ಕ : ಒಂದೂರಿನಲ್ಲಿ ಒಬ್ಬ ಮುದುಕಿ- ಅರವತ್ತು ವರುಷದ ಯಜಮಾನಿ.

ಹಿ : ಹಾ
ಕ : ಆ ಯಜಮಾನಿ ಹೆಸರು ಮದಲು- ಬಸಮ್ಮ ಅಂತ ಇತ್ತು.

ಹಿ : ಆ ಬಸಮ್ಮಾ ಅಂಬೋ ಹೋಗಿ ನಾಮಕರಣ ಹೋಗಿ ಜಗಳ ಮಾಡದ್ರಲ್ಲಿ ನಿಪುಣಳಾಗಿದ್ದಕ್ಕೆ ಜಗಳಗಂಟಿ ಜಕ್ಕಮ್ಮ ಅಂತ ಹೆಸರು,-

ಕ : ನಾಮಕರಣ ಬಂತು

ಕ : ಜಗಳಗಂಟಿ ಜಕ್ಕಮ್ಮ!

ಹಿ : ಹ್ಯಾಗೆ ಅದು ಹೆಸರು ಬಂತು ಅಂದ್ರ,

ಕ : ಸುಮ್ಮನೆ ಜಗಳ ಆಡ್ಬೇಕು, ಜಗಳ ಮಾಡಿದ ದಿವಸದಲ್ಲಿ ಮಾತ್ರ ಅಡಿಗಿ ಮಾಡಿ ಊಟ ಮಾಡ್ಬೇಕು.

ಹೌದು.

ಹಿ : ಜಗಳ ಇಲ್ಲದ್ರ ಆವತ್ತು ಊಟಾನೇ ಇಲ್ಲ ಆಯಮ್ಮಗೆ.

ಕ : ಯಾವಾಗ ಜಗಳ ಮಾಡ್ಬೇಕು-ಅಡಿಗಿ ಮಾಡ್ಬೇಕು ಊಟ ಮಾಡ್ಬೇಕು.

ಹಿ : ಹೌದು

ಕ : ಎಂಟು ದಿವಸದವರೆಗೂ ನೋಡಿದ್ಲು ಒಬ್ರೂ ಬರಲಿಲ್ಲ ಜಗಳಕ್ಕೆ ಆ ಯಮ್ಮನ ಕೂಟs!

ಹಿ : ಹಾ

ಕ : ಹೊಟ್ಟಿ ಹಸಿದುಬಿಟ್ತು – ಆವತ್ತಿಗೆ ಎಂಟು ದಿವಸ ಆಯ್ತು ಅನ್ನ ಇಲ್ಲದs. ಯಾರೂ ಜಗಳಕ್ಕ ಬರ್ಲಿಲ್ಲ. ಹ್ಯಾಂಗ ಮಾಡ್ಲಿ ಅಂತ್ಹೇಳಿ, ಆ ಯಜಮಾನಿ-

ಹಿ : ಹೌದೂ

ಕ : ಒಳಗ ಬಂದು ನೋಡ್ತಾಳೆ ಒಲಿಯಾಗ ಬೂದಿ ಇತ್ತು.

ಹಿ : ಹಾ!

ಕ : ಆ ಬೂದಿ ಎಲ್ಲ ತುಂಬಬೇಕಾದ್ರೆ ಮೂರು ಮರ ಬೂದಿ ಆಯ್ತು.

ಹಿ : ಹೌದು

ಕ : ಈ ಬೂದಿ ತಗೊಂಡು ದಾರಿ ಮಾರ್ಗದಲ್ಲಿ ನಿಂತು ತೂರಿದ್ರೆ ಯಾರ ಕಣ್ಣಾಗನ ಬೂದಿ ಹೊಕ್ಕೊಂಡ್ರೆ,

ಹಿ : ಹೌದು

ಕ : ಅವರು ಜಗಳಕ್ಕೆ ಬರ್ತಾರೆ, ನಾನು ಜಗಳ ಮಾಡಿ

ಹಿ : ಅಡಿಗಿ ಮಾಡಿ

ಕ : ಅಮ್ಯಾಲೆ ಉಣ್ಣಬೇಕು ಅಂತ್ಹೇಳಿ ಬೂದಿ ತಗೊಂಡು ತೂರ್ಲಿಕ್ಕೆ ನಿಂತ್ಲು ಆಯಮ್ಮ.

ಹಿ : ಹೌದೇ…

ಕ : ಆ ಜಗಳಗಂಟಿ ಜಕ್ಕಮ್ಮನ ಚಾಳೀ ನೋಡಿದ್ರು ಊರಾಗಿನ ಜನ,

ಹಿ : ಹೌದು

ಕ : ಹೋಳುಬಿದ್ದು ಹೋಗ್ತೀದ್ರು, ಬೂದಿ ಕಣ್ಣಾಗ ಮೂಗಿನಾಗ ಹೊಕ್ಕಂಡ್ರೂ ಜಗಳಕ್ಕೆ ಬರ್ತಿದ್ದಿಲ್ಲ.

ಹಿ : ಹಾ

ಕ : ಬೂದಿ ಎಲ್ಲಾ ತೂರಿಬಿಟ್ಲು ; ಒಬ್ರೂ ಜಗಳಕ್ಕೆ ಬರ್ಲಿಲ್ಲ.

ಹಿ : ಹೌದು

ಕ : ಯಾರೂ ಜಗಳಕ್ಕೆ ಬರ್ಲಿಲ್ಲಾ

ಹಿ : ಏನು ಮಾಡ್ಬೇಕು

ಕ : ಇನ್ನು ತಾನು ಅಡಿಗಿ ಮಾಡಿ ಊಟ ಮಾಡೋದು ಯಾವ ರೀತಿ ಅಂತ್ಹೇಳಿ ಇಲ್ಲಿ ಆದ್ರೆ ಹಿಂಗ ಜಗಳ ಸಿಗದಿಲ್ಲ, ಆ ಬೋರು ನಲ್ಲಿತಾಗೆ ಹೋದ್ರೆ ಅಲ್ಲಿ ವಿಶೇಷ ಹೆಣ್ಣುಮಕ್ಕಳು ಇರ್ತಾರೆ.

ಹಿ : ಹೌದು

ಕ : ಅಲ್ಲಿ ಜಗಳ ಸಿಕ್ಕತೈತಿ ಅಂತ್ಹೇಳಿ ತಾನೊಂದು ಕೊಡ ತೊಗೊಂಡು ಹೋದ್ಲು; ಆ ಬೋರಿಂತಾಗ.

ಹಿ : ಹೋದ್ಲು ಮುದುಕಿ

ಕ : ಒಂದು ಆರುತಿಂಗಳು ಆಗಿತ್ತು ಗಂಡನ ಮನಿಗೆ ಬಂದು ಆ ಹುಡುಗಿ

ಹಿ : ನೆಡಿಯಾಕ

ಕ : ಹೊಸ ಮದುಮಗಳು ನೀರಿನ ಕೊಡ ತೊಗೊಂಡು ಆ ಬೋರಿಗೆ ಬಂದು ನೀರ್ಹಿಡಿತಿದ್ಲು,

ಹಿ : ಆ ತಂಗಿ.

ಕ : ಒಂದು ಮುಕ್ಕಾಲು ಕೊಡ ನೀರು ತುಂಬಿತ್ತು ಆಗ್ಲೆ

ಹಿ : ಹೌದು

ಹಿ : ಹೌದು

ಕ : ಈ ಜಗಳಗಂಟಿ ಬಂದು – ಹೇ ತಂಗೀ

ಹಿ : ಹಾ

ಕ : ತಗೀ ಕೊಡಾನ ನಾ ಹಿಡೀತೀನಿ

ಹಿ : ಅದು ಹೆಂಗೆ ತಾಯಿ?

ಕ : ಅಲ್ಲಮ್ಮ ನಂದು ಮುಕ್ಕಾಲು ಕೊಡ ತುಂಬೇತಿ

ಹಿ : ನಿಜ

ಕ : ಇನ್ನು ಸ್ವಲ್ಪ ಹ್ಯಾಂಡ್ಲು ಹೊಡುದ್ರೆ ಕೊಡಾ ತುಂಬತೈತಿ

ಹಿ : ಹಾ

ಕ : ನಾನು ತೊಗೊಂಡು ಹೋದ ಮ್ಯಾಲೆ ನೀನು ಹಿಡ್ಕೋ

ಹಿ : ಹಾ

ಕ : ಅದೆಲ್ಲಾ ಕೇಳೋದಿಲ್ಲಾ

ಹಿ : ಹಾ

ಕ : ಜಗಳ ಬೇಕು ಈಯಮ್ಮಗೆ,

ಹಿ : ಹಾ

ಕ : ಕೊಡಾ ತೆಗಿ ಅಂದಿದ್ದೆ ಆ ಹುಡುಗಿ ಜಡಿ ಹಿಡದು ನಾಕೇಟು ಹೊಡದು,

ಹಿ : ಓಹೋ ಜಗಳ ಮಾಡೇ ಬಿಟ್ಲು

ಕ : ಜಗಳ ಮಾಡಿದ್ಲು, ಆ ಕೊಡಾ ತಗದಿಟ್ಟು ತನ್ನ ಕೊಡಾ ತುಂಬಿಕೊಂಡು ಮನಿಗೆ ಹೋಗಿಬಿಟ್ಲು.

ಹಿ : ಹೌದೇ!

ಕ : ಆ ಮುದುಕಿ ಹೊಡದಿದ್ದಕ್ಕೆ ಆಯಮ್ಮ ಆ ಹುಡುಗಿ ಕೊಡಾ ಹಿಡ್ಕೊಂಡು ಆತಗೊಂತ ಮನಿಗೆ ಬಂದ್ಲು.

ಹಿ : ಬಂದ್ಲು.

ಕ : ಅವರ ಅತ್ತಿ ಕುಂತಿದ್ಲು ಕಟ್ಟಿ ಮ್ಯಾಲೆ, -ಯಾಕವ್ವಾ ಮಗಳೇ?

ಹಿ : ಅದೇನಮ್ಮಾ?-

ಕ : ಸೊಸಿ ಯಾಕ ಅಳತೀದೆಲ್ಲಾ?

ಹಿ : ಜಗಳಗಂಟಿ!

ಕ : ಏನಿಲ್ಲಮ್ಮಾ ಆ ಜಗಳಗಂಟೆಂತ್೧-

ಹಿ : ಹೌದು

ಕ : ಮುಪ್ಪಾನ ಮುದುಕಿ,

ಹಿ : ನಿಜಾಮ್ಮ

ಕ : ನನ್ನ ಕೊಡ ಮುಕ್ಕಾಲು ತುಂಬಿತ್ತು, ಕೊಡ ತಗಿ ಅಂದ್ಲು ನಾನು ಸ್ವಲ್ಪ ಐತೆಮ್ಮ ತುಂಬತೈತಿ ಅಂದ್ರೆ ಕೇಳಲಿಲ್ಲ.

ಹಿ : ಹಾ ನನ್ನ ಕೂದ್ಲ ಹಿಡದು ಜಗ್ಗಿ ನಾಕೇಟು ಬಡದು ಕೊಡಾ ತುಂಬಿಕೊಂಡು ಹೋದ್ಲು.

ಹಿ : ಹೌದು!

ಕ : ಆಕೀಗ್ಯಾಕ ತಡವಿದೆಮ್ಮಾ ಜಗಳಗಂಟಿ ಮೊದಲೇ ಊರಿಗೆಲ್ಲಾ ಮಿಕ್ಕಿಬಿಟ್ಟಾಳೆ, ಮತ್ತೆ ಆಕಿ ಇಲ್ಲಿಗೆ ಬಂದು ಜಗಳಾ ಮಾಡಾಕೇ.

ಹಿ : ಹೌದೆ

ಕ : ನಿನಿಗೆ ಹೊಡದು ಬಿಟ್ಟಾಳು ಹಂಗಾಮದ ಹುಡುಗಿ.

ಹಿ : ಹಾ

ಕ : ಬಾ ಅಂತ್ಹೇಳಿ, ಕೊದ ಇಳಿಸಿ ಕೆಳಗಿಟ್ಟು ಆ ಸೊಸಿಗೆ ಕರ್ಕೊಂಡು ಹೋಗಿ ಒಂದು ಕೆರಸಿ,

ಹಿ : ಹೌದು

ಕ : ನವಣೀ ಹಾಕೋ ಕೆರಸ್ಯಾಗ ಕುಂದ್ರಿಸಿ ಮ್ಯಾಲೆ ಕೌದಿ ಮುಚ್ಚಿದ್ಲು.

ಹಿ : ಹೌದು

ಕ : ಈ ಜಗಳಗಂಟಿ ಜಕ್ಕಮ್ಮ ಮನಿಗೆ ಬಂದಾಳೆ.

ಹಿ : ಹೌದು

ಕ : ಅದು ಸಂಪೂರ್ಣ ಜಗಳ ಆಗಿಲ್ಲ.

ಹಿ : ಹೌದು.

ಕ : ಸಮಾಧಾನ ಆಗ್ವಲ್ಲದು ಅಡಿಗಿ ಮಾಡಿ ಉಣ್ಣಾಕ.

ಹಿ : ಹಾ

ಕ : ಪೂರ್ಣ ಜಗಳಬೇಕು ಅಂತ್ಹೇಳಿ ಮತ್ತೆ ಅದೇ ಮನಿಗೆ ಬಂದಾಳ.

ಹಿ : ಆಹಾ

ಕ : ಏನಮ್ಮಾ?

ಹಿ : ಅದು ಏನಮ್ಮಾ ತಾಯೀ?

ಕ : ನಿನ್ನ ಸೊಸಿ ಎಲ್ಲಿ ಹೋದ್ಲು?

ಹಿ : ಎಲ್ಲಿ ಹೋದ್ಲು

ಕ : ಆ ಸೊಸೀನು ನೀನು ಅಲ್ಲಿ ಏನೋ

ಹಿ : ಜಗಳ

ಕ : ಜಗಳ ಮಾಡಿದ್ದಿರೆಂತೆಲ್ಲಮ್ಮಾ?

ಹಿ : ಹೌದು

ಕ : ಆ ನನ್ನ ಸೊಸಿ ಕೂದ್ಲಾ ಹಿಡದು ಹೊದದಿದ್ದೆಂತೆ, ಅದಕ್ಕೆ ಬಂದು ಆತಗೊಂತಾ ಹೇಳಿದ್ಲು.

ಹಿ : ಆ

ಕ : ಮತ್ತೆ ಜಗಳಕ್ಕೆ ಬಂದ್ರು ಬರಬಹುದು ಅಂತ್ಹೇಳಿ-

ಹಿ : ಹೌದು

ಕ : ನನ್ನತಾವೆ ಎಂಟಾಣಿ ಇಸ್ಕೊಂಡು,

ಹಿ : ತಲಿ ಬೋಳಿಸ್ಕೊಂಡು

ಕ : ತಲಿ ಬೋಳಿಸ್ಕೊಂಡು ಬರಾಕ ಚೌರದಾರ್ರ ಮನಿಗೆ ಮನಿಗೆ ಹೊದ್ಲು.

ಹಿ : ಹೋದ್ಲು.

ಕ : ಜಗಳಗಂಟಿ ನೋಡಿದ್ಲು-ಅಬಾಬಾ ಯಂಥಾ ಪಕ್ಕಾ ಉಷಾರಿ ಅದಾಳಲ್ಲ!

ಹಿ : ಉಷಾರಿ ಅದಾಳ ಆಕಿ ಪಾಪ!

ಕ : ಈಗ ಎಂಟಾಣಿ ತೊಗೊಂಡು ಚೌರದಾರ ಮನಿಗೆ ಹೋಗಿ ತಲಿ ಬೋಳಿಸ್ಕೊಂಡು ಬರಾಕ ಹೋಗ್ಯಾಳ.

ಹಿ : ಆಕಿ ತಲೆ ಬರೆ ತಲಿ, ಕೂದ್ಲ ಇರಾದಿಲ್ಲ ಬರೆತಲಿ ಆಕೈತಿ.

ಕ : ಆಗತೈತಿ!

ಹಿ : ಹೌದು

ಕ : ನನ್ನ ಕೂದ್ಲ ಹಿಡದು ಆಕಿ ಹಿಗ್ಗಾ ಮುಗ್ಗಾ ಮಾಡತಾಳಂತ್ಹೇಳಿದ್ದs

ಹಿ : ಹಾ

ಕ : ತಾನೊಂದು ಎಂಟಾಣಿ ತಗೊಂಡು ಚೌರದಾರ ಮನಿಗೆ ಬಂದ್ಲು.

ಹಿ : ಹೌದೇ

ಕ : ಓ ಚೌರದಾರಣ್ಣಾ-

ಹಿ : ಆ

ಕ : ಇಗಾ ಎಂಟಾಣಿ ತಗೊಂಡು ನನ್ನ ತಲೆಬೋಳಿಸು.

ಕ : ಬೇಸಿ, ಬೇಸಿ ಬಂದಿ ಬಾರಮ್ಮಾ.

ಹಿ : ಹೌದು.

ಕ : ಈ ಚೌರದಾರಣ್ಣನ ಹೆಂಡ್ತಿ ಕೂಟ್ ಜಗಳ ಮಾಡಿ ಎಂಟು ದಿವಸ ಆಗಿತ್ತು ಈ ಮುದುಕಿ.

ಹಿ : ಹೌದು

ಕ : ಅವನು ದಾರಿ ಕಾಯತಾ ಇದ್ದ. ಯಾವಾಗ ಆಕಿ ಜಗಳಗಂಟಿ ಬಂದಾಳು, ನನ್ನ ಕೈಯಾಗ ಯಾವಾಗ ಸಿಕ್ಕಾಳು, ಪರಿಣಾಮ ಮಾಡ್ಬೇಕಂತ್ಹೇಳಿ ದಾರಿ ಕಾಯ್ತಿದ್ದ.

ಹಿ : ಆತ

ಕ : ಎಂಟಾಣಿ ತಗೊಂಡು ತಲಿ ಬೋಳ್ಸು ಅಂದ ತಕ್ಷಣಕ್ಕೆ ಆ ಎಂಟಾಣಿ ಇಸ್ಕೊಂಡ ಚೌರದಣ್ಣ, ಬಕ್ಕಣದಾಗ ಹಾಕ್ಕೊಂಡ.

ಹಿ : ಆ

ಕ : ಆ ಕೆಲಸಿ ತಲಿ ಬೋಳಸಾ ಕತ್ತಿ ಇಟ್ಟುಬಿಟ್ಟು ಮುಚ್ಚಿ.

ಹಿ : ಹೌದು

ಕ : ಮಂಡ ಕತ್ತಿ ತಗೊಂಡ.

ಹಿ : ಹಾ

ಕ : ತಲಿಗೆ ನೀರುಗೀರು ಹಚ್ಚಲಿಲ್ಲ, ಹಂಗs ಬೋಳಸಾಕ ನಿಂತುಬಿಟ್ಟ.

ಹಿ : ಓಹೋ

ಕ : ತಲಿಕೂದ್ಲಾ ಕಿತ್ತುಕೊಂಡು ಹೊಕ್ಕಾವ, ತಲಿಚರ್ಮ ಸುಲಿತೈತಿ, ರಕ್ತ ಎಲ್ಲಾ ಸುರಿತೈತಿ ಮಿಸ್ಗಾಡುವಲ್ಲು ಜಗಳಗಂಟಿ.

ಹಿ : ಆಹಾ ಜಗಳಗಂಟಿ.

ಕ : ಆ ರಕ್ತ ಮೈಯೆಲ್ಲಾ ಆದ ಮ್ಯಾಲೆ ಮನಿಗೆ ಬಂದ್ಲು-ಏನಮ್ಮಾ?

ಹಿ : ಹಾ

ಕ : ನಿನ್ನ ಸೊಸಿ ಎಲ್ಲಿ ಹೋದ್ಲು?

ಹಿ : ಹಾ

ಕ : ಈಗ ಸ್ವಲ್ಪ ಹೊತ್ತು ಆಯ್ತಮ್ಮಾ ತೆಲಿ ಬೋಳಿಸ್ಕೊಂಡು ಬಂದಿದ್ಲು ಮೈಯೆಲ್ಲ ಕೂದ್ಲ. ರಕ್ತ ಆಗಿತ್ತಲ್ಲಾ ಒಂದು ಸೀರಿ ತಗೊಂಡು ಊರ ಮುಂದೆ ಹೊಕ್ಕು ತುಂಬಾ ಬಾವಿಗೆ.

ಹಿ : ಹೋಗ್ಯಾಳ

ಕ : ಜಳಕಕ್ಕ ಹೋಗ್ಯಾಳ ಆ ತಾಯೀ….

ಹಿ : ಬಾವಿಗೆ?

ಕ : ಹೂ ಹೊಕ್ಕು ತುಂಬೋ ಬಾವಿಗೆ ಜಳಕಕ್ಕ!

ಹಿ : ಹೌದು

ಕ : ಅಲ್ಲಿ ಬೇಸಿ ಆತು ಯಾರೂ ಇರಾದಿಲ್ಲ, ಇಬ್ರು ಜಗಳ ಯಾರೂ ಬಿಡಸಾದಿಲ್ಲ

ಹಿ : ಆ

ಕ : ಅಂತ್ಹೇಳಿ ತಾನೊಂದು ಸೀರಿ ತೊಗೊಂಡು ಬಾವಿಗೆ ನಡದ್ಲು.

ಹಿ : ಹೌದೇ….

ಕ : ಬಂದು ನೋಡ್ತಾಳೆ ಮುದುಕಿ, ಸುತ್ತ ಮುತ್ತ ಒಬ್ರೂ ಇಲ್ಲ.

ಹಿ : ಎಲ್ಲೂ ಇಲ್ಲ.

ಕ : ಎಲ್ಲಾ ಸಣ್ಣ ಸಣ್ಣ ಗಿಡಗಳು ವನಂತರಾ

ಹಿ : ಹಾ

ಕ : ಬಾವಿ ಹತ್ರ ಎಲ್ಲಾ ನೋಡಿದ್ಲು ಎಲ್ಲೆಲ್ಲೂ ಕಾಣ್ಲಿಲ್ಲ.

ಹಿ : ಓಹೋ

ಕ : ಎಲ್ಲಿ ಹೋಗಿದ್ದಾಳು ಅಂತ ವನಂತರ ಎಲ್ಲಾ ತಿರುಗಿ ನೋಡಿದ್ಲು!

ಹಿ : ಹೌದು

ಕ : ಬಾವಿ ದಂಡಿಗೆ ಬಂದು ಬಾವ್ಯಾಗೆ ಏನನ್ನ ಅಡಗಿ ಕುಂತಿದ್ದಾಳು ಅಂತ್ಹೇಳಿ ಬಾವಿ ದಂಡಿಗೆ ನಿಂತ್ಕೊಂಡು ಹೀಂಗs ತಲಿ ಬಗ್ಗಿ ನೋಡಿದ್ಲು.

ಹಿ : ತನ್ನ ನೆರಳು ಆ ನೀರಿನಾಗ ಕಾಣತಿತ್ತು.

ಕ : ಅಲೇಲೇ ನನಗೆ ಹೆದರಿ ಈಕಿ ನೀರಾಗ ಕುಂತಾಳ ಈಕಿಗೆ ಎಲ್ಹೋದ್ರೂ ಬಿಟ್ಟೇನು- ಅಂತ್ಹೇಳಿ ಕುಪ್ಪಳಿಸಿ ಬಾವ್ಯಾಗ ಹಾರಿಬಿಟ್ಲು.

ಹಿ : ಕುಪ್ಪಳಿಸಿ ಬಾವ್ಯಾಗ ಹಾರಿದ ತಕ್ಷಣಕ್ಕೆ-

ಕ : ಮೂರೇಟು ಎದ್ಲು, ಮೂರೇಟು ಮುಳಿಗಿಬಿಟ್ಲು.

ಹಿ : ಓಹೋ ಜಗಳಗಂಟಿ.

ಕ : ಅಲ್ಲಿಗೆ ನೀರು ಕುಡುದು ಆಯಮ್ಮ ಒಳಗೆ ನೆಲ ಹಿಡದುಬಿಟ್ಲು.

ಹಿ : ಹಾ
ಕ : ಹಿಂಗಾ
ಹಿ : ಹೌದು

ಕ : ಯಾರ್ದು ವಿಶೇಷ ಜಗಳ ಬಾಯಿ ಮುಂದಿರುತೈತೋ-

ಹಿ : ಹೌದು

ಕ : ಯಾರು ಜಗಳದಲ್ಲಿ ನಿಪುಣರಾಗ್ತಾರೋ-

ಹಿ : ಹೌದು

ಕ : ಇದೇ ಪರಿಸ್ಥಿತಿ ಆಕ್ಕಾತಿ-ಜಗಳಗಂಟಿ ಜಕ್ಕಮ್ಮಂದು ಅವರಿಗೆ.

ಶಿವ ಹರಯನ್ನ ದೇವ ಹರೇ….
ಅಂಬಾನ ಪಾದ ನೆನಹುವನಾ….