ಗುರುಪಾದದೊಳು ಮನವಿಂಗೆ ಭಂಗ ತೊರೆದು
ಪೋಯಿತು ನೋಡೋ ತಂಗಿ | ಹೊರಗೆಂಬೊ
ಒಳಗೆಂಬೊ | ಹೊರ ಬಳಸದೆಂಬೊ | ಬಿರುತಿನೊ
-ಂಬೆನ್ನ ತುಂಬಿರುವಂತೆ ಮಾಡಿದ || ಗುರುಪಾದ ||

ತಾಪಕೋಪಂಗಳ ಕೆಡಿಸಿ ಒಳಿತ ರೂಪುನಾ
ಮಂಗಳ ಸುಡಿಸೀ ರೂಪ ದೀಪಗಳೆಂಬೊ
ರೂಪವಲ್ಲವರ್ನಿಪ ನೆಂದೆನಿಸೀ || ನೀಡಿದ ||
ರೂಪನೆಂದೆಸಿದೆ || ಗುರುಪಾದ ||

ತನ್ನಾಂದದ ಸಾರವೆಸಗೀ | ಮನ | ವೆನ್ನಲು
ಪೋಗದಂತೆಸಗೀ | ಭಿನ್ನವೆಂಬುವ ನುಡಿ
ಶೂನ್ಯವಾಯಿತು ಎಂಬ | ಎನ್ನಲ್ಲಿಯೇ
ಜಗವನ್ನೆಲ್ಲ ತೋರಿದ || ಗುರುಪಾದ ||

ಗುರುವೆಂಬ ನಾಮವ ಧರಿಸಿ | ಹೊಟ್ಟೆ
ಹೊರೆಯುವ ಜನ್ಮವ ಹರಿಸಿ | ಹರುಷವನೇರಿಸಿ
ಹರನೊಳು ಸೇರಿಸಿ ಮರಣ ಜನ್ಮಗಳ ಗೋಚರಿಸ
ದಂತೆಸಗಿದ || ಗುರುಪಾದ ||

ಮೂರು ಮೂರ್ತಿಗಳಲ್ಲು ಕೂಡಿ | ನಾ ಸೇರಿಕೊಂಡಿರು
ವಂತೆ ಮಾಡಿ | ತೋರುವ ಬಗೆಯನು
ತೋರಿಸಿ ನಮಲ್ಲೇ ತೋರಿಸಿ ಬೇರೇನು
ತೋರದಂತೆಸಗಿದ || ಗುರುಪಾದ ||

ಮರಣ ಜನಂಗಳ ಸುಟ್ಟು | ನಿಜಗುರು
ದೋಷಕರಿಗದ ಕೊಟ್ಟು | ಮರೆವೆಯ ಬ್ಯಾರಿಟ್ಟು
ಅರಹಿಗೆ ಬೇರಿಟ್ಟು ಗುರು ಶಂಕರನ
ಗುಟ್ಟುನ್ನರಿದವನ ಬಿಟ್ಟು || ಗುರುಪಾದ ||