Categories
ಕನ್ನಡ

ಗುರು ಗೋವಿಂದಸಿಂಹ

ಭಾರತದಲ್ಲಿ ಮುಸಲ್ಮಾನರ ದಾಳಿ ಆದದ್ದು ಮೊದಲಿಗೆ ವಾಯುವ್ಯ ಸರಹದ್ದಿನ ಪ್ರಾಂತಗಳು ಮತ್ತು ಪಂಜಾಬಿನ ಮೇಲೆ. ಸುಮಾರು ೧೪-೧೫ನೆಯ ಶತಮಾನದ ವೇಳೆಗೆ ಆ ಪ್ರದೇಶಗಳಲ್ಲೆಲ್ಲ ಹಿಂದುಗಳು ಸೋತು ತೀರ ಅಧೋಗತಿಗೆ ಇಳಿದಿದ್ದರು. ಅವರ ಅಂತಃಕರಣದಲ್ಲಿನ ಸ್ವದೇಶಪ್ರೇಮ ಮತ್ತು ಸ್ವಾತಂತ್ರ್ಯ ಪ್ರೇಮಕ್ಕೆ ಬೂದಿ ಮುಚ್ಚಿದಂತಾಗಿತ್ತು. ಆ ಬೂದಿಯನ್ನು ಊದಿ ಪುನಃ ಬೆಳಗಿಸಲು ಪಂಜಾಬಿನಲ್ಲಿ ಗುರುನಾನಕ್ ಜನ್ಮ ತಾಳಿದ. ಹಿಂದು ಧರ್ಮ ರಕ್ಷಣೆಗಾಗಿ ಅವನು ಸ್ಥಾಪಿಸಿದ ಪಂಥಕ್ಕೆ ಸಿಖ್ ಪಂಥವೆಂದು ಹೆಸರು. ಗುರು ನಾನಕ ನಂತರ ಬಂದ ಗುರುಗಳ ಸಾಲಿನಲ್ಲಿ ಹತ್ತನೆಯವನು ಗುರು ಗೋವಿದಸಿಂಹ. ಅವನು ಹುಟ್ಟಿದ್ದು ಬಿಹಾರಿನ ರಾಜಧಾನಿ ಪಟ್ನಾದಲ್ಲಿ, ೧೬೬೬ ರಲ್ಲಿ.

ಬೆಳೆಯುವ ಪೈರು ಮೊಳಕೆಯಲ್ಲಿ ಕಾಣು

ಒಂಬತ್ತು ವರ್ಷ ತುಂಬುವ ವೇಳೆಗೆ ಅವನು ಪಂಜಾಬಿಗೆ ಬಂದ. ಆಗೊಮ್ಮೆ ಕಾಶ್ಮೀರದ ಹಿಂದು ಧರ್ಮಪಂಡಿತರು ಅವನ ತಂದೆ ಗುರು ತೇಗಬಹುದ್ದೂರನನ್ನು ಕಾಣಲು ಬಂದರು. ತಮ್ಮ ಮೇಲೆ ಬಂದಿದ್ದ ವಿಪತ್ತನ್ನು ಗುರುವಿನ ಬಳಿ ಹೇಳಿಕೊಂಡರು. ದೆಹಲಿಯ ಮೊಗಲ್ ಬಾದಶಹ ಔರಂಗಜೇಬನು ಅವರಿಗೆ, “ನೀನು ಇಸ್ಲಾಂ ಮತಕ್ಕೆ ಸೇರುವಿರೋ ಅಥವಾ ಸಾವಿಗೆ ಗುರಿಯಾಗುವಿರೋ?” ಎಂದು ಹೆದರಿಸುತ್ತಿದ್ದ. ಈ ಬಿಕ್ಕಟ್ಟಿನಿಂದ ಹೇಗೆ ಪಾರಾಗುವುದು? ಇದೇ ಅವರ ಪ್ರಶ್ನೆ. ತೇಗಬಹಾದ್ದೂರನು, “ಈ ಸಂದರ್ಭದಲ್ಲಿ ಯಾರಾದರೂ ಒಬ್ಬ ದೊಡ್ಡ ಮಹಾತ್ಮರು ತಮ್ಮ ಪ್ರಾಣ ಕೊಟ್ಟರೆ ಮಾತ್ರ ನಮ್ಮ ಧರ್ಮ ಉಳಿಯಬಲ್ಲದು” ಎಂದು ಹೇಳಿದ. ಆಗ ಪಕ್ಕದಲ್ಲೆ ಇದದ ಎಳೆಯ ಬಾಲಕ ಗೋವಿಂದ ರಾಯ್ ಚಟ್ಟನೆ ಎದ್ದುನಿಂತು ಹೇಳಿದ : “ಅಪ್ಪಾಜಿ, ಇವತ್ತು ನಮ್ಮ ಜನರ ಪೈಕಿ ನಿಮಗಿಂತ ದೊಡ್ಡಮಹಾತ್ಮರು ಇನ್ನಾರಿದ್ದಾರೆ?”

ಈ ಮಾತು ಕೇಳಿ ಸಭೆಯಲ್ಲಿದ್ದವರಿಗೆಲ್ಲ ವಿದ್ಯುತ್ ಸೋಂಕಿದಂತಾಯಿತು. ಎಲ್ಲರೂ ಗುರು ತೇಗ ಬಹಾದ್ದೂರನ ಕಡೆಗೆ ನೋಡತೊಡಗಿದರು. ಆಗ ತೇಹಬಹದ್ದೂರ್ ಕಾಶ್ಮೀರದಿಂದ ಬಂದ ಹಿಂದುಗಳನ್ನು ಕುರಿತು, ಒಳ್ಳೆಯದು, ನೀವು ವಾಪಸು ಕಾಶ್ಮೀರಕ್ಕೆ ಹೋಗಿ. ಮತ್ತೆ ಮುಸಲ್ಮಾನ ಅಧಿಕಾರಿಗಳು ನಿಮಗೆ ಕಿರುಕುಳ ಕೊಡಲು ಬಂದಾಗ, ಅವರಿಗೆ ಈ ಮಾತನ್ನು ಹೇಳಿ: “ಸುಮ್ಮನೆ ನಮ್ಮಂಥ ಬಡಪಾಯಿಗಳನ್ನು ಪೀಡಿಸಿ ಮತಾಂತರಗೊಳಿಸುವುದರಲ್ಲಿ ಏನು ದೊಡ್ಡಸ್ತಿಕೆ ಬಂತು? ಪಂಜಾಬಿನಲ್ಲಿ ನಮ್ಮ ಗುರು ತೇಗಬಹಾದ್ದೂರ್ ಇದ್ದಾನೆ. ಮೊದಲು ನಮ್ಮ ಆ ಗುರುವನ್ನು ನಿಮ್ಮ ಮತಕ್ಕೆ ಸೇರಿಸಿಕೊಳ್ಳಿ. ಇಷ್ಟನ್ನು ನೀವು ಹೇಳಿ, ಮುಂದಿನದೆಲ್ಲ ನನಗೆ ಬಿಡಿ”.

[fusion_builder_container hundred_percent=”yes” overflow=”visible”][fusion_builder_row][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ಅಪ್ಪಾಜಿ, ಇವತ್ತು ನಮ್ಮಲ್ಲಿ ನಿಮಗಿಂತ ದೊಡ್ಡವರು ಯಾರು?

ಮತ್ತೆ ತಮ್ಮನ್ನು ಪೀಡಿಸಲು ಬಂದ ಮುಸ್ಲಿಂ ಅಧಿಕಾರಿಗಳಿಗೆ ಪಂಡಿತರ ಗುರು ಹೇಳಿದ ಮಾತನ್ನೇ ಹೇಳಿದರು. ಹಿಂದುಗಳ ಈ ಕೆಚ್ಚಿನ ಉತ್ತರವನ್ನು ಕೇಳಿ ದಿಲ್ಲಿಯ ಬಾದಶಹ ಔರಂಗಜೇಬನು ಕೆರಳಿ ಕೆಂಡವಾದ. ಅವನು ಕೂಡಲೇ ತನ್ನ ಸೈನಿಕರನ್ನು ಕಳುಹಿಸಿ ಗುರು ತೇಗಬಹಾದ್ದೂರನನ್ನು ಹಿಡಿಸಿ ದಿಲ್ಲಿಗೆ ಎಳೆತರಿಸಿದ.

ಗುರುವು ಆನಂದಪುರವನ್ನು ಬಿಡುವುದಕ್ಕೆ ಮುಂಚೆ ಅವನ ಹೆಂಡತಿ ಗುಜರಿದೇವಿ, “ನಮಗೆ ಇನ್ನು ಯಾರು ಗತಿ?” ಎಂದು ಕೇಳಿದಳು. ಅದಕ್ಕೆ ಗುರುವು, “ದೇವರು ಮತ್ತು ಗೋವಿಂದ” ಎಂದು ಹೇಳಿದ. ತನ್ನ ಎಳೆ ವಯಸ್ಸಿನ ಮಗನಲ್ಲಿ ತಂದೆಗೆ ಅಷ್ಟೊಂದು ನಂಬಿಕೆ.

’ಪ್ರಾಣವನ್ನು ಬಿಟ್ಟೇನು ಧರ್ಮ ಬಿಡುವುದಿಲ್ಲ’

ಔರಂಗಜೇಬನು ಗುರುವನ್ನು ಚಿತ್ರಹಿಂಸೆಗೆ ಗುರಿಪಡಿಸಿದ. ಆದರೂ ಗುರುವು ಮುಸಲ್ಮಾನನಾಗಲು ಒಪ್ಪಲಿಲ್ಲ. “ಪ್ರಾಣವನ್ನಾದರೂ ಬಿಟ್ಟೇನು, ಆದರೆ ನನ್ನ ಧರ್ಮವನ್ನು ಬಿಡುವುದಿಲ್ಲ” ಎಂದು ಖಡಾಖಂಡಿತವಾಗಿ ಹೇಳಿದ. ಆಗ ದೆಹಲಿಯ ಚಾಂದನಿ ಚೌಕದಲ್ಲಿ ಗುರುವಿನ ತಲೆಯನ್ನು ಕಡಿದುಹಾಕಬೇಕೆಂದು ಔರಂಗಜೇಬ ಅಪ್ಪಣೆ ಮಾಡಿದ. ತನ್ನ ತಲೆ ಕಡಿದು ಬೀಳುವಾಗಲೂ ಗುರು ತೇಗಬಹುದ್ದೂರ್ ಮಾತ್ರ ಶಾಂತ ಮನಸ್ಸಿನಿಂದ ದೇವರ ಧ್ಯಾನದಲ್ಲಿ ಮುಳುಗಿದ್ದ.

ತಂದೆಯ ಈ ಬಲಿದಾನದ ವಾರ್ತೆ ಕೇಳಿ, ಹುಡುಗ ಗೋವಿಂದರಾಯನು ಗೋಳಾಡಿದನೇ? ಇಲ್ಲ. ಅವನು ಹೇಳಿದ : “ನನ್ನ ತಂದೆ ತನ್ನ ಪ್ರಾಣವನ್ನೇ ಕೊಟ್ಟ, ಆದರೆ ಹಿಂದು ಧರ್ಮದ ಗೌರವವನ್ನು ಮಾತ್ರ ಬಿಟ್ಟು ಕೊಡಲಿಲ್ಲ. ಆ ಕಲಿಯುಗದಲ್ಲಿ ಎಂಥ ಅದ್ಭುತವಾದ ಕೆಲಸ ಮಾಡಿದ, ನನ್ನ ತಂದೆ!”

ತನ್ನ ಎಳೆ ವಯಸ್ಸಿನಲ್ಲಿಯೇ ಇಂತಹ ತೇಜಸ್ಸನ್ನು ಮೆರೆದವನು ಗುರು ಗೋವಿಂದಸಿಂಹ. ತಂದೆಯಂತೆಯೇ ಅವನ ಮುತ್ತಾತ ಗುರು ಅರ್ಜುನದೇವನೂ ದಿಲ್ಲಿಯ ಮೊಗಲ್ ಬಾದಶಹ ಜಹಂಗೀರನ ಕೈಯಲ್ಲಿ ನಾನಾ ವಿಧವಾದ ಚಿತ್ರಹಿಂಸೆಗಳನ್ನು ಅನುಭವಿಸಿ ಸತ್ತಿದ್ದ. ಆದರೆ ಧರ್ಮವನ್ನು ಮಾತ್ರ ಬಿಡಲಿಲ್ಲ. ಅಂತಹ ಸಾವಿಗೆ ಅಂಜದವರ ವಂಶದಲ್ಲಿ ಜನಿಸಿದವನು ಗೋವಿಂದಸಿಂಹ.

ಬಾಲ್ಯದಿಂದಲೂ ಸಿದ್ಧತೆ

ಗುರು ಗೋವಿಂದ ಸಿಂಹನು ಸಣ್ಣ ವಯಸ್ಸಿನಲ್ಲಿಯೇ ಸ್ವದೇಶ-ಸ್ವಧರ್ಮಗಳ ರಕ್ಷಣೆಗಾಗಿ ಸೊಂಟಕಟ್ಟಿದನು. ರಾಮಾಯಣ, ಮಹಾಭಾರತ, ಪುರಾಣಗಳ ಕಥೆಗಳನ್ನು ಅವನು ಮನಸ್ಸಿಟ್ಟು ಕೇಳುತ್ತಿದ್ದ. ಶ್ರೀರಾಮ, ಶ್ರೀಕೃಷ್ಣ, ಭೀಮ, ಅರ್ಜುನರ ಕಥೆಗಳನ್ನು ಕೇಳಿ ಅವನು ರೋಮಾಂಚನಗೊಳ್ಳುತ್ತಿದ್ದ. ತಾನೂ ಅವರಂತೆಯೇ ಧರ್ಮ ರಕ್ಷಣೆಗಾಗಿ ಜನ್ಮವೆತ್ತಿರುವುದಾಗಿ ಅವನಿಗೆ ನಂಬಿಕೆಯಾಗಿತ್ತು. ಆ ಕಷ್ಟದ ಕೆಲಸ ಮಾಡಲು ಅವನು ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡ. ವೇದ, ಉಪನಿಷತ್ತು, ಭಗವದ್ಗೀತೆ ಮುಂತಾದ ಧರ್ಮಗ್ರಂಥಗಳನ್ನೆಲ್ಲ ಓದಿ ಅರಗಿಸಿಕೊಂಡ. ಸಂಸ್ಕೃತದಲಂತೆಯೇ ಪಾರಸಿ, ಅರಬ್ಬಿ ಮತ್ತು ಪಂಜಾಬಿ ಭಾಷೆಗಳಲ್ಲೂ ಅಸಾಧಾರಣ ಪಾಂಡಿತ್ಯ ಗಳಿಸಿದ. ಮಹಾಕವಿಯೂ ಆದ. ಜೊತೆಗೆ ಕುದುರೆ ಸವಾರಿ, ಧನುರ್ವಿದ್ಯೆ, ಕತ್ತಿ ವರಸೆ ಮುಂತಾದ ಯುದ್ಧವಿದ್ಯೆಗಳಲ್ಲಿ ಅದ್ಭುತವಾಗಿ ಪ್ರಾವೀಣ್ಯ ಪಡೆದ. ಮಿಕ್ಕ ಜನ ಸಾಮಾನ್ಯರಲ್ಲೂ ಈ ಎಲ್ಲ ವಿದ್ಯೆಗಳನ್ನು ಪ್ರಚುರಪಡಿಸಲು ಅವನು ಆರಂಭಿಸಿದ. ರಾಕ್ಷಸರನ್ನು ಸಂಹರಿಸಿದ ರಾಮ, ಕೃಷ್ಣ, ದುರ್ಗಿ ಇವರ ಪೌರಾಣಿಕ ಕಥೆಗಳನ್ನು ಹಿಂದಿಯಲ್ಲಿ ಬರೆಸಲು ೫೨ ಕವಿಗಳನ್ನು ಅವನು ನೇಮಿಸಿದ.

ಹಿಂದು ಜನಾಮಗ ಮತ್ತು ಹಿಂದು ಧರ್ಮವನ್ನು ರಕ್ಷಿಸಲು ಯಾವ ಮಾರ್ಗ ಅನುಸರಿಸಿದರೆ ಒಳ್ಳೆಯದೆಂದು ಅವನು ಆಳವಾಗಿ ಆಲೋಚಿಸಿದಾಗ ಅವನಿಗೆ ಒಂದು ವಿಷಯ ಹೊಳೆಯಿತು. ಧರ್ಮದ ಒಳ್ಳೆಯ ತತ್ವಗಳನ್ನು ಜನರಿಗೆ ಬೋಧನೆ ಮಾಡಿದರೆ ಸಾಲದು; ಅಥವಾ ಶತ್ರುಗಳ ಕೈಯಲ್ಲಿ ಸಿಕ್ಕಿ ಪ್ರಾಣ ಕೊಡುವುದರಿಂದಲೂ ಕೆಲಸವಾಗದು. ಸ್ವದೇಶ ಮತ್ತು ಧರ್ಮಗಳಿಗಾಗಿ ಪ್ರಾಣ ಕೊಡಲು ಸಹ ಸಿದ್ಧರಾಗುವಂತಹ ವೀರರ ಪಡೆಯನ್ನು ಕಟ್ಟಬೇಕು ಎಂದು ಅವನು ತೀರ್ಮಾನಿಸಿದ.

ಹೊಸ ವೀರ ಪಂಥ

೧೬೯೯ರ ವೈಶಾಖ ಪಾಡ್ಯದ ದಿನ. ಆನಂದಪುರದಲ್ಲಿ ದೂರದೂರದಿಂದ ಶಿಷ್ಯರು ಗುರು ಗೋವಿಂದ ಸಿಂಹನ ದರ್ಶನಕ್ಕಾಗಿ ಬಂದಿದ್ದರು. ಇದ್ದಕ್ಕಿದ್ದಂತೆ ಗುರು ರುದ್ರರೂಪ ತಾಳಿ ನಿಂತ. ಕತ್ತಿಯನ್ನು ಝಳಪಿಸುತ್ತಾ, “ಧರ್ಮಕ್ಕಾಗಿ ತಲೆಯನ್ನು ಕೊಡಲು ನಿಮ್ಮ ಪೈಕಿ ಯಾರು ಸಿದ್ಧರಿದ್ದೀರಿ? ನನ್ನ ಕತ್ತಿ ತವಕಿಸುತ್ತಿದೆ” ಎಂದು ಗರ್ಜಿಸಿದ.

ಕ್ಷಣಕಾಲ ಇಡೀ ಸಭೆಯಲ್ಲಿ ಸಿಡಿಲು ಬಿದ್ದಂತಾಯಿತು. ಅನಂತರ ಲಾಹೋರಿನ ದಯಾರಾಮ ಎಂಬ ಸಿಖ್ಖನು ಮುಂದೆ ಬಂದು ಕೈಜೋಡಿಸಿ, ತಲೆಬಾಗಿ ನಿಂತ. “ನನ್ನ ಈ ತಲೆ ಎಂದೆಂದಿಗೂ ನಿಮ್ಮದೇ. ತಾವು ಅದನ್ನು ಸ್ವೀಕರಿಸಿದಲ್ಲಿ  ನನ್ನ ಬದುಕು ಬಂಗಾರವಾದಂತೆ” ಎಂದ.

ಗುರು ಅವನನ್ನು ತನ್ನ ಡೇರೆಯೊಳಕ್ಕೆ ಕರೆದೊಯ್ದ. ’ಕಚ್’ ಎಂದು ಕತ್ತರಿಸಿದ ಸದ್ದಾಯಿತು. ಡೇರೆಯಿಂದ ರಕ್ತದ ಕೋಡಿ ಹರಕ್ಕೆ ಹರಿಯಿತು. ರಕ್ತ ತೊಟ್ಟಿಕ್ಕುತ್ತಿದ್ದ ಕತ್ತಿ ಮೇಲೆತ್ತಿ ಮುಂಚಿಗಿಂತ ಉಗ್ರರೂಪದಲ್ಲಿ ಗುರು ಹೊರಗೆ ಬಂದ. “ನನಗೆ ಇನ್ನೊಂದು ತಲೆ ಬೇಕಾಗಿದೆ” ಎಂದು ಕೂಗಿದ. ಆಗ ದೆಹಲಿಯ ಧರ್ಮದಾಸನೆಂಬ ಇನ್ನೊಬ್ಬ ಶಿಷ್ಯ ಮುಂದೆ ಬಂದ. ಅವನನ್ನೂ ಅದೇ ರೀತಿ ಗುರು ಕರೆದೊಯ್ದ. ಒಳಗಿನಿಂದ ಪುನಃ ಕತ್ತರಿಸಿದ ಸದ್ದು: ರಕ್ತದ ಕೋಡಿ. ಹೊರಗೆ ಬಂದ ಗುರುವಿನಿಂದ ಅದೇ ರೀತಿಯ ಕರೆ.

ಈ ಭಯಂಕರ ದೃಶ್ಯವನ್ನು ನೋಡಲಾರದೆ ಕೆಲವರು ಎದೆ ನಡುಗಿ ಓಡಿದರು. ಗುರುವಿನ ತಲೆಕೆಟ್ಟಿದೆಯೆಂದು ಕೆಲವರು ಹೋಗಿ ಗುರುವಿನ ತಾಯಿಗೆ ದೂರು ಕೊಟ್ಟರು. ಆದರೆ ಗುರು ಆದಾವುದನ್ನೂ ಲೆಕ್ಕಿಸಲಿಲ್ಲ. ಅದೇ ರೀತಿ ಇನ್ನೂ ಮೂರು ಸಲ ಕರೆಕೊಟ್ಟ. ಆಗಲೂ ಪ್ರತಿಬಾರಿಗೂ ಒಬ್ಬೊಬ್ಬ ಮುಂದೆ ಬಂದ. ದ್ವಾರಕೆಯ ಮೊಹಕಂಚಂದ್, ಬಿದರೆಯ ಸಾಹಿಬ್‌ಚಂದ್, ಜಗನ್ನಾಥ ಪುರಿಯ ಹಿಮ್ಮತ್ ಇವರೇ ಆ ಮೂವರು.

ಅನಂತರ ಗುರು ಗೋವಿಂದಸಿಂಹನು ಶಾಂತನಾದ. ಡೇರೆಯೊಳಕ್ಕೆ ಹೋಗಿ ಆ ಐದು ಶಿಷ್ಯರನ್ನು ಸೈನಿಕ ಸಮವಸ್ತ್ರದಲ್ಲಿ ಹೊರತಂದ! ಒಬ್ಬೊಬ್ಬನನ್ನು ಒಳಗಡೆ ಕರೆದೊಯ್ದಾಗಲೂ ಅವರು ಬಲಿಕೊಟ್ಟದ್ದು ಒಂದೊಂದು ಮೇಕೆಯನ್ನು! ಆ ಐದು ಜನರನ್ನು ’ಪಂಚ ಪ್ಯಾರೇ’ (ಐವರು ಪ್ರಾಣಪ್ರಿಯರು) ಎಂದು ಕರೆದು, ಅವರನ್ನು ತನ್ನ ಸೇನಾಪತಿಗಳನ್ನಾಗಿ ನೇಮಿಸಿದ. ಎಲ್ಲರೂ ಕೂಡಿ ಆಕಾಶ ಬಿರಿಯುವಂತೆ ’ಸತ್ ಶ್ರೀ ಆಕಾಲ್’ ಎಂದು ದೇವರ ಜಯಘೋಷ ಮಾಡಿದರು.

ಅನಂತರ ಆ ಐವರನ್ನು ಗುರುವು ತನ್ನ ಬಳಿ ಕರೆದು ಅವರಿಗೆ ತೀರ್ಥ ಕೊಟ್ಟ. ಕೊನೆಯಲ್ಲಿ ತಾನೂ ಅವರ ಮುಂದೆ ಕೈಜೋಡಿಸಿ ನಿಂತುಕೊಂಡು ಆ ’ಅಮೃತ’ವನ್ನು ತನಗೂ ನೀಡುವಂತೆ ಶಿಷ್ಯರನ್ನು ಕೇಳಿಕೊಂಡ. ಈ ವಿಚಿತ್ರ ವರ್ತನೆ ನೋಡಿ ಶಿಷ್ಯರು, “ಇದೇನು, ಗುರುವಿಗೆ ನಾವು ತೀರ್ಥ ಕೊಡುವುದೆ?” ಎಂದು ಆಶ್ಚರ್ಯದಿಂದ ಕೇಳಿದರು. ಆಗ ಗುರುವು, “ನಾನು ಈಗ ಹೊಸದೊಂದು ವೀರ ಪಂಥವನ್ನು ಸ್ಥಾಪಿಸುತ್ತಿದ್ದೇನೆ. ಇದರಲ್ಲಿ ಮೇಲು – ಕೀಳು ಯಾರೂ ಇಲ್ಲ. ಇನ್ನು ನಮ್ಮಲ್ಲಿ ಜಾತಿ-ಮತಗಳ ಭೇದವಿಲ್ಲ. ನಾವೆಲ್ಲರೂ ಸೋದರರು. ಭಗವಂತನೊಬ್ಬನೇ ನಮ್ಮ ಒಡೆಯ” ಎಂದು ಸಂದೇಶ ನೀಡಿದ ಅದನ್ನು ಕೇಳಿ ಶಿಷ್ಯರ ಸ್ಫೂರ್ತಿ ಉಕ್ಕಿ ಹರಿಯಿತು.

ಇದೇ ಸಮಯದಲ್ಲಿ ತನ್ನ ಶಿಷ್ಯರು ಸಮರ್ಪಣೆ, ಶುಚಿತ್ವ, ದೈವಭಕ್ತಿ, ಶೀಲ, ಶೌರ್ಯ ಈ ಐದು ಗುಣಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಐದು ಚಿಹ್ನೆಗಳನ್ನು ಅವರಿಗೆ ಕೊಟ್ಟ. ಪ್ರತಿಯೊಬ್ಬ ಸಿಖ್ಖನಿಗೂ ’ಸಿಂಹ’ ಎಂದು ಹೆಸರಿಟ್ಟ.

ಅದೇ ದಿನವೇ ಗುರುವಿನಿಂದ ೨೦ ಸಾವಿರ ಸ್ತ್ರೀ- ಪುರುಷರು ಈ ಹೊಸ ವೀರ ಪಂಥದ ದೀಕ್ಷೆಯನ್ನು ಪಡೆದರು. ಅವರೆಲ್ಲರನ್ನು ಉದ್ದೇಶಿಸಿ ಅವನು, “ಗುಬ್ಬಿಗಳಿಂದ ಗಿಡುಗಗಳನ್ನು ಸೋಲಿಸುವೆ; ನನ್ನ ಒಬ್ಬೊಬ್ಬ ಸೈನಿಕನು ಶತ್ರುವಿನ ಲಕ್ಷ ಸೈನಿಕರೊಡನೆ ಕಾದಾಡುವಂತೆ ಮಾಡುವೆ; ಆಗಲೇ ನನ್ನ ಹೆಸರು ಗುರು ಗೋವಿಂದಸಿಂಹ ಎಂಬುದು ನಿಜ” ಎಂದು ಸಾರಿದ.

ಹಿಂದುಗಳೇ ಗುರುವಿಗೆ ವೈರಿಗಳಾದರು!

ಗುರು ಗೋವಿಂದಸಿಂಹನ ಈ ಎಲ್ಲಾ ಮಾತು, ಕೃತಿಗಳಿಂದ ಇಡೀ ಪಂಜಾಬಿನಲ್ಲಿ ಹಳ್ಳಿಹಳ್ಳಿಯವರೆಗೆ ಹಿಂದುಗಳಲ್ಲಿ ಹೊಸ ವೀರಾವೇಶ ಹುಟ್ಟಿತು. ಆದರೆ ಸುತ್ತಮುತ್ತಲಿನ ಅನೇಕ ಹಿಂದು ರಾಜರು, ಪಾಳೆಯಗಾರರೇ ಗುರು ಗೋವಿಂದನ ಸಿಂಹನ ಮೇಲ್ಮೆಯನ್ನು ಕಂಡು ಅಸೂಯೆಗೊಂಡರು. ಸ್ವದೇಶ, ಸ್ವಧರ್ಮಗಳನ್ನು ರಕ್ಷಿಸಲು ಹೊರಟ್ಟಿದ್ದ ಗುರುವಿನೊಂದಿಗೆ ಸಹಕರಿಸುವ ಬದಲು ಅವನ ನಾಶಕ್ಕಾಗಿಯೇ ಕತ್ತಿ ಎತ್ತಿದರು.

ಕಳೆದ ಒಂದು ಸಾವಿರ ವರ್ಷದಿಂದಲೂ ನಮ್ಮ ದೇಶ, ನಮ್ಮ ಜನ ವೈರಿಗಳ ದಾಳಿಗೆ ಸಿಕ್ಕಿ ಸೋಲುತ್ತಾ ಬಂದುದಕ್ಕೆ ಹಿಂದುಗಳಲ್ಲಿನ ಈ ರೀತಿಯ ಒಡಕು ಕಲಹಗಳೇ ಮುಖ್ಯ ಕಾರಣ. ದೇಶ-ಧರ್ಮಗಳ ಸ್ವಾತಂತ್ರ‍್ಯಕ್ಕೋಸ್ಕರ ಹೋರಾಡುತ್ತಿದ್ದವರ ವಿರುದ್ಧವಾಗಿ ಎಷ್ಟೋ ಹಿಂದು ರಾಜರೇ ಶತ್ರುಗಳಿಗೆ ಸಹಾಯ ಮಾಡಿದರು; ಅಷ್ಟೇಕೆ, ವೈರಿಗಳಿಗೆ ನಿಮಂತ್ರಣವನ್ನೂ ಕೊಟ್ಟರು.

ಗುರು ಗೋವಿಂದಸಿಂಹನ ವಿಷಯದಲ್ಲಿ ಆದುದೂ ಹೀಗೆಯೇ. ಸುತ್ತಮುತ್ತಲ ಹಿಂದು ರಾಜರು, ಪಾಳೆಯಗಾರರು ಒಟ್ಟುಗೂಡಿ ಪದೇ ಪದೇ ಗುರು ಗೋವಿಂದಸಿಂಹನ ಮೇಲೆ ಬಿದ್ದರು. ಆದರೆ ಅವರು ಪ್ರತಿಬಾರಿಯೂ ಸೋತು ಓಡಿಹೋಗಬೇಕಗಿ ಬಂತು. ಆಗ ಅವರು ಮೊಗಲ ಬಾದಶಹ ಔರಂಗಜೇಬನಿಗೆ, “ಗುರು ಗೋವಿಂದಸಿಂಹನು ಮೊಗಲ್ ಚ್ರಾಧಿಪತ್ಯಕ್ಕೆ ಕಂಟಕನಾಗಿದ್ದಾನೆ. ಅವನನ್ನು ನಾಶಗೊಳಿಸಲು ನಿಮ್ಮ ಸೈನ್ಯ ಕಳುಹಿಸಿಕೊಡಿ. ನಾವೆಲ್ಲರೂ ನಿಮಗೆ ಸಹಾಯ ಮಾಡುತ್ತೇವೆ; ಮತ್ತು ನಿಮ್ಮ ಸೈನ್ಯದ ಖರ್ಚನ್ನೂ ನಾವೇ ವಹಿಸಿಕೊಳ್ಳುತ್ತೇವೆ” ಎಂದು ಪ್ರಾರ್ಥನಾಪತ್ರ ಕಳುಹಿಸಿದರು.

ಅದರಂತೆ ಪೈಂದೇಖಾನ್ ಮತ್ತು ದಿನ್ ಬೇಗ್ ಎನ್ನುವ ಇಬ್ಬರು ಪ್ರಖ್ಯಾತ ಮೊಗಲ್ ಸರದಾರರು ೨೦ ಸಾವಿರ ಸೈನಿಕರೊಡನೆ ಆನಂದಪುರದ ಮೇಲೆ ದಂಡೆತ್ತಿಬಂದರು. ರಜಪೂತ ರಾಜರೂ ತಮ್ಮ ಸಾವಿರಾರು ಸೈನಿಕರೊಂದಿಗೆ ಅವರ ಸಹಾಯಕ್ಕೆ ಬಂದರು. ಆದರೆ ಗುರು ಗೋವಿಂದಸಿಂಹ ಮತ್ತು ಅವನ ಸೈನಿಕರ ಶೌರ್ಯದ ಮುಂದೆ ಅವರಾರ ಆಟವೂ ನಡೆಯಲಿಲ್ಲ. ಗುರುವಿನ ಬಾಣಕ್ಕೆ ಸಿಕ್ಕಿ ಪೈಂದೇಖಾನನು ಪ್ರಾಣ ನೀಗಿ ಕುದುರೆಯಿಂದ ಕೆಳಗುರುಳಿದ. ದಿನ್‌ಬೇಗನು ಓಡಿ ಹೋದ. ಇಡೀ ಶತ್ರು ಸೈನ್ಯವೆಲ್ಲ ದಿಕ್ಕಾಪಾಲಾಗಿ ಚದುರಿ ಓಡಿಹೋಯಿತು. ಗುರು ಗೋವಿಂದಸಿಂಹನ ಸೈನ್ಯಕ್ಕೆ ಶತ್ರುಗಳ ಅಪಾರ ಹಣ, ಶಸ್ತ್ರಾಸ್ತ್ರ ಸಿಕ್ಕಿತು.

ಶೌರ್ಯದಂತೆ ಕರುಣೆಯಲ್ಲೂ ಎತ್ತಿದ ಕೈ

ಗುರುವಿನ ಆಯುಷ್ಯವೆಲ್ಲ ಬಹುಮಟ್ಟಿಗೆ ರಣರಂಗದಲ್ಲೇ ಕಳೆದರೂ ಅವನ ಸ್ವಭಾವದಲ್ಲಿ ಮಾತ್ರ ಸದಾ ಪ್ರೇಮ, ಕರುಣೆ, ಸೇವೆ ಇವೇ ತುಂಬಿತುಳುಕುತ್ತಿದ್ದವು. ದೀನದಲಿತರು, ಬಡಬಗ್ಗರನ್ನು ಕಂಡರೆ ಅವನ ಹೃದಯ ಕರಗಿಹೋಗುತ್ತಿತ್ತು. ಒಂದು ಸಲ ಗುರುವಿನ ಆಶ್ರಮದಲ್ಲಿ ಕಹನಸಿಂಗ್ ಎನ್ನುವವನು ಗಾರೆ ಕೆಲಸ ಮಾಡುತ್ತಿದ್ದ. ಅಕಸ್ಮಾತ್ತಾಗಿ ಗುರುವಿನ ತಲೆಯ ಮೇಲೂ ಕೊಂಚ ಗಾರೆ ಬಿತ್ತು. ಗುರುವು ತಮಾಷೆಗೆ, “ಇಂಥ ಕೆಲಸಗಾರನಿಗೆ ಕಪಾಳಕ್ಕೆ ಎರಡು ಬಿಗಿಯಬೇಕು” ಎಂದ. ಕೂಡಲೇ ಅಲ್ಲಿದ್ದ ಶಿಷ್ಯರು ಆ ಬಡಪಾಯಿಯನನು ಹಿಡಿದು ಚೆನ್ನಾಗಿ ಚಚ್ಚಿದರು. ಅದನ್ನು ಕಂಡು ಗುರುವಿಗೆ ತುಂಬ ದುಃಖವಾಯಿತು. ಆ ಶಿಷ್ಯರಿಗೆ, “ನೀವೇನೋ ನನ್ನ ಆಜ್ಞೆಯನ್ನು ಒಂದಕ್ಕೆ ಹತ್ತುಪಟ್ಟು ಪಾಲಿಸಿದಿರಿ, ಸರಿಯೆ! ಆದರೆ ನನ್ನ ಇನ್ನೊಂದು ಆಜ್ಞೆಯನ್ನೂ ನೀವು ಪಾಲಿಸುವಿರಾ? ಪಾಪ, ಅವನು ಬಡವ; ಯಾರಾದರೂ ಅವನ ಮದುವೆ ವ್ಯವಸ್ಥೆ ಮಾಡಿ” ಎಂದ! ಅದರಂತೆ ಒಬ್ಬ ಶಿಷ್ಯ ಮುಂದೆ ಕಹನಸಿಂಗನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಿದ.

ಒಮ್ಮೆ ಗುರುವಿನ ಅಡಿಗೆ ಶಾಲೆಯಲ್ಲಿ ಆಹಾರ ಮುಗಿದುಹೋಯಿತು ಎಂದು ಬಂದವರಿಗೆ ಊಟ ಹಾಕಲಿಲ್ಲ. ಇದನ್ನು ನೋಡಿ ಗುರು ಗೋವಿಂದಸಿಂಹ ಕೆರಳಿ ಕೆಂಡವಾದ. ಕೊನೆಯ ಕಾಳು ಧಾನ್ಯ ಇರುವವರೆಗೂ ತನಗೆ ಊಟವಿಲ್ಲದಿದ್ದರೂ ಸರಿಯೆ, ಹಸಿದು ಬಂದವರಿಗೆ ಮೊದಲು ಊಟ ಹಾಕಬೇಕೆಂದು ಅವನು ಕಟ್ಟಪ್ಪಣೆ ಮಾಡಿದ.

ತನ್ನ ಶಿಷ್ಯರಲ್ಲಿ ಸೇವೆ, ನಿಷ್ಠೆ, ತ್ಯಾಗದ ಭಾವನೆಗಳು ಬೆಳೆಯಬೇಕೆಂದು ಗುರು ಗೋವಿಂದಸಿಂಹನು ಸದಾ ಎಚ್ಚರ ವಹಿಸುತ್ತಿದ್ದ. ಒಮ್ಮೆ ಒಬ್ಬ ಶ್ರೀಮಂತರ ಹುಡುಗ ಗುರುವಿಗೆ ಕುಡಿಯಲು ನೀರು ತಂದ. ಹುಡುಗನ ಮೃದುವಾದ ಕೈಗಳನ್ನು ನೋಡಿ ಗುರುವು, “ಇದುವರೆಗೆ ನೀನು ಯಾರಿಗಾದರೂ ಸೇವೆ ಮಾಡಿದ್ದೀಯಾ?” ಎಂದು ಕೇಳಿದ. ಹುಡುಗ ’ಇಲ್ಲ’ವೆಂದ. ಅದಕ್ಕೆ ಗುರುವು, “ಸೇವೆ ಮಾಡದೆ ಇರುವ ಕೈಗಳಿಂದ ನಾನು ನೀರು ಕುಡಿಯುವುದಿಲ್ಲ” ಎಂದು ಹುಡುಗನನ್ನು ವಾಪಸು ಕಳುಹಿಸಿಬಿಟ್ಟ.

ತನ್ನ ಶಿಷ್ಯರಲ್ಲಿ ಮೂಢ ನಂಬಿಕೆಗಳು ಬೆಳೆಯಬಾರದೆಂದು ಗುರುವಿನ ಇಚ್ಛೆ. ಒಮ್ಮೆ ಕೇಶವದಾಸನೆಂಬ ಪ್ರಸಿದ್ಧ ಬ್ರಾಹ್ಮಣ ಪಂಡಿತನು ಚಂಡಿ ಹೋಮ ಮಾಡಿದಲ್ಲಿ ಆ ರುದ್ರದೇವತೆ ಪ್ರಸನ್ನಳಗಿ ಯುದ್ಧದಲ್ಲಿ ಜಯ ಸಿಕ್ಕುತ್ತದೆಂದು ಹೇಳಿದ. ಆದರೆ ಅದಕ್ಕೆ ಗುರುವು, “ದೇವರ ಕೆಲಸಕ್ಕಾಗಿ ನಾವು ಪ್ರಾಣದ ಪಣ ಇಟ್ಟು ಹೋರಾಡಿದರೆ ಮಾಡತ್ರ ದೇವರು ನಮಗೆ ಜಯ ಕೊಡುತ್ತಾನೆ. ಇನ್ನಾವುದರಿಂದಲೂ ಅಲ್ಲ. ನೋಡಿ, ಈ ಕತ್ತಿಯಿಂದಲೇ ರಾಕ್ಷಸರ ಸಂಹಾರ, ಸಾಧುಗಳ ಸಂರಕ್ಷಣೆ ಆಗುತ್ತದೆ. ನನ್ನ ಜನರೇ ಇದುವರೆಗೆ ನನಗೆ ವಿವೇಕ, ವಿಜಯ, ವೈಭವ, ಎಲ್ಲವನ್ನೂ ತಂದು ಕೊಟ್ಟಿರುವವರು. ಅವರಿಗಾಗಿಯೇ ನನ್ನ ದೇಹ, ನನ್ನ ಆತ್ಮ ಎಲ್ಲವೂ ಮುಡಿಪು” ಎಂದು ಆವೇಶದಿಂದ ಉತ್ತರ ಕೊಟ್ಟ.

ಗುರು ಗೋವಿಂದಸಿಂಹನ ಆಧ್ಯಾತ್ಮಿಕ ತೇಜಸ್ಸು ವೈರಿಗಳನ್ನು ಸಹ ಒಂದೊಂದು ಸಲ ಮಿತ್ರರನ್ನಾಗಿ ಮಾಡುತ್ತಿತ್ತು. ಒಮ್ಮೆ ಆನಂದಪುರವನ್ನು ಮುತ್ತಿದ ಮೊಗಲ್ ಸೇನಾಪತಿಯಾದ ಸೈಯದ್ ಖಾನನು ತಾನೇ ಕೈಯಾರ ಗುರು ಗೋವಿಂದಸಿಂಹನನ್ನು ಕೊಲ್ಲಬೇಕೆಂದು ಬಂದ. ಆದರೆ ಗುರುವಿನ ಪವಿತ್ರ ಹಾಗೂ ಪ್ರಶಾಂತ ಮುಖಭಾವವನ್ನು ಕಂಡು ಅವನು ಮಾರುಹೋದ. “ನಿನ್ನನ್ನು ಹೊಡೆಯಲು ನನ್ನ ಕೈಗಳೇ ಏಳುತ್ತಿಲ್ಲ. ನೀನೇ ಮೊದಲು ಹೊಡಿ” ಎಂದು ಹೇಳಿದ. ಅದಕ್ಕೆ ಗುರುವು, “ಅದು ನನ್ನ ಮನೆತನದ ಸಂಪ್ರದಾಯಕ್ಕೆ ವಿರುದ್ಧ. ನೀನು ಹೊಡೆಯದಿದ್ದರೆ ನಾನೂ ಹೊಡೆಯುವುದಿಲ್ಲ” ಎಂದು ಉತ್ತರಿಸಿದ. ಈ ಮಾತನ್ನು ಕೇಳಿ ಆ ಸೇನಾಪತಿಯ ಮನಸ್ಸು ಪೂರ್ತಿ ಕರಗಿಹೋಯಿತು.

ಅವನು ಕುದುರೆಯಿಂದಿಳಿದು ಗುರುವಿನ ಕಾಲಿಗೆರಗಿದ. ಗೋವಿಂದಸಿಂಹನು ಅವನನ್ನು ದೇವರ ಹೆಸರಿನಲ್ಲಿ ಆಶೀರ್ವದಿಸಿದ.

’ಯಾವ ಧರ್ಮದವರಿಗೂ ತೊಂದರೆಯಾಗಬಾರದು’

ಗುರು ಗೋವಿಂದಸಿಂಹನು ಒಂದಾದಮೇಲೊಂದರಂತೆ ಗಳಿಸುತ್ತಿದ್ದ ಪ್ರಚಂಡ ವಿಜಯಗಳಿಂದ ಔರಂಗಜೇಬನ ನಿದ್ರೆ ಹಾರಿಹೋಯಿತು. ಔರಂಗಜೇಬನು ಆಗ ದಕ್ಷಿಣದಲ್ಲಿ ಮರಾಠರ ವಿರುದ್ಧ ಸಾವು-ಬದುಕಿನ ಹೋರಾಟದಲ್ಲಿ ತೊಡಗಿದ್ದ. ಆದ್ದರಿಂದ ಗುರು ಗೋವಿಂದಸಿಂಹನನ್ನು ಉಪಾಯವಾಗಿ ತನ್ನ ಕಡೆಗೆ ಒಲಿಸಿಕೊಳ್ಳಬೇಕೆಂದು ಯೋಚಿಸಿ ಒಂದು ಸಂದೇಶ ಪತ್ರವನ್ನು ಕಳುಹಿಸಿಕೊಟ್ಟ. ಅದರಲ್ಲಿ ಅವನು, ’ನಾನು ಈ ಭೂಮಂಡಲದ ಮೇಲೆ ನನ್ನ ಒಡೆತನವನ್ನು ಸರ್ವಶಕ್ತ ಅಲ್ಲಾನಿಂದ ಪಡೆದಿದ್ದೇನೆ. ನೀನು ಅಥವಾ ಇನ್ನು ಯಾರೇ ಆಗಲ ಅದನ್ನು ಒಪ್ಪಲೇ ಬೇಕು. ನಿನಗೇನಾದರೂ ತೊಂದರೆಗಳಿದ್ದಲ್ಲಿ ನನ್ನನ್ನು ಬಂದು ಕಾಣು. ನೀನೊಬ್ಬ ಸಾಧು ಎಂದು ಗೌರವಿಸುವೆ. ಆದರೆ ನನ್ನ ಅಧಿಪತ್ಯಕ್ಕೆ ಮಾತ್ರ ನೀನು ಸವಾಲು ಹಾಕಕೂಡದು. ಇಲ್ಲವಾದರೆ ನಾನೇ ನಿನ್ನ ಮೇಲೆ ದಂಡೆತ್ತಿ ಬರಬೇಕಾದೀತು’ ಎಂದು ಬರೆದಿದ್ದ. ಈ ಪತ್ರದಲ್ಲಿ ಗುರುವನ್ನು ಸಾಧು ಎಂದು ಕರೆದು ಮರುಳುಗೊಳಿಸುವ ಉಪಾಯವೂ ಇತ್ತು; ಎದುರುಬಿದ್ದಲ್ಲಿ ವಿನಾಶ ಕಾದಿದೆಯೆಂಬ ಬೆದರಿಕೆಯೂ ಇತ್ತು.

ಆದರೆ ಬಾದಶಹನನ್ನು ಖುದ್ದಾಗಿ ಹೋಗಿ ಭೇಟಿಮಾಡುವುದೆಂದರೆ ಸಾವಿನ ಬಲೆಗೆ ಬಿದ್ದಂತೆಯೇ ಎಂದು ಗುರು ಗೋವಿಂದಸಿಂಹನಿಗೆ ಅರಿವಾಯಿತು. ಔರಂಗಜೇಬನ ಗಾಳಕ್ಕೆ ಬಾಯೊಡ್ಡುವಷ್ಟು ಗುರುವು ಹೆಡ್ಡನಾಗಿರಲಿಲ್ಲ. ಬಾದಶಹನ ಪತ್ರಕ್ಕೆ ಅವನು ಹೀಗೆ ಉತ್ತರ ಬರೆದ: ’ನಿನಗೂ ನನಗೂ ಎಲ್ಲರಿಗೂ ಸರ್ವಶಕ್ತ ಭಗವಂತನೊಬ್ಬನೇ ಒಡೆಯ. ಆದರೆ ನಿನಗೆ ಈ ಮಾತು ಒಪ್ಪಿಗೆಯಿಲ್ಲ. ಯಾವ ಧರ್ಮದವರಿಗೂ ಕಿರುಕುಳ ಕೊಡಬಾರದೆಂದು ನನ್ನ ನಂಬಿಕೆ. ಈ ಭೂಮಿಯಲ್ಲಿ ಧರ್ಮಸ್ಥಾಪನೆ ಮಾಡಲು ದೇವರು ನನ್ನನ್ನು ಕಳುಹಿಸಿ ಕೊಟ್ಟಿದ್ದಾನೆ. ನಮ್ಮಿಬ್ಬರ ದಾರಿಗಳೂ ಹೀಗೆ ಬೇರೆ ಬೇರೆಯಾಗಿರುವವರೆಗೆ ನಿನ್ನೊಂದಿಗೆ ನಾನು ಶಾಂತಿಯಿಂದ ಹೇಗಿರಲಿ?’

ಔರಂಗಜೇಬನಿಗೆ ಪಾಠ

ಔರಂಗಜೇಬನಿಗೆ ಈಗ ನಿಜಕ್ಕೂ ಹೃದಯಕಂಪನ ಆರಂಭವಾಯಿತು. ಇನ್ನು ತನ್ನ ದೆಹಲಿ ಸಿಂಹಾಸನಕ್ಕೆ ಸಂಚಕಾರ ಬಂದಿದೆ ಅನ್ನಿಸಿತು. ಆಗ ಅವನು ದೆಹಲಿ, ಸರ್‌ಹಿಂದ್, ಲಾಹೋರ್‌ಗಳಲ್ಲಿದ್ದ ತನ್ನ ಸಮಸ್ತ ಸೈನ್ಯಕ್ಕೂ ಆನಂದಪುರಕ್ಕೆ ಮುತ್ತಿಗೆ ಹಾಕುವಂತೆ ಆಜ್ಞಾಪಿಸಿದ. ಸರ‍್ ಹಿಂದದ ವಜೀರಖಾನನನ್ನು ಆ ಎಲ್ಲ ಸೈನ್ಯಗಳಿಗೆ ಮಹಾದಂಡನಾಯಕನನ್ನಾಗಿ ನೇಮಿಸಿದ. ಈ ಬಾರಿಯೂ ಎಲ್ಲ ಹಿಂದು ರಾಜರೂ ಮೊಗಲ್ ಸೈನ್ಯಕ್ಕೆ ನೆರವಾದರು.

ಒಂದಕ್ಕೆ ಹತ್ತು ಪಟ್ಟು ಹೆಚ್ಚಾಗಿದ್ದ ಶತ್ರು ಸೈನ್ಯದ ವಿರುದ್ಧವಾಗಿ ಗುರು ಗೋವಿಂದನಸಿಂಹನ ಸೈನಿಕರು ಅತುಲ ಶೌರ್ಯದಿಂದ ಕಾದತೊಡಗಿದರು. ಶತ್ರು ಸೈನ್ಯಕ್ಕೆ ಭಾರೀ ಸಾವುನೋವುಗಳನ್ನು ಉಂಟುಮಾಡಿದರು. ಆದರೆ ದಿನ ಕಳೆದಂತೆ ಆನಂದಪುರದ ಕೋಟೆಯೊಳಗಿನ ಆಹಾರ, ನೀರು ಮುಗಿಯುತ್ತಾ ಬಂತು. ಸೈನಿಕರು ಗಿಡದ ತೊಗಟೆ ಮತ್ತು ಎಲೆಗಳಿಂದ ಹಿಟ್ಟು ಮಾಡಿಕೊಂಡು ತಿನ್ನ ಬೇಕಾಯಿತು. ಆದರೂ ಶತ್ರುವಿಗೆ ಶರಣು ಬರಲಿಲ್ಲ. ಹೀಗೆಯೇ ಏಳು ತಿಂಗಳು ಉಗ್ರ ಕಾಳಗ ನಡೆಯಿತು. ಆಗ ವಜೀರಖಾನನು ಒಂದು ಹಂಚಿಕೆ ಹೂಡಿ ಸಂಧಿ ಪತ್ರವನ್ನು ಕಳುಹಿಸಿಕೊಟ್ಟ. ಅದರ ಪ್ರಕಾರ ಗುರುವು ತನ್ನ ಸೈನಿಕರು, ಪರಿವಾರ ಮತ್ತು ಆಸ್ತಿಪಾಸ್ತಿಗಳೊಂದಿಗೆ ಕೋಟೆಯಿಂದ ಹೊರಕ್ಕೆ ಸುರಕ್ಷಿತವಾಗಿ ತನ್ನಿಷ್ಟಬಂದಲ್ಲಿಗೆ ಹೋಗಬಹುದು; ಗುರುವು ಆನಂದಪುರ ಬಿಟ್ಟೊಡನೆ ಮೊಗಲ್ ಸೈನ್ಯವು ವಾಪಸಾಗುವುದು; ಸ್ವಲ್ಪ ಕಾಲದ ನಂತರ ಗುರುವು ಇಚ್ಛಿಸಿದಲ್ಲಿ ಮತ್ತೆ ಆನಂದಪುರಕ್ಕೆ ವಾಪಸು ಬರಬಹುದು; ಇದು ಆ ಸಂಧಿ ಪತ್ರದ ಸಾರಾಂಶ.

ತನ್ನನ್ನು ಕೋಟೆಯಿಂದ ಹೊರಗೆ ಬರುವಂತೆ ಮಾಡುವ ಕುಟಿಲ ತಂತ್ರ ಇದು ಎಂಬುದು ಗುರು ಗೋವಿಂದಸಿಂಹನಿಗೆ ಅರಿವಾಯಿತು. ಶತ್ರುವಿನ ಮೋಸವನ್ನು ಬಯಲು ಮಾಡಲು ಅವನು ಒಂದು ಮರು ಹಂಚಿಕೆಯನ್ನು ಹೂಡಿದ. ತನ್ನ ರಾಜಧಾನಿಯ ಬೆಲೆ ಬಾಳುವ ವಸ್ತುಗಳನ್ನೂ ಐಶ್ವರ್ಯವನ್ನೂ ಮೊದಲು ಸಾಗಿಸುವುದಾಗಿಯೂ ಅದಕ್ಕಾಗಿ ಎತ್ತಿನ ಬಂಡಿಗಳನ್ನು ಕಳುಹಿಸಿಕೊಡಬೇಕೆಂದು ಗುರುವು ಖಾನನಿಗೆ ವಿನಂತಿ ಮಾಡಿದ. ಖಾನನು ತನ್ನ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತೆಂದು ಕುಣಿದಾಡಿದ. ಎತ್ತಿನ ಬಂಡಿಗಳನ್ನು ಕಳುಹಿಸಿಕೊಟ್ಟ. ಆದರೆ ಗುರುವು ಆ ಬಂಡಿಗಳಲ್ಲಿ ಕೇವಲ ಹಳೆಯ ಬಟ್ಟೆಗಳನ್ನೂ ಬಿಸಾಡುವ ವಸ್ತುಗಳನ್ನೂ ಅಲಂಕಾರವಾಗಿ ತುಂಬಿ ಮಧ್ಯರಾತ್ರಿಯ ವೇಳೆಗೆ ಹೊರಕ್ಕೆ ಕಳುಹಿಸಿದ. ಆ ಬಂಡಿಗಳ ಸಾಲು ತಮ್ಮ ಪಾಳಯಕ್ಕೆ ಒಂದೊಡನೆ ಮೊಗಲ್ ಸೈನಿಕರು ಅದರ ಮೇಲೆ ಬಿದ್ದು ಅಷ್ಟನ್ನೂ ಅಪಹರಿಸಿಕೊಂಡು ಹೋದರು. ಬೆಳಗ್ಗೆ ಎದ್ದು ಗಂಟು ಬಿಚ್ಚಿ ನೋಡಿದರೆ ಅಲ್ಲೇನಿದೆ? ಬರೇ ಹರಕಲು ಬಟ್ಟೆ, ಮುರುಕಲು ಸಾಮಾನು!

ಇದರಿಂದ ಮೊಗಲ್ ಬಾದಶಹನ ವಚನಕ್ಕೆ ಎಷ್ಟು ಬೆಲೆಯಿದೆ ಎಂಬುದು ಲೋಕಕ್ಕೆಲ್ಲ ಬಹಿರಂಗವಾಯಿತು. ಗುರು ಗೋವಿಂದಸಿಂಹನ ಮುಂದೆ ಮೊಗಲ್ ಸಾಮ್ರಾಜ್ಯದ ಮಾನ ಮಣ್ಣುಪಾಲಾಯಿತೆಂಬುದು ಖಾನನಿಗೆ ಗೊತ್ತಾಯಿತು. ಅದರಿಂದ ಅವನು ಇನ್ನೊಮ್ಮೆ ಬಾದಶಹನೇ ರುಜು ಹಾಕಿದ ಪತ್ರದಲ್ಲಿ ಕ್ಷಮೆ ಬೇಡಿ ಅದೇ ರೀತಿಯ ಇನ್ನೊಂದು ಸಂಧಿ ಪತ್ರವನ್ನು ಕಳುಹಿಸಿದ.

’ದೇವರೆ, ನಿನ್ನದೇ ಆದ ವಸ್ತುವನ್ನು ನಿನಗೇ ಆರ್ಪಿಸಿದ್ದೇನೆ’

[/fusion_builder_column][fusion_builder_column type=”1_1″ background_position=”left top” background_color=”” border_size=”” border_color=”” border_style=”solid” spacing=”yes” background_image=”” background_repeat=”no-repeat” padding=”” margin_top=”0px” margin_bottom=”0px” class=”” id=”” animation_type=”” animation_speed=”0.3″ animation_direction=”left” hide_on_mobile=”no” center_content=”no” min_height=”none”]

ದೇವರೇ, ನಿನ್ನದೇ ಆದ ವಸ್ತುವನ್ನು ನಿನಗೇ ಅರ್ಪಿಸಿದ್ದೇನೆ’

ಆ ವೇಳೆಗೆ ಗುರು ಗೋವಿಂದಸಿಂಹನಿಗೂ ಬಿಕ್ಕಟ್ಟಿನ ಪ್ರಸಂಗ ಬಂದಿತು. ಕೋಟೆಯೊಳಗೇ ಉಳಿದು ಹಸಿವಿನಿಂದ ಸಾಯಬೇಕೆ? ಇಲ್ಲವೇ ಹೇಗಾದರೂ ಕೋಟೆಯಿಂದ ತಪ್ಪಿಸಿಕೊಂಡು ಹೋಗಿ ಪುನಃ ತನ್ನ ಜನರನ್ನು ಸಂಘಟನೆ ಮಾಡಿ ಹೋರಾಟ ಮುಂದುವರಿಸಬೇಕೆ? ವ್ಯರ್ಥವಾಗಿ ಹೋರಾಟದಲ್ಲಿ ಪ್ರಾಣ ಕೊಡುವುದಕ್ಕಿಂತ ಬದುಕಿದ್ದು ಮತ್ತೆ ಹೋರಾಡಿ ಗೆಲ್ಲುವುದು ಮುಖ್ಯ ಎಂಬುದು ಗುರುವಿನ ಸಿದ್ಧಾಂತ. ಅದರಂತೆ ಅವನು ತನ್ನ ಮುಂದಿನ ಯೋಜನೆಗಳನ್ನೆಲ್ಲ ನಿಶ್ಚಯಿಸಿದ. ಶತ್ರುವಿನ ಕೈಗೆ ಸಿಕ್ಕದಂತೆ ಕೋಟೆಯಲ್ಲಿನ ಅಮೂಲ್ಯ ಸಾಮಗ್ರಿಗಳನ್ನೆಲ್ಲ ನೆಲದೊಳಗೆ ಗುಪ್ತವಾಗಿ ಹೂತಿಟ್ಟ. ಉಳಿದವುಕ್ಕೆಲ್ಲ ಬೆಂಕಿಯಿಟ್ಟ. ಅನಂತರ ಗುರುವಿನ ತಾಯಿ ಗುಜರಿದೇವಿಯು ಗುರುವಿನ ಇಬ್ಬರು ಕಿರಿಯ ಮಕ್ಕಳೊಂದಿಗೆ ಗುಟ್ಟಾಗಿ ಹೊರಟು ಸಿರ್ಸಾ ಎಂಬ ಊರಿಗೆ ತಲುಪಿದಳು. ಐನೂರು ನಂಬಿಗಸ್ಥ ಸೈನಿಕರೊಡನೆ ಗುರು ಗೋವಿಂದಸಿಂಹ ಮತ್ತು ಅವನ ಇಬ್ಬರು ದೊಡ್ಡ ಮಕ್ಕಳು ಹೊರಬಿದ್ದರು. ಈ ಘಟನೆ ನಡೆದುದು ೧೭೦೪ರ ಡಿಸೆಂಬರ‍್ ತಿಂಗಳ ಕೊರೆಯುವ ಛಳಿ ರಾತ್ರಿಯಲ್ಲಿ.

ಈ ಸಲವೂ ವಜೀರಖಾನನು ತನ್ನ ಮಾತಿಗೆ ತಪ್ಪಿದ. ಮೊಗಲ್ ಸೈನಿಕರು ಪುನಃ ಗುರು ಗೋವಿಂದಸಿಂಹನ ಬೆನ್ನಟ್ಟಿದರು. ಆಗ ಸಿರ್ಸಾ ಬಳಿ ಗುರುವಿನ ಸೈನಿಕರು ಮೊಗಲ್ ಸೈನ್ಯವನ್ನು ತಡೆಗಟ್ಟಿ ನಿಂತರು. ೪೦ ಸೈನಿಕರೊಂದಿಗೆ ಗುರುವು ಮುಂದೆ ಹೊರಟ. ಗುರುಗೋವಿಂದ ಸಿಂಹನೂ ಅವನ ಸಂಗಡಿಗರು ಚಮಕೋರ‍್ ಎಂಬ ಮಣ್ಣಿನ ಕೋಟೆಯಲ್ಲಿ ಮತ್ತೆ ಶತ್ರುಗಳನ್ನು ಎದುರಿಸಬೇಕಾಯಿತು. ಆಗ ಅವನ ಹಿರಿಯ ಮಕ್ಕಳಾದ ಅಜಿತ್‌ಸಿಂಗ್ ಮತ್ತು ಜಜಾರ್‌ಸಿಂಗ್ ಮುಂದಾಳತ್ವ ವಹಿಸಿ ಹೋರಾಡಬೇಕೆಂದು ಗುರು ಆಜ್ಞಾಪಿಸಿದ. ಅವರು ಪರಾಕ್ರಮದಿಂದ ಹೋರಾಡುತ್ತಾ ತಂದೆಯ ಕಣ್ಣೆದುರಿಗೇ ಪ್ರಾಣ ಒಪ್ಪಿಸಿದರು. ತನ್ನ ಸ್ವಂತ ಮಕ್ಕಳು ಈ ರೀತಿ ಹತರಾಗಿ ಬಿದ್ದುದನ್ನು ಕಂಡು ಗುರು ಗೋವಿಂದಸಿಂಹನು ದೇವರಿಗೆ ಕೈಜೋಡಿಸಿ, “ದೇವರೇ, ನಿನ್ನದೇ ಆದ ವಸ್ತುವನ್ನು ನಿನಗೇ ಅರ್ಪಿಸಿದ್ದೇನೆ” ಎಂದು ಹೇಳಿದ.

ಕಷ್ಟಗಳ ಬೆಂಕಿಯಲ್ಲಿ

ಈಗ ಗುರುವಿನೊಂದಿಗೆ ಉಳಿದುಕೊಂಡವರು ಕೇವಲ ಐದು ಜನ. ಗುರುವನ್ನು ಶತ್ರುಗಳ ಕೈತಪ್ಪಿಸಿ ಪಾರು ಮಾಡಬೇಕೆಂದು ಅವರು ತೀರ್ಮಾನಿಸಿದರು. ಆದರೆ ಅವರನ್ನು ಬಿಟ್ಟು ತಾನೊಬ್ಬನೇ ಪ್ರಾಣ ಉಳಿಸಿಕೊಂಡು ಹೋಗಲು ಗುರು ಗೋವಿಂದಸಿಂಹನು ಒಪ್ಪಲಿಲ್ಲ. “ನಾನು ನಿಮ್ಮೊಂದಿಗೇ ನಿಂತು ಹೋರಾಡುತ್ತಾ ಪ್ರಾಣ ನೀಡುವೆ” ಎಂದು ಹೇಳಿದನು. ಆಗ ಆ ಐದು ಜನರು ಹೇಳಿದರು: “ಐದು ಜನ ಶಿಷ್ರು ಸೇರಿ ತೀರ್ಮಾನ ಕೊಟ್ಟಿದ್ದನ್ನು ನಾನು ಪಾಲಿಸುವೆ, ಎಂದು ನೀವು ಪದೇ ಪದೇ ಹೇಳಿದ್ದಿರಿ. ಈಗ ಅದರಂತೆ ನಾವು ಆಜ್ಞಾಪಿಸುತ್ತಿದ್ದೇವೆ. ನೀವು ಕೂಡಲೇ ಈ ಜಾಗ ಬಿಟ್ಟು ಪಾರಾಗಿ ಹೋಗಬೇಕು. ಶತ್ರುವಿನ ಸಮಾಚಾರ ನಾವು ನೋಡಿಕೊಳ್ಳುತ್ತೇವೆ.”

ಗುರುವು ಅವರ ಮಾತಿಗೆ ಒಪ್ಪಬೇಕಾಯಿತು. ತನ್ನ ಐವರ ಶಿಷ್ಯರನ್ನು ಆಲಿಂಗಿಸಿ ಆಶೀರ್ವದಿಸಿದ. ಅವರ ಪೈಕಿ ಇಬ್ಬರು ಶಿಷ್ಯರು ಅಲ್ಲೇ ಉಳಿದರು. ಮತ್ತು ಮೂವರು ಶಿಷ್ಯರು ನಡುರಾತ್ರಿ ಕತ್ತಲಲ್ಲಿ ಗುರುವಿನೊಂದಿಗೆ ಮುಂದೆ ಹೊರಟರು. ಆಕಾರದಲ್ಲಿ ಗುರು ಗೋವಿಂದಸಿಂಹನನ್ನು ಹೋಲುತ್ತಿದ್ದ ಸಂತ ಸಿಂಗ್ ಎಂಬಾತ ಗುರುವಿನ ವೇಷ ಹಾಕಿಕೊಂಡು ಅಲ್ಲೆ ನಿಂತ. ಮರುದಿನ ಮುಂಜಾನೆ ಮೊಗಲ್ ಸೈನಿಕರು ಅವನನ್ನೇ ಸೆರೆಹಿಡಿದು ಗುರು ಸಿಕ್ಕಿದನೆಂದು ಕುಣಿದಾಡತೊಡಗಿದರು. ಇದರಿಂದ ಗುರುವು ಪಾರಾಗಿ ಹೋಗಲು ಸ್ವಲ್ಪ ಸಮಯ ಸಿಕ್ಕಂತಾಯಿತು. ಆದರೆ ತಮ್ಮ ಕೈಗೆ ಸಿಕ್ಕಿದವನು ಗುರು ಗೋವಿಂದಸಿಂಹನಲ್ಲ ಎಂಬುದು ಶತ್ರುಗಳಿಗೆ ತಿಳಿದಾಗ ಅವರಿಗಾದ ನಿರಾಶೆ ಹೇಳತೀರದು. ಆ ಇಬ್ಬರು ಶಿಷ್ಯರನ್ನು ಕತ್ತರಿಸಿಹಾಕಿ ಮತ್ತೆ ಅವರು ಗುರು ಗೋವಿಂದನ ಬೆನ್ನಟ್ಟಿ ಹೊರಟರು. ಕಾಡುಮೇಡುಗಳಲ್ಲಿ ಬರಿಗಾಲಿನಲ್ಲಿ ನಡೆಯುತ್ತಾ ಎಷ್ಟೋ ಬಾರಿ ಒಂಟಿಗನಾಗಿ ತಲೆ ಮರೆಸಿಕೊಳ್ಳುತ್ತಾ ಗುರು ಗೋವಿಂದಸಿಂಹನು ನೂರಾರು ಮೈಲಿ ಹೋಗಬೇಕಾಯಿತು.

ಗುರುವು ಹೀಗೆ ತಪ್ಪಿಸಿಕೊಂಡು ಹೋಗುತ್ತಿದ್ದುದಾದರೂ ಎಲ್ಲಿಗೆ? ಕೇವಲ ಜೀವ ಉಳಿಸಿಕೊಳ್ಳಲೆಂದೇ? ಅಲ್ಲ, ಸರ್ವಥಾ ಅಲ್ಲ. ಅವನ ಕಣ್ಮುಂದೆ ಒಂದು ದೊಡ್ಡ ಯೋಚನೆ ಇತ್ತು. ಪಂಜಾಬಿನಿಂದ ದಕ್ಷಿಣಕ್ಕೆ ರಾಜಸ್ಥಾನದಲ್ಲಿ ಮೊಗಲ್ ಬಾದಶಹನ ವಿರುದ್ಧ ಕೆಚ್ಚಿನಿಂದ ಕಾದುತ್ತಿದ್ದ ಕೆಲವು ಹಿಂದು ರಾಜರುಗಳಿದ್ದರು. ಹಾಗೆಯೇ ಇನ್ನೂ ದಕ್ಷಿಣದಲ್ಲಿ ಶಿವಾಜಿಯ ಅನುಯಾಯಿಗಳು ಔರಂಗಜೇಬನನ್ನು ಹಣ್ಣುಹಣ್ಣು ಮಾಡುತ್ತಿದ್ದರು. ಈ ಎಲ್ಲರನ್ನೂ ಒಂದುಗೂಡಿಸಿದರೆ ಮೊಗಲರಿಗೆ ಸೋಲಾಗುವುದು ಖಚಿ[/fusion_builder_column][/fusion_builder_row][/fusion_builder_container]