ರಾಜ್ಯ ವಲಯ ಯೋಜನೆ

) ಷೇರು ಬಂಡವಾಳ ಹೂಡಿಕೆ. ೨) ನೇಯ್ಗೆ ಪೂರ್ವ ಮತ್ತು ನಂತರ ಸಂಸ್ಕೃರಣ ಘಟಕ ಸ್ಥಾಪನೆಗೆ ಆರ್ಥಿಕ ನೆರವು. ೩) ಮಾರಾಟ ಮಳಿಗೆ ಮತ್ತು ಉಗ್ರಾಣ ನಿರ್ಮಾಣಕ್ಕಾಗಿ ಆರ್ಥಿಕ ನೆರವು. ೪) ಕಾರ್ಯಗಾರ ನಿರ್ಮಾಣಕ್ಕೆ ಆರ್ಥಿಕ ನೆರವು .

) ನಬಾರ್ಡ್ : ಈ ಯೋಜನೆಯಲ್ಲಿ ಕೈಮಗ್ಗ ಸಹಕಾರ ಸಂಘಗಳಿಗೆ ದುಡಿಯುವ ಬಂಡವಾಳ ಉತ್ಪಾದನಾ ಬೆಲೆಯ ೪೦% ಹೆಚ್ಚಿ ಉತ್ಪಾದನಾ ಮೇಲೆ ೨೦% ಸಾಲ ಮತ್ತು ದುಡಿಮೆ ಬಂಡವಾಳ ಸಾಲ ನೀಡುವುದು.

) ಪ್ರಾಥಮಿಕ ಸಹಕಾರ ಸಂಘಗಳಿಗೆ ನಬಾರ್ಡ್ ದುಡಿಮೆ ಬಂಡವಾಳದ ಮೇಲೆ ಪಾವತಿಸುವ  ಬಡ್ಡಿಯು ೩% ದಷ್ಟು ಬಡ್ಡಿ ಸಹಾಯ ಧನವಿದೆ.

) ಕೈಮಗ್ಗ ವಲಯದಲ್ಲಿ ಹೊಸ ವಿನ್ಯಾಸ ರೂಪಿಸಲು ತರಬೇತಿ ವ್ಯವಸ್ಥೆ ರಾಜ್ಯದ ಹೊರಗೆ ಅಧ್ಯಯನ ಪ್ರಸಾಸಕ್ಕಾಗಿ ಆಧುನೀಕರಣಕ್ಕೆ ಸಂಶೋಧನಾ ಹಾಗೂ ತರಬೇತಿ ಕೇಂದ್ರಗಳಿಗೆ ಶುಲ್ಕದ ಅವಕಾಶವಿದೆ.

) ಉತ್ಪಾದನೆ ಮತ್ತು ಕೌಶಲ್ಯ ಹೆಚ್ಚಿಸಲು ಸ್ಪರ್ಧಾತ್ಮಕ ಗುಣಮಟ್ಟ ಕಾಯ್ದುಕೊಂಡವರಿಗೆ  ರಾಜ್ಯ ಮಟ್ಟದಲ್ಲಿ ರೂ. ೧೦.೦೦೦/- ನಗದು ಬಹುಮಾನ ನೀಡಲಾಗುವುದು.

) ರಾಷ್ಟ್ರ ಮಟ್ಟದಲ್ಲಿ ನೇಕಾರರಿಗೆ ಕ್ರಾಫ್ಟ್‌ಮನ್‌ಗಳಿಗೆ ವಿಶೇಷ ಸಾಧನೆಗೆ ಕೈಮಗ್ಗದವರಿಗೆ ೨೦  ಕ್ರಾಫ್ಟ್‌ಮನ್‌ಗಳಿಗೆ  ರೂ. ೫೦ ಸಾವಿರ ನಗದು, ತಾಮ್ರಪತ್ರ ನೀಡಲಾಗುವುದು.

) ನೇಕಾರರ ಕಲ್ಯಾಣ ಯೋಜನೆಯಲ್ಲಿ ) ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆಗಾಗಿ ಸಂಪೂರ್ಣ ಮರುಪಾವತಿ ರೂ. ೫೦೦/- ಜೀವನಾಧಾರ ಭತ್ಯೆ ನೀಡುವುದು. ) ಹೃದಯರೋಗ ಮತ್ತು ಮೂತ್ರಪಿಂಡ ಜೋಡಣೆಗೆ ಗರಿಷ್ಠ ೫೦ ಸಾವಿರ ರೂಪಾಯಿ ಮರುಪಾವತಿ ರೂ. ೫೦೦/- ಜೀವನಾಧಾರ ಭತ್ಯೆ ನೀಡುವುದು.

ಈ) ಕುಷ್ಠ ರೋಗ ಮತ್ತು ಮಾನಸಿಕ ವಿಕಲತೆಗಾಗಿ ಚಿಕಿತ್ಸಾ ಅವಧಿಯಲ್ಲಿ ರೂ. ೫೦೦/- ಸಹಾಯಧನ ಕೆ.ಎಚ್.ಡಿ.ಸಿ. ನೇಕಾರ ಸದಸ್ಯರಿಗೂ ವರ್ಷಕ್ಕೆ ರೂ. ೫೦೦/- ಧನ ಸಹಾಯ ನೀಡಲಾಗುವುದು.

ಉ) ಕೆ.ಎಚ್.ಡಿ.ಸಿ. ನೇಕಾರ ಸದಸ್ಯರು ಮರಣ ಹೊಂದಿದಾಗ ಶವದ ಖರ್ಚಿಗಾಗಿ ಅಂತ್ಯಸಂಸ್ಕಾರದ ವೆಚ್ಚಕ್ಕೆ ರೂ. ೧೦೦೦/- ನೀಡಲಾಗುವುದು.

ಊ) ಕೈಮಗ್ಗ ನೇಕಾರ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅವರ ಉತ್ತೀರ್ಣತೆಯ ಶೇಕಡಾ ಅಂಕದ ಮೇಲೆ ಪುಸ್ತಕ ಖರೀದಿ ವಿದ್ಯಾರ್ಥಿ ವೇತನ ನೀಡಲಾಗುವುದು.

. ಪಿ. ಯು.ಸಿ. ಮತ್ತು ಡಿಪ್ಲೋಮಾ ರೂ. ೫೦೦ + ೨೫೦ + ೫೦೦
. ಐ. ಟಿ. ಐ. ಪದವಿ ರೂ.  ― + ೨೫೦ + ―
. ನಿಜ್ಞಾನ ಪದವಿ ರೂ. ೭೫೦ + ೫೦೦ + ೧೦೦೦
. ಇತರ ಪದವಿ ರೂ. ೫೦೦ + ೫೦೦ + ೪೦೦
. ಬಿ. ಇ. ಮತು ಮೆಡಿಕಲ್ ಇತರ ವೃತ್ತಿ ನಿರತ ಪದವಿ ಸ್ನಾತಕೋತ್ತರ ಪದವಿ  ರೂ ೨೦೦೦ + ೧೫೦೦

) ದೀನ ದಯಳ್ ಹಾತ್ ಖರ್ಗಾ ಯೋಜನೆಯ ಅಡಿಯಲ್ಲಿ ಅ) ಮಾರುಕಟ್ಟೆ ಪ್ರೋತ್ಸಾಹ ಬ) ೧. ಮಾರ್ಚಿನ್ ಮನಿ ೨. ಮಗ್ಗ ಮತ್ತು ಸಲಕರಣೆ. ೩. ತರಬೇತಿ. ೪. ಮೂಲಭೂತ ಸೌಕರ್ಯ. ೫. ವಿನ್ಯಾಸ ಬಲಾವಣೆ. ೬. ಪ್ರಚಾರ ಈ ಯೋಜನೆಯನ್ನು  ಕೇಂದ್ರ ಮತ್ತು ರಾಜ್ಯ ಸರ್ಕಾರಗಳು  ೫೦:೫೦ ಪ್ರಮಾಣದಲ್ಲಿ ಭರಿಸುತ್ತದೆ.

) ಕರ್ನಾಟಕ ರಾಜ್ಯವು ತಂತ್ರಜ್ಞಾನ ಸಂಸ್ಥೆ (ಕೆ.ಎಚ್.ಟಿ.ಐ.) ೧. ಗದಗದ ನರಸಾಪೂರ ೨. ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳು (ಆರ್.ಟಿ.ಎಚ್.ಐ.ಇ.) ಸೇಲಂ (ಎನ್. ಪಿ. ಕೆ. ಎಂ. ಐ. ಐ. ಟಿ. ಎಚ್.) ವೆಂಕಟಗಿರಿ ― ನಲ್ಲೂರ ಕೈಮಗ್ಗ ಜವಳಿ ಡಿಪ್ಲೋಮಾಗಳಿಗೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ವಿದ್ಯಾರ್ಥಿ ವೇತನ ನೀಡುವುದು.

೧೦) ಕರ್ನಾಟಕ ಕೈಮಗ್ಗ ನೇಕಾರರ ಮುಂದುವರೆದ ತರಬೇತಿ ಸಂಸ್ಥೆಯನ್ನು ಜಮಖಂಡಿಯ ಹತ್ತಿರ ಗಲಗಲಿ ಪುನರ್ವಸತಿ ಕೇಂದ್ರದಲ್ಲಿ ಪ್ರಾರಂಭಿಸಲಾಗಿದೆ. ೧. ಮುಂದುವರೆದ ನೇಯ್ಗೆ ತರಬೇತಿ ವಿಭಾಗ ೨. ನೂಲಿಗೆ ಬಣ್ಣ ಹಾಕುವುದು ಹಾಗೂ ಬಟ್ಟೆಗೆ ಅಚ್ಚು ಹಾಕುವ ವಿಭಾಗ. ೩. ಕಂಪ್ಯೂಟ್‌ ಡಿಸೈನಿಂಗ್‌ ವಿಭಾಗಗಳಿವೆ. ಇಲ್ಲಿ ೩ ತಿಂಗಳ ಮತ್ತು ೧೫ ತಿಂಗಳ ತರಬೇತಿ ನೀಡಲಾಗುತ್ತದೆ.

೧೧) ಕೈಮಗ್ಗ ನೇಕಾರರಿಗೆ ಆರೋಗ್ಯ ವಿಮಾ ಒದಗಿಸಲಾಗಿದೆ. ಇದಕ್ಕೆ ಐ.ಸಿ.ಐ.ಸಿ.ಐ. ಲೊಂಬಾರ್ಡ್‌ ಜನರಲ್‌ ಇನ್ಸೂರೆನ್ಸ್‌ ಕಂಪನಿಯ ಸಹಯೋಗವಿದೆ. ೮೦ ವರ್ಷ ಪ್ರಯಾದವರಿಗೆ ಸಹಕಾರಿ ಸಂಘದ ಸದಸ್ಯರಿಗೆ ಮಾತ್ರ. ೧. ನೇಕಾರರ ಒಟ್ಟು ಆದಾಯ ೫೦% ಮಗ್ಗಗಳ ವೃತ್ತಿಯಿಂದ ಪಡೆಯುತ್ತಿರಬೇಕು. ೨. ಸಹಕಾರಿ ಸಂಘ ಕೆ. ಎಚ್‌. ಡಿ. ಸಿ.ಯಲ್ಲಿ ಸದಸ್ಯನಿರಬೇಕು. ೩. ಅಸಂಘಟಿತ ವಲಯದ ನೇಕಾರರೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯ ಅನ್ವಯ ಚಿಕಿತ್ಸೆಗಾಗಿ ೧+೩ ಪ್ರತಿ ಕುಟುಂಬಕ್ಕೆ ಗರಿಷ್ಠ ರೂ. ೧೫೦೦೦/- ವೆಚ್ಚ ಭರಿಸಬಹುದಾಗಿದೆ. (ಎಚ್‌. ಐ. ವಿ. ಲೈಂಗಿಕ ಕಾಯಿಲೆಗಳು, ಮಧ್ಯಪಾನ ಸೇವನೆ, ದಂಗೆ, ಮುಷ್ಕರ, ಕಾನೂನು ಬಾಹಿರ ಚಟುವಟಿಕೆಗಳಿಂದ ಆದ ಗಾಯವನ್ನು ಹೊರತುಪಡಿಸಲಾಗಿದೆ).

೧೨) ಮಹಾತ್ಮಾಗಾಂಧಿ ಬುನ್ಕರ ಬಿಮಾ ಯೋಜನೆಯನ್ನು ೧೮ ರಿಂದ ೫೯ ವಯೋಮಿತಿ ನೇಕಾರರಿಗೆ ಭಾರತೀಯ ಜೀವ ವಿಮಾ ಯೋಜನೆ ಮೂಲಕ (ಎಂ.ಜಿ.ಬಿ.ಬಿ.ವಿ.) ಅನುಷ್ಠಾನಗೊಳಿಸಲಾಗಿದೆ. ಕೈಮಗ್ಗ ನೇಕಾರರಿಗೆ ಸ್ವಾಭಾವಿಕ ಮತ್ತು ಆಕಸ್ಮಿಕ ಮರಣದ ಸಂದರ್ಭದಲ್ಲಿ ಈ ಪರಿಹಾರ ಉಪಯೋಗವಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ೯ ರಿಂದ ೧೨ನೇ ತರಗತಿಯವರೆಗೆ ಐ.ಟಿ.ಐ ಓದುವ ವಿದ್ಯಾರ್ಥಿಗಳಿಗೆ ರೂ. ೧೨೦೦/- ವಿದ್ಯಾರ್ಥಿವೇತನ ದೊರೆಯುತ್ತದೆ.

೧೩) ರಾಷ್ಟ್ರಮಟ್ಟದ ಕೈಮಗ್ಗದ ಉತ್ಪನ್ನಗಳ ಮತ್ತು ಪ್ರದರ್ಶನದಲ್ಲಿ ಭಾಗವಹಿಸಲು ದೆಹಲಿ, ಹೈದರಾಬಾದ್‌, ಮಧ್ಯಪ್ರದೇಶ ಇಲ್ಲಿ ನಡೆಯುವ ಪ್ರದರ್ಶನಗಳಲ್ಲಿ ಭಾಗವಹಿಸಲು ಅವಕಾಶವಿದೆ.

೧೪) ನೇಕಾರರ ಸೇವಾ ಕೇಂದ್ರಗಳ ಕುರಿತಾಗಿ ದಿ ಅಪರಲ್‌ ಟ್ರೆನಿಂಗ್ ಮತ್ತು ಡಿಸೈನ್‌ ಸೆಂಟರ್ (ಎ.ಬಿ.ಡಿ.ಸಿ.) ಬೆಂಗಳೂರು ಇಲ್ಲಿಯ ತರಬೇತಿ ಕೋರ್ಸುಗಳಿಗಾಗಿ (ದಿ. ಡಿಪ್ಯುಟಿ ರಿಜಿಷ್ಟ್ರಾರ್ ಅಪರೇಲ್‌ ಟ್ರೇನಿಂಗ್‌ ಮತ್ತು ವಿನ್ಯಾಸ ಕೇಂದ್ರ ಜವಳಿ ಮಂತ್ರಾಲಯ ನಂ. ೧೭ಜಿ. ೪೦ನೇ, ೨ನೇ ಸ್ಟೇಜ್‌ ಇಂಡಸ್ಟ್ರಿಯಲ್‌ ಸಬರ್ಬನ್‌, ಯಶವಂತಪುರ, ಬೆಂಗಳೂರು-೦೨) ಇವರನ್ನು ಸಂಪರ್ಕಿಸಬಹುದು.

ಈ ಮೇಲಿನ ಯೋಜನೆಗಳೆಲ್ಲ ಕೇವಲ ಸಂಘಟಿತ ವಲಯದ ನೇಕಾರರಿಗೆ ಮಾತ್ರ ಇದರ ಲಾಭ ದೊರಕುತ್ತದೆ. ಆದರೆ ಇವೆಲ್ಲ ಯೋಜನೆಗಳು ಅಸಂಘಟಿತ ವಲಯದ ನೇಕಾರರಿಗೂ ಲಭ್ಯವಾಗಬೇಕಿದೆ. ಇವೆಲ್ಲ ಯೋಜನೆಗಳು ಬಹು ಹಂತದಲ್ಲಿರುವುದರಿಂದ ಅಶಿಕ್ಷಿತ ನೇಕಾರರಿಗೆ ತಲುಪುತ್ತಿಲ್ಲ. ಇಲ್ಲಿಯೂ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದೆ. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವುದರಿಂದ ಸರ್ಕಾರದ ಯೋಜನೆಗಳಲ್ಲಿ ೪೦% ಹಣ ಪೋಲಾಗಿ ಹೋಗುತ್ತಿರುವುದರಿಂದ ನೇಕಾರರಿಗೆ ಯೋಜನೆಗಳ ಸೌಲಭ್ಯ ಸಂಪೂರ್ಣವಾಗಿ ದೊರೆಯುತ್ತಿಲ್ಲ. ಇನ್ನೊಂದು ಪ್ರಮುಖ ಅಂಶವೆಂದರೆ ಇವರ ಹೆಸರಿನಲ್ಲಿ ಮತ್ತು ಬೇನಾಮಿ ನೇಕಾರ ಸಹಕಾರ ಸಂಘಗಳು ಹುಟ್ಟಿಕೊಂಡಿವೆ. ಇದು ಸರ್ಕಾರಕ್ಕೂ ಗೊತ್ತಿರುವ ಸಂಗತಿ. ಈ ಸೌಲಭ್ಯಗಳನ್ನು ಕೆಲವೇ ನೇಕಾರ ನಿರ್ದೇಶಕರು ಕಬಳಿಸುತ್ತಿದ್ದಾರೆ. ಇದಕ್ಕೆಲ್ಲ ಮದ್ದು ಎಂದರೆ ಬಹುಹಂತದಿಂದ ಏಕ ಹಂತದಲ್ಲಿ (ಸಿಂಗಲ್‌ ವಿಂಡೋ ಸಿಸ್ಟಮ್‌) ಸೌಲಭ್ಯಗಳು ದೊರೆಯುವಂತಾಗಬೇಕು.

ಕೈ ಮಗ್ಗದ ಈ ಉದ್ದಿಮೆ ಕುರಿತು ಚಿಂತನೆ ಮಾಡಿದಾಗ ಇದೊಂದು ಅನುವಂಶಕ ಕಾಯಕವಾಗಿದೆ. ನೇಕಾರರು ಅವಿದ್ಯಾವಂತರು ಮತ್ತು ಮೇಲಾಗಿ ಕಿತ್ತು ತಿನ್ನುವ ಬಡತನದ ಬಳುವಳಿಯಿಂದಾಗಿ ಇವರ ದೌರ್ಬಲ್ಯಗಳನ್ನು ಜಾಣ ವ್ಯಾಪಾರಿಗಳು, ಅಧಿಕಾರಿಗಳು ದುರುಪಯೋಗ ಪಡಿಸಿಕೊಂಡಿರುವುದು ಸೂರ್ಯ ಪ್ರಕಾಶದಷ್ಟೇ ಸತ್ಯ. ಹಳ್ಳಿಯಿಂದ ದಿಲ್ಲಿಯವರೆಗೆ ಹಬ್ಬಿದ ನೇಕಾರರ ಕಾಲ ನಾಶವಾಗುತ್ತಿದೆ. ಇತ್ತಿತ್ತಲಾಗಿ ನೇಕಾರರು ಸಾಲಕ್ಕಾಗಿ ಧಣಿಯ ಮುಂದೆ ಕೈಯ್ಯೊಡ್ಡಿದಾಗ ಅವರಿಂದ ಬೈಗುಳ ತಿಂದು ಬರಿಗೈಯಿಂದ ಮನೆಗೆ ಬಂದಾಗ ಹೆಂಡತಿ ಮಕ್ಕಳ ಸ್ಥಿತಿ ನೋಡಿದಾಗ ಅವನು ಲಚಗೀ ಮಗ್ಗದಲ್ಲಿ ನೇಯ್ದು ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಪ್ರವೃತ್ತಿ ಹೆಚ್ಚುತ್ತಿದೆ. ಇಲ್ಲವೆ ಊರು ಬಿಟ್ಟು ಓಡಿ ಹೋಗಿ ಚಹಾದ ಅಂಗಡಿಯಲ್ಲಿ ಕಪ್ಪು-ಬಸಿ ತೊಳೆದು ತನ್ನ ನಿತ್ಯದ ಹೊಟ್ಟೆ ಹೊದ್ದುಕೊಳ್ಳುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಇಲ್ಲವಾದಲ್ಲಿ ದೊಡ್ಡ ಪಟ್ಟಣಗಳಲ್ಲಿ ದೇವಸ್ಥಾನದ ಎದುರುಗಡೆ ಬಿಕ್ಷೆ ಬೇಡುತ್ತಿದ್ದಾನೆ. ಇವನ ಹೆಂಡತಿ ಮಕ್ಕಳು ಧಣಿಗಳು ಹಾಸಿಗೆಗೆ ಆಹುತಿಯಾಗಿ ವೇಶ್ಯಾಗೃಹ ಸೇರುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸುತ್ತಿದೆ. ಇವೆಲ್ಲವುಗಳ ಸೆಳುವಿನಿಂದ ಪಾರಾಗಬೇಕಾದರೆ, ಕೆಲವು ಮುಖ್ಯ ಸಲಹೆಗಳು;

) ನೇಕಾರರ ಹಣಕಾಸಿನ ಸಹಾಯಕ್ಕಾಗಿ ಸಹಕಾರಿ ಬ್ಯಾಂಕುಗಳು ಯಾವ ಭದ್ರತೆ ಇಲ್ಲದೇ ಸಾಲ ಒದಗಿಸಬೇಕು. ಏಕೆಂದರೆ ಸಾಲಕ್ಕೆ ಆಧಾರವಾಗಿ ಕೊಡುವಷ್ಟು ಮನೆ, ಹೊಲ ಇರುವುದಿಲ್ಲ. ಅವನ ವೈಯಕ್ತಿಕ ಆಧಾರದ ಮೇಲೆ ಸಾಲ ಸೌಲಭ್ಯ ಒದಗಿಸಬೇಕು. ಅವನ ಕಚ್ಚಾ ಮಾಲಿನ ಸ್ಟಾಕ್‌ ಮೇಲೆ ಸಾಲ ಸೌಲಭ್ಯ ಒದಗಿಸಲು ಸಾಧ್ಯವಿದೆ.

) ನೇಕಾರರಿಗೆ ಕಚ್ಚಾ ಮಾಲು ಖರೀದಿಗೆ ಯೋಗ್ಯ ಬೆಲೆಯಲ್ಲಿ ದೊರಕಿಸಿ ಕೊಡುವುದರ ಸಲುವಾಗಿ ನೂಲು, ರೇಷ್ಮೆ (ಚಮಕಾ)ಗಳ ಡಿಪೋಗಳನ್ನು ಪ್ರಾರಂಭಿಸಿ ಅವುಗಳಿಂದ ಕಚ್ಚಾ ಮಾಲು ಯೋಗ್ಯ ಬೆಲೆಯಲ್ಲಿ ಪುರವಟೆ ಮಾಡಬೇಕು.

) ಸರಕಾರವೇನೋ ೩% ಬಡ್ಡಿ ದರದಲ್ಲಿ ನೇಕಾರರಿಗೆ ಸಾಲ ಕೊಡುವ ಮನಸ್ಸು ಮಾಡಿದೆ. ಆದರೆ ಕಾಯ್ದೆ ತೊಡಕಿನಿಂದಾಗ ಯಾವ ಸಹಕಾರ ಬ್ಯಾಂಕುಗಳು ನೇಕಾರರಿಗೆ ಸಾಲ ಸೌಲಭ್ಯ ಕೊಡಲು ಮುಂದೆ ಬರುತ್ತಿಲ್ಲ.

) ಸಹಕಾರಿ ಸಂಘಗಳ ನೇಕಾರರಿಗೆ ಕೆ.ಎಚ್‌.ಡಿ.ಸಿ. ನೇಕಾರರಿಗೆ ಅಷ್ಟಿಷ್ಟು ದುಡಿಯುವ ಮನೋಸ್ಥಿತಿ ಇದೆ ಆದರೆ ನಮ್ಮ ಜಿಲ್ಲೆಯಲ್ಲಿ ೬೦ ಸೊಸಾಯಿಟಿಗಳಿವೆ ಇವುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸೊಸಾಯಿಟಿಗಳು ಬಂಡವಾಳ ಇಲ್ಲದೆ ಕಚ್ಚಾ ಮಾಲುಗಳ ಧಾರಣಿಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತೆರೆದ ಮಾರುಕಟ್ಟೆಯಿಂದ ಖರೀದಿಸಲು ಸಾಧ್ಯವಾಗುತ್ತಿಲ್ಲ. ಜಾಗತೀಕರಣ ಹಿನ್ನಲೆಯ ಬಿಸಿಯೂ ಬಹು ಪ್ರಮಾಣದಲ್ಲಿ ತಟ್ಟಿದೆ. ಇದರ ಪರಿಣಾಮವಾಗಿ ಖಣದ ಸೀರೆಗಳ ಬೇಡಿಕೆ ಕಡಿಮೆಯಾಗುತ್ತಿದೆ.

) ನಮ್ಮ ರಾಜ್ಯದಲ್ಲಿ ೯ ಸಹಕಾರಿ ನೂಲಿನ ಗಿರಣಿಗಳು ಇರುವುದಾಗಿ ತಿಳಿದು ಬರುತ್ತದೆ. ಅವುಗಳಿಂದ ನೇಕಾರರಿಗೆ ನೇರವಾಗಿ ಅಥವಾ ಸೊಸಾಯಿಟಿಗಳಿಗೆ ಇವುಗಳ ಪ್ರಯೋಜನ ಆಗಿಲ್ಲ. ನೂಲಿನ ಧಾರಣಿ ಕಮೀಶನ್‌ ಇತ್ಯಾದಿಗಳು ನೇಕಾರರ ಮಾಲೀಕರಿಗೆ ಲಾಭವಾಗುತ್ತಿರುವುದರಿಂದ ಬಡ ನೇಕಾರರಿಗೆ ನೂಲು ಕಡಿಮೆ ಬೆಲೆಗೆ ಸಿಗುತ್ತಿಲ್ಲ. ನೂಲಿನ ಉತ್ಪಾದನೆಯಲ್ಲಿ ೫೦% ನೂಲನ್ನು ಕಡ್ಡಾಯವಾಗಿ ಸೊಸಾಯಿಟಿಗಳಿಗೆ ಹಾಗೂ ನೇರವಾಗಿ ನೇಕಾರರಿಗೆ ಸಿಗುವಂತಾಗಬೇಕು. ಅದು ಕೂಡ ಕಡಿಮೆ ಬೆಲೆಯಲ್ಲಿ ದೊರೆಯಬೇಕು.

) ಸಹಕಾರ ಬ್ಯಾಂಕುಗಳಿಂದ ಸಾಲ ಸೌಲಭ್ಯ ಪಡೆದ ಸೊಸಾಯಿಟಿಗಳು ಇದರ ಸೌಲಭ್ಯ ಪಡೆದುಕೊಳ್ಳದೇ ದುರುಪಯೋಗ ಪಡಿಸಿಕೊಳ್ಳುತ್ತಿವೆ. ಇದು ಪಿಡುಗಾಗಿ ಪರಿಣಮಿಸುತ್ತಿದೆ. ನೇಕಾರ ಸದಸ್ಯರು ಆಡಳಿತ ಮಂಡಳಿಯ ಮೇಲೆ ಹದ್ದಿನ ಕಣ್ಣು ಇರಿಸಬೇಕು. ಸೊಸಾಯಿಟಿಗಳ ಕಾರ್ಯಕಲಾಪಗಳಲ್ಲಿ ಭಾಗವಹಿಸುವ ಮೂಲಕ ಅಭಿಮಾನದಿಂದ ತಮ್ಮ ಸ್ವಂತದ ಸೊಸಾಯಿಟಿಯಂತೆ ನೋಡಿಕೊಳಬೇಕು. ಇಲ್ಲಿ ಪ್ರಮಾಣಿಕತೆ, ಧಕ್ಷತೆಯ ಅವಶ್ಯಕತೆ ಇದೆ.

) ಸಹಕಾರಿ ನೇಕಾರ ಕಾರ್ಮಿಕರಿಗೆ ಅನುಕೂಲವಾಗುವಂತಹ ಯೋಜನೆಗಳು ಸೈಧ್ಧಾಂತಿಕವಾಗಿ ಕಂಡರೂ ಪ್ರಾತ್ಯಕ್ಷಿಕವಾಗಿ ಬಹು ಸಂಖ್ಯಾತ ನೇಕಾರ ಕಾರ್ಮಿಕರಿಗೆ ಪ್ರಯೋಜನವಾಗುತ್ತಿಲ್ಲ. ಧಾರಣಿ ಏರಿಳಿತದ ಕಾಲದಲ್ಲಿ ಆಗುವ ಹಾನಿಯನ್ನು ಸರಕಾರವು ತುಂಬಿಕೊಡಬೇಕು. ಇದಕ್ಕಾಗಿ “ಧಾರಣಿ ಏರಿಳಿತದ ಫಂಡ್‌” ಎಂದು ನಾಮಕರಣ ಮಾಡಿ ಬಟೆಟ್ಟಿನಲ್ಲಿ ಕನಿಷ್ಠ ೨೫ ಕೋಟಿ ರೂಪಾಯಿಗಳನ್ನು ತೆಗೆದಿರಿಸಬೇಕು. ಇಲ್ಲವೆ ನೇಕಾರರ ಆವರ್ತಿತ ನಿಧಿಯಿಂದ ೧೦೦ ಕೋಟಿ ರೂಪಾಯಿ ತೆಗೆದಿರಿಸಬೇಕು.

) ಕೈಮಗ್ಗದ ಉದ್ದಿಮೆಯಲ್ಲಿ ತೊಡಗಿಸಿಕೊಂಡಿರುವ ಧಣಿಗಳ (ಬಂಡವಾಳಶಾಹಿಗಳ) ನೇಕಾರ ಬಾಕಿ ಒಂದು ಸಮೀಕ್ಷೆ ಪ್ರಕಾರ ರೂ ೩೦೦ ಕೋಟಿಗೆ ಮಿಕ್ಕುವುದಿಲ್ಲ. ಸರಕಾರ ಒಮ್ಮೆ ಮನಸ್ಸು ಮಾಡಿ ಅಸಂಘಟಿತ ವಲಯದಲ್ಲಿರುವ ನೇಕಾರರ ಸಾಲ ಮನ್ನಾ ಮಾಡುವ ಯೋಜನೆಯನ್ನು ರೂಪಿಸಿ ನೇಕಾರರನ್ನು ಸಾಹುಕಾರರ ಸಾಲದಿಂದ ಮುಕ್ತರಾದರೆ ಇವರು ಸ್ವತಂತ್ರರಾಗಿ ಆಗ ನೇಕಾರರು ಸಹಕಾರ ಸಂಘಗಳನ್ನು ರೂಪಿಸಿಕೊಂಡು ಅಲ್ಲಿ ಅವರು ತಮ್ಮ ಕಾಯಕವನ್ನು ಮುಂದುವರಿಸಿಕೊಂಡು ಪುನರುಜ್ಜೀವನ ಪಡೆಯಬಹುದಾಗಿದೆ.

) ಕೆ.ಎಚ್.ಡಿ.ಸಿ. ವಲಯದ ನೇಕಾರರಿಗೆ ದುಡಿಯಲು ಕಚ್ಚಾ ಮಾಲು ಅಥವಾ ಭೀಮುಗಳನ್ನು ಸರಿಯಾಗಿ ಸಮಯಕ್ಕೆ ಕೊಡುತ್ತಿಲ್ಲ. ಹೀಗಾಗಿ ಇಲ್ಲಿ ದುಡಿಯುವ ನೇಕಾರರ ಸ್ಥಿತಿಯೂ ಬದುಕಿಲ್ಲ ಸತ್ತಿಲ್ಲ ಎನ್ನುವಂತಿದೆ. ಇಲ್ಲಿ ಕೇಂದ್ರೀಕೃತವಾದ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರ ಕೊಡಬೇಕು.

೧೦) ನೇಕಾರರ ಉತ್ಪಾದನೆಗಳು ಮಾರಾಟಗೊಳ್ಳಲು ಪುರಸಭೆಯ ವ್ಯಾಪ್ತಿಯ ಊರುಗಳಲ್ಲಿ ಮಾರಾಟ ಮಳಿಗೆಗಳನ್ನು ಸ್ಥಾಪಿಸಬೇಕು.

೧೧) ಸಾಂಪ್ರದಾಯಕ ಉತ್ಪಾದನೆಗಳಾದ ಕೈಮಗ್ಗದ ಸೀರೆ ಖಣಗಳ ಜೊತೆ ಜೊತೆಯಾಗಿ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗಳ ಅನುಗುಣವಾಗಿ ಹೊಸ ವಿನ್ಯಾಸವುಳ್ಳ ಬಟ್ಟೆಗಳನ್ನು ಉತ್ಪಾದಿಸಬೇಕು.

೧೨) ನೇಕಾರ ಕಾರ್ಮಿಕರ ದಕ್ಷತೆ, ಪ್ರಮಾಣಿಕತೆಯ ಮೇಲೆ ಮಜೂರಿ ನಿಗದಿಪಡಿಸಬೇಕು ಹಾಗೂ ಪ್ರೋತ್ಸಾಹ ಧನವನ್ನು ಕೊಡಬೇಕು.

೧೩) ನೇಕಾರರ ದೊಡ್ಡ ಊರುಗಳಿಗೆ ಗುಳೇ ಹೋಗದಂತೆ ಮಾಡಲು ಜೀವನಾವಶ್ಯಕ ಎಲ್ಲ ವಸ್ತುಗಳನ್ನು ಬಡ ನೇಕಾರರಿಗೆ ಪೂರೈಸುವಂತೆ ನೇಕಾರ ಕಂಜೂಮರ ಸೊಸಾಯಿಟಿಗಳನ್ನು ಪ್ರಾರಂಭಿಸಬೇಕು.

೧೪) ಪ್ರಚಾರ ಯುಗವಿರುವಾಗ ವಿವಿದ ಮಾಧ್ಯಮಗಳ ಮೂಲಕ ನೇಕಾರರ ಉತ್ಪನ್ನಗಳ ಜಾಹಿರಾತುಗಳನ್ನು ತಯಾರಿಸಿ ಗ್ರಾಹಕರ ಮನಸ್ಸಿಗೆ ಮುಟ್ಟಿಸಿ ನೇಕಾರ ಉತ್ಪಾದನೆಗಳೆಗೆ ಬೇಡಿಕೆ ಹೆಚ್ಚಿಸಿಕೊಳ್ಳಬೆಕು.

೧೫) ಸರಕಾರಗಳು ನೇಕಾರರ ಅಭಿವೃದ್ಧಿಗೆ ಯಾವುದೇ ಆಯೋಗ ರಚಿಸಿ ಅವರಿಂದ ಪಡೆದ ಆಯೋಗದ ವರದಿಯ ನಕಲನ್ನು ಪ್ರತಿ ನೇಕಾರ ಸಂಘ ಸಂಸ್ಥೆಗಳಿಗೆ ಮುಕ್ತವಾಗಿ ದೊರಕಿಸಿಕೊಡಬೇಕು.

೧೬) ಕೈಮಗ್ಗದ ನೇಕಾರರ ಉತ್ಪಾದನೆಗಳು ಹಾಗೂ ಪಾವರಲೂಮ್ ನೇಕಾರರ ಉತ್ಪಾದನೆಗಳು ಬೇರೆ ಬೇರೆ ಇರುವುದರಿಂದ ಉತ್ಪನ್ನಗಳಲ್ಲಿ ನೇಕಾರರ ಬಟ್ಟೆ ಹಾಗೂ ಪಾವರಲೂಮ್ ನೇಕಾರ ಬಟ್ಟೆಗಳ ಬೆಲೆಗಳ ಮಧ್ಯ ಬಹಳಷ್ಟು ಹೊಂದಾಣಿಕೆಗೊಂಡು ಇವುಗಳ ಮಧ್ಯ ಸ್ಪರ್ಧಾತ್ಮಕಗೊಳ್ಳುವುದರಿಂದ ಕೈಮಗ್ಗದ  ಮಗ್ಗಗಳ ಉತ್ಪಾದನೆಗಳನ್ನು ಗ್ರಾಹಕರು ಹೆಚ್ಚು ಕೊಳ್ಳಲು ಬಯಸುವುದಿಲ್ಲವಾದ್ದರಿಂದ ಕೈಮಗ್ಗಳ ಆಭಿವೃದ್ಧಿಗೆ ಪ್ರತ್ಯೇಕ ಡೈರೆಕ್ಟರೈಟ ಇರಬೇಕು.

೧೨) ನೇಕಾರರಿಗಾಗಿಯೇ ಡಿ. ಸಿ. ಸಿ. ಬ್ಯಾಂಕುಗಳ ಮಾದರಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಹಕಾರ ಬ್ಯಾಂಕುಗಳನ್ನು ಪ್ರಾರಂಭಿಸಬೇಕು.

೧೮) ನೇಕಾರರ ಸಮಸ್ಯೆಗಳು ಸ್ಥಳೀಯವಾಗಿರುವ ಕಾರಣದಿಂದಾಗಿ ಆಯಾ ಊರು, ಗ್ರಾಮಗಳಿಗೆ ಪ್ರತ್ಯೇಕವಾಗಿ ನಾಮಕರಣಗೊಂಡ ನೇಕಾರರ ಪ್ರತಿನಿಧಿಗಳುಳ್ಳ ಒಂದು ಸಲಹಾ ಸಮಿತಿಯನ್ನು ರಚಿಸಬೇಕು. ಈ ಪ್ರತಿನಿಧಿಗಳು ಪಕ್ಷಾತೀತವಾಗಿರಬೇಕು. ಅಲ್ಲದೇ ನೇಕಾರಿಕೆಯಲ್ಲಿ ಹೆಚ್ಚಿನ ಅನುಭವವುಳ್ಳವರಿರಬೇಕು.

೧೯) ಈ ರಾಜ್ಯದಲ್ಲಿ ೮೦ ಲಕ್ಷ ಜನ ನೇಕಾರರು ಇರುವುದರಿಂದ ಸರ್ಕಾರದಲ್ಲಿ ವಿಧಾನಸಭೆಯಲ್ಲಾಗಲೀ ವಿಧಾನಪರಿಷತ್ತಿನಲ್ಲಾಗಲೀ ಯಾವುದೇ ನೇಕಾರರ ಪ್ರತಿನಿಧಿಗಳು ಇರುವುದಿಲ್ಲ. ಇಂಥ ಸಮಯದಲ್ಲಿ ವಿಧಾನಸಭೆಗೆ ಮತ್ತು ವಿಧಾನ ಪರಿಷತ್ತಿಗೆ ನಾಮಕರಣ ಸದಸ್ಯರನ್ನು ಮಾಡಬೇಕು ಅಥವಾ ನೇಯಮಿಸಬೇಕು.

೨೦) ರಾಜ್ಯ ಸರ್ಕಾರದ ಎಲ್ಲ ಶಾಲಾ ಹಾಗೂ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕ ಶಿಕ್ಷಕಿಯರಿಗೆ ಸರಕಾರಿ ಎಲ್ಲ ವರ್ಗದ ನೌಕರರಿಗೆ, ವಿಧಾನಸಭೆ ಸಚಿವಾಲಯದ ಎಲ್ಲ ನೌಕರರಿಗೆ ನಮ್ಮ ರಾಜ್ಯದಲ್ಲಿಯೇ ತಯಾರಿಸಿದ ಕೈಮಗ್ಗದ ನೇಕಾರ ಉತ್ಪಾದನೆಯ ಬಟ್ಟೆಗಳನ್ನು ಉಡುವ ತೊಡುವ ಸಲುವಾಗಿ ವರ್ಷಕ್ಕೆ ಒಂದು ಜತೆ ಬಟ್ಟೆಗಳನ್ನು ರಾಜ್ಯ ಸರಕಾರವೇ ಖರೀದಿಸಿ ಅವರಿಗೆಲ್ಲ ವಿತರಿಸುವ ಕಾರ್ಯಕ್ರಮ ಹಾಕಿಕೊಳ್ಳಬೇಕು ಇದನ್ನು ಕಡ್ಡಾಯಗೊಳಿಸಬೇಕು.

೨೧) ನೇಕಾರರ ಜನಾಂಗವು ರಾಜಕೀಯದಲ್ಲಿ ಬಹು ಮುಗ್ಧರು ಆಗಿರುವುದರಿಂದ ನೇಕಾರರು ಕೇಂದ್ರಿಕೃತಗೊಂಡ ಮತಕ್ಷೇತ್ರಗಳನ್ನು ನೇಕಾರರ ಮೀಸಲು ಕ್ಷೇತ್ರಗಳನ್ನಾಗಿ ಘೋಷಿಸಿ ನೇಕಾರ ಜನಾಂಗದಿಂದಲೇ ಜನಪ್ರತಿನಿಧಿಗಳನ್ನಾಗಲು ಅವಕಾಶ ಮಾಡಿಕೊಡಬೇಕು. ಇಲ್ಲವೆ ನೇಕಾರರೇ ಕೇಂದ್ರಿಕೃತಗೊಂಡ ಮತಕ್ಷೇತ್ರಗಳಲ್ಲಿ ನೇಕಾರರಿಗೆ ಟಿಕೆಟ್‌ ನೀಡುವ ಕ್ರಮ ಕೈಗೊಳ್ಳಬೇಕು. ಆಗ ಮಾತ್ರವೇ ತಮ್ಮ ಜನಪ್ರತಿನಿಧಿಗಳ ಮೂಲಕ ತಮ್ಮ ಧ್ವನಿಗೂಡಿಸಿ ತಮ್ಮದೇ ಆದ ಧ್ವನಿಯಿಂದ ಹಕ್ಕು ಚಲಾಯಿಸಲು ಸಾಧ್ಯವಾಗುತ್ತದೆ.

ಇವರ ಯೋಗಕ್ಷೇಮ ನೋಡಿಕೊಳ್ಳಲು ಕ್ಯಾಬಿನೆಟ್‌ ದರ್ಜೆಯ ಮಂತ್ರಿಗಳು ಈ ಕೈಮಗ್ಗ ಕ್ಷೇತ್ರಕ್ಕೆ ಪ್ರತ್ಯೇಕವಿರಬೇಕು. ಧೂಳು ತಿನ್ನುತ್ತಿರುವ ದಿ. ಪಿ.ಎಂ. ಭಾಂಗಿ ಹಾಗೂ ಎಚ್‌.ಕೆ. ಪಾಟೀಲ ವರದಿಗಳನ್ನು ಅನುಷ್ಠಾನಗೊಳಿಸಬೇಕು. ಇಷ್ಟೆಲ್ಲವುಗಳೊಂದಿಗೆ ಇನ್ನೂ ಹತ್ತು ಹಲವು ಬೇಡಿಕೆಗಳಿವೆ. ಇದರ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಸಾಕು ಎನ್ನುವ ಸಾಧ್ಯವಾಗದ ಮಾತು. ರಾಜ್ಯ ಹಾಗೂ ಕೇಂದ್ರ ಸರಕಾರಗಳು ನೇಕಾರರಿಗೆ ಕೈ ತುಂಬ ದುಡಿಯಲು ಕೆಲಸ ಸಿಗುವಂತಾಗಬೇಕು. ಇಲ್ಲವಾದಲ್ಲಿ ರೈತರಂತೆ ನೇಕಾರರೂ ವಿಷ ಕುಡಿದು ಸಾವಿಗೆ ಶರಣಾಗಬೇಕಾದ ಕಾಲ ಬರುತ್ತದೆ. ಈ ಎರಡೂ ವರ್ಗದ ಜನ ಇನ್ನೂ ಹೆಚ್ಚಿಗೆ ಜಾಗತೀಕರಣದ ಸುಳಿಗೆ ಸಿಲುಕಿ ಇನ್ನೂ ನರಳುವಂತಾಗಬಾರದು. ಇವರ ಬದುಕಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸ್ಪಂದಿಸಿ ಪ್ರೀತಿ, ವಿಶ್ವಾಸ, ಗೌರವಗಳಿಂದ ಬದುಕಲು ದಾರಿ ಮಾಡಿಕೊಡಬೆಕು. ಆಗ ಅವರಿಬ್ಬರೂ ಕವಲು ದಾರಿಯಿಂದ ಪಾರಾಗಿ ನೆಮ್ಮದಿ ಕಾಣಬಹುದು. ರೈತ ನೇಕಾರರ ಬದುಕನ್ನು ಮೂರಕ್ಕೆ ಇಳಿಸದೇ ಆರಕ್ಕೆ ಏರಿಸಿರಿ. ನೇಕಾರ ಇಂದು ತಮ್ಮ ಅಸ್ತಿತ್ವಕ್ಕೆ ಹೋರಾಡಲು ಬೀದಿಗೆ ಇಳಿಯಬೇಕಾಗಿರುವುದು ಅನಿವಾರ್ಯವಾಗಿದೆ.

ಒಟ್ಟಾರೆ ಇಂದು ನೇಕಾರರನ್ನು ಮಾಲೀಕರೆಂಬ ಆಕ್ಟೋಪಸ್‌ ಹಿಡಿತದಿಂದ ತಪ್ಪಿಸಲು ಸರಕಾರ ಮನಸ್ಸು ಮಾಡಿದರೆ ಅಸಂಘಟಿತ ವಲಯದ ನೇಕಾರರು ಸಂಘಟಿತಗೊಂಡು ಈಗಿರುವ ತ್ರಿಶಂಕು ಸ್ಥಿತಿಯಿಂದ ಹೊರಬರಲು ಸಾಧ್ಯವಾಗಬೇಕಾದರೆ ನೇಕಾರರೂ ಅಷ್ಟೇ ದೃಢ ಮನಸ್ಸನ್ನು ಮಾಡಬೇಕು. ಸರಕಾರ ಮತ್ತು ಸರಕಾರಿ ಅಧಿಕಾರಿಗಳು ಸಹಕಾರ ಸಂಘ ಸಂಸ್ಥೆಗಳು, ನೇಕಾರರ ಮಾಲೀಕರು ಒಂದೆಡೆ ಸೇರಿ ವಿಚಾರವಿನಿಮಯ ಮಾಡಿಕೊಂಡು ಕಾಯ್ದೆ ಕಾನೂನಿನ ಚೌಕಟ್ಟಿನಿಂದ ಹೊರಬಂದು ನಿಂತು ನೇಕಾರರನ್ನು ಬದುಕಿಸಲಿಕ್ಕೆ ಸಾಧ್ಯವಿದೆ.

ಇಲ್ಲವಾದಲ್ಲಿ ಜಾಗತೀಕರಣದ ಪರಿಣಾಮದಿಂದಾಗಿ ಕೈಮಗ್ಗ ನೇಕಾರರ ಅಸ್ಥಿಪಂಜರ (ಮೂಳೆಗಳು)ದ ಜೊತೆ ಅವರು ಉತ್ಪಾದಿಸುವ ಉತ್ಪಾದನೆಗಳನ್ನು ವಸ್ತು ಸಂಗ್ರಹಾಲಯದಲ್ಲಿ ಮುಂದಿನ ಪೀಳಿಗೆ ನೋಡುವ ದಿನಗಳು ದೂರವಿಲ್ಲ.