ಗುರು ಬಂದ ಹರ ಬಂದ ಶಿವ
ಬಂದ ಮನೆಗೆ | ಗುರುವು ರೇವಣ್ಣ
ಸಿದ್ದ ತಾ ಬಂದ || ಪ ||

ಎಂದೂ ಬರದ ಗುರುವು ಇಂದು ತಾ ಬಂದ
ಆನಂದ ಪದವಿಯ ನಿನಗಾಗಲೆಂದ || ಗುರು ||

ಮುಕ್ಕಣ್ಣ ಶಿವ ತಾನೇ ಭಿಕ್ಷಕ್ಕೆ ತಾ ಬಂದ
ಭಿಕ್ಷವ ನೀಡಿದರೆ ನಿಮಗೆಂದ || ಪ ||

ಚಿನ್ನದ ಹಾವಿಗೆ ರನ್ನದ ಮುತ್ತು ಹೊನ್ನಿನ
ಜೋಳಿಗೆ ಧರಿಸುತ್ತ ಬಂದ || ಪ ||

ಕುಂಟ ಕುರುಡರಿಗೆಲ್ಲಾ ಕಣ್ಣು ಕಾಲು ತಂದ
ಇಂಥ ಬರಡು ಗೋವಿನ ಹಾಲು ಕರೆದು
ಹಾಲುಂಡ || ಗುರು ||

ಹಸು ಮಕ್ಕಳನ್ನು ನೋಡಿ ನಸುನಗುತ್ತ
ಬಂದ ಇಂಥ ಅಸನಾಗಿ ಓದಿಸಲು ಶ್ರೀಗುರು
ಬಂದ || ಗುರು ||

ಧರೆಯೊಳ್ ಪೊಲ್ಲಿಯ ದಾಂಟಿ ಪುರದಿಂದ
ಬಂದ ಇಂಥ ಭಕ್ತರ ಪೊರೆಯಲು ರಂಭಾ
ಪುರದೊಳುದಿಂದ || ಗುರು ||