ಗುಲಬರ್ಗಾ ಜಿಲ್ಲೆ

ಗುಲಬರ್ಗಾ ನಗರದಲ್ಲಿ ಒಟ್ಟು ೧೧೮ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿ ಇಲ್ಲಿ ಒಟ್ಟು ೪೬೧ ಜನಸಂಖ್ಯೆ ಕಂಡು ಬಂದಿದ್ದು ೨೩೫ ಜನ ಪುರುಷರು ಮತ್ತು ೨೨೬ ಮಹಿಳೆಯರು ಇರುವ ಬಗ್ಗೆ ಮಾಹಿತಿ ದೊರೆಯಿತು. ಗುಲುಬರ್ಗಾ ತಾಲೂಕಿನ ಗೊಂದಲಿಗರ ಹೆಚ್ಚು ಕುಟುಂಬಗಳನ್ನು ಹೊಂದಿದ ಬಾಲಗೇರಿ ಗ್ರಾಮವನ್ನು ಈ ಸಂದರ್ಭದಲ್ಲಿ ಸಮೀಕ್ಷೆ ಮಾಡಲಾಗಿ ಇಲ್ಲಿ ಒಟ್ಟು ೪೨ ಕುಟುಂಬಗಳ ಬಗ್ಗೆ ಮಹಾತಿ ದೊರೆತಿದ್ದು ಒಟ್ಟು ೧೬೧ ಜನಸಂಖ್ಯೆ ಇದ್ದು ೭೪ ಪುರುಷರು ಮತ್ತು ೮೭ ಜನ ಮಹಿಳೆಯರಿದ್ದಾರೆ. ಇವರ ಶೈಕ್ಷಣಿಕ ಸ್ಥಿತಿಗತಿಗಳ ವಿವರಗಳನ್ನು ಕೋಷ್ಟಕ ೫ನ್ನು ಗಮನಿಸಿ.

ಗುಲಬರ್ಗಾ ನಗರದಲ್ಲಿ ಒಂದು ಕಡೆ ನೆಲೆ ಕಂಡುಕೊಳ್ಳುತ್ತಿರುವ ಗೊಂದಲಿಗರು ತಮ್ಮಮಕ್ಕಳ ಶಿಕ್ಷಣದ ಬಗ್ಗೆ ಇತ್ತಿತ್ತಲಾಗಿ ಒಲವು ತೋರಿಸುತ್ತಿರುವುದು ಈ ಕೋಷ್ಟಕದಲ್ಲಿ ವಿವರಗಳನ್ನು ಗಮನಿಸಿದಾಗ ಕಂಡುಬರುತ್ತದೆ. ಈ ಜಿಲ್ಲೆಯ ನಗರ ಪ್ರದೇಶದಲ್ಲಿಯ ೦೬ ರಿಂದ ೧೫ ವರ್ಷದೊಳಗಿನ ೭೮ ಗಂಡು ಮಕ್ಕಳು ಮತ್ತು ೪೬ ಹೆಣ್ಣು ಮಕ್ಕಳು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆಯುತ್ತಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ೧೬-೨೫ ವರ್ಷದೊಳಗಿನ ೩೨ ಪುರುಷರು ಮತ್ತು ೧೩ ಜನ ಮಹಿಳೆಯರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿದ್ದಾರೆ. ಇವರಲ್ಲಿ ಅರ್ಧಕ್ಕೆ ಶಾಲೆ ಬಿಟ್ಟವರ ಸಂಖ್ಯೆಯೂ ಸುಮಾರು ೫೦ ಕ್ಕೂ ಅಧಿಕವಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ದುಡಿತಕ್ಕೆ ಒಳಪಡಿಸುವುದರಿಂದ ಈ ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯಲಿಕ್ಕಾಗಲಿಲ್ಲ ಎಂದು ಪೋಷಕರು ಅಭಿಪ್ರಾಯ ಪಡುತ್ತಾರೆ. ಈ ವಯೋಮಿತಿಯಲ್ಲಿಯ ಎಸ್.ಎಸ್.ಎಲ್.ಸಿ ವರೆಗೆ ಓದಿದಗಂಡಸರ ಸಂಖ್ಯೆ ೧೫ ಮಹಿಳೆಯರು ೭ ಪಿ.ಯು.ಸಿ. ವರೆಗೆ ಶಿಕ್ಷಣ ಪಡೆದ ಗಂಡಸು ೮ ಜನರಿದ್ದು ೩ ಜನ ಮಹಿಳೆಯರು ಐ.ಟಿ.ಐ ದಲ್ಲಿ ಶಿಕ್ಷಣಪಡೆದುಕೊಂಡಿದ್ದಾರೆ. ೨೬ ರಿಂದ ೪೫ ವರ್ಷ ವಯೋಮಿತಿಯಲ್ಲಿ ಪ್ರಾಥಮಿಕ ಅಥವಾ ಮಾಧ್ಯಮಿಕ ಶಿಕ್ಷಣ ಪಡೆದ ಪುರುಷರ ಸಂಖ್ಯೆ ೨೮ ಇದ್ದು ಮಹಿಳೆಯರ ಸಂಖ್ಯೆ ಕೇವಲ ೩ ಎಸ್.ಎಸ್.ಎಲ್.ಸಿ. ವರೆಗೆ ಓದದ ಪುರುಷರು ೧೭ ಇದ್ದರೆ ಮಹಿಳೆ ಒಬ್ಬಳೇ ಇರುವುದು ಕಂಡು ಬರುತ್ತದೆ ಪುರುಷರಲ್ಲಿ ಪಿ.ಯು.ಸಿ. ಯಲ್ಲಿ ೯ ಜನ ಪದವಿಯಲ್ಲಿ ೩ ಜನ ಮತ್ತು ತಾಂತ್ರಿಕ ಶಿಕ್ಷಣದಲ್ಲಿ ಪದವಿ ಪಡೆದುಕೊಂಡವರು ಒಬ್ಬರು ಕಂಡು ಬಂದಿದ್ದಾರೆ.

೪೬ ರಿಂದ ೬೦ ವರ್ಷದೊಳಗಿನ ಪುರುಷರಲ್ಲಿ ೧೪ ಜನ ಪ್ರಾಥಮಿಕ ಅಥವಾ ಪ್ರೌಢ ೭ ಜನ ಎಸ್.ಎಸ್.ಎಲ್.ಸಿ. ೩ ಜನ ಪಿ.ಯು.ಸಿ. ಮತ್ತು ಒಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಈ ವಯೋಮಾನದ ಮಹಿಳೆಯರಲ್ಲಿ ಕೇವಲ ಒಬ್ಬಳು ಮಾತ್ರ ಪಿ.ಯು.ಸಿ.ವರೆಗೆ ಶಿಕ್ಷಣ ಪಡೆದುಕೊಂಡಿರುವ ಬಗ್ಗೆ ಮಾಹಿತಿ ದೊರೆಯುತ್ತದೆ.

ಆಳಂದ ತಾಲೂಕಿನ ಗ್ರಾಮಗಳಾದ ಮಾದನಹಿಪ್ಪರಣೆ, ಹಡಗಲಿ, ನೀರಗುಡಿ, ಚಲಗೇರಾ, ಕಲ್ಲಹಂಗರಣ, ಕರಿಅಂಬಣ, ಚಿಂಚನೂರು, ಸಾವಳಗಿ, ಜಾವಳ, ಮಟಕಿಪಟ್ಟಣ, ನಿಂಗದಹಳ್ಳಿ, ಬೆಳಗಮಿ, ಯಳಸಂಗಿ, ನರೋಣ, ನಿಂಬರಣ, ಧಂಗಾಪುರ ಮತ್ತು ಆಳಂದ ನಗರದ ಒಟ್ಟು ೧೫೭ ಕುಟುಂಬಗಳ ಸಮೀಕ್ಷೆ ಮಾಡಲಾಯಿತು. ಇಲ್ಲಿಯ ಒಟ್ಟು ಜನಸಂಖ್ಯೆ ೬೮೭ ಇದ್ದು ಇವರಲ್ಲಿ ೩೪೨ ಪುರುಷರು ೩೪೫ ಮಹಿಳೆಯರು ಇರುವುದು ಕಂಡು ಬರುತ್ತದೆ. ಗುಲಬರ್ಗಾ ನಗರಕ್ಕಿಂತಲೂ ಆಳಂದ ತಾಲೂಕಿನಲ್ಲಿ ವಾಸಿಸುತ್ತಿರುವ ಗೊಂದಲಿಗರ ಶೈಕ್ಷಣಿಕ ಸ್ಥಿತಿಗತಿಗಳು ಸ್ವಲ್ಪ ಉತ್ತಮವಾಗಿರುವುದು ಕಂಡುಬರುತ್ತದೆ. ಕೋಷ್ಟಕ ೬ನ್ನು ಗಮನಿಸಿ.

೬ರಿಂದ ೧೫ರ ವರೆಗಿನ ವಯೋಮಾನದ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿರುವ ಗಂಡು ಮಕ್ಕಳ ಸಂಖ್ಯೆ ೯೦ ಇದುದ್ ಹೆಣ್ಣು ಮಕ್ಕಳ ಸಂಖ್ಯೆ ೫೦ ಇರುವುದನ್ನು ಕಾಣುತ್ತೇವೆ. ೨೩ ಜನ ಎಸ್.ಎಸ್.ಎಲ್.ಸಿ ೧೪, ಜನ ಪಿ.ಯು.ಸಿ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದು ೧೦ ಜನ ಎಸ್.ಎಸ್.ಎಲ್.ಸಿ ಮತ್ತು ಒಬ್ಬರು ಪಿ.ಯು.ಸಿ. ಶಿಕ್ಷಣ ಪಡೆದಿದ್ದಾರೆ. ೨೬ ರಿಂದ ೪೫ ವರ್ಷ ವಯೋಮಾನದ ಪುರುಷರಲ್ಲಿ ೨೨ ಜನ ಪ್ರಾಥಮಿಕ ಅಥವಾ ಮಾಧ್ಯಮಿಕ ಶಿಕ್ಷಣದವರಾಗಿದ್ದು ೧೬ ಜನ ಎಸ್.ಎಸ್.ಎಲ್.ಸಿ ೧೪ ಜನ ಪಿ.ಯು.ಸಿ. ಇಬ್ಬರು ಸ್ನಾತಕ ಮತ್ತು ಒಬ್ಬರು ಐ.ಟಿ.ಐ.ದಲ್ಲಿ ಶಿಕ್ಷಣ ಪಡೆದಿದ್ದರೆ ಹೆಂಗಸರಲ್ಲಿ ೭ಜನ ಪ್ರಾಥಮಿಕ ಹಾಗೂ ಪ್ರೌಢ, ಇಬ್ಬರು ಎಸ್.ಎಸ್.ಎಲ್.ಸಿ ೬ ಜನ ಪಿ.ಯು.ಸಿ ವರೆಗೆ ಶಿಕ್ಷಣ ಪಡೆದಿದ್ದು ಕಂಡ ಬರುತ್ತದೆ. ೪೬ ರಿಂದ ೬೦ ವರ್ಷದ ಪುರುಷರಲ್ಲಿ ೧೯ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ೯ ಜನ ಎಸ್.ಎಸ್.ಎಲ್.ಸಿ ಒಬ್ಬರು ಪಿ.ಯು.ಸಿ. ಮತ್ತೊಬ್ಬರು ಪದವಿ ಶಿಕ್ಷಣ ಪಡೆದಿದ್ದರೆ, ಮಹಿಳೆಯರಲ್ಲಿ ಇಬ್ಬರು ಪ್ರಾಥಮಿಕ ಒಬ್ಬರು ಎಸ್.ಎಸ್.ಎಲ್.ಸಿ ವರೆಗೆ ಶಿಕ್ಷಣ ಪಡೆದುಕೊಂಡಿದ್ದಾರೆ.

ಗುಲಬರ್ಗಾ ಜಿಲ್ಲೆಯಲ್ಲಿ ಸಮೀಕ್ಷೆಗೊಳಪಟ್ಟು ಒಟ್ಟು ೮೫೧ ಪುರುಷರಲ್ಲಿ ೨೬೭ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ (ವಿದ್ಯಾರ್ಥಿಗಳನ್ನು ಸೇರಿಸಿಕೊಂಡು) ಪಡೆದಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಶಿಕ್ಷಣ ಪಡೆದವರ ಸಂಖ್ಯೆ ೮೭, ಪಿ.ಯು.ಸಿ. ವರೆಗೆ ಓದಿದವರ ಸಂಖ್ಯೆ ೪೯, ಪದವಿ ಶಿಕ್ಷಣ ಪಡೆದವರು, ೧೫ ತಾಂತ್ರಿಕ ಶಿಕ್ಷಣ (ಬಿಇ) ಪಡೆದವರು ಒಬ್ಬರು ೩ ಜನ ಸ್ನಾತಕ ಪದವಿ ಪಡೆದವರು ಮತ್ತು ಒಬ್ಬರು ಐ.ಟಿ.ಐ. ದಲ್ಲಿ ಶಿಕ್ಷಣ ಪಡೆದವರಾಗಿದ್ದಾರೆ.

ಒಟ್ಟು ೩೪೫ ಮಹಿಳೆಯರಲ್ಲಿ ೧೩೦ ಜನ ಪ್ರಾಥಮಿಕ ಅಥವಾ ಪ್ರೌಢ ಶಿಕ್ಷಣ ೨೧ ಜನ ಎಸ್.ಎಸ್.ಎಲ್.ಸಿ ೮ ಜನ ಪಿ.ಯು.ಸಿ ಮತ್ತು ೩ ಜನ ಐ.ಟಿ.ಐ.ದಲ್ಲಿ ಶಿಕ್ಷಣ ಪಡೆದಿದ್ದಾರೆ.

ಬೀದರ ಜಿಲ್ಲೆ

ಬೀದರ ನಗರದ ಒಟ್ಟು ೧೩ ಕುಟುಂಬಗಳಲ್ಲಿ ೬೫ ಜನಸಂಖ್ಯೆ ಇದ್ದು ಇದರಲ್ಲಿ ೩೬ ಪುರುಷರು ೨೯ ಮಹಿಳೆಯರಿದ್ದಾರೆ. ಬೀದರ ನಗರದಲ್ಲಿ ವಾಸಿಸುತ್ತಿರುವ ಗೊಂದಲಿಗರ ಶೈಕ್ಷಣಿಕ ಸ್ಥಿತಿಗತಿಗಳ ವಿವರಗಳನ್ನು ಕೋಷ್ಟಕ ಸಂಖ್ಯೆ ೭ರಲ್ಲಿ ಗಮನಿಸಿ.

೬ ರಿಂದ ೧೫ ವರ್ಷದ ಮಕ್ಕಳಲ್ಲಿ ೫ ಜನ ಗಂಡು ಮತ್ತು ೪ ಜನ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವರ್ಷದ ವಯೋಮಾನದ ಪುರುಷರಲ್ಲಿ ಒಬ್ಬರು ಮಾತ್ರ ಪ್ರಾಥಮಿಕ ಶಿಕ್ಷಣ ಪಡೆದಿದ್ದು ಇಬ್ಬರು ಎಸ್.ಎಸ್.ಎಲ್.ಸಿ ೩ ಜನ ಪಿ.ಯು.ಸಿ. ಒಬ್ಬರು ಡಿಪ್ಲೊಮಾ ಶಿಕ್ಷಣ ಪಡೆದಿದ್ದಾರೆ. ಮಹಿಳೆಯರಲ್ಲಿ ಒಬ್ಬರು ಎಸ್.ಎಸ್.ಎಲ್.ಸಿ ಒಬ್ಬರು ಪಿ.ಯು.ಸಿ. ಮತ್ತೊಬ್ಬರು ಪದವಿವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ೨೬ ರಿಂದ ೪೫ ವರ್ಷದ ಪುರುಷರದಲ್ಲಿ ಒಬ್ಬರು ಪ್ರಾಥಮಿಕ ಶಿಕ್ಷಣ, ೬ಜನ ಎಸ್.ಎಸ್.ಎಲ್.ಸಿ ೩ ಜನ ಪಿ.ಯು.ಸಿ. ೩ ಜನ ಪದವಿ ಒಬ್ಬರು ಬಿ.ಇ. (ತಾಂತ್ರಿಕ ಶಿಕ್ಷಣ), ಮತ್ತೊಬ್ಬರು ಸ್ನಾತಕ ಪದವಿ ಪಡೆದುಕೊಂಡಿದ್ದರೆ, ಮಹಿಳೆಯರಲ್ಲಿ ೪ ಜನ ಪ್ರಾಥಮಿಕ ಇಬ್ಬರು ಎಸ್.ಎಸ್.ಎಲ್.ಸಿ, ಪಿ.ಯು.ಸಿ.ಯಲ್ಲಿ ಇಬ್ಬರು ಹಾಗೂ ಬಿ.ಎ.ಎಂ.ಎಸ್. ಪವಿದ ಪಡೆದವರು ಒಬ್ಬರು ಇರುವುದು ಕಂಡು ಬರುತ್ತದೆ. ೪೬ ರಿಂದ ೬೦ರ ವಯೋಮಾನದವರಲ್ಲಿ ಇಬ್ಬರು ಪುರುಷಕರು ಪ್ರಾಥಮಿಕ ೪ ಜನ ಎಸ್.ಎಸ್.ಎಲ್.ಸಿ ಇಬ್ಬರು ಪಿ.ಯು.ಸಿ. ಒಬ್ಬರು ಪದವಿ ಇನ್ನೊಬ್ಬರು ಟಿ.ಸಿ. ಎಚ್. ಶಿಕ್ಷಣ ಪಡೆದಿದ್ದಾರೆ.

ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಗ್ರಾಮಗಳಾದ ಬತಂಬ್ರಾ, ಬಡಸಗಾವಿ, ವಾರಟ್ಟಿ, ತೆಲಗಾವಿ, ಮೆಹರಕ, ಲಕನಗಾಂವ ಮತ್ತು ಬಾಲ್ಕಿ ನಗರದಲ್ಲಿ ಅರೆ ಅಲೆಮಾರಿಗಳಾಗಿ ವಾಸಿಸುತ್ತಿರುವ ಗೊಂದಲಿಗ ಸಮುದಾಯದ ಒಟ್ಟು ೬೧ ಕುಟುಂಬಗಳ ಸಮೀಕ್ಷೆ ಮಾಡಲಾಯಿತು. ಈ ಕುಟುಂಬಗಳ ಒಟ್ಟು ಜನಸಂಖ್ಯೆ ೨೩೯ ಇದ್ದು ಇದರಲ್ಲಿ ೧೩೧ ಪುರುಷರು, ಮತ್ತು ೧೦೮ ಜನ ಮಹಿಳೆಯರಿದ್ದಾರೆ. ಬೀದರ ನಗರದಲ್ಲಿರುವ ಗೊಂದಲಿಗರಿಗಿಂತ ಬಾಲ್ಕಿ ತಾಲೂಕಿನಲ್ಲಿ ವಾಸಿಸುತ್ತಿರುವ ಗೊಂದಲಿಗರು ಶೈಕ್ಷಣಿಕ ಪ್ರಗತಿ ಸಾಧಿಸುವಲ್ಲಿ ಅವರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ ಎಂಬುದನ್ನು ಕೋಷ್ಟಕ ಸಂಖ್ಯೆ ೯ನ್ನು ಗಮನಿಸಿ ತಿಳಿದುಕೊಳ್ಳಬಹುದಾಗಿದೆ.

ಬಾಲ್ಕಿ ತಾಲೂಕಿನಲ್ಲಿರುವ ೬ ರಿಂದ ೧೬ ವರ್ಷದ ೧೭ ಗಂಡು ಮಕ್ಕಲು ಮತ್ತು ೧೩ ಹೆಣ್ಣು ಮಕ್ಕಳೂ ಪ್ರಾಥಮಿಕ ಹಾಗೂ ಶಿಕ್ಷಣ ಪಡೆಯುತ್ತಿರುವ ಬಗ್ಗೆ ಗೋಚರಿಸುತ್ತದೆ. ೧೬ ರಿಂದ ೨೫ ವರ್ಷ ವಯಸ್ಸಿನ ಪುರುಷರಲ್ಲಿ ೬ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ೧೩ ಜನ ಎಸ್.ಎಸ್.ಎಲ್.ಸಿ ೧೦ ಜನ ಪಿ.ಯು.ಸಿ. ಇಬ್ಬರು ಪದವಿ ಮತ್ತು ಒಬ್ಬರು ಟಿ.ಸಿ.ಎಚ್. ಶಿಕ್ಷಣ ಪಡೆದ ಬಗ್ಗೆ ಮಾಹಿತಿ ದೊರೆಯುತ್ತದೆ. ಹೆಂಗಸರಲ್ಲಿ ೫ ಪ್ರಾಥಮಿಕ ಹಾಗೂ ಪ್ರೌಢ, ೩ ಜನ ಎಸ್.ಎಸ್.ಎಲ್.ಸಿ ಒಬ್ಬರು ಪಿ.ಯುಸಿ. ಪಡೆದ ಬಗ್ಗೆ ಕಾಣುತ್ತೇವೆ. ೨೬ ರಿಂದ ೪೫ ವಯೋಮಾನದ ಪುರುಷರಲ್ಲಿ ೧೦ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕಿ, ೭ ಜನ ಎಸ್.ಎಸ್.ಎಲ್.ಸಿ ೩ ಜನ ಪಿ.ಯು.ಸಿ ೯ ಜನ ಪದವಿ ಇಬ್ಬರು ಬಿ.ಇ. ಒಬ್ಬರು ಬಿಡಿಎಸ್. ಮತ್ತೊಬ್ಬರು ಬಿ.ಎಡ್ ಪದವಿ ಪಡೆದ ಬಗ್ಗೆ ಮಾಹಿತ ದೊರೆಯುತ್ತದೆ. ಮಹಿಳೆಯರಲ್ಲಿ ೯ಜನ ಪ್ರಾಥಮಿಕ ಹಾಗೂ ಪ್ರೌಢ, ಒಬ್ಬರು ಎಸ್.ಎಸ್.ಎಲ್.ಸಿ, ೩ ಜನ ಪದವಿ ಮತ್ತು ಇಬ್ಬರು ಟಿ.ಸಿ.ಎಚ್ ಶಿಕ್ಷಣ ಪಡೆದಿದ್ದಾರೆ. ೪೬ ರಿಂದ ೬೦ ವಯೋಮಾನದ ಪುರುಷರಲ್ಲಿ ೪ ಜನ ಪ್ರಾಥಮಿಕ ಒಬ್ಬರು, ಎಸ್.ಎಸ್.ಎಲ್.ಸಿ ಇಬ್ಬರು ಪಿ.ಯು.ಸಿ. ಮತ್ತು ಇಬ್ಬರು ಪದವಿ ಶಿಕ್ಷಣ ಪಡೆದಿದ್ದಾರೆ. ಮಹಿಳೆಯರಲ್ಲಿ ಒಬ್ಬರು ಪ್ರಾಥಮಿಕ, ನಾಲ್ಕು ಜನ ಪದವಿ ಶಿಕ್ಷಣ ಹೊಂದಿದವರಾಗಿದ್ದಾರೆ.

ಬೀದರ ಜಿಲ್ಲೆಯ ಹುಮ್ನಾಬಾದ ತಾಲೂಕಿನ ಕಮಲಾಪುರ ಮತ್ತು ದುಮ್ಮಸೂರು ಗ್ರಾಮಗಳಲ್ಲಿರುವ ಗೊಂದಲಿಗರ ೭ ಕುಟುಂಬಗಳನ್ನು ಸಮೀಕ್ ಮಾಡಿದಾಗ ಅಲ್ಲಿ ಒಟ್ಟು ೩೨ ಜನ ಸಂಖ್ಯೆ ಇದ್ದು ೧೯ ಪುರುಷರು ಮತ್ತು ೧೩ ಮಹಿಳೆಯರಿರುವುದು ಕಂಡಿತು. ಅವರ ಶೈಕ್ಷಣಿಕ ವಿವರಗಳಿಗಾಗಿ ಕೋಷ್ಟಕ ೯ನ್ನು ಗಮನಿಸಿ. ಈ ಎರಡು ಗ್ರಾಮಗಳಲ್ಲಿ ೩ ಜನ ಪುರುಷರು ಮತ್ತು ೩ ಜನ ಮಹಿಳೆಯರು ಪದವಿ ಮತ್ತಿಬ್ಬರು ಸ್ನಾತಕ ಶಿಕ್ಷಣ, ಪಡೆದಿದ್ದು ಒಬ್ಬರು ಡಿ.ಟಿ.ಸಿ. ವಿದ್ಯಾಭ್ಯಾಸ ಮಾಡಿದ್ದಾರೆ. ೩ ಜನ ಪುರುಷರು ಮತ್ತು ಒಬ್ಬರು ಮಹಿಳೆ ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ಪುರುಷರಲ್ಲಿ ಒಬ್ಬರು ಐ.ಟಿ.ಐ ಮಾಡಿದ್ದು ಗೋಚರಿಸುತ್ತದೆ.

ಔರಾದ ತಾಲೂಕಿನ ನಗರದಲ್ಲಿರುವ ಗೊಂದಲಿಗರ ೫ ಕುಟುಂಬಗಳಲ್ಲಿ ಒಟ್ಟು ೨೪ ಜನ ಸಂಖ್ಯೆ ಇದ್ದು, ಪುರುಷರು ೧೨ ಸ್ತ್ರೀಯರು ೧೨ ಇರುವುದನ್ನು ಕಾಣುತ್ತೇವೆ. ಗಂಡಸರ ಶೈಕ್ಷಣಿಕ ಸ್ಥಿತಿಗತಿಗಳಲ್ಲಿ ೪ ಜನ ಎಸ್.ಎಸ್.ಎಲ್.ಸಿ ಒಬ್ಬರು ಪಿ.ಯು.ಸಿ. ಒಬ್ಬರು ಪದವಿ ಮತ್ತೊಬ್ಬರು ಬಿ.ಎಡ್. ಶಿಕ್ಷಣ ಪಡೆದಿದ್ದಾರೆ. (ಕೋಷ್ಟಕ ೧೦ನ್ನು ಗಮನಿಸಿ) ಹೆಂಗಸರಲ್ಲಿ ಇಬ್ಬರು ಎಸ್.ಎಸ್.ಎಲ್.ಸಿ, ಒಬ್ಬರು ಟಿ.ಸಿ.ಎಚ್.ವರೆಗೆ ಶಿಕ್ಷಣ ಪಡೆದಿದ್ದಾರೆ.

ಬೀದರ್ ಜಿಲ್ಲೆಯ ಒಟ್ಟು ೧೯೮ ಪುರುಷರಲ್ಲಿ ಪ್ರಾಥಮಿಕ ಅಥವಾ ಪ್ರೌಢಶಿಕ್ಷಣ ಪಡೆದವರ ಸಂಖ್ಯೆ (ವಿದ್ಯಾರ್ಥಿಗಳನ್ನು ಸೇರಿಸಿ) ೫೦ ಎಸ್.ಎಸ್,ಎಲ್.ಸಿ. ೪೩ ಪಿಯು.ಸಿ. ಪಡೆದವರು ೨೪, ಪದವಿ ೨೧ ಸ್ನಾತಕ ಪದವಿ ೧, ಬಿ.ಇ. (ತಾಂತ್ರಿಕ ಶಿಕ್ಷಣ) ೩, ೩ ಬಿ.ಎಡ್ ೨, ಡಿಪ್ಲೋಮಾ ೧ಸ್ಬಿಡಿಎಸ್ (ವೈದ್ಯಕೀಯ ಶಿಕ್ಷಣ) ೧, ಟಿ.ಸಿ.ಎಚ್ ೧, ಮತ್ತು ಒಬ್ಬರು ಐ.ಟಿ.ಐ ದಲ್ಲಿ ಶಿಕ್ಷಣ ಪಡೆದಿದ್ದಾರೆ.

ಒಟ್ಟು ೧೬೯ ಮಹಿಳೆಯರಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದವರ ಸಂಖ್ಯೆ ೪೦, ಎಸ್.ಎಸ್.ಎಲ್.ಸಿ. ೧೦, ಪಿ.ಯು.ಸಿ. ೫ ಪದವಿ ೧೧, ಸ್ನಾತಕ ಪದವಿ ೨, ಬಿ.ಎ.ಎಂ. ಎಸ್ ೧, ಟಿ.ಸಿ.ಎಚ್ ೪ ಮತ್ತು ಡಿ.ಟಿ.ಸಿ ಯಲ್ಲಿ ಒಬ್ಬು ಶಿಕ್ಷಣ ಪಡೆದಿದ್ದಾರೆ.

ಧಾರವಾಡ ಜಿಲ್ಲೆ

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಅಣ್ಣಿಗೇರಿ ಮತ್ತು ನವಲಗುಂದ ನಗರವನ್ನು ಸಮೀಕ್ಷೆ ಮಾಡಿದಾಗ ನವಲಗುಂದದಲ್ಲಿ ೩೩ ಮತ್ತು ಅಣ್ಣಿಗೇರಿಯಲ್ಲಿ ೧೫ ಕುಟುಂಬಗಳು ವಾಸಿಸುತ್ತಿರುವುದು ಕಂಡು ಬಂದಿತು. ಇವರಲ್ಲಿ ಸುಮಾರು ೧೩ ಕುಟುಂಬಗಳು ಅಲೆಮಾರಿಗಳಾಗಿದ್ದು ಉಳಿದ ೮ ರಿಂದ ೧೦ ಕುಟುಂಬಗಳು ಅರೆ ಅಲೆಮಾರಿಗಲಾಗಿದ್ದು ಕಂಡು ಬಂದಿತು. ಈ ಎರಡು ಗ್ರಾಮಗಳಲ್ಲಿ ಒಟ್ಟು ೨೦೫ ಜನಸಂಖ್ಯೆ ಇದ್ದು ಇವರಲ್ಲಿ ೧೦೨ ಪುರುಷರು ಮತ್ತು ೧೦೩ ಮಹಿಳೆಯರಿರುವ ಬಗ್ಗೆ ಮಾಹಿತಿ ದೊರೆಯುತ್ತಿದೆ. ಅಣ್ಣಿಗೇರಿ ಗ್ರಾಮಕ್ಕಿಂತಲೂ ನವಲಗುಂದ ನಗರದಲ್ಲಿ ವಾಸಿಸುತ್ತಿರುವ ಗೊಂದಲಿಗರು ಶೈಕ್ಷಣಿಕ ಪ್ರಮಾಣ ಅಧಿಕವಾಗಿರುವುದು ಕಂಡು ಬರುತ್ತದೆ. ಧಾರವಾಡ ಜಿಲ್ಲೆಯ ನಾಗರಿಕ ಸಮುದಾಯ ಶಿಕ್ಷಣಕ್ಕಾಗಿ ಪಡುತ್ತಿರುವ ಶ್ರಮದ ಪ್ರಭಾವ ಈ ಗೊಂದಲಿಗರ ಮೇಲಾಗಿದ್ದು ತಮ್ಮ ಮಕ್ಕಳಿಗೆ ಕನಿಷ್ಠ ಪ್ರಮಾಣದಲ್ಲಾದರೂ ಶಿಕ್ಷಣ ಕೊಡಬೇಕು ಎಂಬ ನಿಲುವು ತಾಳಿದ್ದಾರೆ. ಆದರೆ ಆರ್ಥಿಕ ಸಮಸ್ಯೆಗಳ ಮತ್ತು ಅಲೆಮಾರಿತನದ ಬದುಕಿನಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂಬ ಕೊರಗೂ ಅವರನ್ನು ಕಾಡುತ್ತಿದೆ.

೬ ರಿಂದ ೧೫ ವರ್ಷದ ವಯಸ್ಸಿನ ೨೫ ಗಂಡು ಮತ್ತು ೧೩ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವಯೋಮಾನದ ಪುರುಷರಲ್ಲಿ ೫ ಜನ ಪ್ರಾಥಮಿಕ ಇಬ್ಬರು ಎಸ್.ಎಸ್.ಎಲ್.ಸಿ. ೪ ಜನ ಪಿ.ಯು.ಸಿ ಒಬ್ಬರು ಪದವಿ ಶಿಕ್ಷಣ ಪಡೆದುಕೊಂಡಿದ್ದಾರೆ. ಮಹಿಳೆಯರಲ್ಲಿ ಪ್ರಾಥಮಿಕ ಶಿಕ್ಷಣ ಪಡೆದವರ ಸಂಖ್ಯೆ ೯, ಎಸ್.ಎಸ್.ಎಲ್.ಸಿ. ೫, ಪಿ.ಯು.ಸಿ. ೫ ಹಾಗೂ ಎಂ.ಬಿ.ಎದಲ್ಲಿ ಒಬ್ಬರು ಪದವಿ ಪಡೆದುಕೊಂಡಿದ್ದಾರೆ. ೨೬ ರಿಂದ ೪೫ ವಯೋಮಾನದ ೨೩ ಪುರುಷರು ಪ್ರಾಥಮಿಕ, ೬ಜನ ಎಸ್.ಎಸ್.ಎಲ್.ಸಿ. ಒಬ್ಬರು ಪಿ.ಯು.ಸಿ.ವರೆಗೆ ಶಿಕ್ಷಣ ಪಡೆದಿದ್ದಾರೆ. ೯ ಮಹಿಳೆಯರು ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ೪೬ ರಿಂದ ೬೦ ವಯೋಮಾನದ ೯ ಪುರುಷರು ಒಬ್ಬರು ಮಹಿಳೆ ಪ್ರಾಥಮಿಕ ಶಿಕ್ಷಣ ಹೊಂದಿದ್ದಾರೆ. ಗೊಂದಲಿಗರ ಮಕ್ಕಳು ಮಾಧ್ಯಮಿಕ ಶಿಕ್ಷಣಕ್ಕೆ ಕಾಲಿಡುತ್ತಿರುವಾಗಲೇ ಅವರು ಮುಂದಿನ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸ್ಥಿತಿವಂತರು ಮಾತ್ರ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಂತಾಗಿದೆ.

ಕೊಪ್ಪಳ ನಗರ

ಕೊಪ್ಪಳದ ಗಾಂಧಿನಗರದಲ್ಲಿ ವಾಸಿಸುತ್ತಿರುವ ೪೧ ಕುಟುಂಬಗಳ ಸಮೀಕ್ಷೆ ಮಾಡಿದಾಗ ಕಂಡು ಬಂದ ಶೈಕ್ಷಣಿಕ ಸ್ಥಿತಿಗತಿಗಳ ಚಿತ್ರವನ್ನು ಕೋಷ್ಠಕ ೧೫ರಲ್ಲಿ ಗಮನಿಸಿ, ಒಟ್ಟು ೨೫೪ ಜನ ಸಂಖ್ಯೆಯ ಗೊಂದಲಿಗರಲ್ಲಿ ೧೩೩ ಪುರುಷರು ಮತ್ತು ೧೨೧ ಮಹಿಳೆಯರಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆಯಾದ ಕೊಪ್ಪಳದಲ್ಲಿಯ ಗೊಂದಲಿಗರು ಬೇರೆ ಬೇರೆ ಸ್ಥಳಗಳಿಂದ ಈ ಜಿಲ್ಲಾ ಕೇಂದ್ರಕ್ಕೆ ವಲಸೆ ಬಂದಿದ್ದಾರೆ. ಸುಮಾರು ೧೦ ರಿಂದ ೧೫ ವರ್ಷದವರೆಗೆ ಈ ಪ್ರದೇಶದಲ್ಲಿ ವಾಸಿಸುತ್ತಿರುವವರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಆಸಕ್ತಿ ಇಟ್ಟುಕೊಂಡಿರುವುದು ಕಂಡು ಬರುತ್ತದೆ. ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳು ಮಾತ್ರ ಶಿಕ್ಷಣದ ಬಗ್ಗೆ ಯೋಚನೆಯನ್ನೇ ಮಾಡುತ್ತಿಲ್ಲ. ಇವರಲ್ಲಿ ೬೦ ರಿಂದ ೧೫ ವರ್ಷದೊಳಗಿನ ಅನೇಕ ಮಕ್ಕಳು ಭಿಕ್ಷೆ ಬೇಡುವ ಕೆಲಸದಲ್ಲಿಯೇ ತೊಡಗಿಸಿಕೊಂಡಿದ್ದಾರೆ.

೪೬ ರಿಂದ ೬೦ ವರ್ಷದೊಳಗಿನವರು ಪಡೆದ ಶಿಕ್ಷಣಕ್ಕಿಂತ ೨೬ ರಿಂದ ೪೫, ೧೬ ರಿಂದ ೨೫ ಮತ್ತು ೬ ರಿಂದ ೧೫ ವರ್ಷದೊಳಗಿನವರ ಸಾಕ್ಷರತೆಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವುದು ಕಂಡು ಬರುತ್ತದೆ. ೪೬ ರಿಂದ ೬೦ ವರ್ಷದ ವಯೋಮಾನದ ಪುರುಷರಲ್ಲಿ ಕೇವಲ ೧೩ ಜನ ಪ್ರಾಥಮಿಕ ಶಿಕ್ಷಣ ಪಡೆದಿದ್ದರೆ ಇದರ ಪ್ರಮಾಣ ೨೬ ರಿಂದ ೪೫ ವಯೋಮಿತಿಯಲ್ಲಿ ೧೬ಕ್ಕೂ ೧೫ ರಿಂದ ೨೫ರಲ್ಲಿ ೨೨ಕ್ಕೂ ೬ ರಿಂದ ೧೫ ವರೆಗಿನ ಪ್ರಮಾಣದಲ್ಲಿ ೪೩ಕ್ಕೆ ಏರಿಕೆಯಾಗಿರುವುದು ಕಂಡುಬರುತ್ತದೆ. ಮಹಿಳೆಯರಲ್ಲಿ ೬ ರಿಂದ ೧೫ ವರ್ಷದೊಳಿಗಿರುವರು೨೯, ೧೬ ರಿಂದ ೨೫ ವಯಸ್ಸಿನವರು ೧೫ ಮತ್ತು ೨೬ ರಿಂದ ೪೫ ವರ್ಷದೊಳಿಗಿನವರು ೬ ಜನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದುಕೊಂಡಿರುವುದು ತಿಳಿದು ಬರುತ್ತದೆ. ಮಾಧ್ಯಮಿಕ ಶಿಕ್ಷಣದ ನಂತರ ಇವರಲ್ಲಿ ಕಲಿಯುವಿಕೆಯ ಪ್ರಮಾಣ ತೀವ್ರವಾಗಿ ಕುಸಿಯುತ್ತಿರುವುದು ಕಂಡು ಬರುತ್ತದೆ. ೧೬ ರಿಂದ ೨೫ ವರ್ಷದ ಪುರುಷರಲ್ಲಿ ೪ ಜನ ಎಸ್.ಎಸ್.ಎಲ್.ಸಿ. ಒಬ್ಬರು ಪಿ.ಯು.ಸಿ. ಇಬ್ಬರು ಪದವಿ ಹಾಗೂ ಒಬ್ಬರು ಬಿ.ಇ. ಪದವಿ ಪಡೆದುಕೊಂಡಿದ್ದಾರೆ. ಮಹಿಳೆಯರಲ್ಲಿ ಇಬ್ಬರು ಎಸ್.ಎಸ್.ಎಲ್.ಸಿ. ವರೆಗೆ ಓದಿದ್ದು ಮತ್ತಿಬ್ಬರ ಐ.ಟಿ.ಐ ಮಾಡಿದ್ದಾರೆ. ೨೬ ರಿಂದ ೪೫ ವರ್ಷದ ಗಂಡಸರಲ್ಲಿ ತಲಾ ಮೂರು ಜನ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವರೆಗೆ ಶಿಕ್ಷಣ ಪಡೆದಿದ್ದಾರೆ. ಕೊಪ್ಪಳ ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುತ್ತಿರುವ ಗೊಂದಲಿಗರ ಸಾಕ್ಷರತೆಯ ಪ್ರಮಾಣ ಅತ್ಯಂತ ಕಡಿಮೆ ಇರುವುದು ಕಂಡುಬರುತ್ತದೆ.

ಗದಗ ಜಿಲ್ಲೆ.

ಗದಗ ಜಿಲ್ಲೆಯ ಮುಂಡರಗಿಯ ನಗರ ಪ್ರದೇಶದಲ್ಲಿ ಗೊಂದಲಿಗರ ೫೭ ಕುಟುಂಬಗಲು ಟೆಂಟ್ ಹಾಕಿಕೊಂಡಿರುವ ಮನೆಗಳಲ್ಲಿ ವಾಸಮಾಡುತ್ತಿವೆ. ಇಲ್ಲಿಯ ಒಟ್ಟು ಸನಸಂಖ್ಯೆ ೩೦೮ ಇದ್ದು ೧೭೪ ಗಂಡಸರು ಮತ್ತು ೧೩೪ ಹೆಂಗಸರು ಇರುವುದು ಕಂಡು ಬರುತ್ತದೆ. ಇವರ ಶೈಕ್ಷಣಿಕ ವಿವರಗಳಿಗಾಗಿ ಕೋಷ್ಠಕ ೧೬ರನ್ನು ಗಮನಿಸಿ ಸಂಖ್ಯಾ ದೃಷ್ಟಿಯಿಂದ ಸಾಕ್ಷರತೆಯ ಪ್ರಮಾಣ ಇವರಲ್ಲಿ ಅತೀ ಕಡಿಮೆ ಇರುವುದು ಗೋಚರಿಸುತ್ತದೆ. ೬ ರಿಂದ ೧೫ ವರ್ಷದ ೩೩ ಗಂಡು ಮತ್ತು ೧೫ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ಮಾಧ್ಯಮಿಕ ಶಿಕ್ಷಣದಲ್ಲಿಯೇ ಶಾಲೆ ಬಿಡುವ ಅದರಲ್ಲಿಯೂ ಹೆಣ್ಣು ಮಕ್ಕಳ ಪ್ರಮಾಣ ಅಧಿಕವಾಗಿರುವುದು ಕಂಡು ಬರುತ್ತದೆ. ೧೬ ರಿಂದ ೨೫ ವರ್ಷದೊಳಗಿನ ಗಂಡಸರಲ್ಲಿ ೨೩ ಜನ ಪ್ರಾಥಮಿಕ ಹಾಗೂ ಪ್ರೌಢ, ೩ ಎಸ್.ಎಸ್.ಎಲ್.ಸಿ., ಪಿ.ಯು.ಸಿಯಲ್ಲಿ ಐವರು, ಪದವಿ ಶಿಕ್ಷಣದಲ್ಲಿ ಒಬ್ಬರು ಮತ್ತು ಬಿ.ಎಡ್ ಪದವಿಯಲ್ಲಿ ಒಬ್ಬರು ಇರುವುದು ಕಂಡು ಬರುತ್ತದೆ. ಈ ವಯೋಮಾನದ ಹೆಣ್ಣು ಮಕ್ಕಳ ಶಿಕ್ಷಣವನ್ನು ಗಮನಿಸಿದಾಗ ಕೇವಲ ಇಬ್ಬರು ಪ್ರಾಥಮಿಕ ಹಾಗೂ ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ ಓದಿದವರು ಕಾಣುತ್ತಾರೆ. ೪೬ ರಿಂದ ೬೦ ವರ್ಷದ ಮಿತಿಯಲ್ಲಿ ೧೩ ಜನ ಗಂಡಸರು ಪ್ರಾಥಮಿಕ ಮತ್ತು ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ ಪಡೆದವರಿದ್ದಾರೆ. ೪೬ ರಿಂದ ೬೦ ವಯೋಮಾನದ ೯ ಪುರುಷರು ಒಬ್ಬರು ಮಹಿಳೇ ಪ್ರಾಥಮಿಕ ಶಿಕ್ಷಣ ಹೊಂದಿದ್ದಾರೆ. ಗೊಂದಲಿಗರ ಮಕ್ಕಳು ಮಾಧ್ಯಮಿಕ ಶಿಕ್ಷಣಕ್ಕೆ ಕಾಲಿಡುತ್ತಿರುವಾಗಲೇ ಅವರು ಮುಂದಿನ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸ್ಥಿತಿವಂತರು ಮಾತ್ರ ತಮ್ಮ ಮಕ್ಕಳಿಗೆ ಶಿಕ್ಷಣ ನೀಡುವಂತಾಗಿದೆ.

ಹಾವೇರಿ ಜಿಲ್ಲೆ

ಹಾವೇರಿ ಜಿಲ್ಲೆಯ ಹಾನಗಲ್ಲ ನಗರದಲ್ಲಿ ಭಿಕ್ಷಾಟನೆ ಮತ್ತು ವಿವಿಧ ವೃತ್ತಿಗಳ ಮೂಲಕ ಬದುಕುತ್ತಿರುವ ೩೩ ಗೊಂದಲಿಗರ ಕುಟುಂಬಗಳ ಸಮೀಕ್ ಮಾಡಿದಾಗ ಅಲ್ಲಿ ಒಟ್ಟು ೧೧೧ ಜನಸಂಖ್ಯೆ ಇದ್ದು ಇದರಲ್ಲಿ ೫೪ ಪುರುಷರು ಮತ್ತು ೫೭ ಮಹಿಳೆಯರಿರುವುದು ಕಂಡು ಬಂದಿದೆ. ಇವರ ಶೈಕ್ಷಣಿಕ ವಿವರಗಳನ್ನು ಕೋಷ್ಠಕ ೧೭ರಲ್ಲಿ ಗಮನಿಸಿ, ೬ ರಿಂದ ೧೫ ವರ್ಷದೊಳಗಿನ ೧೦ ಗಂಡು ಮತ್ತು ೮ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದರೆ ೧೬ ರಿಂದ ೨೫ ವರ್ಷದೊಳಗಿನ ಗಂಡಸರಲ್ಲಿ ೬ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ, ಮತ್ತೊಬ್ಬರು ಡಿಪ್ಲೊಮಾದಲ್ಲಿ ಶಿಕ್ಷಣ ಪಡೆದಿದ್ದಾರೆ. ಹೆಂಗಸರಲ್ಲಿ ನಾಲ್ಕು ಪ್ರಾಥಮಿಕ ಹಾಗೂ ಒಬ್ಬರು ಡಿಪ್ಲೊಮಾದಲ್ಲಿ ಶಿಕ್ಷಣ ಪಡೆದಿದ್ದಾರೆ. ಹೆಂಗಸರಲ್ಲಿ ನಾಲ್ಕು ಪ್ರಾಥಮಿಕ ಹಾಗೂ ಒಬ್ಬರು ಎಸ್‌ಎಸ್.ಎಲ್.ಸಿ ವರೆಗೆ ಓದಿದ್ದಾರೆ. ೨೬ ರಿಂದ ೪೫ ವಯೋಮಿತಿಯಲ್ಲಿಯ ೧೦ ಗಂಡಸರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು, ತಲಾ ಇಬ್ಬರು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವರೆಗೆ ಓದಿದ್ದರೆ ಹೆಂಗಸರಲ್ಲಿ ನಾಲ್ವರು ಮಾತ್ರ ಪ್ರಾಥಮಿಕ ಶಿಕ್ಷಣ ಹೊಂದಿದವರಾಗಿದ್ದಾರೆ. ೪೬ ರಿಂದ ೬೦ ವರ್ಷದೊಳಗಿನ ೮ ಜನ ಗಂಡಸರು ಪ್ರಥಮಿಕ ಶಿಕ್ಷಣ ಪಡೆದಿದ್ದಾರೆ.

ಹಾನಗಲ್ಲ ತಾಲೂಕಿನ ಶಿರಗೋಡ, ತಿಳುವಳ್ಳಿ ಮತ್ತು ಚಿಕ್ಕಾಂಶಿ ಹೊಸೂರು ಗ್ರಾಮಗಳಲ್ಲಿರುವ ಒಟ್ಟು ೩೧ ಕುಟುಂಬಗಳ ಶೈಕ್ಷಣಿಕ ವಿವರಗಳನ್ನು ಸಂಗ್ರಹಿಸಲಾಯಿತು (ಕೋಷ್ಟಕ ೧೮ನ್ನು ಗಮನಿಸಿ) ೧೦೫ ಜನ ಗಂಡಸರಿರುವ ಈ ಗ್ರಾಮಗಳಲ್ಲಿ ೬ ರಿಂದ ೧೫ ವರ್ಷದವರಲ್ಲಿ ೨೭ ಜನ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣದ ಹಂತದಲ್ಲಿದ್ದಾರೆ. ೧೬ ರಿಂದ ೨೫ ವರ್ಷದವರಲ್ಲಿ ೪ ಜನ ಪ್ರಾಥಮಿಕ ಇಬ್ಬರು ಎಸ್.ಎಸ್.ಎಲ್.ಸಿ ಮತ್ತೊಬ್ಬರು ಪಿ.ಯು.ಸಿ. ವರೆಗೆ, ೨೬ ರಿಂದ ೪೫ ವರ್ಷದ ಪುರುಷರಲ್ಲಿ ೧೩ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ೭ ಜನ ಎಸ್.ಎಸ್.ಎಲ್.ಸಿ., ಇಬ್ಬರು ಪಿ.ಯು.ಸಿ. ಮತ್ತೊಬ್ಬರು ಟಿ.ಸಿ.ಎಚ್. ಶಿಕ್ಷಣ ಪಡೆದವರಿದ್ದಾರೆ. ಒಟ್ಟು ೯೪ ಜನ ಮಹಿಳೆಯರಲ್ಲಿ ೬ ರಿಂದ ೧೫ ವರ್ಷದ ೨೦ ಮಕ್ಕಳು ಪ್ರಾಥಮಿಕ ಹಾಗೂ ಪ್ರೌಢ, ೧೬ ರಿಂದ ೨೫ ವಯಸ್ಸಿನಲ್ಲಿ ೪ ಜನ ಪ್ರಾಥಮಿಕ ಹಾಗೂ ಒಬ್ಬರು ಎಸ್.ಎಸ್.ಎಲ್.ಸಿ. ೨೬ ರಿಂದ ೪೫ ವರ್ಷದವರಲ್ಲಿ ಇಬ್ಬರೂ ಹಾಗೂ ೪೬ ರಿಂದ ೬೦ರ ವಯೋಮಿತಿಯ ಒಬ್ಬರು ಪ್ರಾಥಮಿಕ ಶಿಕ್ಷಣ ಹೊಂದಿದ್ದಾರೆ.

ಸವದತ್ತಿ ತಾಲೂಕಿನ ದೂಪದಾಳ ಮತ್ತು ಉಗರಗೋಳ ಗ್ರಾಮದಲ್ಲಿರುವ ೩೫ ಕುಟುಂಬಗಳನ್ನು ಸಮೀಕ್ಷೆ ಮಾಡಲಾಗಿ ಇಲ್ಲಿ ಒಟ್ಟು ೧೨೮ ಜನಸಂಖ್ಯೆ ಕಂಡು ಇದರಲ್ಲಿ ೭೩ ಗಂಡಸರು ಹಾಗೂ ೫೫ ಹೆಂಗಸರು ಇದ್ದಾರೆ. ಅವರ ಶೈಕ್ಷಣಿಕ ವಿವರಗಳ ಬಗ್ಗೆ ಕೋಷ್ಟಕ ೨೧ನ್ನು ಗಮನಿಸಿ. ಕೂಲಿ, ಪಾತ್ರೆ ವ್ಯಾಪಾರ, ಕವದಿ ಹೊಲಿಯುವ ವೃತ್ತಿಯನ್ನು ಅವಲಂಬಿಸಿರುವ ಈ ಕುಟುಂಬಗಳಲ್ಲಿ ೬ ರಿಂದ ೧೫ ವರ್ಷದ ೧೯ ಗಂಡು ಮತ್ತು ೧೧ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವರ್ಷದ ಗಂಡಸರಲ್ಲಿ ೪ ಜನ ಪ್ರಾಥಮಿಕ, ಇಬ್ಬರು ಎಸ್.ಎಸ್.ಎಲ್.ಸಿ. ೪ ಜನ ಪಿ.ಯು.ಸಿ ಮತ್ತು ಇಬ್ಬರು ಪದವಿ ಶಿಕ್ಷಣ ಹೊಂದಿದ್ದಾರೆ. ಹೆಂಗಸರಲ್ಲಿ ೪ ಪ್ರಾಥಮಿಕ, ಇಬ್ಬರು ಎಸ್.ಎಸ್.ಎಲ್.ಸಿ. ಓದಿದ್ದಾರೆ. ೨೬ ರಿಂದ ೪೫ ವರ್ಷದೊಳಗಿನ ಪುರುಷರಲ್ಲಿ ೧೨ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ, ೩ ಜನ ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯು.ಸಿ. ಪಡೆದಿದ್ದರೆ ೬ ಮಹಿಳೆಯರು ಪ್ರಾಥಮಿಕ ಶಿಕ್ಷಣ ಪೂರೈಸಿದ್ದಾರೆ. ೪೬ ರಿಂದ ೬೦ ವರ್ಷದ ಮೂವರು ಪುರುಷರು ಪ್ರಾಥಮಿಕ ಶಿಕ್ಷಣ ಹೊಂದಿರದವರಾಗಿದ್ದಾರೆ.

ರಾಮದುರ್ಗ ತಾಲೂಕಿನ ಕಟಕೋಳ ಮತ್ತು ಸುರೇಬಾನ ಗ್ರಾಮಗಳ ೧೫ ಕುಟುಂಬಗಳ ಸಮೀಕ್ಷೆ ಮಾಡಲಾಗಿ ಅಲ್ಲಿ ಒಟ್ಟು ೬೧ ಜನಸಂಖ್ಯೆ ಇದ್ದು ಇದರಲ್ಲಿ ೩೭ ಗಂಡು ಮತ್ತು ೧೮ ಹೆಣ್ಣು ಮಕ್ಕಳಿರುವುದು ಕಂಡು ಬಂದಿದೆ. ಈ ಗ್ರಾಮಗಳ ಶೈಕ್ಷಣಿಕ ವಿವರಗಳಿಗಾಗಿ ಕೋಷ್ಟಕ ೨೨ನ್ನು ಗಮನಿಸಿ. ಈ ಗ್ರಾಮಗಳಲ್ಲಿ ಕೂಲಿ ಮತ್ತು ಕವದಿ ಹೊಲಿಯುವುದೇ ಪ್ರಮುಖ ವೃತ್ತಿಯಾಗಿದೆ. ಅಕ್ಷರಸ್ತರ ಸಂಖ್ಯೆ ಅದರಲ್ಲೂ ಮಹಿಳೆಯರಲ್ಲಿ ತೀರ ಕಡಿಮೆ ಇರುವುದು ಕಂಡುಬರುತ್ತದೆ. ೬೧ ಪುರುಷರಿರುವ ಈ ಗ್ರಾಮಗಳಲ್ಲಿ ೬ ರಿಂದ ೧೫ ರವರೆಗೆ ಇಬ್ಬರು ೨೫ ವಯಸ್ಸಿನ ಒಬ್ಬರು, ಪ್ರಾಥಮಿಕ, ಮೂವರು ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯು.ಸಿ. ಒಬ್ಬರು ಪದವಿ ಪಡೆದಿದ್ದಾರೆ. ೨೬ರಿಂದ ೪೫ ವಯೋಮಿತಿಯಲ್ಲಿ ೨ ಪ್ರಾಥಮಿಕ ಒಬ್ಬರು ಎಸ್.ಎಸ್.ಎಲ್.ಸಿ. ೫ ಜನ ಪಿ.ಯು.ಸಿ. ಹಾಗೂ ಒಬ್ಬರು ಪದವಿ ಹೊಂದಿದವರಾಗಿದ್ದಾರೆ. ೪೬ ರಿಂದ ೬೦ರ ವಯೋಮಾನದಲ್ಲಿ ೩ ಜನ ಪ್ರಾಥಮಿಕ ಶಿಕ್ಷಣ ಪೂರೈಸಿರುವುದು ಕಂಡು ಬರುತ್ತದೆ. ೧೮ ಮಹಿಳೆಯರಲ್ಲಿ ೧೬ ರಿಂದ ೨೫ ವಯಸ್ಸಿನ ಒಬ್ಬರು ಪ್ರಾಥಮಿಕ ಮತ್ತು ೨೬ ರಿಂದ ೪೫ ವರ್ಷದ ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ ಶಿಕ್ಷಣ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆ

ಶಿವಮೊಗ್ಗ ನಗರದಲ್ಲಿ ವಾಸಿಸುತ್ತಿರುವ ೮೭ ಕುಟುಂಬಗಳನ್ನು ಸಮೀಕ್ಷೆಗೆ ಒಳಪಡಿಸಲಾಯಿತು. ಇಲ್ಲಿ ವಾಸಿಸುತ್ತಿರುವ ಗೊಂದಲಿಗರೂ ಸಹ ಉದ್ಯೋಗಗಳನ್ನು ಹುಡುಕಿಕೊಂಡು ವಲಸೆ ಬಂದದ್ದು ಕಂಡು ಬರುತ್ತದೆ. ಪಾತ್ರೆ ವ್ಯಾಪಾರ, ಕೂಲಿ, ಜ್ಯೋತಿಷ್ಯ, ಕವದಿ ಹೊಲೆಯುವ, ಭಿಕ್ಷೆ ಬೇಡುವ, ಬುಡಬುಡಕೆ ಮತ್ತಿತರ ಅನೇಕ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಗೊಂದಲಿಗರ ಒಟ್ಟು ಜನಸಂಖ್ಯೆ ೩೭೩ ಇದ್ದು ಇದರಲ್ಲಿ ೨೦೦ ಗಂಡಸರು ೧೭೩ ಹೆಂಗಸರು ಇರುವುದನ್ನು ಕಾಣುತ್ತೇವೆ. ಸುಮಾರು ಎರಡು ದಶಕಗಳಿಂದ ಇಲ್ಲಿಯೇ ವಾಸ್ತವ್ಯ ಹೂಡಿಕೊಂಡಿರುವ ಗೊಂದಲಿಗರಲ್ಲಿಯ ಸಾಕ್ಷರತೆಯ ಪ್ರಮಾಣ ಇತರೆ ಅರೆ ಅಲೆಮಾರಿಗಳಿಗಿಂತ ಉತ್ತಮವಾಗಿದೆ. ಕೋಷ್ಟಕ ಸಂಖ್ಯೆ ೨೩ರನ್ನು ಗಮನಿಸಿ.

ಸುಮಾರು ಒಂದು ದಶಕದಿಂದೀಚೆಗೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ಗೊಂದಲಿಗರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡುತ್ತಿದೆ. ಕರ್ನಾಟಕ ಸರ್ಕಾರದ ಬಿಸಿ ಊಟದ ಕಾರ್ಯಕ್ರಮದ ಪ್ರಭಾವದಿಂದಲೂ ಗೊಂದಲಿಗರ ಮಕ್ಕಳೂ ಶಿಕ್ಷಣ ಪಡೆಯಲು ಅನುಕೂಲವಾದಂತಾಗಿದೆ. ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದ ಗೊಂದಲಿಗರಲ್ಲಿ ಕೆಲವರು, ಮಕ್ಕಳ ಒಂದು ಊಟ ಹೊರಗೆ ಹೋಗುತ್ತದೆ ಎಂದು ಭಾವಿಸಿಕೊಂಡು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ.

ಶಿವಮೊಗ್ಗ ನಗರದಲ್ಲಿ ೬ ರಿಂದ ೧೫ ವರ್ಷದ ೩೬ ಗಂಡು ಮತ್ತು ೨೮ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವಯೋಮಿತಿಯಲ್ಲಿರುವ ೧೪ ಗಂಡಸರು ಪ್ರಾಥಮಿಕ ಹಾಗೂ ಪ್ರೌಢ, ೭ ಜನ ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸದಲ್ಲಿ ಕಂಡು ಬಂದರೆ ಹೆಂಗಸರಲ್ಲಿ ೫ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ, ೬ ಜನ, ಎಸ್.ಎಸ್.ಎಲ್.ಸಿ. ಯಲ್ಲಿ ಒಬ್ಬರು ಪಿ.ಯು.ಸಿ.ವರೆಗೆ ವಿದ್ಯಾಭ್ಯಾಸ ಹೊಂದಿದವರಾಗಿದ್ದಾರೆ. ೨೬ ರಿಂದ ೪೫ ವರ್ಷದ ೨೬ ಜನ ಗಂಸರು ಪ್ರಾಥಮಿಕ ಹಾಗೂ ಪ್ರೌಢ, ಪಿ.ಯು.ಸಿ. ಯಲ್ಲಿ ೪ ಹಾಗೂ ಪ್ರೌಢ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಇಬ್ಬರು ಸಾಕ್ಷರರಾಗಿದ್ದಾರೆ. ೪೬ ರಿಂದ ೬೦ ವರ್ಷದೊಳಗಿನ ೧೪ ಪುರುಷರು ಮತ್ತು ೧೦ ಮಹಿಳೆಯರು ಪ್ರಾಥಮಿಕ ಹಾಗೂ ಪ್ರೌಢ ಮತ್ತು ಒಬ್ಬರು ಎಸ್.ಎಸ್.ಎಲ್.ಸಿ.ಯಲ್ಲಿ ಶಿಕ್ಷಣ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ಪ್ರದೇಶದಲ್ಲಿ ಒಟ್ಟು ಗೊಂದಲಿಗರ ಜನಸಂಖ್ಯೆ ೨೦೯ ಇದ್ದು ಇದರಲ್ಲಿ ೧೦೮ ಗಂಡಸರು ಮತ್ತು ೧೦೧ ಹೆಂಗಸರಿದ್ದಾರೆ. ಒಟ್ಟು ೪೬ ಕುಟುಂಬಗಳಿವೆ. ಇಲ್ಲಿಯ ಶೈಕ್ಷಣಿಕ ಸ್ಥಿತಿಗತಿಗಳ ವಿವರಗಳಿಗಾಗಿ ಕೋಷ್ಟಕ ಸಂಖ್ಯೆ ೨೪ನ್ನು ಗಮನಿಸಿ. ೬ ರಿಂದ ೧೫ ವರ್ಷದೊಳಗಿನ ೧೮ ಗಂಡು ಮತ್ತು ೨೦ ಹೆಣ್ಣು ಮಕ್ಕಳು. ೧೬ ರಿಂದ ೨೫ ವರ್ಷದ ೯ ಗಂಡು ಮತ್ತು ೪ ಹೆಣ್ಣು, ೨೬ ರಿಂದ ೪೫ ವರ್ಷದ ೨೫ ಗಂಡು ೧೩ ಹೆಣ್ಣು ಮತ್ತು ೪೬ ರಿಂದ ೬೦ ವರ್ಷದ ೬ ಗಂಡು ಮತ್ತು ೨ ಹೆಣ್ಣು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದುಕೊಂಡಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. (ವಿದ್ಯಾರ್ಥಿಗಳನ್ನು ಸೇರಿಸಿಕೊಂಡು) ೧೬ ರಿಂದ ೨೬ ವರ್ಷದ ಪುರುಷರಲ್ಲಿ ೮ ಜನ ಎಸ್.ಎಸ್.ಎಲ್.ಸಿ. ೬ ಜನ ಪಿ.ಯು.ಸಿ. ಒಬ್ಬರು ಪದವಿ ಇನ್ನೊಬ್ಬರು ಡಿಪ್ಲೋಮಾ ಪಡೆದಿದ್ದರೆ ಹೆಂಗಸರಲ್ಲಿ ೪೩ ಎಸ್.ಎಸ್.ಎಲ್.ಸಿ. ಒಬ್ಬರು ಪಿ.ಯು.ಸಿ ಶಿಕ್ಷಣದವರಿದ್ದಾರೆ.

ಸಾಗರ ತಾಲೂಕು ಆನಂದಪುರದಲ್ಲಿ ಒಟ್ಟು ೨೪ ಕುಟುಂಬಗಳ ಮಾಹಿತಿ ಪಡೆಯಲಾಗಿದ್ದು ಇಲ್ಲಿಯ ಒಟ್ಟು ಜನಸಂಖ್ಯೆ ೯೮. ಗಂಡಸರು ೫೦ ಹೆಂಗಸರು ೪೮. ಆನಂದಪುರದಲ್ಲಿಯ ಗೊಂದಲಿಗರ ಶೈಕ್ಷಣಿಕ ವಿವರಗಳನ್ನು ಕೋಷ್ಠಕ ೨೫ ರಲ್ಲಿ ನೋಡಿ. ೫೦ ಜನ ಪುರುಷರನ್ನು ಹೊಂದಿದ ಈ ಗ್ರಾಮದಲ್ಲಿ ೬ ರಿಂದ ೧೫ ವರ್ಷದ ೧೩, ೧೬ ರಿಂದ ೨೫ ವಯಸ್ಸಿನ ೪, ೨೬ ರಿಂದ ೪೫ರ ವಯಸ್ಸಿನ ೪, ಹೀಗೆ ಒಟ್ಟು ೨೧ ಜನರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದುಕೊಂಡಿದ್ದಾರೆ. ಒಟ್ಟು ೪೮ ಮಹಿಳೆಯರಲ್ಲಿ ೬ ರಿಂದ ೧೫ ವರ್ಷದ ೧೨, ೧೬ ರಿಂದ ೨೫ರ ೫, ೨೬ ರಿಂದ ೪೫ರ ೩, ೪೬ ರಿಂದ ೬೦ ಒಬ್ಬ ಮಹಿಳೆ ಹೀಗೆ ಒಟ್ಟು ೨೧ ಮಹಿಳೆಯರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಪಡೆದಿರುವ ಬಗ್ಗೆ ಮಾಹಿತಿ ದೊರೆಯುತ್ತದೆ. ೧೬ ರಿಂದ ೨೫ ವಯಸ್ಸಿನ ಪುರುಷರಲ್ಲಿ ಇಬ್ಬರು ಹಾಗೂ ಮಹಿಳೆಯರಲ್ಲಿ ಒಬ್ಬರು ಎಸ್.ಎಸ್.ಎಲ್.ಸಿ. ವರೆಗೆ ಇನ್ನೊಬ್ಬರು ಟಿ.ಸಿ.ಎಚ್. ಪಡೆದ ಬಗ್ಗೆ ವಿವರವಿದೆ. ೨೬ ರಿಂದ ೪೫ ವರ್ಷದೊಳಗಿನ ಒಬ್ಬ ಪುರುಷ ಎಸ್.ಎಸ್.ಎಲ್.ಸಿ ಓದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಚಿತ್ರದಹಳ್ಳಿ ಮತ್ತು ಮಳಲಿ ಗ್ರಾಮಗಳನ್ನು ಸಮೀಕ್ಷೆ ಮಾಡಿದಾಗ ಒಟ್ಟು ೮೫ ಕುಟುಂಬಗಳನ್ನು ಸಂದರ್ಶಿಸಿದ್ದು ಇಲ್ಲಿ ೩೨೮ ಜನಸಂಖ್ಯೆ ಇದ್ದು ಇದರಲ್ಲಿ ೧೭೬ ಗಂಡಸರು ಮತ್ತು ೧೫೨ ಹೆಂಗಸರು ಇರುವುದು ಕಂಡು ಬರುತ್ತದೆ. ಈ ಎರಡು ಗ್ರಾಮದಲ್ಲಿ ವಾಸಿಸುವ ಗೊಂದಲಿಗರು ಕೃಷಿ ಕೂಲಿ, ಕವದಿ ಹೊಲಿಯುವ, ಪಾತ್ರೆ ವ್ಯಾಪಾರ, ಮತ್ತು ಪಾರಂಪರಿಕ ಭಿಕ್ಷಾಟನೆ ಮಾಡುತ್ತಿರುವ ಬಗ್ಗೆ ತಿಳಿಯುತ್ತದೆ. ಇವರ ಶೈಕ್ಷಣಿಕ ವಿವರಗಳ ಬಗ್ಗೆ ಕೋಷ್ಟಕ ೨೬ನ್ನು ಗಮನಿಸಿ. ಈ ಗ್ರಾಮಗಳಲ್ಲಿಯ ೬ ರಿಂದ ೧೫ ವರ್ಷದೊಳಗಿನ ೩೮ ಗಂಡು ಮತ್ತು ೧೬ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿರುವುದು ಕಂಡು ಬರುತ್ತದೆ. ೧೬ ರಿಂದ ೨೫ ವರ್ಷದೊಳಗಿನ ೩೩ ಗಂಡಸರು ೧೯ ಹೆಂಗಸರು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆದಿದ್ದು ಈ ವಯೋಮಾನದ ಗಂಡಸರಲ್ಲಿ ೪ ಜನ ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯು.ಸಿ. ಒಬ್ಬರು ಪದವಿ ಪಡೆದುಕೊಂಡಿದ್ದಾರೆ. ಹೆಂಗಸರಲ್ಲಿ ಮೂವರು ಪಿ.ಯು.ಸಿ. ಒಬ್ಬರು ಪದವಿ ಶಿಕ್ಷಣ ಪಡೆದಿದ್ದಾರೆ. ೨೬ ರಿಂದ ೪೫ ವರ್ಷದ ಗಂಡಸರಲ್ಲಿ ೩೧ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ, ೭ ಜನ ಎಸ್.ಎಸ್.ಎಲ್.ಸಿ. ಹಾಗೂ ಒಬ್ಬರು ಪದವಿ ಪಡೆದಿದ್ದಾರೆ. ೪೬ ರಿಂದ ೬೦ ವಯೋಮಾನದ ೧೨ ಪುರುಷರು ಪ್ರಾಥಮಿಕ ಹಾಗೂ ಮಾಧ್ಯಮಿಕ, ತಲಾ ಒಬ್ಬರು ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಇಬ್ಬರು ಪದವಿ ಶಿಕ್ಷಣ ಪಡೆದಿದ್ದರೆ ಹೆಂಗಸರಲ್ಲಿ ೯ ಮಹಿಳೆಯರು ಪ್ರಾಥಮಿಕ ಹಾಗೂ ಮಾಧ್ಯಮಿಕ, ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ ಯಲ್ಲಿ ತಲಾ ಹಾಗೂ ಪದವಿಯಲ್ಲಿ ಇಬ್ಬರು ಶಿಕ್ಷಣ ಪಡೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರ ಪ್ರೇದಶದಲ್ಲಿ ಒಟ್ಟು ೬೮ ಕುಟುಂಬಗಳ ಸಮೀಕ್ಷೆ ಮಾಡಿದಾಗ ಅಲ್ಲಿಯ ಒಟ್ಟು ಜನಸಂಖ್ಯೆ ೨೮೬ ಕಂಡುಬಂದಿದೆ. ಇದರಲ್ಲಿ ೧೫೧ ಗಂಡಸರು ಹಾಗೂ ೧೩೫ ಹೆಂಗಸರು ಇದ್ದಾರೆ. ಈ ಪ್ರದೇಶದಗೊಂದಲಿಗರ ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ಕೋಷ್ಟಕ ೨೭ನ್ನು ಗಮನಿಸಿ ೬ ರಿಂದ ೧೫ ವರ್ಷದ ೩೧ ಗಂಡು ಮತ್ತು ೩೮ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ ವರ್ಷದ ಪುರುಷರಲ್ಲಿ ೯ ಪ್ರಾತಮಿಕ ಹಾಗೂ ಮಾಧ್ಯಮಿಕ, ೭ ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯು.ಸಿ. ವರೆಗೆ ಶಿಕ್ಷಣ ಪಡೆದಿದ್ದರೆ ಹೆಂಗಸರಲ್ಲಿ ೯ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ೫ ಎಸ್.ಎಸ್.ಎಲ್.ಸಿ. ಹಾಗೂ ಒಬ್ಬರು ಪಿ.ಯು.ಸಿ. ವರೆಗೆ ವಿದ್ಯಾಭ್ಯಾಸ ಮಾಡಿದವರಿದ್ದಾರೆ. ೨೬ ರಿಂದ ೪೫ ವರ್ಷ ವಯೋಮಾನದ ಪುರುಷರಲ್ಲಿ ೧೮ ಜನ ಪ್ರಾತಮಿಕ ಹಾಗೂ ಮಾಧ್ಯಮಿಕ, ೪ ಎಸ್.ಎಸ್.ಎಲ್.ಸಿ. ಒಬ್ಬರು ಪಿ.ಯು.ಸಿ ಇಬ್ಬರು ಬಿಎಡ್ ಪದವಿ ಪಡೆದಿದ್ದರೆ ಹೆಂಗಸರಲ್ಲಿ ೫ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಮತ್ತು ಪಿಯುಸಿಯಲ್ಲಿ ಒಬ್ಬರು ಶೈಕ್ಷಣಿಕ ಅರ್ಹತೆ ಹೊಂದಿದ್ದಾರೆ. ೪೬ ರಿಂದ ೬೦ ವರ್ಷದ ಪುರುಷರಲ್ಲಿ ೭ ಪ್ರಾಥಮಿಕ ಹಾಗೂ ಒಬ್ಬರು ಎಸಿ.ಎಸ್.ಎಲ್.ಸಿ. ಓದಿದ್ದರೆ ಹೆಂಗಸರಲ್ಲಿ ಇಬ್ಬರು ಪ್ರಾಥಮಿಕ ಶಿಕ್ಷಣ ಹೊಂದಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಅಮಟಿಕೊಪ್ಪ, ಹರಗುವಾಳು, ತೊಗಸಿ ಮತ್ತು ಸಂಡ ಗ್ರಾಮದಲ್ಲಿರುವ ಒಟ್ಟು ೧೦೯ ಕುಟುಂಬಗಳ ಸಮೀಕ್ಷೆ ಮಾಡಿದಾಗ ಅಲ್ಲಿ ಒಟ್ಟು ೫೦೧ ಜನಸಂಖ್ಯೆ ಇದ್ದು ಅದರಲ್ಲಿ ೨೪೧ ಗಂಡಸರು ೨೬೦ ಹೆಂಗಸರು ಇರುವುದು ಕಂಡುಬಂದಿತು. ಈ ಗ್ರಾಮಗಳ ಶೈಕ್ಷಣಿಕ ವಿವರಗಳಿಗಾಗಿ ಕೋಷ್ಟಕ ೨೮ನ್ನು ಗಮನಿಸಿ. ಈ ಗ್ರಾಮಗಳಲ್ಲಿ ೬ ರಿಂದ ೧೫ ವರ್ಷದ ೫೬ ಗಂಡು ಮತ್ತು ೩೭ ಹೆಣ್ಣು ಮಕ್ಕಳು ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪಡೆಯುತ್ತಿದ್ದಾರೆ. ೧೬ ರಿಂದ ೨೫ರ ವೋಯಮಾನದ ಗಂಡಸರಲ್ಲಿ ೩೦ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ೯, ಎಸ್.ಎಸ್.ಎಲ್.ಸಿ. ಇಬ್ಬರು ಪಿ.ಯು.ಸಿ. ಹಾಗೂ ಒಬ್ಬರು ಪದವಿ ಪಡೆದುಕೊಂಡಿದ್ದಾರೆ. ಹೆಂಗಸರಲ್ಲಿ ೧೨ ಜನ ಪ್ರಾಥಮಿಕ ಹಾಗೂ ಮಾಧ್ಯಿಕ ೫ ಎಸ್.ಎಸ್.ಎಲ್.ಸಿ. ಹಾಗೂ ಇಬ್ಬರು ಪದವಿ ಶಿಕ್ಷಣ ಹೊಂದಿದ್ದಾರೆ. ೨೬ ರಿಂದ ೪೫ ವರ್ಷದ ಗಂಡಸರಲ್ಲಿ ೩೫ ಜನ ಪ್ರಥಮಿಕ ಹಾಗೂ ಮಾಧ್ಯಮಿಕ ೬ ಜನ ಎಸ್.ಎಸ್.ಎಲ್.ಸಿ. ೩ ಪಿ.ಯು.ಸಿ. ೮ ಜನ ಪದವಿ ಪಡೆದುಕೊಂಡಿದ್ದಾರೆ. ಮಹಿಳೆಯರಲ್ಲಿ ೧೦ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಹಾಗೂ ಒಬ್ಬರು ಎಸ್.ಎಸ್.ಎಲ್.ಸಿ. ಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ೪೬ ರಿಂದ ೬೦ ವರ್ಷದ ಪುರುಷರಲ್ಲಿ ೧೯ ಜನ ಪುರುಷರು ಪ್ರಾಥಮಿಕ ಹಾಗೂ ಮಾಧ್ಯಮಿಕ ಒಬ್ಬರು ಎಸ್.ಎಸ್.ಎಲ್.ಸಿ. ಇನ್ನೊಬ್ಬರು ಪದವಿ ಪಡೆದುಕೊಂಡಿದ್ದಾರೆ. ಹೆಂಗಸರಲ್ಲಿ ೮ ಜನ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಹೊಂದಿದವರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ವಾಸಿಸುತ್ತಿರುವ ಗೊಂದಲಿಗರು ಶೈಕ್ಷಣಿಕವಾಗಿ ಪ್ರಗತಿಯನ್ನು ಸಾಧಿಸಲು ಹಂತ ಹಂತವಾಗಿ ಪ್ರಯತ್ನಿಸುತ್ತಿರುವ ಚಿತ್ರಣಕಂಡುಬರುತ್ತದೆ.