೧೧) ಬೀದರ ಜಿಲ್ಲೆ

೧) ಹುಮನಾಬಾದ
೨) ಹಳಖೇಡ
೩) ಔರಾದ
೪) ಬಾಲ್ಕಿ
೫) ಬಸವಕಲ್ಯಾಣ
೬) ಜಲಸಂಧಿ
೭) ಬಾಟೆಸಾಂಗ್ಲಿ
೮) ಉದಗಿರಿ
೯) ಮೋರ ಖಂಡಿ
೧೦) ಖೇರ್ಡಾ
೧೧) ಬೇಲೂರು
೧೨) ಬೆಟಗುಪ್ಪಾ
೧೩) ದುಮ್ಮನಪುರ
೧೪) ಬೇಮಳಖಡಾ
೧೫) ಮಂಠಾಳ
೧೬) ಚಾಂದ
೧೭) ಹೊಳ ಸಮುದ್ರ
೧೮) ಚಿಂಚೋಳಿ
೧೯) ಧನೂರ
೨೦) ಭಾತಂಬ್ರಾ

ಹಳಿಯಾಳ ತಾಲೂಕು (ನಗರ)
೧) ಹಳಿಯಾಳ (ನಗರ)
೨) ದಾಂಡೇಲಿ
೩) ಕಾವಲವಾಡ

ಯಲ್ಲಾಪೂರ ತಾಲೂಕು
೧) ಯಲ್ಲಾಪೂರ (ನಗರ)
೨) ಭರತನಳ್ಳಿ
೩) ಚಪಗೇರಿ
೪) ಸೋಮಗೇರಿ
೫) ಮದನೂರ
೬) ಬಾಳ್ಗೆ ಮನೆ
೭) ಸವಣಗೇರಿ
೮) ಜಡ್ಡಿ

ಶಿರ್ಶಿ ತಾಲೂಕು
೧) ಶಿರ್ಶಿ
೨) ಕೊಂಡ್ಲಿ
೩) ಸಿದ್ದಾಪೂರ
೪) ಕಂಡ್ರಜ್ಜಿ
೫) ಬಿಸಿಲ ಕೊಪ್ಪ
೬) ಬೀಳೂರ
೭) ಸಾಲಕಣಿ
೮) ಹುಲೆಕಲ್ಲಿ

ಮುಂಡಗೋಟ ತಾಲೂಕು
೧) ಮುಂಡಗೋಡ (ನಗರ)

ಕಮಟಾ ತಾಲೂಕು
೧) ಕುಮಟಾ (ನಗರ)

ಹೊನ್ನವರ ತಾಲೂಕು
೧) ಹೊನ್ನಾವರ (ನಗರ)

ಭಟ್ಕಳ ತಾಲೂಕು
೧) ಭಟ್ಕಳ (ನಗರ)

ಅಂಕೋಲ ತಾಲೂಕು
೧) ಅಂಕೋಲ (ನಗರ)
೨) ಗೋಕರ್ಣ

೧೩) ಶಿವಮೊಗ್ಗ ಜಿಲ್ಲೆ

೧) ಶಿವಮೊಗ್ಗ (ನಗರ)
೨) ಸೊರಬ
೩) ಶಿಕಾರಿಪುರ
೪) ಭತ್ರದಳ್ಳಿ
೫) ಸಾಗರ
೬) ಆನವಟ್ಟಿ
೭) ತೀರ್ಥಹಳ್ಳಿ
೮) ಶಿರಾಳಕೊಪ್ಪ
೯) ಹರಗೂಹಳ್ಳಿ
೧೦) ಅಮಟಿಕೊಪ್ಪ
೧೧) ಮಳಲಿಕೊಪ್ಪ
೧೨) ಹೊಳ ಹೊನ್ನೂರು
೧೩) ಹೊಸನಗರ
೧೪) ಭದ್ರಾವತಿ
೧೫) ಆನಂದಪುರಂ

೧೪) ಮೈಸೂರು ಜಿಲ್ಲೆ

೧) ಮೈಸೂರು ನಗರ
೨) ಹುಣಸೂರು
೩) ಅನಗೋಡ
೪) ಪಿರಿಯಾ ಪಟ್ಟಣ
೫) ಕೆ.ಆರ್. ನಗರ
೬) ಪಾಸಿನಹಳ್ಳಿ
೭) ಕುಚ್ಯಾ
೮) ನಂಜನಗೂಡು
೯) ಟಿ.ನರಸೀಪುರ
೧೦) ಗುಂಡ್ಲುಪೇಟೆ

೧೫) ದಾವಣಗೆರೆ ಜಿಲ್ಲೆ

೧) ದಾವಣಗೆರೆ
೨) ಹರಿಹರ
೩) ಹರಪನಹಳ್ಳಿ
೪) ಚನ್ನಗಿರಿ
೫) ಹೊಸಳ್ಳಿ

೧೬) ಚಿತ್ರದುರ್ಗ ಜಿಲ್ಲೆ

೧) ಚಿತ್ರದುರ್ಗ ನಗರ
೨) ಚಳ್ಳಕೆರೆ

೧೭) ಮಂಡ್ಯ ಜಿಲ್ಲೆ

೧) ಮಂಡ್ಯ (ನಗರ)
೨) ಶ್ರೀರಂಗಪಟ್ಟಣ
೩) ನಾಗಮಂಗಲ
೪) ಪಾಂಡವಪುರ
೫) ಕೆ.ಆರ್. ಪೇಟೆ
೬) ಮಳವಳ್ಳಿ
೭) ಮದ್ದೂರು

೧೮) ಬೆಂಗಳೂರು ಜಿಲ್ಲೆ

೧) ಬೆಂಗಳೂರು ನಗರ
೨) ಆನೇಕಲ್
೩) ನೆಲಮಂಗಲ
೪) ಚನ್ನಪಟ್ಟಣ
೫) ಕನಕಪುರ
೬) ರಾಮನಗರ

೧೯) ಚಾಮರಾಜನಗರ ಜಿಲ್ಲೆ

೨೦) ಕೋಲಾರ ಜಿಲ್ಲೆ

೧) ಕೋಲಾರ ನಗರ
೨) ಮುಳುಬಾಗಿಲು
೩) ಬಂಗಾರಪೇಟೆ
೪) ಕೆ.ಜಿ.ಎಫ್
೫) ದೊಡ್ಡಬಳ್ಳಾಪುರ
೬) ಬಾಗೇಪಲ್ಲಿ
೭) ಗೌರಿಬಿದನೂರು
೮) ಚಿಕ್ಕಬಳ್ಳಾಪುರ
೯) ಚಿಂತಾಮಣಿ
೧೦) ಶಿಡ್ಲಘಟ್ಟ

೨೧) ಕೊಡಗು ಜಿಲ್ಲೆ

೧) ಕೊಡಗು ನಗರ
೨) ವಿರಾಜಪೇಟೆ
೩) ಕುಶಾಲನಗರ

೨೨) ಉಡುಪಿ ಜಿಲ್ಲೆ

೧) ಉಡುಪಿ ನಗರ
೨) ಕಾರ್ಕಳ
೩) ಸೂರತ್ಕಲ್
೪) ಉಲ್ಲಾಳ

೨೩) ದಕ್ಷಿಣ ಕನ್ನಡ

೧) ಮಂಗಳೂರು (ನಗರ)
೨) ಮೂಡಗೆರೆ
೩) ಮೂಡಬಿದರಿ
೪) ಬೆಳ್ತಂಗಡಿ
೫) ಧರ್ಮಸ್ಥಳ

೨೪) ಚಿಕ್ಕಮಗಳೂರು ಜಿಲ್ಲೆ

೧) ಚಿಕ್ಕಮಗಳೂರು ನಗರ
೨) ಶೃಂಗೇರಿ

೨೫) ಹಾಸನ ಜಿಲ್ಲೆ

೧) ಹಾಸನ ನಗರ
೨) ಸಕಲೇಶ ಪುರ
೩) ಚನ್ನರಾಯ ಪಟ್ಟಣ
೪) ಹೊಳೆನರಸೀಪುರ
೫) ಬೇಲೂರು
೬) ಅರಕಲಗೋಡು

೨೬) ತುಮಕೂರು ಜಿಲ್ಲೆ

೧) ತುಮಕೂರು (ನಗರ)
೨) ತಿಪಟೂರು
೩) ಗುಬ್ಬಿ
೪) ತುರುವೇಕೆರೆ
೫) ಕುಣಿಗಲ್

ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಕಂಡು ಬರುವ ಗೊಂದಲಿಗರ ಸಮುದಾಯದಲ್ಲಿ ಸುಮಾರು ೯೯೦೫ ಕುಟುಂಬಗಳಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಉತ್ತರ ಕರ್ನಾಟಕದಲ್ಲಿ ಸುಮಾರು ೬೩೦೭ ಕುಟುಂಬಗಳಿದ್ದು ಅವುಗಳಲ್ಲಿ ಹೆಚ್ಚು ಕುಟುಂಬಗಳನ್ನು ಹೊಂದಿದ ಜಿಲ್ಲೆಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಲಾಗಿದೆ.

೧. ಬಾಗಲಕೋಟೆ ೧೨೧೦ ಕುಟುಂಬಗಳು
೨. ಬಿಜಾಪುರ ೯೭೬ ಕುಟುಂಬಗಳು
೩. ಬೆಳಗಾವಿ ೬೮೫ ಕುಟುಂಬಗಳು
೪. ಬೀದರ ೬೦೪ ಕುಟುಂಬಗಳು
೫. ಧಾರವಾಡ ೪೯೦ ಕುಟುಂಬಗಳು
೬. ಗುಲಬರ್ಗಾ ೪೬೮ ಕುಟುಂಬಗಳು
೭. ಬಳ್ಳಾರಿ ೪೬೧ ಕುಟುಂಬಗಳು
೮. ರಾಯಚೂರು ೪೪೪ ಕುಟುಂಬಗಳು
೯. ಕೊಪ್ಪಳ ೪೨೨ ಕುಟುಂಬಗಳು
೧೦. ಗದಗ ೩೬೩ ಕುಟುಂಬಗಳು
೧೧. ಹಾವೇರಿ ೧೮೪ ಕುಟುಂಬಗಳು

ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದಲ್ಲಿ ಸುಮಾರು ೭೫೦ಕ್ಕೂ ಹೆಚ್ಚು ಮನೆಗಳಿರುವುದು ಕಂಡು ಬರುತ್ತದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸುಮಾರು ೫೯೬ ಕುಟುಂಬಗಳಿರುವ ಬಗ್ಗೆ ಮಾಹಿತಿ ದೊರೆಯುತ್ತದೆ (ದಕ್ಷಿಣ ಕನ್ನಡ ಮತ್ತು ಉಡುಪಿ ೧೮೫ ಮತ್ತು ಉತ್ತರ ಕನ್ನಡದಲ್ಲಿ ೪೧೧ ಕುಟುಂಬಗಳು)

ದಕ್ಷಿಣ ಕರ್ನಾಟಕ ಒಟ್ಟು ೧೩ ಜಿಲ್ಲೆಗಳಲ್ಲಿ ಸುಮಾರು ೩೦೦೨ ಕುಟುಂಬಗಳಿರುವ ಬಗ್ಗೆ ತಿಳಿಯುತ್ತದೆ.

೧. ಮೈಸೂರು ೬೦೮ ಕುಟುಂಬಗಳು
೨. ಬೆಂಗಳೂರು ಗ್ರಾ ೫೧೮ ಕುಟುಂಬಗಳು
೩. ಶಿವಮೊಗ್ಗ ೪೮೯ ಕುಟುಂಬಗಳು
೪. ಮಂಡ್ಯ ೨೮೯ ಕುಟುಂಬಗಳು
೫. ಕೋಲಾರ ೨೪೬ ಕುಟುಂಬಗಳು
೬. ದಾವಣಗೆರೆ ೨೩೫ ಕುಟುಂಬಗಳು
೭. ಚಿಕ್ಕಮಗಳೂರು ೧೭೪ ಕುಟುಂಬಗಳು
೮. ಹಾಸನ ೧೪೦ ಕುಟುಂಬಗಳು
೯. ತುಮಕೂರು ೧೦೪ ಕುಟುಂಬಗಳು
೧೦. ಕೊಡಗು ೦೫೪ ಕುಟುಂಬಗಳು
೧೧. ಚಾಮರಾಜನಗರ ೦೨೭ ಕುಟುಂಬಗಳು
೧೨. ಚಿತ್ರದುರ್ಗ ೦೧೦ ಕುಟುಂಬಗಳು
೧೩. ಬೆಂಗಳೂರು ನಗರದ ಬಗ್ಗೆ ಮಾಹಿತಿ ಸಿಕ್ಕಿಲ್ಲ

ಕುಟುಂಬ ಯೋಜನೆಯ ಬಗ್ಗೆ ಹೆಚ್ಚಾಗಿ ಆಸಕ್ತಿ ವಹಿಸಿದ ಈ ಸಮುದಾಯ ಜನಸಂಖ್ಯೆ ಕರ್ನಾಟಕದಲ್ಲಿ ಸುಮಾರು ೯೦ ಸಾವಿರದಿಂದ ಒಂದು ಲಕ್ಷದವರೆಗೆ ಇರಬಹುದೆಂದು ಮಾಡಬಹುದು.

೧.೨ ಬುಡಕಟ್ಟು ಲಕ್ಷಣಗಳು

ಕರ್ನಾಟಕದಲ್ಲಿ ಈಗಾಗಲೇ ಬುಡಕಟ್ಟುಗಳೆಂದು ಘೋಷಿಸಿರುವ ಬುಡಕಟ್ಟುಗಳ ಸಾಮಾನ್ಯವಾದ ಎಲ್ಲ ಲಕ್ಷಣಗಳು ಇವರಲ್ಲಿರುವುದು ಕಂಡು ಬರುತ್ತದೆ. ಗೊಂದಲಿಗರು ಇಂದಿನ ಮಹಾರಾಷ್ಟ್ರ ರಾಜ್ಯದ ಡೆಕ್ಕನ್ ಪ್ರದೇಶದಲ್ಲಿ ವಾಸವಾಗಿದ್ದ ‘ವಾವುಳೆ’ ಎಂಬ ಬುಡಕಟ್ಟು ಜನಾಂಗದವರೇ ಎಂಬುದಕ್ಕೆ ಅವರಲ್ಲಿರುವ ‘ಗೋತಾ’ (ಬೆಡಗು) ಸಾಕ್ಷಿಯಾಗುತ್ತವೆ. ಮಹಾರಾಷ್ಟ್ರದಲ್ಲಿ ಇವರಿಗೆ ಮಾವುಳ ಜಾತಿಯವರು ಎಂದು ಗುರುತಿಸಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ಈ ಮಾವುಳ ಜಾತಿಯವರನ್ನು ತೋರ‍್ಸಾಲ್ ಪಂಥದಲ್ಲಿ ಗುರುತಿಸಿದ್ದಾರೆ. ಒಟ್ಟು ೯೬ ಬಳಿಗಳ ಇದ್ದ ಬಗ್ಗೆ ತಿಳಿಯುತ್ತದೆ. ಗೊಂದಲಿಗರಲ್ಲರುವ ಕುಲ-ಬಳಿಗಳು ಪ್ರಾಣಿ ಪಕ್ಷಿ ಮತ್ತು ಅವರ ವೃತ್ತಿಯನ್ನು ಸೂಚಿಸುವಂತವೇ ಆಗಿವೆ. ಗೊಂದಲಿಗರು ತಮ್ಮದೇ ಆದ ವಿಶಿಷ್ಟವಾದ ‘ಖಿವಾರಿ’ ಎಂಬ ಭಾಷೆಯನ್ನು ಮಾತನಾಡುತ್ತಾರೆ. ಸೋದರ ಕುಳಿಗಳಲ್ಲಿ ವೈವಾಹಿಕ ಸಂಬಂಧ ಏರ್ಪಡಿಸುವುದು ಇವರಲ್ಲಿ ನಿಷೇಧ. ಹೆಣ್ಣನ್ನು ನೋಡಲು ಗಂಡಿನವರು ಹೆಣ್ಣಿನ ಮನೆಗೆ ಹೋಗಬೇಕು ಮತ್ತು ಮದುವೆ ಹೆಣ್ಣಿನ ಮನೆಯಲ್ಲಿಯೇ ನಡೆಯಬೇಕೆಂಬ ಸಂಪ್ರದಾಯವಿದೆ. ಹೆಣ್ಣಿಗಾಗಿ ಇವರು ಕಡ್ಡಾಯವಾಗಿ ‘ತೆರ’ ಕೊಡಬೇಕೆಂಬ ನಿಯಮವಿದೆ. ಇವರ ಮದುವೆ ಆಚರಣೆಗಳು ಆದಿಮ ಆಚರಣೆಗಳೇ ಆಗಿವೆ. ವಿಧವಾ ವಿವಾಹ ಇವರ ಸಂಸ್ಕೃತಿಯಲ್ಲಿದೆ. ಗೊಂದಲಿಗರು ಮಾಂಸಾಹಾರಿಗಳು. ಒಂದು ಕಾಲಕ್ಕೆ ಬೇಟೆಯಾಡುತ್ತ ಆಹಾರ ಸಂಗ್ರಹಣೆ ಮಾಡುತ್ತಿರುವುದು ಕಂಡುಬರುತ್ತದೆ. ವಿಶೇಷ ಸಂದರ್ಭದ ಆಚರಣೆಗಳಲ್ಲಿ ಕುರಿ, ಮೇಕೆ ಬಲಿ ಕೊಡುವ ಆಚರಣೆಗಳುಂಟು. ಬಲಿಕೊಟ್ಟ ಪ್ರಾಣಿಯ ರುಂಡದ ಬಾಯಿಯಲ್ಲಿ ಅದರ ಕಾಲುಗಳನ್ನು ಇಟ್ಟು ಅದನ್ನು ದೇವಿಯ ಮುಂದಿಟ್ಟು ಪೂಜಿಸುವುದುಂಟು. ಕೆಲ ಪೂಜೆಗಳಲ್ಲಿ ಕುರಿಯ ನಡುವನ್ನೇ ಒಂದೇ ಏಟಿಗೆ ಕತ್ತರಿಸುವ ಸಂಪ್ರದಾಯವೂ ಇವರಲ್ಲಿದೆ.

ಗೊಂದಲಿಗರಲ್ಲಿರುವ ನ್ಯಾಯ ಪದ್ಧತಿ ಇತರೆ ಬುಡಕಟ್ಟುಗಳಿಗಿಂತ ತೀಕ್ಷ್ಣವಾಗಿರುವುದು ಕಂಡು ಬರುತ್ತದೆ. ಇಂದು ಅನೇಕ ಬುಡಕಟ್ಟುಗಳು ತಮ್ಮ ತಂಟೆಗಳನ್ನು ತಮ್ಮದೇ ಆದ ಪಂಚಾಯತಿಯಲ್ಲಿ ಬಗೆ ಹರಿಸಿಕೊಳ್ಳಲಿಕ್ಕಾಗದೇ ಕೋರ್ಟು ಕಛೇರಿ ಮೆಟ್ಟಿಲುಹತ್ತುತ್ತವೆ. ಆದರೆ ಗೊಂದಲಿಗ ಬುಡಕಟ್ಟಿನವರು ತಮ್ಮ ತಮ್ಮ ನ್ಯಾಯಗಳನ್ನು ತಮ್ಮಲ್ಲಿಯೇ ಬಗೆ ಹರಿಸಿಕೊಳ್ಳುವುದನ್ನು ಇಂದೂ ಕಾಣುತ್ತೇವೆ. ನ್ಯಾಯ ತೀರ್ಮಾನಕ್ಕಾಗಿ ಇವರು ಅನುಸರಿಸುವ ಮಾರ್ಗಗಳು ಪರಂಪರಾನುಗತವಾಗಿಯೇ ಬಂದಿರುವಂತವು.

ಮಾತೃ ದೇವತೆಗಳ ಆರಾಧಕರಾದ ಇವರನ್ನು ಇತರೆ ಸಮುದಾಯದವರು ಅಸ್ಪೃಶ್ಯರಂತೆ ಕಾಣುತ್ತಾರೆ. ಅನೇಕರು ಇವರನ್ನು ಮುಟ್ಟಿಸಿಕೊಳ್ಳುವುದಿಲ್ಲ. ಮನೆಯೊಳಗೆ ಕರೆಯುವುದಿಲ್ಲ. ಇತರೆ ವೇಷ ಭೂಷಣ, ಆಚಾರ ವಿಚಾರಗಳನ್ನು ಕಂಡು ಮುಂದುವರೆದ ಸಮುದಾಯಗಳು ಅಸಹ್ಯ ಪಟ್ಟುಕೊಳ್ಳುತ್ತವೆ. ಗೊಂದಲಿಗರಲ್ಲಿ ಕೆಲವರು ಒಂದು ಕಡೆ ನೆಲೆ ಕಂಡುಕೊಳ್ಳಲು ಪ್ರಯತ್ನಿಸಿದವರೆಲ್ಲ ಒಂದು ಊರಿನ ಒಂದೇ ಸ್ಥಳದಲ್ಲಿ ತಮ್ಮ ಮನೆ ಅಥವಾ ಗುಡಿಸಲುಗಳನ್ನು ಕಟ್ಟಿಕೊಳ್ಳುತ್ತ ಬಂದಿದ್ದಾರೆ. ಇತರೆ ಸಂಸ್ಕೃತಿಯವರಿಂದ ದೂರವಿರಲು ಇವರು ಪ್ರಯತ್ನಿಸುತ್ತಿರುವುದು ಕಂಡು ಬರುತ್ತದೆ.

ಗೊಂದಲಿಗರು ಮೂರು ವರ್ಷಕ್ಕೊಮ್ಮೆ ಆಚರಿಸುವ ಅವರ ಪ್ರಾಚೀನ ಆಚರಣೆಗಳಲ್ಲೊಂದಾದ ‘ಕುಲದೇವತೆ’ಯನ್ನು ಪೂಜಿಸುವ ಪರಂಪರೆ ಇನ್ನೂ ಉಳಿದುಕೊಂಡಿದೆ. ಗೊಂದಲಿಗರೆಲ್ಲ ಸೇರಿ ಹೊರಗಿನ ದೇವರೆಂದು ಕರೆಯುವ ದ್ಯಾಮವ್ವ ಅಥವಾ ದುರಗವ್ವ ಎಂಬ ಹೆಸರಿನ ಕುಲದೇವತೆಯನ್ನು ಮಧ್ಯರಾತ್ರಿಯಲ್ಲಿ ಊರ ಹೊರಗಿನ ಪ್ರದೇಶದಲ್ಲಿ ಪೂಜೆ ಮಾಡಿ, ಆ ದೇವಿಗೆ ಕುರಿ ಬಲಿಕೊಟ್ಟು ಅದರ ಮಾಂಸದಿಂದ ಆಡುಗೆ ಮಾಡಿ, ದೇವಿಗೆ ನೈವೇದ್ಯ ಮಾಡಿ ನಂತರ ಎಲ್ಲರೂ ಸೇರಿ ಊಟ ಮಾಡುತ್ತಾರೆ ಮತ್ತು ಉಳಿದ ಆಹಾರವನ್ನು ಅಲ್ಲಿಯೇ ತೆಗ್ಗು ತೆಗೆದು ಮುಚ್ಚಿ ಬರಿಗೈಯಿಂದ ಮನೆಗೆ ಬರುತ್ತಾರೆ. ಬಲಿ ಕೊಡುವುದರಿಂದ ಅವಳಿಂದ ಬರುವ ಆಪತ್ತುಗಳೆಲ್ಲ ದೂರವಾಗುತ್ತವೆ ಎಂಬ ನಂಬಿಕೆ ಇವರಲ್ಲಿದೆ.

ಗೊಂದಲಿಗರು ಮೂಲತಃ ಮಾತೃ ಪ್ರಧಾನ ಕುಟುಂಬದವರು. ಇಂದು ಮಾತೃ ಪ್ರಧಾನ ವ್ಯವಸ್ಥೆಯ ಬದಲಾಗಿ ಪಿತೃಪ್ರಧಾನ ವ್ಯವಸ್ಥೆ ಕಂಡು ಇವರ ಸಮುದಾಯದಲ್ಲಿ ಹೆಣ್ಣಿಗಿರುವ ಸ್ಥಾನ ಮಾನಗಳು ಉನ್ನತ ಸ್ಥಿತಿಯಲ್ಲಿವೆ. ಇವರು ಪಿತೃ ದೈವಗಳಿಗಿಂತ ಮಾತ್ರ ದೈವಗಳಾದ ಎಲ್ಲಮ್ಮ, ರೇಣುಕಾದೇವಿ, ಅಂಬಾಭವಾನಿ, ತುಳಜಾಭವಾನಿ, ದ್ಯಾಮವ್ವ, ದುರಗವ್ವ ಮುಂತಾದ ಶಕ್ತಿ ದೈವಗಳನ್ನು ಅತ್ಯಂತ ಶ್ರದ್ಧೆ ಭಕ್ತಿಯಿಂದ ಪೂಜಿಸುವುದು ಕಂಡು ಬರುತ್ತದೆ.

ಗೊಂದಲಿಗರ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬದುಕಿನಲ್ಲಿ ಬುಡಕಟ್ಟುಗಳಲ್ಲಿರುವ ಎಲ್ಲ ಲಕ್ಷಣಗಳು ಇನ್ನು ಉಳಿಸಿ ಕೊಂಡಿರುವುದು ಕಂಡು ಬರುತ್ತದೆ. ಹೀಗಾಗಿ ಗೊಂದಲಿಗರು ಅಲೆಮಾರಿ ಬುಡಕಟ್ಟಿನ ವರ್ಗಕ್ಕೆ ಸೇರಿದವರೆಂದು ನಿಸ್ಸಂದೇಹವಾಗಿ ಹೇಳಬಹುದು.

೧.೩ ಅಧ್ಯಯನದ ವಿಧಾನ

ಗೊಂದಲಿಗರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಈ ಅಧ್ಯಯನಕ್ಕೆ ಅನುಸರಿಸಿರುವ ವಿಧಾನಗಳು ಈ ಕೆಳಗಿನಂತಿವೆ.

೧. ಪ್ರಶ್ನಾವಳಿ ವಿಧಾನ : ಗೊಂದಲಿಗರ ಸಮೀಕ್ಷೆಗಾಗಿ ಪ್ರಶ್ನಾವಳಿಯನ್ನು ಸಿದ್ಧಪಡಿಸಿಕೊಂಡು ಅದರ ಮೂಲಕ ಮಾಹಿತಿಯನ್ನು ಸಂಗ್ರಹಿಸುವುದು.

೨. ಸಂದರ್ಶನ ವಿಧಾನ : ಗೊಂದಲಿಗರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ರಾಜಕೀಯ ಮತ್ತು ಶೈಕ್ಷಣಿಕ ಬದುಕಿನ ಅಧ್ಯಯನಕ್ಕೆ ನೇರವಾಗಿ ವಕ್ತೃಗಳನ್ನು ಸಂದರ್ಶಿಸಿ ಅವರಿಂದ ಮಾಹಿತಿಯನ್ನು ಸಂಗ್ರಹಿಸಲಾಗುವುದು.

೩. ಗೊಂದಲಿಗರು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಚಿತ್ರಣವನ್ನು ಸೆರೆ ಹಿಡಿಯಲು ಅಡಿಯೋ, ವಿಡಿಯೋ ಮತ್ತು ಛಾಯಚಿತ್ರಗಳ ಮೂಲಕ ದಾಖಲಾತಿ ಮಾಡುವುದು.

೧.೪ ಅಧ್ಯಯನದ ವ್ಯಾಪ್ತಿ

ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಂಡು ಬರುವ ಗೊಂದಲಿಗರನ್ನು ಕಡಿಮೆ ಅವಧಿಯಲ್ಲಿ ಈ ಅಧ್ಯಯನಕ್ಕೆ ಅಳವಡಿಸುವುದು ಕಷ್ಟದ ಕೆಲಸ. ಹೀಗಾಗಿ ಹೆಚ್ಚು ಜನಸಂಖ್ಯೆಯುಳ್ಳ ಜಿಲ್ಲೆಗಳಲ್ಲಿ ಕಂಡುಬರುವ ಗೊಂದಲಿಗರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕೆಲ ಜಿಲ್ಲೆಗಳಲ್ಲಿರುವ ಗೊಂದಲಿಗರನ್ನು Sample Sarvey ಮಾಡುವ ಮೂಲಕ ಸಮೀಕ್ಷೆಗೆ ಅಳವಡಿಸಿಕೊಳ್ಳಲಾಗಿದೆ. ಬಡತನ ರೇಖೆಗಿಂತ ಕಡಿಮೆ ಇರುವ ಪ್ರದೇಶಗಳಲ್ಲಿ ಇರುವ ಕುಟುಂಬಗಳ ಪೂರ್ಣ ಮಾಹಿತಿಯನ್ನು ಪಡೆಯಲಾಗಿದೆ.

ಪ್ರಾದೇಶಿಕವಾಗಿ ಗೊಂದಲಿಗರ ಆಚಾರ, ವಿಚಾರ, ನಡೆ ನುಡಿ, ವೃತ್ತಿಗಳು, ಭಿನ್ನ ಭಿನ್ನವಾಗಿರುವುದರಿಂದ ಪ್ರತಿಯೊಂದು ಪ್ರದೇಶದ ಕೆಲ ಗೊಂದಲಿಗರನ್ನು ಈ ಅಧ್ಯಯನಕ್ಕೆ ಒಳಪಡಿಸುವ ಮೂಲಕ ಅವರ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ, ಹೊಸಪೇಟೆ ನಗರ, ಕಂಪ್ಲಿ ಬಳ್ಳಾರಿ ನಗರ, ಹಗರಿಬೊಮ್ಮನಹಳ್ಳಿ, ಹಂಪಾಪಟ್ಟಣ, ಗುಲಬರ್ಗಾ ನಗರ, ಬಾಲಗೇರಿ ಗ್ರಾಮ, ಆಳಂದ ತಾಲೂಕಿನ ಮಾದನ ಹಿಪ್ಪೆಣಿ, ಹಡಗಲಿ, ನೀರಗುಡಿ, ಚಲಗೇರಾ, ಆಳಂದನಗರ, ಕಲ್ಲ ಹಂಗರಣ, ಕರಿ ಅಂಬಣ, ಚಿಂಚನೂರು, ಸಾವಳಗಿ, ಜಾವಳಿ, ಮಟಕಿ ಪಟ್ಟಣ, ನಿಂಗದ ಹಳ್ಳಿ ಬೆಳಗಮಿ ಗ್ರಾಮ, ಯಳಸಂಗಿ, ನರೋಣ, ನಿಂಬರಣ ಮತ್ತು ಧಂಗಾಪುರ, ಬೀದರ್ ನಗರ ಬಾಲ್ಕಿ ತಾಲೂಕಿನ ಬತಂಬ್ರಾ, ಬಡಸಗಾವಿ, ವಾರಟ್ಟೆ, ತೆಲಗಾವಿ, ಮೆಹಕರ, ಲಕನಗಾಂವ ಮತ್ತು ಬಾಲ್ಕಿ ನಗರ, ಹುಮ್ನಾಬಾದ ತಾಲೂಕಿನ ಕಮಲಾಪುರ, ದಮ್ಮಸೂರು, ಜಾರಾದ ತಾಲೂಕಿನ ನಗರ ಪ್ರದೇಶ, ಧಾರವಾಡ ಜಿಲ್ಲೆಯ ನವಲಗುಂದ ನಗರ, ಅಣ್ಣಿಗೇರಿ ಹುಬ್ಬಳ್ಳಿ, ಧಾರವಾಡ ತಾಲೂಕಿನ ಲೋಕೂರು, ದಾವಣಗೆರೆ ನಗರ, ಕೊಪ್ಪಳ ನಗರ, ಗದಗ ಜಿಲ್ಲೆಯ ಮುಂಡರಗಿ ನಗರ, ಹಾವೇರಿ ಜಿಲ್ಲೆಯ ಹಾನಗಲ್ಲ ನಗರ ಪ್ರದೇಶ, ಶಿರಗೋಡ, ತಿಳುವಳ್ಳಿ, ಚಿಕ್ಕಾಂಶಿ ಹೊಸೂರು, ಬೆಳಗಾವಿ ಜಿಲ್ಲೆ ಬೈಲಹೊಂಗಲ, ಕಿತ್ತೂರು ನಯಾನಗರ, ವಕ್ಕುಂದ ಸವದತ್ತಿ ತಾಲೂಕ್ಕಿನ, ದೂಪದಾಳ, ಉಗರಗೋಳ, ರಾಮದುರ್ಗ ತಾಲೂಕಿನ ಕಟಕೋಳ, ಸುರೇಬಾನ, ಶಿವಮೊಗ್ಗ ನಗರ, ಸಾಗರ, ಆನಂದಪುರಂ, ಸೊರಬ ತಾಲೂಕಿನ ಚಿತ್ರದಹಳ್ಳಿ, ಮಳಕಲಿಕೊಪ್ಪ ಶಿಕಾರಿಪುರ ನಗರ ಪ್ರದೇಶ, ಅಮಟಿಕೊಪ್ಪ ಹರಗುವಾಳು, ತೊಗಸಿಗ್ರಾಮ, ಸಂಡ, ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕಾರವಾರ ನಗರ ಪ್ರದೇಶ, ಹಳಿಯಾಳ ನಗರ, ಯಲ್ಲಾಪುರ ನಗರ ಪ್ರದೇಶ, ಜಡಿಗದ್ದೆ, ಡೋಮಗೆರೆ, ಭರತನಹಳ್ಳಿ, ಕೋಳಿಕೆರೆ, ದುಮ್ಮಗೇರಿ ಮತ್ತು ಭಟ್ಕಳ ನಗರ ಪ್ರದೇಶದಲ್ಲಿರವು ಗೊಂದಲಿಗರನ್ನು ಈ ಅಧ್ಯಯನಕ್ಕಾಗಿ ಅಳವಡಿಸಿಕೊಳ್ಳಲಾಗಿದೆ. ಈ ಪ್ರದೇಶಗಳ ಪ್ರತಿ ಕುಟುಂಬದ ಸಮಗ್ರವಾದ ವಿಷಯವನ್ನು ಸಂಗ್ರಹಿಸಲಾಗಿದೆ.

೧.೫ ಯೋಜನೆಯ ಗುರಿಗಳು

ಗೊಂದಲಿಗರು ನೂರಾರು ವರ್ಷಗಳಿಂದ ತಮ್ಮಲ್ಲಿಯ ಕಲೆಯನ್ನೇ ವೃತ್ತಿಯಾಗಿಸಿಕೊಂಡು ಅದನ್ನು ನಾಗರಿಕ ಸಮುದಾಯದ ಮುಂದೆ ಪ್ರದರ್ಶಿಸಿ ಅವರನ್ನು ರಂಜಿಸಿ ನಂತರ ಜನರಿಂದ ಭಿಕ್ಷೆ ಬೇಡುತ್ತ ಊರಿಂದೂರಿಗೆ ಸಂಚರಿಸುವ ಅಲೆಮಾರಿ ಜನಾಂಗ. ಶತಮಾನಗಳಿಂದ ಸ್ಮಶಾನ, ಧರ್ಮಚಿತ್ತ, ಶಾಲೆಬಯಲು, ಊರ ಹೊರಗಿನ ಬೈಲು ಪ್ರದೇಶ ಮತ್ತು ಹಾಳುಬಿದ್ದ ದೇವಸ್ಥಾನಗಳಲ್ಲಿ Tent ಹಾಕಿಕೊಂಡು ಕಾಲ ನೂಕುತ್ತ ಬಂದವರು ಪೇಶ್ವೆಯರು ಇವರಲ್ಲಿರುವ ಕಲೆಯನ್ನು ಬೇಹುಗಾರಿಕಾ ವೃತ್ತಿಗೆ ಬಳಸಿಕೊಂಡು ಅವರ ಶ್ರದ್ಧೆ, ನಿಷ್ಠೆ, ಧೈರ್ಯ, ಸಾಹಸ, ಮೆಚ್ಚಿಕೊಂಡಾಡಿದರು. ಈಗ ರಾಜ ಮಹಾರಾಜರ ಕಾಲ ಮುಗಿದು ಹೋಗಿದೆ. ಈಗ ಈ ಅಲೆಮಾರಿ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಯಾವ ರೀತಿಯ ಅಭಿವೃದ್ಧಿಯನ್ನೂ ಹೊಂದದೆ ನಾಗರಿಕ ಸಮಾಜದಿಂದ ಅವಮಾನಗಳಿಗೆ ಗುರಿಯಾಗುತ್ತ, ತುತ್ತು ಕೂಳಿಗಾಗಿ ಪರದಾಡುವಂತಹ ಸ್ಥಿತಿಗೆ ತಲುಪಿದೆ. ತಲೆ ಮೇಲೆ ಸೂರಿಲ್ಲದೆ, ನೆಲೆ, ನೆಲ ಇಲ್ಲದೆ ಅಕ್ಷರ ಜ್ಞಾನವಿಲ್ಲದೇ, ಕಥೆಗಾರ, ಬೀದಿ ಹಾಡುಗಾರ, ಬುಡಬುಡಕೆ, ಭೂತೇಯ, ಸಿಂಗದವ, ವಾಸುದೇವ, ಗಿಳಿಶಾಸ್ತ್ರ, ಹಸ್ತಸಾಮುದ್ರಿಕ, ಅರೆಪಂಚಾಂಗ ಮುಂತಾದ ಕಲಾವೃತ್ತಿಗಳ ಮೂಲಕ ಭಿಕ್ಷಾಟನೆಯಲ್ಲಿಯೇ ಬದುಕುತ್ತಿರುವುದು ದುರಂತವೇ ಆಗಿದೆ. ಗೊಂದಲಿಗರು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ, ಬದುಕನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಅವರು ಅಲೆಮಾರಿ ಬುಡಕಟ್ಟಿಗೆ ಸೇರಿದ ಎಲ್ಲ ಲಕ್ಷಣಗಳೂ ಕಂಡು ಬರುತ್ತವೆ. ಸರ್ಕಾರ ಗೊಂದಲಿಗರನ್ನು ಹಿಂದುಳಿದ ವರ್ಗದಲ್ಲಿ ಸೇರಿಸಿದೆ. ಈ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಶಿಫಾರಸ್ಸನ್ನು ಕರ್ನಾಟಕ ಸರ್ಕಾರ ಮಾಡಬೇಕಾಗಿದೆ.

‘ಆಧುನಿಕ ಜಗತ್ತಿನಲ್ಲಿ ಅಲೆಮಾರಿಗಳು ನೆಲ ಮತ್ತು ನೆಲೆ ಎರಡೂ ಇಲ್ಲದವರು. ಹೀಗಾಗಿ ಇವರು ಸಮಾಜದ ಮುಖ್ಯಸ್ಥಾನದಲ್ಲಿ ನಿಲ್ಲಲು ಸಾಧ್ಯವಾಗಿಲ್ಲ. ಅವರು ಮುಖ್ಯವಾಹಿನಿಯಲ್ಲಿ ಪಾಲುದಾರರಾಗಲು ಆಗುತ್ತಿಲ್ಲ. ಕರ್ನಾಟಕದಲ್ಲಿರುವ ಗೊಂದಲಿಗರ ಇಂದಿನ ಸ್ಥಿತಿಗತಿಗಳನ್ನು ಗಮನಿಸಿದರೆ ಅವರು ಉತ್ಪಾದನಾ ವ್ಯವಸ್ಥೆಯಲ್ಲಿ ಎಂದೂ ತೊಡಗಿಸಿಕೊಂಡವರಲ್ಲ ಬೇರೆಯವರ ಉತ್ಪಾದನೆಯಲ್ಲಿ ಕೈ ಚಾಚಿ ಬದುಕುವ ಪರಂಪರೆಯಲ್ಲಿಯೇ ಬಂದಿದ್ದಾರೆ. ಇವರು ಆರಿಸಿಕೊಂಡಿರುವ ವೃತ್ತಿಗಳಾದ ಶಾಸ್ತ್ರ ಶಕುನ ಹೇಳುವುದು, ಮಾಟ ಮಂತ್ರ ಮಾಡುವುದು, ಕವದಿ ಹೊಲೆಯುವುದು, ಕಥೆ ಹೇಳುವುದು, ಹಾಡು ಹೇಳುವುದು ಕಲಾ ಸೇವೆ ಮಾಡುವುದು, ವಾದ್ಯ ನುಡಿಸುವುದು ಮತ್ತು ವೇಷ ಹಾಕುವುದು ಇವು ಸಮಾಜಕ್ಕೆ ಅನಿವಾರ್ಯವಾಗಿ ಬೇಕಾದ ವೃತ್ತಿಗಳಲ್ಲ’.

ಗೊಂದಲಿಗರ ಎಲ್ಲ ಉಪಂಗಡದವರು ಒಂದಲ್ಲ ಒಂದು ರೀತಿಯಿಂದ ಭಿಕ್ಷಾಟನೆ ಮಾಡುವವರೇ ಆಗಿದ್ದಾರೆ ಮತ್ತು ಭಿಕ್ಷಾಟನೆಯನ್ನು ತಮ್ಮ ಉತ್ಪಾದನೆಯೆಂದೇ ಭಾವಿಸಿಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ಅಲೆಮಾರಿಗಳ ಸ್ಥಿತಿಯಲ್ಲಿ ಉಳಿಯುವಂತಾಗಿದೆ. ಇಂದು ಗೊಂದಲಿಗರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ, ಸಂಘಟಕರಾಗಬೇಕು. ಸಮುದಾಯದ ರಕ್ಷಣೆಗಾಗಿ ಸ್ವ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲೇಬೇಕು. ಭಿಕ್ಷಾಟನೆಯನ್ನೇ ಉದ್ಯೋಗ ಎಂದು ತಿಳಿದುಕೊಳ್ಳಬಾರದು. ಅಲೆಮಾರಿತನಕ್ಕೆ ಕಡಿವಾಣಹಾಕಿ ಕಡ್ಡಾಯವಾಗಿ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಂತಾಗಬೇಕು. ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಸರ್ಕಾರ ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ನೆರವೂ ಅವರಿಗೆ ಅವಶ್ಯವಾಗಿ ನೀಡಬೇಕಾಗಿದೆ.

ಗೊಂದಲಿಗರು ಆಧುನಿಕ ಸಮಾಜದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಯಾವ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಈ ಅಧ್ಯಯನವನ್ನು ಕೈಗೆತ್ತಿಕೊಳ್ಳಲಾಯಿತು.