ಜನನ : ೧೦-೭-೧೯೩೨ ರಂದು ಚಳ್ಳಕೆರೆಯ ನಾಗಗೊಂಡನ ಹಳ್ಳಿಯಲ್ಲಿ

ಶಿಕ್ಷಣ : ಟಿ. ಪಿ. ಮಲ್ಲಾರೆಡ್ಡಿ, ಶ್ರೀರಂಗ ಶೆಟ್ಟಿ ಹಾಗೂ ಕೆ. ಹೊನ್ನಪ್ಪನವರಲ್ಲಿ ಹರಿಕಥಾ ಕಲೆಯಲ್ಲಿ ಶಿಕ್ಷಣ. ಮುಂದೆ ಕೀರ್ತನ ಮಹಾ ವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮಾರ್ಗದರ್ಶನ ಸಂಗೀತದಲ್ಲೂ ಶಿಕ್ಷಣ ಪಡೆದು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆ. ಪಿಟೀಲು- ಹಾರ್ಮೋನಿಯಂ ನುಡಿಸುವುದರಲ್ಲೂ ಪರಿಶ್ರಮವಿದೆ. ’ಕನ್ನಡರತ್ನ’ ಪರೀಕ್ಷೆ ತೇರ್ಗಡೆ  ಹಾಗೂ ಸ್ನಾತಕೋತ್ತರ ಪದವಿ ಗಮಕ ವಾಚನ ಕಲೆಯಲ್ಲೂ ಪಾಂಡಿತ್ಯವಿದೆ.

ಕ್ಷೇತ್ರ ಸಾಧನೆ : ೧೯೫೯ ರಲ್ಲಿ ಚಳ್ಳಕೆರೆಯ ನಾಗಗೊಂಡನ ಹಳ್ಳಿಯಲ್ಲಿ ಮಂತ್ರಿಗಳಾಗಿದ್ದ ಬಿ.ಎಲ್. ಗೌಡರ ಅಧ್ಯಕ್ಷತೆಯಲ್ಲಿ ಮೊದಲ ಕಾರ್ಯಕ್ರಮದೊಂದಿಗೆ ಕೀರ್ತನ ರಂಗ ಪ್ರವೇಶ. ಅನಂತರ ಚಳ್ಳಕೆರೆ ಹರಪನಹಳ್ಳಿ, ಶಿರಾ, ಚಿತ್ರದುರ್ಗ, ಬೆಂಗಳೂರು ಮುಂತಾದೆಡೆಗಳಲ್ಲಿ ನೂರಾರು ಕಾರ್ಯಕ್ರಮಗಳು ನಡೆದಿವೆ. ಬೆಂಗಳೂರು ಆಕಾಶವಾಣಿ ಕೇಂದ್ರದಿಮದಲೂ ಇವರ ಕಥಾ ಕೀರ್ತನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಸುಮಾರು ೫ ದಶಕಗಳಿಂದಲೂ ರಾಜ್ಯದ ನಾನಾ ಕಡೆಗಳಲ್ಲಿ, ಹೊರ ಇಲಾಖಾ ವತಿಯಿಂದ ಇವರು ನಿಯೋಜಿತ ಕಲಾವಿದರಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ದಾವಣಗೆರೆಯಲ್ಲಿ ನಡೆದ ೧೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಇವರ ಹರಿಕಥಾ ಕಾರ್ಯಕ್ರಮ ನಡೆದಿದೆ. ಅನೇಕ ಶಿಷ್ಯ ಸಮೂಹವನ್ನು ಹೊಂದಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿಯೂ ಕೀರ್ತನ ಕಲೆಯ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.

ಭಕ್ತ ಸುಧವ್ವ, ಸುಮಂಗಲಿ, ತ್ಯಾಗ, ಗ್ರಾಮ ಸುಧಾರಣೆ ರಾಷ್ಟ್ರಪ್ರೇಮ ಝಾನ್ಸಿರಾಣಿ ಮೊದಲಾದ ನಾಟಕಗಳನ್ನು ರೂಪಕಗಳನ್ನು ರಚಿಸಿ ಪ್ರಕಟಿಸಿರುವುದೇ ಅಲ್ಲದೆ ಅನೇಕ ಕಡೆ ಪ್ರದರ್ಶನಗಳನ್ನು ನೀಡಿರುತ್ತಾರೆ.

ಪ್ರಶಸ್ತಿ – ಪುರಸ್ಕಾರಗಳು : ಚಿತ್ರದುರ್ಗ ಜಿಲ್ಲಾ ಯುವಜನ ಸೇವಾ ಮಂಡಳಿ, ಶಿರಾದ ವಿದ್ಯಾ ಗಣಪತಿ ನಾಟಕ ಮಂಡಳಿ, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರು ವಿಶ್ವವಿದ್ಯಾಲಯ, ದಾಸಾಶ್ರಮ  ಅಂತರರಾಷ್ಟ್ರೀಯ ಕೇಂದ್ರ ಮೊದಲಾದ ಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೬-೯೭ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.