ರಾಮುಗೂ ಸಿಟ್ಟೊಂದೆ ಬಂದದ್ಯಾಲೇ ವೀಗಿನ್ನು
ತನ್ನ ಕಿರಾತುವೋರಾ ಕರೆದಿದುನಾ ತಾನ |ತಂದಾನ|
ತನ್ನ ಕೀರಾತುರಿಗೂ ಕರೆದಿದನು ವೀಗಿನ್ನು
ನನ್ನಾ ಸೀತೀ ಎಂಬುವಳಾ ತಾನ |ತಂದಾನ|
ನನ್ನಾ ಸೀತೀ ಎಂಬುವುಳಾ ಈಗಿನ್ನು
ಕರಕೊಂಡುವೀಗೋ ಹೋಗುಬೇಕಾ ತಾನ |ತಂದಾನ|
ಕರಕೊಂಡುವೀಗೋ ಹೋಗುಬೇಕು ಈಗಿನ್ನು
ಗೋರು ಅರಣ್ಣಿಕೂ ಹೋಗಬೇಕಾ ತಾನ |ತಂದಾನ|
ಗೋರು ಅರಣ್ಣಿಕೂ ಹೋಗಬೇಕು ಈಗಿನ್ನು
ಅವಳೂ ರುಂಡಾನೇ ಹೊಡಿಬೇಕಾ ತಾನ |ತಂದಾನ|
ಅವಳೂ ರುಂಡಾನೇ ಹೊಡಿಬೇಕಾ ಈಗಿನ್ನು
ನಮಗೂ ಗುರುತಾನೇ ತರುಬೇಕಾ ತಾನ |ತಂದಾನ|
ರಾಮಸ್ವಾಮೀನೇ ಎಂಬುವನು ಈಗಿನ್ನು
ಕೀರಾತರಿಗೂ ಹೇಳಿದುನಾ ತಾನ |ತಂದಾನ|
ಅವರು ಎಲ್ಡು ಜನರು ಇರುವವರು ಈಗಿನ್ನು
ಕೊಲೆಗಡುಕಾರು ಅವರಾಲಾ ತಾನ |ತಂದಾನ|
ರಾಮುನು ಅಪ್ಪುಣೇನೆ ಆದಮ್ಯಾಲೆ ವೀಗಿನ್ನು
ರಾಮುನು ಸೀತೀನ ಕರಕೊಂಡು ತಾನ |ತಂದಾನ|
ರಾಮುನು ಸೀತೀನ ಕರಕೊಂಡು ವೀಗಿನ್ನು
ಗೋರು ಅರಣ್ಣೀಯ ಒಳಗಾಲಾ ತಾನ |ತಂದಾನ|
ಗೋರು ಅರಣ್ಣೀಯ ಒಳಗಾಲಾ ಈಗಿನ್ನು
ಅವರುವೀಗೊಂದೆ ಹೋಗುತಾರಿಯಾ ತಾನ |ತಂದಾನ|
ಅವರುವಿಗೊಂದೆ ಹೋಗುತಾರೆ ಈಗಿನ್ನು
ಹೋಗೂ ಹೋಗೀಗೂ ಹ್ವಾದಾರಾಲಾ ತಾನ |ತಂದಾನ|
ನಾಡು ದೇಶಾನೆ ಸೇರಿದುರಾ ಈಗಿನ್ನು
ಕಾಡು ದೇಶಾನೇ ಹೋಗಿದುರು ತಾನ |ತಂದಾನ|
ಕಾಡು ದೇಶಾನೇ ಹೋಗಿದುರು ಈಗಿನ್ನು
ಹೋಗೂ ಹೋಗೊಂದೇ ಹ್ವಾದಾರಾಲಾ ತಾನ |ತಂದಾನ|
ಹೋಗೂ ಹೋಗೊಂದೇ ಹೋಗಿದುರು ಈಗಿನ್ನು
ಗೋರು ಅರಣ್ಣೀಯ ಒಳಗಾಲಾ ತಾನ |ತಂದಾನ|
ಗೋರು ಅರಣ್ಣೀಯ ಒಳಗಾಲು ಅಲ್ಲಾಲೋ ವೀಗಿನ್ನು
ರಾಮನು ಸೀತೀನೇ ಎಂಬುವುಳಾ ತಾನ |ತಂದಾನ|
ರಾಮುನು ಸೀತೀನೇ ನುಡಿತಾಳೆ ಈಗಿನ್ನು
ಇಲ್ಲೇ ನನ್ನ ರುಂಡ ಹೊಡಿರೆಂಬಾ ತಾನ |ತಂದಾನ|
ಇಲ್ಲೇ ನನ್ನ ರುಂಡ ಹೊಡಿರೆಂದು ಈಗಿನ್ನು
ನಡಿಲಾರೆ ನಾನು ಬರುಲಾರೇ ತಾನ |ತಂದಾನ|
ನಡಿಲಾರೆ ನಾನು ಬರುಲಾರೇ ಈಗಿನ್ನು
ಕೊಲೇಗಡುಕಾರೇ ಕೇಳಿಯೆಂಬಾ ತಾನ |ತಂದಾನ|
ಮುಂದೂ ಮುಂದೊಂದೇ ಹೋಗಬೇಕೋವೀಗಿನ್ನು
ಅವರೂವಿಗೊಂದೆ ಇರುವವರಾಲಾ ತಾನ |ತಂದಾನ|
ಗೋರು ಅಡವೀಯ ಒಳಗಾಲು ವೀಗಿನ್ನು
ಸೀತಾ ದೇವೀ ಎಂಬುವಳಾ ತಾನ |ತಂದಾನ|
ಸೀತಾದೇವೀ ಎಂಬುವಳು ಈಗಿನ್ನು
ಮರಕುತಾಳೆ ಅವುಳು ತೀಡುತಾಳೆಯಾ ತಾನ |ತಂದಾನ|
ಮರಕುತಾಳೆ ಅವುಳು ತೀಡುತಾಳೆ ವೀಗಿನ್ನು
ಅಲ್ಲೂ ಹೊಡುವವರೇ ನೀವಾಳಾ ತಾನ |ತಂದಾನ|
ಅಲ್ಲೂ ಹೊಡುವವರೇ ನೀವಾಲೋ ವೀಗಿನ್ನು
ಇಲ್ಲೂ ಹೊಡುವವರೇ ನೀವಾಲಾ ತಾನ |ತಂದಾನ|
ಇಲ್ಲೂ ಹೊಡುವವರೇ ನೀವಾಲಾ ವೀಗಿನ್ನು
ಇಲ್ಲೇ ನನ್ನ ರುಂಡ ಹೊಡಿರೆಂಬಾ ತಾನ |ತಂದಾನ|
ಇಲ್ಲೇ ನನ್ನ ರುಂಡ ಹೊಡಿರೆಂಬೋ ವೀಗಿನ್ನು
ಸೀತಾದೇವಿನೇ ಹೇಳುತಾಳೆಯಾ ತಾನ |ತಂದಾನ|
ಹೊಡೆಬೇಕೆಂದ್ಹೇಳು ನೆಗುದಿದುರು ವೀಗಿನ್ನು
ಪಟ್ಟಗದ ಕತ್ತಿ ನೆಗುದಿದುರಾ ತಾನ |ತಂದಾನ|
ಪಟ್ಟಗದ ಕತ್ತಿ ನೆಗುದಿದುರು ವೀಗಿನ್ನು
ಅದರಲ್ಲಿಗೊಂದೆ ಹೊಳಿತದಿಯಾ ತಾನ |ತಂದಾನ|
ಲಾರು ತಿಂಗುಳು ಶಿಶುವಾಲೋ ವೀಗಿನ್ನು
ಪಟದ ಕತ್ತಿ ಒಳಗಾಲಾ ತಾನ |ತಂದಾನ|
ಅವರು ಕಣ್ಣೀಗೂ ಹೊಳದದಿಯೋ ವೀಗಿನ್ನು
ಲಾಗೂ ತಾನೀಗೂ ನುಡಿತಾನಿಯಾ ತಾನ |ತಂದಾನ|
ಲಾಗೂ ತಾನೀಗು ನುಡಿತಾನಿಯಾ ಏನೆಂದು
ಏನೆಂದು ತಾವೇ ಹೇಳುತಾರಿಯಾ ತಾನ |ತಂದಾನ|
ಶಿಶು ಹತ್ಯು ಪಾಪ ಎಂಬುವುದು ವೀಗಿನ್ನು
ಗೋವು ಹತ್ಯು ಪಾಪ ಎಂಬುವುದಾ ತಾನ |ತಂದಾನ|
ಗೋವುಹತ್ಯು ಪಾಪ ಎಂಬುವುದು ವೀಗಿನ್ನು
ಎಲ್ಲೂ ನಮಗೊಂದು ಇಲ್ಯಾಲಾ ತಾನ |ತಂದಾನ|
ನಮಗೂ ಪರಿಯೊಂದೇ ಇಲ್ಯಾಲು ಈಗಿನ್ನು
ಇನ್ನೂ ನಾವು ಒಂದೆ ಹೊಡಿಬಾರ ತಾನ |ತಂದಾನ|
ನಾವೂ ಈಗೊಂದೆ ಹೊಡಿಬಾರಾ ವೀಗಿನ್ನು
ಸೀತಾದೇವಿ ರುಂಡ ಹೊಡಿಬಾರೆಂಬ ತಾನ |ತಂದಾನ|
ಅಲ್ಲೂ ಅವಳೊಂದೆ ಬಿಟ್ಟರ್ಯಾಲೋ ಈಗಿನ್ನು
ಕೊಲೆಗಡುಕಾರು ಇಬ್ಬುರಾಲಾ ತಾನ |ತಂದಾನ|
ಕೊಲೆಗಡುಕಾರು ಇಬ್ಬುರಾಲೋ ವೀಗಿನ್ನು
ಹಿಂದೂ ತಿರುಗೊಂದೆ ಬಂದರಾಲಾ ತಾನ |ತಂದಾನ|
ಹಿಂದೂ ತಿರುಗೊಂದೆ ಬಂದರಾಲಾ ಈಗಿನ್ನು
ನೆತ್ತುರಾಣಿ ಮರುನೇ ಕಡಿದಿದುದುರಾ ತಾನ |ತಂದಾನ|
ಮೂರು ಹುಂಡು ರಗುತ ತರುವವರು ಈಗಿನ್ನು
ಸೀತಾದೇವೀನೆ ಬಿಟ್ಟರ್ಯಾಲಾ ತಾನ |ತಂದಾನ|
ರಾಮಾಸ್ವಾಮೀನೇ ಎಂಬುವವನು ಈಗಿನ್ನು
ಲವನಿಗೂ ರಕುತಾನೆ ಕೊಡುವವುರಾ ತಾನ |ತಂದಾನ|
ಲವನಿಗೂ ರಕುತಾನೆ ತೋರಿಸಿದರು ಈಗಿನ್ನು
ಆಗು ತಾವೊಂದೇಲಿರುವನಾಲಾ ತಾನ |ತಂದಾನ|
ಲಾಗೂ ತಾನೀಗೂಲಿರುವಂಗುವೀಗಿನ್ನು
ಸೀತಾ ದೇವೀಯೇ ಎಂಬುವಳಾ ತಾನ |ತಂದಾನ|
ಸೀತಾದೇವಿಯೇ ಎಂಬುವಳಾ ಈಗಿನ್ನು
ಗೋರು ಅಡವೀಯ ಒಳಗಾಲಾ ತಾನ |ತಂದಾನ|
ಗೋರು ಅಡವೀಯ ಒಳಗಾಲಾ ಈಗಿನ್ನು
ಅನಸು ಕಾಡೀನ ಮದ್ಯದಲ್ಲೋ ತಾನ |ತಂದಾನ|
ಅನಸು ಕಾಡೀನ ಮದ್ಯದಲ್ಲೋ ವೀಗಿನ್ನು
ಅಲ್ಲೂ ತಾನೊಂದೆ ಉಳಿದವಳಾ ತಾನ |ತಂದಾನ|
ಅಲ್ಲೂ ತಾನೀಗು ಉಳಿದವಳು ವೀಗಿನ್ನು
ಹೊತ್ತಿನು ತಿಂಗಳುನೇ ತುಂಬತದೆಯೋ ತಾನ |ತಂದಾನ|
ಹೊತ್ತಿನ ತಿಂಗಳು ತುಂಬದಿಯೋ ಈಗಿನ್ನು
ಎಲ್ಲೂ ಕಂಡಿದುರೂ ಯಾರಿಲ್ಲ ತಾನ |ತಂದಾನ|
ಹಿಂದೂ ಕಂಡಿದುರು ಯಾರಿಲ್ಲ ವೀಗಿನ್ನು
ಮುಂದೂ ಕಂಡಿದುರು ಯಾರಿಲ್ಲ ತಾನ |ತಂದಾನ|
ಮುಂದೂ ಕಂಡಿದುರು ಯಾರಿಲ್ಲ ವೀಗಿನ್ನು
ನರಮನುಷರೊಳುವು ಅಲ್ಲಿಲ್ಲಾ ತಾನ |ತಂದಾನ|
ನರಮನುಷರೊಳುವು ಅಲ್ಲಿಲ್ಲಾ ವೀಗಿನ್ನು
ತಾನೂವಿಗೊಂದೆ ಇರುವಳು ತಾನ |ತಂದಾನ|
ತಾನೂವಿಗೊಂದೆ ಇರುವಳು ವೀಗಿನ್ನು
ಗೋರು ಅಡವೀಯ ಒಳಗಾಲಾ ತಾನ |ತಂದಾನ|
ಗೋರು ಅಡವೀಯ ಒಳಗಾಲು ಈಗಿನ್ನು
ಹರ ಹರ ಭಗವಂತ ಅನುತೆಳೆಯಾ ತಾನ |ತಂದಾನ|
ಹರ ಹರ ಭಗವಂತ ಅನುತಾಳೆ ವೀಗಿನ್ನು
ಪಡುಗಲು ಪಡುದೊಡಿಯ ನೀನಾಳ ತಾನ |ತಂದಾನ|
ಪಡುಗಲು ಪಡುದೊಡಿಯ ಗೋವಿಂದಾ ವೀಗಿನ್ನು
ಏನು ಕಷ್ಟಾನೇ ಕೊಟ್ಟಿಯಾಲಾ ತಾನ |ತಂದಾನ|
ಏನು ಕಷ್ಟನೇ ಕೊಟ್ಟಿಯೇನು ವೀಗಿನ್ನು
ತಡಿಲಾರೆ ನಾನೇ ತಾಳಲಾರೇ ತಾನ |ತಂದಾನ|
ತಡಿಲಾರೆ ನಾನೇ ತಾಳಲಾರೆ ಈಗಿನ್ನು
ಘಿಂಗಳು ತುಂಬೀದ ಗರುಭಿಣಿಯಾ ತಾನ |ತಂದಾನ|
ಘಿಂಗಳು ತುಂಬೀದ ಗರುಭಿಣಿಯು ವೀಗಿನ್ನು
ಹೊತ್ತು ಹೊತ್ತೀಗೂ ಬ್ಯಾನಿಯಾಲಾ ತಾನ |ತಂದಾನ|
ಹೊತ್ತು ಹೊತ್ತೀಗೂ ಬ್ಯಾನಿಯಾಲಾ ವೀಗಿನ್ನು
ಕತ್ತಿಯಲ್ಲೀಗೂ ಕಡಿದಂಗಾ ತಾನ |ತಂದಾನ|
ರ‌್ವಾಮು ರ‌್ವಾಮುಕೋ ಬ್ಯಾನಿಯಲ್ಲೋ ಭಗವಂತ
ಬಾಣ ಬಿಟ್ಟಂಗೆಲಾಗುತದೆಯೋ ತಾನ |ತಂದಾನ|
ಬಾಣ ಬಿಟ್ಟಂಗೆಲಾಗುತದೆಯೋ ವೀಗಿನ್ನು
ಹಿಡಿವೋರಂದಾರೆ ಯಾರಿಲ್ಲಾ ತಾನ |ತಂದಾನ|
ಹಿಡಿವೋರಂದಾರೆ ಯಾರಿಲ್ಲಾ ವೀಗಿನ್ನು
ತಡುವೊ ಎಂಬೋರು ಯಾರಿಲ್ಲಾ ತಾನ |ತಂದಾನ|
ತಾನೂವಿಗೊಂದೆ ತಿನುತಳೆಯೋ ವೀಗಿನ್ನು
ತನ್ನ ಕಷ್ಟನೇ ತಿನುತಳೆಯೋ ತಾನ |ತಂದಾನ|
ಅಲ್ಲೂವೀಗೊಂದೆ ಬಂದನಾಲೋ ವೀಗಿನ್ನು
ವಾಲ್ಮೀಕಿ ಎಂಬ ಋಷಿಯಾಲಾ ತಾನ |ತಂದಾನ|
ಅಷ್ಟೇ ಹೊತ್ತೀಗೂ ಬಂದನಾಲೇ ವೀಗಿನ್ನು
ಮಾಯದಿಂದವನೇ ಒದಗಿದನೋ ತಾನ |ತಂದಾನ|
ತಾನ ದಾರೀಗೂ ಹಡುದಿದಳು ವೀಗಿನ್ನು
ಗಂಡು ಶಿಶುವೊಂದೆ ಹಡದಿದುಳಾ ತಾನ |ತಂದಾನ|
ಗಂಡು ಶಿಶುವೊಂದೆ ಹಡದಿದುಳು ವೀಗಿನ್ನು
ವಾಲ್ಮೀಕಿ ಎಂಬ ಋಷಿಯಾಲಾ ತಾನ |ತಂದಾನ|
ಅಲ್ಲೂ ಬಂದೀಗ ಒದಗಿದುನು ವೀಗಿನ್ನು
ಅವನಿಗೊಂದ್ಹೆಸರು ಇಡುತರೆಯೋ ವೀಗಿನ್ನು
ಲವ ಎಂದ್ಹೇಳಿ ಇಡುತಾರಿಯೊ ತಾನ |ತಂದಾನ|
ಅಲ್ಲೂ ಅಡವಿಯಾ ಒಳಗಾಲು ವೀಗಿನ್ನು
ಅಲ್ಲೂ ಅಲ್ಲೊಂದೆ ಸಾಕುತರಿಯಾ ತಾನ |ತಂದಾನ|
ಅಲ್ಲೂ ಅಲ್ಲೊಂದೆ ಸಾಕುತಾರಿಯಾ ವೀಗಿನ್ನು
ಗಿಡಕೂ ತೊಟ್ಟಿಲು ಕಟ್ಟುತರೆಯೋ ತಾನ |ತಂದಾನ|
ಗಿಡಕೂ ತೊಟ್ಟಿಲು ಕಟ್ಟಿದರು ವೀಗಿನ್ನು
ಲವ ಎಂಬವುನೆ ಮನುಸಿದುರಾ ತಾನ |ತಂದಾನ|
ಲವ ಎಂಬುವುನೆ ಮನುಸಿದುರು ವೀಗಿನ್ನು
ಅಲ್ಲೂವೀಗೊಂದೆಲಿರುವನಾಲಾ ತಾನ |ತಂದಾನ|
ಅಲ್ಲೂವೀಗೊಂದೆಲಿರುವವನು ಈಗಿನ್ನು
ವಾಲ್ಮೀಕಿ ಎಂಬ ಋಷಿಯಾಲಾ ತಾನ |ತಂದಾನ|
ವಾಲ್ಮೀಕಿ ಎಂಬ ಋಷಿಯಾಲ್ಲೇ ಈಗಿನ್ನು
ಬಾಳಿ ತೊಟ್ಟಿಲಲಿ ತೂಗುತಾನಾ ತಾನ |ತಂದಾನ|
ಬಾಳಿ ತೊಟ್ಟಿಲಲಿ ತೂಗುತಾನೆಯೋ ವೀಗಿನ್ನು
ಸೀತಿ ದೇವೀನೇ ಎಂಬುವಳಾ ತಾನ |ತಂದಾನ|
ಸೀತಾದೇವೀನೇ ಎಂಬುವಳು ವೀಗಿನ್ನು
ತನ್ನ ಬಟ್ಟೀನೆ ಹಿಡಕಂಡೂ ತಾನ |ತಂದಾನ|
ತನ್ನ ಬಟ್ಟೀನೆ ಹಿಡುಕೊಂಡೂ ವೀಗಿನ್ನು
ಮದದ ನದಿಗೊಂದೆ ಹೋಗಲ್ಯಾಳಾ ತಾನ |ತಂದಾನ|
ಮದದ ನದಿಗೊಂದೆ ಹೋಗಿದಳು ವೀಗಿನ್ನು
ಬಟ್ಟಿ ತೊಳಿಯಾಕೆ ಹೋಗಿದುಳು ತಾನ |ತಂದಾನ|
ಬಟ್ಟಿ ತೊಳಿಯಾಕೆ ಹೋಗಿದುಳು ವೀಗಿನ್ನು
ಅಲ್ಲೂವಿಗೊಂದೆ ಕಂಡಳಾಲಾ ತಾನ |ತಂದಾನ|
ಅಲ್ಲೂವಿಗೊಂದೆ ಕಂಡಿದಳು ವೀಗಿನ್ನು
ಮರನು ಮ್ಯಾಲೇ ಮಂಗ ಹಾರುತದೆಯೋ ತಾನ |ತಂದಾನ|
ಮರನು ಮ್ಯಾಲೇ ಮಂಗ ಹಾರುತದೆಯೋ ವೀಗಿನ್ನು
ಮರಿಯ ಕಚ್ಚಗೊಂಡೆ ಹಾರುತದೆಯೋ ತಾನ |ತಂದಾನ|
ಮರಿಯ ಕಚ್ಚಗೊಂಡೆ ಹಾರುತದೆಯೋ ವೀಗಿನ್ನು
ಆಚೆ ಮರಕೊಂದೆ ಹಾರುತದೆಯೋ ತಾನ |ತಂದಾನ|
ಲಾಚೆ ಮರಕೊಂದೆ ಹಾರುತದೆಯೋ ವೀಗಿನ್ನು
ಈಚೀ ಮರಕೊಂದೇ ಹಾರುತದೆಯೋ ತಾನ |ತಂದಾನ|
ತನ್ನ ಮರಿಯೊಂದೆ ಬಿಡುವುದಿಲ್ಲಾ ತಾನ |ತಂದಾನ|
ತನ್ನ ಮರಿಯೊಂದೆ ಬಿಡುವುದಿಲ್ಲಾ ವೀಗಿನ್ನು
ಮರನ ಮ್ಯಾಲೊಂದೆ ಹಾರುತದೆಯಾ ತಾನ |ತಂದಾನ|
ಸೀತೀದೇವಿನೇ ಕಂಡಿದುಳು ವೀಗಿನ್ನು
ಮಂಗಗೂ ಮರಿಯಾಸೇ ಅದಿಯಾಲಾ ತಾನ |ತಂದಾನ|
ಮಂಗಗೂ ಮರಿಯಾಸೇ ಅದಿಯಾಲೋ ವೀಗಿನ್ನು
ನನಗೂ ಮಗುನಾಸೆ ಇಲ್ಯ್‌ಲಾ ತಾನ |ತಂದಾನ|
ತನ್ನ ಬಟ್ಟೀನೆ ಇರುವುದಾಲು ಈಗಿನ್ನು
ನದಿಯಾ ದಂಡೀಲಿ ಇಟ್ಟಳಾಲಾ ತಾನ |ತಂದಾನ|
ನದಿಯಾ ದಂಡೀಲಿ ಇಟ್ಟಳಾಲಾ ಈಗಿನ್ನು
ಹಿಂದೂ ತಿರುಗೊಂದೇ ಬಂದಳಾಲಾ ತಾನ |ತಂದಾನ|
ಹಿಂದೂ ತಿರುಗೊಂದೇ ಬಂದಿದುಳು ವೀಗಿನ್ನು
ತನ್ನಾ ಕಂದನಾ ಕಂಡಿದುಳು ತಾನ |ತಂದಾನ|
ಲವ ಎಂಬುವವನೇ ಹುಡುಗನಾಲೋ ವೀಗಿನ್ನು
ತೊಟ್ಟಿಲುದೊಳಗೆ ಮಲಗಿದನಾ ತಾನ |ತಂದಾನ|
ಅಲ್ಲೂ ನಿದುರಿನೆ ಬಂದದೆಯೋ ವೀಗಿನ್ನು
ವಾಲುಮಿಕಿಯೆಂಬಾ ಋಷಿಯಾಲಾ ತಾನ |ತಂದಾನ|
ಅವನಿಗೂ ನಿದ್ದುರಿನೇ ಬಂದಿದುಯೋ ಈಗಿನ್ನು
ತಾನೂವಿಗೊಂದೆ ಏಳೋದಿಲ್ಲಾ ತಾನ |ತಂದಾನ|
ತಾನೂವಿಗೊಂದೆ ಏಳೋದಿಲ್ಲಾ ವೀಗಿನ್ನು
ತನ್ನಾ ಕಂದಾನ ಎತ್ತುಗಂಡಾ ತಾನ |ತಂದಾನ|
ತನ್ನಾ ಕಂದಾನ ಎತ್ತುಗಂಡು ವೀಗಿನ್ನು
ಹೊಳಿಯೋದಂಡೀಗೂ ಹೋದಳಾಲಾ ತಾನ |ತಂದಾನ|
ಹೊಳಿಯೋದಂಡೀಗೂ ಹೋಗಿದುಳು ಈಗಿನ್ನು
ಕಂದಾನಿಗೊಂದೆ ಎತ್ತುಗೊಂಡಾ ತಾನ |ತಂದಾನ|
ಕಂದಾನಿಗೊಂದೆ ಎತ್ತುಗೊಂಡು ವೀಗಿನ್ನು
ಒಂದು ಬದಿ ಬಟ್ಟಿ ತೊಳಿತಳೆಯಾ ತಾನ |ತಂದಾನ|
ಒಂದು ಬದಿ ಬಟ್ಟಿ ತೊಳಿತಳೆಯಾ ವೀಗಿನ್ನು
ಒಂದೂ ಬದಿಗ್ಹಾಡೆ ಹೇಳುತಾಳೆಯಾ ತಾನ |ತಂದಾನ|
ಒಂದೂ ಬದಿಗ್ಹಾಡೆ ಹೇಳುತಾಳೆಯೋ ವೀಗಿನ್ನು
ಮಂಗ ಈಗೊಂದೇ ಬಂತವ್ನಾ ತಾನ |ತಂದಾನ|
ಮಂಗ ಈಗೊಂದೇ ಬರುತದೇ ವೀಗಿನ್ನು
ಮರಿಯಾ ಎತ್ತುಗೊಂಡೆ ಬರುತದೆಯೋ ತಾನ |ತಂದಾನ|
ಸುಮ್ಮನಿರೆಂದು ಹೇಳುತದೆಯೋ ವೀಗಿನ್ನು
ಒಂದೂ ಬದಿ ಬಟ್ಟಿ ಒಗೆತದೆಯಾ ತಾನ |ತಂದಾನ|
ತನ್ನ ಬಟ್ಟೀನ ಒಗದುದು ಈಗಿನ್ನು
ಸಾನ ಜಪುವೊಂದೆ ಮಾಡಿದುಳಾ ತಾನ |ತಂದಾನ|
ಸಾನ ಜಪುವೊಂದೆ ಮಾಡಿದುಳು ವೀಗಿನ್ನು
ಹಿಂದೂ ತಿರಿಗೊಂದೇ ಬರುವರೆಗಾ ತಾನ |ತಂದಾನ|
ಅಲ್ಲೂವಿಗೊಂದೇಲಿರುವನಾಲೋ ವೀಗಿನ್ನು
ವಾಲ್ಮೀಕಿ ಈಗೊಂದೆ ಕಂಡಿದನೋ ತಾನ |ತಂದಾನ|
ಎದ್ದೂ ಈಗೊಂದೆ ಕಂಡಿದನ ವೀಗಿನ್ನು
ಕಂಡಿದರು ಶಿಶುವೆ ಇಲ್ಲಿಯಾಲಾ ತಾನ |ತಂದಾನ|
ಕಂಡಿದುರು ಶಿಶುವೆ ಇಲ್ಲಿಯಾಲೋ ವೀಗಿನ್ನು
ತೊಟ್ಟಿಲು ಶಿಶು ಮಾಯೂ ಆಗಾದಾಲಾ ತಾನ |ತಂದಾನ|
ತೊಟ್ಟಿಲು ಶಿಶು ಮಾಯಾ ಆಗದಾಲಾ ವೀಗಿನ್ನು
ಸೀತಾ ದೇವೀನೇ ಬಂದವಳಾ ತಾನ |ತಂದಾನ|
ಸೀತಾದೇವೀನೇ ಬಂದಿದಳು ವೀಗಿನ್ನು
ಶಿಶುವೋ ಈಗೊಂದೆ ಕಂಡಿದುರಾ ತಾನ |ತಂದಾನ|
ಅವಳೂ ಪ್ರಾಣಾನೇ ಉಳೊದಿಲ್ಲೊ ವೀಗಿನ್ನು
ತನ್ನಾ ಪ್ರಾಣಾನೇ ಕಳಕಂತ್ಲೆ ತಾನ |ತಂದಾನ|
ನನ್ನು ಮ್ಯಾಲೊಂದೆ ಹಾಕುತಾಳೆ ವೀಗಿನ್ನು
ನನಗೂ ಅಪರಾಧ ಹೊರಿಸುತಾಳೆಯಾ ತಾನ |ತಂದಾನ|
ಲಂದೂ ತಾನೀಗೂ ಕಂಡಿದುನು ವೀಗಿನ್ನು
ವಾಲ್ಮೀಕಿ ಋಷಿಯೇ ಎಂಬವುನಾ ತಾನ |ತಂದಾನ|
ದರುಬಿ ಹುಲ್ಲೊಂದೆ ತಂದಿದುನು ವೀಗಿನ್ನು
ಮಂತ್ರು ಶಕುತೀಯದಿಂದಾಲಾ ತಾನ |ತಂದಾನ|
ಮಂತ್ರು ಶಕುತೀಯದಿಂದಾಲು ವೀಗಿನ್ನು
ಒಂದೂ ಶಿಶುವೊಂದೇ ಮಾಡಿದುನು ತಾನ |ತಂದಾನ|
ಒಂದೂ ಶಿಶುವೊಂದೇ ಮಾಡಿದುನು ವೀಗಿನ್ನು
ತೊಟ್ಟಿಲಲ್ಲಿ ತಾನೇ ಮನುಸಿದುನಾ ತಾನ |ತಂದಾನ|
ತೊಟ್ಟಿಲಲ್ಲಿ ತಾನೇ ಮನಸಿದುನಾ ವೀಗಿನ್ನು
ತೊಟ್ಟಿಲು ತಾನೇ ತೂಗುತಾನೆಯಾ ತಾನ |ತಂದಾನ|
ತೊಟ್ಟಿಲು ತಾನೇ ತೂಗುತಾನೆ ವೀಗಿನ್ನು
ಒಳ್ಳೇ ಹಾಡೊಂದೆ ಹೇಳುತಾನೆಯೋ ತಾನ |ತಂದಾನ|
ಒಳ್ಳೇ ಹಾಡೊಂದೆ ಹೇಳುತಾನೆ ವೀಗಿನ್ನು
ವಾಲ್ಮೀಕಿ ಎಂಬ ಋಷಿಯಾಲಾ ತಾನ |ತಂದಾನ|
ಸುಮ್ಮಾನಿರು ಕಂದ ಅನುತನಿಯೋ ವೀಗಿನ್ನು
ಅಮ್ಮಾ ಈಗೊಂದೆ ಬರುತಾಳೆಯಾ ತಾನ |ತಂದಾನ|
ಅಂದೂ ಹಾಡೊಂದೆ ಹೇಳುತಾನೇ ವೀಗಿನ್ನು
ತೊಟ್ಟಿಲು ತಾನೇ ತೂಗುತಾನೆಯೋ ತಾನ |ತಂದಾನ|
ಸೀತಾದೇವಿ ಎಂಬುವಳು ಬಂದಳಲ್ಲೋ ಈಗಿನ್ನು
ತನ್ನಾ ಬಟ್ಟೀನೇ ಒಗಿಕೊಂಡು ತಾನ |ತಂದಾನ|
ತನ್ನಾ ಬಟ್ಟೀನೇ ಒಗಿಕೊಂಡು ಈಗಿನ್ನು
ತನ್ನಾ ಕಂದನ ಎತ್ತಿಕೊಂಡು ತಾನ |ತಂದಾನ|
ತನ್ನಾ ಕಂದನ ಎತ್ತಿಕೊಂಡು ಈಗಿನ್ನು
ತನ್ನಾಲುಮನೆಗೂ ಬಂದಿದುಳಾ ತಾನ |ತಂದಾನ|
ಇಲ್ಲೂ ಒಂದೊಂದೆ ನೋಡುದಂಗೂ ಈಗಿನ್ನು
ತೊಟ್ಟಿಲ್ಲಲ್ಲೊಂದು ಶಿಸುವಾಲಾ ತಾನ |ತಂದಾನ|
ತೊಟ್ಟಿಲ್ಲಲ್ಲೊಂದು ಶಿಶುವಾಲೋ ವೀಗಿನ್ನು
ಇವಳೂ ಕೈಲೊಂದು ಶಿಶುವಾಲಾ ತಾನ |ತಂದಾನ|
ಅಯ್ಯೋ ಅಜ್ಜಯ್ಯ ಕೇಳುವಾಲೋ ವೀಗಿನ್ನು
ಎಲ್ಲಿಂದು ಶಿಶುವೆ ಬಂತೇನಾ ತಾನ |ತಂದಾನ|
ಎಲ್ಲಿಂದು ಶಿಶುವೆ ಬಂದತೇನು ಅಜ್ಜಯ್ಯ
ನನ್ನ ಶಿಸು ನಾನೆ ಕರಕೊಂಡೇ ತಾನ |ತಂದಾನ|
ಕೇಳು ಕೇಳು ಮಮ್ಮಗುಳೇ ನೀ ಕೇಳು ಈಗಿನ್ನು
ಇಂತಾ ಕೆಲಸೊಂದೆ ಮಾಡುಬೇಡಾ ತಾನ |ತಂದಾನ|
ಕೇಳು ಅಜ್ಜಯ್ಯ ನೀ ಕೇಳು ವೀಗಿನ್ನು
ನಾನು ಈಗೊಂದೆ ಹೋಗಿದುನಾ ತಾನ |ತಂದಾನ|
ನಾನು ಈಗೊಂದೆ ಹೋಗಿದುನು ವೀಗಿನ್ನು
ನದಿಯೋ ದಂಡಿಗೂ ಹೋಗಿದುನಾ ತಾನ |ತಂದಾನ|
ನದಿಯೋದಂಡಿಗೂ ಹೋಗಿದುನು ವೀಗಿನ್ನು
ಬಟ್ಟೀ ಒಗುಕೆಂದು ಹೋಗಿದುನಾ ತಾನ |ತಂದಾನ|
ಅಲ್ಲೂವಾನೊಂದೆ ಕಂಡಿದುನು ವೀಗಿನ್ನು
ಮರನ ಮ್ಯಾಲೆ ಮಂಗ ಇರುವನಾಲಾ ತಾನ |ತಂದಾನ|
ಮರನ ಮ್ಯಾಲೆ ಮಂಗ ಇರುವವದು ವೀಗಿನ್ನು
ಮರಿಯೋ ಕಚ್ಚುಗೊಂಡೆ ಹಾರುತದೆಯೋ ತಾನ |ತಂದಾನ|
ನಾನೂ ಈಗೊಂದೆ ಕಂಡಿದುನು ವೀಗಿನ್ನು
ಮಂಗಾಗೂ ಮರಿಯಾಸೆ ಅದಿಯಾಲಾ ತಾನ |ತಂದಾನ|
ಮಂಗಾಗೂ ಮರಿಯಾಸೆ ಅದಿಯಲ್ಲೋ ವೀಗಿನ್ನು
ನನಗೂ ಮಗುನಾಸೆ ಇಲ್ಲೇನಾ ತಾನ |ತಂದಾನ|
ನನಗೂ ಮಗುನಾಸೆ ಇಲ್ಲೇನಾ ವೀಗಿನ್ನು
ನಾನೂ ಹಿಂದಿಗೂ ಬಂದ್ಹೀದಾ ತಾನ |ತಂದಾನ|
ನಾನೂ ಹಿಂದ್ಯೊಂದೆ ಬಂದೀದೆ ವೀಗಿನ್ನು
ನಿನಗೂ ನಿದ್ದುರೇನೆ ಬಿದ್ದುದವಾ ತಾನ |ತಂದಾನ|
ನಿನಗೂ ನಿದ್ದುರೇನೆ ಬಿದ್ದುದವಾ ವೀಗಿನ್ನು
ನಿನ್ನಾ ನಾನೊಂದೆ ಏಳುಸಲಿಲ್ಲಾ ತಾನ |ತಂದಾನ|
ನಿನ್ನಾ ನಾನೊಂದೆ ಏಳುಸಲಿಲ್ಲಾ ವೀಗಿನ್ನು
ನನ್ನಾ ಕಂದಾನ ಎತ್ತಿಕೊಂಡೇ ತಾನ |ತಂದಾನ|
ನನ್ನಾ ಕಂದಾನ ಎತ್ತಿಕೊಂಡು ವೀಗಿನ್ನು
ನದಿಯಾ ಬುಡುಕೊಂದೆ ಹೋಗಿದುನಾ ತಾನ |ತಂದಾನ|
ನದಿಯ ಬುಡುಕೊಂದೆ ಹೋಗಿದುನು ವೀಗಿನ್ನು
ನನ್ನಾ ಬಟ್ಟೀನೇ ತೊಳುಕೊಂಡು ತಾನ |ತಂದಾನ|
ನಾನೂವೀಗೊಂದೆ ಬರುವರಿಗೂ ವೀಗಿನ್ನು
ತೊಟ್ಟಿಲಲೊಂದು ಶಿಶುವೇ ಅದಿಯಾಲಾ ತಾನ |ತಂದಾನ|
ಕೇಳು ಕೇಳು ಮಮ್ಮಗುಳೇ ನೀ ಕೇಳು ವೀಗಿನ್ನು
ಎಲ್ಲಿಂದು ಶಿಶುವೆ ಬರುಲಿಲ್ಲಾ ತಾನ |ತಂದಾನ|
ನಾನೂ ಎದ್ದೊಂದೆ ನೋಡಿದುರು ಈಗಿನ್ನು
ತೊಟ್ಟಿಲಲ್ಲೂ ಶಿಶುವೇ ಇಲ್ಯ್‌ಲಾ ತಾನ |ತಂದಾನ|
ನೀನೂವಿಗೊಂದೆ ಬಂದಿದುರು ವೀಗಿನ್ನು
ಬಂದೂ ನೀನೊಂದೇ ಕಂಡಿದುರಾ ತಾನ |ತಂದಾನ|
ಬಂದೂ ನೀನೊಂದೇ ಕಂಡಿದುರೆ ವೀಗಿನ್ನು
ನಿನ್ನ ಪ್ರಾಣಾನೇ ಉಳುವೋದಿಲ್ಲ ತಾನ |ತಂದಾನ|
ದರ್ಬೆ ಹುಲ್ಲೊಂದು ಮಂತ್ರಿಸಿ ವೀಗಿನ್ನು
ಮಾಯಾದೊಂದು ಶಿಸುವೆ ಮಾಡಿದುನಾ ತಾನ |ತಂದಾನ|
ಕೇಳು ಕೇಳಾಲೆ ನೀನಾಗಿ ಈಗಿನ್ನು
ಮುಂಚು ಹುಟ್ಟಿದವನೇ ಇರುವನಾಲಾ ತಾನ |ತಂದಾನ|
ಅವುನಿಗೆ ಹೆಸುರೊಂದೆ ಇರುವುದಾಲವೀಗಿನ್ನು
ಲವ ಎಂಬವನೆ ಅವನಾಲಾ ತಾನ |ತಂದಾನ|
ಈಗೂ ಹುಟ್ಟಿದವನು ಇರುವವುನು ಈಗಿನ್ನು
ಕುಶ ಎಂಬುವುದೇ ಅವನಾಲಾ ತಾನ |ತಂದಾನ|
ಲವಕುಶಾನೆ ಎಂಬುವರು ಈಗಿನ್ನು
ಅಣ್ಣತಮ್ಮಾನೆ ಅವರಾಲ ತಾನ |ತಂದಾನ|
ಲವಕುಶಾನೆ ಎಂಬುವರು ಈಗಿನ್ನು