ಅಲ್ಲೂವಿಗೊಂದೆ ಇರುವನಾಲಾ ವೀಗಿನ್ನು
ಇರುವಂಗೊ ಕಾಲ ಕಳೆವಂಗಾ ತಾನ |ತಂದಾನ|
ಜನಕುರಾಜನೇ ಉಳುವಂಗೋವೀಗಿನ್ನು
ಅಲ್ಲೂವಿಗೊಂದೆ ಇರುವೋದಾಲಾ ತಾನ |ತಂದಾನ|
ಅಲ್ಲೂವಿಗೊಂದೆ ಇರುವೋದಾಲಾ ವೀಗಿನ್ನು
ಜನಕು ರಾಜುಗೂ ಸಿಕ್ಕೆದ್ಯಾಲಾ ತಾನ |ತಂದಾನ|
ಜನಕು ರಾಜುಗೂ ಸಿಕ್ಕದ್ಯಾಲಾ ವೀಗಿನ್ನು
ಭೂಮಿ ಒಳಗೊಂದು ಸಿಕ್ಕದ್ಯಾಲಾ ತಾನ |ತಂದಾನ|
ಭೂಮಿ ಒಳುಗೊಂದು ಸಿಕ್ಕದ್ಯಾಲೋ ವೀಗಿನ್ನು
ಒಂದು ಪೆಟ್ಟುಗೇನೆ ಸಿಕ್ಕದ್ಯಾಲಾ ತಾನ |ತಂದಾನ|
ಒಂದು ಪೆಟ್ಟಿಗೇನೆ ಸಿಕ್ಕದ್ಯಾಲಾವೀಗಿನ್ನು
ಅ ಪೆಟ್ಟುಗೆ ಒಡದು ಕಂಡಿದುರಾ ತಾನ |ತಂದಾನ|
ಅ ಪೆಟ್ಟುಗೆ ಒಡದು ಕಂಡಿದುರಾವೀಗಿನ್ನು
ಹೆಣ್ಣು ಶಿಸುವೊಂದೇ ಆದಿಯಾಲಾ ತಾನ |ತಂದಾನ|
ಹೆಣ್ಣು ಶಿಸುವೊಂದೇ ಅದಿಯಾಲಾವೀಗಿನ್ನು
ಜನಕೂ ರಾಜನೆ ಕಂಡನಾಲಾ ತಾನ |ತಂದಾನ|
ಜನಕು ರಾಜಾನೆ ಕಂಡಿದುನು ವೀಗಿನ್ನು
ಅದಕೊಂದು ಹೆಸರೆ ಇಟ್ಟನ್ಯಾಲಾ ತಾನ |ತಂದಾನ|
ಶಿಸುಗೊಂದು ಹೆಸರೆ ಇಟ್ಟನ್ಯಾಲಾ ವೀಗಿನ್ನು
ಏನೇಂದ್ಹೇಳಿ ಹೆಸುರೆ ಇಟ್ಟನ್ಯಾಲಾ ತಾನ |ತಂದಾನ|
ಏನೇಂದ್ಹೇಳಿ ಹೆಸುರೆ ಇಟ್ಟನ್ಯಾಲಾ ವೀಗಿನ್ನು
ಭೂಮಾ ದೇವೀಯ ಮಗುಳಾಲಾ ತಾನ |ತಂದಾನ|
ಭೂಮಾದೇವಿಯ ಮಗಳಾಲವೀಗಿನ್ನು
ಸೀತಾದೇವೀಯ ಎಂಬುವುಳಾ ತಾನ |ತಂದಾನ|
ಸೀತಾದೇವೀಯ ಎಂಬುವಳುವೀಗಿನ್ನು
ಅಂದೂ ಹೆಸರ್ಹೊಂದೆ ಇಟ್ಟರ್ಯಾಲಾ ತಾನ |ತಂದಾನ|
ಲಂದ್ಹೇ ಹೆಸುರ್ಹೊಂದೆ ಇಟ್ಟಿದುರು ಈಗಿನ್ನು
ಸೀತಾದೇವಿಯೊಂದೆ ಕರಿತಾರಿಯಾ ತಾನ |ತಂದಾನ|
ಸೀತಾದೇವೀಯೊಂದೆ ಕರಿತಾರಿಯಾ ವೀಗಿನ್ನು
ಜನಕಾರಾಜಾನೇ ಸಾಕುತಾನೆಯೋ ತಾನ |ತಂದಾನ|
ಜನಕಾರಾಜಾನೇ ಸಾಕುತಾನೆಯೋ ವೀಗಿನ್ನು
ಸಾಕುತಾನೆಯೋ ಲವುನೆ ಸಲುಗುತಾನೆಯೋ ತಾನ |ತಂದಾನ|
ಸೀತಾದೇವಿನೇ ಸಾಕುತಾನೆಯೋ ಈಗಿನ್ನು
ಬುದ್ದು ಬಲುವಾಗೆ ಬಂದಳಾಲಾ ತಾನ |ತಂದಾನ|
ಬುದ್ದಿ ಬಲುವಾಗಿ ಬಂದಿದುಳು ಈಗಿನ್ನು
ಸೀತಾದೇವಿನೆ ಎಂಬುವುಳಾ ತಾನ |ತಂದಾನ|
ಜನಕುರಾಜಾನೇ ಇರುವವನು ಈಗಿನ್ನು
ನಿತ್ಯ ಸಾನಾನೆ ಮಾಡುಕೊಂಡು ತಾನ |ತಂದಾನ|
ನಿತ್ಯ ಸಾನಾನೆ ಮಾಡುಕೊಂಡವೀಗಿನ್ನು
ಜನಕು ಜಪವೊಂದೆ ಮಾಡುತಿದುನೋ ತಾನ |ತಂದಾನ|
ಜನಕು ಜಪವೊಂದೆ ಮಾಡುತಿದುನು ಈಗಿನ್ನು
ಒಂದಲ್ಲ ಒಂದೇ ದಿನುವಲ್ಲಾ ತಾನ |ತಂದಾನ|
ಒಂದಲ್ಲ ಒಂದೇ ದಿನದಲ್ಲೂ ವೀಗಿನ್ನು
ಜನಕನು ಜಪ ಮಾಡುವ ಕಾಲವಾಲ ತಾನ |ತಂದಾನ|
ಲಾಕಸೂ ಕಾಕೀನೆ ಎಂಬುವುದು ಈಗಿನ್ನು
ಆ ಕಲ್ಲು ಮ್ಯಾಲೆ ಹೇತದಾಲಾ ತಾನ |ತಂದಾನ|
ಜನಕು ಜಪವೊಂದೇ ಮಾಡುವಂಗೋ ಈಗಿನ್ನು
ಆಕಾಸು ಕಾಕೀ ಬಂದದ್ಯಾಲಾ ತಾನ |ತಂದಾನ|
ಲಾಕಾಸು ಕಾಕೀ ಬಂದದಿಯೋ ಈಗಿನ್ನು
ಜನಕನು ಜಪವೊಂದೇ ಕೆಡುಸದೆಯೋ ತಾನ |ತಂದಾನ|
ಜನುಕನು ಜಪವೊಂದೆ ಕೆಡುಸೆದೆಯೋವೀಗಿನ್ನು
ಜನುಕ ಮಾರಾಜ ಎಂಬವುನಾ ತಾನ |ತಂದಾನ|
ಜನುಕ ಮಾರಾಜ ಅಲ್ಲಿರುವನು ಈಗಿನ್ನು
ಅವನಿಗೂ ಸಿಟ್ಟೊಂದೆ ಬಂದದ್ಯಾಲಾ ತಾನ |ತಂದಾನ|
ಲವನಿಗು ಸಿಟ್ಟೊಂದೆ ಬಂದದೆಯೊವೀಗಿನ್ನು
ಆಕಾಸು ಕಾಕಿನೆ ಹೊಡಿಬೇಕೋ ತಾನ |ತಂದಾನ|
ಆ ಕಾಕಿಗೂ ಹೊಡಿಬೇಕು ಈಗಿನ್ನು
ಲದರುವಿಗೊಂದೆ ಕೊಲಬೇಕಾ ತಾನ |ತಂದಾನ|
ಆಕಾಸು ಕಾಕಿನೆ ಕೊಲುವುದುಕವೀಗಿನ್ನು
ಬೂಮು ತೂಕುದಾ ಬಿಲ್ಲಾಲ ತಾನ |ತಂದಾನ|
ಬೂಮು ತೂಕುದಾ ಬಿಲ್ಲಾಲ ಈಗಿನ್ನು
ಲಕಾಸು ತೂಕುದ ಬಾಣವಲಾ ತಾನ |ತಂದಾನ|
ಲದರುವಿಗೊಂದೆ ಹೂಡಿದುನು ಈಗಿನ್ನು
ಜನಕು ರಾಜನೇ ಹೂಡಿದುನೂ ತಾನ |ತಂದಾನ|
ಜನುಕು ರಾಜನೇ ಹೂಡಿದನುವೀಗಿನ್ನು
ಊರೂರಿಗು ಸುದ್ದಿ ಕಳಿಸನ್ಯಾಲಾ ತಾನ |ತಂದಾನ|
ಏನು ಡಂಗುರು ಹೊಡಿಸಿದನು ಈಗಿನ್ನು
ಎನೂ ಡಂಗೂರ ಸಾರಿದುನೂ ತಾನ |ತಂದಾನ|
ಬೂಮು ತೂಕುದು ಬಿಲ್ಲಾಲ ಈಗಿನ್ನು
ಆಕಾಸು ತೂಕಾದು ಬಾಣವಲಾ ತಾನ |ತಂದಾನ|
ಇದುರು ಎತ್ತೊಂದೆ ಕೊಂದಿದುರಾ ಈಗಿನ್ನು
ಆಕಾಸ ಕಾಕಿ ಕೊಂದಿದುರಾ ತಾನ |ತಂದಾನ|
ಆಕಾಸ ಕಾಕಿನೆ ಕೊಂದಿದುರಾ ಈಗಿನ್ನು
ನನ್ನ ಮಗಳು ಸೀತಾದೇವಿ ಎಂಬುವಳು ತಾನ |ತಂದಾನ|
ನನ್ನ ಮಗಳು ಸೀತಾದೇವಿ ಇರುವೂಳು ಈಗಿನ್ನು
ದರುಮಾ ಲಗ್ಗಿನಿನೇ ಮಾಡತೇನಿ ತಾನ |ತಂದಾನ|
ದರುಮಾ ಲಗ್ಗಿನಿನೇ ಮಾಡುತೇನಿ ಈಗಿನ್ನು
ಊರೂರಿಗೂ ಡಂಗೂರು ಹೊಡಿಸಿದನೂ ತಾನ |ತಂದಾನ|
ಊರೂರಿಗೆ ಡಂಗೂರು ಹೊಡಿಸಿದನೂ ಈಗಿನ್ನು
ಜನಕು ರಾಜನು ಹೊಡಿಸಿದನೂ ತಾನ |ತಂದಾನ|
ಲಾಗುತಾನೀಗು ಇರುವಂಗೆ ಈಗಿನ್ನು
ಲಕ್ಷುಮಣ್ಣ ಹಣ್ಣೀಗೋಗಿದುನೋ ತಾನ |ತಂದಾನ|
ಲಕ್ಷುಮಣ್ಣ ಹಣ್ಣೀಗೋಗಿದುನೋವೀಗಿನ್ನು
ಅಲ್ಲೂ ಸುದ್ದೀನೇ ಸಿಕ್ಕುತಲ್ಲಾ ತಾನ |ತಂದಾನ|
ಅಲ್ಲೂ ಸುದ್ದೀನೇ ಸಿಕ್ಕುತಲ್ಲಾ ಏನೆಂದು
ಇಲ್ಲೆ ಮುಂದಿನು ರಾಜ್ಯದಲ್ಲೋ ತಾನ |ತಂದಾನ|
ಇಲ್ಲೆ ಮುಂದಿನು ರಾಜ್ಯದಲ್ಲೋ ಈಗಿನ್ನು
ಜನಕು ರಾಜನ ಗಡಿಯಲ್ಲಾ ತಾನ |ತಂದಾನ|
ಜನಕು ರಾಜನ ಗಡಿಯಲ್ಲಾ ವೀಗಿನ್ನು
ಬಿಲ್ಲೀನ ಹಬ್ಬಾವೆ ಇದ್ದಾತು ಎಂಬರಲ್ಲಾ ತಾನ |ತಂದಾನ|
ಅಂದು ಸುದ್ದಿಯ ಸಿಕ್ಕುತಲ್ಲೋ ಈಗಿನ್ನು
ಲಕ್ಷಮಣ್ಣಾವಿಗೂ ಕೇಳಿದುನು ತಾನ |ತಂದಾನ|
ಲಕ್ಷಮಣ್ಣಾವಿಗೂ ಕೇಳಿದುನು ವೀಗಿನ್ನು
ಕೇಳು ಕೊಂಡಿದ್ದು ಬಂದಿದುನು ತಾನ |ತಂದಾನ|
ಕೇಳು ಕೊಂಡಿದ್ದು ಬಂದಿದುನು ಈಗಿನ್ನು
ಅಣ್ಣನುಗೂ ಹುಡುಕೊಂಡೆ ಬಂದನಾಲಾ ತಾನ |ತಂದಾನ|
ಅಣ್ಣನುಗೂ ಹುಡುಕೊಂಡೆ ಬಂದಿದನು ಈಗಿನ್ನು
ಅಲ್ಲೂವಿಗೆ ಬಂದು ನುಡಿತಾನಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ನೀ ಕೇಳು ಈಗಿನ್ನು
ಇಲ್ಲೆ ಮುಂದಿನ ರಾಜ್ಯದಲ್ಲೋ ತಾನ |ತಂದಾನ|
ಇಲ್ಲೆ ಮುಂದಿನ ರಾಜ್ಯದಲ್ಲೋ ಈಗಿನ್ನು
ಜನಕು ರಾಜನ ಗಡಿಯಲ್ಲೋ ತಾನ |ತಂದಾನ|
ಜನಕು ರಾಜನ ಗಡಿಯಲ್ಲೋ ಈಗಿನ್ನು
ಬಿಲ್ಲಿನ ಹಬ್ಬವು ಅಂದುರಲ್ಲೋ ತಾನ |ತಂದಾನ|
ನಾನು ಕೇಳಿಗೊಂಡು ಬಂದಿದುನು ನನ್ನಣ್ಣಾ
ಕೇಳು ಕೇಳು ನನ್ನಣ್ಣಾ ನೀ ಕೇಳುತಾನ |ತಂದಾನ|
ಕೇಳು ಕೇಳು ನನ್ನಣ್ಣಾ ನೀ ಕೇಳು ಈಗಿನ್ನು
ಬಿಲ್ಲೀನ ಹಬ್ಬಕೆ ಹೋಗುವಾನ ತಾನ |ತಂದಾನ|
ಕೇಳೂ ನನ ತಮ್ಮ ನಿ ಕೇಳೋ ಈಗಿನ್ನು
ಬಿಲ್ಲೀನ ಹಬ್ಬೊಂದೂರಲ್ಲೂ ತಾನ |ತಂದಾನ|
ಅಲ್ಲೂವಿಗೊಂದೇ ಹೊಡವಕೀ ಈಗಿನ್ನು
ಬೂಮು ತೂಕದ ಬಿಲ್ಲಾಲಾ ತಾನ |ತಂದಾನ|
ಬೂಮು ತೂಕದ ಬಿಲ್ಲಾಲಾ ಈಗಿನ್ನು
ಆಕಾಸು ತೂಕದ ಬಾಣವಲಾ ತಾನ |ತಂದಾನ|
ಇಡಿಯೋ ಬೂಮಿನೇ ಎತ್ತಬೇಕ ತಾನ |ತಂದಾನ|
ಇಡಿಯೋ ಬೂಮಿನೇ ಎತ್ತಬೇಕ ಈಗಿನ್ನು
ಅದುರಾ ಎತ್ತೊಂದೆ ಹೊಡುವರುಸಾ ತಾನ |ತಂದಾನ|
ನಮ್ಮ ಕೂಡಲ್ಲ ಸಾಧ್ಯವಿದೆಯೊ ಈಗಿನ್ನು
ಬಾಳ ನೇಮಾನೆ ಆಗಬೇಕು ತಾನ |ತಂದಾನ|
ಅದುರೋ ಎತ್ತೊಂದೆ ಹೊಡುವುದು ಈಗಿನ್ನು
ಆಕಾಸ ಕಾಕಿ ಕೊಲುವುದುಕೂ ತಾನ |ತಂದಾನ|
ಬಾಳ ನೇಮನೇ ಬೇಕಲ್ಲವೀಗಿನ್ನು
ಹನ್ನೆರಡೊರುಸೊಂದೆ ಬಿಡಬೇಕಾ ತಾನ |ತಂದಾನ|
ಅನ್ನ ಆಹಾರ ಮುಟ್ಟಬೇಡ ಈಗಿನ್ನು
ಹಣ್ಣೊಂದೇಳವ್ರ ತಿನ್ನಬೇಡಾ ತಾನ |ತಂದಾನ|
ಹಣ್ಣೊಂದೇಳವ್ರ ತಿನ್ನಬೇಡಾ ಈಗಿನ್ನು
ಏನೂ ಈಗೊಂದೇ ತಿನಬೇಡಾ ತಾನ |ತಂದಾನ|
ಏನೂ ಈಗೊಂದೇ ತಿನೂಬೇಡಾ ವೀಗಿನ್ನು
ಕಂಕ್ಳಲೂ ಕವುಡೇನೆ ಕಟ್ಟಬೇಕು ತಾನ |ತಂದಾನ|
ಕಂಕ್ಳಲೂ ಕವುಡೇನೆ ಕಟ್ಟಬೇಕು ಈಗಿನ್ನು
ಮೂಗುನಲು ನೆಲಮುಸರಿ ಕಟ್ಟಬೇಕಾ  ತಾನ |ತಂದಾನ|
ಮೂಗುನಲು ನೆಲಮುಸುರಿ ಕಟ್ಟಬೇಕಾ ಈಗಿನ್ನು
ಬೆನ್ನೂ ಮ್ಯಾಲೊಂದೆ ಬೆಳಿಬೇಕಾ ತಾನ |ತಂದಾನ|
ನಾಗುಬೆತ್ತಾನೇ ಬೆಳಿಬೇಕಾ ತಾನ |ತಂದಾನ|
ನಾಗುಬೆತ್ತಾನೇ ಬೆಳಿಬೇಕಾ ಈಗಿನ್ನು
ಗಂಟ್ಲಲ್ಲಿಗೊಂದೆ ಕಟ್ಟುಬೇಕಾ ತಾನ |ತಂದಾನ|
ಗಂಟ್ಲಲ್ಲಿಗೊಂದೆ ಕಟ್ಟುಬೇಕಾವೀಗಿನ್ನು
ಸಾವಿಗನೆ ಬಲೆಯೊಂದೆ ಕಟ್ಟಬೇಕಾ ತಾನ |ತಂದಾನ|
ಅಷ್ಟುವಿಗೊಂದೆ ಇದ್ದುದ್ದರೆ ನನ್ನ ತಮ್ಮ
ನಾವು ಈಗೊಂದು ಹೋಗಬಹುದೋ ತಾನ |ತಂದಾನ|
ಅಷ್ಟು ಮಾತೊಂದು ಕೇಳಿದನು ಈಗಿನ್ನು
ಲಕ್ಷುಮಣ್ಣಾನೇ ಕೇಳಿದನಾ ತಾನ |ತಂದಾನ|
ಲಕ್ಷುಮಣ್ಣಾನೆ ಕೇಳಿದನಾ ಈಗಿನ್ನು
ಆಗೂತಾನೀಗೂ ಬಿಡುಸಿದನೂ ತಾನ |ತಂದಾನ|
ತನ್ನು ಒಳತೊಡಿನೆ ಬಿಡುಸಿದನೋವೀಗಿನ್ನು
ಹಣ್ಣು ಭಾಗಾನೇ ತೆಗೆದಿದುನೂ ತಾನ |ತಂದಾನ|
ಕೇಳು ಕೇಳಲಾ ನನ್ನಣ್ಣ ಈಗಿನ್ನು
ಆರೂವರುಷಕೂ ಎಷ್ಟು ಭಾಗಾ ತಾನ |ತಂದಾನ|
ಇದರೂ ಲೆಕ್ಕಾನೆ ಮಾಡಿದುರು ಈಗಿನ್ನು
ಅಣ್ಣ ಕೊಟ್ಟಂತ ಹಣ್ಣಲಾ ತಾನ |ತಂದಾನ|
ಅಣ್ಣ ಕೊಟ್ಟಂತ ಹಣ್ಣಲಾ ಈಗಿನ್ನು
ತಮ್ಮವಿಗೊಂದೆ ಮುಟ್ಟಲಿಲ್ಲಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನೀ ಕೇಳು ಈಗಿನ್ನು
ನನ್ನ ಮ್ಯಾಲೆ ಬೇದ ಮಾಡಿದೇನಾ ತಾನ |ತಂದಾನ|
ನನ್ನ ಮ್ಯಾಲೆ ಬೇದ ಮಾಡಿದಿಯೇ ಈಗಿನ್ನು
ಇನ್ನು ಮುಂದೆಂದು ಮಾಡಬೇಡಾ ತಾನ |ತಂದಾನ|
ಕೇಳು ಕೇಳು ನನ್ನಣ್ಣಾ ನೀ ಕೇಳು ಈಗಿನ್ನು
ನಾನು ಹಣ್ಣಿಗೂ ಹೋಗುವಾನಾ ತಾನ |ತಂದಾನ|
ನಾನು ಹಣ್ಣಿಗೂ ಹೋಗುವನೂ ಈಗಿನ್ನು
ಅರಮನೆಯಲೂ ನೀನೆ ಉಳಿವವನೂ ತಾನ |ತಂದಾನ|
ನನಗೂ ಸಿಕ್ಕುವುದು ಈಗಾಲೂವೆ ಈಗಿನ್ನು
ದಿವಸಗೆ ಎರಡಣ್ಣ ಸಿಕ್ಕುತ್ತದೆಯೋ ತಾನ |ತಂದಾನ|
ಒಂದು ಹಣ್ಣೊಂದೆ ಸಿಕ್ಕುಲಿಲ್ಲಾ ತಾನ |ತಂದಾನ|
ಲದರೂ ತಂದು ನಾನು ಕೊಟ್ಟುದುರೆ ಈಗಿನ್ನು
ನೀನು ಆಗ ಏನು ಮಾಡುತಿದಿಯೋ ತಾನ |ತಂದಾನ|
ದೇವರಿಗೊಂದು ಭಾಗ ಅಭಿಷೇಕಾ ಈಗಿನ್ನು
ನನಗೊಂದು ಭಾಗ ಕೊಡುತಿದೆಯಾ ತಾನ |ತಂದಾನ|
ನೀನು ಇಡಿಹಣ್ಣು ತಿನುತಿದೆಯೋ ಈಗಿನ್ನು
ಲದರಲ್ಲೂ ಒಂದು ತುಂಡು ಕೊಟ್ಟಿದುರು ತಾನ |ತಂದಾನ|
ಲದರಲ್ಲೂ ಒಂದು ತುಂಡು ಕೊಟ್ಟಿದುರೆ ನನ್ನಣ್ಣ
ನನಗೂ ಭೇದಾನೆ ಇಲ್ಯಾಲಾ ತಾನ |ತಂದಾನ|
ಕೇಳೂ ನನ್ನು ತಮ್ಮ ನಿನ್ಯಾಲು ಈಗಿನ್ನು
ಹಣ್ಣಿಗೂ ನೀನೆ ಹೋಗುವವನೇ ತಾನ |ತಂದಾನ|
ಹಣ್ಣಿಗೂ ನೀನೆ ಹೋಗುವವನು ಈಗಿನ್ನು
ಒಂದು ಹೆಚ್ಚಾರೂ ಸಿಕ್ಕಿದುರೇ ತಾನ |ತಂದಾನ|
ಒಂದು ಹೆಚ್ಚಾರು ಸಿಕ್ಕಿದುರೇ ಈಗಿನ್ನು
ಘಿಂದುಕೊಂಡು ನೀನೆ ಬಂದಿವೆಂದಾ ತಾನ |ತಂದಾನ|
ನಾನು ನಿನಗೊಂದೇ ಕೊಡಲಿಲ್ಲಾವೀಗಿನ್ನು
ಇನ್ನು ಮುಂದಿಗೂ ಮಾಡಬ್ಯಾಡಾ ತಾನ |ತಂದಾನ|
ಇನ್ನು ಮುಂದಿಗೂ ಮಾಡಬ್ಯಾಡಾ ಈಗಿನ್ನು
ಈಗೂ ಈ ಬೇದ ಮಾಡಬೇಡಾ ತಾನ |ತಂದಾನ|
ನಾನು ತಪ್ಪಿದರೂ ನೀನು ಹೇಳುಬೇಕೂ ಈಗಿನ್ನು
ನೀನು ತಪ್ಪಿದರೂ ನಾನು ಹೇಳುಬೇಕು ತಾನ |ತಂದಾನ|
ಇನ್ನುಮುಂದು ಈ ಬೇದ ಮಾಡಬೇಡ ವೀಗಿನ್ನು
ನಿಮ್ಮೊಳಗು ಬೇದ ಆಗಬಾರ್ದೂ ತಾನ |ತಂದಾನ|
ಅಷ್ಟು ಈಗೊಂದೆ ತರುಸಿದೆನು ಈಗಿನ್ನು
ಕೇಳು ಕೇಳಾಲ ನನ್ನಣ್ಣಾ ತಾನ |ತಂದಾನ|
ಕೇಳು ಕೇಳಾಲ ನನ್ನಣ್ಣಾ ವೀಗಿನ್ನು
ನನ್ನ ಕಂಕ್ಳು ನೋಡುವಾಲಾ ತಾನ |ತಂದಾನ|
ಕಂಕ್ಳೊಳಲು ಈಗೊಂದೆ ಕಂಡಿದರೆ ವೀಗಿನ್ನು
ಕಂಕಳಲು ಕವುಡೇನೆ ಕಟ್ಟದಾಲ ತಾನ |ತಂದಾನ|
ಕಂಕಳಲು ಕವುಡೇನೆ ಕಟ್ಟುದೆಯೊ ಈಗಿನ್ನು
ಮೂಗಿನಲೂ ನೆಲಮುಸಿರಿ ಕಟ್ಟದೆಯೋ ತಾನ |ತಂದಾನ|
ಮೂಗಿನಲೂ ನೆಲಮುಸಿರಿ ಕಟ್ಟದೆಯೋ ವೀಗಿನ್ನು
ಬೆನ್ನು ಮ್ಯಾಲೊಂದು ಬೆಳೆದಿದೆಯೋ ತಾನ |ತಂದಾನ|
ಬೆನ್ನು ಮ್ಯಾಲೊಂದು ಬೆಳೆದಿದೆಯೋ ವೀಗಿನ್ನು
ಬೆನ್ನು ಮ್ಯಾಲೊಂದೆ ಬೆಳುದಿದುಯಾ ತಾನ |ತಂದಾನ|
ಬೆನ್ನು ಮ್ಯಾಲೊಂದು ಬೆಳೆದಿದುಯೋ ಈಗಿನ್ನು
ನಾಗಬೆತ್ತನೇ ಬೆಳೆದಿದೆಯಾ ತಾನ |ತಂದಾನ|
ನಾಗಬೆತ್ತನೇ ಬೆಳೆದಿದೆಯಾ ಈಗಿನ್ನು
ಗಂಟ್ಲಲ್ಲಿಗೊಂದೆ ಕಂಡಿದುರಾ ತಾನ |ತಂದಾನ|
ಗಂಟ್ಲಲ್ಲಿಗೊಂದೆ ಕಂಡಿದುರು ಈಗಿನ್ನು
ಸಾಲುಗನ ಬಲೆಯೊಂದೆ ಕಟ್ಟಿದಾಲಾ ತಾನ |ತಂದಾನ|
ಕೇಳು ಕೇಳಾಲ ನನ್ನಣ್ಣಾ ಈಗಿನ್ನು
ಮತ್ತೂ ನಮಗೇನು ಆಗಬೇಕಾ ತಾನ |ತಂದಾನ|
ಅಷ್ಟು ಇದ್ದುದುರೂ ಸಾಲದೇನ ಈಗಿನ್ನು
ಮತ್ತೂ ನಮಗೇನು ಆಗಬೇಕು ತಾನ |ತಂದಾನ|
ಮತ್ತೂ ನಮಗೇನು ಆಗಬೇಕು ಈಗಿನ್ನು
ಬಿಲ್ಲೀನಬ್ಬಕು ಹೋಗುವಾಗ ತಾನ |ತಂದಾನ|
ಅಂದು ತಾನೀಗೂ ನುಡಿತಾನೆಯೋ ಈಗಿನ್ನು
ಅಣ್ಣನ ಕೂಡೊಂದ ಹೇಳುತಾನೆಯೋ ತಾನ |ತಂದಾನ|
ಅಣ್ಣನ ಕೂಡೊಂದ ಹೇಳುತಾನೆಯೋ ಈಗಿನ್ನು
ಲಾಗೂ ತಾನಿಗೂ ಹೇಳುವಾನ ತಾನ |ತಂದಾನ|
ರಾಮಸ್ವಾಮಿನೇ ಎಂಬುವುನೇ ವೀಗಿನ್ನು
ಲಾಗುವಿಗೊಂದು ನುಡಿದನಾಲಾ ತಾನ |ತಂದಾನ|
ರಾಮಸ್ವಾಮಿನೇ ನುಡಿದಿದುನು ವೀಗಿನ್ನು
ಬಿಲ್ಲುನಬ್ಬುಕೂ ಹೋಗುವಾನಾ ತಾನ |ತಂದಾನ|
ಬಿಲ್ಲಿನಬ್ಬುಕೂ ಹೋಗುವಾನಾ ಅಂದಿದನು
ತಮ್ಮನು ಕೂಡೆಂದು ಹೇಳುವವನಾ ತಾನ |ತಂದಾನ|
ರಾಮಾಲಚ್ಚುಮಣ್ಣ ಎಂಬುವರು ವೀಗಿನ್ನು
ಅಣ್ಣ ತಮ್ಮೇಡು ಜನರಾಲಾ ತಾನ |ತಂದಾನ|
ಅಣ್ಣ ತಮ್ಮೇಡು ಜನರಾಲಾವೀಗಿನ್ನು
ಗೋರು ಅರಣ್ಯೇದಾ ವಳಸಾರಾ ತಾನ |ತಂದಾನ|
ಗೋರು ಅರಣ್ಯೇದಾ ವಳಸಾರಾ ವೀಗಿನ್ನು
ಅನಸು ಕಾಡೀನ ಮದ್ಯದಲ್ಲೋ ತಾನ |ತಂದಾನ|
ಅನಸು ಕಾಡೀನ ಮದ್ಯದಲ್ಲೋ ವೀಗಿನ್ನು
ಸೊಪ್ಪುನ ತುಂಡೀಯಲರಮನೆಯೋ ತಾನ |ತಂದಾನ|
ಲಲ್ಲೂ ತಾವಿಗೂ ಉಳಿವಂಗೂ ವೀಗಿನ್ನು
ಅಲ್ಲಿಂದ ತಾವೇ ಸರುತಾರಿಯೋ ತಾನ |ತಂದಾನ|
ಅಲ್ಲಿಂದ ತಾವೇ ಸರುತಾರಿಯೋ ವೀಗಿನ್ನು
ಬಿಲ್ಲಿನಬ್ಬಕ್ಕೂ ಹೋಗುತಾರಿಯೋ ತಾನ |ತಂದಾನ|
ಬಿಲ್ಲಿನಬ್ಬಕ್ಕೂ ಹೋಗುತಾವರೆ ವೀಗಿನ್ನು
ಅಣ್ಣ ತಮ್ಮೇಡು ಜನರಾಲಾ ತಾನ |ತಂದಾನ|
ಅಣ್ಣ ತಮ್ಮೇಡು ಜನರಾಲಾ ವೀಗಿನ್ನು
ರಾಮಲಕ್ಷಮಣ್ಣ ಎಂಬುವರು ತಾನ |ತಂದಾನ|
ದಾರಿಯಲ್ಲಿಗೂ ಹೋಗುವಂಗು ವೀಗಿನ್ನು
ಹೋಗು ಹೋಗುತವರೇ ಅದರಾಲಾ ತಾನ |ತಂದಾನ|
ದಾರಿ ಮ್ಯಾಲೊಬ್ಬ ಸಿಕ್ಕನೆಲ್ಲವಿಗಿನ್ನು
ಕಳ್ಳ ಗುರುದೇವ ಎಂಬನಾಲಾ ತಾನ |ತಂದಾನ|
ಕೇಳು ಕೇಳಲಣ್ಣ ಕೇಳುವಾಗಲೀಗಿನ್ನು
ಇಲ್ಲೆ ಮುಂದಿನ ರಾಜ್ಯದಲ್ಲೋ ತಾನ |ತಂದಾನ|
ಇಲ್ಲೆ ಮುಂದಿನ ರಾಜ್ಯದಲ್ಲೋ ವೀಗಿನ್ನು
ಬಿಲ್ಲೀನಬ್ಬ ಅಂಬುರಾಲಾ ತಾನ |ತಂದಾನ|
ಬಿಲ್ಲೀನಬ್ಬ ಅಂಬುರಾಲಾ ವೀಗಿನ್ನು
ಅಲ್ಲೂಗಡುನಾವೆ ಹೋಗುಬೇಕಾ ತಾನ |ತಂದಾನ|
ಕೇಳಿ ಕೇಳಿರಿ ತಮ್ಮದೀರು ನೀವೀಗ
ಸಣ್ಣ ಸಣ್ಣವರು ಹುಡುಗರು ತಾನ |ತಂದಾನ|
ಸಣ್ಣ ಸಣ್ಣವರು ಹುಡುಗರೂ ನೀವೀಗ
ಬಿಲ್ಲೀನಬ್ಬುಕೂ ಅಲ್ಯಾಲಾ ತಾನ |ತಂದಾನ|
ಬಿಲ್ಲೀನಬ್ಬಕೂ ಅಲ್ವಾಲಾ ಅಂದರಲ್ಲಾ ವೀಗಿನ್ನು
ಉಂಬೂಕು ಅಲ್ಲ ಮಾಡಲಿಲ್ಲಾ ತಾನ |ತಂದಾನ|
ಆಕಾಸು ತೂಕದು ಬಾಣವಲಾ ಈಗಿನ್ನು
ಬೂಮು ತೂಕದು ಬಿಲ್ಲಾಲಾ ತಾನ |ತಂದಾನ|
ಬೂಮು ತೂಕದು ಬಿಲ್ಲಾಲ ಈಗಿನ್ನು
ಅದಕು ಎತ್ತೊಂದೆ ಹೊಡಿಬೇಕಾ ತಾನ |ತಂದಾನ|
ಅದಕು ಎತ್ತೊಂದೆ ಹೊಡಿಬೇಕಾ ಈಗಿನ್ನು
ಆಕಾಸು ಕಾಕಿನೆ ಕೊಲಬೇಕೂ ತಾನ |ತಂದಾನ|
ಆಕಾಸು ಕಾಕಿನ ಕೊಲಬೇಕೂ ಈಗಿನ್ನು
ಬಿಲ್ಲು ನೀವೊಂದೆ ಎತ್ತುಬಹುದಾ ತಾನ |ತಂದಾನ|
ಬಿಲ್ಲು ನೀವೊಂದೆ ಎತ್ತುಬಹುದಾ ಈಗಿನ್ನು
ಬಾಣಾನ ಆಗುದೊಂದೆ ಹೊರಬಹುದೇ ತಾನ |ತಂದಾನ|
ಲದರು ಎತ್ತೊಂದೆ ಹೊಡದಿರಲಿ ಈಗಿನ್ನು
ನನ್ನ ಕೊಡ್ಲಿಯೊಂದೆ ಅದೆಯಾಲ ತಾನ |ತಂದಾನ|
ನನ್ನ ಕೊಡ್ಲಿಯೊಂದೆ ಅದೆಯಾಲೋ ವೀಗಿನ್ನು
ಭೂಮಿಮ್ಯಾಲೆ ನಾನು ಇಡುತೀನಿ ತಾನ |ತಂದಾನ|
ಭೂಮಿ ಮ್ಯಾಲೆ ನಾನು ಇಡುತೀನಿ ಈಗಿನ್ನು
ಅದನ್ನು ಎತ್ತೊಂದೆ ಕೊಡುರ್ಯಾಲಾ ತಾನ |ತಂದಾನ|
ಕೊಡ್ಲಿ ಎಂದಿದುರು ಅಲ್ಲವಲ್ಲೋ ಈಗಿನ್ನು
ಹನ್ನೇಡು ಶಿರುವಾಗಿ ಇದಿಯಲ್ಲಾ ತಾನ |ತಂದಾನ|
ಲಾಗುತಾನೇಯ ಕೇಳುತಾನೆ ಈಗಿನ್ನು
ಲಚ್ಚುಮಣ್ಣಾನೆ ಹೇಳುತಾನೆಯೋ ತಾನ |ತಂದಾನ|
ಕೇಳು ಕೇಳು ನನ್ನಣ್ಣಾ ನೀ ಕೇಳು ಈಗಿನ್ನು
ಅವನ ಕೊಡ್ಲಿನೆ ಇರುವುದಾಲಾ ತಾನ |ತಂದಾನ|
ನಾನು ಎತ್ತೊಂದೆ ಕೊಡಿತಿದುನೋ ಈಗಿನ್ನು
ನಿನ್ನು ಅಪ್ಪುಣೆನೇ ಆಗೂಬೇಕೂ ತಾನ |ತಂದಾನ|