ಮುರುಗನು ಬಣ್ಣಾನೇ ಕಂಡಿದಳು ತಾನ |ತಂದಾನ|
ಮುರುಗನು ಬಣ್ಣಾನೇ ಕಂಡಿದಳು ಈಗಿನ್ನು
ಅದರು ಕುಣುತಾನೇ ನೋಡಿದಳಾ ತಾನ |ತಂದಾನ|
ಅದರು ಕುಣುತಾನೇ ನೋಡಿದಳಾ ಈಗಿನ್ನು
ರಾಮನು ಸೀತೀನೆ ಎಂಬವಳಾ ತಾನ |ತಂದಾನ|
ರಾಮನು ಸೀತಿನೆ ಎಂಬುವಳು ಈಗಿನ್ನು
ಬಾಳ ಮಳ್ಳೊಂದೆ ಆಗಿದುಳಾ ತಾನ |ತಂದಾನ|
ಬಾಳ ಮಳ್ಳೊಂದೆ ಆಗಿದುಳಾ ಈಗಿನ್ನು
ಗಂಡನು ಕೂಡು ಬಂದು ಹೇಳುತಾಳೆಯೋ ತಾನ |ತಂದಾನ|
ಕೇಳಿ ಕೇಳಿ ನನ್ನ ಸ್ವಾಮಿ ಪತಿಯೋವ್ರೆ ವೀಗಿನ್ನು
ರಾಮಾಸ್ವಾಮಿನೆ ನೀವಾಳ ತಾನ |ತಂದಾನ|
ರಾಮಾಸ್ವಾಮಿನೆ ಕೇಳುಬೇಕು ನೀವಿನ್ನು
ಆ ಮುರುಗನೀಗೂ ಹೊಡಿಬೇಕಾ ತಾನ |ತಂದಾನ|
ಆ ಮುರುಗನೀಗೂ ಹೊಡಿಬೇಕಾ ಈಗಿನ್ನು
ಅದರ ಚಮ್ಮ ತೆಗಿಬೇಕಾ ತಾನ |ತಂದಾನ|
ಅದರ ಚಮ್ಮ ತೆಗಿಬೇಕಾ ಈಗಿನ್ನು
ನನಗೊಂದು ಕುಬುಸ ಮಾಡ್ಯಬೇಕೋ ತಾನ |ತಂದಾನ|
ನನಗೊಂದು ಕುಬುಸ ಮಾಡ್ಯಬೇಕು ಈಗಿನ್ನು
ಆ ಕುಬುಸ ನಾನೆ ಹಾಕುಬೇಕೂ ತಾನ |ತಂದಾನ|
ಕೇಳು ಕೇಳು ನನ್ನ ಸೀತೆ ನೀ ಕೇಳು ಈಗಿನ್ನು
ಅದು ಮುರುಗನೇ ಅಲ್ವಾಲಾ ತಾನ |ತಂದಾನ|
ಅದು ಮುರುಗನೇ ಅಲ್ವಲಾ ವೀಗಿನ್ನು
ಮಾಯವಾಗದೇ ಹೋಗುತದೆಯೋ ತಾನ |ತಂದಾನ|
ಮಾಯವಾಗದೇ ಹೋಗುತದೆಯೋ ಈಗಿನ್ನು
ಯಾರ ಕೈಗದು ಸಿಗದಿಲ್ಲಾ ತಾನ |ತಂದಾನ|
ಯಾರ ಕೈಗದು ಸಿಕ್ಕದಿಲ್ಲಾ ವೀಗಿನ್ನು
ಯಾರಕೂಡಂದು ಬರವದಿಲ್ಲಾ ತಾನ |ತಂದಾನ|
ಯಾರು ಅದರಂದು ಹೊಡೆವುದಿಲ್ಲವೀಗಿನ್ನು
ಮಾಯಾದಿಂದು ಹೋಗುತದೆಯೋ ತಾನ |ತಂದಾನ|
ಕೇಳಿ ಕೇಳಿ ನನ್ನ ಸ್ವಾಮಿ ಪತಿಯೋವ್ರೆ ಈಗಿನ್ನು
ರಾಮಸ್ವಾಮಿನೇ ಕೇಳಬೇಕಾ ತಾನ |ತಂದಾನ|
ರಾಮಸ್ವಾಮಿನೇ ಕೇಳುಬೇಕು ನೀವೀಗ
ಆ ಮುರುಗನೀಗೆ ಹೊಡೆದಿದುರಾ ತಾನ |ತಂದಾನ|
ಆ ಮುರುಗನ ನೀನೆ ಹೊಡೆದಿದುರೆ ಈಗಿನ್ನು
ಆದುರ ಚಮ್ಮಾನೇ ತೆಗೆದಿದುರಾ ತಾನ |ತಂದಾನ|
ಅದುರ ಚಮ್ಮಾನೇ ತೆಗೆದಿದುರಾ ಈಗಿನ್ನು
ನನಗೊಂದು ಕುಬುಸ ಮಾಡದಿದುರಾ ತಾನ |ತಂದಾನ|
ನನಗೊಂದು ಕುಬುಸ ಮಾಡದಿರಾ ಈಗಿನ್ನು
ರಾಮಸ್ವಾಮಿಯೇ ಪತಿಯಲ್ಲಾ ತಾನ |ತಂದಾನ|
ರಾಮಸ್ವಾಮಿಯೇ ಪತಿಯಲ್ಲಾ ಈಗಿನ್ನು
ನನ್ನ ಪತಿಯೊಂದೆ ನೀವಲ್ಲಾ ತಾನ |ತಂದಾನ|
ನನ್ನ ಸ್ವಾಮಿನೇ ಪತಿಯಲ್ಲಾ ಈಗಿನ್ನು
ನಿಮ್ಮ ಮಾತೊಂದೆ ಕೇಳುವುದಿಲ್ಲಾ ತಾನ |ತಂದಾನ|
ನಿಮ್ಮ ಮಾತೊಂದೆ ಕೇಳುವುದಿಲ್ಲಾ ವೀಗಿನ್ನು
ರಾಮಗು ಸಿಟ್ಟು ಮಾಡಿದಳಾ ತಾನ |ತಂದಾನ|
ರಾಮಗು ಸಿಟ್ಟು ಮಾಡಿದಳಾ ಈಗಿನ್ನು
ಕೇಳು ಕೇಳು ಸೀತೀ ನೀ ಕೇಳಾ ತಾನ |ತಂದಾನ|
ಕೇಳು ಕೇಳು ಸೀತೀ ನೀ ಕೇಳಾ ಈಗಿನ್ನು
ಕಾಡಿನ ಮುರುಗ ಅದಾಲಾ ತಾನ |ತಂದಾನ|
ಕಾಡಿನ ಮುರುಗು ಅದು ಹಾಗೋ ಈಗಿನ್ನು
ಅದರಲು ನಿನ್ನ ಕೇಡು ಅದಿಯಾಲಾ ತಾನ |ತಂದಾನ|
ಅದರಲು ನಿನ್ನ ಕೇಡು ಅದಿಯಾಲೇ ಈಗಿನ್ನು
ನನ್ನ ಮಾತೊಂದೆ ಕೇಳುವಾಲಾ ತಾನ |ತಂದಾನ|
ಲದರಲು ನಿನೆ ಕೇಡು ಅದಿಯಲ್ಲ ವೀಗಿನ್ನು
ನನ್ನ ಮಾತೊಂದೆ ಕೇಳುವುದಿಲ್ಲಾ ತಾನ |ತಂದಾನ|
ಅಂದರೊಂದು ಕೇಡು ಬಂದಿದುರು ಈಗಿನ್ನು
ಆ ಕೇಡು ನಾನೆ ನೋಡುತಿದಾ ತಾನ |ತಂದಾನ|
ಆ ಕೇಡು ನೋಡುತಿದೇ ಈಗಿನ್ನು
ಅದರಾಯಿಗೊಂದೇ ಹೊಡಿಬೇಕಾ ತಾನ |ತಂದಾನ|
ಅದರಾಯಿಗೊಂದೇ ಹೊಡಿಬೇಕಾ ಈಗಿನ್ನು
ಲದರು ಚಮ್ಮಾನೆ ತೆಗಿಬೇಕಾ ತಾನ |ತಂದಾನ|
ಲದರು ಚಮ್ಮಾನೇ ತೆಗಿಬೇಕಾ ಈಗಿನ್ನು
ನನಗೊಂದು ಕುಬುಸ ಲಾಗುಬೇಕು ತಾನ |ತಂದಾನ|
ಎಷ್ಟು ಹೇಳಿದರೂ ಕೇಳುವುದಿಲ್ಲಯೋ ಈಗಿನ್ನು
ಹೇಳಿದಂಗೊಂದೆ ಕೇಳುವುದಿಲ್ಲಯೋ ತಾನ |ತಂದಾನ|
ಹೇಳಿದಂಗೊಂದೆ ಹೇಳುತಾಳಿಯೋ ಈಗಿನ್ನು
ರಾಮಗೂ ಸಿಟ್ಟೊಂದೆ ಬಂದುದಾಲಾ ತಾನ |ತಂದಾನ|
ರಾಮಗೂ ಸಿಟ್ಟೊಂದೆ ಬಂದುದಯೋ ಈಗಿನ್ನು
ಲಚ್ಚುಮಣ್ಣ ಸ್ವಾಮಿ ಹೋಗಿದನಯೋ ತಾನ |ತಂದಾನ|
ಲಚ್ಚುಮಣ್ಣ ಸ್ವಾಮಿ ಹೋಗಿದನಯೋ ಈಗಿನ್ನು
ತಮ್ಮ ಲಚ್ಚುಮಣ್ಣನ ಕರೆದಿದನೋ ತಾನ |ತಂದಾನ|
ತಮ್ಮ ಲಚ್ಚುಮಣ್ಣನ ಕರೆದಿದನೋ ಈಗಿನ್ನು
ಕೇಳು ಕೇಳು ನನ್ನ ತಮ್ಮ ನೀ ಕೇಳಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನೀ ಕೇಳೋ ಈಗಿನ್ನು
ನಾನೂವಿಗೊಂದೆ ಹೋಗುತಿದಾ ತಾನ |ತಂದಾನ|
ನಾನೂವಿಗೊಂದೆ ಹೋಗುತಿದಾ ಈಗಿನ್ನು
ಮಾಯುದ ಮುರುಗಾನಾ ಬೆನ್ನಾತ್ಯಾ ತಾನ |ತಂದಾನ|
ನಾನೂ ಹೋಗೊಂದೆ ಬರುವವರೆಗೆ ಈಗಿನ್ನು
ನೀನು ಎಲ್ಲಿಗೂ ಹೋಗಬ್ಯಾಡಾ ತಾನ |ತಂದಾನ|
ನೀನು ಎಲ್ಲಿಗೂ ಹೋಗಬ್ಯಾಡಾ ಈಗಿನ್ನು
ಸೀತಿ ಬುಡದಾಗೆ ಇರಬೇಕಾ ತಾನ |ತಂದಾನ|
ಸೀತಿ ಬುಡದಾಗೆ ಇರಬೇಕು ಈಗಿನ್ನು
ತಮ್ಮನ ಕೂಡೊಂದೆ ನುಡಿದನಾಲಾ ತಾನ |ತಂದಾನ|
ರಾಮಾಸ್ವಾಮೀನೆ ಕಂಡಿದುನು ಈಗಿನ್ನು
ಬಾಳ ದೂರೊಂದೆ ಹೊಳಿತದೆಯೋ ತಾನ |ತಂದಾನ|
ಬಾಳ ದೂರೊಂದೆ ಹೊಳಿತದಿಯೋ ವೀಗಿನ್ನು
ರಾಮನ ಕಣ್ಣಿಗೂ ಕಾಣುತದೆಯೋ ತಾನ |ತಂದಾನ|
ಅಲ್ಲೇ ನಿಂತೊಂದು ಹೊಡೆದಿದನು ಈಗಿನ್ನು
ರಾಮನು ಬಾಣ ಬಿಟ್ಟಿನಾಲಾ ತಾನ |ತಂದಾನ|
ರಾಮನು ಬಾಣ ಬಿಟ್ಟಿದನು ವೀಗಿನ್ನು
ಮಾಯುದು ಮುರುಗಾನೆ ತಗಲದಾಲಾ ತಾನ |ತಂದಾನ|
ಮಾಯದು ಮುರುಗಾನೆ ಎಂಬುವುದು ಈಗಿನ್ನು
ಭ್ಯೂಮಿ ಮ್ಯಾಲೀಗೂ ಬಿದ್ದದಾಲಾ ತಾನ |ತಂದಾನ|
ಭ್ಯೂಮಿ ಮ್ಯಾಲಿಗೂ ಬಿದ್ದದಯೋ ಈಗಿನ್ನು
ಆದರು ಪ್ರಾಣನೇ ಬಿಡುವಂಗಾ ತಾನ |ತಂದಾನ|
ಆದರು ಪ್ರಾಣನೇ ಬಿಡುವಾಗ ಈಗಿನ್ನು
ಲಚ್ಚಮಣ್ಣ ಲಚ್ಚುಮಣ್ಣ ಅಂದದಾಲಾ ತಾನ |ತಂದಾನ|
ಲಚ್ಚುಮಣ್ಣ ಲಚ್ಚಮಣ್ಣ ಅಂದಮ್ಯಾಲೂ ಈಗಿನ್ನು
ಮೂರು ಸ್ವರನೇನೆ ನುಡಿತದೆಯೋ ತಾನ |ತಂದಾನ|
ಮೂರು ಸ್ವರುನೇನೆ ನುಡಿತದೆಯೋ ಈಗಿನ್ನು
ಲಚ್ಚಮಣ್ಣಗೂ ಕೇಳದ್ಯಾಲಾ ತಾನ |ತಂದಾನ|
ಲಚ್ಚಮಣ್ಣ ಕೇಳಿದನು ಈಗಿನ್ನು
ಲಚ್ಚಮಣ್ಣನೇ ಹೇಳೂತಾನೆಯೋ ತಾನ |ತಂದಾನ|
ಲಚಮಣ್ಣಾ ಸ್ವಾಮಿ ಹೇಳುತಾನೆಯೋ ಈಗಿನ್ನು
ಕೇಳು ಕೇಳು ನನ್ನತ್ತಿಗಿ ನಿ ಕೇಳಾ ತಾನ |ತಂದಾನ|
ಕೇಳು ಕೇಳು ನನ್ನಿತ್ತಿಗಿ ನೀ ಕೇಳು ಈಗಿನ್ನು
ನನ್ನಣ್ಣ ರಾಮಾಸ್ವಾಮಿ ಎಂಬವನಾಲಾ ತಾನ |ತಂದಾನ|
ನನ್ನಣ್ಣ ರಾಮಸ್ವಾಮಿ ಎಂಬವನು ಈಗಿನ್ನು
ನನ್ನಾವಿಗೊಂದೆ ಕರೆದವನಾ ತಾನ |ತಂದಾನ|
ನನ್ನಾವಿಗೊಂದೆ ಕರೆದವನೆ ಈಗಿನ್ನು
ಲಚ್ಚಮಣ್ಣ ಲಚ್ಚುಮಣ್ಣ ಅಂದನಾಲಾ ತಾನ |ತಂದಾನ|
ಸೀತಿ ಕಿಮಿಗೊಂದೆ ಕೇಳದಾಲಾ ಈಗಿನ್ನು
ಸೀತುವಿಗೊಂದೆ ಹೇಳುತಾನಾ ತಾನ |ತಂದಾನ|
ಬಾಗಿಲು ಬುಟ್ಟಾಚೆ ನಿತ್ತುಕೊಂಡು ಈಗಿನ್ನು
ಯಾರಿಗೂ ಬಿಗುಸ ನೀಡಬ್ಯಾಡ ತಾನ |ತಂದಾನ|
ಕೇಳು ಕೇಳು ಹೆಣ್ಣೆ ನೀ ಕೇಳು ಈಗಿನ್ನು
ದಾಟಿ ಇಟೊಂದೆ ಬರಬೇಡಾ ತಾನ |ತಂದಾನ|
ಅಂದು ತಾನಲ್ಲೆ ನುಡಿತಾನಿಯೋ ಈಗಿನ್ನು
ತಾನೂ ತಾವೀಗು ಹೋಗುತಾನೆ ತಾನ |ತಂದಾನ|
ತಾನೂ ರಾಮುಸ್ವಾಮಿಗೂ ಹೋಗುತಾನೆ ಈಗಿನ್ನು
ಹತ್ತು ತೆಲಿಯ ರವಣಾನಾ ತಾನ |ತಂದಾನ|
ಹತ್ತು ತೆಲಿಯ ರವಣಾನು ಈಗಿನ್ನು
ಇಪ್ಪತ್ತು ತೋಳಿನ ರವಣಾನಾ ತಾನ |ತಂದಾನ|
ಮಾಯಾ ರೂಪಾನೇ ತಾಳಿದನು ಈಗಿನ್ನು
ಬೇಡುವ ಸನ್ಯೇಸಿ ಆಗಿದುನಾ ತಾನ |ತಂದಾನ|
ಸನ್ನೇಸಿ ರೂಪ ತಾಳಿಕೊಂಡು ಈಗಿನ್ನು
ಎಲ್ಲಿಗೂವಿಗೂ ಬಂದನೇನಾ ತಾನ |ತಂದಾನ|
ಎಲ್ಲಿಗೂವಿಗೂ ಬಂದನೇನಾ ಈಗಿನ್ನು
ಸೀತಿ ಬುಡುಕೊಂದೇ ಬಂದನಲ್ಲಾ ತಾನ |ತಂದಾನ|
ಸೀತಿ ಬುಡುಕೊಂದೇ ಬಂದಾನು ಈಗಿನ್ನು
ಯಾರಪ್ಪ ಇಲ್ಲೇ ಮನೆಯಲ್ಲಿ ತಾನ |ತಂದಾನ|
ಯಾರಪ್ಪ ಇಲ್ಲೇ ಮನೆಯಲ್ಲಿ ಈಗಿನ್ನು
ನನಗಿಷ್ಟು ಬಿಗುಸಾ ನೀಡಿಯೆಂಬಾ ತಾನ |ತಂದಾನ|
ನನಗಿಷ್ಟು ಬಿಗುಸಾ ನೀಡಿಯೆಂಬಾ ಈಗಿನ್ನು
ನಾನು ಊಟಾನೇ ಇಲ್ವವಾಗಿ ತಾನ |ತಂದಾನ|
ನನಗೆ ಊಟಾನೇ ಇಲ್ವಾಗಿ ಈಗಿನ್ನು
ಇಂದಿಗೂ ಮೂರು ದಿನವೆಂಬಾ ತಾನ |ತಂದಾನ|
ಇಂದಿಗೂ ಮೂರು ದಿನವಾದವು ಈಗಿನ್ನು
ನನಗಿಟ್ಟು ಬಿಗುಸಾ ನೀಡಿ ಎಂಬಾ ತಾನ |ತಂದಾನ|
ರಾಮನು ಸೀತಿಗೆ ಇರುವವಳು ಈಗಿನ್ನು
ಒಳಗೂ ನಿತ್ತೊಂದೆ ಹೇಳುತಾಳಾ ತಾನ |ತಂದಾನ|
ನಿನಗೂ ನಿತ್ತೊಂದೆ ಹಾಕುವುದಕೂ ಈಗಿನ್ನು
ಇಲ್ಲಾದುರೇನೂ ಇಲ್ಲವಾಲಾ ತಾನ |ತಂದಾನ|
ಇಲ್ಲಾದುರೇನೂ ಇಲ್ಲವಾಲಾ ಈಗಿನ್ನು
ಅನ್ನಿಲ್ಲಾ ಇಲ್ಲೂ ನೀರಿಲ್ಲಾ ತಾನ |ತಂದಾನ|
ಅನ್ನಿಲ್ಲಾ ಇಲ್ಲೂ ನೀರಿಲ್ಲಾ ಈಗಿನ್ನು
ಹಣ್ಣಿಲ್ಲಾ ಇಲ್ಲೂ ಹಾಲಿಲ್ಲಾ ತಾನ |ತಂದಾನ|
ಕೇಳಿ ಕೇಳಿಯಮ್ಮಾ ತಾನಿಯೋ ಈಗಿನ್ನು
ಇದ್ದುದ್ದೆ ತನಗೆ ಕೊಡಿರೆಂಬಾ ತಾನ |ತಂದಾನ|
ಏನೂ ಹೇಳಿದರೂ ಕೇಳುವುದಿಲ್ಲೊ ಈಗಿನ್ನು
ಅಲ್ಲಿಂದ ಈಗೂ ಹೋಗುವುದಿಲ್ಲಾ ತಾನ |ತಂದಾನ|
ನನಗೆ ಬಿಗುಸಾನೇ ಹಾಕಿಯಾ ತಾನ |ತಂದಾನ|
ನನಗೆ ಬಿಗುಸಾನೇ ಹಾಕೀಯಾ ವೀಗಿನ್ನು
ನಾನು ಊಟಾನೇ ಮಾಡಲಿಲ್ಲಾ ತಾನ |ತಂದಾನ|
ಇಂದಿಗೂ ಮೂರು ದಿನವೆಂಬ ಈಗಿನ್ನು
ಏನಾರೂ ನನಗೂ ಹಾಕಿಯೆಂಬಾ ತಾನ |ತಂದಾನ|
ರಾಮನೂ ಸೀತಿನೇ ಎಂಬುವುಳು ವೀಗಿನ್ನು
ಅಲ್ಲೂವಿಗೊಂದೆ ಇರುವುದಾಳ ತಾನ |ತಂದಾನ|
ಒಂದು ಬಾಗಣ್ಣೆ ಆದಿಯಾಲ ವೀಗಿನ್ನು
ದೇವರಿಗಬಿಷೇಕ ಮಾಡುವುದಲಾ ತಾನ |ತಂದಾನ|
ಅದರುವಿಗಾರೂ ತಂದಿದಳು ವೀಗಿನ್ನು
ಆಗುತಾನೆಯಾ ನುಡಿತಾಳಿಯೋ ತಾನ |ತಂದಾನ|
ಇದುನಾದರು ನಾನೇ ಕೊಡುವುನಂದೂ ಈಗಿನ್ನು
ಬಾಗಲು ಮೆಟ್ಟಿನಾನು ದಾಟುವುದಿಲ್ಲಾ ತಾನ |ತಂದಾನ|
ಅಲ್ಲೇ ನಿತ್ತವಳು ಕೊಡುತಾಳಿಯೇ ಈಗಿನ್ನು
ಸನ್ನೇಸಿವಿಗೂ ಹೇಳುತಾಳಿಯೋ ತಾನ |ತಂದಾನ|
ರಾಮನ ಆಜ್ಞೆ ತಪ್ಪಿದಳು ವೀಗಿನ್ನು
ರಾಮನ ಗೆರೆಯೊಂದ ದಾಟಿದಳು ತಾನ |ತಂದಾನ|
ಮೂರು ಗೆರೆಯೊಂದೆ ದಾಟಿದುಳು ವೀಗಿನ್ನು
ಲಂಕಾ ಪಟ್ನಾದ ರವಣಾನೆ ತಾನ |ತಂದಾನ|
ಲಂಕಾ ಪಟ್ನಾದ ರವಣಾನು ಈಗಿನ್ನು
ಸೀತಿ ಹೊತ್ತಕೊಂಡು ಹೋದನಾಲ ತಾನ |ತಂದಾನ|
ಕಳ್ಳಾ ರವಣಾ ಅವನಾಲು ಈಗಿನ್ನು
ರಾಮುನ ಸೀತೀನೇ ಕದ್ದಕೊಂಡ ತಾನ |ತಂದಾನ|
ರಾಮುನ ಸೀತೀನೇ ಕದ್ದುಕೊಂಡು ಈಗಿನ್ನು
ದಾರಿ ಮೇಲೊಂದೆ ಹೋಗುವಾಗ ತಾನ |ತಂದಾನ|
ದಾರಿ ಮೇಲೊಂದೆ ಹೋಗುವಂಗ ಈಗಿನ್ನು
ಅಲ್ಲೊಂದುವೀಗೂ ಅದಿಯಲ್ಲಾ ತಾನ |ತಂದಾನ|
ಅಲ್ಲೊಂದುವೀಗೂ ಇರುವನಲ್ಲ ಈಗಿನ್ನು
ಜಟಾಯಿ ಪಕ್ಷಿ ಇರುವುದಾಲಾ ತಾನ |ತಂದಾನ|
ಜಟಾಯಿ ಪಕ್ಷಿನೆ ಎಂಬುವುದು ಈಗಿನ್ನು
ಬಂದೂವಿಗೊಂದೆ ತಡೆದದೆಯಾ ತಾನ |ತಂದಾನ|
ಕಳ್ಳ ರವಣಾ ನೀ ಕೇಳು ಈಗಿನ್ನು
ಸೀತೆ ಕದ್ದುಕೊಂಡು ಹೋಗುತ್ಯೇನಾ ತಾನ |ತಂದಾನ|
ಕಳ್ಳ ಕದ್ದುಕೊಂಡು ಹೋಗುವಂಗೆ ಈಗಿನ್ನು
ಹೇಳುವವ ನೀನ್ಯಾವ ಕಳ್ಳನೇನಾ ತಾನ |ತಂದಾನ|
ಕೇಳುವಾವ ನೀನಾವ ಕಳ್ಳನೇನ ಈಗಿನ್ನು
ಅಂದು ರವಣಾನು ಕೇಳುತಾನಾ ತಾನ |ತಂದಾನ|
ಜಟಾಯಿ ಪಕ್ಷಿ ನುಡಿತಾದೆಯೋ ಈಗಿನ್ನು
ಕೇಳು ಕೇಳು ಕಳ್ಳಾನೆ ನೀ ಕೇಳಾ ತಾನ |ತಂದಾನ|
ನಿನ್ನ ನಾನೀಗೂ ಬಿಡುವುದಿಲ್ಲಾ ವೀಗಿನ್ನು
ಎಲ್ಲಿಗೂ ಕದ್ದುಕೊಂಡು ಹೋಗುತೇನಾ ತಾನ |ತಂದಾನ|
ಇಲ್ಲಿಂದ ಮುಂದೆ ಹೋಗುವಾಕೇ ಈಗಿನ್ನು
ನಿನಗೂ ನಾನೊಂದೆ ಬಿಡುವುದಿಲ್ಲಾ ತಾನ |ತಂದಾನ|
ಅಲ್ಲೂವಿಗೊಂದೆ ಇರುವನಾಲಾ ವೀಗಿನ್ನು
ಜಟಾಯಿ ಪಗುಸೊಂದೆ ಎಂಬುವುದಾ ತಾನ |ತಂದಾನ|
ಎಲ್ಲೂ ಯುದ್ದಾನೆ ನೆಡತಿದಯೋ ಈಗಿನ್ನು
ಇಬ್ಬುರು ಸೋಲೊಂದೆ ಬರುದಿಲ್ಲಾ ತಾನ |ತಂದಾನ|
ಇಬ್ಬರು ಸೋಲಿಗೂ ಇಲ್ಯಾಲಾ ವೀಗಿನ್ನು
ಸೋಲು ಗೆಲುವೊಂದೆ ಇಲ್ಯಾಲ ತಾನ |ತಂದಾನ|
ಸೋಲು ಗೆಲುವೊಂದೆ ಬರಲಿಲ್ಲಾ ವೀಗಿನ್ನು
ಕಳ್ಳ ರವಣಾ ಎಂಬುವನಾ ತಾನ |ತಂದಾನ|
ಕಳ್ಳ ರವಣಾ ಎಂಬುವನು ವೀಗಿನ್ನು
ಕಳ್ಳ ಮಾತೊಂದೇ ಲಾಡಿದನಾ ತಾನ |ತಂದಾನ|
ನಾವಿಬ್ಬರುವೀಗೂ ಇರುವವರು ಈಗಿನ್ನು
ಯಾರಿಗೂ ಯುದ್ದಾನೇ ಮಾಡಿದುರಾ ತಾನ |ತಂದಾನ|
ಸೋಲು ಗೆಲುವೊಂದೇ ನಮಗಿಲ್ಲ ವೀಗಿನ್ನು
ಆಯಸಿದ ಕುರುವಾನೆ ಹೇಳಬೇಕೂ ತಾನ |ತಂದಾನ|
ನನ್ನಾಯಸಿಗೂ ಕುರುವಾನೆ ಹೇಳುಬೇಕೂ ವೀಗಿನ್ನು
ಕಳ್ಳ ರವಣಾ ಲವನಾಲಾ ತಾನ |ತಂದಾನ|
ಕಳ್ಳ ರವಣಾ ಲವನಾಲಾ ವೀಗಿನ್ನು
ತನ್ನ ಆಯಸೊಂದೇ ಅದಿಯಾಲಾ ತಾನ |ತಂದಾನ|
ಎಡುಗಾಲೊಂದೆಬ್ಬೆಟ್ಟು ಜರುದಿದುರೆ ವೀಗಿನ್ನು
ಅದುರಲ್ಲಿ ನನ್ನಾಯಸ ಅದಿಯಾಲ್ಲಾ ತಾನ |ತಂದಾನ|
ಜಟಾಯಿ ಪಕುಸಿನೇ ಎಂಬುವುದು ವೀಗಿನ್ನು
ಸತ್ಯವಿಗೊಂದೆ ನುಡಿದಿದಲಾ ತಾನ |ತಂದಾನ|
ಸತ್ಯವಿಗೊಂದೆ ನುಡಿದಿದಲಾ ವೀಗಿನ್ನು
ಹಕ್ಕಿಯೆಂಬಂತೆ ಪ್ರಾಣಾಮೂ ತಾನ |ತಂದಾನ|
ಬಲಕ್ಕನು ರೆಕ್ಕೇನೆ ಕಡಿದಿದರೆ ವೀಗಿನ್ನು
ಲಮ್ಮಲಾಯಸೊಂದೇ ಅದುರಲ್ಲೀ ತಾನ |ತಂದಾನ|
ಲಾಗೂತಾನಿಗೋ ನಿತ್ತಿದರು ವೀಗಿನ್ನು
ಎಲ್ಡು ಜನವೀಗ ನಿತ್ತಿರಾಲಾ ತಾನ |ತಂದಾನ|
ಜಟಾಯಿ ಪಕೂಸಿನೇ ಎಂಬುವುದು ಈಗಿನ್ನು
ಅವನ ಕಾಲಬೆಟ್ಟು ಜರದದಾಲಾ ತಾನ |ತಂದಾನ|
ಅವನ ಕಾಲಬೆಟ್ಟು ಜರದಾಲಾಯೋ ಈಗಿನ್ನು
ರವಣಾನಿಗೊಂದೆ ಸಾಯಲಿಲ್ಲಾ ತಾನ |ತಂದಾನ|
ಜಟಾಯಿ ಪಕುಸಿನೇ ಇರುವುದು ಈಗಿನ್ನು
ಅದರ ರೆಕ್ಕೇನೆ ಕಡಿದರಾಲಾ ತಾನ |ತಂದಾನ|
ರಾಮ ರಾಮಂದೇ ಬಿದ್ದದಲ್ಲೋ ಈಗಿನ್ನು
ಭೂಮಿ ಮೇಲೊಂದೇ ಬಿದ್ದುದಲ್ಲಾ ತಾನ |ತಂದಾನ|
ಲಾಗುತಾನಿಗೂ ಇರುವವನು ಈಗಿನ್ನು
ಕಳ್ಳ ರವಣಾ ಎಂಬುವನಾ ತಾನ |ತಂದಾನ|
ಕಳ್ಳ ರವಣಾ ಎಂಬುವನು ಈಗಿನ್ನು
ಲಾಗುತಾನೀಗೂ ಹೋಗುತಾನಿಯೋ ತಾನ |ತಂದಾನ|
ಸೀತಾದೇವೀನೇ ಎಂಬುವಳು ಈಗಿನ್ನು
ಅಲ್ಲೊಂದು ನುಡಿಯ ನುಡಿದಿದುಳಾ ತಾನ |ತಂದಾನ|
ಅಲ್ಲೊಂದು ನುಡಿಯ ನುಡಿದಿದುಳಾ ಏನೆಂದು
ಜಟಾಯಿ ಪಗುಸಿಗೆ ಕೊಟ್ಟರಾಲಾ ತಾನ |ತಂದಾನ|
ಜಟಾಯಿ ಪಗುಸಿಗೆ ಇಟ್ಟಿದುಳು ಈಗಿನ್ನು
ಒಂದು ವರವೊಂದೆ ಕೊಟ್ಟಳಾಲಾ ತಾನ |ತಂದಾನ|
ನನ್ನ ಗಂಡ ರಾಮಸ್ವಾಮಿ ಬರಬೇಕು ವೀಗಿನ್ನು
ಇಲ್ಲು ನಡುದಂತ ಸಂಗ್ತೀಯಾಲಾ ತಾನ |ತಂದಾನ|
ಇಲ್ಲು ನಡುದಂತ ಸಂಗ್ತೀಯಾಲಾ ವೀಗಿನ್ನು
ರಾಮಸ್ವಾಮಿಗೂ ಹೇಳಬೇಕೋ ತಾನ |ತಂದಾನ|
ರಾಮಸ್ವಾಮಿಗೆ ಹೇಳಬೇಕು ವೀಗಿನ್ನು
ಅಲ್ಲರೆ ನಿನ್ನ ಪ್ರಾಣ ಹೋಗುಬಾರ್ದು ತಾನ |ತಂದಾನ|
ಅಲ್ಲರೆ ನಿನ್ನ ಪ್ರಾಣ ಹೋಗಬಾರ್ದು ವೀಗಿನ್ನು
ರಾಮ ರಾಮೆಂದೆ ಉಳಿಬೇಕಾ ತಾನ |ತಂದಾನ|
ರಾಮ ರಾಮೆಂದೆ ಉಳಿಬೇಕಾ ವೀಗಿನ್ನು
ಅದೊಂದು ವರನೆ ಕೊಟ್ಟಿದಳಲಾ ತಾನ |ತಂದಾನ|
ಸೀತಿ ಹೊತ್ತಕೊಂಡು ಹೋದನಲ್ಲ ಈಗಿನ್ನು
ಲಂಕಾಪಟ್ನಾದ ರವಣಾನಾ ತಾನ |ತಂದಾನ|
ಲಂಕಾಪಟ್ನಾದ ರವಣಾನು ಈಗಿನ್ನು
ಎಲ್ಲಿಗೋವಿಗೋ ಹೋದನಲ್ಲಾ ತಾನ |ತಂದಾನ|
ಎಲ್ಲಿಗೋವೀಗೋ ಹೋದನಲಾ ಈಗಿನ್ನು
ಏಳು ಸಮುದ್ರ ಆಚೇಗೂ ತಾನ |ತಂದಾನ|
ಏಳು ಸಮುದ್ರ ಆಚೇಗೂ ಈಗಿನ್ನು
ಲಂಕಾ ಪಟ್ನಾನೇ ಇರುವುದಲ್ಲಾ ತಾನ |ತಂದಾನ|
ಲಂಕಾಪಟ್ನಾನೇ ಇರುವುದಲ್ಲಾ ಈಗಿನ್ನು
ಅಲ್ಲಿಗೂವೀಗು ಹೋದನಲ್ಲಾ ತಾನ |ತಂದಾನ|
ರಾಮನ ಸೀತೀನೆ ನುಡಿತವಳೆ ಏನೆಂದು
ನಾನುವೀಗೊಂದೆ ಇರುವಳಲಾ ತಾನ |ತಂದಾನ|
ಯಾವಾಗೂ ಲಗ್ಗೇನೂ ಆಗುವುದರೂ ಈಗಿನ್ನು
ಯಾರು ಮಾರೀನೂ ನೋಡುವುದಿಲ್ಲಾ ತಾನ |ತಂದಾನ|
ನಾನೂವಿಗೊಂದೆ ಉಳಿಬೇಕಾ ಈಗಿನ್ನು
ಐದೊರುಷ ಅಜ್ಞಾಸ ಮಾಡಬೇಕಾ ತಾನ |ತಂದಾನ|
ಐದೊರುಷ ಅಜ್ಞಾಸ ಅದಿಯಲ್ಲೋ ಈಗಿನ್ನು
ಅದರು ನಾನೊಂದೆ ಕಳಿವರಿಗಾ ತಾನ |ತಂದಾನ|
ನನ್ನ ಮೈಯಾರು ಮುಟ್ಟಬಾರ್ದು ವೀಗಿನ್ನು
ಅಂದು ತಾನೀಗೂ ನುಡಿದಳಾಲಾ ತಾನ |ತಂದಾನ|
ಲಾಗೂ ರವಣಾನೇ ಇರುವವನು ಈಗಿನ್ನು
ಅವನಾವಿಗೊಂದೆ ಲಿರುವವನಾ ತಾನ |ತಂದಾನ|
ಮಟ್ಟ ಮಾವೀನ ತಪ್ಲದಲ್ಲೂ ವೀಗಿನ್ನು
ಅಲ್ಲೊಂದು ಕ್ಷೇತ್ರ ಕಟ್ಟಿಸಿದುನಾ ತಾನ |ತಂದಾನ|
ಸೀತೀ ಅಲ್ಲೊಂದು ಇಟ್ಟನಲ್ಲೋ ವೀಗಿನ್ನು
ದುರುಮೂತಿ ತುರುದು ಅಲ್ಲಾಲಾ ತಾನ |ತಂದಾನ|
ದುರುಮೂತಿ ತುರುದು ಅಲ್ಲಾಲ ವೀಗಿನ್ನು
ಘಿಂಬಟ್ಟು ಆಹಾರ ತುಂಬಿದನೂ ತಾನ |ತಂದಾನ|
ಅಲ್ಲೂವಿಗೊಂದೆ ಇರುವುನಲ್ಲ ವೀಗಿನ್ನು
ರಾಮುನು ಸೀತೀನ ಇಡುವಲ್ಲಾ ತಾನ |ತಂದಾನ|
ರಾಮುನು ಸೀತೀನೇ ಉಳುವಳು ವೀಗಿನ್ನು
ರಾಮ ಲಕ್ಷುಮಣ ಇಲ್ಲಾಲಾ ತಾನ |ತಂದಾನ|
ರಾಮಲಕ್ಷುಮಣ ಇರುವವರು ಈಗಿನ್ನು
ಕಾಡಿನಲ್ಲಿಗೂ ಇರುವವರಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನಿಕೇಳೋ ಈಗಿನ್ನು
ಇಲ್ಲಿಗೂ ನಿನ್ಯಾಕೋ ಬಂದಿಯೇನೋ ತಾನ |ತಂದಾನ|
ಇಲ್ಲಿಗೂ ನಿನ್ಯಾಕೋ ಬಂದಿಯೇನಾ ಈಗಿನ್ನು
ಸೀತಿಗೂ ಬಿಟ್ಟೀಗ ಬಂದಿಯೇನಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ನಿಕೇಳೊ ಈಗಿನ್ನು
ನಿನ್ನ ಸೀತೀನೆ ಎಂಬುವಳ ತಾನ |ತಂದಾನ|
ನಿನ್ನ ಸೀತೀನೆ ಎಂಬುವಳು ಈಗಿನ್ನು
ನನ್ನಾ ನೀನೊಂದೆ ಕರದಿಯೇನೂ ತಾನ |ತಂದಾನ|
ನನ್ನಾ ನೀನೀಗ ಕರ್ದಿಯೆಂದು ವೀಗಿನ್ನು
ನನ್ನ ಕೂಡುವೀಗೂ ಹೋಗಬೇಕಾ ತಾನ |ತಂದಾನ|
ನನ್ನಾ ಕೂಡುವೀಗೂ ಹೋಗಬೇಕಾವೆಂದಿದಳು
ರಾಮಗೂ ಕಷ್ಟೊಂದೆ ಬಂದದಾಲ ತಾನ |ತಂದಾನ|
ರಾಮಗೂ ಕಷ್ಟೊಂದೆ ಬಂದದಾಲ ವೀಗಿನ್ನು
ಲಚಮಣ್ಣ ಲಚಮಣ್ಣ ಅಂದರಾಲಾ ತಾನ |ತಂದಾನ|
ಅಂದ್ಹೇಳು ಅವಳೀಗ ಹೇಳಿದಳು ವೀಗಿನ್ನು
ನಾನು ಉತ್ತರನೇ ಕೊಟ್ಟಿದನೋ ತಾನ |ತಂದಾನ|
ನನ್ನಣ್ಣ ರಾಮಸ್ವಾಮಿ ಎಂಬುವನು ವೀಗಿನ್ನು
ಯಾರಿಂದು ಕಷ್ಟಬರುವುದಿಲ್ಲಾ ತಾನ |ತಂದಾನ|
ಯಾರಿಂದು ಕಷ್ಟಬರುವುದಿಲ್ಲಾ ಎಂದಿದೆ
ನಾನು ಈಗೊಂದೆ ಹೋಗುದಿಲ್ಲಾ ತಾನ |ತಂದಾನ|