ರಾಮ ಮರೆಯಲ್ಲೂ ನಿತ್ತನಲ್ಲೋ ವೀಗಿನ್ನು
ಸುಗ್ರೀವನ ಮುಂದು ಕಳುಯಿದಿ ತಾನ |ತಂದಾನ|
ಸುಗ್ರೀವನ ಮುಂದು ಕಳುಯಿದಿ ವೀಗಿನ್ನು
ಸುಗ್ರೀವ ವಾಲೀಗು ಕರಿತಾನಿಯಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ಕೇಳುವಾಲಾ ವೀಗಿನ್ನು
ವಾಲಿ ನೀನಾರು ಕೇಳುವಾಲ ತಾನ |ತಂದಾನ|
ಈ ರಾಜ್ಯ ನನೂಗೆ ಬಿಡುವುದಿಲ್ಲಾ ವೀಗಿನ್ನು
ಇಂದು ನಿನಗೊಂದೆ ಬಿಡುವುದಿಲ್ಲಾ ತಾನ |ತಂದಾನ|
ಇನ್ನು ನಿನಗೊಂದೆ ಬಿಡುವುದಿಲ್ಲಾ ಎನುತಾನೆ
ಸುಗ್ರೀವ ಈಗೂ ಕರಿತಾನಿಯಾ ತಾನ |ತಂದಾನ|
ವಾಲಿವಿಗೊಂದೆ ಕರದುದಿದನು ವೀಗಿನ್ನು
ವಾಲಿ ಎದ್ಹೋಡಿ ಬಂದನಾಲಾ ತಾನ |ತಂದಾನ|
ವಾಲೀ ಓಡೋಂದೆ ಬಂದಿದುನೇ ಈಗಿನ್ನು
ಇಬ್ಬರು ಕಾಳುಗವೇ ನಡಿತದಿಯಾ ತಾನ |ತಂದಾನ|
ಇಬ್ಬರು ಕಾಳುಗವೇ ನಡಿತದಿಯಾ ವೀಗಿನ್ನು
ಸುಗ್ರೀವ ಸೋತು ಬಂದನಾಲಾ ತಾನ |ತಂದಾನ|
ಸುಗ್ರೀವ ಸೋತು ಬಂದನಾಲಾ ವೀಗಿನ್ನು
ಓಡೂವಿಗೊಂಡೆ ಬಂದನಾಲಾ ತಾನ |ತಂದಾನ|
ಅಯ್ಯ ರಾಮಸ್ವಾಮಿ ನೀ ಕೇಳು ಈಗಿನ್ನು
ನಿನ್ನಾ ಮಾತೊಂದೆ ಕೇಳುಕಂಡಾ ತಾನ |ತಂದಾನ|
ನಿನ್ನ ಮಾತೊಂದೆ ಕೇಳಿಕೊಂಡೆ ಈಗಿನ್ನು
ಅಣ್ಣನು ಮ್ಯಾಲೆ ಯುದ್ದಿಕೆ ಹೋಗಿನಾಲಾ ತಾನ |ತಂದಾನ|
ನನ್ನಣ್ಣ ನನ್ನ ಬುಡುದಿಲ್ಲಾ ವೀಗಿನ್ನು
ಈ ರಾಜ್ಯ ನನಗೂ ಬ್ಯಾಡುವಂದಾ ತಾನ |ತಂದಾನ|
ನನಗೂ ಈ ರಾಜ್ಯ ಬ್ಯಾಡವೆಂಬ ವೀಗಿನ್ನು
ಕಪಿಗಳೂ ಸಂಗಡವೇ ಉಳಿತೆಂಬಾ ತಾನ |ತಂದಾನ|
ರಾಮಾಸ್ವಾಮಿನೇ ಹೇಳುತಾನೆ ಈಗಿನ್ನು
ಕೇಳು ಕೇಳು ನೀನು ಸುಗ್ರೀವಾ ತಾನ |ತಂದಾನ|
ಈಗೂ ನಿನೊಂದೆ ಹೋಗುವಾಲ ವೀಗಿನ್ನು
ನಾನೂ ಇಲ್ಲೊಂದೆ ಇರುತೆಂಬಾ ತಾನ |ತಂದಾನ|
ರಾಮುನು ಕೊಳ್ಳಲ್ಲು ಇರುವುದೊಂದೆ ಈಗಿನ್ನು
ಜಪುದು ಸರವೊಂದೆ ಇರುವುದಾಲಾ ತಾನ |ತಂದಾನ|
ಜಪುದು ಸರವೊಂದೆ ಇರುವುದಾಲಾ ಈಗಿನ್ನು
ಸುಗ್ರೀವನ ಕೊಳ್ಳಗೆ ಕೆಳಗುತಾನಿಯ ತಾನ |ತಂದಾನ|
ಸುಗ್ರೀವನ ಕೊಳ್ಳಗೆ ಕೆಳಗುತಾನಿಯಾ ಈಗಿನ್ನು
ರಾಮಾಸ್ವಾಮಿನೆ ಕೆಳಗುತಾನಿಯಾ ತಾನ |ತಂದಾನ|
ರಾಮಾಸ್ವಾಮಿನೆ ಕೆಳಗುತಾನಿಯಾ ಈಗಿನ್ನು
ಸುಗ್ರೀವನ ಮತ್ತೂ ಕಳಗೂ ತಾನಿಯೋ ತಾನ |ತಂದಾನ|
ಸುಗ್ರೀವ ಹೋಗು ಕರಿತಾನಿಯ ವೀಗಿನ್ನು
ಅಣ್ಣಾ ವಾಲಿನೇ ಕರಿತಾನಿಯಾ ತಾನ |ತಂದಾನ|
ಅಣ್ಣಾ ವಾಲಿನೇ ಕರಿತಾನಿಯಾ ವೀಗಿನ್ನು
ಈಗು ನೀನೊಂದೆ ಬರುವಾಲಾ ತಾನ |ತಂದಾನ|
ಈಗು ನೀನೊಂದೆ ಬರುವಾಲಾ ವೀಗಿನ್ನು
ಇಟ್ಟು ದಿನ ನಿನಗೂ ಬಿಟ್ಟಿನಾಲಾ ತಾನ |ತಂದಾನ|
ಇಟ್ಟು ದಿವಸ ನಿನಗೂ ಬಿಟ್ಟಿನಾಲ್ಲೋ ವೀಗಿನ್ನು
ನನ್ನಾ ರಾಜ್ಯನೇ ಬಿಟ್ಟಿನಾಲಾ ತಾನ |ತಂದಾನ|
ನನ್ನಾ ರಾಜ್ಯನೇ ಬಿಟ್ಟಿನಲ್ಲೋ ವೀಗಿನ್ನು
ನನ್ನಾ ಹೆಣ್ತಿನೆ ಬಿಟ್ಟಿನಾಲಾ ತಾನ |ತಂದಾನ|
ನನ್ನಾ ಹೆಣ್ತಿನೆ ಬಿಟ್ಟಿನಾಲಾ ಈಗಿನ್ನು
ನನ್ನ ಮನೆಯೊಂದೆ ಬಿಟ್ಟಿನಾಲ್ಲೋ ತಾನ |ತಂದಾನ|
ನನ್ನ ಮನೆಯೊಂದೆ ಬಿಟ್ಟಿನಾಲ್ಲೋ ಈಗಿನ್ನು
ಇಂದಿಗೂ ನಿನಗು ಬಿಡುವುದಿಲ್ಲಾ ತಾನ |ತಂದಾನ|
ಅಂದ್ಹೇಳಣ್ಣಾನ ಕರೆದಿದುನು ಈಗಿನ್ನು
ಮತ್ತೂ ಯುದ್ದಾಕ್ಕೆ ಬಂದನಾಲಾ ತಾನ |ತಂದಾನ|
ಮತ್ತೂ ಯುದ್ದಾಕ್ಕೆ ಬಂದಿದನು ಈಗಿನ್ನು
ವಾಲಿಸುಗ್ರೀವನ ಕಾಳಗವಾಲಾ ತಾನ |ತಂದಾನ|
ವಾಲಿಸುಗ್ರೀವನ ಕಾಳಗವಾಲಾ ಈಗಿನ್ನು
ಅಲ್ಲೂವೀಗೊಂದೆ ನಡಿತದಿಯೋ ತಾನ |ತಂದಾನ|
ಅಲ್ಲೂವೀಗೊಂದೆ ನಡಿತದಿಯೋ ಈಗಿನ್ನು
ರಾಮಸ್ವಾಮಿನೇ ಎಂಬುವನಾಲಾ ತಾನ |ತಂದಾನ|
ರಾಮಸ್ವಾಮಿನೇ ಎಂಬುವನು ಈಗಿನ್ನು
ಮರೆಯಲ್ಲೆ ನಿತ್ತು ನೋಡುತಾನಿಯೋ ತಾನ |ತಂದಾನ|
ಮರೆಯಲ್ಲೆ ನಿತ್ತು ನೋಡುತಾನೆ ಈಗಿನ್ನು
ರಾಮಾಸ್ವಾಮಿನೇ ಕಂಡಾನಾಲಾ ತಾನ |ತಂದಾನ|
ಮರೆಯಲ್ಲೆ ನಿತ್ತು ನೋಡಿದನಿಯೋ ಈಗಿನ್ನು
ವಾಲಿಗೂ ಬಾಣಾನೇ ಹೋಡೆದನಾಲಾ ತಾನ |ತಂದಾನ|
ವಾಲಿಗೂ ಬಾಣಾನೇ ಹೊಡೆದನು ಈಗಿನ್ನು
ರಾಮ ಬಾಣಾನೇ ಬಿಟ್ಟನಾಲಾ ತಾನ |ತಂದಾನ|
ವಾಲಿ ತಾನೀಗ ಹೇಳುತಾನಿಯೋ ವೀಗಿನ್ನು
ಏನೆಂದ್ಹೇಳುತಾನೆ ಕೂಗುತಾನಿಯೋ ತಾನ |ತಂದಾನ|
ಯಾವು ಕಳ್ಳಾನೋ ನೀನೇನು ವೀಗಿನ್ನು
ಹಿಂದು ಬಂದು ನನಗೂ ಹೊಡದಿಯೇನಾ ತಾನ |ತಂದಾನ|
ಹಿಂದು ಬಂದು ನೀನು ಹೊಡೆದಿಯೇನಾ ಈಗಿನ್ನು
ಕೊಲುವಾದರೆ ನನ್ನ ಕೊಲಲಕಾ ತಾನ |ತಂದಾನ|
ಎದುರು ಬಂದು ನನ್ನ ಹೊಡಿಲಾಕು ಈಗಿನ್ನು
ಮರಿಯಲು ಬಂದು ನಿತ್ತು ಹೊಡೆದಿಯೇನಾ ತಾನ |ತಂದಾನ|
ರಾಮಸ್ವಾಮಿನೇ ಹೇಳುತವುನೆ ಈಗಿನ್ನು
ಬಂದು ನಿತ್ತೊಂದೆ ಹೇಳುತವನೇ ತಾನ |ತಂದಾನ|
ಬಂದು ನಿತ್ತೊಂದೆ ಹೇಳುತವನೇ ಏನೆಂದು
ಕೇಳು ಕೇಳೋ ನೀನೆ ವಾಲಿಯಲೋ ತಾನ |ತಂದಾನ|
ಕೇಳು ಕೇಳೋ ನೀನೇ ವಾಲಿಯಲೋ ಈಗಿನ್ನು
ಈ ಜಲುಮದಲ್ಲೂ ಹೊಡಿದನಾಲಾ ತಾನ |ತಂದಾನ|
ನಿನಗೂ ನಾನೊಂದೆ ಹೊಡಿದನಾಲೋ ಈಗಿನ್ನು
ಮುಂದಿನು ಜಲುಮದಲ್ಲೂ ಹೊಡಿಲಕ್ಕ ತಾನ |ತಂದಾನ|
ಮುಂದಿನು ಜಲುಮದಲ್ಲೂ ಹೊಡಿಲಕ್ಕ ಈಗಿನ್ನು
ನನಗೂ ನೀನೊಂದೆ ಹೊಡಿಲಕ್ಕಾ ತಾನ |ತಂದಾನ|
ನನಗೂ ನೀನೊಂದೆ ಹೊಡಿಲಕ್ಕು ಈಗಿನ್ನು
ಮರೆಯಲು ನಿತ್ತು ನನ್ನ ಕೊಲಲಕ್ಕಾ ತಾನ |ತಂದಾನ|
ಮರೆಯಲು ನಿತ್ತು ನನ್ನ ಕೊಲಲಕ್ಕಾ ಈಗಿನ್ನು
ಈಗೊಂದೇ ತಪ್ಪ ಮಾಡನ್ಯಾಲಾ ತಾನ |ತಂದಾನ|
ಈಗೊಂದೇ ತಪ್ಪ ಮಾಡಿದೆನು ಈಗಿನ್ನು
ನನ್ನ ಸೀತಿನೇ ತರಬೇಕಂದಾ ತಾನ |ತಂದಾನ|
ನನ್ನ ಸೀತಿನೇ ತರಬೇಕೆಂದು ಈಗಿನ್ನು
ತಪ್ಪಿನ ಕೆಲಸನೊಂದು ಮಾಡನ್ಯಾಲಾ ತಾನ |ತಂದಾನ|
ಆನು ಕೇಳವಾಲ ಎಲೆ ರಾಮ ಈಗಿನ್ನು
ಲಂಕಾ ಪಟ್ನದ ರಾವಣನಾ ತಾನ |ತಂದಾನ|
ಅವನಾವ ದೊಡ್ಡ ರಾವಣನು ಈಗಿನ್ನು
ನನ್ನ ಕೂಡ ಬಂದು ಹೇಳಿದುರಾ ತಾನ |ತಂದಾನ|
ನನ್ನ ಕೂಡ ಬಂದು ಹೇಳಿದುರಾ ಈಗಿನ್ನು
ನಿನ್ನಾ ಸೀತೀನೇ ತರುತಿದನಾ ತಾನ |ತಂದಾನ|
ಅವ್ನ ಯಾವ ದೊಡ್ಡ ರಾವಣಾನೋ ಈಗಿನ್ನು
ಹಿಂದು ಒಂದಿನ ಸಿಕ್ಕಿನಾಲಾ ತಾನ |ತಂದಾನ|
ಹಿಂದು ಒಂದಿನ ಸಿಕ್ಕಿದನು ಈಗಿನ್ನು
ನನ್ನ ಕೈಯಲ್ಲವನೆ ಸಿಕ್ಕಿನಾಲಾ ತಾನ |ತಂದಾನ|
ನನ್ನ ಕೈಯಲ್ಲವನೆ ಸಿಕ್ಕಿನಾಲಾ ಈಗಿನ್ನು
ಹತ್ತು ತಲಿ ಹುಳುವು ಅಂದ್ಹೇಳಿ ತಾನ |ತಂದಾನ|
ಹಿಡಕಂಡಿ ನಾನು ತಂದಿದುನೋ ಈಗಿನ್ನು
ಬಾಲಿ ತೊಟ್ಲಿಗೂ ಕಟ್ಟಿನಲ್ಲಾ ತಾನ |ತಂದಾನ|
ಬಾಲಿ ತೊಟ್ಲಗೂ ಕಟ್ಟಿನಾಲಾ ಈಗಿನ್ನು
ಯಾವ ದೊಡ್ಡ ರವಣಾ ಲವನೇನಾ ತಾನ |ತಂದಾನ|
ಅಂವ ಯಾವ ದೊಡ್ಡ ರವಣಾನು ಈಗಿನ್ನು
ಅವ್ನವಿಗೊಂದೆ ಕೊಲುವುದಕೆ ತಾನ |ತಂದಾನ|
ಅವ್ನವಿಗೊಂದೆ ಕೊಲುವುದಕೆ ಈಗಿನ್ನು
ನಿನ್ನ ಸೀತೀನೆ ತರುವಾಕಾ ತಾನ |ತಂದಾನ|
ನಿನ್ನ ಸೀತೀನೇ ತರುವಾಕೆ ಈಗಿನ್ನು
ನನ್ನ ಹೊಡೆದು ನೀನು ಕೊಂದಿಯೋ ತಾನ |ತಂದಾನ|
ರಾಮಸ್ವಾಮೀನೆ ಹೇಳುತವನೇ ಈಗಿನ್ನು
ಈಗೊಂದು ತಪ್ಪೆ ಮಾಡಿದುನಾ ತಾನ |ತಂದಾನ|
ನಾನೊಂದು ತಪ್ಪು ಮಾಡಿದುನು ಈಗಿನ್ನು
ಮುಂದಿನ ಜಲುಮಾವು ಅಲ್ಲಾಲಾ ತಾನ |ತಂದಾನ|
ನನ್ನ ಹೊಡೆದುದೇನ ಕೊಡಲಕ್ಕು ವೀಗಿನ್ನು
ಅಂದು ರಾಮಸ್ವಾಮಿ ನುಡಿದನಾಲಾ ತಾನ |ತಂದಾನ|
ಅಂದ್ಹೇಳು ರಾಮಸ್ವಾಮಿ ನುಡಿದಿದುನು ವೀಗಿನ್ನು
ಹೊಡೆದು ಬಾಣಾನೆ ದಗುದಿದುನೂ ತಾನ |ತಂದಾನ|
ಹೊಡೆದು ಬಾಣಾನೆ ತಗುದಿದುನೂ ಈಗಿನ್ನು
ವಾಲಿ ಪ್ರಾಣಾನೇ ಬಿಟ್ಟಿನಲ್ಲಾ ತಾನ |ತಂದಾನ|
ವಾಲಿ ಪ್ರಾಣಾನೇ ಬಿಟ್ಟಿನಲ್ಲಾ ಈಗಿನ್ನು
ಸುಗ್ರೀವುಗೆ ರಾಜ್ಯ ಕೊಟ್ಟಿನಾಲಾ ತಾನ |ತಂದಾನ|
ಸುಗ್ರೀವಗೆ ರಾಜ್ಯ ಕೊಟ್ಟಿನಲ್ಲಾ ಈಗಿನ್ನು
ಹನುಮಂತನ ಸೈನ್ಯ ಇರುವುದಾಲ ತಾನ |ತಂದಾನ|
ಹನುಮಂತನ ಸೈನ್ಯ ಇರುವುದಾಲ ಈಗಿನ್ನು
ರಾಮನು ಬೆನ್ನೀಗೂ ಕಳಗುತವನೇ ತಾನ |ತಂದಾನ|
ರಾಮನು ಬೆನ್ನಿಗೂ ಕಳಗೂತವನೇ ಈಗಿನ್ನು
ಸಾವೂರೊಂದು ಜನುವೇ ಹೋಗುತಾರೆಯೋ ತಾನ |ತಂದಾನ|
ಎಲ್ಲಿವರಿಗೂ ಹೋಗುತಾರೆಯೋ ವೀಗಿನ್ನು
ಲಂಕಾ ಪಟ್ನಾದ ಬುಡದಲ್ಲೋ ತಾನ |ತಂದಾನ|
ಲಂಕಾ ಪಟ್ನಾದ ಬುಡದಲ್ಲಿ ಈಗಿನ್ನು
ಏಳು ಸಮುದುರು ತುದಿಯಾಲಾ ತಾನ |ತಂದಾನ|
ಏಳು ಸಮುದುರು ತುದಿಯಲ್ಲೋ ಈಗಿನ್ನು
ಲಂಕಾ ಪಟ್ನಾಕ್ಕೆ ಹೋಗುವಾಕಾ ತಾನ |ತಂದಾನ|
ಲಂಕಾ ಪಟ್ನಾಕ್ಕೆ ಹೋಗುವಾಕೆ ಈಗಿನ್ನು
ಅಲ್ಲೂ ಲಂಕೀನೆ ಕಟ್ಟುತಾರಿಯೋ ತಾನ  |ತಂದಾನ|
ಅಲ್ಲೂ ಲಂಕೀನೆ ಕಟ್ಟುತಾರೆ ಈಗಿನ್ನು
ಎಲ್ಲವರು ಸೇರಿ ಕಟ್ಟುತಾರಿಯೋ ತಾನ |ತಂದಾನ|
ಸುಗ್ರೀವನ ಮಗನು ಇರುವನಾಲ್ಲೆ ಈಗಿನ್ನು
ಅಂಗದ ಎಂಬ ಹೆಸರಾಲಾ ತಾನ |ತಂದಾನ|
ಅವನು ಲಂಕೀನೆ ಕಟ್ಟುತಾನಿಯೋ ಈಗಿನ್ನು
ಇವುರೆಲ್ಲರಿಗೂ ಹೊರುತರಿಯೋ ತಾನ |ತಂದಾನ|
ಇವುರೆಲ್ಲರಿಗೂ ಹೊರುತರಿಯೋ ಈಗಿನ್ನು
ಕಲ್ಲು ಮಣ್ಣೊಂದೆ ತರುತರಿಯೋ ತಾನ |ತಂದಾನ|
ಕಲ್ಲು ಮಣ್ಣೊಂದೆ ತರುತವುರೆ ಈಗಿನ್ನು
ಹನುಮಂತನೀಗು ತರುತರಿಯೋ ತಾನ |ತಂದಾನ|
ಹನುಮಂತ ತಂದ ಕಲ್ಲಾಲು ವೀಗಿನ್ನು
ಅಂಗದವೀಗೂ ಹಿಡಿತನಿಯೋ ತಾನ |ತಂದಾನ|
ಅಂಗಾದವೀಗೂ ಹಿಡಿತನಿಯೋ ಈಗಿನ್ನು
ಎಡಗೈಲೀಗೂ ಹಿಡಿತನಿಯೋ ತಾನ |ತಂದಾನ|
ಎಡಗೈಲೀಗೂ ಹಿಡಿತನಿಯೋ ಈಗಿನ್ನು
ಹನುಮಂತುಗು ಸಿಟ್ಟೆ ಬಂದಿದಲ್ಲಾ ತಾನ |ತಂದಾನ|
ಹನುಮಂತಗೂ ಸಿಟ್ಟೆ ಬಂದಿದಲ್ಲೋ ಈಗಿನ್ನು
ಇಡಿಯೋ ಪರ್ವತಗೆ ಹಿಡಿದನಾಲಾ ತಾನ |ತಂದಾನ|
ತನ್ನಾ ಬಾಲನೇ ಸುತ್ತುನಾಲೋ ಈಗಿನ್ನು
ಬಾಲದಲ್ಲೀಗೂ ಉಳಿತಾನಿಯೋ ತಾನ |ತಂದಾನ|
ಇಡಿದೂ ಜಗ್ಗುತಾನೆ ಅಲಗುತದೆಯೋ ವೀಗಿನ್ನು
ರಾಮಸ್ವಾಮಿನೆ ಕಂಡಿದುರಾ ತಾನ |ತಂದಾನ|
ರಾಮಸ್ವಾಮಿನೆ ಹೇಳುತವನೆ ವೀಗಿನ್ನು
ಹನುಮಂತಗೂ ಸಿಟ್ಟು ಬಂದದ್ಯಾಲಾ ತಾನ |ತಂದಾನ|
ಹನುಮಂತ ತಂದ ಕಲ್ಲಾಟು ವೀಗಿನ್ನು
ಎಲ್ಡು ಕೈಯಿಂದ ಹಿಡಿಯೆಂಬಾ ತಾನ |ತಂದಾನ|
ಸೇತುವೆಗೊಂದೆ ಕಟ್ಟುತ್ತಾರಿಯೋ ವೀಗಿನ್ನು
ಸೇತಾ ಮುಗುದೊಂದೆ ಬರುವವನಾ ತಾನ |ತಂದಾನ|
ಸೇತಾ ಮುಗುದೊಂದೆ ಬರುವಂಬೋ ವೀಗಿನ್ನು
ಒಂದು ಚೆಣ್ಣುದುಲೀನೆ ಇರುವದಲಾ ತಾನ |ತಂದಾನ|
ಒಂದು ಚೆಣ್ಣುದುಲೀನೆ ಇರುವುದು ಈಗಿನ್ನು
ಮಾಯುನ ಹಣ್ಣೊಂದೆ ತಿನುವುದೆಕಾ ತಾನ |ತಂದಾನ|
ಮಾಯುನು ಗೊಯ್ವಂದೆ ತಿಂದುಕೊಂಡು ವೀಗಿನ್ನು
ಮಾಯುನು ಗೊಯ್ಟಂದೆ ಕಚ್ಚಕಂಡಾ ತಾನ |ತಂದಾನ|
ಮಾಯುನು ಗೊಯ್ಟಂದೆ ಕಚ್ಚಕಂಡಾ ಈಗಿನ್ನು
ಅಲ್ಲೂ ಓಡೊಂದೆ ಬಂದದ್ಯಾಲಾ ತಾನ |ತಂದಾನ|
ಅಲ್ಲೂ ಓಡೊಂದೆ ಬಂದದ್ಯಾಲಾ ಈಗಿನ್ನು
ಮಾಯುನು ಗೊಯ್ಟಂದೆ ಇಟ್ಟದಾಲಾ ತಾನ |ತಂದಾನ|
ಮಾಯುನು ಗೊಯ್ಟಂದೆ ಇಟ್ಟದಾಲಾ ವೀಗಿನ್ನು
ರಾಮನು ಸೇತುವೆ ಮುಗಿದದೆಯಾ ತಾನ |ತಂದಾನ|
ರಾಮಾಸ್ವಾಮಿನೇ ಕಂಡಿದುನು ವೀಗಿನ್ನು
ಲಾಗುಲೂ ಚಣಗುಲಿನೇ ಹಿಡಿದಿದನು ತಾನ |ತಂದಾನ|
ಲಾಗೂ ಚಣಗುಲಿನ ಹಿಡಿದಿದನು ಈಗಿನ್ನು
ಬೆನ್ನು ಮ್ಯಾಲೆ ಕೈಯ ಎಳಿದಿದುನಾ ತಾನ |ತಂದಾನ|
ಬೆನ್ನು ಮ್ಯಾಲೆ ಕೈಯ ಎಳಿದಿದುನಾ ಈಗಿನ್ನು
ಮೂರು ಪಟ್ಟೀಯೇ ಬಂದದ್ಯಾಲಾ ತಾನ |ತಂದಾನ|
ಮೂರು ಪಟ್ಟಿಯೇ ಬಂದದ್ಯಾಲಾ ವೀಗಿನ್ನು
ಬೆನ್ನದ ಪಟ್ಟಿನೆ ಬಂದದ್ಯಾಲಾ ತಾನ |ತಂದಾನ|
ರಾಮುನು ಸೇತುವೆನೆ ಮುಗಿದಯೋ ಈಗಿನ್ನು
ಲಾಗೂತಾನೀಗೂ ಲಿರುವನಾಲಾ ತಾನ |ತಂದಾನ|
ಲಾಗೂ ತಾನೀಗೂ ಲಿರುವನಲೋ ಈಗಿನ್ನು
ರಾಮಾಸ್ವಾಮಿನೇ ಎಂಬುವನಾ ತಾನ |ತಂದಾನ|
ರಾಮಾಸ್ವಾಮಿನೇ ಎಂಬುವನು ಈಗಿನ್ನು
ಯಾರು ಹೋಗಕಂಡು ಬರುತೆಂಬಾ ತಾನ |ತಂದಾನ|
ಲಂಕಾಪಟ್ನಕ್ಕೆ ಹೋಗುತೆಂಬವೀಗಿನ್ನು
ಸೀತಿ ಕಂಡು ನೀವೇ ಬರುತೆಂಬಾ ತಾನ |ತಂದಾನ|
ರಾಮಾಸ್ವಾಮಿನೇ ಕೇಳುತಾನೆ ಈಗಿನ್ನು
ಎಲ್ಲವರು ಕೂಡು ಕೇಳುತಾನಿಯೋ ತಾನ |ತಂದಾನ|
ಎಲ್ಲವರು ಕೂಡು ಕೇಳುವಂಗೆ ಈಗಿನ್ನು
ಹನುಮಂತ ತಾನೇ ಬಂದನಾಲಾ ತಾನ |ತಂದಾನ|
ತಾನೂವಿಗೊಂದೆ ಹೋಗುತೆಂಬ ವೀಗಿನ್ನು
ಸೀತಿ ಕಂಡೊಂದೆ ಬರುತೆಂಬಾ ತಾನ |ತಂದಾನ|
ತಾನೂ ಈಗೊಂದೆ ಹೋಗುತೆಂಬಾ ವೀಗಿನ್ನು
ಲಂಕಾ ಪಟ್ನಾಕೂ ಹೋಗುತೆಂಬಾ ತಾನ |ತಂದಾನ|
ಲಂಕಾ ಪಟ್ನಾಕೂ ಹೋಗುತೆಂಬಾ ಈಗಿನ್ನು
ಸೀತಿ ಕಂಡು ನಾನೇ ಬರುತೆಂಬಾ ತಾನ |ತಂದಾನ|
ಲಾಗೂ ಹನುಮಂತಲಿರುವವನು ವೀಗಿನ್ನು
ರಾಮನ ಕೂಡ ಕೂಡಿ ಕೇಳಿದನಾ ತಾನ |ತಂದಾನ|
ರಾಮನ ಕೂಡ ಕೂಡಿ ಕೇಳಿದನು ಈಗಿನ್ನು
ಲಂಕಾ ಪಟ್ನಾಕೂ ಹೋಗುವನಾ ತಾನ |ತಂದಾನ|
ಲಂಕಾ ಪಟ್ನಾಕೂ ಹೋಗತಾನೆಯೋ ಈಗಿನ್ನು
ಎಳು ಸಮುದುರ ದಾಟನ್ಯಾಲಾ ತಾನ |ತಂದಾನ|
ಏಳು ಸಮುದುರ ದಾಟನ್ಯಾಲು ಈಗಿನ್ನು
ಕುಡಿಯೋ ಲಂಕಾ ಪಟ್ನಾವಲ್ಲಾ ತಾನ |ತಂದಾನ|
ಅಲ್ಲೂವಿಗೊಂದೆ ಹೋದನಾಲ ವೀಗಿನ್ನು
ಲಂಕಾ ಪಟ್ನಕ್ಕೆ ಮಟ್ಟನ್ಯಾಲಾ ತಾನ |ತಂದಾನ|
ಅಲ್ಲೊಬ್ಬವೀಗೂಲಿರುವವನು ಈಗಿನ್ನು
ಕುಂಬಕಾರಣ ಎಂಬವುನೂ ತಾನ |ತಂದಾನ|
ಕುಂಬಕಾರಣ ಎಂಬವುನು ಈಗಿನ್ನು
ಅವನಿಗೂವೀಗು ಇರುವುದಾಲಾ ತಾನ |ತಂದಾನ|
ಆರು ತಿಂಗಳು ನಿದ್ದೆರಾಲ ವೀಗಿನ್ನು
ಆರು ತಿಂಗಳು ಲೆಚ್ಚರಾಲಾ ತಾನ |ತಂದಾನ|
ಲಾವನಿಗೆ ನಿದ್ದಿರೀನೆ ಬಿದ್ದದಾವ ವೀಗಿನ್ನು
ಹನುಮಂತುವೀಗೂ ಕಂಡನಲಾ ತಾನ |ತಂದಾನ|
ಹನುಮಂತವೀಗೂ ಹೋಗಿದುನು ವೀಗಿನ್ನು
ಅಲ್ಲೂವಿಗೊಂದೆ ಕಂಡನಾಲಾ ತಾನ |ತಂದಾನ|
ಅಲ್ಲೂವಿಗೊಂದೆ ಕಂಡಿದುನು ಈಗಿನ್ನು
ಅವನಿಗೊಂದೇ ಬಂದನ್ಯಾಲಾ ತಾನ |ತಂದಾನ|
ನಿದ್ದೀರಿ ಬಂದೊಂದೆ ಗೊರಿತಾನಿಯೋ ವೀಗಿನ್ನು
ಅವನು ಸುಸುರೊಂದೆ ಬುಟ್ಟೊಲ್ಲಾ ತಾನ |ತಂದಾನ|
ಒಂದು ಗಜಗೊಂಬೆ ನಿಲ್ಲಿಸಿದರೆ ವೀಗಿನ್ನು
ಗಜ ಗೊಂಬೆಗೂ ಒಂದು ಹೊಡಿತದಿಯೋ ತಾನ |ತಂದಾನ|
ಲವನ ಶ್ವಾಸೊಂದೆ ಹೊಡಿತದಿಯೋ ವೀಗಿನ್ನು
ಹನುಮಂತ ಅಲ್ಲಿ ಹ್ವಾದಾನಾಲಾ ತಾನ |ತಂದಾನ|
ಹನುಮಂತ ಅಲ್ಲಿ ಹೋಗಿದನೋ ಈಗಿನ್ನೂ
ಅಲ್ಲೂ ಅರಿಕೊಂಡೆ ಕಂಡನಲ್ಲಾ ತಾನ |ತಂದಾನ|
ಅಲ್ಲೂ ಅರಿಕೊಂಡೆ ಕಾಣುವಂಗೇ ವೀಗಿನ್ನು
ಅವನ ಉಸುರೊಂದೆ ಉಳಿತಾನಿಯಾ ತಾನ |ತಂದಾನ|
ಅವನ ಉಸುರೊಂದೆ ಉಳಿತದಿಯೊ ವೀಗಿನ್ನು
ಮಾಗಿನೊಳಗೊಂದೆ ಹೋಗಬೇಕಾ ತಾನ |ತಂದಾನ|
ಮಾಗಿನೊಳಗೊಂದೆ ಹೋಗಬಿಟ್ಟ ಈಗಿನ್ನು
ಹೊರಗು ಬರುವಾಗ ಆಗೋದಿಲ್ಲಾ ತಾನ |ತಂದಾನ|
ಒಂದು ಗಜಗೊಂಬೆ ಹೊಡಿತಾನಿಯೊ ಈಗಿನ್ನು
ಹಿಂದೆ ಮೂಗಿನೊಳಗೆ ಹೋಗುತಾನಿಯೋ ತಾನ |ತಂದಾನ|
ಹಿಂದೆ ಮೂಗಿನೊಳಗೆ ಹೋಗುತಾನಿಯೋ ಈಗಿನ್ನು
ಹನುಮಂತಾವಿಗೂ ಸೋತನಲ್ಲಾ ತಾನ |ತಂದಾನ|
ಹನುಮಂತಾವಿಗೂ ಸೋತಿದನು ಈಗಿನ್ನು
ಅಯ್ಯೋ ರಾಮಸ್ವಾಮಿ ಅಂದನಾಲಾ ತಾನ |ತಂದಾನ|
ರಾಮನ ಗ್ಯಾನಾನೇ ಮಾಡಿದನು ವೀಗಿನ್ನು
ರಾಮಸ್ವಾಮಿನೇ ನೆನೆದಿದುನಾ ತಾನ |ತಂದಾನ|
ರಾಮಸ್ವಾಮಿನೇ ನೆನದಿದುನು ಈಗಿನ್ನು
ದೊಡ್ಡ ಬರಿಯಾಗಿ ಬೆಳೆದುಬಿಟ್ಟ ತಾನ |ತಂದಾನ|
ಕುಂಬಕಾರಣನು ಎಂಬುವನೂ ಈಗಿನ್ನು
ಮೂಗಿನಲು ಕಸವೊಂದೇ ಸಿಕ್ಕುದಂಗಾ ತಾನ |ತಂದಾನ|
ಒಂದೆ ಸರಿಗೂ ಸೀನಿದನೂ ಈಗಿನ್ನು
ಹನುಮಂತ ಹೋಗು ಬಿದ್ದನಾಲೋ ತಾನ |ತಂದಾನ|
ಹನುಮಂತ ಹೋಗು ಬಿದ್ದುನಲ್ಲೋ ಈಗಿನ್ನು
ಹನ್ನೆರಡು ಮುಡಿಗದ್ದೆ ತಲೆಗಡುಗೇ ತಾನ |ತಂದಾನ|
ಹನ್ನೆರಡು ಮುಡಿಗದ್ದೆ ತಲೆಗಡುಗೇ ಈಗಿನ್ನು
ಅಲ್ಲೋಗೂತಾನೆ ಬಿದ್ದುನ್ಯಾಲ್ಲೋ ತಾನ |ತಂದಾನ|
ಅಯ್ಯ ರಾಮಸ್ವಾಮಿ ಎಂದವನೇ ಈಗಿನ್ನು
ಇಂದಿಗೂ ನಾನು ತಪ್ಪನ್ಯಾಲಾ ತಾನ |ತಂದಾನ|
ಮುಂದೆ ಹ್ಯಾಂಗೊಂದೆ ಹೋಗಲೆಂಬ ವೀಗಿನ್ನು
ಹನುಮಂತವೀಗೂ ಹೇಳುತಾನಿಯೋ ತಾನ |ತಂದಾನ|
ಹನುಮಂತವೀಗೂ ಹೇಳುತಾನೇ ಈಗಿನ್ನು
ಮುಂದೆ ಮುಂದೊಂದೆ ಹೋಗುವಾಂಗಾ ತಾನ |ತಂದಾನ|
ಅಲ್ಲೊಬ್ಬವೀಗು ಸಿಕ್ಕನಲ್ಲೋ ಈಗಿನ್ನು
ಒಬ್ಬ ರಾಕಸಲಿರುವನಾಲಾ ತಾನ |ತಂದಾನ|
ಲವನುಕೂಡೊಂದೆ ಕೇಳುತಾನಿಯೋ ವೀಗಿನ್ನು
ಕುಡಿಯೋ ಲಂಕಾಮ ಪಟ್ನಾವಂಗಾ ತಾನ |ತಂದಾನ|
ಎಲ್ಲೂವಿಗೊಂದೆ ಲಾಯ್ತನೇ ವೀಗಿನ್ನು
ಯಾವುದಾರೀಲೀ ಹೋಗಬೇಕಾ ತಾನ |ತಂದಾನ|
ಲಾಗು ತಾನೀಗು ಹೇಳುತಾವನೆ ಈಗಿನ್ನು
ನನ್ನ ಹೋಗಲೊಂದೆ ಹತ್ತುವಾಲಾ ತಾನ |ತಂದಾನ|
ಹನುಮಂತಲಲ್ಲಿ ಕಂಡಿದುನು ವೀಗಿನ್ನು
ಲಂಕಾ ಪಟ್ನಾನೆ ತೋರಿಸಿದರೋ ತಾನ |ತಂದಾನ|
ಒಂದು ಸಾರಿ ಹಾರಿ ಎದ್ದಿದುನೋ ಈಗಿನ್ನು
ಆಕಾಸುವೀಗೂ ಇರುವನಾಲಾ ತಾನ |ತಂದಾನ|
ಮಣ್ಣೊಳು ಹುಗಿದು ಹೋಗುದನೋ ವೀಗಿನ್ನು
ಹನುಮಂತ ಹಾರಿ ಹೋದನ್ಯಾಲೋ ತಾನ |ತಂದಾನ|
ಎಲ್ಲಿ ಈಗೊಂದೆ ಹೋಗಿದನೋ ವೀಗಿನ್ನು
ಮಟ್ಟಿ ಮಾವಿನ ತಪ್ಪಲಾದಾಗ ತಾನ |ತಂದಾನ|
ಮಟ್ಟಿ ಮಾವಿನ ತಪ್ಪಲಾದಲ್ಲೂ ವೀಗಿನ್ನು
ಅಲ್ಲೂವಿಗೊಂದೆ ಕಂಡಿದುನು ತಾನ |ತಂದಾನ|
ಅಲ್ಲೂವಿಗೊಂದೆ ಕಂಡಿದುನು ವೀಗಿನ್ನು
ಹನುಮಂತ ತಾನೆ ಕಂಡಿದನು ತಾನ |ತಂದಾನ|
ಹನುಮಂತವೀಗೂ ಕಂಡಿದನು ಈಗಿನ್ನು
ರಾಮನು ಮುದ್ದುರಿಯೆ ಉಂಗುರವಾ ತಾನ |ತಂದಾನ|
ರಾಮನ ಮುದ್ದುರಿಯ ಉಂಗಾರವಾ ಈಗಿನ್ನು
ಸೀತಿಗೂ ತಾನೊಂದೆ ಕೊಟ್ಟಿನಾಲಾ ತಾನ |ತಂದಾನ|
ಸೀತಿ ತಾನೀಗೂ ಕಂಡಿದುಳು ವೀಗಿನ್ನು
ಗಂಡುನು ಮುದ್ದುರಿಯ ಕಂಡಿದಾಳಾ ತಾನ |ತಂದಾನ|
ಗಂಡುನು ಮುದ್ದುರಿಯನೆ ಕಂಡಿದಾಳು ಈಗಿನ್ನು
ಕೇಳು ಹನುಮಂತ ನೀನಾಲಾ ತಾನ |ತಂದಾನ|
ಇಲ್ಲಿಗೂ ನಿನೆಂಗೆ ಬಂದಿಯಾನು ವೀಗಿನ್ನು
ಯಾವೂ ರೀತಿಯಲ್ಲೋ ಬಂದಿಯೇನಾ ತಾನ |ತಂದಾನ|
ಇಲ್ಲೂವಿಗೊಂದೆ ಇರುವರಾಲ ವೀಗಿನ್ನು
ರಾಕಾಸುರ ಪಡೀನೇ ಇರುವುದಲ್ಲಾ ತಾನ |ತಂದಾನ|
ರಾಕಾಸುರ ಪಡೀನೇ ಇರುವುದಲ್ಲೋ ಈಗಿನ್ನು
ನಿನ್ನಾ ಈಗೊಂದೆ ಕಂಡಿದುರೆ ತಾನ |ತಂದಾನ|
ನಿನ್ನಾ ಈಗೊಂದೆ ಕಂಡಿದುರು ಈಗಿನ್ನು
ನಿನ್ನಾ ಈಗೊಂದೆ ಇಡುವುದಿಲ ತಾನ |ತಂದಾನ|
ನಿನ್ನಾ ಈಗೊಂದೆ ಇಡುವುದಿಲ್ಲಾ ವೀಗಿನ್ನು
ಅವರು ಕಣ್ಣೀಗೂ ಬೀಳುಬೇಡಾ ತಾನ |ತಂದಾನ|
ಈಗೂ ನೀನೊಂದೆ ತಿನುವಾಲಾ ತಾನ |ತಂದಾನ|
ಮಾವಿನ ಹಣ್ಣೊಂದೆ ತಿನಬೇಕು ವೀಗಿನ್ನು
ಬೇಕಾದಷ್ಟು ನೀನೆ ತಿನುವಾಲಾ ತಾನ |ತಂದಾನ|
ನೀನು ಹಾಳೊಂದೆ ಮಾಡಬೇಡ ವೀಗಿನ್ನು
ಘಿಂದುಕೊಂಡು ನೀನೆ ಹೋಗುವಾಲಾ ತಾನ |ತಂದಾನ|
ಘಿಂದುಕೊಂಡು ನೀನೆ ಹೇಳಬೇಕು ವೀಗಿನ್ನು
ರಾಮಗೂ ಹೋಗು ನೀನೆ ಹೇಳಬೇಕಾ ತಾನ |ತಂದಾನ|
ರಾಮಗೂ ಸುದ್ದೀನೆ ಹೇಳುಬೇಕಾ ವೀಗಿನ್ನು
ನಾನು ಇಲ್ಲೊಂದೆ ಅವೆಳೆಯಂದಾ ತಾನ |ತಂದಾನ|
ಲಟ್ಟು ಮಾತೊಂದೆ ಹೇಳಿದಳು ವೀಗಿನ್ನು
ರಾಮನು ಸೀತೀನೇ ಎಂಬುವಳಾ ತಾನ |ತಂದಾನ|
ರಾಮನು ಸೀತೀನೇ ಎಂಬುವಳು ವೀಗಿನ್ನು
ಹನುಮಂತನು ಕೂಡ ನುಡಿದಳ್ಯಾನಾ ತಾನ |ತಂದಾನ|
ಹನುಮಂತವೀಗು ಹಾರಿದನು ವೀಗಿನ್ನು
ಎಲ್ಲೀಗಿಗೊಂದೆ ಹಾರಿದಾನಾ ತಾನ |ತಂದಾನ|
ಎಲ್ಲೀಗಿಗೊಂದೆ ಹಾರಿದಾನಾ ಈಗಿನ್ನು
ಮಟ್ಟು ಮಾವಿನ ತಪ್ಪಲದಲ್ಲೋ ತಾನ |ತಂದಾನ|
ಮಟ್ಟು ಮಾವಿನ ತಪ್ಪಲದಲ್ಲಿ ಈಗಿನ್ನು