ಅರ್ಥಕೋಶ

ಅಣ್ಣತಮ್ಮೇಡು ‑ ಅಣ್ಣ ತಮ್ಮ ಇಬ್ಬರು

ಅನಸು ‑ ಕಾಡು

ಅಜ್ಞಾಸ ‑ ಅಜ್ಞಾತವಾಸ

ಆಚೇರಿ ‑ ಆಚಾರಿ (ಮನೆ ಕಟ್ಟುವವ)

ಆರಣ್ಣೀ ‑ ಅರಣ್ಯ

ಆಯಸಿದ ‑ ಆಯಸ್ಸಿನ

ಇಡಿಯಾ ಭೂಮುನೆ ‑ ಇಡೀ ಭೂಮಿಯನ್ನೇ

ಇದ್ದಿ ‑ ವಿದ್ಯೆ

ಇಂದುರು ‑ ಇಂದ್ರ

ಇನಸಟ್ಟು ‑ ಇನ್‌ಸಲ್ಟ್ (ಅವಹೇಳನ)

ಉಂಗುಟು ‑ ಉಂಗುಷ್ಟ

ಉದ್ದುದೊಡ್ಡಾನೆ ‑ ದೊಡ್ಡವರನ್ನಾಗಿ ಬೆಳೆಸುವುದು

ಉಳುವಳು ‑ ಉಳಿಯುವಳು, ವಾಸ ಮಾಡುವಳು

ಊಟಾವುಳ್ಳೇ ‑ ಊಟ ವೀಳ್ಯೆ

ಏಡು ‑ ಎರಡು

ಕಂಕ್ಳು ‑ ಕಂಕಳು

ಕಾಕಿ ‑ ಕಾಗೆ

ಕಾಡೀಗಿ ‑ ಕಾಡಿಗೆ (ಕಣ್ಣಿಗೆ)

ಕಾದಲುಗರು ‑ ಕಾವಲುಗಾರರು

ಕಾಡೋವಿ ‑ ಪಾದರಕ್ಷೆ

ಕುರುವು ‑ ಕುರುಹು

ಕೌಮಿತ್ರಾ ‑ ಸೌಮಿತ್ರೆ

ಕೀಲಾನೆ ‑ ಕೀಲು

ಕೈಕಿ ‑ ಕೈಕಾ

ಗುಡ್ಡಿ ‑ ಗುಡ್ಡ

ಗೋರಿತಾನಿ ‑ ಗೊರಕೆ ಹೊಡೆಯುವುದು

ಗೋರು ಅರಣ್ಣೆ ‑ ಗೋರಾರಣ್ಯ

ಗೊಯ್ಟಂದೆ ‑ ಹಣ್ಣಿನ ಬೀಜ (ವಾಟೆ)

ಗೇವೀಲಿ ‑ (ಒಂದೇ) ವಾರಿಗೆಯಲ್ಲಿ

ಚಣ್ಣ ‑ ಸಣ್ಣ

ಚಂದುರು ‑ ಚಂದ್ರ

ಚಮ್ಮ ‑ ಚರ್ಮ

ಚಣ್ಣದುಲಿ ‑ ಸಣ್ಣ ಅಳಿಲು

ಜಪು ‑ ಜಪ

ಜಾಲು ವಿದ್ದಿ ‑ ಜಾದೂ ವಿದ್ಯೆ

ಡೋಳಿಗು ಡಂಗುರ ‑ ಡೊಳ್ಳು ಡಂಗೂರ

ತಮ್ಮಾಲರುಮನೆ ‑ ತಮ್ಮ ಅರಮನೆ

ತಳ್ಳಿ ‑ ಸಹವಾಸ

ದರುಬಿ ‑ ದರ್ಬೆ

ದಾರಿ ‑ ಧಾರೆ (ಧಾರೆ ಎರೆಯುವುದು)

ದುರುಮು ‑ ಧರ್ಮ

ನೀವೆದ್ಯೆ ‑ ನೈವೇದ್ಯ

ನೇಮ ‑ ನಿಯಮ

ನಾಗಬೆತ್ತು ‑ ನಾಗರ ಹಾವಿನ ರೂಪದ ಕೋಲಿನ ಬೆತ್ತ

ನಿಂಗು ‑ ಹಿಂಗು (ವುದು) ಆರುವುದು

ಪಟ್ಟಾಲಬುಷೇಕ ‑ ಪಟ್ಟಾಭಿಷೇಕ

ಪಕುಸಿ ‑ ಪಕ್ಷಿ

ಪುನುಜಲುಮ ‑ ಪುನರ್ ಜನ್ಮ

ಪಡಿ ‑ ಪಡೆ

ಪಡುಗಲು ಪಡುದೊಡಿಯ ‑ ಘಿರುಪತಿ ವೆಂಕಟರಮಣ

ಬಡುಗಲು ‑ ಉತ್ತರ

ಬ್ಯಾಟೀ ‑ ಬೇಟೆ

ಬಾಯುರಿಕೆ ‑ ಬಾಯಾರಿಕೆ

ಬಾರ್ತ ‑ ಭರತ

ಬುದ್ದುಬಲುವಾಗ ‑ ಬುದ್ದಿವಂತರಾಗಿ, ಶಕ್ತಿವಂತರಾಗಿ

ಬ್ಯಾನಿ ‑ ಬೇನೆ

ಭಾವುಣಿ  ‑ ಭಾವನೆ

ಮಾಸುದು ‑ ಮಾಂಸದ

ಮುರುಗನು ‑ ಮೃಗ

ಮೂಡಿನೂ ‑ ಮೂಡಣ (ಪೂರ್ವ)

ಮಾಯುದು ‑ ಮಾಯದ

ಮೂರುತು ‑ ಮುಹೂರ್ತ

ಮುಸುರಿ ‑ ಮೂಗಿನ ಕಸ

ಮಳ್ಳ ‑ ಮರಳು (ಮಾಡುವುದು)

ಮದ್ದಿನ ‑ ಮಧ್ಯದ ಕಾಡು

ಮಾಯುನ ‑ ಮಾಯದ

ಮುದ್ದಿರಿ ‑ ಮುದ್ರೆ ‑(ಉಂಗುರ)

ಯಾವುಪಾಯ ‑ ಯಾವ ಉಪಾಯ

ರಾಕಸುರು ‑ ರಾಕ್ಷಸರು

ರ‌್ವಾಮು ‑ ರೋಮ

ಲವನೀಗು ‑ ಅವನಿಗೆ

ಲಂದು ‑ ಅಂದು

ಲಾಕಾಸು ‑ ಆಕಾಶ

ಲಗ್ಗುನಿ ‑ ಲಗ್ನ

ಲೆಚ್ಚರ ‑ ಎಚ್ಚರ

ಸಾನ ‑ ಸ್ನಾನ

ಸಾಧಕು ಸಂಪತ್ತೆ ‑ ಸಾಧನೆ ಸಂಪತ್ತು

ಸಸ್ತ್ರ ‑ ಶತೃಜ್ಞ

ಸಾಲುಗನ ಬಲೆ ‑ ಬೇಟೆ ಬಲೆ

ಸಂಗ್ತಿಯಾಲಾ ‑ ಸಂಗತಿಯನ್ನು

ಸರನೆ ‑ ಸ್ಮರಣೆ

ಸಾಯ ‑ ಸಹಾಯ

ಸೇತಾ ‑ ಸೇತುವೆ

ಸಮುದುರು ‑ ಸಮುದ್ರ

ಸಬು ‑ ಶವ

ಸಿಲಿಮಿ ‑ ಸಿನೆಮಾ

ಸುರುವು  ‑ ಕುರುಹು (ಗುರುತು)

ಸುಸುರಿ ‑ ಹುಸಿರು

ಹಸುನೀರು ಬಿಸುಮಾಡಿ ‑ ತಣ್ಣೀರನ್ನು ಬಿಸಿಮಾಡುವುದು