ಅಂದು ನೀನೊಬ್ಬಳೆಯೆ ಅತಿಮೌನದಲಿ ಬಂದೆ
ಹೊಳೆಗೊಂದು ಹೊಳೆ ಬಂದು ಸಂಗಮಿಸಿದಂತೆ,
ಇಂದು ಮತ್ತೊಂದು ಹೊಸ ಜೀವವನು ತಂದೆ
ಇಂದು ನಮ್ಮದೆಂದೆ.

ಬಾಳನಂದನದಲ್ಲಿ ಮಂದಾರವರಳಿತೋ
ನಮ್ಮಿಬ್ಬರೆದೆಯಲ್ಲಿ ಕಂಪ ತುಂಬಿ.
ದುಂಬಿಯಾದೆವು ನಾವು ಆ ಹೂವಿನೆದೆಗೆ
ಏನೆಂಥ ಬೆಸುಗೆ !

ಆ ಹೂವ ನಗೆಬೆಳಕು ಚಿಕ್ಕೆಯಾಯಿತು ನಮಗೆ
ಅನಂತಯಾತ್ರೆಯೀ ಹಾದಿಯಲ್ಲಿ.
ತೇಲುವೀ ದೋಣಿಗಳ ಬೆಸೆದುದೀ ಬಂಧ
ಕಂದನಾನಂದ !