ಅಂತರಂಗದ ಜ್ಯೋತಿ ಬೆಳಗಿರೆ ನೋಡಯ್ಯ ನಿರಂತರದಿ
ತಿಳಿಯುತಿದೆ ಹಾಡಯ್ಯ || ಪ || ಷಡುಸ್ಥಳದಿ ನಿತ್ಯಾ ತಾನಾಡು
ತಿಹುದು ಷಡುಸಪ್ತಕದ ತತ್ವಕ್ಕೆ ತಾ ಮೂಲವಹುದು ||
ಆರನೇಯ ಚಕ್ರದೀ || ತಾನು || ಆಡುತ್ತ ಕ್ಷಣದೊಳ್ || ೧ ||

ಒಳಹೊರಗೆ ಎಂಬ ಭೇದ ಭಾವವೆಯಡಗೀ ತಿಳಿದೊಳಗೆ
ಲಿಂಗವಾದ ಭಾವದೊಳಡಗೀ | ತಳ ತಳದಿ ಬೆಳಗುತ್ತ
ಲಿಂಗಸಂಗಮವಾಗಿ | ಪಳ ಪಳನೆ ಹೊಳೆಯುತ್ತ ರಂಗ
ಮಂಟಪದಿ || ೨ || ಅರಿವರ್ಗವನು ಮೀರಿ | ಗುರು
ವರ್ಗವನು ಹಿಡಿದು ಗುರುಮಾರ್ಗವನು ಸಾರಿ | ಮೂರುತನ

ಬಡಿದು ಏರಿ ಲಕ್ಷದಳದ ರತ್ನಮಂಟಪದೊಳಗೆ | ತೋರಿ
ಲಕ್ಷಾರ್ಥವನು ನಿತ್ಯ ಅಖಂಡದೊಳಗೆ || ೩ ||

ಜನನ ಮರಣವ ಕೆಡಸಿ ನಿತ್ಯುಸ್ಥಾನ ನದಿ ನಿಂದು ಮನ
ಕರಣಗಳ ಮಡಸಿ ಸತ್ಯ ಜಲದೊಳು ನಿಂದು ಜಾರಿ
ಮರುತನಕೂಡಿ ಘನ ನಿಜಸಂಗನವಾಡಿ | ಲಿಂಗದೊಳಾಡಿ
ಗಿರಿಯ ಮೂರುತಿ ನೋಡಿ ಇಹದ ಸತ್ಯವ ಮರೆತು
ಪರಸೌಖ್ಯವನು ಆಯಸಿ ಮಹದಸತ್ಯಕುರಿತು ಅನಿತ್ಯವ
ಲಯಿಸಿ ಬೆರೆದು ನಿಜಶರಣಂ ಸಂಗ ಮುದ್ದು
ರೇವೇಶನ ಬೇಡಿ ಪರಿಪೂರ್ಣ ಲಿಂಗವಹ ರೇಣುಕನ ಕೂಡಿ ||