ಲಾಗೂ ರವಣಾನೇ ಇರುವವನು ಈಗಿನ್ನು
ಅವನಾವಿಗೊಂದೆ ಲಿರುವವನಾ ತಾನ |ತಂದಾನ|
ಮಟ್ಟ ಮಾವೀನ ತಪ್ಲದಲ್ಲೂ ವೀಗಿನ್ನು
ಅಲ್ಲೊಂದು ಕ್ಷೇತ್ರ ಕಟ್ಟಿಸಿದುನಾ ತಾನ |ತಂದಾನ|
ಸೀತೀ ಅಲ್ಲೊಂದು ಇಟ್ಟನಲ್ಲೋ ವೀಗಿನ್ನು
ದುರುಮೂತಿ ತುರುದು ಅಲ್ಲಾಲಾ ತಾನ |ತಂದಾನ|
ದುರುಮೂತಿ ತುರುದು ಅಲ್ಲಾಲ ವೀಗಿನ್ನು
ಘಿಂಬಟ್ಟು ಆಹಾರ ತುಂಬಿದನೂ ತಾನ |ತಂದಾನ|
ಅಲ್ಲೂವಿಗೊಂದೆ ಇರುವುನಲ್ಲ ವೀಗಿನ್ನು
ರಾಮುನು ಸೀತೀನ ಇಡುವಲ್ಲಾ ತಾನ |ತಂದಾನ|
ರಾಮುನು ಸೀತೀನೇ ಉಳುವಳು ವೀಗಿನ್ನು
ರಾಮ ಲಕ್ಷುಮಣ ಇಲ್ಲಾಲಾ ತಾನ |ತಂದಾನ|
ರಾಮಲಕ್ಷುಮಣ ಇರುವವರು ಈಗಿನ್ನು
ಕಾಡಿನಲ್ಲಿಗೂ ಇರುವವರಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನಿಕೇಳೋ ಈಗಿನ್ನು
ಇಲ್ಲಿಗೂ ನಿನ್ಯಾಕೋ ಬಂದಿಯೇನೋ ತಾನ |ತಂದಾನ|
ಇಲ್ಲಿಗೂ ನಿನ್ಯಾಕೋ ಬಂದಿಯೇನಾ ಈಗಿನ್ನು
ಸೀತಿಗೂ ಬಿಟ್ಟೀಗ ಬಂದಿಯೇನಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ನಿಕೇಳೊ ಈಗಿನ್ನು
ನಿನ್ನ ಸೀತೀನೆ ಎಂಬುವಳ ತಾನ |ತಂದಾನ|
ನಿನ್ನ ಸೀತೀನೆ ಎಂಬುವಳು ಈಗಿನ್ನು
ನನ್ನಾ ನೀನೊಂದೆ ಕರದಿಯೇನೂ ತಾನ |ತಂದಾನ|
ನನ್ನಾ ನೀನೀಗ ಕರ್ದಿಯೆಂದು ವೀಗಿನ್ನು
ನನ್ನ ಕೂಡುವೀಗೂ ಹೋಗಬೇಕಾ ತಾನ |ತಂದಾನ|
ನನ್ನಾ ಕೂಡುವೀಗೂ ಹೋಗಬೇಕಾವೆಂದಿದಳು
ರಾಮಗೂ ಕಷ್ಟೊಂದೆ ಬಂದದಾಲ ತಾನ |ತಂದಾನ|
ರಾಮಗೂ ಕಷ್ಟೊಂದೆ ಬಂದದಾಲ ವೀಗಿನ್ನು
ಲಚಮಣ್ಣ ಲಚಮಣ್ಣ ಅಂದರಾಲಾ ತಾನ |ತಂದಾನ|
ಅಂದ್ಹೇಳು ಅವಳೀಗ ಹೇಳಿದಳು ವೀಗಿನ್ನು
ನಾನು ಉತ್ತರನೇ ಕೊಟ್ಟಿದನೋ ತಾನ |ತಂದಾನ|
ನನ್ನಣ್ಣ ರಾಮಸ್ವಾಮಿ ಎಂಬುವನು ವೀಗಿನ್ನು
ಯಾರಿಂದು ಕಷ್ಟಬರುವುದಿಲ್ಲಾ ತಾನ |ತಂದಾನ|
ಯಾರಿಂದು ಕಷ್ಟಬರುವುದಿಲ್ಲಾ ಎಂದಿದೆ
ನಾನು ಈಗೊಂದೆ ಹೋಗುದಿಲ್ಲಾ ತಾನ |ತಂದಾನ|
ಅಂದ್ಹೇಳು ನಾನೀಗ ಹೇಳಿದರೂ ವೀಗಿನ್ನು
ನಿನ್ನಾ ಸೀತೀನೆ ಕೇಳುಲಿಲ್ಲಾ ತಾನ |ತಂದಾನ|
ನಿನ್ನಾ ಸೀತೀನೇ ಕೇಳುಲಿಲ್ಲಾ ವೀಗಿನ್ನು
ರಾಮಾ ಸತ್ತರೂ ಸಾಯಲಿ ಎಂದೂ ತಾನ |ತಂದಾನ|
ರಾಮಾ ಸತ್ತರೂ ಸಾಯಲಿ ಎಂದು ವೀಗಿನ್ನು
ನನ್ನಾ ನೀನೇನೂ ಆಳುಬೇಕಾ ಎಂದಾಳು ತಾನ |ತಂದಾನ|
ನನ್ನಾ ನೀನೇನೂ ಆಳುಬೇಕಾ ಎಂದೇಳಿ ಈಗಿನ್ನು
ಆಳುವ ಮನಸು ನಿನುಗೇನಾ ತಾನ |ತಂದಾನ|
ಅಂದಳು ನನಗೀಗ ಜರಿದಿದುಳು ಈಗಿನ್ನು
ಇನಸಟ್ಟು ನನಗೆ ಮಾಡಲಾಳಾ ತಾನ |ತಂದಾನ|
ನಾನುವೀಗೊಂದೆ ಕೇಳಿದುನು ವೀಗಿನ್ನು
ನಿನ್ನಾ ಹುಡುಕುತ್ತಾ ಬಂದಿಯೆಂಬಾ ತಾನ |ತಂದಾನ|
ಅಣ್ಣನ ಕೂಡೊಂದು ನುಡಿದಿದನು ವೀಗಿನ್ನು
ಅಟ್ಟು ಮಾತೊಂದೆ ಹೇಳಿದನಾ ತಾನ |ತಂದಾನ|
ಅಟ್ಟು ಮಾತೊಂದೆ ಹೇಳಿದನಾ ವೀಗಿನ್ನು
ಅಣ್ಣಾ ತಮ್ಮೆಡು ಜನವಾಲಾ ತಾನ |ತಂದಾನ|
ಹಿಂದು ತಿರುಗವರು ಬರುವಾಗಾ ತಾನ |ತಂದಾನ|
ಹಿಂದೆ ತಿರುಗವರು ಬಂದಿದರು ಈಗಿನ್ನು
ಎಲ್ಲಿಗೂ ಅವರೆ ಬಂದರಾಲಾ ತಾನ |ತಂದಾನ|
ಎಲ್ಲಿಗೂ ಅವರೆ ಬಂದಿದರು ವೀಗಿನ್ನು
ಗೋರು ಅರಣ್ಯ ಅಲ್ಲಾಲಾ ತಾನ |ತಂದಾನ|
ಗೋರು ಅರಣ್ಯ ಅಲ್ಲಾಲಾ ಈಗಿನ್ನು
ಸೊಪ್ಪಿನ ತುಂಡಿಯಲರಮನೆಯಾ ತಾನ |ತಂದಾನ|
ಸೊಪ್ಪಿನ ತುಂಡಿಯಲರಮನೆಗೂ ಈಗಿನ್ನು
ಸೀತಿ ಅರಮನೆಲೂ ಇಲ್ಲಾಲಾ ತಾನ |ತಂದಾನ|
ಸೀತಿ ಅರಮನೆಲೂ ಇಲ್ಲಾಲಾವೀಗಿನ್ನು
ಸೀತಿನೆತ್ತಲ್ಲಿ ಮಣ್ಣಿಲ್ಲಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನೀ ಕೇಳೋ ಈಗಿನ್ನು
ಲಚ್ಚಮಣ್ಣುವೀಗೂ ನನ್ನ ತಮ್ಮಾ ತಾನ |ತಂದಾನ|
ನಮ್ಮ ಸೀತೀನೆ ಕಳಕೊಂಡು ಈಗಿನ್ನು
ಯಾವ ದಾರೀಲಿ ಹೋಗಲೇಳಾ ತಾನ |ತಂದಾನ|
ಯಾವ ದಾರೀಲೆ ಹೋಗಲೇಳಾ ವೀಗಿನ್ನು
ಅವುರುವೀಗೊಂದೆ ಹುಡುಕುತಾರ ತಾನ |ತಂದಾನ|
ಮತ್ಯಾರು ಮಾಯ ಅಲ್ವಾಲೋ ವೀಗಿನ್ನು
ಇಲ್ಲೂ ರಾಕಸರು ಮಾಯಾಲಾ ತಾನ |ತಂದಾನ|
ಇಲ್ಲೂ ರಾಕಸರು ಮಾಯಾಲಾ ವೀಗಿನ್ನು
ಮಾಯಾ ಮಾಡವರೆ ಹೋದರಾಳಾ ತಾನ |ತಂದಾನ|
ಅಣ್ಣ ತಮ್ಮೇಡು ಜನವಾಲು ಈಗಿನ್ನು
ರಾಮಾಲಚ್ಚುಮಣ್ಣ ಎಂಬುವುರಾ ತಾನ |ತಂದಾನ|
ರಾಮಲಚ್ಚುಮಣ್ಣ ಎಂಬುವುರು ವೀಗಿನ್ನು
ತಾವುವಿಗೊಂದೆ ಹೋಗುತಾರಿಯಾ ತಾನ |ತಂದಾನ|
ದಾರಿ ಹಿಡುದವರೆ ಹೋಗುತಾರೆ ಈಗಿನ್ನು
ಮುಂದು ಮುಂದೊಂದೆ ಹೋಗುವಾಗ ತಾನ |ತಂದಾನ|
ಮುಂದು ಮುಂದೊಂದೆ ಹೋಗುವರು ಈಗಿನ್ನು
ಅಲ್ಲೂ ಮುಂದೊಂದೆ ಹೋಗುವಾಗ ತಾನ |ತಂದಾನ|
ಅಲ್ಲೂ ಮುಂದೊಂದೆ ಹೋಗುವಂಗು ಈಗಿನ್ನು
ರಾಮನು ಕಿಮಿಗೊಂದೆ ಕೇಳುತದೆಯೋ ತಾನ |ತಂದಾನ|
ರಾಮನು ಕಿಮಿಗೊಂದೆ ಕೇಳುತದೆಯೋ ವೀಗಿನ್ನು
ರಾಮಾ ರಾಮಾನೆಲೆನುತದೆಯೋ ತಾನ |ತಂದಾನ|
ರಾಮಾ ರಾಮಾನೆಲೆನುತದೆಯೋ ವೀಗಿನ್ನು
ರಾಮನೂ ಸರನೇನೆ ಮಾಡುತದೆಯೋ ತಾನ |ತಂದಾನ|
ರಾಮನೂ ಸರನೇನೆ ಕೇಳುತದೆಯೋ ಈಗಿನ್ನು
ಕೇಳು ಕೇಳು ನನ್ನ ತಮ್ಮ ನಿ ಕೇಳಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನಿ ಕೇಳು ಈಗಿನ್ನು
ಇಂತಾ ಮದ್ದಿನ ಕಾಡಿನಲ್ಲೋ ತಾನ |ತಂದಾನ|
ಗೋರು ಅರಣ್ಯ ಅಲ್ಲಾಲ ವೀಗಿನ್ನು
ನಮ್ಮ ಸರನೇನ ಮಾಡುವವರಾ ತಾನ |ತಂದಾನ|
ನಮ್ಮ ಸರನೇನ ಮಾಡುವವರು ಈಗಿನ್ನು
ನಮ್ಮ ಯಾರೀಗೂ ಅದರಿಯೇನಾ ತಾನ |ತಂದಾನ|
ನಮ್ಮ ಯಾರೀಗೂ ಅದರಿಯೇನಾ ನನ ತಮ್ಮ
ಇಲ್ಲೋ ಯಾರೀಗೂ ಅದರಿಯೇನಾ ತಾನ |ತಂದಾನ|
ಇಲ್ಲೋ ಯಾರಿಗೂ ಅದರಿಯೇನಾ ನನ್ನ ತಮ್ಮ
ಮತ್ತೂ ಯಾರಿಗೂ ಅಲ್ವಾಲಾ ತಾನ |ತಂದಾನ|
ಮತ್ತೂ ಯಾರಿಗೂ ಅಲ್ವಾಲಾ ನನ್ನ ತಮ್ಮ
ನಮ್ಮಾ ಸೀತೀನೆ ಇರುಬೇಕಾ ತಾನ |ತಂದಾನ|
ನಮ್ಮಾ ಸೀತೀನೆ ಇರುಬೇಕಾ ಈಗಿನ್ನು
ನಮ್ಮಾ ಸರನೇನೆ ಮಾಡುತಾಳಿಯಾ ತಾನ |ತಂದಾನ|
ಎಂದು ತಾನೀಗು ಹೇಳುತಾನಿಯೇ ಈಗಿನ್ನು
ಹೇಳುತಾರೆ ಅವರು ಕೇಳುತಾರೆಯೋ ತಾನ |ತಂದಾನ|
ಹೇಳುತಾರೆ ಅವರು ಕೇಳುತಾರೆಯೋ ಈಗಿನ್ನು
ಅವುರವುರೆ ಆಡುತಾರಿಯೋ ತಾನ |ತಂದಾನ|
ಅವುರವುರೆ ಮಾತು ಆಡುತಾರೆ ಈಗಿನ್ನು
ರಾಮ ಲಚುಮಣ್ಣನೇ ಹೋಗುತಾರಿಯೋ ತಾನ |ತಂದಾನ|
ರಾಮಚಲುಮಣ್ಣನೇ  ಹೋಗುತಾರೆ ವೀಗಿನ್ನು
ಮುಂದೂವೀಗೊಂದೆ ಹೋಗುವಾಂಗಾ ತಾನ |ತಂದಾನ|
ಮುಂದೂವೀಗೊಂದೆ ಹೋಗಿದರು ಈಗಿನ್ನು
ಅಲ್ಲೂವಿಗೊಂದೆ ಕಂಡಿದುರಾ ತಾನ |ತಂದಾನ|
ಅಲ್ಲೂವಿಗೊಂದೆ ಕಂಡಿದುರಾ ಈಗಿನ್ನು
ಜಟಾಯಿ ಪಕುಸಿನೇ ಎಂಬುವುದಾ ತಾನ |ತಂದಾನ|
ಜಟಾಯಿ ಪಕುಸಿನೇ ಇರುವದು ವೀಗಿನ್ನು
ಭೂಮಿ ಮೇಲೊಂದೆ ಬಿದ್ದುಕಂಡೂ ತಾನ |ತಂದಾನ|
ಭೂಮಿ ಮೇಲೊಂದೆ ಬಿದ್ದುಕಂಡು ಈಗಿನ್ನು
ರಾಮ ರಾಮೆಂದು ಹೇಳುತದೆಯೋ ತಾನ |ತಂದಾನ|
ಅಲ್ಲೀಗೂ ರಾಮಸ್ವಾಮಿ ಕಂಡಿದನು ವೀಗಿನ್ನು
ಅಲ್ಲೀಗೂ ತಾನೇ ಹೋಗಿದುನಾ ತಾನ |ತಂದಾನ|
ಅಲ್ಲಿಗೆ ತಾನೇ ಹೋಗಿದನು ಈಗಿನ್ನು
ಜಟಾಯಿ ಪಕುಸಿನೇ ಕೇಳುತವನೆ ತಾನ |ತಂದಾನ|
ಜಟಾಯಿ ಪಕುಸಿನೇ ಕೇಳುತವನೆ ಏನೆಂದು
ಏನಾಯ್ತು ನಿನುಗೆ ಎಂತಾಂಯ್ತೋ ತಾನ |ತಂದಾನ|
ಏನಾಯ್ತು ನಿನುಗೆ ಎಂತಾಯ್ತು ಈಗಿನ್ನು
ಯಾರಿಂದೂ ನಿನ್ನು ಕಷ್ಟ ಬಂತೇನಾ ತಾನ |ತಂದಾನ|
ಯಾರಿಂದು ನಿನ್ನು ಕಷ್ಟ ಬಂತು ವೀಗಿನ್ನು
ನನ್ನು ಕೂಡು ನೀನೆ ಹೇಳಬೇಕಾ ತಾನ |ತಂದಾನ|
ಕೇಳು ಕೇಳು ರಾಮಸ್ವಾಮಿ ನೀನಾಲು ವೀಗಿನ್ನು
ಲಂಕಾ ಪಟ್ನಾದ ರವಣಾನಾ ತಾನ |ತಂದಾನ|
ಲಂಕಾ ಪಟ್ನಾದ ರವಣಾನು ಈಗಿನ್ನು
ನಿನ್ನ ಸೀತೀನೇ ಕದ್ದುಕೊಂಡಾ ತಾನ |ತಂದಾನ|
ಕದ್ದುಕೊಂಡವನೇ ಹೋಗುತೀದಾವೀಗಿನ್ನು
ಬಂದೂನಾನವನ ತಡೆದಿದುನಾ ತಾನ |ತಂದಾನ|
ನಾನು ಬಂದೊಂದೆ ತಡೆದಿದುನುವೀಗಿನ್ನು
ನನ ಕೂಡ ಯುದ್ದಾನೇ ಮಾಡಬೇಕಾ ತಾನ |ತಂದಾನ|
ನನ ಕೂಡ ಯುದ್ದಾನೇ ಮಾಡಬೇಕಾ ಅಂದಿದನು
ನಾನು ಯುದ್ದಾನೇ ಮಾಡಿನಾಲಾ ತಾನ |ತಂದಾನ|
ನಾನು ಯುದ್ದಾನೇ ಮಾಡಿದುನು ವೀಗಿನ್ನು
ಇಬ್ರಿಗೆ ಸೋಲು ಗೆಲವು ಬರಲಿಲ್ಲಾ ತಾನ  |ತಂದಾನ|
ಇಬ್ರಿಗೂ ಸೋಲು ಗೆಲುವು ಬರಲಿಲ್ಲಾ ವೀಗಿನ್ನು
ಸಮನೇ ಸಮವಾಗಿ ಬಂದವಾಲಾ ತಾನ |ತಂದಾನ|
ಇಬ್ರು ಸರಿಸಮನೆ ಆಗಿದ್ವಲ ವೀಗಿನ್ನು
ಕಳ್ಳ ರವಣಾನೆ ಎಂಬುವುನಾ ತಾನ  |ತಂದಾನ|
ಕಳ್ಳ ರವಣಾನೆ ಎಂಬುವನು ಈಗಿನ್ನು
ಸುಳ್ಳು ಮಾತೊಂದೆ ಆಡನ್ಯಾಲಾ ತಾನ  |ತಂದಾನ|
ಸುಳ್ಳು ಮಾತೊಂದೆ ಆಡಿದನು ಈಗಿನ್ನು
ತನ್ನ ಆಯುಸೊಂದೆ ಅದಿಯಂದಾ ತಾನ |ತಂದಾನ|
ಎಡಗಾಲ ಉಂಗುಟು ಜರಿದಿದುರೆ ಈಗಿನ್ನು
ತನ್ನ ಪ್ರಾಣಾನೇ ಹೋಗ್ತದೆಂದಾ ತಾನ  |ತಂದಾನ|
ನಾನುವೀಗೊಂದೆ ಹೇಳಿನಾಲಾವೀಗಿನ್ನು
ಸತ್ಯವಿಗೊಂದೇ ಹೇಳಿನಾಲಾ ತಾನ |ತಂದಾನ|
ಸತ್ಯವಿಗೊಂದೇ ಹೇಳಿದೆನು ಈಗಿನ್ನು
ನನ್ನ ರೆಕ್ಕೇನ ಕಡುದಿದುನಾ ತಾನ |ತಂದಾನ|
ತನ್ನ ಪ್ರಾಣಾನೇ ಹೋಗುತದೆಯೋಲೆಂದೀಗ
ಅಂದು ನಾನೀಗೂ ಹೇಳಿನಾಲಾ ತಾನ  |ತಂದಾನ|
ನಾನುವೀಗೊಂದೆ ಹೋಗಿನಾಲು ವೀಗಿನ್ನು
ಎಡುಗಾಲ ಉಂಗುಟು ಜರುದಿದನಾ ತಾನ  |ತಂದಾನ|
ಎಡುಗಾಲು ಉಂಗಿಟು ಜರುದಿದನು ವೀಗಿನ್ನು
ಕಳ್ಳ ರವಣಾನೇ ಸಾಯಲಿಲ್ಲಾ ತಾನ  |ತಂದಾನ|
ಲಾಗೂ ಅವನಿಗೂ ಕಡಿದಿದನು ವೀಗಿನ್ನು
ನನ್ನ ರಕ್ಕೇನೆ ಕಡುದಿದುನಾ ತಾನ  |ತಂದಾನ|
ನನ್ನ ರಕ್ಕೇನೆ ಕಡುದಿದುನಾ ವೀಗಿನ್ನು
ನಿನ್ನಾ ಸೀತೀನೇ ಎಂಬುವಳಾ ತಾನ  |ತಂದಾನ|
ನಿನ್ನಾ ಸೀತೀನೇ ಎಂಬುವಳಾ ಈಗಿನ್ನು
ನನಗೊಂದು ವರವ ಕೊಟ್ಟಲಾಳಾ ತಾನ  |ತಂದಾನ|
ನನಗೊಂದು ವರವ ಕೊಟ್ಟವಳೆ ಏನೆಂದು
ರಾಮಸ್ವಾಮಿನೆ ಬರುವರಿಗೂ ತಾನ  |ತಂದಾನ|
ರಾಮಸ್ವಾಮಿನೆ ಬರುವವರಿಗೂ ಈಗಿನ್ನು
ಇಲ್ಲಿಗೂ ಅವನೊಂದೆ ಬರಬೇಕಾ ತಾನ |ತಂದಾನ|
ಇಲ್ಲಿಗೂ ಅವನೊಂದೆ ಬರಬೇಕಾ ಈಗಿನ್ನು
ಇಲ್ಲಿ ನಡೆದಂತಾ ಸಂಗ್ತಿಯಾಲಾ ತಾನ |ತಂದಾನ|
ಇಲ್ಲಿಗೂ ಅವನೊಂದೆ ಬರಬೇಕು ಈಗಿನ್ನು
ಇಲ್ಲಿ ನಡೆದಂತಾ ಸಂಗ್ತಿಯಾಲಾ ತಾನ |ತಂದಾನ|
ಇಲ್ಲಿ ನಡೆದಂತಾ ಸಂಗ್ತಿಯಾಲಾ ಈಗಿನ್ನು
ರಾಮಸ್ವಾಮಿಗೂ ಹೇಳುಬೇಕಾ ತಾನ |ತಂದಾನ|
ರಾಮಸ್ವಾಮಿಗೂ ಹೇಳುಬೇಕಾ ಈಗಿನ್ನು
ಅಲ್ಲೇರಿಗೂ ನಿನ್ನ ಪ್ರಾಣ ಹೋಗಬಾರಾ ತಾನ |ತಂದಾನ|
ಅಲ್ಲೇರಿಗೂ ನಿನ್ನ ಪ್ರಾಣ ಹೋಗುಬಾರಾಲೆಂದ್ಹೇಳಿ
ಅಂದ್ಹೇಳಿ ವರವೊಂದೆ ಕೊಟ್ಟಲಾಳಾ ತಾನ |ತಂದಾನ|
ಆಗೂತಾನೀಗೂ ಇರುವುದಾಲಾ ವೀಗಿನ್ನು
ಜಟಾಯಿ ಪಕುಸಿನೇ ಎಂಬುದಾಲಾ ತಾನ |ತಂದಾನ|
ಜಟಾಯಿ ಪಕುಸಿನೇ ಎಂಬುವುದು ವೀಗಿನ್ನು
ರಾಮಾ ರಾಮಾನೇ ಅಂದುದಲ್ಲಾ ತಾನ |ತಂದಾನ|
ರಾಮ ರಮಾಂದೇ ನುಡುದದೆಯೋ ಈಗಿನ್ನು
ಅಲ್ಲೇ ಪ್ರಾಣಾನೇ ಬಿಟ್ಟಿದಲ್ಲಾ ತಾನ |ತಂದಾನ|
ಅಲ್ಲೇ ಪ್ರಾಣಾನೇ ಬಿಟ್ಟಿದಲ್ಲಾ ಈಗಿನ್ನು
ರಾಮಸ್ವಾಮಿನೇ ಎಂಬನಾಲಾ ತಾನ |ತಂದಾನ|
ರಾಮಸ್ವಾಮಿನೇ ಎಂಬುವನೇ ಈಗಿನ್ನು
ಜಟಾಯಿ ಪಕುಸಿನೇ ಹಿಡಿದನಾಲಾ ತಾನ |ತಂದಾನ|
ಜಟಾಯಿ ಪಕುಸಿನೇ ಹಿಡುದು ವೀಗಿನ್ನು
ಅಂಗೈ ಮ್ಯಾಲನ ಬೂದಿ ಮಾಡ್ಯಾನಾಲಾ ತಾನ |ತಂದಾನ|
ಅದರು ಜೀವಾನೇ ಮಾಡ್ಯದನು ಈಗಿನ್ನು
ಒಂದು ಹದ್ದೊಂದೆ ಮಾಡ್ಯಾನಾಲಾ ತಾನ |ತಂದಾನ|
ಪುನು ಜಲಮಾನೆ ಕೊಟ್ಟನಲ್ಲೋ ಈಗಿನ್ನು
ನೀನೂವಿಗೊಂದೆ ತಿನುಬೇಕಾ ತಾನ |ತಂದಾನ|
ನೀನೂವಿಗೊಂದೆ ತಿನುಬೇಕು ಈಗಿನ್ನು
ಸತ್ತಾ ಪ್ರಾಣಿನೇ ತಿಂದುಕೊಂಡಾ ತಾನ |ತಂದಾನ|
ನೀನಿವಿಗೊಂದೆ ಉಳಿಬೇಕು ಈಗಿನ್ನು
ರಾಮಸ್ವಾಮಿನೆ ಎಂಬವನಾ ತಾನ |ತಂದಾನ|
ರಾಮಸ್ವಾಮಿನೆ ಎಂಬವನಾ ಈಗಿನ್ನು
ಲಾಗುತಾನೀಗೂ ನುಡಿದನ್ಯಾಲಾ ತಾನ |ತಂದಾನ|
ರಾಮಸ್ವಾಮಿನೇ ನುಡಿದಿದನು ಈಗಿನ್ನು
ಲಾಗುತಾನೀಗೂಲಿರುವವರಾ ತಾನ |ತಂದಾನ|
ಲಾಗೂತಾನೀಗೂಲಿರುವವರಾ ಈಗಿನ್ನು
ರಾಮಾಲಚ್ಚುಮಣ್ಣ ಎಂಬುವರಾ ತಾನ |ತಂದಾನ|
ರಾಮಾಲಚ್ಚುಮಣ್ಣ ಎಂಬುವರು ಈಗಿನ್ನು
ಅಣ್ಣತಮ್ಮೇಡು ಜನರಾಲಾ ತಾನ |ತಂದಾನ|
ಅಣ್ಣ ತಮ್ಮೇಡು ಜನರಾಲು ಈಗಿನ್ನು
ಎಲ್ಲೂ ನಾವೊಂದೆ ಹುಡುಕಲೇನಾ ತಾನ |ತಂದಾನ|
ಎಲ್ಲೂ ನಾವೊಂದೆ ಹುಡುಕಲೇನ ಈಗಿನ್ನು
ಯಾವು ದಾರೀಲಿ ಹೋಗಲೇನಾ ತಾನ |ತಂದಾನ|
ಯಾವು ದಾರೀಲಿ ಹೋಗಲೇನು ಈಗಿನ್ನು
ಬಾಳ ದುಃಖಾನೆ ಮಾಡುತಾರೆಯೋ ತಾನ |ತಂದಾನ|
ಬಾಳ ದುಃಖಾನೆ ಮಾಡುತಾರೆ ಈಗಿನ್ನು
ಅವರೂವಿಗೊಂದೆ ಹೋಗುತಾರೆ ತಾನ |ತಂದಾನ|
ಅವರೂವಿಗೊಂದೆ ಹೋಗುತಾರೆ ವೀಗಿನ್ನು
ಮುಂದು ಮುಂದೊಂದೆ ಹೋಗುವವರಾ ತಾನ |ತಂದಾನ|
ಮುಂದು ಮುಂದೊಂದೆ ಹೋಗುವರು ಈಗಿನ್ನು
ದಾರೀಲವರು ಹೋಗುತವರೇ ತಾನ |ತಂದಾನ|
ದಾರೀಲೇ ಅವರು ಹೋಗುವಾಗ ಈಗಿನ್ನು
ದಾರಿಯಲ್ಲವರು ಹೋಗುತಾರಿಯೋ ತಾನ |ತಂದಾನ|
ದಾರಿಯಲ್ಲವರು ಹೋಗುವಾಗೇ ಈಗಿನ್ನು
ಅವರಿಗೂ ಅಲ್ಲೆ ಸಿಕ್ಕುತಾರಿಯೋ ತಾನ |ತಂದಾನ|
ಅಲ್ಲೂವಿಗೊಂದೆ ಸಿಕ್ಕುತಾರಿಯೋ ಈಗಿನ್ನು
ಹನುಮಂತನ ಸೈನ್ಯ ಇರುವುದಲ್ಲಾ ತಾನ |ತಂದಾನ|
ಹನುಮಂತನ ಸೈನ್ಯ ಇರುವುದಲ್ಲಾ ಈಗಿನ್ನು
ಅದರಲ್ಲೂವೀಗೂ ಲಿರುವನಲಾ ತಾನ |ತಂದಾನ|
ಅದರಲ್ಲೂವೀಗೂ ಇರುವುನಲ್ಲ ಈಗಿನ್ನು
ಸುಗ್ರೀವ ತಾನೇ ಇರುವನಲ್ಲಾ ತಾನ |ತಂದಾನ|
ಸುಗ್ರೀವ ತಾನೇ ಇರುವನು ಈಗಿನ್ನು
ಮಂಗನ ಸಂಗಡಲಿರುವವನಲ್ಲಾ ತಾನ |ತಂದಾನ|
ಮಂಗನ ಜೊತೆಯಲ್ಲೇ ಇರುವನಾಲ ಈಗಿನ್ನು
ಕಪಿಗಳು ಸೈನನ ಕೂಡುಕೊಂಡಾ ತಾನ |ತಂದಾನ|
ಕಪಿಗಳು ಸೈನವ ಕೂಡುಕೊಂಡು ವೀಗಿನ್ನು
ಇಲ್ಲೆ ನೀನೀಗು ಉಳಿದಿಯೇನಾ ತಾನ |ತಂದಾನ|
ಇಲ್ಲೆ ನೀನೀಗು ಉಳಿದಿದೇನ ವೀಗಿನ್ನು
ಮನೆಯಿಲ್ಲ ನಿನಗೂ ಮಠವಿಲ್ಲಾ ತಾನ |ತಂದಾನ|
ಮನೆಯಿಲ್ಲ ನಿನಗೂ ಮಠವಿಲ್ಲಾ ವೀಗಿನ್ನು
ಹೆಂಡಿರು ಮಕ್ಕಳು ನಿನಗೀಲ್ಯಾ ತಾನ |ತಂದಾನ|
ಹೆಂಡಿರು ಮಕ್ಕಳು ನಿನಗಿಲ್ಯಾ ವೀಗಿನ್ನು
ಇಲ್ಯಾಕು ನೀನೆ ಉಳಿದಿದೇನಾ ತಾನ |ತಂದಾನ|
ಇಲ್ಯಾಕು ನೀನೆ ಉಳಿದಿದೇನಾ ವೀಗಿನ್ನು
ನಿನ್ನ ಹೆಸರೊಂದೆ ಕೇಳುಬೇಕಾ ತಾನ |ತಂದಾನ|
ನಿನ್ನ ಹೆಸರೊಂದೆ ಕೇಳುಬೇಕು ಈಗಿನ್ನು
ಇಲ್ಲೂ ನೀನ್ಯಾಕೆ ಇದ್ದಿಯೇನಾ ತಾನ |ತಂದಾನ|
ಕೇಳು ಕೇಳು ಸ್ವಾಮಿ ಹೇಳುತೆನಿಯೋ ವೀಗಿನ್ನು
ರಾಮ ಸ್ವಾಮಿನೇ ಕೇಳಬೇಕಾ ತಾನ |ತಂದಾನ|
ರಾಮಸ್ವಾಮಿನೇ ಕೇಳಬೇಕು ವೀಗಿನ್ನು
ನನಗೂವಿಗೊಂದೆ ಅದಿಯಾಲಾ ತಾನ |ತಂದಾನ|
ನನಗೂವಿಗೊಂದೆ ಅದಿಯಾಲೋ ಈಗಿನ್ನು
ಮನೆಯುಂಟು ನನಗೂ ಮಠವುಂಟು ತಾನ |ತಂದಾನ|
ಮನೆಯುಂಟು ನನಗೂ ಮಠವುಂಟು ವೀಗಿನ್ನು
ಇದ್ದುರೂ ನನಗೊಂದೆ ಅದಿಯಾಲ ತಾನ |ತಂದಾನ|
ನಾನುವಿಗೊಂದೆ ಬಂದಿನಾಲ ವೀಗಿನ್ನು
ನನ್ನ ಅಣ್ಣನೆ ಎಂಬುವನಾಲಾ ತಾನ |ತಂದಾನ|
ನನ್ನ ಅಣ್ಣನೆ ಎಂಬುವನು ವೀಗಿನ್ನು
ವಾಲಿಯೆಂಬುವನು ಅವನಾಲಾ ತಾನ |ತಂದಾನ|
ನನ್ನಣ್ಣ ವಾಲಿ ಎಂಬುವನು ವೀಗಿನ್ನು
ನನ್ನಾವಿಗೊಂದು ಬೆರಸವನಾ ತಾನ |ತಂದಾನ|
ಮನೆಯಿಂದ ಹೊರಗೂ ಹಾಕನಲ್ಲೆ ವೀಗಿನ್ನು
ನಾನು ಮನೆಗೆಂದು ಹೋಗಿದುರಾ ತಾನ |ತಂದಾನ|
ನಾನು ಮನೆಗೆಂದು ಹೋಗಿದುರೆ ವೀಗಿನ್ನು
ನನ್ನಾ ಅವನೀಗ ಇಡುವುದಿಲ್ಲಾ ತಾನ |ತಂದಾನ|
ನನ್ನಾ ಅವನೀಗ ಇಡುವುದಿಲ್ಲಾ ವೀಗಿನ್ನು
ನನ್ನ ಹೆಣ್ತೀನೇ ಆಳುಕೊಂಡ ತಾನ |ತಂದಾನ|
ನನ್ನ ಹೇಣ್ತೀನೇ ಆಳುಕೊಂಡು ಈಗಿನ್ನು
ನನ್ನಾ ಅಣ್ಣಾನೇ ಎಂಬುವನಾಲಾ ತಾನ |ತಂದಾನ|
ನನ್ನಾ ಅಣ್ಣಾನೇ ಎಂಬವನಾಲಾ ಈಗಿನ್ನು
ವಾಲಿಯೆಂಬುವನು ಅವನಿಯಾಲಾ ತಾನ |ತಂದಾನ|
ಕೇಳು ಕೇಳು ರಾಮಸ್ವಾಮಿ ನೀ ಕೇಳು ಈಗಿನ್ನು
ನನ್ನ ಮನೆಯೊಂದೆ ಕೊಡಿಸಿದುರಾ ತಾನ |ತಂದಾನ|
ನನ್ನ ಹೆಣ್ತಿ ನನಗೆ ಕೊಡಿಸಿದುರೆ ವೀಗಿನ್ನು
ನಿನ್ನಾ ಜೊತೆಯಲ್ಲೆ ಕಳುವತೀದಾ ತಾನ |ತಂದಾನ|
ನಿನ್ನಾ ಜೊತೆಯಲ್ಲೆ ಕಳುವತೀದೆ ವೀಗಿನ್ನು
ನನ್ನ ಸೈನ್ಯನೇ ಕೊಡುತೀದಾ ತಾನ |ತಂದಾನ|
ನನ್ನ ಸೈನ್ಯನೇ ಕೊಡುತೀದಾ ವೀಗಿನ್ನು
ಹನುಮಂತನ ಸೈನ್ಯ ಕಳುವುತೀದಾ ತಾನ |ತಂದಾನ|
ಹನುಮಂತನ ಸೈನ್ಯ ಕಳುವುತೀದ್ದೆ ವೀಗಿನ್ನು
ನಿನ್ನ ಸೀತೀನ ತರುವಾಕ ತಾನ |ತಂದಾನ|
ನಿನ್ನ ಸೀತೀನ ತರುವದಕೂ ವೀಗಿನ್ನು
ನಾವು ಸಾಯಾನೆ ಮಾಡುತೀದಾ ತಾನ |ತಂದಾನ|
ಅಂದ್ಹೇಳು ತಾನೀಗು ಹೇಳುತಾನಿಯೋ ಈಗಿನ್ನು
ಸುಗ್ರೀವ ತಾನ ಹೇಳುತಾನಿಯೋ ತಾನ |ತಂದಾನ|
ಸುಗ್ರೀವ ತಾನು ಹೇಳುತಾನೀಯೋ ವೀಗಿನ್ನು
ರಾಮುನು ಕೂಡ್ಯೊಂದೆ ನುಡಿತಾನಿಯೊ ತಾನ |ತಂದಾನ|
ರಾಮುನು ಕೂಡ್ಯೊಂದೆ ನುಡಿತಾನಿಯೋ ಈಗಿನ್ನು
ರಾಮಸ್ವಾಮೀ ಎಂಬವನಾ ತಾನ |ತಂದಾನ|
ರಾಮ ಸ್ವಾಮೂ ಎಂಬುವನು ಈಗಿನ್ನು
ತಾನೂವಿಗೊಂದೆ ಕೇಳಿದುನಾ ತಾನ |ತಂದಾನ|
ತಾನೂವಿಗೊಂದೆ ಕೇಳಿದುನಾ ಈಗಿನ್ನು
ಸುಗ್ರೀವನಿಗೂ ಕರಕೊಂಡಾ ತಾನ |ತಂದಾನ|
ಸುಗ್ರೀವನಿಗೂ ಕರಕೊಂಡಾ ಈಗಿನ್ನು
ಎಲ್ಲಿಗೂ ತಾನೀಗು ಹೋಗುನೇಳಾ ತಾನ |ತಂದಾನ|
ಎಲ್ಲಿಗೂ ತಾನೀಗು ಹೋಗುನೇಳಾ ಈಗಿನ್ನು
ವಾಲಿ ಸುಗ್ರೀವನ ಗಡಿಯಾಲ ತಾನ |ತಂದಾನ|
ವಾಲಿ ಸುಗ್ರೀವನ ರಾಜ್ಯಾಲು ವೀಗಿನ್ನು
ಅಲ್ಲಿಗೂ ತಾನೊಂದೆ ಹೋದನಲ್ಲೋ ತಾನ |ತಂದಾನ|
ಅಲ್ಲಿಗೂ ತಾನೀಗ ಹೋಗಿದನು ವೀಗಿನ್ನು
ರಾಮ ಮರೆಯಲ್ಲೂ ನಿತ್ತನಲ್ಲಾ ತಾನ |ತಂದಾನ|