ಕೇಳು ನನ್ನ ತಮ್ಮ ನೀನಾರು ಈಗಿನ್ನು
ಕೈಯಲು ನಿನೊಂದು ಮುಟ್ಟುಬೇಡಾ ತಾನ |ತಂದಾನ|
ಕೈಯಲು ನೀನೆ ಮುಟ್ಟುಬೇಡಾ ವೀಗಿನ್ನು
ಕಾಲಲು ಹೆಕ್ಕೊಂದೆ ಕೊಡುವಾಲಾ ತಾನ |ತಂದಾನ|
ಲಾಗೂತಾನೀಗೂ ನುಡಿದಿದುನು ಈಗಿನ್ನು
ರಾಮಸ್ವಾಮಿನೇ ನುಡಿದಿದುರಾ ತಾನ |ತಂದಾನ|
ಲಚ್ಚುಮಣ್ಣಾನೆ ಇರುವನಲ್ಲಾ ಈಗಿನ್ನು
ಎಡಗಾಲು ಕೊಡ್ಲಿ ಎತ್ತಿದನೋ ತಾನ |ತಂದಾನ|
ಎಡಗಾಲ ಕೊಡ್ಲಿ ಎತ್ತಿದನೋವೀಗಿನ್ನು
ತೆಗೆದುವಿಗೊಂದೆ ಒಗೆದನಲ್ಲೋ ತಾನ |ತಂದಾನ|
ತೆಗೆದುವಿಗೊಂದೆ ಒಗೆದನಲ್ಲೋ ವೀಗಿನ್ನು
ಏಳು ಸಮುದುರಾದಾಚೆಲೂ ತಾನ |ತಂದಾನ|
ಏಳು ಸಮುದುರಾ ಆಚೆಯಲ್ಲೋ ವೀಗಿನ್ನು
ಕೀಳು ಸಮುದ್ರ ಕೊಡಿಯಲ್ಲೋ ತಾನ |ತಂದಾನ|
ಅಲ್ಲಿ ಕೊಡ್ಲಿನೇ ಬಿದ್ದುದಲ್ಲೋ ವೀಗಿನ್ನು
ಲಾಗುತಾನೆಯೋ ಮರಕುತಾನೆಯೋ ತಾನ |ತಂದಾನ|
ಕೇಳಿ ಕೇಳಿ ತಮ್ಮಂದೀರಾ ನೀವಾಳ ವೀಗಿನ್ನು
ನಿಮ್ಮು ತಳ್ಳೀನೆ ನಂಗೂ ಬ್ಯಾಡಾ ತಾನ |ತಂದಾನ|
ನಿಮ್ಮು ತಳ್ಳೀನೆ ನಂಗೂ ಬ್ಯಾಡಾ ವೀಗಿನ್ನು
ಹೊಟ್ಟಗಂಜೀನೆ ಕಳುಕೊಂಡಾ ತಾನ |ತಂದಾನ|
ನನ್ನೊಟ್ಟಿ ಗಂಜಿ ಕಳಕೊಂಡೆ ಈಗಿನ್ನು
ದಾರಿಮ್ಯಾಲೆ ನೀವೆ ಹೋಪರಾಳ ತಾನ |ತಂದಾನ|
ನಿಮ್ಮಾ ತಳ್ಳೀನೆ ನನಗೂ ಬ್ಯಾಡಾವೀಗಿನ್ನು
ಇದೇ ದಾರೀಲಿ ಹೋಗಿರೆಂಬಾ ತಾನ |ತಂದಾನ|
ಇದೆ ದಾರೀಲಿ ಹೋಗಿರೆಂಬಾ ವೀಗಿನ್ನು
ಇಲ್ಲೇ ಮುಂದಿನ ರಾಜ್ಯದಲ್ಲಿ ತಾನ |ತಂದಾನ|
ಇಲ್ಲೇ ಮುಂದಿನ ರಾಜ್ಯದಲಿ ಈಗಿನ್ನು
ಜನಕು ರಾಜುನ ಗಡಿಯಲ್ಲಾ ತಾನ |ತಂದಾನ|
ಜನಕುರಾಜನ ಗಡಿಯಲ್ಲಾ ವೀಗಿನ್ನು
ಬಿಲ್ಲೀನ ಹಬ್ಬೊಂದೆ ನಡಿತದೆಯೋ ತಾನ |ತಂದಾನ|
ಲಂದು ದಾರಿನೇ ತೋರಿಸಿದನು ವೀಗಿನ್ನು
ರಾಮಲಚುಮಣ್ಣ ಎಂಬುವರಾ ತಾನ |ತಂದಾನ|
ಮುಂದು ಮುಂದೊಂದೆ ಅದರಾಲಾ ತಾನ |ತಂದಾನ|
ಮುಂದು ಮುಂದೊಂದೆ ಅದರಾಲಾ ಹೋಗಿದುರು ಈಗಿನ್ನು
ಅಲ್ಲೂವಿಗೊಂದೆ ಬಂದು ಕೂಡರಿಯೋ ತಾನ |ತಂದಾನ|
ಅಲ್ಲೂವಿಗೊಂದೆ ಕೂಡರಿಯೆ ಈಗಿನ್ನು
ಬಿಲ್ಲಿನಬ್ಬಕೂ ಬಂದರಲಾ ತಾನ |ತಂದಾನ|
ಬಿಲ್ಲಿನಬ್ಬಕೂ ಬಂದರಿಯೋ ಈಗಿನ್ನು
ರಾಜುಮಕ್ಕಳು ಬಂದರಿಯೋ ತಾನ |ತಂದಾನ|
ರಾಜುಮಕ್ಕಳು ಕೂಡರಿಯೋ ಈಗಿನ್ನು
ಅರಸು ಮಕ್ಕಳು ಕೂಡರಿಯಾ ತಾನ |ತಂದಾನ|
ಅರಸು ಮಕ್ಕಳು ಕೂಡರಿಯ ಈಗಿನ್ನು
ಅದರಲ್ಲೂ ಈಗೂ ಬಂದನಾಲಾ ತಾನ |ತಂದಾನ|
ಅದರಲ್ಲೂ ಈಗೂ ಬಂದನಿಯೋ ಈಗಿನ್ನು
ಲಂಕಾ ಪಟ್ನಾದ ರವಣಾನೋ ತಾನ |ತಂದಾನ|
ಲಂಕಾ ಪಟ್ನಾದ ರವಣನೋ ಈಗಿನ್ನು
ಹತ್ತು ಅವನಿಗಾಲ ತಲೆಯೊಂದೆ ತಾನ |ತಂದಾನ|
ಹತ್ತು ತಲೆಯೊಂದೇ ಅವನಿಗಾಲ ಈಗಿನ್ನು
ಇಪ್ಪತ್ತು ತೋಳು ಅವನಿಗಾಲಾ ತಾನ |ತಂದಾನ|
ಇಪ್ಪತ್ತು ತೋಳು ಅವನಿಗಾಲಾ ಈಗಿನ್ನು
ಎಲ್ಲರಿಗಿಂತವನೆ ಹುದಿಯಾಳಾ ತಾನ |ತಂದಾನ|
ಎಲ್ಲರಿಗಿಂತವನೆ ಹುದಿಯಾಳಾ ಈಗಿನ್ನು
ಕೊಚ್ಚುತಾಲವನೆ ಕೊಯ್ತವನೇ ತಾನ |ತಂದಾನ|
ಕೊಚ್ಚುತಾಲವನೆ ಕೊಯ್ತವನೇ ಈಗಿನ್ನು
ಈ ಬಾಣ ಎತ್ತು ಹೊಡೆದೆಂಬ ತಾನ |ತಂದಾನ|
ಈ ಬಾಣ ಎತ್ತು ಹೊಡೆದೆಂಬ ವೀಗಿನ್ನು
ಆಕಾಸು ಕಾಕಿನೆ ಕೊಲುತೆಂಬಾ ತಾನ |ತಂದಾನ|
ಆಕಸು ಕಾಕಿನೆ ಕೊಲುತೆಂಬಾ ಈಗಿನ್ನು
ಸೀತಿ ಲಗ್ಗುನಿನೆ ಆಗುತೆಂಬಾ ತಾನ |ತಂದಾನ|
ಕೊಚ್ಚತಾವನೆ ಕೊಯ್ತವನೇ ಈಗಿನ್ನು
ಲಂಕಾ ಪಟ್ನಾದ ರಾವಣನೋ ತಾನ |ತಂದಾನ|
ಲಾಗುತಾವಿಗೋ ಹೋಗಿದರು ಈಗಿನ್ನು
ರಾಮ ಲಚುಮಣ್ಣ ಎಂಬುವರಾ ತಾನ |ತಂದಾನ|
ಲಚುಮಣ್ಣ ರಾಮವಿಗೂ ನುಡಿತವನೇ ವೀಗಿನ್ನು
ಕೇಳು ಕೇಳಾಲ ನನ್ನಣ್ಣಾ ತಾನ |ತಂದಾನ|
ಕೇಳು ಕೇಳಾಲ ನನ್ನಣ್ಣಾ ಈಗಿನ್ನು
ಲೇಸಾ ನಮ್ಮಿಂದ ಆಗಿದುರೆ ತಾನ |ತಂದಾನ|
ಲೇಸಾ ನಮ್ಮಿಂದ ಆಗಿದ್ರು ಈಗಿನ್ನು
ಕೂಸಿ ಮೊದುಲೊಂದೆ ನೋಡಬೇಕಾ ತಾನ |ತಂದಾನ|
ಕೂಸಿ ಮೊದುಲೊಂದೆ ನೋಡಬೇಕಾ ವೀಗಿನ್ನು
ಕೂಸಿ ನಾ ಒಂದೆ ನೋಡಬೇಕಾ ತಾನ |ತಂದಾನ|
ಕೂಸಿ ನಮ್ಮಿಗೂ ನೋಡಬೇಕಾ ಈಗಿನ್ನು
ಯಾವುಪಾಯನೇ ಮಾಡಬೇಕಾ ತಾನ |ತಂದಾನ|
ಯಾವುಪಾಯನೇ ಮಾಡಬೇಕಾ ಈಗಿನ್ನು
ಜನಕುರಾಜನ ಲರಮನೆಯೋ ತಾನ |ತಂದಾನ|
ಜನಕುರಾಜನ ಅರಮನೆಗು ಈಗಿನ್ನು
ಅಲ್ಲಿಗೂ ನಾವೀಗ ಹೋಗಬೇಕೂ ತಾನ |ತಂದಾನ|
ಅಲ್ಲೀಗೂ ನಾವೀಗ ಹೋಗಬೇಕು ಈಗಿನ್ನು
ನೀರು ಕುಡಿಯೂಕು ಕೇಳುಬೇಕೂ ತಾನ |ತಂದಾನ|
ನಾವು ನಿರೋಂದೆ ಕುಡಿವಂಗು ಈಗಿನ್ನು
ಎಲ್ಲಾ ಹೆಣಮಕ್ಕಳು ಬರುತಾರಿಯೋ ತಾನ |ತಂದಾನ|
ಅಲ್ಲೂ ಸೀತೀನ ನೋಡಬೇಕೋ ಈಗಿನ್ನು
ಎಂದೂ ತಾನೀಗ ನುಡಿದನಲಾ ತಾನ |ತಂದಾನ|
ಅಣ್ಣ ತಮ್ಮೇಡು ಜನರಾಲು ಈಗಿನ್ನು
ಎಲ್ಲಿಗೂ ಅವರು ಹೋದರೇನಾ ತಾನ |ತಂದಾನ|
ಎಲ್ಲಿಗೂ ಅವರು ಹೋದರೇನಾ ವೀಗಿನ್ನು
ಜನಕುರಾಜನ ಅರಮನೆಗೂ ತಾನ |ತಂದಾನ|
ಜನಕುರಾಜನ ಅರಮನೆಗೂ ಹೋಗಿದರು
ಅಲ್ಲೂ ಹೋಗೊಂದೇ ನಿತ್ತುಕೊಂಡಾ ತಾನ |ತಂದಾನ|
ಅಲ್ಲೂ ಹೋಗೊಂದೇ ನಿತ್ತುಕೊಂಡು ಈಗಿನ್ನು
ನಮಗಿಟ್ಟು ನೀರೆ ಕೊಡಿರೆಂಬಾ ತಾನ |ತಂದಾನ|
ನಮಗಿಟ್ಟು ನೀರೆ ಲಾಗುಬೇಕು ಈಗಿನ್ನು
ಎಂದು ತಾನೆ ನುಡಿದನಾರಾ ತಾನ |ತಂದಾನ|
ಕುಡಿವಕೂ ನೀರೊಂದೆ ಕೊಡುತಾರಿಯೋ ಈಗಿನ್ನು
ಆಗು ಲಚ್ಚುಮಣ್ಣ ಎಂಬುವನೂ ತಾನ |ತಂದಾನ|
ಲಚ್ಚುಮಣ್ಣ ಸ್ವಾಮಿ ಎಂಬುವನೂ ಈಗಿನ್ನು
ಬಾಯಲ್ಲೂ ನೀರೆ ಕುಡಿತಾನಿಯೋ ತಾನ |ತಂದಾನ|
ಬಾಯಲ್ಲೂ ನೀರೆ ಕುಡಿತಾನಿಯೋ ಈಗಿನ್ನು
ಮೂಗುನಲ್ಲೂ ಒಂದೇ ತರುತಾನಿಯೋ ತಾನ |ತಂದಾನ|
ಮೂಗುನಲ್ಲೂ ಒಂದೇ ನೀರೇ ಕುಡಿತಾನಿಯೋ ಈಗಿನ್ನು
ಬಾಯೊಳಗೂ ನೀರೆ ಬಿಡುತಾನಿಯೋ ತಾನ |ತಂದಾನ|
ಎಲ್ಲವರು ಈಗೂ ಬಂದಿರಿಯೋ ಈಗಿನ್ನು
ಸೀತಿ ದೇವೀನೆ ಕಂಡಿರಿಯೋ ತಾನ |ತಂದಾನ|
ಸೀತಿದೇವೀನೇ ಕಂಡಿದುರು ವೀಗಿನ್ನು
ಅಲ್ಲಿಂದ ಲವರೆ ಬಂದಿದುರೂ ತಾನ |ತಂದಾನ|
ಅಲ್ಲಿಂದ ಲವರೆ ಬಂದಿದುರೂ ವೀಗಿನ್ನು
ಅಣ್ಣ ತಮ್ಮೇಡು ಜನರಾಲಾ ತಾನ |ತಂದಾನ|
ಬಿಲ್ಲಿನು ಬುಡದಾಗ ಬಂದಿದುರು ಈಗಿನ್ನು
ತಾನೂವಿಗೊಂದೇ ಅಡಕ್ಯಾನೂ ತಾನ |ತಂದಾನ|
ತಾನೂವಿಗೊಂದೇ ಹೂಡಿತೆಂಬು ವೀಗಿನ್ನು
ಸೀತೆ ಲಗ್ಗುನೊಂದೆ ಆಗುತೆಂಬಾ ತಾನ |ತಂದಾನ|
ಲಚ್ಚುಮಣ್ಣ ಸ್ವಾಮಿ ಹೋಗಿದನು ಈಗಿನ್ನು
ಲಂಬುನು ತುದಿಯಲೂ ಬರೆದಿದನು ತಾನ |ತಂದಾನ|
ಏನೊಂದೆಲಳಿಗೂ ಬರೆದಿದುನು ಈಗಿನ್ನು
ಲೇಸಾ ನನ್ನಿಂದ ಆಗಿದುರಾ ತಾನ |ತಂದಾನ|
ಲೇಸಾ ನನ್ನಿಂದ ಆಗಿದುರಾ ವೀಗಿನ್ನು
ಬೂಸಿಲಣ್ಣಗೆ ಕೊಡಬೇಕಾ ತಾನ |ತಂದಾನ|
ಬೂಮೂ ತೂಂದ ಬಿಲಾಳ ಈಗಿನ್ನು
ಆಕಾಸು ತೂಂದ ಬಾಣವಲಾ ತಾನ |ತಂದಾನ|
ಆಕಾಸು ತೂಂದ ಬಾಣವಲಾ ಈಗಿನ್ನು
ಎತ್ತುವಿಗೊಂದೆ ಹೊಡೆದನಲಾ ತಾನ |ತಂದಾನ|
ಎತ್ತುವಿಗೊಂದೆ ಹೊಡೆದುನು ಈಗಿನ್ನು
ಆಕಾಸು ಕಾಕಿನೆ ಹೊಂದಿದುನೂ ತಾನ |ತಂದಾನ|
ಆಕಾಸು ಕಾಕಿನೆ ಹೊಂದಿದುನೂ ಈಗಿನ್ನು
ಜನುರಾಜನೇ ಎಂಬುವನಾಲಾ ತಾನ |ತಂದಾನ|
ಜನುರಾಜನೇ ಎಂಬುವನಾಲಾ ಈಗಿನ್ನು
ತಾನೂವಿಗೊಂದೆಂಡಿದನೂ ತಾನ |ತಂದಾನ|
ತಾನೂವಿಗೊಂದೆಂಡಿದನೂ ವೀಗಿನ್ನು
ಅಡಿದುಮಾತೊಂದೆ ಅದೆಯಲಾ ತಾನ |ತಂದಾನ|
ಆಡಿದುಮಾತೊಂದೆ ಅದೆಯಲಾ ಈಗಿನ್ನು
ಭುಮೂದೇವಿಯ ಮಗಳಾಲಾ ತಾನ |ತಂದಾನ|
ಭೂಮೂದೇವಿಯ ಮಗಳಾಲೋ ಈಗಿನ್ನು
ಸೀತಾದೇವಿನೇ ಎಂಬುವಳಾ ತಾನ |ತಂದಾನ|
ಸೀತಾದೇವಿನೇ ಎಂಬುವಳಾ ಈಗಿನ್ನು
ರಾಮುಗೂ ಲಗ್ಗಿನನೆ ಮಾಡಿದುರಾ ತಾನ |ತಂದಾನ|
ರಾಮುಗೂ ಲಗ್ಗಿನನೆ ಮಾಡಿದರು ಈಗಿನ್ನು
ದರುಮು ದಾರೀನೇ ಎರಿದಿದುರಾ ತಾನ |ತಂದಾನ|
ದರುಮು ದಾರೀನೇ ಎರಿದಿದುರಾ ಈಗಿನ್ನು
ರಾಮೂನೂ ಸೀತೇನೆ ಆಗಿದುರಾ ತಾನ |ತಂದಾನ|
ಲಂಕಾ ಪಟ್ನಾದ ರವಣಾನು ಈಗಿನ್ನು
ಹತ್ತೂ ತೆಲೆಯವನು ರವಣ ತಾನ |ತಂದಾನ|
ಹತ್ತೂ ತಲೆಯ ರವಣಾನು ಈಗಿನ್ನು
..ಚ್ಚುತನೆ ಅವನು ..ಯ್ತಲವನೇ ತಾನ |ತಂದಾನ|
ತಾನು ಲಗ್ಗಿನೇ ಆಗುತ್ತಿದ್ದೆ ಈಗಿನ್ನು
ರಾಮ ಲಚ್ಚುಮಣ್ಣ ಎಂಬುವರೆ ತಾನ |ತಂದಾನ|
ಸೀತೆ ನನಗೊಂದ ತಪ್ಪಿಸಿದರು ಈಗಿನ್ನು
ರಾಮನ ಸೀತೆನೆ ಎಂಬುವಳಾ ತಾನ |ತಂದಾನ|
ರಾಮನ ಸೀತೆನೆ ಎಂಬುವಳ ಈಗಿನ್ನು
ಮೂರು ದಿವಸಾರು ಆಳುದಿದುರೇ ತಾನ |ತಂದಾನ|
ಮೂರು ದಿವಸಾರು ಆಳುದಿದುರೆ ಈಗಿನ್ನು
ಲಂಕಾಪಟ್ನಾದ ರವಣ ನಾನಲ ತಾನ |ತಂದಾನ|
ಲಂಕಾ ಪಟ್ನಾದ ರವಣ ನಾನಲ ಈಗಿನ್ನು
ಹತ್ತು ತಲೆಯೊಂದೆ ನಂದಲಾ ತಾನ |ತಂದಾನ|
ಇಪ್ಪತ್ತು ಭುಜವೆ ನಂದಲಾ ತಾನ |ತಂದಾನ|
ಇಪ್ಪತ್ತು ಭುಜವೆ ನಂದಲಾ ಈಗಿನ್ನು
ರಾಮುನು ಸೀತಿನೆ ಡಿಸದಿದುರೆ ತಾನ |ತಂದಾನ|
ರಾಮುನು ಸೀತಿನೆ ಡಿಸದಿದುರೆ ಈಗಿನ್ನು
ಲಂಕಾ ಪಟ್ನದವನೆ ನಾನಲ ತಾನ |ತಂದಾನ|
ಲಂಕಾ ಪಟ್ನಾದವನೆ ನಾನಲಾ ಈಗಿನ್ನು
ರವಣಾ ಎಂಬೆಸರು ತೆಗಿಬೇಕಾ ತಾನ |ತಂದಾನ|
ಅಂದೂವಿಗೊಂದೆ ಹೊತ್ತನಲ ಈಗಿನ್ನು
ಅಲೂ ಪಣವೊಂದೆ ಹೊತ್ತನಲಾ ತಾನ |ತಂದಾನ|
ಅಲೂ ಪಣವೊಂದೆ ಹೊತ್ತಿದುನೋ ಈಗಿನ್ನು
ಲಂಕಾ ಪಟ್ನಾದ ರಾವಣನು ತಾನ |ತಂದಾನ|
ಲಂಕಾಪಟ್ನಾದ ರಾವಣನೂ ಈಗಿನ್ನು
ಎಲಿಗೂ ಒಂದೆ ಅದರೇಳಾ ತಾನ |ತಂದಾನ|
ಎಲಿಗೂ ಒಂದೆ ಹೋಗಿದನು ಈಗಿನ್ನು
ಲಂಕಾಪಟ್ನ್ಕಾ ಹೋದನಾಲಾ ತಾನ |ತಂದಾನ|
ರಾಮಾಲಚ್ಚುಮಣ್ಣ ಎಂಬುವರು ಈಗಿನ್ನು
ಇಲೂ ಈಗೊಂದೆ ಇದ್ದರಾಲಾ ತಾನ |ತಂದಾನ|
ಇಲೂ ಈಗೊಂದೆ ಇದ್ದಿದುರು ಈಗಿನ್ನು
ಮೂರು ದಿವಸೊಂದೆಳುದಿದುರು ತಾನ |ತಂದಾನ|
ಮೂರು ದಿವಸೊಂದೆ ಳುದಿದುರುವೀಗಿನ್ನು
ಅಲುವಿಗೊಂದೆ ಇರುವವರಾ ತಾನ |ತಂದಾನ|
ಅಲುವಿಗೊಂದೆ ಳದಿದುರ ಈಗಿನ್ನು
ಸೀತೀ ..ಡು ಒಂದು ನುಡಿದನಾಲಾ ತಾನ |ತಂದಾನ|
ಸೀತೀ ..ಡು ಒಂದು ನುಡಿದಿದುರು ಈಗಿನ್ನು
ೀಳು ೀಳು ಎಲೆ ಸೀತಿ ನೀನಾಗ ತಾನ |ತಂದಾನ|
ನನ್ನ ಮಡುದೀನೆ ನಿ ೀಳು ಈಗಿನ್ನು
ನನ್ನ ಮಾತೀಗೂ ೀಳುಬೇಕಾ ತಾನ |ತಂದಾನ|
ನಾವ ಎಡು ಜನವೂ ಹೋಗಿತೇವ ಈಗಿನ್ನು
ಲಲೂವಿಗೊಂದೆ ಹೋಗುನಿಲಾ ತಾನ |ತಂದಾನ|
ಆರೊರುಷವನವಾಸಳ ದವೆಯೋ ಈಗಿನ್ನು
ಆರೊರುಷ ಅಜ್ಞಾಸ ಳಿಬೇಕಾ ತಾನ |ತಂದಾನ|
ಅಜ್ಞಾಸ ಳುದಿ ಬರುವರೆಗೂ ಈಗಿನ್ನು
ಇಲೇ ನಿನೊಂದೆ ಉಳಿಬೇಕಾ ತಾನ |ತಂದಾನ|
ಇಲೇ ನೀನೀಗ ಉಳಿಬೇಕಾ ಈಗಿನ್ನು
ಹೋಗುವಂದು ನಾವೇ ಬರುತೀವಾ ತಾನ |ತಂದಾನ|
ಹೋಗುವಂದು ನಾ ಬರುತೀವಿ ಈಗಿನ್ನು
ನಿನ್ನ ರೂಂಡು ಹೋಗುತೀವಾ ತಾನ |ತಂದಾನ|
ೀಳು ೀಳು ನನ್ನ ಸ್ವಾಮಿ ರಾಮದೇವ್ರ ಈಗಿನ್ನು
ನಿಮ್ಮ ಬೆನ್ನಿಗೂ ಬರುತೆಂಬಾ ತಾನ |ತಂದಾನ|
ನಿಮ್ಮ ಬೆನ್ನಿಗೂ ಬರುತೆಂಬಾ ಈಗಿನ್ನು
ನೀವ ಉಳಿದಂಗೆ ಉಳಿತೆಂಬೋ ತಾನ |ತಂದಾನ|
ನೀವ ಉಳಿದಂಗೆ ಉಳಿತೆಂಬಾವೀಗಿನ್ನು
ನೀವ ಹೇಳಿದಂಗೆ ೀಳಿತೆಂಬಾ ತಾನ |ತಂದಾನ|
ನೀವ ಹೇಳಿದಂಗೆ ಳಿತೆಂಬಾ ಈಗಿನ್ನು
ನಿಮ್ಮ ಬೆನ್ನಿಗೂ ಬರುತೆಂಬಾ ತಾನ |ತಂದಾನ|
ೀಳು ೀಳಲಾ ಮಡಿದಿ ನಿ ೀಳು ಈಗಿನ್ನು
ಉಳಿಲಾರೆ ಕಾಲ ಳಿಲಾರೆ ತಾನ |ತಂದಾನ|
ಉಳಿಲಾರೆ ಕಾಲ ಳಿಲಾರೆ ಈಗಿನ್ನು
ಅನ್ನಿಲೆ ಅಲು ನೀರಿಲಾ ತಾನ |ತಂದಾನ|
ಅನ್ನಿಲೆ ಅಲು ನೀರಿಲೆ ಈಗಿನ್ನು
ಹಣ್ಣಿಲೆ ಅಲು ಹಾಲಿಲೇ ತಾನ |ತಂದಾನ|
ಹಣ್ಣಿಲೆ ಅಲು ಹಾಲಿಲೇ ಈಗಿನ್ನು
ಉಳಿಲಾರೆ ಕಾಲ ಳಿಲಾರೆ ತಾನ |ತಂದಾನ|
ಎಷ್ಟು ಹೇಳಿದರೂ ೀಳುವದಿಲ ಈಗಿನ್ನು
ನಿಮ್ಮ ಬೆನ್ನೀಗೂ ಬರುತೆಂಬಾ ತಾನ |ತಂದಾನ|
ನಿಮ್ಮ ಬೆನ್ನೀಗೂ ಬರುತೆಂಬೇ ಈಗಿನ್ನು
ನೀವ ಉಳುದಂಗೆ ಉಳಿತೆಂಬಾ ತಾನ |ತಂದಾನ|
ನೀವ ಉಳುದಂಗೆ ಉಳಿತೆಂಬಾ ಈಗಿನ್ನು
ನೀವ ಉಳುದಂಗೆ ಳಿತೆಂಬಾ ತಾನ |ತಂದಾನ|
ನೀವ ಳುದಂಗೆ ಳಿತೆಂಬೋ ಈಗಿನ್ನು
ನಿಮ್ಮ ಬೆನ್ನೊಂದೆ ಬಿಡುವದಿಲಾ ತಾನ |ತಂದಾನ|
ರಾಮನು ಸೀತೀನೇ ಎಂಬುವಳು ಈಗಿನ್ನು
ರಾಮನು ಬೆನ್ನೊಂದ ಬಿಡನಿಲಾ ತಾನ |ತಂದಾನ|
ಏನು ಹೇಳಿದರು ೀಳುವದಿಲಾ ಈಗಿನ್ನು
ರಾಮನು ಬೆನ್ನೊಂದೆ ಬಿಡುವದಿಲಾ ತಾನ |ತಂದಾನ|
ರಾಮನು ಬೆನ್ನೊಂದೆ ಬಿಡುವದಿಲಾ ಈಗಿನ್ನು
ರಾಮ ಲಚ್ಚುಮಣ್ಣ ಎಡು ಜನುವಾ ತಾನ |ತಂದಾನ|
ರಾಮಲಚ್ಚುಮಣ್ಣ ಎಡುಜನರು ಈಗಿನ್ನು
ಸೀತೆ ಒಬ್ಬೊಳು ಬೆನ್ನಿಗಾಲಾ ತಾನ |ತಂದಾನ|
ಸೀತೆ ಒಬ್ಬೊಳು ಬೆನ್ನೀಗಾಲಾ ಈಗಿನ್ನು
ಮೂರು ಮಂದೀನೆ ಹೋಗುವಾರಾ ತಾನ |ತಂದಾನ|
ಮೂರು ಮಂದೀನೆ ಹೋಗುವಾರಾ ಈಗಿನ್ನು
ಬಿದ್ದು ದಾರೀನೆ ಹಿಡಿದರವರಾ ತಾನ |ತಂದಾನ|
ಬಿದ್ದು ದಾರೀನೆ ಹಿಡಿದುರು ಈಗಿನ್ನು
ಎಲೀಗಾದರೂ ಹೋಗಿದುರಾ ತಾನ |ತಂದಾನ|
ಎಲೀಗಾದರೂ ಹೋಗಿದುರಾ ಈಗಿನ್ನು
ಅನಸು ಕಾಡೀಗೂ ಹೋಗಿದುರಾ ತಾನ |ತಂದಾನ|
ಅನಸು ಕಾಡೀನ ಒಳಗಾಲು ಈಗಿನ್ನು
ಗೊರು ಅಡವೀಯ ಅಲಿಲಾ ತಾನ |ತಂದಾನ|
ಗೊರು ಅಡವೀಯ ಅಲಾಲಾ ಈಗಿನ್ನು
ನರಮನುಷರಳಲು ಅಲಿಲಾ ತಾನ |ತಂದಾನ|
ನರಮನುಷರಳಲು ಅಲಿಲಾ ಈಗಿನ್ನು
ಅಲೂ ಮುಂದೊಂದೆ ಬಂತಾಲಾ ತಾನ |ತಂದಾನ|
ರಾಸುರು ಹಿಂಡು ಅದಿಯಲೊ ಈಗಿನ್ನು
ಗೋರು ಅಡವೀಯ ಒಳಗಾಲು ತಾನ |ತಂದಾನ|
ಗೋರು ಅಡವಿಯ ಒಳಗಾಲ ವೀಗಿನ್ನು
ಸೊಪ್ಪನು ತುಂಡೀ ಮನೆಯಾಲಾ ತಾನ |ತಂದಾನ|
ಸೊಪ್ಪನು ತುಂಡೀಯ ಮನೆಯಲು ಈಗಿನ್ನು
ಅಲೂ ತಾವಿಗೂ ಉಳಿದುದುರಾ ತಾನ |ತಂದಾನ|
ಅಲೂ ತಾವಿಗೂ ಉಳಿದುದುರಾ ಈಗಿನ್ನು
ರಾಮಾಲಚ್ಚುಮಣ್ಣ ಎಂಬವರು ತಾನ |ತಂದಾನ|
ರಾಮಲಚ್ಚುಮಣ್ಣ ಎಂಬವರು ಈಗಿನ್ನು
ರಾಮನೂ ಸೀತೀನೆ ಇರುವಳಾಲಾ ತಾನ |ತಂದಾನ|
ರಾಮನೂ ಸೀತಿನೆ ಇರುವಳು ಈಗಿನ್ನು
ಅಲೋ ತಾನೀಗೂ ಇರುವಂಗಾ ತಾನ |ತಂದಾನ|
ಅಲೋ ತಾನೀಗು ಇರುವಂಗು ಈಗಿನ್ನು
ಉಳುವಂಗೊ ಕಾಲ ಳಿವಂಗಾ ತಾನ |ತಂದಾನ|
ಉಳವಂಗು ಕಾಳ ಳಿವಂಗಾ ಈಗಿನ್ನು
ರಾಮಸೀತೆನರಮನೆಯಾ ತಾನ |ತಂದಾನ|
ರಾಮಸೀತೆನರಮನೆಯ ಈಗಿನ್ನು
ಲಚ್ಚಮಣ್ಣ ಹಣ್ಣಿಗೂ ಹೋಗುವ ತಾನ |ತಂದಾನ|
ಲಚ್ಚಮಣ್ಣ ಹಣ್ಣಿಗೂ ಹೋಗುನಾತಾನೆಯೋ ಈಗಿನ್ನು
ದಿವಸಿಗೂ ಎಲಡಣ್ಣು ಸಿಕ್ಕುತ್ತದೆಯೋ ತಾನ |ತಂದಾನ|
ದಿವಸಿಗೂ ಎಲಡಣ್ಣು ಸಿಕ್ಕುತ್ತದೆಯೋ ಈಗಿನ್ನು
ಅಣ್ಣನೂ ..ಡುತಂದು ..ಡುತನಿಯಾ ತಾನ |ತಂದಾನ|
ಅಣ್ಣನೂ ..ಡುತಂದು ..ಡುತನಿಯಾ ಈಗಿನ್ನು
ಅಣ್ಣಾ ರಾಮಸ್ವಾಮಿ ಎಂಬುವನಾ ತಾನ |ತಂದಾನ|
ಅಣ್ಣಾ ರಾಮಸ್ವಾಮಿ ಎಂಬುವನು ಈಗಿನ್ನು
ಒಂದಣ್ಣಾ ಏರಡು ಭಾಗ ಮಾಡುತನೆಯಾ ತಾನ |ತಂದಾನ|
ಒಂದಣ್ಣಾ ಏರಡು ಭಾಗ ಮಾಡುತಾನೆಯಾ ಈಗಿನ್ನು
ಒಂದು ಭಾಗ ಹಣ್ಣ ಇರುವದಾಲಾ ತಾನ |ತಂದಾನ|
ಒಂದು ಭಾಗ ಹಣ್ಣ ಇರುವದಾಲಾ ಈಗಿನ್ನು
ದೇವರಿಗಭಿಷೇ ಮಾಡುತನಿಯೋ ತಾನ |ತಂದಾನ|
ಒಂದು ಭಾಗನೆ ಇರುವದಲೋ ಈಗಿನ್ನು
ತಮ್ಮನಿಗೊಂದೆ ..ಡತನಿಯೋ ತಾನ |ತಂದಾನ|
ಮತ್ತೊಂದು ಹಣ್ಣು ಇರುವದು ಈಗಿನ್ನು
ಎಲ್ಡು ಭಾಗಾನೆ ಮಾಡುತಾನಿಯೋ ತಾನ |ತಂದಾನ|
ಎಲ್ಡು ಭಾಗನೆ ಮಾಡುತಾನಿಯೋ ಈಗಿನ್ನು
ಒಂದು ಭಾಗನೆ ..ಡುತನಿಯೋ ತಾನ |ತಂದಾನ|
ಒಂದು ಭಾಗನೆ ..ಡುತನಿಯೋ ಈಗಿನ್ನು
ಸೀತೆಗೊಂದು ಭಾಗ ..ಡುತಾನಿಯೋ ತಾನ |ತಂದಾನ|
ಸೀತೆಗೊಂದು ಭಾಗ ..ಡುತಾನಿಯೋ ಈಗಿನ್ನು
ತಾನೊಂದು ಭಾಗ ತಿನ್ನುತನಿಯೋ ತಾನ |ತಂದಾನ|
ಅಲಿಗೂ ಸರಿಪಾಲೇ ಅದುವಲ ಈಗಿನ್ನು
ಭೇಧ ಪರುಂಚೆ ಬರಲಿಲಾ ತಾನ |ತಂದಾನ|
ಆ ರೀತಿ ಕಾಲ ಳಿತರಿಯೋ ಈಗಿನ್ನು
ಳುವಂಗಲವರು ಉಳಿವಂಗಾ ತಾನ |ತಂದಾನ|
ಳುವಂಗಲವರು ಉಳಿವಂಗಾ ಈಗಿನ್ನು
ಒಂದಲ ಒಂದ ದಿನವಲಾ ತಾನ |ತಂದಾನ|
ಒಂದಲ ಒಂದು ದಿನದಲಿ ಈಗಿನ್ನು
ಲಂಕಾಪಟ್ನಾದ ರವಣಾನೂ ತಾನ |ತಂದಾನ|
ಲಂಕಾ ಪಟ್ನಾದ ರವಣಾನೂ ಈಗಿನ್ನು
ತಂಗಿ ..ಡೊಂದು ನುಡಿತಾನಿಯಾ ತಾನ |ತಂದಾನ|
ರಾವಣನ ತಂಗೀ ಇರುವವಳು ಈಗಿನ್ನು
ಸೂರ್ಪನಕ್ಕಿಯೇ ಎಂಬುವಳಾ ತಾನ |ತಂದಾನ|
ಸೂರ್ಪನಕ್ಕಿಯೆ ಎಂಬುವಳು ಈಗಿನ್ನು
ೀಳು ೀಳು ನನ್ನ ತಂಗಿ ನೀ ೀಳಾ ತಾನ |ತಂದಾನ|
ೀಳು ೀಳು ನನ್ನ ತಂಗಿ ನೀ ೀಳು ಈಗಿನ್ನು
ಈಗೂ ನೀನೊಂದೆ ಹೋಗಬೇಕಾ ತಾನ |ತಂದಾನ|
ಈಗೂ ನೀನೊಂದೆ ಹೋಗಬೇಕು ಈಗಿನ್ನು
ರಾಮುನು ಬಳಿಗೊಂದೆ ಹೋಗಬೇಕಾ ತಾನ |ತಂದಾನ|