ರಾಮದಲ್ಲಿ ಒಂದು ರಾತ್ರಿಯಿದ್ದರೆ, ನಗರದಲ್ಲಿ ಐದು ರಾತ್ರಿ ಕಾಡಿನಲ್ಲಿ ಹತ್ತು ರಾತ್ರಿ* ಎಂಬ ನ್ಯಾಯದಂತೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖ – ಎಂಬ ಭೂಭಾಗಗಳಲ್ಲಿ ಸಂಚಾರಮಾಡುತ್ತ ಕ್ರಮವಾಗಿ ಸುರಾಷ್ಟ ಎಂಬ ದೇಶವನ್ನು ಸೇರಿ ಅಲ್ಲಿ ದ್ರೋಣಿಮಂತವೆಂಬ ಪರ್ವತದ ಹತ್ತಿರ ಹಳಮುಖನೆಂಬ ಬ್ರಾಹ್ಮಣನು ಇರತಕ್ಕ ಪಲ್ಲಿಖೇಡವೆಂಬ ಊರಿಗೆ ಬರುತ್ತಿದ್ದರು. ಎಡೆಯಲ್ಲಿ ಸೂರ್ಯಾಸ್ತವಾಯಿತು. ಎಲ್ಲಿ ಕತ್ತಲಾಯಿತೋ ಅಲ್ಲಿ ವಾಸಮಾಡುವವರೆನಿಸಿದ ಸಂನ್ಯಾಸಿಗಳು ಸೂರ್ಯನು ಅಸ್ತವಾದಾಗ ಇದ್ದಲ್ಲೇ ನಿಲ್ಲುವರಾದ್ದರಿಂದ ಊರಿನ ಪಟ್ಟಣದ ಹೊರಗಿರುವ ಹೊಲದಲ್ಲಿ ದಾರಿಯ ಎದುರಿನಲ್ಲಿಯೇ ರಾತ್ರಿಯ ಹೊತ್ತು

ರಾತ್ರಿ ಪ್ರತಿಮೆನಿಂದೊರನ್ನೆಗಮಿರುಳ್ ನಾಲ್ಕು ಜಾವಮುಂ ಭೋರೆಂದು ಪೆರ್ಮೞೆ ಕೊಂಡು ಕೆಸೞಾದೊಡೆ ನೇಸರ್ಮೂಡಿದೊಡಪ್ರಾಸುಕಂ ಬಟ್ಟೆಯೆಂದು ಕೈಯನೆತ್ತಿಕೊಳ್ಳದೆ ಮತ್ತಂತೆ ಸೂರ್ಯಪ್ರತಿಮೆನಿಂದೊರನ್ನೆಗಂ ಹಳಮುಖನೆಂಬ ಪಾರ್ವಂ ತನ್ನ ಮೂಡಣ ಕೆಯ್ಯನುೞಲೆಂದು ಪೋಗಿ ಕೆಸೞಾದುದಂ ಕಂಡುೞಲ್ ಪದನಲ್ತೆಂದು ಬೆಟ್ಟದ ಪಡುವಣ ಕೆಯ್ಯನುೞಲ್ ಪೋಗುತ್ತಂ ತನ್ನ ಕೆಯ್ಯಸಾರೆ ಸೂರ್ಯಪ್ರತಿಮೆನಿಂದ ಭಟಾರರಂ ಕಂಡಿಂತೆಂದನಜ್ಜಾ ಎನ್ನ ಪೆಂಡತಿ ಕೂೞನಿಲ್ಲಿಗೆ ಕೊಂಡು ಬಂದೊಡೆ ಪಡುವಣ ಕೆಯ್ಗೆ ವೋದನೆಂದು ಪೇೞ್ದಟ್ಟಿಂ ಗಡಿಮೆಂದು ಪಡುವಣಕೆಯ್ಗೆ ವೋದನನ್ನೆಗಮಾತನ ಪಾರ್ವಂತಿಯುಂ ಪಗಲಪ್ಪಾಗಳ್ ಕೂೞಂ ಕೊಂಡು ಬಂದು ಕೆಯ್ಯೊಳಗಲಮಱಸಿ ಕಾಣದೆ ಸೂರ್ಯಪ್ರತಿಮೆನಿಂದ ಭಟಾರರಂ ಬೆಸಗೊಂಡಳಜ್ಜಾ ಎನ್ನ ಭಟ್ಟನೀ ಕೆಯ್ಯುನುೞಲ್ ಬಂದಾತನೆತ್ತವೋದಂ ಪೇೞಮೆಂದು ಬೆಸಗೊಂಡೊಡಾ ಭಟಾರರ್ ಮೌನವ್ರತಂಗೊಂಡು ನುಡಿಯದೆ ಕೆಮ್ಮಗಿರ್ದೊಡೆ ಪಿರಿದುಂ ಬೇಗಮಿರ್ದು ಬೇಸತ್ತು ಕೂೞಂ ಮನೆಗೆ ಕೊಂಡು ಪೋದಳನ್ನೆಗಮಿತ್ತ ಹಳಮುಖನುಂ ಕೆಯ್ಯಂ ಪಿರಿದು ಬೇಗಮುೞ್ತು ಪೇದೆಗೆಟ್ಟು ಪಸಿದು ನೀರಡಿಸಿ ಬಸಮೞದು ಕೂೞಂ ತರ್ಪುದಂ ಪರಿದು ಬೇಗಂ ಪಾರುತ್ತಿರ್ದು ತಾರದಿರ್ದೊಡೆ ಬೇಸತ್ತು ಮುಳಿದು ಮನೆಗೆ ವೋಗಿ ಎಲೆಗೆ ಕೂೞಂ ತಂದೆಯಿಲ್ಲೆಂದು ಪೆಂಡತಿಯಂ ಸೊಪ್ಪುನಾರಾಗಿ ಬಡಿಯೆ ಆಕೆಯಿಂತೆಂದಳೇಕೆ

ಪ್ರತಿಮಾಯೋಗದಲ್ಲಿ ನಿಂತರು. ಆಗ ರಾತ್ರಿಯ ನಾಲ್ಕು ಜಾವವೂ (ಹನ್ನೆರಡು ಗಂಟೆಯೂ) ಭೋರೆಂದು ಶಬ್ದಮಾಡುತ್ತ ದೊಡ್ಡ ಮಳೆ ಬಂದು ಕೆಸರಾಯಿತು. ಸೂರ್ಯೋದಯವಾದಾಗ, ದಾರಿಯು ಜೀವಜಂತುಗಳಿಂದ ಕೂಡಿದೆಯೆಂದು, ಇಳಿಬಿಟ್ಟಿದ್ದ ಕೈಗಳನ್ನು ಮೇಲಕ್ಕೆತ್ತದೆ ಮತ್ತೂ ಹಾಗೆಯೇ ಬಿಸಿಲಿನಲ್ಲಿ ಪ್ರತಿಮೆಯಂತೆ ನಿಂತಿದ್ದರು. ಆ ವೇಳೆಗೆ ಹಳಮುಖನೆಂಬ ಬ್ರಾಹ್ಮಣನು ತನ್ನ ಮೂಡಣ ಹೊಲವನ್ನು ಉಳುವುದಕ್ಕೆಂದು ಹೋಗಿ ಗದ್ದೆ ಕೆಸರಾದುದನ್ನು ಕಂಡು, ಉಳುವುದಕ್ಕೆ ಹೋಗುತ್ತ, ತನ್ನ ಹೊಲದ ಬಳಿಯಲ್ಲಿ ಬಿಸಿಲಿಗೆ ಪ್ರತಿಮೆಯಂತೆ ನಿಂತಿದ್ದ ಋಷಿಗಳನ್ನು ಕಂಡನು. ಅವರೊಡನೆ – “ಅಜ್ಜಾ, ನನ್ನ ಹೆಂಡತಿ ಊಟವನ್ನು ಇಲ್ಲಿಗೆ ತೆಗೆದುಕೊಂಡು ಬಂದರೆ ನನ್ನನ್ನು ಪಶ್ಚಿಮದ ಹೊಲಕ್ಕೆ ಹೋದನೆಂದು ಹೇಳಿ, ಅವಳನ್ನು ನನ್ನಲ್ಲಿಗೆ ಕಳುಹಿಸಿರಿ, ತಿಳಿಯತೇ? ಎಂದು ಹೇಳಿ ಪಡುವಣ ಹೊಲಕ್ಕೆ ಹೋದನು. ಹೀಗರಲು ಅವನ ಬ್ರಾಹ್ಮಣಿತಿ ಹಗಲಾಗಿದ್ದಾಗಲೇ ಅನ್ನವನ್ನು ತೆಗೆದುಕೊಂಡು ಬಂದಳು. ಹೊಲದ ವಿಸ್ತಾರವನ್ನೆಲ್ಲ ಸುತ್ತಿ ಹುಡುಕಿದರೂ ಕಾಣದಿರಲು ಬಿಸಿಲಿನಲ್ಲಿ ಪ್ರತಿಮೆಯಾಗಿ ನಿಂತಿದ್ದ ಋಷಿಗಳನ್ನು ಕುರಿತು – “ಅಜ್ಜಾ, ನನ್ನ ಭಟ್ಟನು ಈ ಹೊಲವನ್ನು ಉಳುವುದಕ್ಕಾಗಿ ಬಂದವನು ಯಾವ ಕಡೆಗೆ ಹೋದನು? ಹೇಳಿ* ಎಂದು ಕೇಳಿದಳು. ಆಗ ಆ ಋಷಿಗಳು ಮೌನದ ವ್ರತವನ್ನು ಸ್ವೀಕರಿಸಿ, ಮಾತಾಡದೆ ಸುಮ್ಮಗಿರಲು ಹೆಚ್ಚು ಹೊತ್ತು ಇದ್ದು ಬೇಸರಗೊಂಡು ಅನ್ನವನ್ನು ಮನೆಗೆ ಕೊಂಡುಹೋದಳು. ಅಷ್ಟರಲ್ಲಿ ಇತ್ತ ಹಳಮುಖನು ಬಹಳ ಹೊತ್ತಿನವರೆಗೆ ಗದ್ದೆಯನ್ನು ಉತ್ತು, ಆಯಾಸಪಟ್ಟು, ಹಸಿವಾಗಿ, ಬಾಯಾರಿ, ಶಕ್ತಿಕುಂದಿ, ಹೆಂಡತಿ ಅನ್ನ ತರುವುದನ್ನು ಬಹಳಹೊತ್ತು ಎದುರು ನೋಡುತ್ತಿದ್ದು ತಾರದಿರಲು ಬೇಸರಗೊಂಡು, ಕೋಪಗೊಂಡು, ಮನೆಗೆ ಹೋದನು. “ಎಲೇ ನೀನು ಅನ್ನವನ್ನು ಏಕೆ ತರಲಿಲ್ಲ! * ಎಂದು ಹೆಂಡತಿಯನ್ನು ಸೊಪ್ಪುನಾರುಗಳನ್ನು

ಬಡಿವೆಯಾಂ ಕೂೞಂ ಕೊಂಡು ಪೋಗಿ ಕೆಯ್ಯೊಳಱಸಿ ಪಿರಿದು ಬೇಗಮಿರ್ದು ಪಾರ್ದು ನಿಮ್ಮಂ ಕಾಣದೆ ಮನೆಗೆ ಕೂೞಂ ತಂದೆನೆಂದೊಡೇಕಲ್ಲಿರ್ದ ಕ್ಷಪಣಕನಂ ಬೆಸಗೊಂಡೆಯಿಲ್ಲಾತಂಗಾಂ ಮೂಡಣ ಕೆಯ್ಗೆ ನೀಂ ಬಂದೊಡೆ ಪಡುವಣ ಕೆಯ್ಗೆ ಕೂೞಂ ಕೊಂಡು ಬರ್ಪಂತಿರೆ ಪೇೞ್ದು ಪೋದೆನೆಂದೊಡಾಕೆಯಿಂತೆಂದಳೆನಿತಾನುಂ ಸೂೞೂಂ ಬೆಸಗೊಂಡೊಡಂ ಪೇೞ್ದನಿಲ್ಲೆಂದೊಡಂತಪ್ಟೊಡೆ ನಿನಗೇನುಂ ದೋಷಮಿಲ್ಲೆನ್ನನಾತನುಣ್ಣಪಡಿಸಿ ಕೊಂದನೆಂದು ಪೆಂಡತಿಯ ಮೇಗಣ ಮುಳಿಸನುೞದು ಋಷಿಯರ ಮೇಗೆ ಮುನಿಸಾಗಿ ಭವಸಂಬಂಯಪ್ಪ ವೈರಂ ಕಾರಣಮಾಗಿ ಕ್ರೋಧಾಗ್ನಿ ಪೆರ್ಚಿಯೆನ್ನಂ ಪಸಿವಿನಿಂ ಸುಟ್ಟೊನಂ ಕಿಚ್ಚಿನಿಂ ಸುಟ್ಟಲ್ಲದುಣ್ಣೆನೆಂದು ಪ್ರತಿಜ್ಞೆಗೆಯ್ದು ಪುಲ್ಲಬೆಂಟೆಯಂ ಪೊಸೆದು ಕಿಚ್ಚುಮೆಣ್ಣೆಯ ಕೊಡನುಂ ಬೆಂಟೆಯುಮಂ ಕೊಂಡು ಪೋಗಿ ಭಟಾರರ ಮುಂದಿಟ್ಟೆಲವೊ ಸವಣಾ ನೀನೆನ್ನಂ ಪಸಿವಿನಿಂದಂ ಸುಟ್ಟೆಯಂತೆಯಾನುಂ ನಿನ್ನಂ ಕಿಚ್ಚಿನಿಂದಂ ಸುಟ್ಟಪ್ಪೆಂ ಕಾವೋರಾರೆಂದು ಮುಟ್ಟಿ ಮೂದಲಿಸಿದಾಗಳ್ ಭಟಾರರಿಂತೆಂದು ಬಗೆದರೀತಂಗೇನುಂ ದೋಷಮಿಲ್ಲೆಮ್ಮ ಮುನ್ನಿನ ಗೆಯ್ದ ಕರ್ಮದುದಯಕಾಲಂ ಬಂದುದಕ್ಕುಮದೆಮ್ಮಂ ಸುಟ್ಟಪ್ಪುದೀತನೆಮ್ಮಂ ಸುಟ್ಟಪ್ಟೊನಲ್ಲಂ ಸುಡುವೊಡಂ ಕಿಡುವೊಡಲನೆ ಸುಡುಗುಮೆಮ್ಮ ದರ್ಶನ ಜ್ಞಾನ ಚಾರಿತ್ರಂಗಳಂ ಸುಡಲ್ ನೆಱೆಯನೀತನೆಮಗೆ ಕಲ್ಯಾಣಮಿತ್ರನೆಂದು ಬಗೆದಿಂತೆಂದು ಭಾವಿಸಲ್ ತಗುೞ್ದರ್

ಜಜ್ಜುವ ಹಾಗೆ ಹೊಡೆದನು. ಆಗ ಆಕೆ “ಯಾಕೆ ನನಗೆ ಹೊಡೆಯುತ್ತಿ? ನಾನು ಅನ್ನವನ್ನು ಕೊಂಡು ಹೋಗಿ ಹೊಲದಲ್ಲಿ ಹುಡುಕಿ ಬಹಳ ಹೊತ್ತು ಇದ್ದು ನಿಮ್ಮನ್ನು ಎದುರು ನೋಡಿದೆ. ಆದರೆ ಕಾಣದೆ, ಅನ್ನವನ್ನು ಮನೆಗೆ ತಂದೆನು* ಎಂದು ಹಳಮುಖನಿಗೆ ಹೇಳಿದಳು. ಅದಕ್ಕೆ ಅವನು “ಅಲ್ಲಿದ್ದ ಜೈನಸಂನ್ಯಾಸಿಯನ್ನು ನೀನು ಯಾಕೆ ಕೇಳಲಿಲ್ಲ? ನೀನು ಪೂರ್ವದಿಕ್ಕಿನ ಹೊಲಕ್ಕೆ ಬಂದರೆ, ಪಶ್ಚಿಮ ದಿಕ್ಕಿನ ಹೊಲಕ್ಕೆ ಅನ್ನ ತೆಗೆದುಕೊಂಡು ಬರುವಂತೆ ನಾನು ಹೇಳಿ ಹೋಗಿದ್ದೆನು ಎಂದನು. ಆಗ ಆಕೆ ಹೀಗೆಂದಳು – “ನಾನು ಎಷ್ಟು ಬಾರಿ ಕೇಳಿದರೂ ಅವನು ಹೇಳಲಿಲ್ಲ* ಹೀಗೆಂದಾಗ ಹಳಮುಖನ – *ಹಾಗಾದರೆ ನಿನ್ನದೇನೂ ತಪ್ಪಿಲ್ಲ. ನನ್ನನ್ನು ಅವನು ಉಣ್ಣದೆ ಬೀಳುವಂತೆ ಮಾಡಿ ಕೊಂದನು* ಎಂದು ಹೇಳಿ ಹೆಂಡತಿಯ ಮೇಲಿನ ಕೋಪವನ್ನು ತ್ಯಜಿಸಿ, ಋಷಿಗಳ ಮೇಲೆ ಕೋಪಗೊಂಡನು. ಪೂರ್ವಜನ್ಮದ ಸಂಬಂಧದ ದ್ವೇಷವು ಕಾರಣವಾಗಿ ಕೋಪಾಗ್ನಿ ಹೆಚ್ಚಾಗಿ ‘ನನ್ನನ್ನು ಹಸಿವಿನಿಂದ ಸುಟ್ಟವನನ್ನು ಬೆಂಕಿಯಿಂದ ಸುಟ್ಟಲ್ಲದೆ ಉಣ್ಣೆನು’ ಎಂದು ಪ್ರತಿಜ್ಞೆಮಾಡಿದನು. ಅದರಂತೆ, ಹುಲ್ಲಿನ ಹಗ್ಗವನ್ನು ಹುರಿಮಾಡಿ ಬೆಂಕಿ, ಎಣ್ಣೆಯ ಕೊಡ, ಹುಲ್ಲಿನ ಹಗ್ಗ ಇವನ್ನು ತೆಗೆದುಕೊಂಡು ಹೋಗಿ ಋಷಿಗಳ ಮುಂದೆ ಇಟ್ಟು “ಎಲವೋ ಸವಣ (ಸಂನ್ಯಾಸಿಯೇ) ನೀನು ನನ್ನನ್ನು ಹಸಿವಿನಿಂದ ಸುಟ್ಟೆ. ಹಾಗೆಯೇ ನಾನು ನಿನ್ನನ್ನು ಬೆಂಕಿಯಿಂದ ಸುಡುತ್ತೇನೆ. ಆಗ ನಿನ್ನನ್ನು ಯಾರು ಕಾಪಾಡುತ್ತಾರೆ ?* ಎಂದು ಮುಟ್ಟಿ ಮೂದಲಿಸಿದನು. ಆಗ ಋಷಿಗಳು ಹೀಗೆ ಭಾವಿಸಿದರು – “ಈತನಲ್ಲಿ ಏನೂ ತಪ್ಪಿಲ್ಲ. ನಾನು ಹಿಂದೆ ಮಾಡಿದ ಕರ್ಮದ ಫಲ ಮೂಡಿ ಬರುವ ಕಾಲ ಬಂದಿದೆ. ಅದು ನಮ್ಮನ್ನು ಸುಡುತ್ತಿದೆ. ಈತನು ನಮ್ಮನ್ನು ಸುಡುತ್ತಾ ಇಲ್ಲಾ. ಸುಡುವುದಾದರೂ ನಾಶವಾಗತಕ್ಕ ದೇಹವನ್ನು ಸುಡುತ್ತಾನೆ. ನಮ್ಮ ದರ್ಶನ ಜ್ಞಾನ ಚಾರಿತ್ರಗಳನ್ನು ಸುಡಲಾರನು. (ನಿಂದಿಸುವವನನ್ನೂ, ಶ್ಲಾಘಿಸುವವನ್ನೂ, ಶತ್ರುವನ್ನೂ, ಮಿತ್ರನನ್ನೂ ಯಾವನು ಹಾಗೆಯೇ ಸಮತೆಯಿಂದ

ಗಾಹೆ || ಣಿಂದಂತಂ ಸಿಳಹಂತಂ ಸತ್ತುಂ ಮಿತ್ತುಂ ತಹೇವ ಸುಹದಕ್ಖಂ
ಜೋ ಸಮಭಾವಇ ಪೆಚ್ಚ ಸೋ ಸಮಣೋ ಸೋಯಪವ್ವಯಓ

ದುಜ್ಜಣವಯಣ ಸಡಗರಂ ಸಂಹತಿ ಉಚ್ಛೋಡಣಂ ಪಹರಂ
ಕುಪ್ಪಂತಿ ಮಹಾರಿಸಿ ಸಮಣ ಗುಣ ವಿಜಾಣಗಾ ಸಮಣಾ

ಜೀವಿದ ಮರಣೇ ಲಾಭಾಲಾಭೇ ರಂಜೋಗವಿಪ್ಪ ಜೋಗೇ
ಬದ್ದಂ (?) ಸುಹದುಕ್ಖಾದಿಸು ಸಮದಾ ಸಾಮಾಯಿಗಂ ಣಾಮ

ಖಮ್ಮಾಮಿ ಸವ್ವಜೀವಾಣಂ ಸವ್ವೇ ಜೀವಾ ಖಮಂತು ಮೇ
ಮೆತ್ತೀ ಮೇ ಸವ್ವ ಭೂದೇಸು ವೇರಂ ಮಜ್ಜ ಕೇಣ ಚಿ

ಎಂದಿತು ಕ್ಷಮೆಯಂ ಭಾವಿಸುತ್ತಿರ್ಪನ್ನೆಗಂ ಹಳಮುಖನುಂ ಬೆಂಟೆಯನೆಣ್ಣೆಯೊಳ್ ತೊಯ್ದು ನಖಾಗ್ರದಿಂ ತೊಟ್ಟು ನೆತ್ತಿವರೆಗಂ ಬಳಸಿಯುಂ ಮೆಯ್ಯಂ ಸುತ್ತಿ ಎಲ್ಲಾ ಎಡೆಗಳೊಳಂ ಕಿಚ್ಚಂ ತಗುಳ್ಚಿಯೆಣ್ಣೆಯಂ ತಳಿಯುತ್ತಿರಲುರಿ ಕೊಂಡೇಕಜ್ವಾಲೆಯಾಗಿ ಸುಡೆಯಾ ಕಿಚ್ಚು ಮೆಯ್ಯಂ ಪೊರ್ದದನ್ನೆಗಂ ಭಟಾರರಾಜ್ಞಾವಿಚಯಮಪಾಕವಿಚಯ ವಿಪಾಕವಿಚಯ ಸಂಸ್ತಾನವಿಚಯಮೆಂಬೀ ನಾಲ್ಕು ಧರ್ಮಧ್ಯಾನಂಗಳಂ ಧ್ಯಾನಿಸುತ್ತಂ ಬೞಕ್ಕೆ ಪೃಥಕ್ತ ವಿತರ್ಕ ವಿಚಾರಮೆಂಬ ಪ್ರಥಮ ಶುಕ್ಮಧ್ಯಾನಮಂ ಧ್ಯಾನಿಸಿ ಸೂಕ್ಷ್ಮಸಾಂಪರಾಯ ಗುಣಸ್ಥಾನದೊಳ್ ಮೋಹನೀಯದಕಾಂಡಕ ಘಾತಂ ತೀರ್ದು ಚರಮ ಕಾಂಡಕದ ಚರಮ ಪಾಳಿ

ಭಾವಿಸುವನೋ ನೋಡುವನೋ ಅವನು ಸವಣನು. ದುರ್ಜನರ ಮಾತುಗಳೆಂಬ ಚಟಚಟ ಎಂದು ಸಿಡಿವ ಕಿಡಿಗಳ ಹಾಗೆ ಸಂತಾಪಕರವಾದುದನ್ನು ಸಹಿಸುತ್ತಾರೆ. ಚಾಡಿಮಾತುಗಳನ್ನೂ ಅಥವಾ ಕೋಲು ಬಡಿಗೆಗಳ ಏಟುಗಳನ್ನೂ ಶಸ್ತ್ರಪ್ರಹಾರಗಳನ್ನೂ ಸೈರಿಸುತ್ತಾರೆ. ಮಹಾಋಷಿಗಳು ಸಿಟ್ಟಾಗುವುದಿಲ್ಲ. ಸವಣರು (ಸಾಧುಗಳು) ಕ್ಷಮಾಗುಣವನ್ನು ಬಲ್ಲವರು. ಬದುಕು ಸಾವುಗಳಲ್ಲಿಯೂ ಲಾಭನಷ್ಟಗಳಲ್ಲಿಯೂ ಇಷ್ಟವಸ್ತುವಿನ ಸಂಯೋಗ ವಿಯೋಗಗಳಲ್ಲಿಯೂ ಬಂಧುಗಳು ಶತ್ರುಗಳು ಇವರಿಗೆ ಸಂಬಂಸಿದ ಸುಖದುಃಖಗಳಲ್ಲಿಯೂ ಹಸಿವು ಬಾಯಾರಿಕೆ ಶೀತೋಷ್ಣಾದಿಗಳಲ್ಲಿಯೂ ಸಮತೆಯು ಸಾಮಾಯಿಕ ಎಂಬ ಹೆಸರುಳ್ಳುದಾಗಿದೆ. ಎಲ್ಲ ಜೀವಗಳನ್ನೂ ಕ್ಷಮಿಸುತ್ತೇನೆ, ಎಲ್ಲ ಜೀವಗಳೂ ನನ್ನನ್ನು ಕ್ಷಮಿಸಲಿ. ಎಲ್ಲ ಜೀವಗಳಲ್ಲಿಯೂ ನನಗೆ ಸ್ನೇಹವಿದೆ. ನನಗೆ ಎಲ್ಲಿಯೂ ವೈರವಿಲ್ಲ) ಎಂದೀ ರೀತಿಯಾಗಿ ಕ್ಷಮೆಯನ್ನೇ ಭಾವಿಸುತ್ತ ಗುರುದತ್ತ ಋಷಿಗಳು ಇದ್ದರು. ಹೀಗಿರಲು ಹಳಮುಖನು ಆ ಹುಲ್ಲಿನ ಹಗ್ಗವನ್ನು ಎಣ್ಣೆಯಲ್ಲಿ ನೆನೆಸಿದನು. ಅದನ್ನು ಋಷಿಗಳ ಉಗುರಿನಿಂದ ತೊಡಗಿ ನೆತ್ತಿಯವರೆಗೂ ಆವರಿಸುವಂತೆ ಶರೀರಕ್ಕೆ ಸುತ್ತಿ ಎಲ್ಲಾ ಕಡೆಗಳಲ್ಲಿಯೂ ಬೆಂಕಿ ಹಚ್ಚಿ ಎಣ್ಣೆಯನ್ನು ಸಿಂಪಡಿಸುತ್ತಿರಲು ಬೆಂಕಿ ಹಿಡಿದು ಒಂದೇ ಜ್ವಾಲೆಯಾಗಿ ಸುಡತೊಡಗಿತು. ಆ ಬೆಂಕಿ ದೇಹವನ್ನು ಮುಟ್ಟುವ ಮೊದಲೇ ಋಷಿಗಳು ಆಜ್ಞಾವಿಚಯ, ಅಪಾಕವಿಚಯ, ವಿಪಾಕ ವಿಚಯ, ಸಂಸ್ಥಾನ ವಿಚಯ – ಎಂಬ ಈ ನಾಲ್ಕು ಧರ್ಮಧ್ಯಾನಗಳನ್ನು ಧ್ಯಾನಿಸಿದರು. ಆಮೇಲೆ ಪೃಥಕ್ತ , ವಿತರ್ಕ, ವಿಚಾರ – ಎಂಬ ಮೊದಲನೆಯ ಶುಕ್ಮಧ್ಯಾನವನ್ನು ಧ್ಯಾನಿಸಿದರು. ಸೂಕ್ಷ್ಮಸಾಂಪರಾಯದ ಗುಣಸ್ತಾನದಲ್ಲಿ ಮೋಹನೀಯದ ಕಾಂಡಕ ಘಾತವು ಮುಗಿದು ಚರಮಕಾಂಡಕದ

ಬಿರ್ದನಂತರ ಸಮಯಂ ಮೊದಲ್ಗೊಂಡು ಜಾನಿಸಿಯಲ್ಲಿಂ ಬೞಯಮೇಕತ್ವ ವಿತರ್ಕ ವಿಚಾರಮೆಂಬೆರಡನೆಯ ಶುಕ್ಮಧ್ಯಾನಮಂ ಕ್ಷೀಣಕಷಾಯನಾಗಿ ಜಾನಿಸಿ ಬೞಯಂ ಚರಮಸಮಯದೊಳ್ ನಾಲ್ಕು ಕರ್ಮಮಂ ಕಿಡಿಸುವ ಸಮಯದೊಳ್ ರಸ ರುರ ಮಾಂಸ ಮೇದೋಸ್ಥಿಮಜ್ಜ ಶುಕ್ಲಮೆಂಬ ಸಪ್ತಧಾತುಗಳುಮವಱೊಡನೆ ಕೆಟ್ಟುವು ಮತ್ತೆ ಘಾತಿಕರ್ಮಂಗಳುವಾವುವೆಂದೊಡೆ ಅಯ್ದು ತೆಱದ ಜ್ಞಾನಾವರಣೀಯಮೊಂಬತ್ತು ತೆಱದ ದರ್ಶನಾವರಣೀಯಮಂತೆರಡುಂ ಕರ್ಮಂಗಳ ಕೇಡಿನೊಳ್ ಲೋಕಾಲೋಕದೊಳಗಣ ಸೂಕ್ಷಾ ಂತರಿತ ದೂರ ಪದಾರ್ಥವಸ್ತುಗಳೆಲ್ಲಮಂ ಕ್ರಮ ಕರಣ ವ್ಯವಧಾನರಹಿತಮಾಗಿ ಬಗೆಯದೆ ತಡೆಯದೆ ಸುೞಯದೆ ಮೋಹಿಸದೆ ಎಲ್ಲಾ ವಸ್ತುಗಳನೊರ್ಮೊದಲಱವ ಕಾಣ್ಬನಂತಜ್ಞಾನಮುಮನಂತದರ್ಶನಮುಮನೊಡೆಯರಾದರ್ ಮತ್ತಿರ್ಪತ್ತೆಂಟು ತೆಱದ ಮೋಹನೀಯವೆಂಬ ಕರ್ಮದ ಕೇಡಿನಿಂ ಅನಂತಸುಖಿಗಳಾದರ್ ಮತ್ತಮಯ್ದು ತೆಱದಂತರಾಯಮೆಂಬ ಕರ್ಮದ ಕೇಡಿನಿಂದಮನಂತ ವೀರ್ಯಮನೊಡೆಯರಾದರ್ ಅಚಿತೊರ್ಮೊದಲೆ ಘಾತಿಕರ್ಮಂಗಳ ನಾಲ್ಕಱ ಕೇಡಿನಿಂದಮನಂತಚತುಷ್ಟಯಮನ್ರೆಡೆಯರ್ ಮುಂಡಕೇವಳಿಗಳಾಗಿರ್ದರ್

ಚಮರಪಾಳಿ ಬಿದ್ದನಂತರ ಸಮಯ ಮೊದಲಾಗಿ ಧ್ಯಾನಿಸಿದರು. ಆಮೇಲೆ ಏಕತ್ವ, ವಿತರ್ಕ, ವಿಚಾರ – ಎಂಬ ಎರಡನೆಯ ಶುಕ್ಲಧ್ಯಾನವನ್ನು ಧ್ಯಾನಿಸಿ ಕಷಾಯವನ್ನು ಕ್ಷೀಣಗೊಳಿಸಿದರು. ಆಮೇಲೆ ಚರಮಸಮಯದಲ್ಲಿ ನಾಲ್ಕು ಕರ್ಮಗಳನ್ನು ನಾಶಗೊಳಿಸುವ ಸಂದರ್ಭದಲ್ಲಿ ರಸ, ರಕ್ತ, ಮಾಂಸ, ಮೇದಸ್ಸು, ಎಲುಬು, ಕೊಬ್ಬು, ಶುಕ್ಲ – ಎಂಬ ಏಳು ಬಗೆಯ ಧಾತುಗಳೂ ಅವುಗಳೊಂದಿಗೆ ನಾಶವಾದವು, ಆಮೇಲೆ ಘಾತಿಕರ್ಮಗಳು ಯಾವುವೆಂದರೆ – ಮತಿ, ಶ್ರುತ, ಅವ, ಮನಃಪರ್ಯಾಯ ಮತ್ತು ಕೇವಲ ಜ್ಞಾನ – ಎಂಬ ಐದು ಬಗೆಯ ಜ್ಞಾನಾವರಣೀಯಗಳೂ ಚಕ್ಷು, ಅಚಕ್ಷು, ಅವ, ಕೇವಲದರ್ಶನ, ನಿದ್ರಾ, ನಿದ್ರಾನಿದ್ರೆ, ಪ್ರಚಲಾ, ಪ್ರಚಲಾಪ್ರಚಲಾ, ಸ್ತಾ ನಗೃದ್ಧಿ – ಎಂಬೀ ಒಂಬತ್ತು ಬಗೆಯ ದರ್ಶನಾವರಣೀಯ ಕರ್ಮಗಳೂ ಅಂತೂ ಘಾತಿ ಅಘಾತಿ ಎಂಬ ಎರಡು ಬಗೆಯ ಕರ್ಮಗಳು ನಾಶವಾದವು. ಲೋಕದ ಮತ್ತು ಲೋಕವಲ್ಲದ ಇತರ ಕಡೆಯ ಸೂಕ್ಷ್ಮವಾದ, ನಿಗೂಢವಾದ, ದೂರದಲ್ಲಿರುವ – ಪದಾರ್ಥಗಳು ವಸ್ತುಗಳೆಲ್ಲವನ್ನೂ ಕ್ರಮ – ಕರಣ – ವ್ಯವಧಾನಗಳಿಲ್ಲದೆಯೆ, ಬಗೆಯದೆ, ತಡೆಯದೆ, ಸುತ್ತಾಡದೆ, ಪ್ರೀತಿಸದೆ, ಎಲ್ಲಾ ವಸ್ತುಗಳನ್ನು ಒಮ್ಮೆಗೇ ತಿಳಿಯತಕ್ಕ ಕಾಣತಕ್ಕ ಅನಂತ ಜ್ಞಾನವನ್ನೂ ಅನಂತದರ್ಶನವನ್ನೂ ಉಳ್ಳವರಾದರು. ಅನಂತರ ಇಪ್ಪತ್ತೆಂಟು ವಿಧದ ಉತ್ತರ ಪ್ರಕೃತಿಗಳಿಂದ ಕೂಡಿದ ಮೋಹನೀಯವೆಂಬ ಕರ್ಮನಾಶವಾಗಿ ಅನಂತಸುಖವುಳ್ಳವರಾದರು. ಆಮೇಲೆ ದಾನಾಂತರಾಯ, ಲಾಭಾಂತರಾಯ, ಭೋಗಾಂತರಾಯ, ಉಪಭೋಗಾಂತರಾಯ, ವೀರ್ಯಾಂತರಾಯ – ಎಂಬ ಐದು ಬಗೆಯ ಅಂತರಾಯ ಕರ್ಮವು ನಾಶವಾಗಿ ಅನಂತವೀರ್ಯವುಳ್ಳವರಾದರು. ಅಂತೂ ಒಮ್ಮೆಯೇ ನಾಲ್ಕು ಬಗೆಯ ಘಾತಿಕರ್ಮಗಳು ನಾಶವಾಗಿ ಅನಂತಸುಖ – ಎಂಬ ನಾಲ್ಕು ಅಂತಗಳುಳ್ಳವರೂ ಹತ್ತು ಬಗೆಯ ಮಂಡನ (ವಶಪಡಿಸುವಿಕೆ)ವುಳ್ಳ ಮುಂಡಕೇವಲಿಗಳಾಗಿ ಇದ್ದರು. ಆ ವೇಳೆಗೆ ಇಂದ್ರನ ಆಜ್ಞೆಯಂತೆ ಕುಬೇರನು ಮಾಡಿದ ನೆಲದ ಮೇಲ್ಗಡೆ ಐದು ಸಾವಿರ ಬಿಲ್ಲಿನಷ್ಟು ದೂರದಲ್ಲಿ ಆಕಾಶದಲ್ಲಿ ಒಂದು ಏಕಶಿಲೆಯಾಗಿರತಕ್ಕ ಇಂದ್ರನೀಲದ ರತ್ನದ

ಅನ್ನೆಗಮಿಂದ್ರನ ಬೆಸದಿಂ ಧನದಂ ಮಾಡಿದ ನೆಲದ ಮೇಗೈಸಾಸಿರ ಬಿಲ್ಲುತ್ಸೇಧದೊಳಂತರಿಕ್ಷದೊಳೊಂದು ಯೋಜನ ವಿಸ್ತೀರ್ಣಮೇಕಶಿಲೆಯಪ್ಪಿಂದ್ರನೀಲ ಮಣಿಕುಟ್ಟಿಮ ಭೂಮಿಯಕ್ಕುಮದಱ ಮೇಗೆ ಏಕಯೋಜನ ವಿಸ್ತೀರ್ಣ ರತ್ನಮಯಮಪ್ಪ ಶ್ರೀಮಂಟಪಮಕ್ಕುಂ ಮತ್ತಂ ನಾಲ್ಕು ದೆಸೆಯೊಳಂ ಕನಕಮಯಮಪ್ಪ ನಾಲ್ಕುಂ ಸೋಪಾನಷಂಕ್ತಿಗಳ ನೊಡೆಯ ಭೂಮಿಯ ಮೇಗೆ ಸಿಂಹಾಸನಮಕ್ಕುಂ ಅದಱ ಮೇಗಲರ್ದ್ದ ಪೊಂದಾಮರೆಯಕ್ಕುಮದಂ ನಾಲ್ವೆರಲಂ ಮುಟ್ಟದೆ ಅದಱ ಮೇಗೆ ಪಲ್ಯಂಕದೊಳಿರ್ದೊಂದು ಬೆಳ್ಗೊಡೆಯನೊಡೆಯೊನಾಗಿ ಮೂವತ್ತೆರಡುಂ ಚಾಮರಂಗಳಿಂ ದೇವರ್ಕಳ್ ಬೀಸುತ್ತಮಿಂತಿರ್ಪನ್ನೆಗಂ

ಗಾಹೆ || ಸವ್ವೇ ಹಿ ಭವಣವಾಸೀವೆಂತರ ದೇವಾಯ ಪಳಹಫಳುತಸಿಯಾ
ಪುಂಟಿಹ ಕಪ್ಪವಾಸೀ ಸಿಹಣಿಣಾ ಜೋ ಇಸಿಯಾ

ಎಂದೀ ಪೇೞ್ದ ಚಿಹ್ನಂಗಳಿಂದಱದು ಚತುರ್ವಿಧ ದೇವನಿಕಾಯಂ ತಂತಮ್ಮ ಪರಿವಾರಂ ಬೆರಸುಬಂದು ದಿವ್ಯಮಪ್ಪ ಗಂಧ ಪುಷ್ಪ ಧೂಪ ದೀಪಾಕ್ಷತಂಗಳಿಂದರ್ಚಿಸಿ ವಂದಿಸಿ ಸಮವಸರಣ ಕೋಷ್ಠಂಗಳೊಳ್ ತಂತಮ್ಮಿರ್ಪ ಸ್ಥಾನಂಗಳೊಳ್ ದೇವರ್ಕಳುಂ ದೇವಿಯರ್ಕಳುಂ ಚಾತುರ್ವರ್ಣ್ಯ ಸಂಘಮುಂ ಮೃಗಂಗಳುಂ ಬಳಸಿಯುಂ ಬಂದು ಧರ್ಮಮಂ ಕೇಳುತ್ತಿರ್ದರನ್ನೆಗಂ ಹಳಮುಖನು ಧರ್ಮಮಂ ಕೇಳ್ದು ನಿಂದಿರ್ದಿಂತೆಂದು ಬಿನ್ನಪಂಗೆಯ್ದಂ ಭಟಾರಾ ನಿಮಗಾಂ ಪೊಲ್ಲಕೆಯ್ದನದನೆನಗೆಕ್ಷಮಿಯಿಸಿಮೆಂದೆಱಗಿ

ಜಗಲಿಯ ನೆಲವಾಗಿದ್ದಿತು. ಅದರ ಮೇಲೆ ಒಂದು ಯೋಜನ ವಿಸ್ತಾರವಾದ, ರತ್ನಗಳಿಂದೊಪ್ಪುವ ಕಾಂತಿಯುಕ್ತವಾದ ಮಂಟಪವಿದ್ದಿತು. ಅದಲ್ಲದೆ, ನಾಲ್ಕು ದಿಕ್ಕುಗಳಲ್ಲಿಯೂ ಚಿನ್ನದಿಂದ ಕೂಡಿದ ನಾಲ್ಕು ಮೆಟ್ಟಿಲುಗಳ ಸಾಲುಗಳಿರುವ ನೆಲದ ಮೇಲೆ ಸಿಂಹಾಸನವಿದ್ದಿತು. ಆ ಸಿಂಹಾಸನದ ಮೇಲೆ ಅರಳಿರುವ ಹೊಂದಾವರೆಯಿದ್ದಿತು. ಅದು ನಾಲ್ಕು ಬೆರಳನ್ನೂ ಮುಟ್ಟದ ಹಾಗೆ ಅದರ ಮೇಲುಗಡೆಯಲ್ಲಿ ಪದ್ಮಾಸನದಲ್ಲಿದ್ದುಕೊಂಡು ಒಂದು ಶ್ವೇತಚ್ಛತ್ರವುಳ್ಳವನಾಗಿ ದೇವತೆಗಳು ಮೂವತ್ತೆರಡು ಚಾಮರಗಳನ್ನು ಬೀಸುತ್ತಿರಲು, ಹೀಗೆ ಗುರುದತ್ತ ಋಷಿಗಳು ಇರುತ್ತದ್ದರು. ಆ ಸಂರ್ಭದಲ್ಲಿ – ಎಲ್ಲ ಭವನವಾಸಿಗಳು ಮತ್ತು ವ್ಯಂತರ ದೇವತೆಗಳು ಪಟಹಗಳ ಶಬ್ದದಿಂದ ಹೆದರಿದರು. ಕಲ್ಪವಾಸಿಗಳು ಗಂಟೆಯ ಶಬ್ದದಿಂದಲೂ ಜ್ಯೋತಿಷ್ಕದೇವತೆಗಳು ನವಿಲುಗಳ ಕೇಗುವಿಕೆಗಳಿಂದಲೂ ಹೆದರಿದರು. ಹೀಗೆ ಹೇಳಿದ ಚಿಹ್ನೆಗಳಿಂದ ತಿಳಿದುಕೊಂಡು ನಾಲ್ಕು ವಿಧದ ದೇವತಾ ಸಮೂಹದವರು ತಮ್ಮ ತಮ್ಮ ಪರಿವಾರ ಸಮೇತ ಬಂದು ದಿವ್ಯವಾದ ಗಂಧ ಪುಷ್ಪ ಧೂಪ ದೀಪ ಅಕ್ಷತೆಗಳಿಂದ ಪೂಜಿಸಿ ನಮಸ್ಕರಿಸಿ ಜಿನನು ಉಪದೇಶಮಾಡತಕ್ಕ ಸಭಾಭವನದ ಪ್ರದೇಶಗಳಲ್ಲಿ ತಾವು ತಾವು ಇರತಕ್ಕ ಸ್ಥಳಗಳಲ್ಲಿ ದೇವರುಗಳೂ ದೇವಿಯರುಗಳೂ ನಾಲ್ಕು ವರ್ಣಗಳ ಸಂಘವೂ ಮೃಗಗಳೂ ಸುತ್ತಲೂ ಕವಿದುಕೊಂಡು ಬಂದು ಧರ್ಮವನ್ನು ಕೇಳುತ್ತಿದ್ದವು. ಆ ವೇಳೆಯಲ್ಲಿ ಹಳಮುಖನೂ ಧರ್ಮವನ್ನು ಕೇಳಿಕೊಂಡು ನಿಂತಿದ್ದು ಈ ರೀತಿಯಗಿ ವಿಜ್ಞಾಪಿಸಿದನು – “ಋಷಿಗಳೇ, ನಿಮಗೆ ನಾನು ಕೆಟ್ಟದನ್ನು ಮಾಡಿದೆನು. ಅದನ್ನು ನೀವು ಕ್ಷಮಿಸಬೇಕು ಎಂದು ಸಾಷ್ಟಾಂಗ ವಂದನೆ

ಪೊಡೆವಟ್ಟೊಡೆ ಭಟಾರರೆಂದರ್ ನಿನಗೇನುಂ ದೋಷಮಿಲ್ಲೆಂದಾತನ ತಮ್ಮ ಭವಂಗಳಂ ಪೇೞ್ದೊಡೆ ಕೇಳ್ದೀ ಗೆಯ್ದ ಪಾಪಮಿಂತಲ್ಲದೆ ಪಿಂಗದೆನಗೆ ದೀಕ್ಷೆಯಂ ದಯೆಗೆಯ್ಯಿಮೆಂದು ಬೇಡಿ ತಪಂಬಟ್ಟು ಶಿಷ್ಯನಾಗಿ ಆಗಮಂಗಳನೋದುತ್ತಿರ್ದನಿತ್ತ ಗುರುದತ್ತ ಕೇವಳಿಯುಂ ಗ್ರಾಮ ನಗರ ಖೇಡ ಖರ್ವಡ ಮಡಂಬ ಪತ್ತನ ದ್ರೋಣಾಮುಖಂಗಳಂ ವಿಹಾರಿಸುತ್ತಂ ಭವ್ಯವರ ಪುಂಡರೀಕರ್ಕಳ್ಗೆ ಧರ್ಮಾಮೃತಮಂ ಕಱೆಯುತ್ತಂ ಪಲಂಬರುಮಂ ಧರ್ಮಂಗೊಳಿಸುತ್ತಂ ಮತ್ತಮಾ ಪಲ್ಲಿಖೇಮೆಂಬೂರ್ಗೆ ಬಂದು ಯೋಗನಿರೋಧಂಗೆಯ್ದು ಅಯೋಗಿ ಭಟಾರರಾಗಿ ಪಂಚ ಹ್ರಸ್ವಾಕ್ಷರೋಚ್ಚಾರಣ ಮಾತ್ರ ಕಾಲದಿಂದಾಯುರ್ನಾಮಗೋತ್ರ ವೇದನೀಯಮೆಂಬ ನಾಲ್ಕುಮಘಾತಿಕರ್ಮಂಗಳನೊರ್ಮೊದಲೆ ಕಿಡಿಸಿ ಏಕ ಸಮಯದೊಳಗೆ ಮೋಕ್ಷಸ್ಥಾನದೊಳ್ ನೆಲಸಿ ಜಾತಿ ಜರಾಮರಣಂಗಳುಂ ಪಸಿವುಂ ನೀರೞ್ಕೆ ಶೀತೋಷ್ಣವಾತಂ ಮೊದಲಾಗೊಡೆಯ ಆವ ಬಾಧೆಗಳಿಲ್ಲದ ಅನಂತಜ್ಞಾನಮನಂತ ದರ್ಶನಮನಂತಸುಖಮನಂತವೀರ್ಯದೊಳ್ ಕೂಡಿ ಎಲ್ಲಾ ಕಾಲಮುಂ ಸುಖಿಯಾಗಿರ್ದರ್

ಗಾಹೆ || ಅರುಜಮಮರಣಂ ಮಧುರಂ ಅಕ್ಖಯ ಸೊಕ್ಖಂ ಅಣೋವಮಂ ಪತ್ತಾ
ಅವ್ವಾಬಾಧಮಣಂತಂ ಅಣಗಾರಾ ಕಾಲಮಚ್ಛಂತಿ

ಮತ್ತೆ ಹಳಮುಖರಿಸಿಯರುಮಾಗಮಂಗಳೆಲ್ಲಮಂ ಕಲ್ತು ಏಕವಿಹಾರಿಯಾಗಿ ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಕೊಂಕಣವಿಷಯಮನೆಯ್ದಿಯಾ

ಮಾಡಲು, ಋಷಿಗಳು “ನಿನಗೇನೂ ದೋಷವಿಲ್ಲ* – ಎಂದು ಆತನ ಜನ್ಮವೃತ್ತಾಂತವನ್ನು ಹೇಳಲು ಕೇಳಿ “ನಾನು ಮಾಡಿದ ಈ ಪಾಪಗಳು ಹೀಗಲ್ಲದೆ ಪರಿಹಾರವಾಗವು. ನನಗೆ ದೀಕ್ಷೆಯನ್ನು ದಯಪಾಲಿಸಿರಿ* ಎಂದು ಬೇಡಿ ತಪಸ್ಸನ್ನು ಉಪದೇಶ ಪಡೆದು ಶಿಷ್ಯನಾಗಿ ಶಾಸಗಳನ್ನು ಅಭ್ಯಾಸಮಾಡುತ್ತಿದ್ದನು. ಇತ್ತ ಗುರುದತ್ತರು ಕೇವಲ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳಲ್ಲಿ ಸಂಚಾರ ಮಾಡುತ್ತ ಭವ್ಯರೆಂಬ ಶ್ರೇಷ್ಠರಾದ ತಾವರೆಗಳಿಗೆ ಧರ್ಮಾಮೃತವನ್ನು ಸುರಿಸುತ್ತ ಹಲವರನ್ನು ಧರ್ಮನಿಷ್ಠರನ್ನಾಗಿ ಮಾಡುತ್ತ ಆಮೇಲೆ ಪಲ್ಲಿಖೇಡವೆಂಬ ಊರಿಗೆ ಬಂದು ಯೋಗವನ್ನು ಬಲವಂತದಿಂದ ಮಾಡಿ, ಯೋಗಿಸಂನ್ಯಾಸಿಗಳಾಗಿ ಐದು ಹ್ರಸ್ವಾಕ್ಷರಗಳನ್ನು ಉಚ್ಚರಿಸಿದ ಮಾತ್ರಾಕಾಲದಿಂದ ಆಯುಸ್ಸು, ನಾಮ, ಗೋತ್ರ, ವೇದನೀಚಿi – ಎಂಬ ನಾಲ್ಕು ಬಗೆಯ ಅಘಾತಿಕರ್ಮಗಳನ್ನು ಏಕಕಾಲದಲ್ಲೇ ನಾಶಮಾಡಿ ಒಮ್ಮೆಗೇ ಮೋಕ್ಷಸ್ಥಾನದಲ್ಲಿ ನಿಂತು – ಜನ್ಮ, ಮುಪ್ಪು, ಸಾವು, ಹಸಿವು, ಬಾಯಾರಿಕೆ, ಶೀತ, ಉಷ್ಣ, ವಾಯು – ಮುಂತಾಗಿರುವ ಯಾವ ತೊಂದರೆಗಳೂ ಇಲ್ಲದ ಅನಂತಜ್ಞಾನ, ಅನಂತದರ್ಶನ, ಅನಂತಸುಖ, ಅನಂತವೀರ್ಯ – ಎಂಬ ಅನಂತ ಚತುಷ್ಟಯದಲ್ಲಿ ಸೇರಿ ಎಲ್ಲಾ ಕಾಲವೂ ಸುಖದಿಂದ ಇದ್ದರು. (ಮುಕ್ತರಾದವರು ರೋಗವಿಲ್ಲದ, ಮರಣವಿಲ್ಲದ, ಮಧುರವಾದ, ಅಸದೃಶವಾದ ಯಾವ ಕಡೆಯೂ ಇಲ್ಲದ ಅಕ್ಷಯ ಸುಖವನ್ನು ಅನಂತವಾದ ಭವಿಷ್ಯತ್ತಿನವರೆಗೂ ಪಡೆಯುತ್ತಾರೆ.) ಆಮೇಲೆ ಹಳಮುಖ ಋಷಿಗಳು ಶಾಸ್ತ್ರಗಳೆಲ್ಲವನ್ನೂ ಕಲಿತು ಒಬ್ಬರೇ ಸಂಚಾರ ಮಾಡುವವರಾಗಿ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂ ಭಾಗಗಳಲ್ಲಿ ಸಂಚಾರ ಮಾಡುತ್ತ ಕೊಂಕಣ ದೇಶಕ್ಕೆ ಹೋದರ. ಆ ನಾಡಿನಲ್ಲಿ ಹೋಗುತ್ತ