ಪರಂಪರಾನುಗಾತವಾಗಿ ತಮ್ಮಲ್ಲಿರುವ ಕಲೆಯ ಪ್ರದರ್ಶನ ನೀಡುತ್ತ ಅದನ್ನೇ ವೃತ್ತಿಯಾಗಿಸಿಕೊಂಡು, ಭಿಕ್ಷೆ ಬೇಡುತ್ತ ಅಲೆದಾಡುತ್ತಿರುವ ಅಲೆಮಾರಿ ಬುಡಕಟ್ಟು ಸಮುದಾಯವಾದ ಗೊಂದಲಿಗರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ತೀರ ಹಿಂದುಳಿದಿದ್ದಾರೆ. ಕರ್ನಾಟಕದಲ್ಲಿ ವಾಸಿಸುತ್ತಿರುವ ಈ ಸಮುದಾಯದ ಸಾಮಾಜಿಕ, ಆರ್ಥಿಕ, ಮತ್ತು ಶೈಕ್ಷಣಿಕ, ಸಾಂಸ್ಕೃತಿಕ, ಜನಾಂಗಿಕ ಸ್ಥಿತಿಗತಿಗಳು, ಇಂದು ಯಾವ ಹಂತದಲ್ಲಿವೆ ಎಂಬುದನ್ನು ತಿಳಿದುಕೊಳ್ಳುವುದೇ ಈ ಅಧ್ಯಯನದ ಪ್ರಮುಖ ಉದ್ದೇಶವಾಗಿದೆ.

೧.೧ ಗೊಂದಲಿಗರ ಭೌಗೋಳಿಕ ನೆಲೆ

ಕರ್ನಾಟಕದಲ್ಲಿ ಅಲೆಮಾರಿ ಜನಾಂಗವಾಗಿರುವ ಗೊಂದಲಿಗರ ಮೂಲ ನೆಲೆಯನ್ನು ಗುರುತಿಸುವಲ್ಲಿ ಅನೇಕ ಗೊಂದಲಗಳಿವೆ ಗೊಂದಲಿಗರನ್ನು ಕೆಲವರು ಮಹಾರಾಷ್ಟ್ರದವರೆಂದು, ಇನ್ನು ಕೆಲವರು ಅವರು ಕನ್ನಡದ ನೆಲದವರೇ ಎಂಬ ಹೇಳಿಕೆಗಳುಂಟು. ಒಂದು ಕಾಲದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕ ಸಾಂಸ್ಕೃತಿಕ ದೃಷ್ಟಿಯಿಂದ ಇವೆರಡೂ ಒಂದೇ ಆಗಿತ್ತು. ಭಾಷಾವಾರು ಪ್ರಾಂತದ ರಚನೆಯ ನಂತರ ಮಹಾರಾಷ್ಟ್ರ ಪ್ರತ್ಯೇಕ ರಾಜ್ಯವಾಗಿ ಪರಿಣಮಿಸಿತು. ಡಾ. ಶಂ.ಬಾ ಜೋಶಿ ಅವರು ಹೇಳಿರುವಂತೆ ‘ಕರ್ನಾಟಕ-ಮಹಾರಾಷ್ಟ್ರಗಳ ಸಂಬಂಧ ಕ್ರಿಸ್ತ ಪೂರ್ವದ್ದು, ಅಷ್ಟೇ ಏಕೆ ಕ್ರಿ.ಶ. ಹದಿಮೂರನೆಯ ಶತಮಾನದವರೆಗಿನ ರಾಜರುಗಳಾದ ಕದಂಬರು, ಚಾಲುಕ್ಯರು, ರಾಷ್ಟ್ರಕೂಟರು, ಶಿಲಾಹಾರರು ಈ ಪ್ರದೇಶವನ್ನು ಆಳಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕವೆರಡೂ ರಾಜ್ಯಗಳನ್ನಾಳಿದವರು ದೇವಗಿರಿಯ ‘ಯಾದವರು’. ‘ತಾರಾತಂತ್ರ’ ಗ್ರಂಥದಲ್ಲಿ ಮಹಾರಾಷ್ಟ್ರದ ಹೆಸರನ್ನೂ ಕರ್ನಾಟಕವೆಂದು ಕರೆದು ಅವೆರಡೂ ಒಂದೇ ದೇಶವೆಂದು ಹೇಳಲಾಗಿದೆ’. ದಕ್ಷಿಣ ಮಹಾರಾಷ್ಟ್ರದಲ್ಲಿ ಇಂದಿನವರೆಗೂ ಅಲ್ಲಿ ಕನ್ನಡದ ಶಿಲಾಶಾಸನಗಳೇ ದೊರಕಿವೆ. ಅಲ್ಲಿ ಒಂದೂ ಮರಾಠಿ ಶಾಸನ ಸಿಕ್ಕಿಲ್ಲ ಎಂಬುದನ್ನು ಗಮನಿಸಬೇಕಾಗುತ್ತದೆ.’ ಕರ್ನಾಟಕ ಮತ್ತು ಮಹಾರಾಷ್ಟ್ರಗಳ ಗಾಢವಾದ ಸಂಬಂಧ ಅತ್ಯಂತ ವಿಶಿಷ್ಟವಾಗಿದೆ. ರಾಜಕೀಯವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ, ಧಾರ್ಮಿಕವಾಗಿ ಕೊಡುಕೊಳ್ಳುವಿಕೆಗಳು ಇಂದೂ ನಡೆದಿರುವುದು ಕಂಡು ಬರುತ್ತದೆ.

ಕ್ರಿ.ಶ. ೮೬೦ರಲ್ಲಿ ಕವಿರಾಜ ಮಾರ್ಗಕಾರನು ಅಂದಿನ ಕನ್ನಡನಾಡಿನ ವಿಸ್ತಾರವನ್ನು ‘ಕಾವೇರಿಯಿಂದ ಗೋದಾವರಿವರಮಿರ್ಪ ನಾಡದಾ ಕನ್ನಡದೋಳ್’ ಎಂದು ಹೇಳಿದ್ದಾನೆ. ಹಿಂದೊಂದು ಕಾಲದಲ್ಲಿ ಕೊಲ್ಲಾಪುರದ ಮಹಾಲಕ್ಷ್ಮೀ, ಮಾಹೂರದ ರೇಣುಕಾ, ತುಳಜಾಪುರದ ಅಂಬಾಭವಾನಿ ಮುಂತಾದ ಪ್ರಸಿದ್ಧ ಶಕ್ತಿ ಪೀಠಗಳು ಕನ್ನಡ ನಾಡಿನ ಪರಿಸರದಲ್ಲಿಯೇ ಗುರುತಿಸಿಕೊಂಡಿದ್ದವು. ರಾಜ್ಯದ ಭೌಗೋಳಿಕ ಗಡಿಗಳು ಬೇರೆ ಬೇರೆಯದದ್ದರಿಂದ ಈ ದೇವತೆಗಳು ಇಂದು ಮಹಾರಾಷ್ಟ್ರದಲ್ಲಿ ಉಳಿದಿವೆ. ಇಂದೂ ಭಕ್ತಿಯನ್ನು ಅರ್ಪಿಸುತ್ತಾರೆ. ಅದರಂತೆ ಕರ್ನಾಟಕದ ಅನೇಕ ಭಕ್ತರು ಅಂಬಾಭವಾನಿ, ತುಳಜಾಭವಾನಿ, ಮಹಾಲಕ್ಷ್ಮೀ ದೇವಾಸ್ಥಾನಗಳಿಗೆ ಹೋಗಿ ಬರುವ ಪರಂಪರೆಯನ್ನು ಉಳಿಸಿಕೊಂಡಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಯಾವ ಯಾವ ಪ್ರದೇಶದಲ್ಲಿ ಶಕ್ತಿ ದೇವತೆಗಳ ಪೀಠಗಳಿವೆಯೋ ಅಲ್ಲಲ್ಲಿ ಗೊಂದಲಿಗರು ಇರುವುದು ಕಂಡು ಬರುತ್ತದೆ. ಹೀಗಾಗಿ ಗೊಂದಲಿಗರು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ ಅಥವಾ ಕರ್ನಾಟಕದಿಂದ ಮಹಾರಾಷ್ಟ್ರಕ್ಕೋ ವಲಸೆ ಬಂದವರು ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಸೂಕ್ತವಾದುದಲ್ಲ.

‘ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಗೊಂದಲೀ ನೃತ್ಯದ ಬಗ್ಗೆ ಅನೇಕ ಪ್ರಾಚೀನ ಕವಿಗಳು ಉಲ್ಲೇಖಿಸಿದ್ದಾರೆ. ಗೌಂಡಲೀ ಅಥವಾ ಗೊಂದಲೀ ನೃತ್ಯ ಕರ್ನಾಟಕದಲ್ಲಿಯೇ ಹುಟ್ಟಿದೆ ಎಂಬ ಮಾತನ್ನು ಯಾದವರ ಕಾಲದ ಶಾಂಜ್ಞಾದೇವ ಉಲ್ಲೇಖಿಸಿದ್ದಾನೆ. ಗೊಂದಲ ಶಬ್ದವನ್ನು ಕನ್ನಡದ ಆದಿಕವಿ ಪಂಪ, ರುದ್ರಭಟ್ಟ, ಅಭಿನವ ಪಂಪ ಮತ್ತು ಶರಣರು ಸಮೂಹಾರ್ಥದಲ್ಲಿ ಬಳಸಿದ್ದಾರೆ. ನಾಗಚಂದ್ರ ತನ್ನ ಮಲ್ಲಿನಾಥ ಪುರಾಣದಲ್ಲಿ ‘ಕುಣಿವ ಗೊಂದಣ’ ಎಂಬ ಪದ ಬಳಸಿದ್ದಾನೆ’.

ಕ್ರಿ.ಶ.೧೨೪೦ರಲ್ಲಿ ‘ನೃತ್ಯರತ್ನಾವಳಿ’ ಎಂಬ ನೃತ್ಯಶಾಸ್ತ್ರ ಗ್ರಂಥವನ್ನು ರಚಿಸಿದ ವಾರಂಗಲ್ದ ಕಾಕತೀಯ ಗಣಪತಿ ರಾಜನ ಗಜದಳಾಧಿಪತಿಯಾದ ಜಾಯಣನು ‘ಕಲ್ಯಾಣಿಯ ರಾಜ ಮುಮ್ಮಡಿ ಸೋಮೇಶ್ವರನು ತನ್ನ ರಾಜಧಾನಿಯಾದ ಕಲ್ಯಾಣದಲ್ಲಿ ಭೂತಮಾತೃ ಮಹೋತ್ಸವದ ನಿಮಿತ್ತವಾಗಿ ‘ಗೊಂಡಲೀ’ ಎಂಬ ನೃತ್ಯದಲ್ಲಿ ಕೆಲವು ಸುಧಾರಣೆ ಮಾಡಿದನೆಂದೂ ಅದಕ್ಕೆ ‘ಚಿತ್ರಗೊಂಡಲಿ’ ಎಂಬ ಹೆಸರು ಕೊಟ್ಟನೆಂದೂ ತನ್ನ ಗ್ರಂಥದಲ್ಲಿ ಉಲ್ಲೇಖಿಸಿದ್ದಾನೆ.

ಕ್ರಿ.ಶ.೧೨-೧೩ನೇ ಶತಮಾನದಲ್ಲಿ ಪಾಲ್ಕುರಿಕೆ ಸೋಮನಾಥ ರಚಿಸಿದ ತೆಲುಗು ಬಸವ ಪುರಾಣದಲ್ಲಿ ಬಸವಣ್ಣನ ಮದುವೆ ಸಂದರ್ಭದಲ್ಲಿ ಗೊಂಡ್ಲಿ ಅಥವಾ ಗೊಂದಲಿಗರೂ ಪಾಲ್ಗೊಂಡಿರುವ ಬಗ್ಗೆ ಉಲ್ಲೇಖಿಸಿದ್ದಾನೆ.

‘ಗೊಂದಲ’ವನ್ನು ಒಂದೊಂದು ಕಡೆಯಲ್ಲಿ ಒಂದೊಂದು ಕಾಲದಲ್ಲಿ ಒಂದೊಂದು ಹೆಸರಿನಿಂದ ಕರೆದಿದ್ದಾರೆ. ಗೊಂದಣ, ಗೊಂದಳ, ಗೊಂಡ್ಲಿ, ಗೊಂಡಗೀ, ಗುಂಡಲೀ, ಗೋಂದೋಳು, ಗೌಂಡಳೀ, ಗೌಂಡ್ಲಿ, ದುಂಡಲೀ, ಗೊಂಧಳ್, ಎಂಬ ಸಮಾನಾರ್ಥಕ ಹೆಸರುಗಳಿಂದ ಕರೆದಿದ್ದಾರೆ. ಗೊಂದಲ ಈ ಶಬ್ದಕ್ಕೆ ಹಲವು ಅರ್ಥಗಳಿವೆ. ಗುಂಪು, ಭಜನೆಗುಂಪು, ದೈವಾವೇಶದಿಂದ ಕುಣಿಯುವ ಸಾಮೂಹಿಕ ಪ್ರಾರ್ಥನೆ ಇತ್ಯಾದಿ.

ಅಲೆಮಾರಿಗಳಾದ ಗೊಂದಲಿಗರು ಕರ್ನಾಟಕ ಮಹಾರಾಷ್ಟ್ರವಲ್ಲದೇ, ಆಂಧ್ರಪ್ರದೇಶ, ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿಯೂ ಕಂಡು ಬರುತ್ತಾರೆ. ಗೊಂದಲಿಗರಲ್ಲಿ

೧) ಗೊಂದಲಿ ವೃತ್ತಿ ಗಾಯಕರು (ಕಥೆಗಾರರು ಮತ್ತು ಬೀದಿ ಹಾಡುಗಾರರು)

೨) ಭೂತೇಯರು (ಎಣ್ಣೆ ಜೋಗಿಗಳು)

೩) ಸಿಂಗದವರು

೪) ಬುಡಬುಡಕೆಯವರು

೫) ವಾಸುದೇವರು

೬) ಜ್ಯೋತಿಷಿಗಳು (ಹಸ್ತಸಾಮುದ್ರಿಕ ಮತ್ತು ಗಿಳಿಶಾಸ್ತ್ರ)

ಈ ಉಪ ಪಂಗಡಗಳಿವೆ. (ಬುಡಬುಡಕೆಯವರನ್ನು ಕರಾವಳಿ ಕರ್ನಾಟಕದಲ್ಲಿ ನರಸಣ್ಣ ಎಂದು ಕರೆಯುವರು)

ಗೊಂದಲಿಗರು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಅಲೆಮಾರಿಗಳಾಗಿದ್ದು ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಅವರು ಕಂಡು ಬರುತ್ತಾರೆ. ಬೆರಳೆಣಿಕೆಯಷ್ಟು ಜನರು ಅಲ್ಲಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡಿದ್ದರೂ ಅಲೆಮಾರಿತನದಿಂದ ಅವರು ಇನ್ನೂ ಬಿಡುಗಡೆ ಹೊಂದಿಲ್ಲವೆಂದು ಹೇಳಬೇಕಾಗುತ್ತದೆ.

ಅಲೆಮಾರಿ ಗೊಂದಲಿಗರು ವಾಸಿಸುತ್ತಿರುವ ಪ್ರದೇಶಗಳು

೧) ಧಾರವಾಡ ಜಿಲ್ಲೆ

ಧಾರವಾಡ ತಾಲ್ಲೂಕು
೧) ರಾಯರ ಹುಬ್ಬಳ್ಳಿ
೨) ಲೋಕೂರು
೩) ತೇಗೂರು
೪) ಅಳ್ನಾವರ
೫) ಧಾರವಾಡ (ಶಹರ)

ನವಲಗುಂದ ತಾಲೂಕು
೧) ನವಲಗುಂದ
೨) ಅಣ್ಣಿಗೇರಿ
೩) ಶಲವಡಿ

ಹುಬ್ಬಳ್ಳಿ ತಾಲೂಕು
೧) ಹುಬ್ಬಳ್ಳಿ (ಶಹರ)
೨) ಉಣಕಲ್
೩) ನವನಗರ
೪) ಹಳೇ ಹುಬ್ಬಳ್ಳಿ

ಕುಂದಗೋಳ ತಾಲೂಕು
೧) ಕುಂದಗೋಳ

ಕಲಘಟಗಿ ತಾಲೂಕು
೧) ಕಲಘಟಗಿ

೨) ಗದಗ ಜಿಲ್ಲೆ

ಗದಗ ತಾಲೂಕು
೧) ಗದಗ (ಶಹರ)
೨) ಕುರ್ತಕೋಟಿ ಕೋಟೆ
೩) ಹುಲಕೋಟೆ

ಮುಂಡಗೋಡ ತಾಲೂಕು
೧) ಮುಂಡಗೋಡ (ಶಹರ)
೨) ಸಿಂಗಟಾಲೂರು

ರೋಣ ತಾಲೂಕು
೧) ರೋಣ (ಶಹರ)
೨) ನರೇಗಲ್ಲ
೩) ನಿಡಗುಂದಿ
೪) ಹೊಳೆ ಆಲೂರು
೫) ಬೆಳವಣಿಕೆ
೬) ಯಾವಗಲ್

ನರಗುಂದ ತಾಲೂಕು
೧) ನರಗುಂದ (ಶಹರ)
೨) ಕೊಣ್ಣೂರು

೩) ಬಾಗಲಕೋಟೆ ಜಿಲ್ಲೆ

ಬಾಗಲಕೋಟ ತಾಲೂಕು
೧) ಬಾಗಲಕೋಟೆ (ಶಹರ)
೨) ಗದ್ದನಕೇರಿ

ಬದಾಮಿ ತಾಲೂಕು
೧) ಬದಾಮಿ (ಶಹರ)
೨) ಚೊಳಚಗುಡ್ಡ
೩) ಬೇಲೂರು
೪) ಕೆಲೂರು
೫) ಗುಳೇದ ಗುಡ್ಡ

ಬೀಳಗಿ ತಾಲೂಕು
೧) ಬೀಳಗಿ (ಶಹರ)

ಮುಧೋಳ ತಾಲೂಕು
೧) ಲೋಕಾಪುರ
೨) ರಾಮಾಪುರ

ಹುನಗುಂದ ತಾಲೂಕು
೧) ಹುನಗುಂದ (ಶಹರ)
೨) ಅಮ್ಮಿನಗಡ
೩) ಇಳಕಲ್
೪) ಗುಡೂರು
೫) ಕೋಡಿಹಾಳ
೬) ಕಮಟಗಿ
೭) ಕಲಾದಗಿ

೪) ಬೆಳಗಾವಿ ಜಿಲ್ಲೆ

ಬೆಳಗಾವಿ ತಾಲೂಕು
೧) ಬೆಳಗಾವಿ (ಶಹರ)
೨) ಕಾಕತಿ

ಸವದತ್ತಿ ತಾಲೂಕು
೧) ಸವದತ್ತಿ (ನಗರ)
೨) ದೂಪದಾಳ
೩) ಮುನವಳ್ಳಿ
೪) ಗುರ್ಲಹೊಸೂರು
೫) ಉಗರಗೋಳ

ರಾಮದುರ್ಗ ತಾಲೂಕು
೧) ರಾಮದುರ್ಗ (ನಗರ)
೨) ಕಟಕೋಳ
೩) ಹುಲೀಕಟ್ಟೆ
೪) ಸುರೇವಾನ

ಬೈಲಹೊಂಗಲ ತಾಲೂಕು
೧) ಬೈಲಹೊಂಗಲ (ನಗರ)
೨) ಆನಿಗೋಳ
೩) ಚನ್ನಮ್ಮನ ಕಿತ್ತೂರು
೪) ಎಂ.ಕೆ.ಹುಬ್ಬಳ್ಳಿ
೫) ನಯಾನಗರ
೬) ವಕ್ಕುಂದ
೭) ಕೊದಾನಪುರ
೮) ನೇಸರಗಿ

ಹುಕ್ಕೇರಿ ತಾಲೂಕು
೧) ಹುಕ್ಕೇರಿ (ನಗರ)
೨) ಸಂಕೇಶ್ವರ
೩) ನಿಪ್ಪಾಣಿ
೪) ನೇಸರಗಿ

ಅಥಣಿ ತಾಲೂಕು
೧) ಉಗರಖುರ್ದ
೨) ಪಾಶ್ಚಾಪುರ
೩) ಅಥಣಿ ನಗರ

ಚಿಕ್ಕೋಡಿ ತಾಲೂಕು
೧) ಚಿಕ್ಕೋಡಿ (ನಗರ)
೨) ಕಬ್ಬೂರು
೩) ಬೋರಗಾಂವಿ
೪) ಬೆಡಕಿಹಾಳ
೫) ಗಲತಗಾ

ಗೋಕಾಕ ತಾಲೂಕು
೧) ಗೋಕಾಕ (ನಗರ)
೨) ಘಟಪ್ರಭಾ
೩) ರಾಯಬಾಗ ತಾಲೂಕು
೪) ಕರೋಶಿ
೫) ರಾಯಬಾಗ (ನಗರ)

ಖಾನಾಪೂರ ತಾಲೂಕು
೧) ಖಾನಾಪೂರ ತಾಲೂಕು (ನಗರ)
೨) ಲೋಂಡಾ
೩) ಸಂಪಗಾವಿ

೫) ಗುಲಬರ್ಗಾ ಜಿಲ್ಲೆ
೧) ಆಳಂದ
೨) ಚಿಂಚೋಳಿ
೩) ಚಿತ್ತಾಪುರ
೪) ಸೇಡಂ
೫) ಯಾದಗಿರಿ
೬) ಶಹಬಾದ
೭) ಜೀವರಗಿ
೮) ವಾಡಿ
೯) ಸುರಪುರ
೧೦) ಕುಂಬಾರ ಪೇಟೆ

೬) ಬಿಜಾಪೂರ ಜಿಲ್ಲೆ

ಬಿಜಾಪೂರ ತಾಲೂಕು
೧) ಬಿಜಾಪೂರ (ನಗರ)

ಜಮಖಂಡಿ ತಾಲೂಕು
೧) ಜಮಖಂಡಿ (ನಗರ)
೨) ರಬಕವಿ
೩) ಬನಹಟ್ಟಿ

ಬಸವನ ಬಾಗೇವಾಡಿ ತಾಲೂಕು
೧) ಬಸವನ ಬಾಗೇವಾಡಿ (ನಗರ)

ಮುದ್ದೇಬಿಹಾಳ (ನಗರ)
೧) ಮುದ್ದೇಬಿಹಾಳ (ನಗರ)
೨) ನಾಲವತ್ತವಾಡ
೩) ತಾಳಿಕೋಟೆ
೪) ಹಿರೂರ
೫) ಸಂಗಮ

ಸಿಂದಗಿ ತಾಲೂಕು
೧) ಸಿಂದಗಿ (ನಗರ)
೨) ಅಲಮೇಲ
೩) ಕಕ್ಕಡ ಮೇಲ
೪) ದೇವರ ಹಿಪ್ಪರಗಿ
೫) ಮಾರಟಗಿ
೬) ಮಂಗಳೂರು
೭) ಯಂಕಂಡಿಚಿ
೮) ಗೊಲಗೇರಿ
೯) ಕೊರವಾರ
೧೦) ಹರನಾಳ

ಇಂಡಿ ತಾಲೂಕು
೧) ಇಂಡಿ (ನಗರ)
೨) ನಾದ
೩) ತಾಂಬಾ
೪) ಹಿರೇಬೆನ್ನೂರ
೫) ಅರ ಖೇಡ
೬) ಚಿಕ್ಕ ಬೆನ್ನೂರು
೭) ಹೊರ್ತಿ
೮) ಬಸಗುಣಕಿ
೯) ಹಲಸಂಗಿ
೧೦) ಬೆಳ್ಳಿನಕ್ಕ
೧೧) ರನುಳಕ್ಕಿ
೧೨) ಚಡಚಣ

೭) ಹಾವೇರಿ ಜಿಲ್ಲೆ

೧) ಹಾವೇರಿ
೨) ರಾಣಿಬೆನ್ನೂರು
೩) ಬ್ಯಾಡಗಿ
೪) ಹಾನಗಲ್
೫) ಸವಣೂರು
೬) ಡೊಂಬರ ಮತ್ತೂರ
೭) ಶಿಗ್ಗಾವಿ
೮) ಹಿರೇಕೇರೂರು
೯) ತಿಳವಳ್ಳಿ
೧೦) ಸರಗೂರು

೮) ಕೊಪ್ಪಳ ಜಿಲ್ಲೆ
೧) ಕೊಪ್ಪಳ (ನಗರ)
೨) ಸಿಂಗೋಗಿ
೩) ಮುನಿರಾಬಾದ

ಗಂಗಾವತಿ ತಾಲೂಕು
೧) ಗಂಗಾವತಿ (ನಗರ)
೨) ಕನಕಗಿರಿ
೩) ವರಿಕಲ್ ಕುಂಟ

ಕುಷ್ಟಗಿ ತಾಲೂಕು
೧) ಕುಷ್ಟಗಿ (ನಗರ)
೨) ಶಾಖಾಪೂರ
೩) ಕಾರಟಗಿ

ಯಲಬುರ್ಗಾ ತಾಲೂಕು
೧) ಯಲಬುರ್ಗಾ (ನಗರ)
೨) ಕುಕನೂರು

೯) ಬಳ್ಳಾರಿ ಜಿಲ್ಲೆ
೧) ಬಳ್ಳಾರಿ (ನಗರ)
೨) ಕುರುಗೋಡ

ಹೊಸಪೇಟೆ ತಾಲೂಕು
೧) ಹೊಸಪೇಟೆ (ನಗರ)
೨) ಕಂಪ್ಲಿ
೩) ಶಾಪೂರ
೪) ಮರಿಯಮ್ಮನಹಳ್ಳಿ
೫) ಕಮಲಾಪುರ

ಸೊಂಡೂರು (ತಾಲೂಕು) (ನಗರ)
೧) ಸೊಂಡೂರು ತಾಲೂಕು
೨) ಸೊಂಡೂರು ನಗರ

ಹಗರಿಬೊಮ್ಮನಹಳ್ಳಿ ತಾಲೂಕು
ಹಗರಿಬೊಮ್ಮನಹಳ್ಳಿ (ನಗರ)
ಹಂಪಾಪಟ್ಟಣ
ಸಿರಗುಪ್ಪಾ (ನಗರ)
ಹೂವಿನ ಹಡಗಲಿ (ನಗರ)
ಹಿರೇ ಹಡಗಲಿ
ಕೂಡ್ಲಗಿ
ಕೊಟ್ಟೂರು
ಹಂಪನ ಹಳ್ಳಿ

೧೦) ರಾಯಚೂರು ಜಿಲ್ಲೆ
ಮಾನ್ವಿ (ನಗರ)
ಸಿಂಧನೂರು (ನಗರ)
ಹಂಪನಾಳ
ಲಿಂಗಸೂರು (ನಗರ)
ಗುರಗುಂಟಾ
ಕಾನ್ನಾಳ
ಮನಗಿ
ಆನೂರು
ನಾಗರಾಳ
ಶಕ್ತಿನಗರ
ಕವಿತಾಳ