ಯೇನ ತಿಳಿದಿನ್ನೇನಾ | ಗಳಿಸಿನ್ನೇನ ಫಲವಣ್ಣ ಗುರುಧ್ಯಾನವಿಲ್ಲದ
ನರನ ಜನ್ಮವು ವ್ಯರ್ಥ ಕಾಣಣ್ಣ
ಏನು ಇಲ್ಲದ ಬಯಲಿನೊಳು | ತಾನೇನು ಕಾರಣ ಮಾಡು ದೀ
ಜಗ ಏನು ಇದರ ಸ್ವರೂಪವೆಂಬುದು | ಮೊದಲು ತಿಳಿಯಣ್ಣ     || ೧ ||

ಜ್ಞಾನಗುರುವಿನ ಪದವಪಿಡಿದು || ಸ್ವಾಮಿ ಭವಸಿದ್ಧಾಂತವೆಂಬ |
ಶಿವಾನುಭವವ ತಿಳಿಯೆ ಸಾರ್ಥಕ | ಜನ್ಮಕ ಹುದಣ್ಣ    || ೨ ||

ಹುಟ್ಟುಸಾವಿನ || ಬೀಜಯಾವುದು || ಮೊಟ್ಟ ಮೊದಲಿದನರಿತು |
ಅದನ್ನು | ಸುಟ್ಟು | ಜ್ಞಾನಾನ್ನಿಯೊಳು | ನೆನೆ ಬೆಳಗಬೇಕಣ್ಣಾ |
ಹಿಂದೆ ಮಾಡಿದ ಪುಣ್ಯ ಫಲದಿಂದ | ಬಂದೆ ಶ್ರೇಷ್ಠನೆನಸುವಾ ||
ಮುಕ್ತಿ ನೀನಣ್ಣಾ || ಇಷ್ಠಪ್ರಾಣ ಭಾವನೆಂಬುವ | ಗುಟ್ಟನರಿಯತೆ |
ಗುರುಕಟಾಕ್ಷದಿ || ನಿಷ್ಠೆಯಂದಿದೆ ಶ್ರೇಷ್ಠ ನೆನೆಸುವಾ ||
ಮುಕ್ತಿ ನೀನಣ್ಣ ಹಿಂದೆ ಮಾಡಿದ ಪುಣ್ಯ ಫಲದಿಂದ |
ಬಂದೆ ಶ್ರೇಷಾಂಗದೊಳು ಮಾನವ
ಮುಂದೆ ಜನಿಸುವಾ | ತೆರದಿ ಜ್ಞಾನವ | ಮುಂದೆ
ಜನಿಸುವಾ | ತೆರದಿ ಜ್ಞಾನವ ಮುಂದೆ
ಜನಿಸುವ | ತೆರದಿ ಜ್ಞಾನವ ಪಡೆಯಬೇಕಣ್ಣಾ ||
ಬಂಧ ಮೋಕ್ಷಗಳೆಂಬ ಎರಡರ
ಸಂದು ತಿಳಿದರೆ | ಗುರುಪಾದಾಂಬದಿ || ಬಂದನವನು |
ಕಳೆದುಳಿದು | ಮೋಕ್ಷವಾ ಪಡೆವೆ ಕೇಳಣ್ಣಾ |
ಅರಿಯದಿರ ಈ ತಪ್ಪಿದರ್ಥವಾ || ನರಕಯಾತನೆ
ಕೊನೆಗೂ ತಪ್ಪದು |
ತರಿಯೆ ಸಂಚಿತವನ್ನು || ಅಷ್ಟಾಕ್ಷರಿಯ, ಸರಿಯಣ್ಣಾ |
ಪರಮಗುರುವಿನ ಸದನಪಿಡಿದು | ಅರಿಯೆ
ನಿನ್ನನು ನೀನು || ಗುರುಣಾಂ ಗುರುವೆನಿಸಿ
ಇಹಪರದಿ ಸುಕ್ರುತವ ಪಡೆವೆ ಕೇಳಣ್ಣಾ |
ಅರಿಯಲಿ || ಈ ತತ್ವರ್ಥ ಯಾದರೆ ಫಾನಿಯ | ಮೂರ್ತಿಯ ||
ನಿಸಿಹಾ || ಪರಮ ಸದ್ಗುರು | ವರನ ಕುರುಡನ | ಪೇಳ್ವ ಕೇಳಣ್ಣ ||
ಧರಣಿಯೊಳ | ಮೆರೆಯುತಿಹ ರಂಭಾಪುರಿಯ ಶ್ರೀಗುರು
ರೇಣುಕಾಚಾರ್ಯರ | ಚರಣ ಕಮಲವ ಭಜಿಸಿ | ಸತ್ಯುದಿ |
ಮುಕ್ತಿ | ಹೌದಣ್ಣ ||