ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರಾಗಿದ್ದ ಶ್ರೀ ಮೊನ್ನಪ್ಪ ಅವರು ಶ್ರೀ ದೇವರಾಜು ಅರಸು ಸಂಶೋಧನಾ ಸಂಸ್ಥೆಯ ಇಲಾಖೆಯ ಮೂಲಕ ೨೦೦೫-೦೬ ರಲ್ಲಿ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳನ್ನು ಕುರಿತು ಅಧ್ಯಯನ ಕೈಕೊಂಡು ವರದಿಗಳನ್ನು ಸಿದ್ಧಪಡಿಸಲು ಕನ್ನಡ ವಿಶ್ವವಿದ್ಯಾಲಯದ ಬುಡಕಟ್ಟು ಅಧ್ಯಯನ ವಿಭಾಗಕ್ಕೆ ಸೂಚಿಸಿ ಹಣಕಾಸಿನ ನೆರವನ್ನು ನೀಡಿದರು. ಕನ್ನಡ ವಿಶ್ವವಿದ್ಯಾಲಯದ ಅಂದಿ ಕುಲಪತಿಗಳಾಗಿದ್ದ ಡಾ. ಬಿ.ಎ. ವಿವೇಕ ರೈ ಅವರು ಈ ಮಹತ್ವದ ಯೋಜನೆಗಳನ್ನು ಕೈಕೊಳ್ಳಲು ವಿಶ್ವವಿದ್ಯಾಲಯದ ಮೂಲಕ ಎಲ್ಲ ರೀತಿಯಿಂದ ಸಹಾಯ ಸಹಕಾರಗಳನ್ನು ನೀಡಿ ಈ ಗೊಂದಲಿಗರ ಅಧ್ಯಯನ ವರದಿ ಸಿದ್ಧಪಡಿಸಲು ಕಾರಣರಾದ ಅವರಿಗೆ,

ಹಿಂದುಳಿದ ವರ್ಗಗಳ ಇಲಾಖೆಯ ಆಯುಕ್ತರಾಗಿದ್ದ ಶ್ರೀ ಮೊನ್ನಪ್ಪ ಅವರಿಗೆ, ಶ್ರೀ ದೇವರಾಜು ಅರಸು ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಚಂದ್ರಮ್ಮ ಕಣಗಲಿ ಅವರಿಗೆ, ಸಹ ನಿರ್ದೇಶಕರಾದ ಶ್ರೀ ಕೃಷ್ಣಾ ನಾಯಕ್ ಅವರಿಗೆ, ಕ್ಷೇತ್ರಕಾರ್ಯದಲ್ಲಿ ಸಹಾಯ ಮಾಡಿದ ಶ್ರೀ ಶಿವಾನಂದ ಪಾಚಂಗಿ (ನವಲಗುಂದ) ಹಾಗೂ ಮಾಹಿತಿ ನೀಡಿದ ಎಲ್ಲ ಗೊಂದಲಿಗರ ಸಮುದಾಯಕ್ಕೆ ವಂದನೆಗಳು.

ಈ ಅಧ್ಯಯನದ ವರದಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಪ್ರಕಟಿಸಲು ಪ್ರೇರಣೆ ನೀಡಿದ ಮಾನ್ಯ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಹಾಗೂ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಪ್ರಸಾರಾಂಗದ ಎಲ್ಲ ಬಳಗಕ್ಕೆ, ಅಕ್ಷರ ಸಂಯೋಜನೆ ಮಾಡಿದ ಯಶಸ್ವಿ ಪ್ರಿಂಟ್ ಅಡ್ಸ್‌ನವರಿಗೆ ನನ್ನ ನಮನಗಳು.

ಡಾ. ಗಂಗಾಧರ ದೈವಜ್ಞ