ಆರಣ್ಣೇಕ್ಕೀಗೂ ಹೋಗಬೇಕು ವೀಗಿನ್ನು
ಆರೊರುಷ ಅರಣ್ಣೇ ಕಳಿಬೇಕಾ ತಾನ |ತಂದಾನ|
ಆರೊರುಷ ಅರಣ್ಯಲೆ ಉಳಿಬೇಕು ಈಗಿನ್ನು
ಆರೊರುಷ ಅಜ್ಞಾಸ ಕಳಿಬೇಕಾ ತಾನ |ತಂದಾನ|
ಆರೊರುಷ ಅಜ್ಞಾಸ ಕಳಿಬೇಕು ಈಗಿನ್ನು
ಆರಾರನ್ನೆರಡು ವರುಷಾವಾ ತಾನ |ತಂದಾನ|
ಆರಾರನ್ನೆರಡು ವರುಷಾವಾಲ ವೀಗಿನ್ನು
ವನವಾಸ ಕಳುದಿ ಬರುವರಿಗಾ ತಾನ |ತಂದಾನ|
ವನವಾಸ ಕಳುದಿ ಬರುವರಿಗೆ ಈಗಿನ್ನು
ಬಾರ್ತ ಸಸ್ತ್ರ ಎಂಬುವರಾಲಾ ತಾನ |ತಂದಾನ|
ಅವುರು ಇಬ್ಬರೂ ಆಳುಬೇಕು ತಾನ |ತಂದಾನ|
ಅವುರು ಇಬ್ಬರೂ ಆಳುಬೇಕು ಈಗಿನ್ನು
ರಾಮನು ಪಟ್ಟವೊಂದೇ ಆಳುಬೇಕಾ ತಾನ |ತಂದಾನ|
ಲಂದೇಳಿಗೊಂದೆ ನುಡಿದಾಳಾ ಈಗಿನ್ನು
ಕೈಕಾದೇವಿಯೇ ಎಂಬುವಳಾಲಾ ತಾನ |ತಂದಾನ|
ಕೈಕಾದೇವಿಯೆಂಬ ಮಡದಿಯಾಲೋವೀಗಿನ್ನು
ಲವ್ಳೊಂದೆ ಮಾತು ಕೇಳಿದುಳಾ ತಾನ |ತಂದಾನ|
ದಶರಥು ಮಾರಾಜ ಎಂಬುವುನು ಈಗಿನ್ನು
ಲಾಡಿದು ಮಾತೀಗೂ ಹೂಂ ಇಲ್ಲಾ ತಾನ |ತಂದಾನ|
ಲಾಡಿದು ಮಾತೀಗೂ ಹೂಂ ಇಲ್ಲೆ ಹ್ಹಾಂ ಇಲ್ಲ
ಮಾತಿಗುತ್ತುರಾನೇ ಕೊಡಲಾರವೀಗಿನ್ನು
ಹಣುಕುದು ಮಂಡೇನೆ ನೆಗಲಾರ ತಾನ |ತಂದಾನ|
ಹಣಕುದು ಮಂಡೇನೆ ನೆಗಿಲಾರವೀಗಿನ್ನು
ಹರ ಹರ ಭಗವಂತ ಗೋವಿಂದಾ ತಾನ |ತಂದಾನ|
ಹರ ಹರ ಭಗವಂತ ಗೋವಿಂದಾ ವೀಗಿನ್ನು
ನನ್ನ ಮಾನಾನ ಕಳದಳಲ್ಲಾ ತಾನ |ತಂದಾನ|
ನನ್ನ ಮಾನಾನ ಕಳದಳಲ್ಲೋವೀಗಿನ್ನು
ಏನೂ ಉತ್ತೂರ ಕೊಡುಲಂಬಾ ತಾನ |ತಂದಾನ|
ಬಾಳ ದುಕ್ಕಾನೆ ಮಾಡುತಾನೆಯೇ ಈಗಿನ್ನು
ದಶರಥು ಮರಾಜಾ ಎಂಬುವನಾಲಾ ತಾನ |ತಂದಾನ|
ದಶರಥು ಮಾರಾಜ ಎಂಬವನಾಲಾ ಈಗಿನ್ನು
ಕಣ್ಣೀಲ್ಲಿ ನೀರೇ ತಗಿತಾನೆಯೋ ತಾನ |ತಂದಾನ|
ಕಣ್ಣೀಲಿ ನೀರೇ ತಗಿತಾನೆಯೇ ಈಗಿನ್ನು
ಹಣುಕುದು ಮಂಡೀನೆ ನೆಗಿಲಾರ ತಾನ |ತಂದಾನ|
ಕೇಳು ಕೇಳು ನನ ತಂದೆ ನೀ ಕೇಳೋ ಈಗಿನ್ನು
ನನಗಾಗಿ ದುಕ್ಕಾನೆ ಮಾಡು ಬ್ಯಾಡಾ ತಾನ |ತಂದಾನ|
ನನಗಾಗಿ ದುಕ್ಕಾನೆ ಮಾಡುಬ್ಯಾಡಾ ಈಗಿನ್ನು
ಕಣ್ಣಲ್ಲಿ ನೀರೊಂದೆ ತಗಿಬ್ಯಾಡಾ ತಾನ |ತಂದಾನ|
ನಾವು ಇಬ್ಬೋರು ಇರುವವುರು ಈಗಿನ್ನು
ರಾಮಾ ಲಚ್ಚುಮಣ್ಣ ನಾವಾಲಾ ತಾನ |ತಂದಾನ|
ಆರಣ್ಣೆಕು ನಾವೆ ಹೋಗುತೀದೋ ಈಗಿನ್ನು
ತಮ್ಮಾವರಿಗೆ ಇರುವರಾಲಾ ತಾನ |ತಂದಾನ|
ಲವರಿಗೂ ಪಟ್ಟವೊಂದೆ ಕೊಡಬೇಕುವೀಗಿನ್ನು
ನೀನು ದುಕ್ಕಾನೆ ಮಾಡುಬ್ಯಾಡಾ ತಾನ |ತಂದಾನ|
ಲೆಂದು ರಾಮುಸ್ವಾಮಿ ನುಡಿತನೆಯೋ ಈಗಿನ್ನು
ತಂದಿಕೂಡೊಂದೆ ನುಡಿತನಿಯಾ ತಾನ |ತಂದಾನ|
ಎಷ್ಟುವಿಗೊಂದು ಹೇಳಿದುರೂ ಈಗಿನ್ನು
ಬಾಳಾ ದುಕ್ಕಾನೆ ಮಾಡುತನಿಯೋ ತಾನ |ತಂದಾನ|
ಬಾಳಾ ದುಕ್ಕಾನೆ ಮಾಡುತನಿಯೋ ಈಗಿನ್ನು
ದಶರಥು ಮಾರಾಜ ಎಂಬವನಾಲಾ ತಾನ |ತಂದಾನ|
ರಾಮಾ ಲಚ್ಚುಮಣ್ಣ ಎಂಬುವರು ಈಗಿನ್ನು
ರಾಮಾ ಸ್ವಾಮೀನೆ ಇದ್ದರಾಲಾ ತಾನ |ತಂದಾನ|
ಚಿನ್ನುದು ಕಿರೀಟೊಂದೆ ತೆಗೆದನ್ಯಾಲೋ ಈಗಿನ್ನು
ಚಿನ್ನುದು ಬಳಿಯೊಂದೆ ತೆಗೆದನ್ಯಾಲಾ ತಾನ |ತಂದಾನ|
ರಾಮನು ಕಾಡುಗಿ ಬಿಟ್ಟನ್ಯಾಲೋ ಈಗಿನ್ನು
ಬಿಲ್ಲು ಬಾಣಾನೆ ಹಿಡುದನ್ಯಾಲಾ ತಾನ |ತಂದಾನ|
ಬಿಲ್ಲು ಬಾಣಾನೆ ಹಿಡಿದಿದುರು ಈಗಿನ್ನು
ರಾಮಾ ಲಚ್ಚುಮಣ್ಣ ಎಂಬುವರಾ ತಾನ |ತಂದಾನ|
ರಾಮಾ ಲಚ್ಚುಮಣ್ಣ ಎಂಬುವರು ಈಗಿನ್ನು
ಅಣ್ಣಾ ತಮ್ಮೇಡು ಜನುರಾಲಾ ತಾನ |ತಂದಾನ|
ಅಣ್ಣಾ ತಮ್ಮೇಡು ಜನುರಲ್ಲೋ ಈಗಿನ್ನು
ತಂದೆ ಪಾದುಪೂಜೆ ಮಾಡರ್ಯಾಲಾ ತಾನ |ತಂದಾನ|
ತಂದೆ ಪಾದುಪೂಜೆ ಮಾಡಿದುರುವೀಗಿನ್ನು
ತಾಯಿ ಪಾದುಪೂಜೆ ಮಾಡಿದುರೋ ತಾನ |ತಂದಾನ|
ಕೇಳು ಕೇಳು ನನ್ನ ತಾಯಿ ನೀ ಕೇಳಿ ಈಗಿನ್ನು
ನಮುಗಾಗಿ ನೀ ದುಕ್ಕ ಮಾಡುಬ್ಯಾಡಾ ತಾನ |ತಂದಾನ|
ನಮುಗಾಗಿ ನೀ ದುಕ್ಕ ಮಾಡುಬ್ಯಾಡಾ ಈಗಿನ್ನು
ಚಂದೂದಿಂದೀಗ ಉಳಿತೀರಾ ತಾನ |ತಂದಾನ|
ನಾವು ಈಗೊಂದೆ ಹೋಗುತೇವೆ ಈಗಿನ್ನು
ಆರೊರುಷ ಅಜ್ಞಾಸ ಕಳಿತೆಂಬಾ ತಾನ |ತಂದಾನ|
ಆರೊರೊಷ ವನವಾಸ ಕಳಿತೆಂಬವೀಗಿನ್ನು
ನಾವು ಇಬುರೀಗೂ ಹೋಗುತೆಂಬಾ ತಾನ |ತಂದಾನ|
ರಾಮಾ ಲಚ್ಚುಮಣ್ಣ ಎಂಬುವರು ಈಗಿನ್ನು
ಅಣ್ಣಾತಮ್ಮೇಡು ಜನರಾಲಾ ತಾನ |ತಂದಾನ|
ಅಣ್ಣಾ ತಮ್ಮೇಡು ಜನರಾಲಾ ಈಗಿನ್ನು
ಲಾಗುತಾವಿಗೂ ಎದ್ದರಾಲಾ ತಾನ |ತಂದಾನ|
ಲಾಗುತಾವಿಗೂ ಎದ್ದರಾಲ್ಲೋ ಈಗಿನ್ನು
ಬಿದ್ದು ದಾರೀಗೆ ಹಿಡಿದಾರ್ಯಾಲಾ ತಾನ |ತಂದಾನ|
ಬಿದ್ದು ದಾರೀಗೆ ಹಿಡಿದಿದುರು ಈಗಿನ್ನು
ರಾಮಲಚ್ಚುಮಣ್ಣ ಎಂಬವುರಾ ತಾನ |ತಂದಾನ|
ಲಾಗು ತಾವೀಗೂ ಹೋಗುವಂಗ ಈಗಿನ್ನು
ದಾರಿಕೂಡವರು ಹೋಗುತಾರ್ಯೋ ತಾನ |ತಂದಾನ|
ದಾರಿಕೂಡೊಂದೆ ಹೋಗುವಾಗು ಈಗಿನ್ನು
ಬಾರ್ತಾ ಸಸ್ತ್ರಾನೆ ಎಂಬವುರಾ ತಾನ |ತಂದಾನ|
ಬಾರ್ತಾ ಸಸ್ತ್ರಾನೆ ಎಂಬುವುರು ಈಗಿನ್ನು
ಲವುರು ತಾವೀಗೂ ಹೋಗುವರಾಲಾ ತಾನ |ತಂದಾನ|
ಲವುರು ತಾವೀಗೂ ಹೋಗುವರು ಈಗಿನ್ನು
ರಾಮುನು ಬೆನ್ನೀಗು ಓಡುವವರಾ ತಾನ |ತಂದಾನ|
ರಾಮುನು ಬೆನ್ನೀಗು ಓಡುವವರಾವೀಗನ್ನು
ಎಲ್ಲೀಗಿಗೊಂದೆ ಓಡಿದುರಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ನೀ ಕೇಳು ಈಗಿನ್ನು
ನಮ್ಮ ಬಿಟ್ಟು ನೀನೆ ಹೋಗಿದುರಾ ತಾನ |ತಂದಾನ|
ನಮ್ಮ ಬಿಟ್ಟು ನೀನೆ ಹೋಗಿದುರೆ ನನ್ನಣ್ಣ
ಇಲ್ಲಾದುರು ನಾವೆ ಉಳಿಲಾರೋ ತಾನ |ತಂದಾನ|
ಇಲ್ಲಾದುರು ನಾವೆ ಉಳಿಲಾರೋ ವೀಗಿನ್ನು
ನಿಮ್ಮಾ ಬೆನ್ನೀಗೂ ಬರುತೆಂಬಾ ತಾನ |ತಂದಾನ|
ನಿಮ್ಮಾ ಬೆನ್ನೀಗೂ ಬರುತೆಂಬಾ ವೀಗಿನ್ನು
ಆರಣ್ಣೆಕು ನಾವೆ ಬರುತೆಂಬಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನೀ ಕೇಳೂ ಈಗಿನ್ನು
ನಮ್ಮ ಬೆನ್ನೀಗೂ ಬರುಬೇಡಾ ತಾನ |ತಂದಾನ|
ನಮ್ಮ ಬೆನ್ನೀಗೂ ಬರುಬೇಡಾ ಈಗಿನ್ನು
ಉಳಿಲಾರೆ ಕಾಲ ಕಳಿಲಾರೇ ತಾನ |ತಂದಾನ|
ಕೇಳು ಕೇಳು ನನ್ನಣ್ಣಾ ನೀ ಕೇಳು ಈಗಿನ್ನು
ನಿನ್ನಾ ಬೆನ್ನೀಗೂ ಬರುತೆಂಬಾ ತಾನ |ತಂದಾನ|
ನಿನ್ನಾ ಬೆನ್ನೀಗೂ ಬರುತೆಂಬಾ ವೀಗಿನ್ನು
ನೀವೂ ಉಳುದಂಗೆ ಉಳುತೆಂಬಾ ತಾನ |ತಂದಾನ|
ನೀವೂ ಕಳುದಂಗೆ ಕಳಿತೆಂಬಾ ತಾನ |ತಂದಾನ|
ಕೇಳು ಕೇಳು ನನ್ನ ತಮ್ಮ ನಿ ಕೇಳು ಈಗಿನ್ನು
ಇಲ್ಲೇ ನೀವೀಗ ಉಳಿರೆಂಬಾ ತಾನ |ತಂದಾನ|
ಅಲ್ಲೇ ನೀವ್ಹೀಗ ಉಳಿರೆಂಬವೀಗಿನ್ನು
ನನ್ನ ಪಟ್ಟುವೊಂದೆ ಅಳುಕೊಂಡೆ ತಾನ |ತಂದಾನ|
ನನ್ನ ಪಟ್ಟುವೊಂದೆ ಅಳುಕೊಂಡೆವೀಗಿನ್ನು
ಅರಮನೇಲೀ ನೀವು ಉಳಿರೆಂಬಾ ತಾನ |ತಂದಾನ|
ಕೇಳು ಕೇಳು ನನ್ನಣ್ಣ ನೀ ಕೇಳು ನೀನೀಗ
ಉಳಿಲಾರೆ ನಾನು ಆಳಲಾರೇ ತಾನ |ತಂದಾನ|
ನಿನ್ನಾ ಪಟ್ಟವೊಂದೆ ಆಳುಲಾರೆ ಈಗಿನ್ನು
ನಾವು ಅಲ್ಲೊಂದೆ ಉಳಿಲಾರೋ ತಾನ |ತಂದಾನ|
ಏನೂ ಹೇಳಿದರೂ ಕೇಳುವುದಿಲ್ಲೆ ಈಗಿನ್ನು
ನಿನ್ನಾ ಬೆನ್ನೀಗೂ ಬರುತೆಂಬಾ ತಾನ |ತಂದಾನ|
ಕೇಳು ನನ್ನ ತಮ್ಮ ಎಂದಿದುನು ಈಗಿನ್ನು
ರಾಮಸ್ವಾಮಿನೇ ನುಡಿದನ್ಯಾಲಾ ತಾನ |ತಂದಾನ|
ರಾಮಸ್ವಾಮೀನೆ ನುಡಿದಿದುನೋ ಈಗಿನ್ನು
ಕೇಳು ನನ್ನ ತಮ್ಮಾ ನೀವಾಳಾ ತಾನ |ತಂದಾನ|
ಕೇಳೋ ನನ್ನ ತಮ್ಮಾ ನೀನಾಳವೀಗಿನ್ನು
ಬಾರ್ತ ಸಸ್ತ್ರಾ ನೀವಾಲಾ ತಾನ |ತಂದಾನ|
ನನ್ನಾ ಕಾಡೋವೀ ಕೂಡುತೀದ್ದೆವೀಗಿನ್ನು
ಪಟ್ಟುದೂ ಮೇಲೊಂದೆ ಇಡುಬೇಕಾ ತಾನ |ತಂದಾನ|
ಪಟ್ಟುದೂ ಮೇಲೊಂದೆ ಇಡುಬೇಕಾ ಈಗಿನ್ನು
ಅದನೂ ಪೂಜೊಂದೆ ಮಾಡುಕೊಂಡು ತಾನ |ತಂದಾನ|
ಅದುನೂ ಪುಜೊಂದೆ ಮಾಡುಕೊಂಡು ನೀವೀಗ
ಅರಮನೆಯಲು ನೀವೇ ಉಳಿಬೇಕಾ ತಾನ |ತಂದಾನ|
ನಾವೂ ಈಗೊಂದೆ ಹೋಗುತೀದೊವೀಗಿನ್ನು
ಆರೂ ವರುಷ ಅರುಣೀಕಾ ತಾನ |ತಂದಾನ|
ಆರೂರುಷ ಅರಣ್ಣೇಲಿ ಕಳಿತೀದೋವೀಗಿನ್ನು
ಆರಾರನ್ನೆರಡು ಅಜ್ಞಾಸ ಕಳಿತೀದಾ ತಾನ |ತಂದಾನ|
ಆರಾರನ್ನೆರಡು ವರುಷಾನೆವೀಗಿನ್ನು
ಕಳುದು ಮ್ಯಾಲೆ ನಾನೆ ಬರುತೀದಾ ತಾನ |ತಂದಾನ|
ಕಳುದು ಮ್ಯಾಲೆ ನಾನೆ ಬರುತಿದೋ ನನ್ನ ತಮ್ಮ
ಅಲ್ಲೊರಿಗೂ ನೀವೆ ಉಳಿಬೇಕಾ ತಾನ |ತಂದಾನ|
ಲಾಗೂತಾನೀಗೂಲಿರುವರಲ್ಲೋ ಈಗಿನ್ನು
ಬಾರ್ತಾ ಸಸ್ತ್ರಾನೆ ಎಂಬವುರಾ ತಾನ |ತಂದಾನ|
ಬಾರ್ತ ಸಸ್ತ್ರಾನೆ ಎಂಬುವುರು ಈಗಿನ್ನು
ಕೇಳೂಕೇಳಾಲ ನನ್ನಣ್ಣ ತಾನ |ತಂದಾನ|
ಕೇಳೂಕೇಳಾಲ ನನ್ನಣ್ಣ ವೀಗಿನ್ನು
ರಾಮಾಸ್ವಾಮೀನೇ ನೀನಾಳ ತಾನ |ತಂದಾನ|
ರಾಮಾಸ್ವಾಮೀನೇ ನೀನಾಳು ಈಗಿನ್ನು
ಹನ್ನೆರಡು ವರುಷ ಕಳೆದುಮ್ಯಾಲೆ ತಾನ |ತಂದಾನ|
ಹನ್ನೆರಡು ವರುಷ ಕಳೆದುಮ್ಯಾಲೆ ವೀಗಿನ್ನು
ಒಂದೂ ದಿವುಸೊಂದೆಲಾಗುದುರಾ ತಾನ |ತಂದಾನ|
ಒಂದೂ ದಿವುಸೊಂದೆ ಆಗಿದುರು ನನ್ನಣ್ಣ
ನಾವಾದುರೀಗು ಉಳುವದಿಲ್ಲಾ ತಾನ |ತಂದಾನ|
ನಾವಾದುರೀಗು ಉಳುವದಿಲ್ಲಾ ವೀಗಿನ್ನು
ನಾವೂ ವೀಗೊಂದೆ ಮಾಡುತೀದಾ ತಾನ |ತಂದಾನ|
ನಾವೂ ವೀಗೊಂದೆ ಮಾಡುತೀದೆ ವೀಗಿನ್ನು
ಒಂದೂ ಹೊಂಡಾನೆ ಮಾಡುತೀದೋ ತಾನ |ತಂದಾನ|
ಒಂದೂ ಹೊಂಡಾನೆ ಮಾಡುತೀದೋ ವೀಗಿನ್ನು
ಹೊಂಡಾದಲ್ಲಿ ಕೊಂಡ ಮಾಡುತೀದೋ ತಾನ |ತಂದಾನ|
ಹೊಂಡಾದಲೊಂದೆ ಕೊಂಡಮಾಡುತೀದುವೀಗನ್ನು
ನಾವೂವೀಗೊಂದೆ ಇರುವರಾಲಾ ತಾನ |ತಂದಾನ|
ನಾವೂವೀಗೊಂದೆ ಇರುವವರು ಈಗಿನ್ನು
ಕೊಂಡದಲ್ಲಿ ನಾವೆ ಹಾರುತೀದೋ ತಾನ |ತಂದಾನ|
ಅಂದೇ ತಾವಿಗೆ ನುಡುದಿದರು ಈಗಿನ್ನು
ಅಣ್ಣನು ಕೂಡೊಂದ ನುಡಿದನ್ಯಾರಾ ತಾನ |ತಂದಾನ|
ಬಾರ್ತಾ ಸಸ್ತ್ರಾನೆ ಎಡು ಜನೂ ಈಗಿನ್ನು
ಹಿಂದೂ ತಿರುಗೊಂದೆ ಬಂದಿದುರಾ ತಾನ |ತಂದಾನ|
ಹಿಂದೂ ತಿರುಗೊಂದೆ ಬಂದಿದುರುವೀಗಿನ್ನು
ರಾಮನು ಕಾಡೋವಿ ತಂದಿದುರಾ ತಾನ |ತಂದಾನ|
ರಾಮನು ಕಾಡೋವಿ ತಂದಿದುರಾವೀಗಿನ್ನು
ಪಟ್ಟುದ ಮಾಲ್ಯೊಂದು ಇಟ್ಟುಕ್ಕೊಂಡಾ ತಾನ |ತಂದಾನ|
ಪಟ್ಟುದ ಮಾಲ್ಯೊಂದು ಇಟ್ಟುಕೊಂಡಾರುವೀಗಿನ್ನು
ಬಾರ್ತ ಸಸ್ತ್ರಾನೆ ಎಂಬವುರಾ ತಾನ |ತಂದಾನ|
ಬಾರ್ತ ಸಸ್ತ್ರಾನೆ ಎಂಬವುರುವೀಗಿನ್ನು
ಚಂದೂದಿಂದವರು ಇರುವರಾಲಾ ತಾನ |ತಂದಾನ|
ಚಂದೂದಿಂದವರು ಉಳುವಾಂಗೋವೀಗಿನ್ನು
ಸುಖದಲು ಕಾಲ ಕಳಿವಂಗಾ ತಾನ |ತಂದಾನ|
ಸುಖದಲು ಕಾಲ ಕಳುವವರು ಈಗಿನ್ನು
ಅರುಮನೆಯಲ್ಲವುರೆ ಉಳುವವುರಾ ತಾನ |ತಂದಾನ|
ಅರಮನೆಯಲ್ಲವುರು ಉಳುವವುರು ಈಗಿನ್ನು
ಒಕ್ಕಲ ಮಕ್ಕೂಳು ಸಲಿಕೊಂಡಾ ತಾನ |ತಂದಾನ|
ಒಕ್ಕಲು ಮಕ್ಕೂಳು ಸಲಿಕೊಂಡು ವೀಗಿನ್ನು
ಆಳೂಮಕ್ಕಳು ಕಟ್ಟಿಕೊಂಡಾ ತಾನ |ತಂದಾನ|
ಆಳೂಮಕ್ಕಳು ಕಟ್ಟಿಕೊಂಡು ವೀಗಿನ್ನು
ಚಂದುದಿಂದವುರೆ ಇರುತಾರೇ ತಾನ |ತಂದಾನ|
ರಾಮಾಲಚ್ಚುಮಣ್ಣ ಎಂಬವುರು ಈಗಿನ್ನು
ಅಣ್ಣಾತಮ್ಮೇಡು ಜನುರಾಲಾ ತಾನ |ತಂದಾನ|
ಅಣ್ಣಾತಮ್ಮೇಡು ಜನುರಾಲಾ ವೀಗಿನ್ನು
ಮುಂದು ದಾರೀನೇ ಹಿಡಿದನ್ಯಾರಾ ತಾನ |ತಂದಾನ|
ಮುಂದೂ ದಾರಿನೆ ಹಿಡಿದನ್ಯಾರಾ ವೀಗಿನ್ನು
ಅನಸೂ ಕಾಡೊಂದೇ ಸೇರರ್ಯಾಲಾ ತಾನ |ತಂದಾನ|
ನಾಡೂ ದಾರೀನೇ ಬಿಟ್ಟಿದುರು ಈಗಿನ್ನು
ಕಾಡೂ ದಾರೀನೇ ಹಿಡಿದುದರಾ ತಾನ |ತಂದಾನ|
ಕಾಡು ದಾರೀನೇ ಹಿಡಿದುದರು ಈಗಿನ್ನು
ಗೋರೂ ಅಡವೀಯ ಒಳಗಾಲಾ ತಾನ |ತಂದಾನ|
ಗೋರೂ ಅಡವೀಯ ಒಳಗಲಾವೀಗಿನ್ನು
ನರಮನುಷರು ಹುಳುಲು ಅಲ್ಲಿಲ್ಲ ತಾನ |ತಂದಾನ|
ನರಮನುಷರು ಹುಳುಲು ಅಲ್ಲಿಲ್ಲ ವೀಗಿನ್ನು
ಗೋರೂ ಅಡವೀಯ ಒಳಗಾಲ ತಾನ |ತಂದಾನ|
ಗೋರು ಅಡವೀಯ ಒಳಗಲಾವೀಗಿನ್ನು
ಅಲ್ಲಿಗೂತಾವೀಗೂ ಅದರಾಳ ತಾನ |ತಂದಾನ|
ಅಲ್ಲಿಗೂತಾವೀಗೂ ಅದರಾಳುವೀಗಿನ್ನು
ಅಣ್ಣಾತಮ್ಮೇಡು ಜನರಾಲಾ ತಾನ |ತಂದಾನ|
ಅಣ್ಣಾತಮ್ಮೇಡು ಜನರಾಳು ವೀಗಿನ್ನು
ರಾಮಾಲಚ್ಚುಮಣ್ಣ ಎಂಬುವರಾ ತಾನ |ತಂದಾನ|
ರಾಮಾಲಚ್ಚುಮಣ್ಣ ಎಂಬುವರು ಈಗಿನ್ನು
ಆರಣ್ಣಿದಲ್ಲೇ ಉಳಿದರಾಲಾ ತಾನ |ತಂದಾನ|
ಆರಣ್ಣೆದಲ್ಲೇ ಉಳಿದಿದುರು ಈಗಿನ್ನು
ಅಲ್ಲೊಂದು ಮನೆಯ ಮಾಡ್ಯಾರಾಲಾ ತಾನ |ತಂದಾನ|
ಅಲ್ಲೊಂದು ಮನೆಯ ಮಾಡಿದರುವೀಗಿನ್ನು
ಸೊಪ್ಪನು ತುಂಡೀನೆ ಮುರುದರ್ಯಾಲಾ ತಾನ |ತಂದಾನ|
ಸೊಪ್ಪನು ತುಂಡೀನ ಮುರಿದುದರು ಈಗಿನ್ನು
ಕಡುವೋನೆಂದುರು ಕತ್ತಿಯಿಲ್ಲಾ ತಾನ |ತಂದಾನ|
ಕಡುವೋನೆಂದುರು ಕತ್ತಿಯಿಲ್ಲಾವೀಗಿನ್ನು
ಕೊಯ್ಯುನಂದರು ಚೂರಿಯಿಲ್ಲಾ ತಾನ |ತಂದಾನ|
ಕೊಯ್ಯೋನಂದರು ಚೂರಿಯಿಲ್ಲ ವೀಗಿನ್ನು
ಕೈಯಲೂ ತಾವಿಗೋ ಮುರಿದುದುರಾ ತಾನ |ತಂದಾನ|
ಕೈಯಲ್ಲೂ ತಾವೀಗೋ ಮುರಿದುದರಾ ಈಗಿನ್ನು
ಸೊಪ್ಪನು ತುಂಡೀನೆ ಮುರಿದುದರಾ ತಾನ |ತಂದಾನ|
ಸೊಪ್ಪನು ತುಂಡೀನೆ ಮುರಿದಿದರಾ ಈಗಿನ್ನು
ಅಲ್ಲೊಂದು ಮನೆಯ ಮಾಡಿದುರಾ ತಾನ |ತಂದಾನ|
ಅಲ್ಲೊಂದು ಮನೆಯ ಮಾಡಿದುರಾ ಈಗಿನ್ನು
ಸೊಪ್ಪನು ತುಂಡೀಯ ಮನಿಯಾಲಾ ತಾನ |ತಂದಾನ|
ಸೊಪ್ಪನು ತುಂಡೀಯ ಮನಿಯಾಲಾ ವೀಗಿನ್ನು
ಅಲ್ಲೇ ತಾವೀಗೂ ಉಳುವವರಾ ತಾನ |ತಂದಾನ|
ಅಲ್ಲೇ ತಾವೀಗೂ ಉಳುವವುರು ಈಗಿನ್ನು
ಉಳುವವುರು ಕಾಲ ಕಳುವವುರಾ ತಾನ |ತಂದಾನ|
ಉಣುತೇನಂದಾರು ಅನ್ನಿಲ್ಲಾ ತಾನ |ತಂದಾನ|
ಉಣುತೇನಂದರೂ ಅನ್ನಿಲ್ಲಾ ಈಗಿನ್ನು
ಘ್ಜಿ‘:್ಠಣ್ಜಂದಾರು ಹಣ್ಣಿಲ್ಲಾ ತಾನ |ತಂದಾನ|
ಘ್ಜಿ‘:್ಠಣ್ಜಂದಾರೂ ಹಣ್ಣಿಲ್ಲಾವೀಗಿನ್ನು
ಕುಡಿತೇನೆಂದಾರೂ ಹಾಲಿಲ್ಲಾ ತಾನ |ತಂದಾನ|
ಕುಡಿತೇನೆಂದರೂ ಹಾಲಿಲ್ಲಾ ವೀಗಿನ್ನು
ಹಾಲಿಲ್ಲಾ ಅಲ್ಲೂ ನೀರಿಲ್ಲಾ ತಾನ |ತಂದಾನ|
ಹಾಲಿಲ್ಲಾ ಅಲ್ಲೂ ನೀರಿಲ್ಲಾ ವೀಗಿನ್ನು
ಯಾವುರೀತಿಯಲ್ಲು ಉಳಿಬೇಕಾ ತಾನ |ತಂದಾನ|
ಲಾಗೂ ತಾನೀಗೆ ಇರುವನಲ್ಲೋ ಈಗಿನ್ನು
ರಾಮಸ್ವಾಮಿನೇ ಎಂಬನಾಲಾ ತಾನ |ತಂದಾನ|
ಕೇಳು ಕೇಳೂ ನನ್ನ ತಮ್ಮ ನೀಕೇಳುವೀಗಿನ್ನು
ಲಚುಮಣ್ಣ ನೀನೇ ಕೇಳುವಾಲಾ ತಾನ |ತಂದಾನ|
ಲಚುಮಣ್ಣಾ ನೀನೇ ಕೇಳುವಾಲಾವೀಗಿನ್ನು
ಹಣ್ಣು ಹುಡುಕೂಂಡೆ ಬರಬೇಕಾ ತಾನ |ತಂದಾನ|
ಹಣ್ಣೂ ಹುಡುಕೊಂಡೇ ಬರಬೇಕು ಅಂದ್ಹೇಳಿ
ತಮ್ಮನು ಕೊಡೊಂದೆ ನುಡಿದನಾಲಾ ತಾನ |ತಂದಾನ|
ಲಚುಮಣ್ಣ ತಾನೆ ಇದ್ದನಲ್ಲೋ ವೀಗಿನ್ನು
ಹಣ್ಣೀಗೂ ತಾನೆ ಹೋಗುತಾನಾ ತಾನ |ತಂದಾನ|
ಹಣ್ಣೀಗೂ ತಾನೇ ಹೋಗುತಾನೆ ಈಗಿನ್ನು
ಕಾಡೀನೊಳಗೊಂದೆ ಹೋಗುತಾನಿಯೋ ತಾನ |ತಂದಾನ|
ಲಚುಮಣ್ಣ ಕಾಡಿಗೂ ಹೋಗುತಾನೆಯೊ ವೀಗಿನ್ನು
ಕಾಡಿನೊಳುಗೊಂದೆ ಹುಡುಕುತಾನೆಯೊ ತಾನ |ತಂದಾನ|
ಕಾಡಿನೊಳಗೊಂದೆ ಹುಡುಕುತಾನೆಯೊ ವೀಗಿನ್ನು
ಹಣ್ಣೂವಿಗೊಂದೆ ಹುಡುಕುತಾನೆಯೋ ತಾನ |ತಂದಾನ|
ಹಣ್ಣುವಿಗೊಂದೆ ಹುಡುಕುತಾನೆಯೋ ವೀಗಿನ್ನು
ಲವುನೀಗುಗೊಂದೆ ಸಿಕ್ಕುವದಾಲಾ ತಾನ |ತಂದಾನ|
ಲವುನೀಗುಗೊಂದೆ ಸಿಕ್ಕುವದಾಲಾ ವೀಗಿನ್ನು
ದಿವುಸಗೂ ಎಲ್ಡಣ್ಣೆ ಸಿಕ್ಕುತ್ತದೆಯೇ ತಾನ |ತಂದಾನ|
ದಿವುಸಗೂ ಎಲ್ಡಣ್ಣೆ ಸಿಕ್ಕುತ್ತದೆಯೋ ವೀಗಿನ್ನು
ಲದುರೂವಿಗೊಂದೆ ತರತಾನೆಯಾ ತಾನ |ತಂದಾನ|
ಲದುರೂವಿಗೊಂದೆ ತರತಾನೆಯಾ ವೀಗಿನ್ನು
ಅಣ್ಣನೂ ಕೂಡುತಂದು ಕೊಡುತಾನೆಯೋ ತಾನ |ತಂದಾನ|
ಲಣ್ಣವಿಗೊಂದೆ ಇರುವನಾಲವೀಗಿನ್ನೂ
ಎರಡು ಹಣ್ಣೀಗೂ ಇರುವುದಾಲಾ ತಾನ |ತಂದಾನ|
ಎರಡು ಹಣ್ಣಿಗೊಂದೆ ಇರುವುದಾಲಾ ವೀಗಿನ್ನು
ಲದರು ಎಡುಭಾಗ ಮಾಡುತಾನೆಯೋ ತಾನ |ತಂದಾನ|
ಒಂದಣ್ಣು ಎಡುಭಾಗ ಮಾಡುತಾನೆಯೋವೀಗಿನ್ನು
ಒಂದೂ ಬಾಗಾದಣ್ಣು ಇರುವದಾಲಾ ತಾನ |ತಂದಾನ|
ಒಂದೂ ಬಾಗದಣ್ಣು ಇರುವದಾಲಾವೀಗಿನ್ನು
ದೇವರಿಗೂ ನೀವೇದ್ಯೆ ಮಾಡುತಾನೆಯೋ ತಾನ |ತಂದಾನ|
ದೇವರಿಗೂ ನೀವೇದ್ಯೆ ಮಾಡುತಾನೆಯೋ ವೀಗಿನ್ನು
ಒಂದೆ ಬಾಗಾನೆ ಕೊಡುತಾನೆಯೋ ತಾನ |ತಂದಾನ|
ತಮ್ಮಾಗೊಂದು ಬಾಗ ಕೊಡುತಾನೆ ವೀಗಿನ್ನು
ತಾನೂ ಇಡಿ ಹಣ್ಣು ತಿನ್ನುತಾನೆಯೋ ತಾನ |ತಂದಾನ|
ತಾನೂ ಇಡಿಹಣ್ಣು ತಿನ್ನುತಾನೆಯೋ ವೀಗಿನ್ನು
ತಮ್ಮಾ ಲಚ್ಚುಮಣ್ಣಾ ಎಂಬುವವನಲಾ ತಾನ |ತಂದಾನ|
ತಮ್ಮಾ ಲಚ್ಚುಮಣ್ಣಾ ಎಂಬುವನಲಾ ವೀಗಿನ್ನು
ಒಂದು ದಿವಸೊಂದೆ ಕಂಡನಾಲಾ ತಾನ |ತಂದಾನ|
ಒಂದು ದಿವಸೊಂದೆ ಕಂಡಿದುನು ವೀಗಿನ್ನು
ಎಲ್ಡು ದಿವಸೊಂದೆ ಕಂಡನಾಲ ತಾನ |ತಂದಾನ|
ತನಗೇ ಬಾಗಣ್ಣು ಕೊಡುತಾನೆಯೋ ವೀಗಿನ್ನು
ತಾನು ಇಡಿ ಹಣ್ಣೆ ತಿನ್ನುತಾನೆಯೋ ತಾನ |ತಂದಾನ|
ಲಚ್ಚುಮಣ್ಣಗು ಸಿಟ್ಟು ಬಂದದ್ಯಾಲವೀಗಿನ್ನು
ಅಣ್ಣಾ ಕೊಟ್ಟಂತ ಬಾಗಣ್ಣಾ ತಾನ |ತಂದಾನ|
ಅಣ್ಣಾ ಕೊಟ್ಟಂತ ಬಾಗಹಣ್ಣುಲೋ ವೀಗಿನ್ನು
ತಾನೂವಿಗೊಂದೆ ತಿನ್ನಲಿಲ್ಲಾ ತಾನ |ತಂದಾನ|
ತಾನುವಿಗೊಂದೆ ತಿನ್ನುಲಿಲ್ಲೆ ವೀಗಿನ್ನು
ತನ್ನಾ ತೊಡಿಯೊಂದೆ ಸಿಗದನ್ಯಾರಾ ತಾನ |ತಂದಾನ|
ತನ್ನಾ ತೊಡಿಯೊಂದೆ ಸಿಗುದಿದುನುವೀಗಿನ್ನು
ಅಣ್ಣಾ ಕೊಟ್ಟು ಬಾಗು ಹಣ್ಣಲಾ ತಾನ |ತಂದಾನ|
ಅಣ್ಣಾ ಕೊಟ್ಟು ಬಾಗು ಹಣ್ಣಲೂ ವೀಗಿನ್ನು
ತೊಡೆಯೊಳುಗು ತಾನೆ ಇಟ್ಟನ್ಯಾಲಾ ತಾನ |ತಂದಾನ|
ಲಾರೀತಿ ಕಾಲ ಕೆಳೆವೊವಂಗುವೀಗಿನ್ನು
ಕಳಿತಾರೆ ಅಲ್ಲೆ ಉಳಿತಾರೆ ತಾನ |ತಂದಾನ|
ಕಳಿತಾರೆ ಅಲ್ಲೆ ಉಳಿತಾರೆ ವೀಗಿನ್ನು
ಆರೂ ವರುಷಾನೆ ಕಳೆದಮ್ಯಾಲೆ ತಾನ |ತಂದಾನ|
ಆರೊರುಷ ಅರಣ್ಣೇಲಿ ಕಳುವಂಗೋವೀಗಿನ್ನು
ಕಳುವಾಂಗೋ ಕಾಲ ಕಳಿತಾರೆಯೋ ತಾನ |ತಂದಾನ|
ಕಳುವಂಗೋ ಅಲ್ಲೆ ಉಳಿವಂಗೋವೀಗಿನ್ನು
ಅಲ್ಲೆ ಮುಂದೀನ ರಾಜ್ಯದಲ್ಲಿ ತಾನ |ತಂದಾನ|
ಅಲ್ಲೆ ಮುಂದೀನ ರಾಜ್ಯದಲ್ಲು ವೀಗಿನ್ನು
ಜನಕರಾಜನ ಗಡಿಯಲ್ಲೋ ತಾನ |ತಂದಾನ|
ಜನಕುಮಾರಾಜ ಎಂಬವುನಲ್ಲೋ ಈಗಿನ್ನು
ಅಲ್ಲೂವಿಗೊಂದೆ ಇರುವನಾಲಾ ತಾನ |ತಂದಾನ|