ಗುರುಸೇವೆ ಕೊನೆಸಾಗಲಿಲ್ಲ ಈ ಮರಣಭೀತಿಯು ಪೋಗಲಿಲ್ಲ | ಕರಣವ ಬೇರಿಟ್ಟು ಭರಣವದರೊಳಿಟ್ಟು | ಸಿರಿತನವನು ಸುಟ್ಟು | ಜರಿಸುವರಾರಿಲ್ಲ || ಗುರು || ಪ || ಕೇಳಿದರ್ಥವು ನಿಲ್ಲಲಿಲ್ಲ ಮುಂದೆ | ಕೇಳಲೇನದು ಫಲವಿಲ್ಲ ಕಾಲುಗಳುದಿಸಿಲ್ಲ | ಗಮನವೆಂತವ ಬಲ್ಲ ಕೀಳುಮೇಲರಿಯದೆ ಪಾಳಾಯ್ತು ಜಗವೆಲ್ಲ || ಗುರುಸೇವೆ ಕೊನೆಸಾಗಲಿಲ್ಲ || ೧ || ರಾಗಾದಿಗಳು ಪೋಗಲಿಲ್ಲ | ಸುಖವಾಗಲೆಂದೊಡೆ ಸಾಗೊದಲ್ಲ | ರೋಗಪೋಗದರಸ ಸೇವಿಸಿ ಫಲವಿಲ್ಲ | ಯೋಗನಿಲ್ಲದೆ ಶಿರಬಾಗಿದೊಡೇನಿಲ್ಲ || ಗುರುಸೇವೆ || ೨ || ಹರುಷ ತನ್ನೊಳಗೇರಲಿಲ್ಲ ಸಾದುಚರಣ ಕೈವಶವಾಗಲಿಲ್ಲ | ನರಭಾವ ಕೆಡಲಿಲ್ಲ ಕೊರತೆಗೆ ಕಡೆಯಿಲ್ಲ | ಗುರುಶಂಕರನೊಳು ತನ್ನೆರಕ ತೋರಿಸಲಿಲ್ಲ || ಗುರುಸೇವೆ ಕೊನೆಸಾಗಲಿಲ್ಲ || ೩ ||