ಚಂದುದಿಂದವರು ಸಾಕುತಾರೆಯಾ ತಾನ |ತಂದಾನ|
ಚಂದುದಿಂದವರು ಸಾಕುತಾರೆಯಾ ಈಗಿನ್ನು
ಸಾಕುತಾರೆಯಾ ವೀಗು ಸಲಗುತಾರೆಯಾ ತಾನ |ತಂದಾನ|
ಸಾಕುತಾರೆಯಾ ಅವರು ಸಲುಗುತಾರೆಯಾ ವೀಗಿನ್ನು
ಎಣ್ಣೀಲೂ ಬೆಣ್ಣೀಲಿ ಎದ್ದುತರೆಯಾ ತಾನ |ತಂದಾನ|
ಎಣ್ಣೀಲೂ ಬೆಣ್ಣೀಲಿ ಎದ್ದುತವರೆ ವೀಗಿನ್ನು
ಹಸುನೀರು ಬಿಸಿಮಾಡಿ ಹೊಯ್ಯತರೆಯಾ ತಾನ |ತಂದಾನ|
ಹಸುನೀರು ಬಿಸಿಮಾಡಿ ಹೊಯ್ಯುತಾರೆ ವೀಗಿನ್ನು
ಉದ್ದು ದೊಡ್ಡಾನೆ ಮಡುತಾರೆಯಾ ತಾನ |ತಂದಾನ|
ಉದ್ದು ದೊಡ್ಡಾನೆ ಮಾಡುತಾರೆ ವೀಗಿನ್ನು
ಬುದ್ದು ಬಲವಾಗಿ ಬಂದರಾಲಾ ತಾನ |ತಂದಾನ|
ಬುದ್ದು ಬಲವಾಗಿ ಬಂದಿದುರು ವೀಗಿನ್ನು
ವಿದ್ದೀ ಬುದ್ದೀನೆ ಕಲಸುತಾರೆಯಾ ತಾನ |ತಂದಾನ|
ವಿದ್ದೀ ಬುದ್ದೀನೆ ಕಲಸುತಾರೆಯಾ ವೀಗಿನ್ನು
ಸಾಧಕು ಸಂಪತ್ತೇ ಕಲಿಯುತವರೆಯಾ ತಾನ |ತಂದಾನ|
ಸಾಧಕು ಸಂಪತ್ತೇ ಕಲಿಯುತವರೆ ವೀಗಿನ್ನು
ಎಲ್ಲಾ ವಿದ್ದೀನೆ ಕಲಿತಾರೆಯಾ ತಾನ |ತಂದಾನ|
ಎಲ್ಲಾ ವಿದ್ದೀನೆ ಕಲಿತವರೆ ವೀಗಿನ್ನು
ಜಾಲುವಿದ್ದೀನೆ ಕಲಿತಾರೆಯಾ ತಾನ |ತಂದಾನ|
ಜಾಲುವಿದ್ದೀನೆ ಕಲಿತಾರೆ ವೀಗಿನ್ನು
ಬಿಲ್ಲೂ ವಿದ್ದೀನೆ ಕಲಿತರೆಯಾ ತಾನ |ತಂದಾನ|
ಬಿಲ್ಲೂ ವಿದ್ದೀನೆ ಕಲಿತವರೆ ವೀಗಿನ್ನು
ಗದಾದಾ ವಿದ್ಯಾನೆ ಕಲಿತವರೆ ತಾನ |ತಂದಾನ|
ಗದಾದಾ ವಿದ್ಯಾನೆ ಕಲಿತವರೆ ವೀಗಿನ್ನು
ಲವ ಕುಶಾನೇ ಎಂಬುವುರು ತಾನ |ತಂದಾನ|
ಲವ ಕುಶಾನೇ ಎಂಬುವುರು ವೀಗಿನ್ನು
ಬೇಕಾದ ವಿದ್ದಿನು ಕಲಿತಿದುರಾ ತಾನ |ತಂದಾನ|
ಬೇಕಾದ ವಿದ್ದಿನು ಕಲಿತಿದುರಾ ಈಗಿನ್ನು
ಸಾಧಕು ಸಂಪತ್ತು ಕಲಿತಿದುರು ತಾನ |ತಂದಾನ|
ಸಣ್ಣ ಸಣ್ಣವರು ಹುಡುಗಾರು ವೀಗಿನ್ನು
ಲವಕುಶಾನೇ ಎಂಬುವುರಾ ತಾನ |ತಂದಾನ|
ಲವಕುಶಾನೇ ಎಂಬುವುರಾ ವೀಗಿನ್ನು
ತಾಯಿ ಮಕ್ಕಾಳು ಉಳುವಂಗಾ ತಾನ |ತಂದಾನ|
ತಾಯಿ ಮಕ್ಕಾಳು ಉಳುವಂಗೋ ವೀಗಿನ್ನು
ಉಳುವಂಗೋ ಕಾಲಕಳುವಂಗೋ ತಾನ |ತಂದಾನ|
ಉಳುವಂಗೋ ಕಾಲಕಳುವಂಗೋ ವೀಗಿನ್ನು
ಸುಖದಲಿ ಕಾಲಾನೇ ಕಳಿತರಿಯಾ ತಾನ |ತಂದಾನ|
ಸುಖದಲಿ ಕಾಲನೇ ಕಳಿತರಿಯಾ ವೀಗಿನ್ನು
ಸೀತಾದೇವೀನೆ ಎಂಬುವುಳಾ ತಾನ |ತಂದಾನ|
ಸೀತಾದೇವೀನೆ ಎಂಬುವುಳು ವೀಗಿನ್ನು
ಚಂದಾದಿಂದವಳೆ ಉಳುವಂಗಾ ತಾನ |ತಂದಾನ|
ರಾಮಾಸ್ವಾಮಿ ಎಂಬುವುನು ಈಗಿನ್ನು
ರಾಮಾಪಟುವೊಂದೆ ಆಳುದವನಾ ತಾನ |ತಂದಾನ|
ರಾಮಾಪಟುವೊಂದೆ ಆಳುತಾನೆಯೋ ವೀಗಿನ್ನು
ಅಲ್ಲೂವೀಗೊಂದೆ ಬರುತದೆಯಾ ತಾನ |ತಂದಾನ|
ಅಲ್ಲೂವೀಗೊಂದೆ ಬರುತದೆ ವೀಗಿನ್ನು
ಊರೂರು ಕಪ್ಪು ಬರುತದೆಯಾ ತಾನ |ತಂದಾನ|
ಊರೂರು ಕಪ್ಪು ಬರುತದೆಯಾ ವೀಗಿನ್ನು
ಅವನ ಕುದುರೆಯೋ ಇರುವುದಾಲಾ ತಾನ |ತಂದಾನ|
ರಾಮನ ಕುದುರೀನೇ ಇರುವುದಾಲ್ಲೋ ವೀಗಿನ್ನು
ಅಲ್ಲೂವೀಗೊಂದೆ ಹೋಗುತದೆಯೋ ತಾನ |ತಂದಾನ|
ಊರೂರ ಕಪ್ಪು ತರುತದೆಯಾ ತಾನ |ತಂದಾನ|
ಊರೂರ ಕಪ್ಪು ತರುತದೆಯಾ ವೀಗಿನ್ನು
ರಾಮುನ ಕುದುರೀಯೇ ಹೋಗದಾಲಾ ತಾನ |ತಂದಾನ|
ರಾಮನ ಕುದುರೀಯನೆ ಹೋಗದೆಯೋ ವೀಗಿನ್ನು
ಎಲ್ಲೂವೀಗೊಂದೆ ಹೋಗತದೆಯೋ ತಾನ |ತಂದಾನ|
ಎಲ್ಲೂವೀಗೊಂದೆ ಹೋಗತದೆಯೋ ವೀಗಿನ್ನು
ಲವಾ ಕುಶಾನೇ ಇರುವವರಾ ತಾನ |ತಂದಾನ|
ಲವಾ ಕುಶಾನೇ ಇರುವವರು ವೀಗಿನ್ನು
ಅಲ್ಲೀಗೂ ಕುದುರೀನೇ ಹೋಗದ್ಯಾಲಾ ತಾನ |ತಂದಾನ|
ಅಲ್ಲೀಗೂ ಕುದುರೀನೇ ಹೋಗದಯೋ ವೀಗಿನ್ನು
ಲವಾ ಕುಶಾನೇ ಎಂಬುವುರಾ ತಾನ |ತಂದಾನ|
ಲವಾ ಕುಶಾನೇ ಎಂಬುವುರಾ ವೀಗಿನ್ನು
ಅಲ್ಲೂ ಕುದುರೀನೇ ಕಂಡಿದುರಾ ತಾನ |ತಂದಾನ|
ಕುದುರೀನೆಸರಿಗೂ ಹಚ್ಚರಲ್ಲೋ ವೀಗಿನ್ನು
ರಾಮನೂ ಕುದುರೀನೆ ಎಂಬರಾಲಾ ತಾನ |ತಂದಾನ|
ರಾಮನೂ ಕುದುರೀನೆ ಇರುವುದು ವೀಗಿನ್ನು
ಆರೂವೀಗೊಂದೆ ಕಂಡಿದುರಾ ತಾನ |ತಂದಾನ|
ಇದಕೂ ಕಪ್ಪೊಂದೆ ಕೊಡಬೇಕು ವೀಗಿನ್ನು
ಅಂದ್ಹೇಳು ತಾನೀಗ ಬರದರಾಲಾ ತಾನ |ತಂದಾನ|
ಲವಾ ಕುಶಾನೇ ಕಂಡಿದರು ವೀಗಿನ್ನು
ಆ ಕುದುರಿ ವೀಗು ಹಿಡಿದಿದುರಾ ತಾನ |ತಂದಾನ|
ಆ ಕುದುರಿ ವೀಗು ಹಿಡಿದಿದುರು ವೀಗಿನ್ನು
ಆ ಕುದುರಿವೀಗ ಬಿಗುದಿದುರಾ ತಾನ |ತಂದಾನ|
ಈ ಕುದರಿ ಕಪ್ಪ ಕೊಡಬೇಕ ವೀಗಿನ್ನು
ಈ ಕುದುರಿ ಕಪ್ಪ ಕೊಡವದಿಲ್ಲಾ ತಾನ |ತಂದಾನ|
ಕುದರಿಗೂ ಕಪ್ಪೊಂದೆ ಕೊಡುವುದಿಲ್ಲ ಅಂದ್ಹೇಳು
ಕುದುರೀ ತಾವೀಗ ಬಿಗಿದುರಾ ತಾನ |ತಂದಾನ|
ಅಲ್ಲೂವೀಗೊಂದೆ ಕಟ್ಟಿದರು ವೀಗಿನ್ನು
ಇಂದೂ ಕುದುರಿನೇ ಬಿಡುದಿಲ್ಲಾ ತಾನ |ತಂದಾನ|
ಇಂದು ಕುದುರಿನೇ ಬಿಡುವುದಿಲ್ಲಾ ಈಗಿನ್ನು
ಮೂರು ದಿವಸೊಂದೆ ಕಳುದರಾಲಾ ತಾನ |ತಂದಾನ|
ಮೂರು ದಿವಸೊಂದೆ ಕಳುದರಾಲಾ ವೀಗಿನ್ನು
ರಾಮುನು ಕುದುರೀನೇ ಬರೋದಿಲ್ಲಾ ತಾನ |ತಂದಾನ|
ರಾಮುನು ಕುದುರೀನೇ ಬರುವುದಿಲ್ಲಾ ವೀಗಿನ್ನು
ರಾಮಲಚ್ಚಮಣ ಎಂಬುವರಾ ತಾನ |ತಂದಾನ|
ರಾಮಲಚ್ಚಮಣ ಎಂಬುವುರಾ ವೀಗಿನ್ನು
ಅಣ್ಣಾ ತಮ್ಮೇಡು ಜನುರಾಲಾ ತಾನ |ತಂದಾನ|
ಹುಡುಕು ಹುಡುಕೂತಿ ಬಂದಿದುರು ವೀಗಿನ್ನು
ಎಲ್ಲಿಗೂವೀಗೂ ಬಂದಿದುರಾ ತಾನ |ತಂದಾನ|
ಎಲ್ಲಿಗೂವೀಗೂ ಬಂದಿದುರಾ ವೀಗಿನ್ನು
ಅಣ್ಣಾ ತಮ್ಮೇಡು ಜನುರಾಲಾ ತಾನ |ತಂದಾನ|
ಎಲ್ಲೂವೀಗೊಂದೆ ತಿರುಗಿದುರು ವೀಗಿನ್ನು
ಯಾವುರಾಜ್ಯೀನೇ ತಿರುಗಿದುರಾ ತಾನ |ತಂದಾನ|
ಯಾವುರಾಜ್ಯೀನೇ ತಿರುಗಿದರು ವೀಗಿನ್ನು
ರಾಮುನು ಕುದುರೀನೇ ಇಲ್ಯಾಲಾ ತಾನ |ತಂದಾನ|
ರಾಮುನು ಕುದುರೀನೇ ಸಿಕ್ಕೂದಿಲ್ಲು ವೀಗಿನ್ನು
ಘಿರುಗು ತಿರುಗವರು ಸೋತಿದುರಾ ತಾನ |ತಂದಾನ|
ಘಿರುಗು ತಿರುಗವರು ಸೋತಿದುರಾ ಈಗಿನ್ನು
ಯಾವೋ ರಾಜ್ಯೀಕೋ ಹೋಗಿದುರಾ ತಾನ |ತಂದಾನ|
ಯಾವೋ ರಾಜ್ಯೀಕೋ ಹೋಗಿದುರು ಈಗಿನ್ನು
ರಾಮನು ಕುದುರೀನೇ ಬಂದದೆಂದಾ ತಾನ |ತಂದಾನ|
ರಾಮನು ಕುದುರೀನೇ ಬಂತೆಂದು ವೀಗಿನ್ನು
ಯಾರೂ ಹೇಳುವವರು ಇಲ್ಯಾಲಾ ತಾನ |ತಂದಾನ|
ಹುಡುಕೀ ಹುಡುಕವರು ಸೋತಿದುರು ಈಗಿನ್ನು
ಎಲ್ಲೀಗೀಗೊಂದೆ ಬರುತರಿಯೋ ತಾನ |ತಂದಾನ|
ಎಲ್ಲೀಗೀಗೊಂದೆ ಬಂದಿದುರು ಈಗಿನ್ನು
ಗೋರು ಅಡವೀಯ ಒಳಗಾಲಾ ತಾನ |ತಂದಾನ|
ಗೋರು ಅಡವೀಯ ಅಲ್ಲಾಲ್ಲೋ ವೀಗಿನ್ನು
ಲವಾ ಕುಶಾನೇ ಎಂಬುವುರಾ ತಾನ |ತಂದಾನ|
ಲಾವ ಕುಶಾನೇ ಎಂಬುವರು ಈಗಿನ್ನು
ರಾಮನು ಕುದುರೀನೇ ಇರುವದಾಲಾ ತಾನ |ತಂದಾನ|
ರಾಮನು ಕುದುರೀನೆ ಇರುವದಾಲಾ ಈಗಿನ್ನು
ಅಲ್ಲೇ ಕಟ್ಟೊಂದೆ ಬಿಗಿದರಾಲಾ ತಾನ |ತಂದಾನ|
ಅಲ್ಲೇ ಕಟ್ಟೊಂದೆ ಬಿಗಿದುರು ವೀಗಿನ್ನು
ಹುಡುಕೂ ಹೂಡಕವರು ಹೋಗಿದುರಾ ತಾನ |ತಂದಾನ|
ಅಲ್ಲೂವೀಗೊಂದೆ ಕಂಡಿದುರು ವೀಗಿನ್ನು
ರಾಮನು ಕುದುರೀನೇ ಸಿಕ್ಕದಾಲಾ ತಾನ |ತಂದಾನ|
ರಾಮನೂ ಕುದುರೀನೇ ಎಂಬುವುದುವೀಗಿನ್ನು
ಕಟ್ಟಿದುವೀಗೊಂದೆ ಸಿಕ್ಕೋದಿಲ್ಲಾ ತಾನ |ತಂದಾನ|
ರಾಮಾಲಚ್ಚುಮಣ್ಣ ಎಂಬವರುವೀಗಿನ್ನು
ಹುಡುಕೀ ಹುಡುಕವುರು ಹೋಗುತರಿಯಾ ತಾನ |ತಂದಾನ|
ಹುಡುಕೀ ಹುಡುಕವುರು ಹೋಗುತೆವು ವೀಗಿನ್ನು
ಲವಾಕುಶಾನ ರಾಜ್ಯದಲ್ಲಾ ತಾನ |ತಂದಾನ|
ಅಲ್ಲೂ ಕಟ್ಟೊಂದೆ ಹಾಕರ್ಯಾಲೋವೀಗಿನ್ನು
ರಾಮನು ಕುದುರಿನೇ ಎಂಬುದಾಲಾ ತಾನ |ತಂದಾನ|
ಅಲ್ಲಿಗವರೀಗು ಹೋಗಿದುರುವೀಗಿನ್ನು
ಕಂಡರು ಕುದುರಿ ಅದಿಯಾಲಾ ತಾನ |ತಂದಾನ|
ಈ ಕುದುರಿ ಯಾರು ಕಟ್ಟಿದವರು ಈಗಿನ್ನು
ನನ್ನಾ ಕುದುರೀನೆ ಎಂಬುದಾಲಾ ತಾನ |ತಂದಾನ|
ನಾವೇ ಕಟ್ಟೊಂದಿ ಹಾಕಿದೋವುರು ವೀಗಿನ್ನು
ರಾಮಾನಂದರು ನೀನ್ಯಾರು ತಾನ |ತಂದಾನ|
ನಿನ್ನಾ ಕುದುರೀಗೂ ಕೊಡುವದಿಲ್ಲೇವೀಗಿನ್ನು
ಕಪ್ಪೂ ನಾವೊಂದೆ ಕೊಡವುದಿಲ್ಲ ತಾನ |ತಂದಾನ|
ಕಪ್ಪೂ ನಾವೊಂದೆ ಕೊಡವುದಿಲ್ಲ ವೀಗಿನ್ನು
ನಿನ್ನಾ ಕುದುರೀ ಕೊಡುತೀದಾ ತಾನ |ತಂದಾನ|
ನಿನ್ನಾ ಕುದುರೀಗೆ ಕೊಡುತೀದಾ ವೀಗಿನ್ನು
ಕಪ್ಪ ನಾವೊಂದೇ ಕೊಡುತೀದಾ ತಾನ |ತಂದಾನ|
ನಮ್ಮಾ ರಾಜ್ಯೇನೇ ಆಳುದಿದುರೆ ಈಗಿನ್ನು
ಯುದ್ದಿ ಮಾಡೀಗ ಗೆಲಬೇಕೋ ತಾನ |ತಂದಾನ|
ಲವಕುಶಾನೆ ಹೇಳುತವರೇ ಈಗಿನ್ನು
ಅವುರೀಗೂ ಯುದ್ದೀನೆ ನಡಿತದಿಯಾ ತಾನ |ತಂದಾನ|
ಅವುರೀಗ ಯುದ್ದೀನೆ ನಡಿತದೇವೀಗಿನ್ನು
ರಾಮಾಬಿಟ್ಟಂತ ಬಾಣಾವಾಲ ತಾನ |ತಂದಾನ|
ರಾಮಾಬಿಟ್ಟಂತ ಬಾಣವಲ್ಲೋವೀಗಿನ್ನು
ಹೂವುನೂ ಮಾಲೆಯಾಗಿ ಬೀಳುತದೆಯಾ ತಾನ |ತಂದಾನ|
ಲವಾಕುಶಾನೇ ಬಿಡುತಾರಿಯೋವೀಗಿನ್ನು
ಅವರು ಬಿಟ್ಟಂತ ಬಾಣವಾಲಾ ತಾನ |ತಂದಾನ|
ರಾಮನು ಕಾಲಡಿಗೂ ಕೆಟ್ಟುತದೆಯೋವೀಗಿನ್ನು
ಅಲ್ಲಿ ಅವ್ವೀಗೂ ಸೋತಿದುರಾ ತಾನ |ತಂದಾನ|
ಯುದ್ಧದಲ್ಲಿ ಸೋಲು ಬರುವುದಿಲ್ಲೋ ವೀಗಿನ್ನು
ಯಾರೀಗೂ ಗೆಲುವು ಆಗೋದಿಲ್ಲಾ ತಾನ |ತಂದಾನ|
ಲಾಗುತಾನೀಗೂಲಿರುವನಲ್ಲೋವೀಗಿನ್ನು
ಅವರುವೀಗೊಂದೆ ಬಿಡುತರಿಯಾ ತಾನ |ತಂದಾನ|
ಲವಾಕುಶನೇ ಬಿಡುತಾರೇವೀಗಿನ್ನು
ಏನು ಬಾಣಾನೆ ಬಿಡುತರಿಯಾ ತಾನ |ತಂದಾನ|
ಏನು ಬಾಣಾನೇ ಬಿಡುತಾರೆ ವೀಗಿನ್ನು
ಇಷುದ ಬಾಣಾನೆ ಬಿಡುತರಿಯಾ ತಾನ |ತಂದಾನ|
ರಾಮಾ ಲಚ್ಚುಮಣ್ಣ ಎಂಬುವರು ವೀಗಿನ್ನು
ದಾತು ತಪ್ಪವರೆ ಬಿದ್ದರಾಲಾ ತಾನ |ತಂದಾನ|
ಲವರು ಇಬ್ಬೂರು ಬಿದ್ದಿದುರುವೀಗಿನ್ನು
ಲವಾಕುಶಾನೇ ಎಂಬುವುರಾ ತಾನ |ತಂದಾನ|
ಅವರು ಇಬ್ಬರು ಹೋಗಿದುರುವೀಗಿನ್ನು
ಅವರು ಇಬ್ಬುರ ಕಂಡಿದುರಾ ತಾನ |ತಂದಾನ|
ರಾಮುನು ಕಿರೀಟೊಂದೆ ಇರುವುದಾಲವೀಗಿನ್ನು
ಲವಾ ವೀಗೊಂದೆ ಕಸುಗೊಂಡಾ ತಾನ |ತಂದಾನ|
ಲಚ್ಚುಮಣ್ಣನು ಕಿರೀಟೊಂದೆಲಿರುವದಲ್ಲಾ ವೀಗಿನ್ನು
ಕುಶವೀಗೊಂದೆ ಕಸುಗೊಂಡಾ ತಾನ |ತಂದಾನ|
ತಾಯಿ ಬುಡಕೊಂದೆ ಬಂದಿದುರುವೀಗಿನ್ನು
ಕೇಳು ಕೇಳು ನನ್ನ ತಾಯೇ ನೀನಾಳ ತಾನ |ತಂದಾನ|
ಯಾವು ರಾಜ್ಯೇದ ಮಕ್ಕಳೇನೋವೀಗಿನ್ನು
ಅರಸುಮಕ್ಕಾಳು ಇಬ್ಬರಾಲಾ ತಾನ |ತಂದಾನ|
ನಮ್ಮಾ ರಾಜ್ಯೇಕ್ಕೆ ಬಂದಿದುರುವೀಗಿನ್ನು
ಅವುರು ಇಬ್ಬರು ಸೋತಿದುರಾ ತಾನ |ತಂದಾನ|
ಲವರು ಕಿರೀಟೊಂದೆ ತಂದೆವಲ್ಲಾವೀಗಿನ್ನು
ನಾವು ಇಬ್ಬೂರು ತಂದಿವಲ್ಲೋ ತಾನ |ತಂದಾನ|
ಸೀತಾದೇವಿನೇ ಕಂಡಿದಳುವೀಗಿನ್ನು
ಕೇಳಿ ಕೇಳಿ ಮಕ್ಕಳೆ ನೀ ಕೇಳಾ ತಾನ |ತಂದಾನ|
ಯಾರು ಕಿರೀಟೊಂದೆ ಅಲ್ವಾಲೋವೀಗಿನ್ನು
ರಾಮುಸ್ವಾಮೀ ಎಂಬಾನಾಲಾ ತಾನ |ತಂದಾನ|
ರಾಮುಸ್ವಾಮಿ ಎಂಬುವನು ವೀಗಿನ್ನು
ಅಯ್ಯೋಧ್ಯೆ ಎಂಬ ನಗರದಲ್ಲೋ ತಾನ |ತಂದಾನ|
ಅಯೋಧ್ಯೆ ಎಂಬ ನಗರದಲ್ಲೋ ವೀಗಿನ್ನು
ಊರೂರು ಕಪ್ಪ ಬೇಡಿಕೊಂಡಾ ತಾನ |ತಂದಾನ|
ರಾಮುಸ್ವಾಮೀನೇ ಅಂದರಲ್ಲವೀಗಿನ್ನು
ನಿಮ್ಮ ತಂದೀನೇ ಅವನಾಲಾ ತಾನ |ತಂದಾನ|
ಲವರವೀಗೊಂದೆ ಬಿಟ್ಟು ಬಿಡಿಯೋವೀಗಿನ್ನು
ಅವರು ಕುದುರಿನ ಕಟ್ಟಿಬ್ಯಾಡೀ ತಾನ |ತಂದಾನ|
ಅವರು ಕುದುರಿನ ಕಟ್ಟಿಬ್ಯಾಡಿವೀಗಿನ್ನು
ಅವರವೀಗೊಂದೆ ಬಿಟ್ಟು ಬಿಡಬೇಕಾ ತಾನ |ತಂದಾನ|
ತಾಯಿ ಸೀತಾದೇವಿ ಎಂಬವುಳು ವೀಗಿನ್ನು
ಲವ ಕುಶಾನೇ ಹೇಳುತೆಳಿಯಾ ತಾನ |ತಂದಾನ|
ಲವ ಕುಶಾನೇ ಹೋಗಿದರು ವೀಗಿನ್ನು
ಅಲ್ಲೊಂದು ಬಾಣ ಹೊಡಿತರಿಯಾ ತಾನ |ತಂದಾನ|
ರಾಮಲಚ್ಚಮಣ್ಣ ಎಂಬವರು ವೀಗಿನ್ನು
ಎಲ್ಡು ಜನರೀಗು ಎದ್ದರಾಲಾ ತಾನ |ತಂದಾನ|
ಪಾದದ ಮ್ಯಾಲೀಗ ಬಿದ್ದಿದುರು ವೀಗಿನ್ನು
ಅಯ್ಯೋ ನನ್ನ ತಂದೆ ನೀನೆಂಬಾ ತಾನ |ತಂದಾನ|
ನನ್ನ ತಂದೀನೇ ರಾಮಸ್ವಾಮಿ ವೀಗಿನ್ನು
ನಾವು ಮಾಡಿದ್ದು ತಪ್ಪೆಂಬಾ ತಾನ |ತಂದಾನ|
ರಾಮುಸ್ವಾಮೀನೇ ಕೇಳುತವನೇವೀಗಿನ್ನು
ನೀವು ಎಲ್ಲಿಂದ ಬಂದವರು ತಾನ |ತಂದಾನ|
ನೀವು ಎಲ್ಲಿಂದ ಬಂದವರು ವೀಗಿನ್ನು
ಯಾವು ರಾಜಾನ ಮಕ್ಕುಳೇನಾ ತಾನ |ತಂದಾನ|
ಲವ ಕುಶಾನೇ ಹೇಳುತೆವು ವೀಗಿನ್ನು
ಎಲ್ಲಿಂದ ನಾವೇ ಬಂದವರಲ್ಲಾ ತಾನ |ತಂದಾನ|
ಎಲ್ಲಿಂದ ನಾವು ಬಂದವರಲ್ಲಾ ವೀಗಿನ್ನು
ರಾಮನು ಸೀತೇನೆ ಎಂಬುವಳಾ ತಾನ |ತಂದಾನ|
ಸೀತಿಗೂ ನಾವೇ ಹುಟ್ಟಿದವರು ವೀಗಿನ್ನು
ಲವ ಕುಶಾನೇ ಎಂಬವುರಾ ತಾನ |ತಂದಾನ|
ರಾಮಾಸ್ವಾಮಿನೇ ಕೇಳಿದರು ವೀಗಿನ್ನು
ಸೀತಾದೇವೀನೆ ಕಂಡಿದುನಾ ತಾನ |ತಂದಾನ|
ನಾನೂವೀಗೊಂದೆ ಮಾಡಿನಲ್ಲೋವೀಗಿನ್ನು
ತಪ್ಪಿನ ಕೆಲಸೊಂದೆ ಮಾಡಿದುನಾ ತಾನ |ತಂದಾನ|
ಲಂದು ತಾನೀಗೂ ಹೇಳುತವನೇ ವೀಗಿನ್ನು
ಲಚ್ಚಮಣ್ಣನು ಕೂಡು ಹೇಳುತನಿಯಾ ತಾನ |ತಂದಾನ|
ರಾಮ ಲಚ್ಚುಮಣ್ಣ ಎಂಬವುರು ವೀಗಿನ್ನು
ಲವ ಕುಶಾನಾ ಎತ್ತುಗಂಡಾ ತಾನ |ತಂದಾನ|
ಲವಾ ಕುಶಾನಾ ಎತ್ತುಗಂಡೂ ವೀಗಿನ್ನು
ಸೀತಾದೇವಿನೇ ಕರಕೊಂಡಾ ತಾನ |ತಂದಾನ|
ಸೀತಾದೇವಿನೇ ಕರಕೊಂಡು ವೀಗಿನ್ನು
ತಮ್ಮಾಲರಮನೆಗೂ ಬಂದಿದುರಾ ತಾನ |ತಂದಾನ|
ತಮ್ಮಾಲರಮನೆಗೂ ಬಂದಿದುರು ವೀಗಿನ್ನು
ರಾಮಾಸ್ವಾಮಿನೇ ಎಂಬುವನು ತಾನ |ತಂದಾನ|
ರಾಮಾಸ್ವಾಮೀನೇ ಎಂಬುವನು ಈಗಿನ್ನು
ಅಲ್ಲೂ ತಾನಿಗೂ ಹೇಳುತನಿಯೋ ತಾನ |ತಂದಾನ|
ಅಲ್ಲೂ ತಾನಿಗೂ ಹೇಳುತವನೆ ವೀಗಿನ್ನು
ಏನೆಂದು ತಾನೇ ಹೇಳುತನೆಯಾ ತಾನ |ತಂದಾನ|
ಏನೆಂದು ತಾನೇ ಹೇಳುತನೆಯಾ ವೀಗಿನ್ನು
ನಾವು ಏಗೊಂದೆ ಹುಟ್ಟಿದವರಾ ತಾನ |ತಂದಾನ|
ಕೈಕಾ ದೇವೀಯ ಮಕ್ಕಳಾಲ್ಲೋ ವೀಗಿನ್ನು
ರಾಮಲಚ್ಚುಮಣ್ಣ ಎಂಬುವರಾ ತಾನ |ತಂದಾನ|
ರಾಮಲಚ್ಚುಮಣ್ಣ ಎಂದು ಹುಟ್ಟಿದವರು ವೀಗಿನ್ನು
ನಾವು ವೀಗೊಂದೆ ಬೆಳೆದವುರಾ ತಾನ |ತಂದಾನ|
ಹನ್ನೇಡುವರುಷೊಂದೆ ಕಂಡಿದಾಲವೀಗಿನ್ನು
ವನವಾಸದಲ್ಲಿ ಉಳಿದಾಲಾ ತಾನ |ತಂದಾನ|
ಬೂಮುದೇವಿಯೆ ಮಗಳಾಲೋವೀಗಿನ್ನು
ಸೀತಾದೇವಿಯೇ ಎಂಬುವಳಾಲಾ ತಾನ |ತಂದಾನ|
ನಾನು ಲಗ್ಗೂನುನೇ ಆಗಿದುನೋ ವೀಗಿನ್ನು
ಇಲ್ಲಿರೀಗೂ ನಾವೇ ಉಳಿದಿದುಲ್ಲೂ ತಾನ |ತಂದಾನ|
ಇಲ್ಲಿರೀಗೂ ನಾನೇ ಮಾಡಿನಲ್ಲೋ ವೀಗಿನ್ನು
ತಪ್ಪೀನು ಕೆಲಸೊಂದೆ ಮಾಡಿನಾಲಾ ತಾನ |ತಂದಾನ|
ಚಂದೂದಿಂದವರು ಉಳಿವಂಗ ವೀಗಿನ್ನು
ಉಳುವವರು ಕಾಲ ಕಳೆವವುರು ತಾನ |ತಂದಾನ|
ರಾಮಾಲಚ್ಚುಮಣ್ಣ ಇಬ್ಬರಾಲ್ಲೋ ವೀಗಿನ್ನು
ಬಾರ್ತ ಸಸ್ತ್ರಾನೇ ಇಬ್ಬುರಾಲಾ ತಾನ |ತಂದಾನ|
ಬಾರ್ತ ಸಸ್ತ್ರಾನೇ ನಾಕು ಜನವೂ ವೀಗಿನ್ನು
ಲವಾಕುಶಾನೇ ಆರು ಜನವೂ ತಾನ |ತಂದಾನ|
ಲವಾ ಕುಶಾನೇ ಆರುಜನವೂ ವೀಗಿನ್ನು
ಸೀತಾದೇವಿ ಒಬ್ಬಳು ಏಳು ಜನವೋ ತಾನ |ತಂದಾನ|
ಸೀತಾದೇವಿ ಒಬ್ಬಳು ಏಳು ಜನವೂ ವೀಗಿನ್ನು
ಸುಖದಲ್ಲಿ ಕಾಲಾನೆ ಕಳೆವಂಗಾ ತಾನ |ತಂದಾನ|
ಸುಖದಲ್ಲಿ ಕಾಲನೆ ಕಳಿವಂಗಾ ವೀಗಿನ್ನು
ಒಂದಲ್ಲ ಒಂದೇ ದಿನದಲ್ಲೋ ತಾನ |ತಂದಾನ|
ಒಂದಲ್ಲ ಒಂದೇ ದಿನದಲ್ಲು ವೀಗಿನ್ನು
ಸೀತಾದೇವಿಯು ಎಂಬಳಾಲಾ ತಾನ |ತಂದಾನ|
ಸೀತಾದೇವಿಯು ಎಂಬೌಳುವೀಗಿನ್ನು
ಎಲ್ಲವರು ತಾನೇ ನಿಲಿಸಿಗಂಡಾ ತಾನ |ತಂದಾನ|
ಎಲ್ಲವರು ತಾನೇ ನಿಲಿಸಿಗಂಡು ವೀಗಿನ್ನು
ತಾನೊಂದೆ ಮಾತ ನುಡಿತಳಿಯೂ ತಾನ |ತಂದಾನ|
ತಾನೊಂದೆ ಮಾತ ನುಡಿತವಳೆ ಏನೆಂದು
ನಾನೂವೀಗೊಂದೆಲಿರುವಳಾಲಾ ತಾನ |ತಂದಾನ|
ನಾನೂವೀಗೊಂದೆಲಿರುವಳಾಲ ವೀಗಿನ್ನು
ತಂದಿಲ್ಲೆ ನನಗೂ ತಾಯಿಲ್ಲಾ ತಾನ |ತಂದಾನ|
ತಂದಿಲ್ಲೆ ನನಗೂ ತಾಯಿಲ್ಲಾ ವೀಗಿನ್ನು
ಬೂಮಾದೇವಿಯ ಮಗುಳಾಲಾ ತಾನ |ತಂದಾನ|
ಬೂಮಾದೇವಿಯ ಮಗುಳಾಲ್ಲೋ ಈಗಿನ್ನು
ಜನಕು ರಾಜುಗೋ ಸಿಕ್ಕಿನಾಲಾ ತಾನ |ತಂದಾನ|
ಜನುಕು ರಾಜುಗೋ ಸಿಕ್ಕಿನಾಲ್ಲೋ ಈಗಿನ್ನು
ಬೂಮಿ ಒಳಗೂ ನಾನೇ ಸಿಕ್ಕಿನಾಲಾ ತಾನ |ತಂದಾನ|
ಬೂಮಿ ಒಳಗೂ ನಾನೇ ಸಿಕ್ಕಿನಾಲ್ಲೋ ಈಗಿನ್ನು
ರಾಮನೂ ಲಗ್ಗಿನೆ ಆಗಿನಲ್ಲಾ ತಾನ |ತಂದಾನ|
ರಾಮುನೂ ಸೀತೀನೆ ಲಾಗಿದೆನು ಈಗಿನ್ನು
ಕಳ್ಳ ರವಣಾನು ಎಂಬವನಾ ತಾನ |ತಂದಾನ|
ಕಳ್ಳ ರವಣಾನು ಎಂಬುವನು ಈಗಿನ್ನು
ನನ್ನಾ ಕದ್ದುಕೊಂಡು ಹೋಗಿನಾಲಾ ತಾನ |ತಂದಾನ|
ರಾಮಾಸ್ವಾಮಿನೇ ಎಂಬವರು ಈಗಿನ್ನು
ಎಷ್ಟೋ ಕಷ್ಟಾನೇ ಬಿಟ್ಟಿರಾಲಾ ತಾನ |ತಂದಾನ|
ನನ್ನಾವೀಗೊಂದೆ ತಂದಿದುರು ಈಗಿನ್ನು
ನನ್ನಾವೀಗೊಂದೆ ಹುಟ್ಟಿರಾಲಾ ತಾನ |ತಂದಾನ|
ಲವಾ ಕುಶಾನೇ ಎಂಬುವರು ಈಗಿನ್ನು
ಎಲ್ಡು ಜನರೀಗು ಹುಟ್ಟಿರಾಲಾ ತಾನ |ತಂದಾನ|
ನಾನಿನ್ನಾದರೂ ಉಳಿಲಾರಿ ವೀಗಿನ್ನು
ಇಲ್ಲು ನಾನೊಂದೆ ಬಾಳಲಾರೇ ತಾನ |ತಂದಾನ|
ಇಲ್ಲೂ ನಾನೊಂದೆ ಬಾಳಲಾರೆ ವೀಗಿನ್ನು
ಭೂಮಿ ಪಾಲಾಗಿ ಹೋಗುತೀದಾ ತಾನ |ತಂದಾನ|
ಲಂದು ತಾನೀಗೂ ಹೇಳಿದುಳು ಈಗಿನ್ನು
ನನ್ನ ತಾಯೊಂದೇಲಾಗಿದುರಾ ತಾನ |ತಂದಾನ|
ಭೂಮಿ ದೇವೀನೇಲಾಗಿದುರು ಈಗಿನ್ನು
ಭೂಮಿ ಬಾಯೊಂದೆ ಬಿಡುಬೇಕಾ ತಾನ |ತಂದಾನ|
ಭೂಮಿ ಬಾಯೊಂದೇ ಬಿಡಬೇಕು ಈಗಿನ್ನು
ಭೂಮಿ ಪಾಲಾಗು ಹೋಗುತೀದಾ ತಾನ |ತಂದಾನ|