ಮದ್ದಿನು ಗಿಡವೊಂದೆ ಹುಡುಕಿದನು ವೀಗಿನ್ನು
ಲಚ್ಚುಮಣ್ಣನು ಬಾಯಿ ಬಿಡುವನಾಲಾ ತಾನ |ತಂದಾನ|
ಲಚ್ಚಮಣ್ಣನು ಬಾಯಿಗೂ ಬಿಟ್ಟಿದನು ವೀಗಿನ್ನು
ಅಲ್ಲೂವೀಗೊಂದೆ ಎದ್ದನಾಲಾ ತಾನ |ತಂದಾನ|
ಅಲ್ಲೂವಿಗೊಂದೆ ಎದ್ದನಾಲಾ ವೀಗಿನ್ನು
ಎದ್ದೂ ತಾನೀಗೂ ಕೂತನ್ಯಾಲಾ ತಾನ |ತಂದಾನ|
ಲಚ್ಚುಮಣ್ಣವೀಗೂ ಎದ್ದಿದುನು ವೀಗಿನ್ನು
ಲಾಗೂ ತಾನೊಂದೆ ನಡಿತದಿಯೋ ತಾನ |ತಂದಾನ|
ಅವರಿಗು ಯುದ್ದಾನೇ ನಡಿತದಿಯೋ ತಾನ |ತಂದಾನ|
ಅಲ್ಲೂ ತಾನೀಗು ಹೇಳುತಾನಿಯೋ ವೀಗಿನ್ನು
ಎಲ್ಲೂ ಬಾಣಾನೇ ಹೊಡೆದಿದುರಾ ತಾನಾ |ತಂದಾನ|
ಎಲ್ಲೂ ಬಾಣಾನೇ ಹೊಡೆದಿದುರಾ ವೀಗಿನ್ನು
ರವಣಾಗೊಂದೆ ಸಾಯುದಿಲ್ಲಾ ತಾನ |ತಂದಾನ|
ರವಣಾಗೊಂದೆ ಸಾವುದಿಲ್ಲ ವೀಗಿನ್ನು
ವಿಭೀಷಣ ಬಂದು ಹೇಳುತಾನಿಯೋ ತಾನ |ತಂದಾನ|
ವಿಭೀಷಣ ಬಂದು ಹೇಳುತಾನಿಯೋ ವೀಗಿನ್ನು
ರಾಮನು ಕೂಡೊಂದೆ ಹೇಳುತಾನಿಯೋ ತಾನ |ತಂದಾನ|
ರಾಮನು ಕೂಡೊಂದೆ ಹೇಳುತವುನೆ ಈಗಿನ್ನು
ಎಲ್ಲೂ ಬಾಣಾನೆ ಹೊಡೆದಿದುರೂ ತಾನ |ತಂದಾನ|
ಎಲ್ಲೂ ಬಾಣಾನೆ ಹೊಡೆದಿದರು ಈಗಿನ್ನು
ರಾವಣಾನಿಗೊಂದೆ ಸಾವುದಿಲ್ಲಾ ತಾನ |ತಂದಾನ|
ರಾವಣಾನಿಗೊಂದೆ ಸಾವುದಿಲ್ಲಾ ಈಗಿನ್ನು
ಅವುನೂಡಿಗೊಂದೆ ಹೊಡಿಬೇಕಾ ತಾನ |ತಂದಾನ|
ಅವುನೂಡಿಯೊಲು ಅದೆಯಲ್ಲೋ ಈಗಿನ್ನು
ಅಮೃತ ಗಿಂಡಿ ಕಳಸತಾನ ತಾನ |ತಂದಾನ|
ಅಲ್ಲೀ ಬಾಗೊಂದೆ ಹೊಡೆದುದರೆ ಈಗಿನ್ನು
ರವಣಾ ಈಗೊಂದೆ ಸಾಯುತಾನೆ ತಾನ |ತಂದಾನ|
ರಾಮಾ ಬಾಣಾನೆ ಬಿಡುತಾನೆ ಈಗಿನ್ನು
ರವಣಾನೂಡಿಗೊಂದೆ ಹೊಡಿತಾನೆಯೋ ತಾನ |ತಂದಾನ|
ರವಣಾನೂಡಿಗೊಂದೆ ಹೊಡಿತಾನೆಯೋ ಈಗಿನ್ನು
ಅವುನೂ ಎದಿಯಲ್ಲು ಅದಿಯಾನ ತಾನ |ತಂದಾನ|
ಅಮೃತುಗಿಂಡಿಯು ಕಳಸಲು ಈಗಿನ್ನು
ಅದುರೂ ಈಗೊಂದೆ ಜರುದನ್ಯಾಲಾ ತಾನ |ತಂದಾನ|
ಅದುರು ಈಗೊಂದೆ ಜರುದನ್ಯಾಲಾ ಈಗಿನ್ನು
ರವಣಾನು ಈಗೊಂದೆ ಸತ್ತನ್ಯಾಲಾ ತಾನ |ತಂದಾನ|
ರವಣಾನು ಸತ್ತು ಬಿದ್ದನ್ಯಾಲೇ ಈಗಿನ್ನು
ಅಲ್ಲಿ ಅವನ ಮಡುದಿನೇ ಇರುವೊಳ್ಯಾ ತಾನ |ತಂದಾನ|
ಅಲ್ಲಿ ಅವನ ಮಡದಿನೇ ಇರುವೊಳ್ಯಾ ಈಗಿನ್ನು
ಮಂಡೋದ್ರಿ ಎಂಬ ಮಡದಿಯಲಾ ತಾನ |ತಂದಾನ|
ಲಾಗುತಾನೆ ಬಂದಿದುಳು ಈಗಿನ್ನು
ನನ್ನ ಗತಿಯಿನ್ನು ಎನವುಳಾ ತಾನ |ತಂದಾನ|
ನನ್ನ ಗತಿಯೇನು ಎನುತಳಿಯೋ ಈಗಿನ್ನು
ನನ್ನ ಗಂಡನ ಕೊಂದೋರ್ಯಾಲಾ ತಾನ |ತಂದಾನ|
ಲಾಗೂ ತಾನೀಗೂ ಹೇಳುತಾನೆಯೋ ಈಗಿನ್ನು
ರಾಮುಸ್ವಾಮಿನೇ ಹೇಳುತಾನೆಯೋ ತಾನ |ತಂದಾನ|
ರಾಮುಸ್ವಾಮಿನೇ ಹೇಳುತಾನೆಯೋ ಈಗಿನ್ನು
ನಿನ್ನು ಗಂಡಾನ ಸಬುವಂದಾ ತಾನ |ತಂದಾನ|
ನಿನ್ನೂ ಗಂಡಾನ ಸಬುವಂದಾ ಈಗಿನ್ನು
ಲಂಕಾದಲಿ ನಾವೆ ಸುಡುತೀದೊ ತಾನ |ತಂದಾನ|
ಲಂಕಾದಲಿ ನಾವೆ ಸುಡುತಿದಿವೋ ಈಗಿನ್ನು
ಇಲ್ಲೀ ಅಗುನಿನೇ ನಿಂಗುಬಾರಾ ತಾನ |ತಂದಾನ|
ಅಲ್ಲಿ ಅಗುನಿನೇ ನಿಂಗುದಿಲ್ಲ ಈಗಿನ್ನು
ನಿನ್ನಾ ಗಂಡಾನೆಂಬುನಾಲಾ ತಾನ |ತಂದಾನ|
ನಿನ್ನಾ ಗಂಡಾನೆಂಬುನಾಲಾ ಈಗಿನ್ನು
ಇದೆ ಅಗುನಿಯಾ ಕಾಯ್ಕಂಡು ತಾನ |ತಂದಾನ|
ಇದೆ ಆಗುನಿ ಕಾಯ್ಕಂಡೂ ಈಗಿನ್ನು
ಇಲ್ಲೇ ನೀನೊಂದೆ ಉಳಿಬೇಕಾ ತಾನ  |ತಂದಾನ|
ರಾಮ ಲಚ್ಚುಮಣ್ಣ ಎಂಬೋರು ಈಗಿನ್ನು
ಸೀತೀಯ ಕರಕೊಂಡು ಬರತಾರ್ಯಾ ತಾನ |ತಂದಾನ|
ಸೀತೀಯ ಕರಕೊಂಡು ಬಂದಿದುರು ಈಗಿನ್ನು
ಎಲ್ಲೀಗೂ ಅವರು ಬಂದರೇನಾ ತಾನ |ತಂದಾನ|
ಎಲ್ಲೀಗೂ ಅವರು ಬಂದುರೇನಾ ಈಗಿನ್ನು
ತಮ್ಮಾಲರಮನಿಗೂ ಬಂದಿದುರಾ ತಾನ |ತಂದಾನ|
ತಮ್ಮಾಲರಮನಿಗೂ ಬಂದಿದುರಾ ಈಗಿನ್ನು
ಎಷ್ಟೋ ದಿವಸಾಕು ಬಂದುರೇನಾ ತಾನ |ತಂದಾನ|
ಹನ್ನೆರಡು ವರುಷ ಕಳುಕೊಂಡು ಈಗಿನ್ನು
ಲವರೂ ತಿರುಗೊಂದೆ ಬಂದಿದುರಾ ತಾನ |ತಂದಾನ|
ಲವರೂ ತಿರುಗೊಂದೆ ಬಂದಿದುರಾ ಈಗಿನ್ನು
ಅವರು ಮನೆಗೊಂದು ಬರುವರೀಗಾ ತಾನ |ತಂದಾನ|
ಅವರು ಮನೆಗೊಂದು ಬರುವರೀಗಾ ಈಗಿನ್ನು
ಭರತ ಸಸ್ತ್ರಾನೆ ಎಂಬುವರಾ ತಾನ |ತಂದಾನ|
ಭರತ ಸಸ್ತ್ರಾನೆ ಎಂಬುವರಾ ಈಗಿನ್ನು
ಭರತ ಸಸ್ತ್ರಾನೆ ಎಂಬುವರಾ ತಾನ |ತಂದಾನ|
ಅರಮನೆಯಲ್ಲವರು ಇರುವೋರು ಅವರೀಗಿನ್ನು
ತಂದೀ ಎಂಬುವನೆ ಇದ್ದನಾಲಾ ತಾನ |ತಂದಾನ|
ತಂದೀ ಎಂಬುವನೆ ಇದ್ದನಾಲಾ ಈಗಿನ್ನು
ದಶರಥು ಮಾರಾಜ ಎಂಬುವನಾ ತಾನ |ತಂದಾನ|
ದಶರಥು ಮಾರಾಜ ಎಂಬುವನು ಈಗಿನ್ನು
ಸತ್ತೂ ಹನ್ನೆರಡು ಮರುಷಾಲೂ ತಾನ |ತಂದಾನ|
ಹನ್ನೆರಡು ವರುಷವೊಂದೆ ಆಗದೆಯೋ ಈಗಿನ್ನು
ತಂದೀ ಶಾಪವೊಂದೆ ತಗಿಲಿಲ್ಲಾ ತಾನ |ತಂದಾನ|
ತಂದೀ ಶಾಪವೊಂದೇ ತಗಿಲಿಲ್ಲಾ ಈಗಿನ್ನು
ಎಣ್ಣೀಕೊಪ್ಪರಿಗಿಲಿ ಕುದಿಸ್ಯಾರಾ ತಾನ |ತಂದಾನ|
ಎಣ್ಣೀಬಂಡೀಲಿ ಹಾಕ್ಯಾರ್ಯಾಲೇ ಈಗಿನ್ನು
ತಂಪಿಗೆ ಶಾಪವೊಂದೆ ಇಟ್ಯರ್ಯಾಲಾ ತಾನ |ತಂದಾನ|
ಭರತಾ ಸಸ್ತ್ರಾನು ಎಂಬುವರು ಈಗಿನ್ನು
ಅಣ್ಣಾದಿರೊಂದೆ ಬರಲಿಲ್ಲಾ ತಾನ |ತಂದಾನ|
ಹನ್ನೆರಡೊರುಷೊಂದೆ ಕಳುಹೋದು ವೀಗಿನ್ನು
ನನ್ನ ಮನೆಗೊಂದೆ ಬರಲಿಲ್ಲಾ ತಾನ |ತಂದಾನ|
ಮನೆಗೊಂದೆ ಬರುದಿಲ್ಲಾ ಎಂದಿದುರು ಈಗಿನ್ನು
ಹೊಂಡವನೊಂದೆ ತೆಗೆಸಿದುರಾ ತಾನ |ತಂದಾನ|
ಹೊಂಡವನೊಂದೆ ತೆಗೆಸಿದುರಾ ವೀಗಿನ್ನು
ಹೊಂಡದಲಿ ಕೊಂಡ ಮಾಡಿಸಿದುರಾ ತಾನ |ತಂದಾನ|
ಹೊಂಡದಲಿ ಕೊಂಡ ಮಾಡಿಸಿದುರು ಈಗಿನ್ನು
ಕೊಂಡುದಲಿ ನಾವೆ ಹಾರುಬೇಕಾ ತಾನ |ತಂದಾನ|
ಅಲ್ಲೊಂದು ತಾವೀಗೂ ಮಾಡರಿಯೋ ಈಗಿನ್ನು
ಭರತ ಸಸ್ತ್ರ ಎಲ್ಡು ಜನುರಾಲಾ ತಾನ |ತಂದಾನ|
ಅಲ್ಲಷ್ಟರೊಳಗಿವರು ಬಂದಿದುದುರು ಈಗಿನ್ನು
ರಾಮಸ್ವಾಮೀನೆ ಕಂಡನಾಲಾ ತಾನ |ತಂದಾನ|
ರಾಮಸ್ವಾಮೀನೇ ಕಂಡಿದುನೂ ಈಗಿನ್ನು
ಕೇಳಿ ಕೇಳಿ ತಮ್ಮ ನೀ ಕೇಳೋ ತಾನ |ತಂದಾನ|
ಕೇಳಿ ಕೇಳಿ ತಮ್ಮ ಅನುತಾನೆ ಈಗಿನ್ನು
ಹಾರುಬೇಡಿ ನೀವೇ ಅನುತಾನಿಯಾ ತಾನ |ತಂದಾನ|
ಭರತ ಸಸ್ತ್ರ ಕಂಡಿದುರು ಈಗಿನ್ನು
ಅಣ್ಣಾದಿರೊಂದೆ ಕಂಡನ್ಯಾಲಾ ತಾನ |ತಂದಾನ|
ಅಲ್ಲಣ್ಣನು ಪಾದಾಕು ಬೀಳುತಾರೆಯೋ ವೀಗಿನ್ನು
ಅಲ್ಲೀಗು ತಾವೆ ಬಂದಾರಾಲ ತಾನ |ತಂದಾನ|
ಅಲ್ಲೀಗು ತಾವೆ ಬಂದಾರಾಲ ವೀಗಿನ್ನು
ತಮ್ಮಲರಮನಿಗೂ ಬಂದಿದುರು ತಾನ |ತಂದಾನ|
ತಮ್ಮಲರಮನಿಗೂ ಬಂದಿದುರು ಈಗಿನ್ನು
ರಾಮಲಕ್ಷಮಣ ಎಂಬುವರಾ ತಾನ |ತಂದಾನ|
ರಾಮಾಲಕ್ಷಮಣ ಎಂಬುವರು ಈಗಿನ್ನು
ಸೀತೀಗೂ ಬೆನ್ನಿಗೂ ಕರಕೊಂಡೂ ತಾನ |ತಂದಾನ|
ಸೀತೀಗೂ ಬೆನ್ನಿಗೂ ಕರಕೊಂಡೂ ಈಗಿನ್ನು
ಹನುಮಂತನಿಗೂ ಕರಕೊಂಡಾ ತಾನ |ತಂದಾನ|
ರಾಮಾನಾ ಬಂಟಾನೆ ಎಂಬುವನು ಈಗಿನ್ನು
ಹನುಮಂತವೀಗೂ ಇರುವೊನಾ ತಾನ |ತಂದಾನ|
ತಮ್ಮಾ ಮನಿಗೊಂದೆ ಬಂದಿದುರು ವೀಗಿನ್ನು
ಲಾಗೂತಾವೀಗೂಲಿರುವೋರಾ ತಾನ |ತಂದಾನ|
ಅಲ್ಲವರು ಎಲ್ಲವರು ಕೂಡಿದುರು ಈಗಿನ್ನು
ಶಾಪವೊಂದೇ ತೆಗಿತಾರ್ಯಾ ತಾನ |ತಂದಾನ|
ತಂದಿ ಶಾಪವೊಂದೇ ತೆಗಿತಾರ್ಯಾ ಈಗಿನ್ನು
ತಾವು ಈಗೊಂದೆ ಸುಡುತಾರಾ ತಾನ |ತಂದಾನ|
ತಾವು ಈಗೊಂದೆ ಸುಡುತಾರೆ ಈಗಿನ್ನು
ತಮ್ಮ ಚಡ್ಡಂಗುನೆ ಮಾಡುತಾರ್ಯಾ ತಾನ |ತಂದಾನ|
ಅಲ್ಲದುರು ಶಾಪಸುತ್ತು ಕಳಿತವರೆ ವೀಗಿನ್ನು
ಚಂದುದಿಂದು ಅವರು ಉಳಿತಾರಾ ತಾನ |ತಂದಾನ|
ಚಂದುದಿಂದು ಅವರು ಉಳಿತಾರಾ ಈಗಿನ್ನು
ರಾಮಪಟ್ಯುವೊಂದು ಆಳುತಾನ ತಾನ |ತಂದಾನ|
ರಾಮಪಟ್ಯವೊಂದು ಆಳುತಾನೆ ಈಗಿನ್ನು
ಅಯೋದ್ಯಾ ಎಂಬ ನಗರದಲ್ಲಾ ತಾನ |ತಂದಾನ|
ಅಯೋದ್ಯಾ ಎಂಬ ನಗರದಲ್ಲಿ ಈಗಿನ್ನು
ಸುಕದಲು ಕಾಲಾನೆ ಕಳಿತಾರ್ಯಾ ತಾನ |ತಂದಾನ|
ಸುಕದಲು ಕಾಲಾನೆ ಕಳಿತಾರ್ಯಾ ಈಗಿನ್ನು
ಅಲ್ಲೂ ಈಗೊಂದೆ ಉಳಿವವರಾ ತಾನ |ತಂದಾನ|
ಅಲ್ಲೂ ಈಗೊಂದೆ ಉಳಿತಾರೆ ಈಗಿನ್ನು
ರಾಮಲಚಮಣ್ಣ ಎಂಬವರಾ ತಾನ |ತಂದಾನ|
ರಾಮಲಚ್ಚಮಣ್ಣ ಎಂಬವರಾ ಈಗಿನ್ನು
ಚಂದೂದಿಂದು ಅವರು ಉಳುವಂಗಾ ತಾನ |ತಂದಾನ|
ಚಂದೂದಿಂದು ಅವರು ಉಳುವಂಗಾ ಈಗಿನ್ನು
ಉಳುವಂಗು ಕಾಲ ಕಳುವಂಗಾ ತಾನ |ತಂದಾನ|
ಉಳುವಂಗು ಕಾಲ ಕಳುವಂಗಾ ಈಗಿನ್ನು
ಆಳು ಮಕ್ಕಳು ಸಲಿಕಂಡಾ ತಾನ |ತಂದಾನ|
ಆಳುಮಕ್ಕಳು ಸಲಿಕಂಡು ಈಗಿನ್ನು
ಒಕ್ಕಲು ಮಕ್ಕಳು ನೋಡುಕಂಡಾ ತಾನ |ತಂದಾನ|
ಒಕ್ಕಲು ಮಕ್ಕಳು ಸಲಿಕೊಂಡು ಈಗಿನ್ನು
ಊರೂರ ಕಪ್ಪ ಪಡಕೊಂಡಾ ತಾನ |ತಂದಾನ|
ಊರೂರ ಕಪ್ಪ ಪಡಕೊಂಡಾ ಈಗಿನ್ನು
ಚಂದೂದಿಂದವರು ಉಳುವಂಗಾ ತಾನ |ತಂದಾನ|
ರಾಮಾಸ್ವಾಮಿನೆ ಎಂಬುವನು ಈಗಿನ್ನು
ಒಂದಲ್ಲ ಒಂದೆ ದಿವುಸಾನಾ ತಾನ |ತಂದಾನ|
ಒಂದಲ್ಲ ಒಂದೆ ದಿನದಲ್ಲಿ ಈಗಿನ್ನು
ಒಂದು ಗ್ಯಾನಾನೆ ಮಾಡಿದುನಾ ತಾನ |ತಂದಾನ|
ಒಂದು ಗ್ಯಾನಾನೆ ಮಾಡಿದುನಾ ಈಗಿನ್ನು
ಏನು ಗ್ಯಾನಾನೆ ಮಾಡಿದುನಾ ತಾನ |ತಂದಾನ|
ಏನು ಗ್ಯಾನಾನೆ ಮಾಡಿದುರಾ ಈಗಿನ್ನು
ಇಷ್ಟು ಕಾಲೊಂದೆ ಕಳೆದಿರಾಲಾ ತಾನ |ತಂದಾನ|
ಇಷ್ಟು ಕಾಲಾನೆ ಕಳೆದಿದುರು ಈಗಿನ್ನು
ನನ್ನ ಸುದ್ದೀನೆ ಹೇಳುವರಲಾ ತಾನ |ತಂದಾನ|
ಹನುಮಂತನಿಗೂ ಕರೆದುದುನು ಈಗಿನ್ನು
ಆಗು ತಾನೊಂದೆ ಹೇಳಿದನೆಲಾ ತಾನ |ತಂದಾನ|
ಆಗು ತಾನೊಂದೆ ನುಡಿದಿದನು ಈಗಿನ್ನು
ಏನೂ ತಾನೊಂದೆ ನುಡಿದಿದನೂ ತಾನ |ತಂದಾನ|
ಏನೂ ತಾನೊಂದೆ ನುಡಿದಿದನೂ ಈಗಿನ್ನು
ನನ್ನ ಬಕುತಾನೆ ನೀನ್ಯಾಲಾ ತಾನ |ತಂದಾನ|
ನನ್ನ ಬಕುತಾನೆ ನೀನ್ಯಾಲಾ ಈಗಿನ್ನು
ಊರು ಕೇರೀನೇ ತಿರುಗುಬೇಕಾ ತಾನ |ತಂದಾನ|
ಊರು ಕೇರೀನೇ ತಿರುಗುಬೇಕಾ ಈಗಿನ್ನು
ನನ್ನಾ ಸುದ್ದೀನೇ ಹೇಳುತಾರಾ ತಾನ |ತಂದಾನ|
ನನ್ನಾ ಸುದ್ದೀನೇ ಹೇಳುತಾರ ಈಗಿನ್ನು
ಕಂಡು ಕೇಳೊಂದೆ ಬರಬೇಕಾ ತಾನ |ತಂದಾನ|
ಲಾಗೂತಾನೀಗೂನಿರುವನಾಲ ವೀಗಿನ್ನು
ರಾಮನು ಭಂಟನೆ ಎಂಬುವನಾ ತಾನ |ತಂದಾನ|
ರಾಮನು ಭಂಟನೆ ಎಂಬುವನು ಈಗಿನ್ನು
ಹನುಮಂತವೀಗು ಹೋಗುತಾನಾ ತಾನ |ತಂದಾನ|
ಹನುಮಂತವೀಗು ಹೋಗುತಾನೆ ಈಗಿನ್ನು
ಊರು ಕೇರೀನೆ ತಿರುಗುತಾನ್ಯಾ ತಾನ |ತಂದಾನ|
ಊರು ಕೇರೀನೆ ತಿರುಗುತಾನೆ ಈಗಿನ್ನು
ಎಲ್ಲೋಗಿ ಬಂದೆ ಕೇಳಿದುರೂ ತಾನ |ತಂದಾನ|
ಎಲ್ಲೋಗಿ ಬಂದೆ ಕೇಳಿದುರೂ ಈಗಿನ್ನು
ಎಲ್ಲೋಗಿ ಬಂದೆ ಕಂಡಿದುರಾ ತಾನ |ತಂದಾನ|
ಎಲ್ಲೋಗೀ ಬಂದೆ ಕಂಡಿದುರಾ ಈಗಿನ್ನು
ರಾಮ ರಾಮೆಂದೇ ಹೇಳುತಾರ್ಯಾ ತಾನ |ತಂದಾನ|
ರಾಮ ರಾಮೆಂದೇ ಹೇಳುತಾರೆ ಈಗಿನ್ನು
ರಾಮನು ಸ್ವರುಣೇನೆ ಮಾಡುತಾರ್ಯ ತಾನ |ತಂದಾನ|
ರಾಮನು ಸ್ವರುಣೇನೆ ಮಾಡುತಾರ್ಯೆ ಈಗಿನ್ನು
ಸುಕುದಲ್ಲಿದ್ದವರು ನೆನೆತಾರ್ಯಾ ತಾನ |ತಂದಾನ|
ಸುಕುದಲ್ಲಿದ್ದವರು ನೆನೆತಾರ್ಯಾ ಈಗಿನ್ನು
ರಾಮುನು ಸ್ವರಣೇನೆ ನೆನಿತಾರ್ಯಾ ತಾನ |ತಂದಾನ|
ಕಷ್ಟಬಂದೋರು ನೆನಿತಾರೆ ಈಗಿನ್ನು
ಅಯ್ಯೋ ರಾಮಾನೆ ನೆನಿತಾರ್ಯಾ ತಾನ |ತಂದಾನ|
ಕೇಳು ಕಂಡೀಗು ಹೋಗುತಾನ್ಯಾ ಈಗಿನ್ನು
ಹನುಮಂತವೀಗೂ ಹೋಗುತಾನ್ಯಾ ತಾನ |ತಂದಾನ|
ಹನುಮಂತವೀಗೂ ಹೋಗುತಾನ್ಯಾ ಈಗಿನ್ನು
ಅಲ್ಲೊಂದು ಮದಾದ ನದಿಯೊಂದು ತಾನ |ತಂದಾನ|
ಅಲ್ಲೊಂದು ಮದಾದ ನದಿಯಲ್ಲಿ ಈಗಿನ್ನು
ಗಂಡ ಹೆಂಡಿರು ಇಬ್ಬರಾಳಾ ತಾನ |ತಂದಾನ|
ಗಂಡ ಹೆಂಡಿರು ಇಬ್ಬರಾಳು ಈಗಿನ್ನು
ಮಡಿವಾಳು ಮಾಚಣ್ಣ ಎಂಬುವನಾ ತಾನ |ತಂದಾನ|
ಮಡಿವಾಳು ಮಾಚಣ್ಣ ಎಂಬುವನು ಈಗಿನ್ನು
ಅಲ್ಲೂ ಬಟ್ಟ್ಯೀನೆ ಒಗಿತಾರ್ಯೋ ತಾನ |ತಂದಾನ|
ಅಲ್ಲೂ ಬಟ್ಟೀನೆ ಒಗಿತಾರ್ಯೋ ಈಗಿನ್ನು
ಬಟ್ಟೀ ಒಗೆಯೊಂಗು ಬಂದರ್ಯಾರಾ ತಾನ |ತಂದಾನ|
ಬಟ್ಟೀ ಒಗೆಯೊಂಗು ಬಂದರ್ಯಾರ ಈಗಿನ್ನು
ಇಬ್ಬುರಿಗೂ ಜಗುಳ ಬಂದದಯಾ ತಾನ |ತಂದಾನ|
ಇಬ್ಬುರಿಗೂ ಜಗಳ ಬಂದದಯಾ ಈಗಿನ್ನು
ಗಂಡ ಹೆಂಡಿರು ಜಗಳವಾಲಾ ತಾನ |ತಂದಾನ|
ಮಡುವಾಳು ಮಾಚಣ್ಣ ಎಂಬುವನೂ ಈಗಿನ್ನು
ಮಡದಿಗೂ ಈ ಕೂಡೂ ಒಂದೆ ನುಡುದಾನಾ ತಾನ |ತಂದಾನ|
ನಾನು ಹೇಳಿದಂಗೆ ನೀನು ಕೇಳುಬೇಕೆ ಈಗಿನ್ನು
ಕೇಳುಕೊಂಡು ನೀನೆ ಇರಬೇಕಾ ತಾನ |ತಂದಾನ|
ನಾನಲಾ ಹೇಳಿದಂಗೆ ಕೇಳುದಿದುರೆ ಈಗಿನ್ನು
ಕೇಳು ಕೊಂಡು ನೀನೆ ಇರಬೇಕಾ ತಾನ |ತಂದಾನ|
ನಾನೂ ಹೇಳುದಂಗೆ ಕೇಳುದಿದುರೆ ಈಗಿನ್ನು
ನೀನು ನಿನ್ನಷ್ಟಕ್ಕೆ ಹೋಗಬೇಕಾ ತಾನ |ತಂದಾನ|
ನೀನು ನಿನ್ನಷ್ಟಕ್ಕೆ ಹೋಗಬೇಕಾ ಈಗಿನ್ನು
ನಿನ್ನಾ ಕರವಾಕೆ ಬರುದಿಲ್ಲಾ ತಾನ |ತಂದಾನ|
ನಿನ್ನಾ ಕರವಾಕೆ ಬರುದಿಲ್ಲಾ ವೀಗಿನ್ನು
ರಾಮಾಬಿಟ್ಟೆಣತಿ ಕರೆದನೆಂಗಾ ತಾನ |ತಂದಾನ|
ರಾಮಾಬಿಟ್ಟೆಣತಿ ಕರೆದನೆಂಗಾ ವೀಗಿನ್ನು
ನಾನು ಬಿಟ್ಟೆಣತಿ ಕರುವುದಿಲ್ಲಾ ತಾನ |ತಂದಾನ|
ನಾನೂ ಬಿಟ್ಟೆಣೆತಿ ಕರೆವುದಿಲ್ಲೆ ವೀಗಿನ್ನು
ಹ್ವಾದಾಳು ಮಣ್ಣು ತಿಂದಿ ಹೋಗಲಾಳಾ ತಾನ |ತಂದಾನ|
ಅಲ್ಲೂವಿಗೊಂದೇ ಕೇಳಿದುನು ವೀಗಿನ್ನು
ಹನುಮಂತವೀಗೂ ಕೇಳಿದುರಾ ತಾನ |ತಂದಾನ|
ಹನುಮಂತವೀಗೂ ಕೇಳಿದುನು ವೀಗಿನ್ನು
ಕೇಳುಕಂಡೀಗೂ ಬಂದಿದುನಾ ತಾನ |ತಂದಾನ|
ಕೇಳು ಕಂಡೀಗೂ ಬಂದಿದುನು ವೀಗಿನ್ನು
ಊರೂಕೇರೀನೆ ತಿರುಕಂಡಾ ತಾನ |ತಂದಾನ|
ಊರುಕೇರಿನೆ ತಿರುಕಂಡು ವೀಗಿನ್ನು
ಹಿಂದೂ ತಿರುಗೊಂದೆ ಬಂದನಾಲಾ ತಾನ |ತಂದಾನ|
ಹಿಂದೂ ತಿರುಗೊಂದೆ ಬಂದನಾಲಾ ವೀಗಿನ್ನು
ತನ್ನಾ ಅರುಮನೆಗೂ ಬಂದನಾಲಾ ತಾನ |ತಂದಾನ|
ತನ್ನಾ ಅರುಮನೆಗೂ ಬಂದನಾಲಾ ವೀಗಿನ್ನು
ರಾಮಸ್ವಾಮಿನೇ ಕೇಳುತನಿಯೋ ತಾನ |ತಂದಾನ|
ರಾಮಸ್ವಾಮಿನೇ ಕೇಳುತವನೆ ಈಗಿನ್ನು
ಏನೂ ಸುದ್ದಿನೆ ಕೇಳುತನೆಯೋ ತಾನ |ತಂದಾನ|
ಕೇಳು ಕೇಳಾಲ ನನ್ನ ಸ್ವಾಮಿ ಈಗಿನ್ನು
ರಾಮಾಸ್ವಾಮಿ ನೀವಾಳ ತಾನ |ತಂದಾನ|
ಊರೂ ಊರಿಗೂ ತಿರುಗಿದೇ ವೀಗಿನ್ನು
ಊರು ಕೇರಿನೇ ತಿರುಗೀದೆ ತಾನ |ತಂದಾನ|
ಊರು ಕೇರಿನೆ ತಿರುಗೀದೆ ವೀಗಿನ್ನು
ಎಲ್ಲೂವೀಗೊಂದೆ ಹೋಗಿದುರಾ ತಾನ |ತಂದಾನ|
ಎಲ್ಲೂವೀಗೊಂದೆ ಹೋಗಿದುರಾ ವೀಗಿನ್ನು
ನಿನ್ನಾ  ಸುದ್ದೀನೆ ನೆನಿತರಿಯಾ ತಾನ |ತಂದಾನ|
ಉಂಡಲವರು ನೆನಿತವರೆ ವೀಗಿನ್ನು
ಉಣದಿರುವವರು ನೆನಿತರಿಯಾ ತಾನ |ತಂದಾನ|
ಉಣದಿರುವವರು ನೆನಿತರಿಯಾ ವೀಗಿನ್ನು
ಸುಖದಾಗಿದ್ದವರು ನೆನಿತರಿಯಾ ತಾನ |ತಂದಾನ|
ಸುಖದಾಗಿದ್ದವರು ನೆನಿತವರೇ ವೀಗಿನ್ನು
ಕಷ್ಟ ಬಂದವರು ನೆನಿತರಿಯಾ ತಾನ |ತಂದಾನ|
ಕಷ್ಟ ಬಂದವರು ನೆನಿತವರೇ ವೀಗಿನ್ನು
ರಾಮ ರಾಮಂದೆ ಹೇಳುತರಿಯಾ ತಾನ |ತಂದಾನ|
ರಾಮ ರಾಮಂದೆ ಹೇಳುತರಿಯಾ ವೀಗಿನ್ನು
ರಾಮುನು ಸ್ವರಣೀನೆ ಮಾಡುತರೀಯಾ ತಾನ |ತಂದಾನ|
ಹೋಗೆ ಹೋಗೊಂದೆ ಹೋಗುದನು ವೀಗಿನ್ನು
ಒಂದು ಮದದಾ ನದಿಯಲ್ಲೋ ತಾನ |ತಂದಾನ|
ಒಂದು ಮದಾದಾ ನದಿಯಲ್ಲೋವೀಗಿನ್ನು
ಗಂಡ ಹೆಂಡರು ಇಬ್ಬುರಾಲಾ ತಾನ |ತಂದಾನ|
ಗಂಡ ಹೆಂಡರು ಇಬ್ಬುರಾಲ್ಲೋ ವೀಗಿನ್ನು
ಅವರಿಗು ಜಗಳೊಂದೆ ಬಿದ್ದದಾಲಾ ತಾನ |ತಂದಾನ|
ಅವರಿಗು ಜಗಳೊಂದೆ ಬಿದ್ದದಾಲಾ ಈಗಿನ್ನು
ಮಡುವಾಳು ಮಾಚಣ್ಣ ಎಂಬವನಾ ತಾನ |ತಂದಾನ|
ಮಡುವಾಳು ಮಾಚಣ್ಣ ಎಂಬುವನು ಈಗಿನ್ನು
ಮಡದಿ ಕೂಡೊಂದೇ ನುಡಿತನಿಯೋ ತಾನ |ತಂದಾನ|
ಮಡದಿ ಕೂಡೊಂದೇ ನುಡಿತನಿಯೋ ವೀಗಿನ್ನು
ರಾಮ ಬಿಟ್ಟೆಣತಿ ಕರೆದಂಗಾ ತಾನ |ತಂದಾನ|
ರಾಮ ಬಿಟ್ಟೆಣತಿ ಕರೆದನೆಂದು ವೀಗಿನ್ನು
ನಾನೇನು ನಿನ್ನೇನು ಕರೆವದಿಲ್ಲಾ ತಾನ |ತಂದಾನ|
ನಾನೇನು ನಿನ್ನೇನು ಕರೆದಿಲ್ಲೇ ವೀಗಿನ್ನು
ಹ್ವಾದಾಳು ಮಣ್ಣು ತಿಂದೇ ಹೋಗುವೆಂದಾ ತಾನ |ತಂದಾನ|
ಮಡಿವಾಳು ಮಾಚಣ್ಣ ಹೇಳಿದನು ವೀಗಿನ್ನು
ಇಟ್ಟು ಮಾತೊಂದೆ ಕೇಳಿದುನಾ ತಾನ |ತಂದಾನ|
ರಾಮಸ್ವಾಮಿನೇ ಕೇಳಿದುನಾ ವೀಗಿನ್ನು
ತನ್ನ ಕಿವಿಯಲ್ಲೋ ಕೇಳಿದನೂ ತಾನ |ತಂದಾನ|
ತನ್ನ ಕಿವಿಯಲ್ಲೋ ಕೇಳಿದನು ವೀಗಿನ್ನು
ರಾಮಗೊಂದು ಗ್ಯಾನ ಬಂದಾದ್ಯಾಲಾ ತಾನ |ತಂದಾನ|
ರಾಮಗೊಂದು ಗ್ಯಾನ ಬಂದದ್ಯಾಲ್ಲೋ ವೀಗಿನ್ನು
ಮಡುವಾಳು ಮಾಚಣ್ಣ ಎಂಬವುನಾ ತಾನ |ತಂದಾನ|
ಮಡುವಾಳು ಮಾಚಣ್ಣ ಎಂಬುವುನು ವೀಗಿನ್ನು
ಅವನಿಗಷ್ಟಾರು ಅದಿಯಾಲಾ ತಾನ |ತಂದಾನ|
ಅವನಿಗಷ್ಟೊಂದೇ ಅದಿಯಾಲಾ ವೀಗಿನ್ನು
ಅವನಿಗಿದ್ದಷ್ಟು ನನಗಿಲ್ಲಾ ತಾನ |ತಂದಾನ|
ಅವನಿಗಿದ್ದಷ್ಟು ನನಗಿಲ್ಲಾ ವೀಗಿನ್ನು
ಅಂದೂ ತಾನೀಗೂ ನುಡಿತನಿಯಾ ತಾನ |ತಂದಾನ|
ಲಂದು ತಾನೀಗೂ ನುಡಿತನಿಯಾನೆ ಈಗಿನ್ನು
ಅಲ್ಲೂ ಸಿಟ್ಟೊಂದೆ ಬಂದದ್ಯಾಲಾ ತಾನ |ತಂದಾನ|
ನಾನೂವೀಗೊಂದೆ ಇರುವವನು ವೀಗಿನ್ನು
ಅಯೋಧ್ಯೆಯೆಂಬ ನಗರದಲ್ಲೋ ತಾನ |ತಂದಾನ|
ಅಯೋಧ್ಯೆಯೆಂಬ ನಗರದಲ್ಲಿ ಈಗಿನ್ನು
ನಾನೂವಿಗೊಂದೆಲಿರುವನಾಲಾ ತಾನ |ತಂದಾನ|
ನಾನೂವಿಗೊಂದೆಲಿರುವನಾಲ್ಲೋ ವೀಗಿನ್ನು
ಊರೂರು ಕಪ್ಪು ಬರುತದೆಯೋ ತಾನ |ತಂದಾನ|
ಊರೂರು ಕಪ್ಪು ಬರುತದೆಯೋ ವೀಗಿನ್ನು
ನಾನೂವಿಗೊಂದೆಲಿರುವನಾಲಾ ತಾನ |ತಂದಾನ|
ನಾನೂವೀಗೊಂದೆಲಿರುವನಾಲ್ಲೋ ವೀಗಿನ್ನು
ರಾಮಸ್ವಾಮಿನೆ ಅಂದುರೇನಾ ತಾನ |ತಂದಾನ|
ನನಕ್ಕಿಂತ ಮೇಲೂ ಅವನೇನವೀಗಿನ್ನು
ಮಡುವಾಳು ಮಾಚಣ್ಣ ಎಂಬುವುನಾ ತಾನ |ತಂದಾನ|