ಆಚೆ ಮರುಕೊಂದೆ ಹಾರನ್ಯಾಲಾ ತಾನ |ತಂದಾನ|
ಆಚೆ ಮರಕೊಂದೆ ಹಾರಿದನು ಈಗಿನ್ನು
ಈಚೆ ಮರಕೊಂದೇ ಹಾರಿದನು ತಾನ |ತಂದಾನ|
ಈಚೆ ಮರಕೊಂದೆ ಹಾರಿದನು ಈಗಿನ್ನು
ಹಣ್ಣು ಕಾಯೆಲ್ಲಾ ಉದ್ರುಸಿದನೂ ತಾನ |ತಂದಾನ|
ಅಲ್ಲೂ ಕಾವಲೂಗುರು ಇದ್ದರಲ್ಲೋ ಈಗಿನ್ನು
ಕಂಡು ಕಂಡಿಗೂ ಬಂದಿದುರಾ ತಾನ |ತಂದಾನ|
ರಾವಣಾನ ಮನೆಗೊಂದೆ ಓಡಿಬಂದುವೀಗಿನ್ನು
ಕೇಳಿ ಕೇಳಿ ಸ್ವಾಮಿ ಅನುತಾರಿಯಾ ತಾನ |ತಂದಾನ|
ಮಟ್ಟು ಮಾವಿನ ತಪ್ಪದಲ್ಲೂ ವೀಗಿನ್ನು
ಒಂದು ಮಂಗಾನೇ ಬಂದಾದ್ಯಾಲಾ ತಾನ |ತಂದಾನ|
ಒಂದು ಮಂಗಾನೇ ಬಂದದ್ಯಾಲಾ ವೀಗಿನ್ನು
ನಮ್ಮ ಹೊಡೆವುಕು ಹೋಗಿದುರಾ ತಾನ |ತಂದಾನ|
ನಮ್ಮ ಈಗೊಂದೆ ಹೊಡೆತಿದಿಯೋ ವೀಗಿನ್ನು
ಮಾಯಿನ ಕಾಯಲ್ಲೆ ಹೊಡಿತದಿಯಾ ತಾನ |ತಂದಾನ|
ಮಾವಿನ ಕಾಯಲ್ಲೆ ಹೊಡಿತಿದಿಯಾ ವೀಗಿನ್ನು
ಹಲ್ಲೂವಿಗೊಂದೆ ಕಿರಿತದಿಯೋ ತಾನ |ತಂದಾನ|
ಹಲ್ಲುವಿಗೊದೆ ಕಿರಿತದಿಯೋ ವೀಗಿನ್ನು
ಒಂದೊಂದು ಕಣ್ಣೆ ಬುಡುತದಿಯೋ ತಾನ |ತಂದಾನ|
ನಮ್ಮಿಂದು ಸಾದ್ಯಿನೇ ಇಲ್ಯಾಲೋ ವೀಗಿನ್ನು
ಅಂದು ಬಂದಲರು ನುಡಿದಿದುರಾ ತಾನ |ತಂದಾನ|
ಲಾಗೂ ರವಣಾನೇ ಕೇಳಿದನು ವೀಗಿನ್ನು
ಅವನು ಮಗನೊಬ್ಬ ಇದ್ದನಾಲಾ ತಾನ |ತಂದಾನ|
ಅವುನೀವಿಗೊಂದೆ ಕಳುಸಿದನೂ ವೀಗಿನ್ನು
ಅಲ್ಲೂವಿಗೊಂದೆ ಹೋದನಾಲಾ ತಾನ |ತಂದಾನ|
ಅಲ್ಲೂವಿಗೊಂದೆ ಹೋದನಾಲಾ ಈಗಿನ್ನು
ಆನು ತಾನೊಂದೆ ಹೊಡೆದನಾಲಾ ತಾನ |ತಂದಾನ|
ಕೈ ಕಾಲು ಕಟ್ಟೂವೀಗೆ ಬಿದ್ದಂಗೋ ವೀಗಿನ್ನು
ಹನುಮಂತವೀಗ ಬಿದ್ದನಾಲಾ ತಾನ |ತಂದಾನ|
ಅಲ್ಲೂವಿಗೊಂದೆ ಕಂಡಿದುನು ಈಗಿನ್ನು
ಏನೂ ಮಾಡಿದರು ಹೋಗೋದಿಲ್ಲಾ ತಾನ |ತಂದಾನ|
ಹನುಮಂತವೀಗೂ ಹಾರಿದನು ಈಗಿನ್ನು
ಎಲ್ಲೂವಿಗೊಂದೆ ಬಂದನಾಲಾ ತಾನ |ತಂದಾನ|
ಎಲ್ಲೂವಿಗೊಂದೆ ಬಂದನಾಲಾ ವೀಗಿನ್ನು
ರವಣನ ಮನೆಗೊಂದೆ ಹಾರಿದನು ತಾನ |ತಂದಾನ|
ರವಣನ ಮನೆಗೊಂದೆ ಬಂದಿದುನು ವೀಗಿನ್ನು
ರವಣಾ ಪಟ್ಟವೊಂದೇ ಏರಿದುನಾ ತಾನ |ತಂದಾನ|
ತನ್ನಾ ಬಾಲನೇ ಬೆಳೆಸಿದನು ವೀಗಿನ್ನು
ರವಣಾನಾಕಿಂತೂ ಮ್ಯಾಲೆ ಕೂತಿದುನಾ ತಾನ |ತಂದಾನ|
ಲಂಕಾ ಪಟ್ನಾದ ರವಣಾನು ವೀಗಿನ್ನು
ಈ ಬಾಲಕೂ ಬೆಂಕಿ ಹಚ್ಚುಬೇಕಾ ತಾನ |ತಂದಾನ|
ಹನುಮಂತ ಬಾಲಕೂ ಸುತ್ತತದೆಯೋ ವೀಗಿನ್ನು
ಚಂಪಿಗೀಗೊಂದೆ ಸುತ್ತತದೆಯೋ ತಾನ |ತಂದಾನ|
ಚಂಪಿಗೀಗೊಂದೆ ಸುತ್ತತದೆಯೋ ವೀಗಿನ್ನು
ಎಲ್ಲೆಲ್ಲಿ ಚಂಪಿ ಸುತ್ತಿದುರೋ ತಾನ |ತಂದಾನ|
ಹನುಮಂತನ ಬಲಾ ತುಂಬುದಲಾ ವೀಗಿನ್ನು
ಸೀತಿಗ್ಹುಡಿಕೊಂಡು ಓಡಿದುರು ತಾನ |ತಂದಾನ|
ಸೀತಿಗ್ಹುಡಿಕೊಂಡು ಓಡಿದುರು ಈಗಿನ್ನು
ಅಲ್ಲಿಂದು ಬಟ್ಟೀನೆ ತಂದರ್ಯಾಲಾ ತಾನ |ತಂದಾನ|
ಅಲ್ಲಿಂದು ಬುಟ್ಟೀನೆ ತಂದರ್ಯಾಲ ವೀಗಿನ್ನು
ಹನುಮಂತನ ಬಾಲ ತುಂಬದ್ಯಾಲ ತಾನ |ತಂದಾನ|
ಬಾಲಕೂ ಎಣ್ಣೇನೆ ಹೊಯ್ತರಿಯೋ ಈಗಿನ್ನು
ಎಷ್ಟು ಎಣ್ಣೀನೆ ಹೊಯ್ದರಿಯೋ ತಾನ |ತಂದಾನ|
ಎಷ್ಟು ಎಣ್ಣೀನೆ ಹೊಯ್ದರಿದರು ಈಗಿನ್ನು
ಹನುಮಂತನು ಬಾಲ ಲದ್ದುವುದಿಲ್ಲಾ ತಾನ |ತಂದಾನ|
ಹನುಮಂತನು ಬಾಲ ಅದ್ದುವುದಿಲ್ಲ ವೀಗಿನ್ನು
ಸೀತಿಗ್ಹುಡಿಕೊಂಡೆ ಓಡದ್ಯಾಲಾ ತಾನ |ತಂದಾನ|
ಸೀತಿಗ್ಹುಡಿಕೊಂಡೆ ಓಡಿದರು ಈಗಿನ್ನು
ಅಲ್ಲಿಂದೆಣ್ಣೇನೆ ತಂದರಾಲಾ ತಾನ |ತಂದಾನ|
ಅಲ್ಲಿಂದೆಣ್ಣೇನೆ ತಂದರಾಲಾ ಈಗಿನ್ನು
ಹನುಮಂತನು ಬಾಲಕೂ ಹೊಯ್ದರಿಯಾ ತಾನ |ತಂದಾನ|
ಹನುಮಂತನ ಬಾಲಲದ್ದದ್ಯಲ ವೀಗಿನ್ನು
ಆಗೂ ಬೆಂಕೀನ ಹಚ್ಚುತಾರಿಯಾ ತಾನ |ತಂದಾನ|
ಎಲ್ಲೆಲ್ಲಿ ಬೆಂಕಿ ತಂದಿದುರು ವೀಗಿನ್ನು
ಹನುಮಂತನ ಬಾಲಕೂ ಹಿಡಿಲಿಲ್ಲಾ ತಾನ |ತಂದಾನ|
ಸೀತೀ ಬುಡುಕೊಂದೆ ಓಡಿದರು ವೀಗಿನ್ನು
ಅಲ್ಲಿನು ಬೆಂಕೀನೆ ತಂದರಾಲಾ ತಾನ |ತಂದಾನ|
ಅಲ್ಲಿನು ಬೆಂಕೀನೆ ತಂದಿದುರು ಈಗಿನ್ನು
ಹನುಮಂತನ ಬಾಲಕು ಹಚ್ಚಿದರಾ ತಾನ |ತಂದಾನ|
ಹನುಮಂತನು ಬಾಲಕು ಹಚ್ಚಿದರು ಈಗಿನ್ನು
ಬಾಲಕೂ ಬೆಂಕೀನೆ ಬಿದ್ದದ್ಯಾಲಾ ತಾನ |ತಂದಾನ|
ಬಾಲಕೂ ಬೆಂಕೀನೆ ಬಿದ್ದದ್ಯಾಲಾ ವೀಗಿನ್ನು
ಹನುಮಂತ ತಡುವೆ ಮಾಡಲಿಲ್ಲಾ ತಾನ |ತಂದಾನ|
ಹನುಮಂತ ತಡುವೆ ಮಾಡಲಿಲ್ಲಾ ವೀಗಿನ್ನು
ರವಣಾನು ಗಡ್ಡಾನೇ ಗಾರಿದುನಾ ತಾನ |ತಂದಾನ|
ರವಣಾನು ಗಡ್ಡಾನೇ ಗಾರಿದುನಾ ವೀಗಿನ್ನು
ತಾನೂವಿಗೊಂದೆ ಹಾರಿದನೂ ತಾನ |ತಂದಾನ|
ತಾನೂವಿಗೊಂದೆ ಹಾರಿದನೂ ವೀಗಿನ್ನು
ಆಚೀಮನೆಗೊಂದೇ ಹಾರಿದುನಾ ತಾನ |ತಂದಾನ|
ಆಚೀ ಮನೆಗೊಂದೆ ಹಾರಿದುನಾ ವೀಗಿನ್ನು
ಈಚೀ ಮನೆಗೊಂದೆ ಹಾರಿದುನು ತಾನ |ತಂದಾನ|
ಈಚೀ ಮನೆಗೊಂದೆ ಹಾರಿದನು ವೀಗಿನ್ನು
ಲಂಕಾ ಪಟ್ನಾ ಬೆಂಕಿ ಕೊಟ್ಟನ್ಯಾಲಾ ತಾನ |ತಂದಾನ|
ಲಂಕಾ ಪಟ್ನಾ ಬೆಂಕಿ ಕೊಟ್ಟನ್ಯಾಲಾ ವೀಗಿನ್ನು
ಹನುಮಂತ ತಾನೇ ಸುಟ್ಟುನಾಲಾ ತಾನ |ತಂದಾನ|
ಹನುಮಂತ ತಾನೇ ಸುಟ್ಟುನಯೋ ವೀಗಿನ್ನು
ಅಲ್ಲೂ ಎಡು ಜನರು ಇರುವವರಾ ತಾನ |ತಂದಾನ|
ಅಲ್ಲೂ ಎಲ್ಡು ಜನರು ಇರುವರು ಈಗಿನ್ನು
ಕಡಕಾಲ ಆಚೇರಿ ಎಂಬುವನೂ ತಾನ |ತಂದಾನ|
ಕಡಕಾಲ ಆಚೇರಿ ಎಂಬುವನೂ ಈಗಿನ್ನು
ಕುಡುಕೋ ಆಚೇರಿ ಎಂಬುವರೂ ತಾನ |ತಂದಾನ|
ಕುಡುಕೋ ಆಚೇರಿ ಎಂಬುವನು ಈಗಿನ್ನು
ಎಲಡು ಜನವೀಗೂ ಇರುವವರಾ ತಾನ |ತಂದಾನ|
ಎಲಡು ಜನರವರು ಅವರಿಯಾಲ ವೀಗಿನ್ನು
ಒಂದು ಉಳಿಯೊಂದೆ ಹೊಡಿದಿದುರಾ ತಾನ |ತಂದಾನ|
ಒಂದು ಉಳಿಯೊಂದೆ ಹೊಡಿದಿದುರಾ ವೀಗಿನ್ನು
ಸಾವುರು ಮನೆಯೊಂದೇ ಮಾಡುತಾರಿಯಾ ತಾನ |ತಂದಾನ|
ಹನುಮಂತ ಸುಟ್ಟಿ ಬರುವರಿಗೆ ಈಗಿನ್ನು
ಸಾವುರು ಮನೆಯೊಂದೇ ಕಟ್ಟುತಾರಿಯೋ ತಾನ |ತಂದಾನ|
ಸಾವುರು ಮನೆಯೊಂದೇ ಕಟ್ಟುತಾರಿಯೋ ವೀಗಿನ್ನು
ಹನುಮಂತವೀಗೂ ಸತ್ತನಾಲಾ ತಾನ |ತಂದಾನ|
ಹನುಮಂತವೀಗೂ ಸತ್ತನಾಲಾ ವೀಗಿನ್ನು
ಅಯ್ಯೋ ರಾಮಸ್ವಾಮಿ ಅಂದನಾಲಾ ತಾನ |ತಂದಾನ|
ಅಯ್ಯೋ ರಾಮಸ್ವಾಮಿ ಅಂದಿದುನು ವೀಗಿನ್ನು
ಇದರಲ್ಲಿ ನಾನೇ ಸತ್ತನಾಲಾ ತಾನ |ತಂದಾನ|
ಇದರಲ್ಲಿ ನಾನೇ ಸತ್ತನಾಲಾ ವೀಗಿನ್ನು
ಅಯ್ಯೋ ರಾಮಸ್ವಾಮಿ ಅನುತಾನಿಯಾ ತಾನ |ತಂದಾನ|
ರಾಮುನು ಗ್ಯಾನ ಮಾಡುತಾನಿಯೋ ವೀಗಿನ್ನು
ರಾಮಸ್ವಾಮಿನೇ ಕಂಡನಲ್ಲಾ ತಾನ |ತಂದಾನ|
ರಾಮಸ್ವಾಮಿನೇ ಕಂಡಿದನೇ ವೀಗಿನ್ನು
ಅಲ್ಲೆ ಒಂದು ಶಾಪ ಹೊಡುದಿದುರಾ ತಾನ |ತಂದಾನ|
ಅಲ್ಲೊಂದು ಶಾಪ ಹೊಡೆದಿದುನು ವೀಗಿನ್ನು
ಒಂದುಳಿ ಸಾವುರಮನೆ ಲಾಗುಬಾರಾ ತಾನ |ತಂದಾನ|
ಒಂದುಳಿ ಸಾವುರ ಮನೆ ಲಾಗುಬಾರಾ ವೀಗಿನ್ನು
ಸಾವಿರ ಉಳಿಯೊಂದೇ ಹೊಡೆದಿದುರು ತಾನ |ತಂದಾನ|
ಸಾವಿರ ಉಳಿಯೊಂದೇ ಹೊಡೆದಿದುರು ವೀಗಿನ್ನು
ಒಂದೆ ಮನೆಯೊಂದೇ ಆಗುಬೇಕಾ ತಾನ |ತಂದಾನ|
ಸಾವಿರ ಉಳಿಯೊಂದೇ ಹೊಡಿದವರಗೆ ವೀಗಿನ್ನು
ಒಂದೇ ಮನೆಯೊಂದೇ ಕಟ್ಟುವರಿಗಾ ತಾನ |ತಂದಾನ|
ಒಂದೇ ಮನೆಯೊಂದೇ ಕಟ್ಟುವರಿಗಾ ಈಗಿನ್ನು
ಲಂಕಾ ಪಟ್ನಾನೇ ಸುಟ್ಟನ್ಯಾಲಾ ತಾನ |ತಂದಾನ|
ಲಂಕಾ ಪಟ್ನಾನೇ ಸುಟ್ಟನ್ಯಾಲಾ ವೀಗಿನ್ನು
ಹನುಮಂತವೀಗೂ ಹಾರನ್ಯಾಲಾ ತಾನ |ತಂದಾನ|
ಹನುಮಂತವೀಗೂ ಹಾರಾನ್ಯಾಲ್ಲೋ ವೀಗಿನ್ನು
ಬಾಲದಲ್ಲೂ ಬೆಂಕಿ ಹಿಡಿತದಿಯೋ ತಾನ |ತಂದಾನ|
ಬಾಲದಲ್ಲೂ ಬೆಂಕಿ ಹಿಡಿತದಿಯೋ ವೀಗಿನ್ನು
ಎಲ್ಲಿಗೋಲವನು ಓಡುತಾನಿಯೋ ತಾನ |ತಂದಾನ|
ಎಲ್ಲಿಗೋಲವನು ಓಡುತಾನಿಯೋ ವೀಗಿನ್ನು
ಗಂಗಿ ಹಾರೋಕು ಓಡುತಾನಿಯೋ ತಾನ |ತಂದಾನ|
ಸಮುದುರು ತೀರು ಓಡುತಾನಿಯೋ ಈಗಿನ್ನು
ಹನುಮಂತ ತಾನೇ ಓಡುವಂಗಾ ತಾನ |ತಂದಾನ|
ಸಮುದುರುದಲ್ಲಿ ಗಂಗಿ ಇರುವುದಾಲಾ ವೀಗಿನ್ನು
ಹಿಂದಾರಾವಿಗೊಂದೆ ಓಡುತಾರಿಯೋ ತಾನ |ತಂದಾನ|
ಗಂಗಿ ಬುಡುಕೊಂದೆ ಓಡುತಾರಿಯೋ ವೀಗಿನ್ನು
ಆಗುತಾನೀಗು ಇರುವನಾಲಾ ತಾನ |ತಂದಾನ|
ಆಗುತಾನೀಗು ಇರುವನಾಲೋ ವೀಗಿನ್ನು
ಹನುಮಂತ ತಾನೇ ಎಂಬುವನಾ ತಾನ |ತಂದಾನ|
ಹನುಮಂತ ತಾನೇ ಎಂಬುವನಾ ವೀಗಿನ್ನು
ಅಯ್ಯೋ ರಾಮಸ್ವಾಮಿ ಅನುತಾನಿಯೋ ತಾನ |ತಂದಾನ|
ಅಯ್ಯೋ ರಾಮಸ್ವಾಮಿ ಅನುತಾನಿಯೋ ವೀಗಿನ್ನು
ಈಗೂ ನಾನೊಂದೆ ಉಳುವುದಿಲ್ಲಾ ತಾನ |ತಂದಾನ|
ಈಗೂ ನಾನೊಂದೆ ಉಳುವುದಿಲ್ಲಾ ವೀಗಿನ್ನು
ಬಾಲದಲ್ಲು ಬೆಂಕಿ ನಂದುದಿದುರಾ ತಾನ |ತಂದಾನ|
ಬಾಲದಲ್ಲೂ ಬೆಂಕಿ ನಂದುದಿದರಾ ವೀಗಿನ್ನು
ನಾನೂವೀಗೊಂದೆ ಬದುಕೋದಿಲ್ಲಾ ತಾನ |ತಂದಾನ|
ರಾಮಾಸ್ವಾಮಿನೇ ಕಂಡನಾಲಾ ವೀಗಿನ್ನು
ನಿಟ್ಟೊಂದು ನುಡಿಯ ನುಡಿದಿದುನಾ ತಾನ |ತಂದಾನ|
ಏನೊಂದು ನುಡಿನೆ ನುಡಿದಿದನು ವೀಗಿನ್ನು
ಸಮುದರದೊಳಗೊಂದೇ ಏಳುಬೇಕಾ ತಾನ |ತಂದಾನ|
ಸಮುದರದೊಳಗೊಂದೇ ಏಳುಬೇಕು ಈಗಿನ್ನು
ಏಳೂ ತೆರಿಯೊಂದೆ ಏಳುಬೇಕಾ ತಾನ |ತಂದಾನ|
ಏಳೂ ತೆರಿಯೊಂದೆ ಏಳುಬೇಕು ಈಗಿನ್ನು
ಹನುಮಂತನು ಬಾಲಕೂ ಹೊಡಿಬೇಕಾ ತಾನ |ತಂದಾನ|
ಹನುಮಂತನು ಬಾಲಕೂ ಹೊಡಿಬೇಕು ಈಗಿನ್ನು
ಬಾಲದ ಬೆಂಕೀನೇ ನಂದುಬೇಕಾ ತಾನ |ತಂದಾನ|
ರಾಮಸ್ವಾಮಿನೇ ನುಡಿದಿದುರುವೀಗಿನ್ನು
ಒಂದು ಶಾಪಾನೇ ಹೊಡೆದನಲ್ಲಾ ತಾನ |ತಂದಾನ|
ಸಮುದುರದೊಳಗೆ ಎದ್ದಿದಲ್ಲೊ ವೀಗಿನ್ನು
ಏಳುತೆರೆಯೊಂದೆ ಎದ್ದದ್ಯಾಲಾ ತಾನ |ತಂದಾನ|
ಏಳುತೆರೆಯೊಂದೆ ಎದ್ದದ್ಯಾಲಾ ವೀಗಿನ್ನು
ಬೆನ್ನಿಗೂ ಬೆನ್ನೀಗೂ ಬಂದದ್ಯಾಲಾ ತಾನ |ತಂದಾನ|
ಬೆನ್ನಿಗೂ ಬೆನ್ನೀಗೂ ಬಂದದೆಯೋ ವೀಗಿನ್ನು
ಹನುಮಂತನು ಬಾಲಕೂ ಹೊಡೆದದಿಯಾ ತಾನ |ತಂದಾನ|
ಹನುಮಂತನ ಬಾಲಕೂ ಹೊಡೆದದಿಯಾ ವೀಗಿನ್ನು
ಬಾಲುದು ಬೆಂಕೀನೇ ನಂದದ್ಯಾಲಾ ತಾನ |ತಂದಾನ|
ಬಾಲುದು ಬೆಂಕೀನೇ ನಂದದ್ಯಾಲಾ ಈಗಿನ್ನು
ಹನುಮಂತ ತಾನೇಲಿರುವನಾಲಾ ತಾನ |ತಂದಾನ|
ಹನುಮಂತ ತಾನೇಲಿರುವವನು ಈಗಿನ್ನು
ಲಂಕೀಗೊಂದೆ ಹಾರ್ಯಾನಾಲಾ ತಾನ |ತಂದಾನ|
ಸೇತೂವಿಗೊಂದೆ ಹಾರಿದನು ವೀಗಿನ್ನು
ಸೇತುವಿಮೇಲೊಂದೇ ಬಂದನಾಲಾ ತಾನ |ತಂದಾನ|
ಸೇತುವಿಮೇಲೊಂದೆ ಬಂದಿದನು ಈಗಿನ್ನು
ಎಲ್ಲಿಗಿಗೊಂದೆ ಬಂದನಾಲಾ ತಾನ |ತಂದಾನ|
ಎಲ್ಲಿಗಿಗೊಂದೆ ಬಂದಿದನು ವೀಗಿನ್ನು
ರಾಮಗೂ ಹುಡುಕೊಂಡೇ ಬಂದನಾಲಾ ತಾನ |ತಂದಾನ|
ರಾಮಸ್ವಾಮಿನೆ ಎಂಬುವನು ವೀಗಿನ್ನು
ಅಲ್ಲೂವಿಗೊಂದೆ ಕೇಳುತಾನಿಯೋ ತಾನ |ತಂದಾನ|
ಹನುಮಂತವೀಗೂ ಹೇಳುತವನೆ ವೀಗಿನ್ನು
ನಿನ್ನಾ ಸೀತೀನೆ ಕಂಡಿಯಂಬಾ ತಾನ |ತಂದಾನ|
ನಿನ್ನಾ ಸೀತೀನೆ ಅದುವಾಳು ವೀಗಿನ್ನು
ಮಟ್ಟು ಮಾವೀನ ತಪ್ಲದೆಲ್ಲೋ ತಾನ |ತಂದಾನ|
ಮಟ್ಟು ಮಾವೀನ ತಪ್ಲಲ್ಲೋ ಈಗಿನ್ನು
ನಿನ್ನಾ ಮುದ್ರೀನೆ ಕೊಟ್ಟನ್ಯಾಲಾ ತಾನ |ತಂದಾನ|
ಲಾಗರಾ ರಾಮನೇಲಿರುವನಾಲೇ ಈಗಿನ್ನು
ಕೇಳೋ ಹನುಮಂತ ನೀನಾಲಾ ತಾನ |ತಂದಾನ|
ಕೇಳೊ ಹನುಮಂತ ನೀನಾಲಾ ವೀಗಿನ್ನು
ನನ್ನಾ ಭಕುತನೇ ನೀನಾಲಾ ತಾನ |ತಂದಾನ|
ಸೀತಿ ಉಂಗುರವೇ ಕೊಟ್ಟಿಯಾಲೋ ವೀಗಿನ್ನು
ಲಂಕಾ ಪಟ್ನಾನೇ ಸುಟ್ಟಿಯಾಲಾ ತಾನ |ತಂದಾನ|
ಲಂಕಾ ಪಟ್ನಾನೇ ಸುಟ್ಟಿಯಲ್ಲೋ ವೀಗಿನ್ನು
ರಾಮನೂ ಚರಣಾಕೂ ಒರಗಿದ್ಯಾಲಾ ತಾನ |ತಂದಾನ|
ಬಾಳ ಖುಷಿಯೊಂದೆ ಆಗಿದುವೆ ಈಗಿನ್ನು
ರಾಮಾಸ್ವಾಮಿನೇ ಎಂಬವನಾಲಾ ತಾನ |ತಂದಾನ|
ಲಾಗುತಾನಿಗೂ ಲಿರುವವನು ಈಗಿನ್ನು
ರಾಮಲಕ್ಷುಮಣ್ಣ ಎಂಬವರು ತಾನ |ತಂದಾನ|
ರಾಮಲಕ್ಷುಮಣ್ಣ ಎಂಬುವರು ವೀಗಿನ್ನು
ಹನುಮಂತ ತಾನೇ ಇರುವವನು ತಾನ |ತಂದಾನ|
ಹನುಮಂತ ತಾನು ಇರುವವನು ಈಗಿನ್ನು
ಅಲ್ಲೂವಿಗೊಂದೆ ಉಳುವಂಗಾ ತಾನ |ತಂದಾನ|
ಲಂಕಾ ಪಟ್ನಾದ ರವಣಾನು ಈಗಿನ್ನು
ಅವನಿಗೂ ಸಿಟ್ಟೊಂದೆ ಬಂದಿದೆಯೋ ತಾನ |ತಂದಾನ|
ಎಲ್ಲಿಂದು ಮಂಗ ಬಂದಿದುವೆ ಈಗಿನ್ನು
ಲಂಕಾಪಟ್ನಾದ ಸುಟ್ಟಿದ್ಯಾಲೇ ತಾನ |ತಂದಾನ|
ರಾಮುನು ಮಾಯಾನೇ ಎಂದಿದನೋ ವೀಗಿನ್ನು
ರಾಮನಲ್ಲು ಯುದ್ದಾನೆ ಮಾಡಬೇಕಾ ತಾನ |ತಂದಾನ|
ಲಾಗೂತಾನೀಗ ಕೇಳುತಾನಿಯೋವೀಗಿನ್ನು
ತನ್ನ ತಮ್ಮನೇಂಬವನಾ ತಾನ |ತಂದಾನ|
ತಮ್ಮನಿಗೊಂದೆ ಕಳುವಿದನೋ ಈಗಿನ್ನು
ವಿಭೀಷಣ ಎಂಬ ಹೆಸರಾಲಾ ತಾನ |ತಂದಾನ|
ರವಣಾನಾ ತಮ್ಮನೇ ಎಂಬುವನು ಈಗಿನ್ನು
ವಿಭೀಷಣ ಎಂದು ಇರುವನಾಲಾ ತಾನ |ತಂದಾನ|
ಅವನವೀಗೊಂದೆ ಕಳುಹಿದನೇ ಈಗಿನ್ನು
ರಾಮಾನಲ್ಲೀಗೂ ಕಳುಹಿದುನೇ ತಾನ |ತಂದಾನ|
ಲಾಗುತಾನೀಗೂ ಹೋಗತವನೆ ಈಗಿನ್ನು
ಲಂಕಾದಲ್ಲೀಗೂ ನಡಿದರಿಯಾ ತಾನ |ತಂದಾನ|
ಲಂಕಾದಲ್ಲೀಗೂ ನಡಿತೌದೆ ವೀಗಿನ್ನು
ಅವರೀಗೂ ಯುದ್ದೀನೇ ನಡಿವಂಗಾ ತಾನ |ತಂದಾನ|
ಅವರಿಗು ಯುದ್ದೀನೇ ನಡಿತದೆಯೋ ವೀಗಿನ್ನು
ವಿಭೀಷಣ ಸೋತು ಬಂದನಾಲಾ ತಾನ |ತಂದಾನ|
ವಿಭೀಷಣ ತಾನು ಹೇಳುತವನೇ ವೀಗಿನ್ನು
ರಾಮನ ಕೂಡೊಂದೆ ಹೇಳುತಾನಿಯೋ ತಾನ |ತಂದಾನ|
ನನ್ನಾ ದೂರೀಗೂ ಕೊಲುಬೇಡಿ ವೀಗಿನ್ನು
ದರಮು ಶರಣೆನ್ನ ಬಿಡಿಯೆಂಬಾ ತಾನ |ತಂದಾನ|
ನನ್ನಾ ಈಗೊಂದೇ ಬಿಡಿಯೆಂಬ ವೀಗಿನ್ನು
ನಾನು ನಿಮಗೊಂದಲಾಗುತೀದಾ ತಾನ |ತಂದಾನ|
ನಾನುವಿಗೊಂದೆ ನಿಮಗೊಂದಲಾಗುತೀದೆ ವೀಗಿನ್ನು
ನಿಮಗೂ ಸಾಯಾನೀ ಮಾಡುತೀದಾ ತಾನ |ತಂದಾನ|
ವಿಭೀಷಣ ಸೋತು ಬಂದನೋ ವೀಗಿನ್ನು
ಹಿಂದೂವಿಗೊಂದೆ ಬಂದನಾಲಾ ತಾನ |ತಂದಾನ|
ಲಾಗು ತಾನೀಗೂ ಬಂದಿದುನು ವೀಗಿನ್ನು
ರವಣನು ಕೈಯೆಲಿ ಹೇಳುತನಿಯೋ ತಾನ |ತಂದಾನ|
ನಾನು ವೀಗೊಂದೆ ಹೋಗುದಿಲ್ಲಾ ವೀಗಿನ್ನು
ರಾಮುನಲ್ಲು ನಾನೇ ಗೆಲ್ಲುಲಾರೆ ತಾನ |ತಂದಾನ|
ರಾಮುನಲ್ಲು ನಾನೇ ಗೆಲ್ಲುಲಾರೆ ವೀಗಿನ್ನು
ಅಂದು ತಾನೀಗೂ ಹೇಳುತನಿಯೋ ತಾನ |ತಂದಾನ|
ಅಂದು ತಾನೀಗೂ ಹೇಳುತನಿಯೋ ವೀಗಿನ್ನು
ರವಣಾವೀಗೊಂದೆ ಲಿರುವನಾಲ ತಾನ |ತಂದಾನ|
ರವಣಾವೀಗೊಂದೆ ಲಿರುವನಾಲ ವೀಗಿನ್ನು
ಹತ್ತು ತಲಿಯೊಂದೆ ಅವನಿಗಾಲಾ ತಾನ |ತಂದಾನ|
ಹತ್ತು ತಲಿಯೊಂದೆ ಅವನಿಗಾಲ ವೀಗಿನ್ನು
ತಾನೂ ಈಗೊಂದೆಲಿರುವನಾಲಾ ತಾನ |ತಂದಾನ|
ತಾನೂ ಈಗೊಂದೆಲಿರುವನು ವೀಗಿನ್ನು
ಯುದ್ದಕ್ಕೂ ಸಿದ್ದಾಗಿ ಏಳುತಾನಿಯೋ ತಾನ |ತಂದಾನ|
ಯುದ್ದಕೂ ಸಿದ್ದಾಗಿ ಹೋಗುತಾನೇ ವೀಗಿನ್ನು
ಎಲ್ಲಿಗೂವೀಗು ಹೋಗುತಾನಿಯೋ ತಾನ |ತಂದಾನ|
ಎಲ್ಲಿಗೂವೀಗೂ ಹೋಗುತಾನಿಯೋ ವೀಗಿನ್ನು
ಲಂಕಿಯಲ್ಲೊಂದೆ ನೆಡಿತದಿಯೋ ತಾನ |ತಂದಾನ|
ಲಂಕಿಯಲ್ಲೊಂದೆ ನೆಡಿತದಿಯೋ ವೀಗಿನ್ನು
ಅವರಿಗೂ ಯುದ್ದೊಂದೆ ನಡಿವಂಗಾ ತಾನ |ತಂದಾನ|
ಅವರಿಗೂ ಯುದ್ದಾನೇ ನಡಿತೆದಯೋ ವೀಗಿನ್ನು
ಯಾರಿಗೂ ಸೋಲೊಂದೆ ಬರೊದಿಲ್ಲಾ ತಾನ |ತಂದಾನ|
ಯಾರಿಗೂ ಸೋಲೊಂದೆ ಬರೊದಿಲ್ಲಾ ವೀಗಿನ್ನು
ಅಲ್ಲೂವಿಗೊಂದೇ ಲಿರುವದಾಲ ತಾನ |ತಂದಾನ|
ಸೋಲು ಗೆಲೊಂದೆ ಬರೋದಿಲ್ಲಾ ವೀಗಿನ್ನು
ಅಲ್ಲೂವಿಗೊಂದೇ ಲಿರುವದಾಲಾ ತಾನ |ತಂದಾನ|
ರವಣನು ಬಾಣನೇ ಇರುವದಾಲೋ ವೀಗಿನ್ನು
ಲಚ್ಚಮಣ್ಣಗೊಂದು ಬಾಣ ಬಿದ್ದದಾಲಾ ತಾನ |ತಂದಾನ|
ಲಚ್ಚಮಣ್ಣಗೊಂದು ಬಾಣ ಬಿದ್ದದಾಲಾ ವೀಗಿನ್ನು
ಅಲ್ಲೂವಿಗೊಂದೇ ಬಿದ್ದನ್ಯಾಲ ತಾನ |ತಂದಾನ|
ರಾಮಸ್ವಾಮಿನೇ ಕೆಳಗುತಾನಿಯೋ ವೀಗಿನ್ನು
ಹನುಮಂತನು ಕೂಡು ಹೇಳುತನಿಯೋ ತಾನ |ತಂದಾನ|
ಹನುಮಂತನು ಕೈಲು ಹೇಳುತನಿಯೋ ವೀಗಿನ್ನು
ಇಲ್ಲೊಂದು ಗುಡ್ಡಿ ಅದಿಯಾಲಾ ತಾನ |ತಂದಾನ|
ಇಲ್ಲೊಂದು ಗುಡ್ಡಿ ಅದಿಯಾಲಾ ವೀಗಿನ್ನು
ಕಿಷಿಗುಂದ ಪರುವತ ಎಂಬುದಾಲಾ ತಾನ |ತಂದಾನ|
ಕಿಷಿಗುಂದ ಪರುವತ ಎಂಬುದಾಲಾ ವೀಗಿನ್ನು
ಆ ಗುಡ್ಡಿಯಲು ಲದಿಯಾಲಾ ತಾನ |ತಂದಾನ|
ಆ ಗುಡ್ಡಿಯಲು ಲದಿಯಾಲೋ ವೀಗಿನ್ನು
ಒಂದೂ ಮದ್ದಿನು ಗಿಡವಾಲಾ ತಾನ |ತಂದಾನ|
ಒಂದೂ ಮದ್ದಿನು ಗಿಡವಾಲಾ ವೀಗಿನ್ನು
ಹೋಗು ನೀನೀಗು ತರಬೇಕು ತಾನ |ತಂದಾನ|
ಹೋಗು ನೀನೀಗು ತರಬೇಕು ವೀಗಿನ್ನು
ಹನುಮಂತನ ಕೂಡು ನುಡಿದನೆಯೋ ತಾನ |ತಂದಾನ|
ಹನುಮಂತ ತಾನು ಹೋಗುತಾನಿಯೋ ವೀಗಿನ್ನು
ಎಲಿಗೀಗೊಂದೆ ಹೋಗಿದುನಾ ತಾನ |ತಂದಾನ|
ಎಲ್ಲಿಗೀಗೊಂದೇ ಹೋಗಿದುನಾ ಈಗಿನ್ನು
ಕಿಷಿಗಿಂದು ಪರುವತ ಎಂಬುದಾಲಾ ತಾನ |ತಂದಾನ|
ಕಿಷಿಗಿಂದು ಪರುವತ ಎಂಬುದಾಲಾ ವೀಗಿನ್ನು
ಅಲ್ಲೂ ತಾನೀಗೂ ಹೋಗುತಾನಿಯಾ ತಾನ |ತಂದಾನ|
ಅಲ್ಲೂವಿಗೊಂದೆ ಹುಡುಕಿದನು ವೀಗಿನ್ನು
ಮದ್ದಿನ ಗಿಡವೊಂದೇ ಸಿಕ್ಕಿಲಿಲ್ಲಾ ತಾನ |ತಂದಾನ|
ಮದ್ದಿನ ಗಿಡವೊಂದೆ ಸಿಕ್ಕಲಿಲ್ಲಾ ವೀಗಿನ್ನು
ಇಡಿಯೋಗುಡ್ಡೀನ ತಿರುಗಿದನೋ ತಾನ |ತಂದಾನ|
ಇಡಿಯೋ ಗುಡ್ಡಿನೆ ತಿರುಗಿದನೋ ಹನುಮಂತ
ಆಗೂತಾನೀಗೂಲಿರುವನಾಲಾ ತಾನ |ತಂದಾನ|
ಆಗೂ ತಾನೀಗೂಲಿರುವನಾಲಾ ಕಂಡಿದುನೋ ವೀಗಿನ್ನು
ಇನ್ನು ನಾನೇನ ಮಾಡಲೆಂಬಾ ತಾನ |ತಂದಾನ|
ಇನ್ನು ನಾನೇನ ಮಾಡಲೆಂಬಾ ವೀಗಿನ್ನು
ಕಿಷಿಗಿಂದ ಪರುವತ ಕಿತ್ತನ್ಯಾಲಾ ತಾನ |ತಂದಾನ|
ಗುಡ್ಡಿವಿಗೊಂದೆ ಕಿತ್ತನೆಯೋ ವೀಗಿನ್ನು
ಹೊತ್ತುಗೊಂಡೀಗು ಬಂದನಾಲಾ ತಾನ |ತಂದಾನ|
ಹೊತ್ತುಗೊಂಡೀಗು ಬಂದಿದನು ವೀಗಿನ್ನು
ರಾಮಸ್ವಾಮಿಗೂ ಕೊಡುತನಿಯೋ ತಾನ |ತಂದಾನ|
ನನವಿಗೊಂದೆ ಸಿಕ್ಕಲಿಲ್ಲ ವೀಗಿನ್ನು
ಮದ್ದಿನು ಗಿಡವೊಂದೆ ಸಿಕ್ಕುಲಿಲ್ಲಾ ತಾನ |ತಂದಾನ|
ಗುಡ್ಡೀ ಕಿತ್ತುಗಂಡೆ ಬಂದಿದನೋ ವೀಗಿನ್ನು
ರಾಮಸ್ವಾಮಿನೇ ಹುಡುಕಿದನೋ ತಾನ |ತಂದಾನ|
ರಾಮಾಸ್ವಾಮಿನೇ ಹುಡುಕಿದನೋ ವೀಗಿನ್ನು
ಮದ್ದಿನು ಗಿಡವೊಂದೆ ಹುಡುಕಿದುನಾ ತಾನ |ತಂದಾನ|