ಕೋಲು ಕೋಲೆನ್ನಿರೇ ಸದ್ಗುರುವಿನ ಕೀಲು ಮೇಲೆನ್ನಿರೇ || ಅತ್ತೆ ಗಿತ್ತೆ ಬಟ್ಟೆ ಕಾಣೆ | ಬತ್ತ ಕುಟ್ಟಿದ ಬಾನ ಕಾಣೆ | ಸತಿಯ ಸುಖವ ಮೊದಲ ಕಾಣೆ | ಎತ್ತ ಮಕ್ಕಳ ಹೆಸರಕಾಣೆ || ಕೋಲು ಕೋಲೆನ್ನೀರೆ || ಅತ್ತೆ ಹೆಸರು ಕಲ್ಲಪಿಲ್ಲಿ | ಮಾವನ ಹೆಸರು ಮಂಚದ ಕಾಲು | ಗಂಡನ ಹೆಸರು ಚಾಪೆ ಕುಣಿಕೆ | ಹೆಂಡ್ತಿ ಹೆಸರು ಟೊಯ್ಕೊ ಟೊಸ್ಕಿ || ಕೋಲು ಕೋಲೆನ್ನೀರೆ ||

ಗಂಡ ದಂಡಿಗೆ ಹೋಗುವಾಗ ಅರಗಿನ ಮುದ್ರೆ ಹೊತ್ತು ಹೋದ | ಅರಗಿನ ಮುದ್ರೆ ಆರಿಸಿ ಬಿಟ್ಟು ಆರು ಮಕ್ಕಳ ತಾಯಿ ಯಾದೇ || ಕೋಲು ಕೋಲೆನ್ನಿ || ಆದಿಲೋಗು ಅಣ್ಣಂದೀರ | ಬೀದಿಲ್ಲೋಗೋ ತಮ್ಮಂದೀರ ದಂಡಿಗೆ ಹೋಗೋ ಗಂಡನ್ನು ಕಂಡ್ರೆ ಮಿಂಡನಿ ಕುಟ್ರೆ ಹೋದಳೇನ್ರಿ || ಕೋಲು ಕೋಲೆನ್ನಿರಿ || ಗುರುವಿಗೆ ನೆಲೆಯಿಲ್ಲ ಗುಡ್ಡಕ್ಕೆ ನೆರೆಳಿಲ್ಲ ಗುರುವು ಜ್ಞಾನನಂದ | ಗೂಡಾರ್ಥ ಮಾಡಿಕೊಂಡ ಕೋಲು ಕೋಲೆನ್ನೀರೆ ಸದ್ಗುರುವಿನ ಕೀಲು ಮೇಲೆನ್ನೀರೆ ||