ಉಪ್ಪಜ್ಜ ದುಕ್ಖಂ ತೋ ದಟ್ಠವ್ವೋ ಸಭಾವದೋ ಣಿರಯೇ
ಕದಮಂ ಮಏ ಪತ್ತಂ ಸಂಸಾರೇ ಸಂಸರಂತೇಣ

ಸಂಸಾರಚಕ್ಕವಾಳಮ್ಹಿ ಸವ್ವೇ ಪೊಗ್ಗಳಾ ಬಹುಸೋ
ಅಹಾರಿದಾ ಪರಿಣಾಮಿದಾಯ ಮೇ ಗದಾ ತಿತ್ತೀ

ಆಹಾರಣಿಮಿತ್ತಂ ಕಿರ ಮಚ್ಛಾ ಗಚ್ಛಂತಿ ಸತ್ತಮಂ ಪುಢವಿಂ
ಸಚ್ಚಿತ್ತೋ ಆಹಾರೋ ಣಖಮದಿ ಮಣಸಾ ವಿ ಪತ್ಥೇದುಂ

ತಣಕಟ್ಟೇಣ ಅಗ್ಗೀ ಲವಣ ಸಮುದ್ದೋ ಣದೀ ಸಹಸ್ಸೇಹಿಂ
ಇವೋ ಜೀವೋ ಸಕ್ಕೋ ತಪ್ಪೇದುಂ ಕಾಮಭೋಗೇಹಿಂ

ಜಹ ಜಹ ಭುಂಜ ಭೋಗೇ ತಹತಹ ಭೋಗೇಸು ವಡ್ಡದೇ ತಣ್ಣಾ
ಅಗ್ಗೀವ ಇಂಧಣಾಇಂ ತಣಂ ದ್ಹೀವಂತಿ ಸೇ ಭೋಗಾ

ವೃತ್ತ || ಲವಣರಸಮಂಭೋ ಭುಜ್ಯಮಾನಂ ತೃಷಾರ್ತೈ
ರಕತರ ತೃಷಾರ್ತಾನ್ ದುಃಖಿತಾನೇನ ಕುರ್ಯಾತ್
ವಿಷಯ ಸುಖಮಪೀದಂ ಭುಜ್ಯಮಾನಂ ತೃಷಾರ್ತೈ
ರಕತರ ತೃಷಾರ್ತಾನ್ ದುಃಖತಾನೇನ ಕುರ್ಯಾತ್

ಆರ್ಯ || ಯದ್ಯ ಪಿ ನಿಷೇವ್ಯಮಾಣಾ
ಮನಸಸ್ಸಂತುಷ್ಟಿಕಾರಕಾ ವಿಷಯಾಃ

ಆಹಾರವು ಮನಸ್ಸಿನಲ್ಲಿಯೂ ಬಯಸಲು ಯೋಗ್ಯವೆನಿಸುವುದಿಲ್ಲ. ಹುಲ್ಲುಕಟ್ಟಿಗೆಗಳಿಂದ ಬೆಂಕಿ ಹೇಗೆ ತೃಪ್ತಿಗೊಳ್ಳುವುದಿಲ್ಲವೋ ಉಪ್ಪುಗಡಲು ಸಾವಿರಾರು ನದಿಗಳಿಂದಲೂ ಹೇಗೆ ತುಂಬುವುದಿಲ್ಲವೋ ಹಾಗೆಯೇ, ಈ ಜೀವನು ಕಾಮಭೋಗದಿಂದ (ಸ್ತ್ರೀವಸ್ತ್ರಾದಿ ಭೋಗವಸ್ತುಗಳಿಂದ) ತೃಪ್ತಿಪಡಿಸಲು ಸಾಧ್ಯವಾಗದವನು. ಭೋಗಗಳು ಹೇಗೆ ಹೇಗೆ ಭೋಗಿಸಲ್ಪಡುವುವೋ ಹಾಗೆ ಹಾಗೆ ಭೋಗಗಳಲ್ಲಿ ಆಸೆ ಹೆಚ್ಚಾಗುತ್ತದೆ. ಸೌದೆಗಳಿಂದ ಬೆಂಕಿಯ ಹಾಗೆ ಆ ಭೋಗಗಳು ತೃಷ್ಣೆಯನ್ನು (ಆಸೆಯನ್ನು) ಉದ್ದೀಪನಗೊಳಿಸುತ್ತವೆ. ಬಾಯಾರಿಕೆಯನ್ನು ಅಕಗೊಳಿಸಿ ಪೀಡಿಸುವುದು, ದುಃಖಿತರನ್ನಾಗಿ ಮಾಡುವುದು. ಈ ವಿಷಯಸುಖವು ಕೂಡ, ಆಶಾಪೀಡಿತರಾದವರಿಂದ ಸೇವಿತವಾಗಿದ್ದು ಹೆಚ್ಚಾದ ಆಶೆಯಿಂದ ಪೀಡಿತರನ್ನಾಗಿಯೂ ದುಃಖಿತರನ್ನಾಗಿಯೂ ಮಾಡುತ್ತದೆ. ಮನಸ್ಸಿಗೆ ಸಂತೋಷವನ್ನುಂಟುಮಾಡುವ ವಸ್ತುಗಳು ಸೇವಿಸಲ್ಪಡುವವಾದರೂ ಅನಂತರ ಅವು, ಕಿಂಪಾಕಫಲವನ್ನು (ಹೆಮ್ಮುಷ್ಟಿ ಹಣ್ಣನ್ನು) ತಿಂದಹಾಗೆ ಬಹಳ ಕೆಟ್ಟಪರಿಣಾಮಕರವಾಗಿ ಪರಿಣಮಿಸುತ್ತವೆ. – ಈ ಹಣ್ಣು ಕಾಣಲು ಚೆಲುವು, ತಿನ್ನಲು ರುಚಿ, ತಿಂದರೆ ಪ್ರಾಣಹಾನಿ, ಮೃತ್ಯುದೇವತೆ ಮೇಲೆ ಹಾಯ್ದು ಬಂದಾಗ ರಕ್ಷಿಸತಕ್ಕವು ಯಾವುವೂ ಇಲ್ಲ. ಅಂತಹ ಸಂದರ್ಭದಲ್ಲಿ ಔಷ, ಮಂತ್ರ, ಇಷ್ಟದೇವತೆಗಳು, ಶ್ರೇಷ್ಠವಾದ ಬಾಣಗಳು, ಕೋಟೆ,

ಕಿಂಪಾದಕಫಲಾಶನವದ್
ಭವಂತಿ ಪಶ್ಚಾದತಿ ದುರಂತಾಃ

ವೃತ್ತ|| ಮರ್ದುಂ ಮಂತ್ರಮುಮಿಷ್ಟದೇವತೆಗಳುಂ ದಿವ್ಯಾಸ್ತ್ರಮುಂ ಕೋಂಟೆಯುಂ
ಗುರ್ದುಂ ಪೊರ್ದಿದ ಚಾತುರಂಗಬಲಮುಂ ಮೆಯ್ಗಾಪುಮಾ ವೇಳೆಗೊಂ
ಖರ್ದತ್ಯುಗ್ರ ಭಟರ್ಕಳುಂ ಕವಚಮುಂ ಮಿತ್ರರ್ಕಳುಂ ಮಿೞ್ತು ಮೇ
ಲೆರ್ದಾಗಳ್ ಶರಣಪ್ಟೊಡೇಕೆ ಮಡಿದರ್ ಪನ್ನಿರ್ವರುಂ ಚಕ್ರಿಗಳ್

ಸಾವನಿತೊಂದವಸ್ಥೆ ತನಗಾದೆಡೆಯೊಳ್ ತಱಸಂದು ತತ್ವಮಂ
ಭಾವಿಸಿ ಬಾಹ್ಯವಸ್ತುಗಳೊಳೊಂದದೆ ತನ್ನೊಳೆ ನಿಂದು ಕರ್ಮವಿ
ಶ್ರಾವಣೆಯಿಂ ವಿಶೋ ದೊರೆಕೊಂಡಿರೆ ಗೆಲ್ದು ಪರೀಷಹಂಗಳಂ
ಜೀವಮನಿಂತು ಸಂತಮೊಡಲಿಂ ಕಳೆಗೆಂಬುದು ಜೈನಶಾಸನಂ

ಆರೊಳಮಿಲ್ಲ ಮೋಹಮೆನಗೆನ್ಗೆ ಜಿನೇಂದ್ರಪದಂಗಳುಗ್ರ ಸಂ
ಸಾರಹರಂಗಳೆನ್ಗೆ ಪೆಱತಿಲ್ಲೆನಗೆನ್ನಱವಲ್ಲದೆನ್ಗೆ ನಿಂ
ದಾರಯೆ ಧರ್ಮಮೊಂದೆ ಶರಣೆನ್ಗೆ ಪಲಾಲಮನೊಲ್ಲೆನಿನ್ ನಮ
ಸ್ಕಾರಮೆ ಸಾಲ್ಗುಮೆನ್ಗಿನಿತನೆನ್ಗೆನಲಾರ್ಪೊಡೆ ಜೀವಿತಾಂತ್ಯದೊಳ್

ಗುದ್ದು (ಮುಷ್ಟಿಯಿಂದ ತಿವಿತ), ಸೇರಿರುವ ಚತುರಂಗ ಸೈನ್ಯ, ಅಂಗರಕ್ಷಕರು, ಒಡೆಯನು ಸಾಯುತ್ತಲೇ ತಾವೂ ಸಾಯುತ್ತೇವೆ ಎಂಬ ಸಮಯಪಾಲನೆಯ ಪ್ರತಿಜ್ಞೆ ಮಾಡಿದ ಅತಿ ಭಯಂಕರ ಯೋಧರು, ಕವಚ, ಸ್ನೇಹಿತರು – ಇಂಥವು ಆಶ್ರಯವಾಗುವುದಾದರೆ, ಹನ್ನೆರಡು ಮಂದಿ ಚಕ್ರವರ್ತಿಗಳು ಏಕೆ ಸತ್ತರು?. ಸಾಯುವ ಒಂದು ಸ್ಥಿತಿ ತನಗುಂಟಾದ ಸಂದರ್ಭದಲ್ಲಿ ನಿಶ್ಚಯ ಮಾಡಿಕೊಂಡು, ಜೈನತತ್ತ ವನ್ನು ಧ್ಯಾನಿಸಿ, ಹೊರಗಿನ ವಿಷಯಗಳಲ್ಲಿ ಸೇರಿಕೊಳ್ಳದೆ, ತನ್ನಲ್ಲಿಯೇ ಮನಸ್ಸನ್ನು ನಿಲ್ಲಿಸಬೇಕು. ಕರ್ಮಕಳಚಿ ಹೋಗುವುದರಿಂದ ನಿರ್ಮಲತ್ವವು ಲಭ್ಯವಾಗಿರಲು ಇಪ್ಪತ್ತೆರಡು ಪರೀಷಹಗಳನ್ನು ಜಯಿಸಿ, ಶಾಂತರೀತಿಯಲ್ಲಿ ಪ್ರಾಣವನ್ನು ಶರೀರದಿಂದ ಹೊರಪಡಿಸಲಿ – ಎಂದು ಜೈನಶಾಸನವು ಹೇಳುತ್ತದೆ. ನನಗೆ ಯಾರಲ್ಲಿಯೂ ಪ್ರೀತಿಯಿಲ್ಲ ಎನ್ನಲಿ. ಜಿನೇಶ್ವರನ ಪಾದಗಳು ಭಯಂಕರವಾದ ಜನನ ಮರಣಗಳನ್ನು ಪರಿಹಾರಮಾಡುವುವು ಎನ್ನಲಿ. ನನಗೆ ನನ್ನ ಜ್ಞಾನವಲ್ಲದೆ ಬೇರೆ ಇಲ್ಲ ಎನ್ನಲಿ. ನಿಂತು ವಿಚಾರಮಾಡಿದರೆ ಧರ್ಮವೊಂದೇ ಆಶ್ರಯಸ್ಥಾನವು, ಜೊಳ್ಳಾದುದನ್ನು ಒಪ್ಪಲಾರೆನು, ಇನ್ನು ಜೀವನದ ಕೊನೆಗಾಲದಲ್ಲಿ ಬಾಯಿಂದ ಹೇಳುವಷ್ಟು ಶಕ್ತಿಯಿದ್ದರೆ, ಪಂಚನಮಸ್ಕಾರಗಳೇ ಸಾಕು ಎನ್ನುವ ಇಷ್ಟನ್ನು ಹೇಳಲಿ. ಈ ಜಿನನ ಉಪದೇಶವು ವಿಷಯಸುಖಗಳಿಗೆ ವಿರೇಚನಪ್ರಾಯವಾದ ಔಷಧವಾಗಿದೆ. ಅಮೃತಸ್ವರೂಪವಾಗಿದೆ. ಎಲ್ಲಾ ಜೀವಿಗಳ ಮುಪ್ಪು, ಸಾವು, ಜನ್ಮ ವೇದನೆಗಳನ್ನು ಕ್ಷಯಮಾಡುವಂಥದಾಗಿದೆ. ಒಂದೇ ಆದ ಜನ್ಮಧಾರಣೆಯಲ್ಲಿ ಜೀವಾತ್ಮನು ‘ಸಮಾಮರಣ’ ಎಂಬ ಸಾವನ್ನು ಯಾವಾಗ ಪಡೆಯುವನೋ ಆ ಮೇಲಿನ ಏಳೆಂಟು ಹುಟ್ಟುಗಳಲ್ಲಿ ಅತಿಶ್ರೇಷ್ಠವಾದ ಮೋಕ್ಷವನ್ನು ಪಡೆಯುತ್ತಾನೆ. ‘ಣವೊ ಅರಹಂತಾಣಂ’

ಗಾಹೆ|| ಜಿಣವಯಣ ಮೋಸಹಮಿಣಂ ಮಿಸಯಸುಹ ವಿರೇಯಣಂ ಅಮದಭೂದಂ
ಜರಮರಣ ಜಮ್ಮವಾಹಿ ಸುಹಕರಣಂ ಸವ್ವಜೀವಾಣಂ

ಎಕ್ಕಮ್ಹಿ ಭವಗ್ಗಹಣೇ ಸಮಾಹಿ ಮರಣಂ ಮರೇಜ ಜದಿ ಜೀವೋ
ಸತ್ತಟ್ಠ ಭವಗ್ಗಹಣೇ ಣಿವ್ವಾಣಮಣುತ್ತರಂ ಲಹಇ

ಸತ್ತಕ್ಖರ ಸಜ್ಜಾಯಂ ಅರಹಂತಾಣ ಣಮೋ ತ್ತಿಭಾವೇಣಂ
ಜೋ ಕುಣಇ ಅಣ್ಣಮ ಸೋ ಪಾವಇ ಸವ್ವಕಲ್ಲಾಣಂ

ಏಸೋ ಪಂಚಣಮೊಕ್ಕಾರೋ ಸವ್ವ ಪಾವ ಪಣಾಸಣೋ
ಮಂಗಳೇಸು ಸವ್ವೇಸು ಪಢಮಂ ಹವಇ ಮಂಗಳಂ

ಭಾವಣಮೊಕ್ಕಾರಗದೋ ಝಾಯಂ ಜೋಣಿಯಮಿಯಮ್ಮಿ ಚಿತ್ತಮ್ಮಿ
ಅಗ್ಗೇಣ ವಿಸುದ್ದೋ ತೋ ಹೋಹಿಸಿ ಮೋಕ್ಖ ಸುಹ ಭಾ

ಆರ್ಯೆ || ಗುರುಮೂಲೇ ಯತಿನಿಕಟೇ
ಚೈತ್ಯೇ ಸಿದ್ಧಾಂತರ್ವಾಸದ್ಘೋಷೇ
ಮಮ ಭವತು ಜನ್ಮಜನ್ಮನಿ
ಸಂನ್ಯಸನಸಮನ್ವಿತಂ ಮರಣಂ

ಎಂಬ ಸಪ್ತಾಕ್ಷರ ಮಂತ್ರದ ಪಠನವನ್ನು ಮನೋವಾಕ್ಕಾಯ ಎಂಬ ಮೂರು ಭಾವಗಳಿಂದ ಅನನ್ಯಮತಿಯಾದ ಯಾವನು ಮಾಡುವನೋ ಅವನು ಸಮಸ್ತಕಲ್ಯಾಣಗಳನ್ನೂ ಪಡೆಯುತ್ತಾನೆ. ಸರ್ವ ಪಾಪಗಳನ್ನೂ ನಾಶಮಾಡತಕ್ಕ ಈ ಪಂಚನಮಸ್ಕಾರಗಳು ಎಲ್ಲ ಮಂಗಳಗಳಲ್ಲಿಯೂ ಮೊದಲನೆಯ ಮಂಗಳವಾಗಿರುತ್ತದೆ. ಯಾವನು ಮನಸ್ಸಿನಲ್ಲಿಯೇ ಧ್ಯಾನಿಸುವ (ಪಂಚಪರಮೇಷ್ಠಿಗಳಾದ ಅರ್ಹಂತರು, ಸಿದ್ಧರು, ಆಚಾರ್ಯರು, ಉಪಾಧ್ಯಾಯರು, ಸಾಧುಗಳು – ಎಂಬೀ ಐವರ ಕುರಿತು ಮಾಡುವ) ಪಂಚನಮಸ್ಕಾರಗಳನ್ನು ಉಳ್ಳವನಾಗಿ ನಿಯತ ಮನಸ್ಸಿನಿಂದ ಧ್ಯಾನಿಸುತ್ತ ಏಕಾಗ್ರತೆಯಿಂದ ನಿರ್ಮಲನಾಗಿರುವನೋ ಅವನು ಮೋಕ್ಷಸುಖಕ್ಕೆ ಭಾಗಿಯಾಗಿ ಪರಿಣಮಿಸುವನು. ಗುರುಗಳ ಸಾನ್ನಿಧ್ಯದಲ್ಲಿಯೇ ಯತಿಗಳ ಸಮೀಪದಲ್ಲಿ, ಜಿನಾಲಯದಲ್ಲಿ, ತತ್ವಸಿದ್ಧಾಂತವೆಂಬ ಸಮುದ್ರದ ಒಳ್ಳೆಯ ನಾದದಲ್ಲಿ, ಪ್ರತಿಯೊಂದು ಜನ್ಮದಲ್ಲಿಯೂ ನನಗೆ ಸಂನ್ಯಾಸ ಸಮೇತವಾದ ಮರಣವು ಪ್ರಾಪ್ತವಾಗಲಿ. ಈ ರೀತಿಯಾಗಿ ಹದಿನೈದು ದಿವಸಗಳವರೆಗೆ ಆರಾಧನೆಯ ಶಾಸ್ತ್ರವನ್ನು ಸಾರಸ್ವತಾಚಾರ್ಯರು ವ್ಯಾಖ್ಯಾನ ಮಾಡಲು ಧರ್ಮದ ಮೇಲಿನ ಪ್ರೀತಿಯಿಂದ ಅದನ್ನು ಕೇಳಿ ಸಾಯುವ ವೇಳೆಯಲ್ಲಿ ದುಷ್ಟನಾಗಿರುವ ವಜ್ರದಾಡನು ಕಾರಣವಿಲ್ಲದೆಯೇ ನನ್ನನ್ನು ಕೊಂದನು ಎಂದು ಮನಸ್ಸಿನಲ್ಲಿ ಸಿಟ್ಟನ್ನು ಭಾವಿಸಿಕೊಂಡು ಆ ಹೆಬ್ಬಾವು ಸತ್ತಿತು. ಆ ಜೀವನು ಮನೆಗಳಲ್ಲಿ ವಾಸ ಮಾಡತಕ್ಕವರಾದ ಅಸುರಾದಿಗಳ ಲೋಕದಲ್ಲಿ ನೂರು ಪಳಿತಗಳಿಗೆ ಸಮಾನವಾದ ಆಯಷ್ಯವನ್ನುಳ್ಳ ನಾಗೇಂದ್ರ ದೇವನಾಗಿ ಜನಿಸಿದನು. ಆಮೇಲೆ ಅನಂತವೀರ್ಯನು ಸಾರಸ್ವತಮುನಿಗಳು ಹೇಳಿದ

ಎಂದಿಂತಾರಾಧನೆಯಂ ಪದಿನಯ್ದು ದಿವಸಂ ವಕ್ಖಾಣಿಸೆ ಧರ್ಮಾನುರಾಗದಿಂ ಕೇಳ್ದು ಮುಡಿಪುವಾಗಳ್ ವಜ್ರದಾಡಂ ದುರಾತ್ಮಂ ನಿಷ್ಕಾರಣಮೆನ್ನಂ ಕೊಂದನೆಂದು ಮನದೊಳ್ ರೋಷಮಂ ಬಗೆದು ಮುಡಿಪಿ ಭವನವಾಸಿಗ ಲೋಕದೊಳ್ ನೂಱು ಪಳಿತೋಪಮಾಯುಷ್ಯಮನೊಡೆಯೊಂ ನಾಗೇಂದ್ರ ದೇವನಾಗಿ ಪುಟ್ಟಿದೊಂ ಮತ್ತನಂತವೀರ್ಯನುಂ ಭಟಾರರ್ ಪೇೞೆ ಧರ್ಮಶ್ರವಣಮಂ ಕೇಳ್ದು ಧರ್ಮದ ಫಲದಿಂದಂ ತಮ್ಮ ತಾಯ್ವಿರ್ಕಳ್ ದೇವಗತಿಯೊಳ್ ಪಿರಿದು ವಿಭೂತಿಯನ್ರೆಡೆಯೊರ್ ದೇವರ್ಕಳಾಗಿ ಪುಟ್ಟಿದುದುಮಂ ಕಂಡು ರಾಜ್ಯವಿಮೋಹದಿಂ ತಂದೆಯ ಪೊಲ್ಲಗತಿಯೊಳ್ ಪುಟ್ಟಿದುದುಮಂ ಕಂಡು ಮನುಷ್ಯಜನ್ಮದುರ್ಲಭತ್ವಮುಮಂ ಭೋಗೊಪಭೋಗಂಗಳೊಳಪ್ಪನಿತ್ಯತ್ವಮುಮಂ ಮನದೊಳ್ ಬಗೆದು ಸಂಸಾರ ಶರೀರಭೋಗದೊಳಪ್ಪ ವೈರಾಗ್ಯಮನೊಡೆಯನಾಗಿ ಸುಬಾಹುವೆಂಬ ತನ್ನ ಪಿರಿಯ ಮಗಂ ತನ್ನೊಡನೆ ತೊಱೆಯಲ್ ಬಗೆದಿರ್ದೊನಂ ಬಾರಿಸಿ ಬಲ್ಲಾಳ್ತನದಿಂ ರಾಜ್ಯಪಟ್ಟಂಗಟ್ಟಿ ಸಂಕ್ಷೇಪದಿಂ ರಾಜ್ಯನೀತಿಯನಿಂತೆಂದು ಕಲ್ಪಿಸಿದಂ

ವೃತ್ತ|| ತೃಷ್ಣಾಂ ಛಿಂದಿ ಭಜ ಕ್ಷಮಾಂತ್ಯಜಮದಂ ಪಾಪೇ ರತಿಂ ಮಾ ಕೃಥಾಃ
ಸತ್ಯಂ ಬ್ರೂಹ್ಯನುಯಾಹಿ ಸಾಧು ಪದವೀಂ ಸೇವಸ್ವ ವಿದ್ವಜ್ಜನಂ
ಮಾನ್ಯಾನ್ ಮಾನಯ ವಿದ್ವಿಷೋಪ್ಯನುನಯ ಪ್ರಚ್ಛಾದಯಸ್ವಾನ್ ಗುಣಾನ್
ಕೀರ್ತಿಂ ಪಾಲಯ ದುಃಖಿತೇ ಕುರು ದಯಾಮೇತತ್ ಸತಾಂ ಚೇಷ್ಟಿತಂ

ಎಂದಿಂತು ಮಗನಂ ಕಲ್ಪಿಸಿ ಎಲ್ಲರೊಳಂ ನಿಶ್ಶಲ್ಯಂಗೆಯ್ದು ಬಾಹ್ಯಾಭ್ಯಂತರ ಪರಿಗ್ರಹಂಗಳಂ ತೊಱೆದು ಪಲಂಬರರಸುಮಕ್ಕಳ್ವೆರಸು ಸಾರಸ್ವತಭಟಾರರ ಪಕ್ಕದೆ ತಪಂಬಟ್ಟು ಉಗ್ರೋಗ್ರ ಘೋರವೀರ

ಧರ್ಮವಿಚಾರವನ್ನು ಕೇಳಿ, ಧರ್ಮದ ಫಲದಿಂದ ತನ್ನ ತಾಯಂದಿರು ದೇವತ್ವದ ಗತಿಯನ್ನು ಪಡೆದು ಬಹಳ ವೈಭವವುಳ್ಳ ದೇವತೆಗಳಾಗಿ ಹುಟ್ಟಿದುದನ್ನು ಕಂಡು, ರಾಜ್ಯದ ಮೇಲಿನ ಹೆಚ್ಚಿನ ಆಸೆಯಿಂದಾಗಿ ತನ್ನ ತಂದೆ ದುರ್ಗತಿಯಲ್ಲಿ (ಹಾವಾಗಿ) ಹುಟ್ಟಿದುದನ್ನು ಕಂಡು, ಈ ಮನುಷ್ಯಜನ್ಮವು ದೊರೆಯುವಂಥದಲ್ಲವೆಂದು ಭಾವಿಸಿದನು. ಭೋಗ ಉಪಭೋಗಗಳೆಲ್ಲ ಅಶಾಶ್ವತವೆಂದು ಮನಸ್ಸಿನಲ್ಲಿ ಭಾವಿಸಿಕೊಂಡನು. ಸಂಸಾರದ ಸುಖ ಭೋಗದಲ್ಲಿ ವೈರಾಗ್ಯವುಳ್ಳವನಾದನು. ತನ್ನೊಂದಿಗೆ ರಾಜ್ಯಭೋಗವನ್ನೆಲ್ಲ ಬಿಟ್ಟು ಬಿಡಲು ಯೋಚಿಸಿದ ತನ್ನ ಹಿರಿಯ ಮಗನಾದ ಸುಬಾಹುವನ್ನು ತಡೆದು ಬಲಾತ್ಕಾರದಿಂದ ಅವನಿಗೆ ಸಾಮ್ರಾಜ್ಯದ ಪಟ್ಟಾಭಿಷೇಕವನ್ನು ಮಾಡಿ, ಅವನಿಗೆ ಸಂಕ್ಷೇಪವಾಗಿ ಈ ರೀತಿಯಲ್ಲಿ ರಾಜನೀತಿಯನ್ನು ಹೇಳಿಕೊಟ್ಟನು – – ಆಸೆಯನ್ನು ಕತ್ತರಿಸು. ಕ್ಷಮಾಗುಣವನ್ನು ಭಜಿಸು. ಮದವನ್ನು ಬಿಡು. ಪಾಪದಲ್ಲಿ ಪ್ರೀತಿಯನ್ನು ಮಾಡಬೇಡ. ಸತ್ಯವನ್ನು ಹೇಳು. ಸಾಧುಗಳ ಪದವಿಯನ್ನು ಅನುಸರಿಸಿ ಹೋಗು. ವಿದ್ವಾಂಸರನ್ನು ಸೇವೆ ಮಾಡು. ಮಾನ್ಯರಾದವರನ್ನು ಗೌರವಿಸು ಶತ್ರುಗಳನ್ನು ಕೂಡ ಆದರಿಸು. ಸ್ವಕೀಯವಾದ ಸದ್ಗುಣಗಳನ್ನು ಮುಚ್ಚಿಡು (ಆತ್ಮಶ್ಲಾಘನೆ ಮಾಡದಿರು) ಕೀರ್ತಿಯನ್ನು ಪಾಲಿಸು. ದುಃಖಿತನಾದವನಲ್ಲಿ ದಯೆಯನ್ನು ಮಾಡು, ಈ ರೀತಿಯದು ಸತ್ಪುರುಷರ ಆಚರಣೆಯೆನಿಸುವುದು ಈ ರೀತಿಯಾಗಿ ಮಗನಿಗೆ ನೀತಿಯನ್ನು ಕಲಿಸಿ, ಎಲ್ಲರಲ್ಲಿಯೂ ಪಾಪದ ವರ್ತನೆಯಿಲ್ಲದವನಾಗಿ ಮಾಡಿ, ಬಾಹ್ಯ ಮತ್ತು ಅಭ್ಯಂತರವೆನಿಸುವ ಪರಿಗ್ರಹಗಳನ್ನು ತ್ಯಜಿಸಿ. ಹಲವು ರಾಜಕುಮಾರರೊಂದಿಗೆ ಸಾರಸ್ವತಮುನಿಗಳ ಬಳಿ ತಪಸ್ಸನ್ನು ಸ್ವೀಕರಿಸಿ ಅತಿ ಘೋರವಾದ ತಪಸ್ಸನ್ನು ಮಾಡಿ.

ತಪಶ್ಚರಣಂಗೆಯ್ದು ಸಮ್ಮೇದಪರ್ವತದ ಮೇಗಿರ್ದೆಂಟು ಕರ್ಮಂಗಳಂ ಕಿಡಿಸಿ ಮೋಕ್ಷಕ್ಕೆ ವೋದನ್ ಮತ್ತಿತ್ತ ಧರಣೀಂದ್ರನೊಂದು ದಿವಸಂ ಜಿನೇಂದ್ರ ಚೈತ್ಯಾಲಯಂಗಳಂ ಬಂದಿಸಲ್ವೇಡಿ ಮಂದರಗಿರಿಗೆ ವಿಮಾನಮನೇಱ ಪೋಪಾಗಳ್ ವಜ್ರದಾಡಂ ಮತ್ತಗ್ಗಳಮಪೂರ್ವಮಪ್ಪ ವಿದ್ಯೆಗಳಂ ಸಾಸಲ್ವೇಡಿ ಕಳತ್ರಸಹಿತಂ ವಿಮಾನಮನೇಱ ಮಂದರಗಿರಿಗೆವಂದಾತನಂ ಕಂಡು ತನ್ನ ವಿಭಂಗಜ್ಞಾನದಿಂದೆನ್ನ ಪಗೆವನೀತನೆಂದಱದೆಲವೊ ಪಾಪಕರ್ಮಾ ನಿಷ್ಕಾರಣಮೆನ್ನಂ ಜಲಕ್ರೀಡೆಯಾಡುವೊನಂ ಕಳತ್ರಸಹಿತಂ ಕೊಂದೆಯೆಂದು ಮೂದಲಿಸಿಯಾತನ ವಿದ್ಯೆಯೆಲ್ಲಮಂ ಕೊಱೆದಿಕ್ಕಿ ಕಳತ್ರಸಹಿತಂ ಪಿಡಿದೆತ್ತಿಕೊಂಡುಪೋಗಿ ಸಮುದ್ರದೊಳ್ ಮಹಾಪಾತಾಳದ ಮೊದಲೊಳಿಕ್ಕಿ ಪುಡುಕುನೀರನೞ್ದುತ್ತಂ ಪಿರಿದುಂ ಬೇಗಂ ದಃಖಮನೆಯ್ದಿಸಿ ಕಾಡಿ ಕೊಲೆಯಾತಂ ಸತ್ತು ಪ್ರಥಮನರಕದೊಳತಿ ಘೋರಮಪ್ಪುದಱೊಳ್ ಖಳಖಳಮೆಂಬ ನರಕಬಿಲದೊಳ್ ಮೂರುಪಳಿತೋಪಮಾಯುಷ್ಯ ಮನೊಡೆಯೊಂ ನಾರಕನಾಗಿ ಪುಟ್ಟಿಯಲ್ಲಿಯ ದುಃಖಂಗಳೆಲ್ಲಮನನುಭವಿಸಿಯಾಯುಷ್ಯಾಂತದೊಳ್ ಪೊಱಮಟ್ಟು ಬಂದು ಪಿರಿದಪ್ಪ ನೀಲಗಿರಿಯೆಂಬ ಪರ್ವತದೊಳ್ ಪುಲಿಯಾಗಿ ಪುಟ್ಟಿದೊಂ ಧರಣೀಂದ್ರನುಮಾಯುಷ್ಯಾಂತದೊಳ್ ಬಂದು ಕುರುಜಾಂಗಣಮೆಂಬ ನಾಡೊಳ್ ಹಸ್ತಿನಾಪುರಮೆಂಬುದು ಪೊೞಲದನಾಳ್ವೊನಿಕ್ಪಾ ಕುವಂಶದ ವಿಜಯದತ್ತನೆಂಬರಸಂಗಂ ವಿಜಯಮತಿ

ಸಮ್ಮೇದಪರ್ವತದ ಶಿಖರದಲ್ಲಿದ್ದು ಎಂಟು ಕರ್ಮಗಳನ್ನು ನಾಶಮಾಡಿ ಮುಕ್ತಿಗೆ ಹೋದನು. ಆ ಮೇಲೆ ಇತ್ತ ಧರಣೀಂದ್ರನು ಒಂದು ದಿವಸ ಜಿನೇಂದ್ರರಿಂದ ಕೂಡಿದ ಬಸದಿಗಳಿಗೆ ಹೋಗಿ ವಂದಿಸುವುದಕ್ಕಾಗಿ ವಿಮಾನವನ್ನೇರಿ ಮಂದರಪರ್ವತದ ಕಡೆಗೆ ಹೋದನು. ಆಗ ವಜ್ರದಾಡನು ಇನ್ನಷ್ಟು ಶ್ರೇಷ್ಠವೂ ಅಪೂರ್ವವೂ ಆದ ವಿದ್ಯೆಗಳನ್ನು ಸಾಸುವುದಕ್ಕಾಗಿ ಪತ್ನಿ ಸಮೇತ ವಿಮಾನವನ್ನೇರಿ ಮಂದರಗಿರಿಗೆ ಬಂದನು. ಅವನನ್ನು ಧರಣೀಂದ್ರನು ಕಂಡು, ತನ್ನ ಮುರುಕಾದ ಜ್ಞಾನದಿಂದ ಈತನು ತನ್ನ ಶತ್ರುವೆಂದು ತಿಳಿದು, “ಎಲೋ ಪಾಪಕರ್ಮನೇ, ಜಲಕ್ರೀಡೆಯಲ್ಲಿದ್ದ ನನ್ನನ್ನು ನನ್ನ ಪತ್ನಿಯರ ಸಮೇತ ನಿಷ್ಕಾರಣವಾಗಿ ಕೊಂದಿರುವೆ* ಎಂದು ಮೂದಲಿಸಿದನು. ಅವನ ವಿದ್ಯೆಯನ್ನೆಲ್ಲ ಕತ್ತರಿಸಿಹಾಕಿದನು. ಅವನನ್ನೂ ಅವನ ಹೆಂಡತಿಯನ್ನೂ ಕೂಡ ಹಿಡಿದು ಎತ್ತಿಕೊಂಡು ಹೋಗಿ ಸಮುದ್ರದಲ್ಲಿ ಮಹಾ ಪಾತಾಳದ ಅಡಿಯಲ್ಲಿ ಹಾಕಿ, ಕುದಿಯುತ್ತಿರುವ ನೀರನಲ್ಲಿ ಅದ್ದಿ ಬಹಳ ಹೊತ್ತಿನವರೆಗೆ ದುಃಖಕ್ಕೆ ಈಡುಮಾಡಿ ತೊಂದರೆಗೊಳಿಸಿ ಕೊಂದನು. ಆ ವಜ್ರದಾಡನು ಸತ್ತು, ಮೊದಲನೆಯ ನರಕದಲ್ಲಿ ಅತ್ಯಂತ ಭಯಂಕರವಾಗಿರುವ ಖಳ ಖಳ ಎಂಬ ನರಕಕೂಪದಲ್ಲಿ ಮೂರು ಪಳಿತಕ್ಕೆ ಸಮಾನವಾದ ಆಯಷ್ಯವುಳ್ಳ ನರಕ ಜೀವಿಯಾಗಿ ಹುಟ್ಟಿದನು. ಅಲ್ಲಿಯ ದುಃಖಗಳನ್ನೆಲ್ಲ ಅನುಭವಿಸಿ ಆಯಷ್ಯವು ಕೊನೆಯಾದಾಗ ಅಲ್ಲಿಂದ ಹೊರಟು ಬಂದು, ಹಿರಿದಾಗಿರತಕ್ಕ ನೀಲಗಿರಿ ಎಂಬ ಬೆಟ್ಟದಲ್ಲಿ ಹುಲಿಯಾಗಿ ಹುಟ್ಟಿದನು. ಧರಣೀಂದ್ರನು ತನ್ನ ಆಯುಷ್ಯವು ಕೊನೆಯಾದಾಗ ಬಂದು ಕುರುಜಾಂಗಣವೆಂಬ ನಾಡಿನಲ್ಲಿ ಹಸ್ತಿನಾಪುರ ಎಂಬ ಪಟ್ಟಣದಲ್ಲಿ ಆಳುತ್ತಿರುವ ಇಕ್ಷಾ ಕುವಂಶದ ವಿಜಯದತ್ತನೆಂಬ ಅರಸನಿಗೂ ವಿಜಯಮತಿ ಎಂಬ ಮಹಾರಾಣಿಗೂ ಗುರುದತ್ತನೆಂಬ ಮಗನಾಗಿ ಹುಟ್ಟಿದನು. ಮಗನನ್ನು ಬಯಸುತ್ತಿದ್ದ ವಿಜಯಮತಿ ಮಹಾದೇವಿ ಒಂದು ದಿನ ಗುರುಗಳೆಂಬ

ಮಹಾದೇವಿಗಂ ಗುರುದತ್ತನಾಗಿ ಪುಟ್ಟಿದೊಂ ಒಂದು ದಿವಸಂ ಪುತ್ರಾರ್ಥಿಯಪ್ಪ ವಿಜಯ ಮಹಾದೇವಿಯಿಂ ಬೆಸಗೊಳೆಪಟ್ಟ ಗುರುಗಳೆಂಬ ಋಷಿಯರಾದೇಶದಿಂ ಪುಟ್ಟಿದೊಂ ಗುರುಗಳಿತ್ತರಪ್ಪುದಱೆಂದಾತಂಗೆ ಪಿತೃಮಾತೃಗಳ್ ಗುರುದತ್ತನೆಂದು ಪೆಸರನಿಟ್ಟರ್ ಮತ್ತೇಱು ವರ್ಷದೊಳಗೆ ಚತುಷ್ಷಷ್ಟಿ ಕಳೆಗಳುಂ ದ್ವಾಸಪ್ತತಿ ವಿಜ್ಞಾನಂಗಳುಮನೆಲ್ಲಮಂ ನಿರವಶೇಷಂ ಕಲ್ತಾದಮಾನುಂ ರೂಪುಂ ತೇಜಮುಂ ಗಾಡಿಯುಂ ಸೌಭಾಗ್ಯಮನೊಡೆಯನಾಗಿರ್ದೆಂಟನೆಯ ವರುಷದಂದು ಗುರುದತ್ತಂಗೆ ವಿಜಯದತ್ತನೃಪತಿ ರಾಜ್ಯಪಟ್ಟಂಗಟ್ಟಿ ಸುಧರ್ಮರೆಂಬ ಭಟಾರರ ಪಕ್ಕದೆ ತಪಂಬಟ್ಟನಿತ್ತ ಗುರುದತ್ತಕುಮಾರನರಸನಾಗಿ ಸಿಂಹಾಸನಮಸ್ತಕಸ್ಥಿತನಾಗಿ ತಂದೆಗೆಂತಪ್ಪೊಡಂ ಕಪ್ಪಂಗೊಡದ ಮಂಡಳಿಕರ್ಕಳ ಮೇಗೆತ್ತಿ ಮೊಟ್ಟಯಿಸಿಱದು ಮಂಡಲಂಗಳುಂ ದುರ್ಗವಸ್ತು ವಾಹನಂಗಳಂ ಸಮಸ್ತ ಕಪ್ಪಂಗೊಂಡೆಲ್ಲರುಮನಂಜಿಸಿ ಯಶಮುಂ ಕೀರ್ತಿಯುಮನೊಡೆಯನಾಗಿ ಇಂತು ಪೃಥಿವೀ ರಾಜ್ಯಂಗೆಯ್ಯುತ್ತಿರ್ಪನ್ನೆಗಂ ಒಂದು ದಿವಸಂ ಪುಲಿಯುಪದ್ರವಮಂ ನಾಡವರ್ವಂದಿಂತೆಂದು ಪೇೞ್ದರ್ ದೇವಾ ನೀಲಗಿರಿಯೆಂಬ ಪರ್ವತದ ಬಳಸಿಯುಮಿರ್ದ ನಾಡೆಲ್ಲಂ ಪಾೞಾದುದಾ ಪರ್ವತದ ಗುಹೆಯೊಳೊಂದು ಪೆರ್ಬುಲಿಯಿರ್ದುದು ನಾಡೆಲ್ಲರುಮಂ ಜವನ ರೂಪಿನೊಳ್ ಕೊಂದುದಪ್ಪುದಾರಪ್ಟೊಡಂ ನಾಡೊಳಿರಲಣ್ಮರೆಂದೊಡಾ ಮಾತಂ ಕೇಳ್ದು ಪೂರ್ವವೈರಂ ಕಾರಣಮಾಗಿ ಕ್ರೋಧಾಗ್ನಿ ಪೆರ್ಚಿ ಕಡು ಮುಳಿದು ಪುಲಿಯಂ ಕೊಲಲೆಂದು ಪಯಣಂಬೋಗಿ ಪುಲಿಯಿರ್ಪ

ಋಷಿಗಳನ್ನು ಕೇಳಿ, ಅವರ ಭವಿಷ್ಯವಾಣಿಯಂತೆ ಹುಟ್ಟಿದುದರಿಂದ ಗುರುಗಳೇ ಕೊಟ್ಟರೆಂದು ಆ ಮಗುವಿಗೆ ತಂದೆತಾಯಿಗಳು ಗುರುದತ್ತ ಎಂದು ನಾಮಕರಣ ಮಾಡಿದರು. ಅನಂತರ ಏಳು ವರ್ಷಗಳೊಳಗೆ ಗುರುದತ್ತನು ಅರುವತ್ತನಾಲ್ಕು ಕಲೆಗಳನ್ನೂ ಎಪ್ಪತ್ತೆರಡು ವಿಜ್ಞಾನಗಳನ್ನೂ ಎಲ್ಲವನ್ನೂ ಸ್ವಲ್ಪವೂ ಉಳಿಯದಂತೆ ಕಲಿತನು ಅತಿಶಯವಾದ ರೂಪ, ಕಾಂತಿ, ಸೌಂದರ್ಯ, ಸೌಭಾಗ್ಯವುಳ್ಳವನಾದನು. ಎಂಟನೆಯ ವರ್ಷವಾದಾಗ ವಿಜಯದತ್ತ ರಾಜನು ಗುರುದತ್ತನಿಗೆ ರಾಜ್ಯಪಟ್ಟವನ್ನು ಕಟ್ಟಿ, ಸುಧರ್ಮರೆಂಬ ಋಷಿಗಳ ಬಳಿಯಲ್ಲಿ ತಪಸ್ಸನ್ನು ಸ್ವೀಕರಿಸಿದನು. ಇತ್ತ ಗುರುದತ್ತಕುಮಾರನು ರಾಜನಾಗಿ ಸಿಂಹಾಸನದ ಮೇಲಿದ್ದು ತನ್ನ ತಂದೆಗೆ ಹೇಗೂ ಕಪ್ಪವನ್ನು ಕೊಡದ ಸಾಮಂತರಾಜರ ಮೇಲೆ ದಂಡೆತ್ತಿ ಪ್ರತಿಭಟಿಸಿ ಕಾದಾಡಿ ನಾಡು, ದುರ್ಗ, ವಸ್ತುವಾಹನಗಳು ಮುಂತಾದ ಕಪ್ಪಗಳನ್ನು ಪಡೆದು ಎಲ್ಲರನ್ನೂ ಹೆದರಿಸಿ ಖ್ಯಾತಿವಂತನಾಗಿ ಹೀಗೆ ಭೂಮಿಯ ರಾಜ್ಯಭಾರವನ್ನು ಮಾಡುತ್ತಿದ್ದನು. ಹೀಗಿರಲು ಒಂದು ದಿವಸ ನಾಡ ಜನರು ಬಂದು ಹುಲಿಯ ಉಪದ್ರವವನ್ನು ಈ ರೀತಿಯಾಗಿ ಹೇಳಿದರು – “ಪ್ರಭುವೇ, ನೀಲಗಿರಿ ಎಂಬ ಪರ್ವತದ ಸುತ್ತಲೂ ಇದ್ದ ನಾಡೆಲ್ಲವೂ ಹಾಳಾಯಿತು. ಆ ಪರ್ವತದ ಗುಹೆಯಲ್ಲಿ ಒಂದು ಹೆಬ್ಬುಲಿಯಿದೆ. ಅದು ಯಮನ ರೂಪದಲ್ಲಿ ನಾಡಿನವರನ್ನೆಲ್ಲ ಕೊಲ್ಲುತ್ತಿದೆ. ಯಾರೊಬ್ಬರೂ ನಾಡಿನಲ್ಲಿ ನೆಲಸಿರುವುದಕ್ಕೆ ಕೂಡ ಸಮರ್ಥರಾಗರು.” ಹೀಗೆ ಹೇಳಲು ಆ ಮಾತನ್ನು ಗುರುದತ್ತನು ಕೇಳಿ, ಪೂರ್ವಜನ್ಮದ ದ್ವೇಷವೇ ಕಾರಣವಾಗಿ ಕೋಪಾಗ್ನಿ ಹೆಚ್ಚಾಗಿ ಬಹಳ ಸಿಟ್ಟಾಗಿ ಹುಲಿಯನ್ನು ಕೊಲ್ಲುವುದಕ್ಕಾಗಿ ಪ್ರಯಾಣ ಹೊರಟನು. ಹುಲಿ ವಾಸಮಾಡತಕ್ಕ ಗುಹೆಯಿದ್ದಲ್ಲಿಗೆ ಬಂದು ಅದರ ಸುತ್ತಲೂ

ಗುಹೆಯನೆಯ್ದಿಯದಂ ಬಳಸಿಯುಂ ಮುತ್ತೆ ಮಹಾಸಮುದ್ರದ ಗರ್ಜನೆಯನೆ ಪೋಲ್ವ ಜನರವಮುಂ ಪಟುಪಟಹ ಶಂಖ ತಾಳ ಮರ್ದಳ ಕಹಳಾದಿ ಧ್ವನಿಗಳುಮನೆನಿತೆನಿತನಾ ಪುಲಿ ಕೇಳ್ಗುಮನಿತನಿತಂಜಿ ಗುಹೆಯೊಳಡಂಗಿರ್ದತ್ತು ಪೊಱಮಡಲೊಲ್ಲದಿರ್ದೊಡಾ ಗುಹೆಯ ಬಾಗಿಲೊಳೆನಿತಾನುಂ ಪುಲ್ಲುಂ ಪುಳ್ಳಿಯುಮನೊಟ್ಟಿ ಕಿಚ್ಚಂ ತಗುಳ್ಚಿ ಪುಲಿಯುಂ ಸುಟ್ಟು ಕೊಂದು ತನ್ನ ಪೊೞಲ್ಗೆ ವೋಗಿ ಅರಸುಗೆಯ್ಯುತ್ತಿರ್ದನಾ ಪುಲಿಯುಂ ಕರ್ಮನಿರ್ಜರೆಯಿಂ ಸತ್ತಾ ಸುರಾಷ್ಟ್ರವಿಷಯದೊಳ್ ದ್ರೋಣೀಮಂತಮೆಂಬ ಪರ್ವತದ ಸಾರೆ ಪಲ್ಲಿಖೇಡಮೆಂಬೂರೊಳ್ ಸಲಿದಾಭರಣನೆಂಬ ಪಾರ್ವಂಗಂ ಕಟುಕಿಯೆಂಬ ಪಾರ್ವಂತಿಗಂ ಹಳಮುಖನೆಂಬೊಂ ಮಗನಾಗಿ ಪುಟ್ಟಿದೊಂ ಮತ್ತಿತ್ತಂಗಮೆಂಬುದು ನಾಡಲ್ಲಿ ಚಂಪಾನಗರಮೆಂಬುದು ಪೋೞಲದನಾಳ್ವೊಂ ಧಾತ್ರಿವಾಹನನೆಂಬರಸನಾತನ ಮಹಾದೇವಿ ಶ್ರೀಮತಿಯೆಂಬೊಳಾಯಿರ್ವ್ವರ್ಗ್ಗಂ ಮಗಳಭಯಮತಿಯೆಂಬೊಳಾಕೆಯತ್ಯಂತ ರೂಪ ಲಾವಣ್ಯ ಸೌಭಾಗ್ಯ ಕಾಂತಿ ಹಾವ ಭಾವ ವಿಲಾಸ ವಿಭ್ರಮಂಗಳನೊಡೆಯೊಳಾಕೆಯಂ ಗುರುದತ್ತನೆನಿತಾನುಂ ಸೂೞ್ ಬೇಡಿಯಟ್ಟಿದೊಡರಸಂ ಕುಡಲೊಲ್ಲನಂತವರ್ಗಳಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತಂ ಕಾಲಂ ಸಲೆ ಮತ್ತೊಂದು ದಿವಸಂ ಧಾತ್ರಿವಾಹನ ನೃಪತಿ ತನ್ನ ಬದಗಿಗಳ್ ವಿಶ್ವಕರ್ಮನುಂ ವಿಶ್ವಮತಿಯುಮೆಂಬೊರಂ ಕರೆಯಿಸಿಯಿಂತೆಂದನಱುದಿಂಗಳೊಳಗೆ ನೀವಿರ್ವರುಮೋರೋರ್ವರಯ್ನೂಱು

ಮುತ್ತಿಗೆ ಹಾಕಿದನು. ಮಹಾಸಾಗರದ ಗರ್ಜನೆಯಂತಿರುವ ಜನಶಬ್ದವನ್ನೂ ಸಮರ್ಥವಾದ ಪಟಹ, ಶಂಖ, ತಾಳ, ಮದ್ದಳೆ, ತುತ್ತೂರಿ ಮುಂತಾದ ವಾದ್ಯಗಳ ರವಗಳನ್ನು ಆ ಹುಲಿ ಎಷ್ಟೆಷ್ಟು ಕೇಳಿತೋ ಅಷ್ಟಷ್ಟು ಹೆದರಿಕೊಂಡು ಗುಹೆಯೊಳಗೆ ಅಡಗಿದ್ದಿತು, ಹೊರಗೆ ಬರಲೊಲ್ಲದೆ ಇದ್ದಿತು. ಆಗ ಗುರುದತ್ತನು ಆ ಗುಹೆಯ ಬಾಗಿಲಲ್ಲಿ ಎಷ್ಟೋ ಹುಲ್ಲನ್ನೂ ಕಟ್ಟಿಗೆಯನ್ನೂ ರಾಶಿ ಹಾಕಿ ಉರಿಯನ್ನು ಹಚ್ಚಿ ಹುಲಿಯನ್ನು ಸುಟ್ಟು ಕೊಂದು, ತನ್ನ ಪಟ್ಟಣಕ್ಕೆ ಹೋಗಿ ರಾಜ್ಯಭಾರ ಮಾಡುತ್ತ ಇದ್ದನು. ಆ ಹುಲಿ ಕರ್ಮಗಳು ನಾಶವಾದುದರಿಂದ ಸತ್ತು ಸುರಾಷ್ಟ್ರವೆಂಬ ನಾಡಿನಲ್ಲಿ ದ್ರೋಣಿಮಂತವೆಂಬ ಪರ್ವತದ ಬಳಿಯ ಪಲ್ಲಿಖೇಡವೆಂಬ ಊರಿನಲ್ಲಿ ಸಲಿದಾಭರಣನೆಂಬ ಬ್ರಾಹ್ಮಣನಿಗೂ ಕಟುಕಿಯೆಂಬ ಬ್ರಾಹ್ಮಣಿತಿಗೂ ಹಳಮುಖನೆಂಬ ಹೆಸರುಳ್ಳ ಮಗನಾಗಿ ಹುಟ್ಟಿತು. ಅನಂತರ, ಇತ್ತ ಅಂಗವೆಂಬ ನಾಡಿನಲ್ಲಿ ಚಂಪಾನಗರವೆಂಬ ಪಟ್ಟಣವಿದ್ದಿತು. ಅದನ್ನು ಧಾತ್ರಿವಾಹನನೆಂಬ ರಾಜನು ಆಳುತ್ತಿದ್ದನು. ಅವನ ಮಹಾರಾಣಿ ಶ್ರೀಮತಿಯೆಂಬುವಳು. ಆ ದಂಪತಿಗಳಿಗೆ ಮಗಳು ಅಭಯಮತಿಯೆಂಬವಳು. ಆಕೆ ಅತ್ಯಂತ ರೂಪ, ಲಾವಣ್ಯ, ಸೌಭಾಗ್ಯ, ಕಾಂತಿ, ಹಾವ, ಭಾವ, ವಿಲಾಸ, ವಿಭ್ರಮಗಳುಳ್ಳವಾಗಿದ್ದಳು. ಗುರುದತ್ತನು ಆಕೆಯನ್ನು ಮದುವೆಯಾಗಲು ಬಯಸಿ ಆಕೆಯನ್ನು ಕೊಡುವಂತೆ ಎಷ್ಟೋ ಬಾರಿ ಜನ ಕಳುಹಿಸಿದರೂ ಧಾತ್ರಿವಾಹನ ರಾಜನು ಕೊಡಲು ಒಪ್ಪಲಿಲ್ಲ. ಅಂತು ಅವರು ತಮ್ಮ ಇಷ್ಟವಾದ ಸಂಗತಿಯ ಕಾಮ ಸುಖಗಳನ್ನು ಅನುಭವಿಸುತ್ತ ಇದ್ದು ಹೀಗೆಯೇ ಕಾಲ ಕಳೆಯುತ್ತಿತ್ತು. ಆಮೇಲೆ, ಒಂದು ದಿವಸ ಧಾತ್ರಿವಾಹನರಾಜನು ತನ್ನ ಬಡಗಿಗಳಾದ ವಿಶ್ವಕರ್ಮ ವಿಶ್ವಮತಿ ಎಂಬಿಬ್ಬರನ್ನು ಕರೆಯಿಸಿ ಅವರೊಡನೆ ಹೀಗೆ ಹೇಳಿದನು – “ನೀವಿಬ್ಬರಲ್ಲಿ ಒಬ್ಬೊಬ್ಬರೂ ಐನೂರು ರಥಗಳನ್ನು ಬೇಗನೆ ಆರು ತಿಂಗಳೊಳಗೆ ರಚಿಸಿ, ನನಗೆ ಒಪ್ಪಿಸಬೇಕು.” ಹೀಗೆ ಹೇಳಲು ‘ಹಾಗೆಯೇ ಮಾಡುವೆವು’ ಎಂದು ರಥಗಳನ್ನು ಮಾಡತೊಡಗಿದರು. ಅದರಂತೆ

ರಥಂಗಳಂ ಬೇಗಂ ಮಾಡಿಯೆನಗೊಪ್ಪಿಸವೇೞ್ಕುಮೆಂದು ಪೇೞ್ದೊಡವರುಮಂತೆಗೆಯ್ವೆಮೆಂದು ರಥಂಗಳಂ ಮಾಡಲ್ ತಗುಳ್ದು ಅಱುದಿಂಗಳೊಳಾ ಅಯ್ನೂರು ರಥಮಂ ಸಮೆದು ವಿಶ್ವಮತಿಯರಸಂಗೆ ತಂದು ತೋಱದೊಡರಸಂ ಕಂಡಾದಮಾನುಮಾತಂಗೊಸೆದು ತುಷ್ಟಿದಾನಂಗೊಟ್ಟಂ ಮತ್ತೆ ವಿಶ್ವಕರ್ಮನಱುದಿಂಗಳೊಳ್ ರಥದೊಂದು ಗಾಲಿಯಂ ಸಮೆಯಿಸಿ ತಂದು ತೋಱದೊಡರಸಂ ಕಂಡು ಮುಳಿದಾತನಂ ಕೊಲಲ್ ಬಗೆದೊಡಂಜಿ ಆತನುಮಾ ಗಾಲಿಯನರಸನ ಮುಂದೆ ಮಣಿಕುಟ್ಟಿಮಮಪ್ಪ ಭೂಮಿಯೊಳೆತ್ತಿಕ್ಕಿ ಪ್ರಾಣಭಯದಿಂದೋಡಿ ಗುರುದತ್ತ ನೃಪತಿಯಲ್ಲಿಗೆ ಪೋದೊನಾ ಗಾಲಿಯುಂ ಪದಿನಯ್ದುದಿವಸಂಬರೆಗಂ ತನಗೆ ತಾನೆಯಂತರಿಕ್ಷದೊಳ್ ನೆಲನಂ ಮುಟ್ಟದೆ ತಿಱ್ಱನೆ ತಿರಿಯುತ್ತಿರ್ದುದಂ ಕಂಡರಸಂ ವಿಶ್ವಕರ್ಮಂಗೊಸೆದಾತನಂ ಬೇಗಮಾರಯ್ದುಕೊಂಡು ಬನ್ನಿಮೆಂದೊಡೆ ಕೆಲದವರೆಂದರಾತಂ ನಿಮಗಂಜಿಯೋಡಿ ಪೋಗಿ ಗುರುದತ್ತಂಗಾಳಾಗಿರ್ದೊನೆನೆ ಕೇಳ್ದರಸಂ ಗುರುದತ್ತನಲ್ಲಿಗೆ ತನ್ನ ಪೆರ್ಗಡೆಗಳನಿಂತೆಂದು ಕಲ್ಪಿಸಿಯಟ್ಟಿದೊಂ ಕಪ್ಪಂಬೆರಸೆಮ್ಮ ಬಡಗಿಯಂ ಬೇಗಮಟ್ಟುಗೆಂದು ಪೋಗಿ ಪೇೞಮೆಂದೊಡವರುಂ ಪೋಗಿಯಾ ಮಾತಂ ಗುರುದತ್ತನೃಪತಿಗೆ ತಮ್ಮರಸಂ ಕಲ್ಪಿಸಿದಂತೆ ನುಡಿದೊಡಾ ಮಾತಂ ಗುರುದತ್ತನೃಪತಿ ಕೇಳ್ದಾದಮಾನುಂ ಮುಳಿದಿಂತೆಂದಂ ಮಂಡಳಮನಾಳ್ವರಸನಾಗಿಯುಂ ಪೆಱರ್ಗೆ ಕಪ್ಪಂಗುಡುವೊಡೀ ಸಿಂಹಾಸನಮುಂ ಬೆಳ್ಗೊಡೆಗಳುಂ ಚಾಮರಂಗಳುಂ ಚಾಮರಂಗಳುಂ ಪಾಳಿಧ್ವಜಂಗಳುಂ ಪಂಚಮಹಾಶಬ್ದಂಗಳುಂ ಸೊರ್ಕ್ಕಾನೆಗಳುಂ ಜಾತ್ಯಶ್ವಂಗಳುಮೆಂಬೀ ಬಲಂಗಳಿಂ ಕಜ್ಜಮೇನೆಂದು

ಆರು ತಿಂಗಳುಗಳಲ್ಲಿ ವಿಶ್ವಮತಿಯು ಅಯ್ನೂರು ರಥಗಳನ್ನು ಪೂರ್ತಿಯಾಗಿ ಮಾಡಿ ತಂದು ರಾಜನಿಗೆ ತೋರಿಸಿದನು. ಆಗ ರಾಜನು ಕಂಡು ಅವನ ಮೇಲೆ ಬಹಳ ಪ್ರೀತಿಪಟ್ಟು ಅವನಿಗೆ ತೃಪ್ತಿಯಾಗುವ ದಾನವನ್ನಿತ್ತನು. ಅನಂತರ, ವಿಶ್ವಕರ್ಮನು ಆರು ತಿಂಗಳುಗಳಲ್ಲಿ ರಥದ ಒಂದು ಗಾಲಿಯನ್ನು ಮಾಡಿ ತಂದು ತೋರಿಸಿದನು. ರಾಜನು ನೋಡಿ ಕೋಪಗೊಂಡು ಅವನನ್ನು ಕೊಲ್ಲಲು ಯೋಚಿಸಿದನು. ಆಗ ವಿಶ್ವಕರ್ಮನು ಹೆದರಿ, ಆ ಗಾಲಿಯನ್ನು ರಾಜನ ಎದುರಿನಲ್ಲಿ ರತ್ನಮಯವಾದ ಜಗಲಿಯ ನೆಲದ ಮೇಲೆ ಎತ್ತಿ ಹಾಕಿ, ಪ್ರಾಣದ ಭಯದಿಂದ ಓಡಿ ಗುರುದತ್ತರಾಜನಲ್ಲಿಗೆ ಹೋದನು. ಆ ಗಾಲಿ ಹದಿನೈದು ದಿವಸಗಳವರೆಗೆ ತಾನೇ ತಾನಾಗಿ ಆಕಾಶದಲ್ಲಿದ್ದುಕೊಂಡು ನೆಲವನ್ನು ಮುಟ್ಟದೆ ತಿರ್ರನೆ ತಿರುಗುತ್ತಾ ಇತ್ತು. ಅದನ್ನು ಧಾತ್ರಿವಾಹನನು ಕಂಡು ವಿಶ್ವಕರ್ಮನ ಮೇಲೆ ಸಂತೋಷಗೊಂಡು ‘ಅವನನ್ನು ಬೇಗನೆ ವಿಚಾರಿಸಿಕೊಂಡು ಬನ್ನಿ’ ಎಂದು ಹೇಳಲು, ಅವನ ಬಳಿಯಲ್ಲಿದ್ದವರು ಹೀಗೆಂದರು – “ಆತನು ನಿಮಗೆ ಹೆದರಿ ಓಡಿಹೋಗಿ ಗುರುದತ್ತನ ಸೇವಕನಾಗಿದ್ದಾನೆ. ಇದನ್ನು ರಾಜನು ಕೇಳಿ ಗುರುದತ್ತನಲ್ಲಿಗೆ ಅಕಾರಿಗಳನ್ನು ಕಳುಹಿಸಿದನು. “ಕಪ್ಪ ಸಮೇತವಾಗಿ ನಮ್ಮ ಬಡಗಿಯನ್ನು ಬೇಗನೆ ಕಳುಹಿಸಿಕೊಡಲಿ – ಎಂದು ಹೋಗಿ ಹೇಳಿ” ಎಂದು ತಿಳಿಸಲು, ಆ ಅರಮನೆಯ ಅಕಾರಿಗಳು ಗುರುದತ್ತನಲ್ಲಿಗೆ ಹೋಗಿ, ತಮ್ಮ ರಾಜನು ಹೇಳಿದಂತೆ ಆ ಮಾತನ್ನು ತಿಳಿಸಿದರು. ಅದನ್ನು ಗುರುದತ್ತರಾಜನು ಕೇಳಿ ಬಹಳವಾಗಿ ಕೋಪಗೊಂಡು ಹೀಗೆಂದನು – “ನಾನು ಮಂಡಲವನ್ನಾಳುವ ರಾಜನಾಗಿದ್ದು ಬೇರೆಯವರಿಗೆ ಕಪ್ಪ ಕೊಡುವುದಾದರೆ, ಈ ಸಿಂಹಾಸನ, ಶ್ವೇತಚ್ಛತ್ರಗಳು, ಚಾಮರಗಳು, ಪಾಳಿಧ್ವಜಗಳು, ಪಂಚಮಹಾಶಬ್ದಗಳು, ಸೊಕ್ಕಿದ ಆನೆಗಳು, ಜಾತಿಯ ಕುದುರೆಗಳು, ಎಂಬೀ ಬಲಗಳಿಂದ ಏನು ಕೆಲಸವಿದೆ ? – – ಎಂದು ನಿಮ್ಮೊಡೆಯನಿಗೆ ಹೇಳಿ. ತನ್ನ ಮಗಳಾದ ಅಭಯಮತಿ ಕನ್ಯೆಸಮೇತ ತನ್ನ ಪಟ್ಟದಾನೆಯನ್ನೂ ಶ್ರೇಷ್ಠ

ನಿಮ್ಮರಸಂಗೆ ಪೇೞಂ ತನ್ನ ಮಗಳಭಯಮತಿ ಕನ್ನೆವೆರಸು ತನ್ನ ಪಟ್ಟವರ್ಧಮುಮಗ್ಗಳ ವಸ್ತುವಾಗನಂಗಳುಮಂ ಬೇಗಮಟ್ಟುಗಟ್ಟದಾಗಳ್ ತನ್ನ ತಲೆವೆರಸು ಕೊಳ್ವೆನೆಂದು ಪೇೞಮೆಂದವರ ಪೆರ್ಗಡೆಗಳೊಳ್ ನುಡಿದು ನಿಮ್ಮ ಬೞಯನೆ ಆನುಂ ಪಯಣಂ ಬಂದಪ್ಪೆನೆಂದ ನುಡಿದವರ್ಗಳಂ ಪೋಗಲ್ವೇೞ್ದವರ ಬೞಯನೆ ಪಿರಿದು ವಿಭೂತಿಯಿಂ ಚಾತುರ್ವಲಂಬೆರಸು ಪೊಱಮಟ್ಟು ಪಯಣಂಬೋಗಿ ಕತಿಪಯ ದಿವಸಂಗಳಿಂ ಚಂಪಾನಗರಮನೆಯ್ದಿ ಪೊೞಲಂ ಮೂವಳಸು ಬಳಸಿ ಮುತ್ತಿದಾಗಳ್ ಧಾತ್ರಿವಾಹನಂ ತನ್ನ ಸಮಸ್ತ ಸಾಧನಂಬೆರಸು ಪೊಱಮಟ್ಟೊಡ್ಡಣಮನೊಡ್ಡೆ ಬಿಲ್ ಬಿಲ್ಲೊಳ್ ಕುದುರೆ ಕುದುರೆಯೊಳ್ ರಥಂ ರಥದೊಳಣಿ ಯಣಿಯೊಳ್ ಘಟೆಯಾನೆ ಘಟೆಯಾನೆಯೊಳ್ ತಲ್ತು ತಾಗಿ ಪಲವು ದಿವಸಂ ಕಾದೆಯೊಂದು ದಿವಸಂ ಗುರುದತ್ತನೃಪತಿಯಂ ಪ್ರಧಾನನಪ್ಪ ಮಹಾಸಾಮಂತಂ ಮಹೇಂದ್ರದತ್ತನೆಂಬರಸನಾತನ ಮುಂಗಯ್ ಧಾತ್ರಿವಾಹನನ ಯೋಧನಿಂ ಚಕ್ರಪಾಣಿಯಿಂ ಖಂಡಿಸೆ ಪಟ್ಟುದಾಗಿ ನೆಲದೊಳ್ ಬಿರ್ದುದಂ ಕರ್ದು ಕಂಡು ಕೊಂಡಾಕಾಶದೊಳ್ ಪಾಱೆಪೋಗುತ್ತಮಭಯಮತಿ ತನ್ನ ಕನ್ಯಾಮಾಡದೆರಡನೆಯ ನೆಲೆಯ ಮುಂದಣ ಚವುಕಿಗೆಯ ಮೇಲೆ ದಾದಿಯುಂ ಸಖೀಜನಂಗಳ್ ಬೆರಸು ನಡಪಾಡುತ್ತಿರ್ದಳ ಮುಂದಾ ಕೆಯ್ಯಂ ಪರ್ದು ತಂದಿಕ್ಕಿದೊಡದು ವಜ್ರ ವೈಢೂರ್ಯ ಪದ್ಮರಾಗ ಪುಷ್ಪರಾಗ ಸಸ್ಯ ಕರ್ಕೇತನ ಇಂದ್ರನೀಲಂ ಮೊದಲಾಗೊಡೆಯ ಅನರ್ಘ್ಯಮಪ್ಪ ಮಾಣಿಕದಿಂ ಸಮೆದ ಪಲವುಂ ನಾನಾಪ್ರಕಾರದ ಕಂಕಣಂಗಳುಮಂ

ವಸ್ತುವಾಹನಗಳನ್ನೂ ಬೇಗ ಕಳುಹಿಕೊಡಲಿ. ಕಳುಹದಿದ್ದರೆ ಅವನ ತಲೆ ಸಹಿತವಾಗಿ ಅವನನ್ನು ತೆಗೆದುಕೊಳ್ಳುತ್ತೇನೆ – ಎಂದು ತಿಳಿಸಿರಿ.” ಹೀಗೆ ಅಕಾರಿಗಳಿಗೆ ಹೇಳಿ “ನಿಮ್ಮೊಡನೆಯೇ ನಾನೂ ಪ್ರಯಾಣ ಬರುತ್ತೇನೆ’ ಎಂದು ನುಡಿದು, ಅವರಿಗೆ ತೆರಳಲು ಆಜ್ಞೆ ಮಾಡಿದನು. ಅವರ ಒಟ್ಟಿಗೇ ಹೆಚ್ಚಿನ ವೈಭವದಿಂದ ಚತುರಂಗಸೇನೆಯೊಂದಿಗೆ ಹೊರಟು ಹೋಗಿ ಕೆಲವು ದಿನಗಳಲ್ಲಿ ಚಂಪಾನಗರಕ್ಕೆ ತಲುಪಿ, ಪಟ್ಟಣವನ್ನು ಮೂರು ಬಳಸಾಗುವಂತೆ ಮುತ್ತಿದನು. ಆಗ ದಾತ್ರಿವಾಹನನು ತನ್ನ ಎಲ್ಲಾ ಸೈನ್ಯವನ್ನೂ ಕೂಡಿ ಹೊರಟು, ಸೈನ್ಯವನ್ನು ಎದುರಿಗೆ ನಿಲ್ಲಿಸಿದನು. ಆಗ ಬಿಲ್ಲುಗಾರರು ಬಿಲ್ಲುಗಾರರೊಂದಿಗೂ ಕುದುರೆ ಕುದುರೆಯೊಂದಿಗೂ ರಥವು ರಥದೊಂದಿಗೂ ಸೈನ್ಯವು ಸೈನ್ಯದೊಂದಿಗೂ ಆನೆಗಳ ಸೈನ್ಯವು ಆನೆಗಳ ಸೈನ್ಯದೊಂದಿಗೂ ಮೇಲೆ ಬಿದ್ದು ಹಲವು ದಿವಸ ಕಾದಾಡಿದವು. ಒಂದು ದಿವಸ ಗುರುದತ್ತರಾಜನ ಪ್ರಧಾನ ಸಾಮಂತರಾಜನಾದ ಮಹೇಂದ್ರದತ್ತನ ಮುಂಗೈಯನ್ನು ಧಾತ್ರಿವಾಹನನ ಯೋಧನಾದ ಚಕ್ರಪಾಣಿ ಎಂಬವನು ತುಂಡರಿಸಿನು. ತುಂಡಾದ ಮುಂಗೈ ನೆಲದ ಮೇಲೆ ಬಿದ್ದಿತು ಅದನ್ನು ಹದ್ದು ಕಂಡು, ತೆಗೆದುದೊಂಡು ಆಕಾಶದಲ್ಲಿ ಹಾರಿಹೋಯಿತು. ಆಗ ಅಭಯಮತಿ ತನ್ನ ಕನ್ನೆವಾಡದ ಎರಡನೆಯ ಉಪ್ಪರಿಗೆಯ ಎದುರಿನ ಅಂಗಳದಲ್ಲಿ ದಾದಿಯರನ್ನೂ ಗೆಳತಿಯರನ್ನೂ ಕೂಡಿಕೊಂಡು ನಡೆದಾಡುತ್ತಿದ್ದಳು. ಅವಳ ಮುಂದೆ ಆ ಕೈಯನ್ನು ಹದ್ದು ತಂದಿಕ್ಕಿತು. ಆ ಕೈ ವಜ್ರ, ವೈಡೂರ್ಯ, ಪದ್ಮರಾಗ, ಪುಷ್ಪರಾಗ, ಸಸ್ಯ (?) ಕರ್ಕೇತನ (ಒಂದು ಬಗೆಯ ಸಟಿಕಮಣಿ). ಇಂದ್ರನೀಲ – ಮೊದಲಾಗುಳ್ಳ ಅಮೂಲ್ಯವಾದ ಮಾಣಿಕ್ಯಗಳಿಂದ ಮಾಡಿದ ಹಲವು ಬೇರೆ ಬೇರೆ ರೀತಿಯ ಕೈ ಬಳೆಗಳನ್ನು ಧರಿಸಿಕೊಂಡಿರುವ ಮುಂಗೈಯೂ ಬೆರಳುಗಳೂ ಇದ್ದು ಶಂಖ, ಚಕ್ರ,

ತೊಟ್ಟ ಮುಂಗಯ್ಯುಂ ಬೆರಲ್ಗಳುಂ ಶಂಖ ಚಕ್ರ ಪದ್ಮಾಂಕುಶ ಚಾಮರ ತೋರಣ ಪತಾಕಾದಿ ಶುಭ ಲಕ್ಷಣಾಂಕಿತಮಾಗಿ ಕೆಂದಾವರೆಯ ಬಣ್ಣದಂತಪ್ಪ ತಳಮುಮಂ ಕಂಡೀ ತಳಮನೊಡೆಯಾತಂ ಸಾಮಾನ್ಯ ಪುರುಷನಲ್ಲಂ ಪಿರಿಯರಸನಾಗಲೆವೇೞ್ಕುಮೆಂದು ಮತ್ತೀ ಕೆಯ್ಯೇಕೆ ಖಂಡಿಸಿ ಬಿರ್ದುದಬ್ಬಾ ಎಂದು ದಾದಿಯಂ ಬೆಸಗೊಂಡೊಡಾಕೆಯಿಂತೆಂದಳ್ ಮಗಳೆ ನೀಂ ಕಾರಣಮಾಗಿ ಇಂತಪ್ಪವಯವಂಗಳನೊಡೆಯ ಅರಸುಗಳ್ ಪಲಂಬರುಂ ಸತ್ತಪರೆಂದೊಡಾಂ ಕಾರಣಮಾಗಿ ಏಕೆ ಸತ್ತಪರೆನಗದನಱಯೆ ಪೇೞಬ್ಬಾ ಎಂದೊಡಾ ದಾದಿಯಿಂತೆಂದು ಪೇೞ್ಗುಂ ಕುರುಜಾಂಗಣಮೆಂಬುದು ನಾಡದರ್ಕೆ ತಿಲಕಮನೆ ಪೋಲ್ವುದು ಹಸ್ತಿನಾಪುರಮೆಂಬುದು ಪೊೞಲದಾದಮಾನುಂ ಸೇವ್ಯಮಪ್ಪುದದನಾಳ್ವೊಂ ಗುರುದತ್ತನೆಂಬೊನರಸನಾ ತನತ್ಯಂತ ರೂಪ ಲಾವಣ್ಯ ಸೌಭಾಗ್ಯಕಾಂತಿ ದೀಪ್ತಿ ಧೃತಿ ಕೀರ್ತಿ ಶೌರ್ಯ ವೀರ್ಯ ಬಳಪರಾಕ್ರಮನೊಡೆಯೊಂ ನವಯೌವನಂ ಸಾಕ್ಷಾತ್ ಕಾಮದೇವನೆ ಆದಮಾನುಂ ಪ್ರಚಂಡ ದೋರ್ಡಂಡನುಂ ಬಲಗರ್ವಿತನುಂ ಪರಮಂಡಲಂಗಳಂ ಪಲವುಮನಿಱದೊಟ್ಟಯಿಸಿ ಕೊಂಡಾಳ್ದಪ್ಟೊನಂತಪ್ಪಾತಂ ನಿನ್ನಂ ಬೇಡಿ ಪಾಗುಡಂಗಳುಂ ಪಾರ್ಗಡೆಗಳುಮಂ ಪಲವು ಸೂೞಟ್ಟಿದೊಡಂ ನಿಮ್ಮಮ್ಮಂ ನಿನ್ನಂ ಕುಡಲೊಲ್ಲದಿರ್ದೊಡೆ ಮುನಿದಾತನ ತಲೆವೆರಸು ಕೂಸಂ ಕೊಳ್ವೆನೆಂದು ಗರ್ಜಿಸಿ ಪ್ರಳಯಕಾಲದ ಸಮುದ್ರಂ ಮೇರೆದಪ್ಪಿದಂತೆ ಚಾತುರ್ದಂತಬಲಂಬೆರಸು ಬಂದು ಪೊೞಲಂ ಮೂವಳಸಾಗಿ ಮುತ್ತಿದೊಡೆ ನಿಮ್ಮರಸಂ ತನ್ನುಳ್ಳ ಬಲಂಬೆರಸು ಪೊಱಮಟ್ಟೊಡ್ಡಿ ನಿಂದನಿಂತೆರಡುಂ ಪಡೆಗಳಿಂದಿಂಗೇೞು ದಿವಸಂ ಕಾದಿದಪ್ಪುದು ಸಾಮಂತ ಮಹಾಸಾಮಂತರ್

ತಾವರೆ, ಅಂಕುಶ, ಚಾಮರ, ತೋರಣ, ಧ್ವಜ ಮುಂತಾದ ಶುಭಲಕ್ಷಣಗಳ ಗುರುತುಗಳುಳ್ಳುದಾಗಿದ್ದಿತು. ಕೆಂಪುತಾವರೆಯ ಬಣ್ಣದ ಹಾಗಿರುವ ಅಂಗೈಯನ್ನೂ ಕಂಡು “ಈ ಅಂಗೈಯನ್ನುಳ್ಳವನು ಸಾಮಾನ್ಯನಾದ ಮನುಷ್ಯನಲ್ಲ ಶ್ರೇಷ್ಠನಾದ ರಾಜನೇ ಆಗಿರಬೇಕು* ಎಂದುಕೊಂಡಳು. ಆಮೇಲೆ “ಅಮ್ಮಾ ಈ ಕೈ ಯಾಕೆ ತುಂಡಾಗಿ ಬಿದ್ದಿದೆ? ಎಂದು ಅಭಯಮತಿಯ ದಾದಿಯನ್ನು ಪ್ರಶ್ನಿಸಿದಳು. ಆಗ ದಾದಿಯು “ಮಗಳೇ, ನಿನ್ನ ಕಾರಣದಿಂದಲೇ, ಈ ರೀತಿಯ ಅಂಗೋಪಾಂಗಗಳಿರುವ ಹಲವರು ರಾಜರು ಸಾಯುತ್ತಿದ್ದಾರೆ* ಎನ್ನಲು ಅವಳು “ನನ್ನ ಕಾರಣದಿಂದ ಯಾಕೆ ಸಾಯುತ್ತಿದ್ದಾರೆ ? ನನಗೆ ಅದನ್ನು ತಿಳಿಯುವಂತೆ ಹೇಳು, ತಾಯೇ* ಎಂದಳು. ಆಗ ದಾದಿಯು ಈ ರೀತಿಯಾಗಿ ಹೇಳಿದಳು – ಕುರುರಾಜಾಂಗಣವೆಂಬ ನಾಡಿದೆ. ಆ ನಾಡಿನ ತಿಲಕದಂತೆ ಇರತಕ್ಕ ಹಸ್ತಿನಾಪುರವೆಂಬ ಪಟ್ಟಣವು ಅತಿಶಯವಾಗಿ ಸೇವ್ಯವಾಗಿದೆ. ಅದನ್ನು ಗುರುದತ್ತನೆಂಬ ರಾಜನು ಆಳುತ್ತಿರುವನ. ಅವನು ಅತಿಶಯವಾದ ರೂಪ, ಲಾವಣ್ಯ, ಕಾಂತಿ, ತೇಜಸ್ಸು, ಧೈರ್ಯ, ಗುಣ, ಕೀರ್ತಿ, ಶೂರತ್ವ, ವೀರತ್ವ, ಬಲ, ಪರಾಕ್ರಮಗಳುಳ್ಳವನಾಗಿ ಹೊಸ ತಾರುಣ್ಯದಿಂದ ಪ್ರತ್ಯಕ್ಷವಾದ ಮನ್ಮಥನಂತೆ ಇದ್ದಾನೆ. ಬಹಳ ಭಯಂಕರವಾದ ಭುಜದಂಡವುಳ್ಳವನೂ ಶಕ್ತಿಯಿದೆಯೆಂಬ ಗರ್ವದಿಂದ ಕೂಡಿದವನೂ ಶತ್ರುಗಳೊಡನೆ ಕಾದಿ ಅವರ ರಾಜ್ಯಗಳನ್ನು ಒಂದುಗೂಡಿಸಿ ಆಳುತ್ತಿರುವವನೂ ಆದಂತಹ ಆತನು ನಿನ್ನನ್ನು ಅಪೇಕ್ಷಿಸಿ ಕಾಣಿಕೆಗಳ ಸಮೇತ ಅಕಾರಿಗಳನ್ನು ಹಲವು ಬಾರಿ ಕಳುಹಿಸಿದರೂ ನಿಮ್ಮ ತಂದೆ ನಿನ್ನನ್ನು ಅವನಿಗೆ ಕೊಡಲು ಒಪ್ಪಲಿಲ್ಲ. ಇದರಿಂದ ಗುರುದತ್ತನು ಕೋಪಗೊಂಡು ಆತನ (ನಿನ್ನ ತಂದೆಯ) ತಲೆ