ಅಕ್ಕಳಿಸು – ಹಿಂಜರಿ
ಅಕ್ಕಾರಿಲ್ಲ – ಆಗುತ್ತಾರಲ್ಲ
ಅಕ್ಕೀನಿ – ಆಗುತ್ತೇನೆ
ಅಗಾವ್ – ಮುಂಗಡ
ಅಡಕ್ಲಿ ಗಡಿಗೆ – ಒಂದರ ಮೇಲೊಂದು ಪೇರಿಸಿದ ಗಡಿಗೆಗಳು
ಅಡವಿಕಾಯ ಶಿಪಾಯಿ – ಅಡವಿ ಕಾಯುವ ಸಿಪಾಯಿ
ಅತುಗೊಂತಾ – ಅಳುತ್ತಾ
ಅತ್ತಗೊಂತಾ – ಅಳುತ್ತಾ
ಅದ – ಅದನ್ನ
ಅನಕೊಂತ – ಅಂದುಕೊಳ್ಳುತ್ತಾ
ಅನಾಮತ – ಸಂಪೂರ್ಣ
ಅಮಲತಾ ಇರು -ಹಂಬಲಿಸುತ್ತಾ ಇರು
ಅರಜಾತಿ-ಅಶುದ್ಧ, ಜಾತಿಗೆಟ್ಟ, ನೀತಿಗೆಟ್ಟ
ಅರಬಾರ ದಂಡು – ಅರಬರ ಸೈನಿಕರು
ಅಲ್ಲಾಪಿಲ್ಲಿ – ಘಾಟಿ, ಅಸಾಧ್ಯ
ಅವನ್ನ – ಅವನನ್ನು
ಅವರ್ಗೆ – ಅವರಿಗೆ
ಅಸ್ಸಯ್ಯ – ಅಸಹ್ಯ
ಅಂಟ್ರಗಾಲು – ಕೊರಳಿಗೆ ಜೋತುಬಿದ್ದು ತನ್ನ ಕಾಲುಗಳಿಂದ ಇನ್ನೊಬ್ಬನನ್ನು ತೆಕ್ಕೆ ಹಾಕಿ ಹಿಡಿಯುವುದು
ಅಂಡಾಂಡ – ಜಗತ್ತು
ಅಂತ – ಎಂದು, ಹೀಗೆಂದು
ಅಂತಃಕರಣ – ಕರುಣೆ
ಅಂತ್ಹೇಳಿ – ಎನ್ನುತ್ತಾ, ಎಂದು
ಅಂದ ಬಳಿಕ – ಆದ್ದರಿಂದ, ಹಾಗಾಗಿ
ಅಂಬಲಿಸು – ಹಲುಬು
ಅಂಬಿಟ್ಟು ಅರಸು – ಹಂಬಲಿಸುತ್ತಾ ರೋಧಿಸು, ಕೂಗು
ಅಂಬ್ಲಿಕೊಂತಾ – ದುಃಖಿಸುತ್ತಾ, ಹಂಬಲಿಸುತ್ತಾ
ಆಕತಲ್ಲೋ – ಆಗುತ್ತಿದೆಯಲ್ಲವೋ
ಆಕ್ಕೈತೆ – ಆಗುತ್ತದೆ
ಆಗೇತಿ – ಆಗಿದೆ
ಆಣೆ – ಹಳೆ ನಾಣ್ಯ, ಒಂದು ರೂಪಾಯಿಯ ಹದಿನಾರನೆ ಒಂದು ಭಾಗ
ಆತು – ಆಯಿತು
ಆದಮ್ಯಾಲೆ – ಆದ್ದರಿಂದ
ಆದ್ರೆ, ಆದರೆ – ಆಗಿ ಹೋದರೆ
ಆರ್ತಿ – ಆರತಿ
ಆರಾಮು – ವಿಶಾಲ
ಆಲಿಸಪ್ಪು – ಪಲ್ಯಕ್ಕೆ ಬಳಸುವ ಹಸಿರೆಲೆ
ಇಕ್ಕಳಗದ್ದಿ – ನೂರಾ ಅರವತ್ತುಸೇರು ಭತ್ತದ ಬೀಜ ಹಾಕಿ ಬೆಳೆಸಬಹುದಾದ ವಿಸ್ತೀರ್ಣದ ಗದ್ದೆ
ಇಕಿ – ಈಕೆ
ಈಚ್ಚಂಡ – ಕೊಳತ ಹೆನ ಮತ್ತು ಅದರ ದುರ್ವಾಸನೆ
ಇಜಾರ – ಚಣ್ಣ
ಇದ – ಈ
ಇದ್ನು – ಇದನ್ನು
ಇರಲಿಕ್ಕೆ – ಇರುತ್ತಿರಲಾಗಿ
ಇರಾ – ಇರುವಂಥ
ಇರಾಕ – ಇರುವುದಕ್ಕಾಗಿ
ಇವನಕೂಟ – ಇವನೊಂದಿಗೆ
ಈಗನ್ನ – ಈಗಾದರೂ
ಈರ್ಲ – ಆಗ ಹುಟ್ಟಿದ ಶಿಶುವಿಗೆ ಶೀತರೋಗ ಬಾಧೆ ತಗಲದಂತೆ ಮಾಡುವ ಒಂದು ಆಚರಣೆ
ಉಟ್ಟಮಾರ್ಗ – ಬತ್ತಲೆ
ಉಡುಗೊರೆ – ಉಡುಪು
ಉತ್ತರಕ್ಕೆ ಹುಟ್ಟಿದ – ತನ್ನ ವಂಶದ ತಂದೆಗೆ ಹುಟ್ಟಿದ
ಉಪ್ಪು – ಋಣ, ಹಂಗು
ಉಳ್ಡು – ಹುರುಡು ಅವಶ್ಯಕತೆ
ಎತ್ಲಾಗ – ಯಾವ ಕಡಿಗೆ
ಎದಕೆ – ಯಾಕೆ, ಯಾವ ಕಾರಣಕ್ಕೆ
ಎಬ್ಬಿಸ ಬೇಕಾರ – ಎಬ್ಬಿಸ ಬೇಕಾದರೆ, ಎಬ್ಬಿ ಸುತ್ತಿರುವಾಗ
ಎರ್ಥಾ – ವ್ಯರ್ಥ
ಎಲ್ಲನೂರು – ಎಲ್ಲರನ್ನು
ಎಲ್ಲ್ಯಾನ – ಎಲ್ಲಿಯಾದರೂ
ಎಲ್ಲ್ಯಾಸಿ – ಯಾವ ಮಾರ್ಗವಾಗಿ
ಎಳ್ಡು – ಎರಡು
ಎಂದಾನ – ಎಂದಾದರೂ
ಐಡಿಯಾ – ಉಪಾಯ
ಐತಿ – ಇದೆ
ಐತೆ – ಇದೆ
ಐದಾನೆ – ಇದ್ದಾನೆ
ಐದಾರೆ – ಇದ್ದಾರೆ
ಐದಾಳೀಕೆ – ಈಕೆ ಇದ್ದಾಳೆ
ಐದಿ ಏನೆ – ಇದ್ದಿ ಏನೆ
ಐಶ್ವರ್ಯವಾಗಿ ಬಾಳು – ಐಶ್ವರ್ಯವಂತನಾಗಿ ಬಾಳು
ಒಗದ್ರು – ಬೀಸಾಡಿದರು
ಒಡಿಕಾರ – ಒಡೆಯ
ಒಬ್ರುಕೂಡಾನು – ಒಬ್ಬರೊಂದಿಗೂ
ಒಯ್ಯಿ – ತೆಗೆದುಕೊಂಡು ಹೋಗು
ಒಯ್ತೀನಿ – ತೆಗೆದುಕೊಂಡು ಹೋಗ್ತೀವಿ
ಕಛೇರಿ – ರಾಜ ದರ್ಬಾರು
ಕಟ್ಲಾಂಬಿ – ನುಚ್ಚಿನ ಅಂಬಲಿ
ಕಡಿ – ಕಡೆಗೆ
ಕಣ್ಣು ಕೆಂಪಗೆ ಮಾಡು – ಕೋಪಿಸಿಕೊಳ್ಳು
ಕಣ್ಣು ದೃಷ್ಟಿ ಬಿಡು – ಕೆಟ್ಟ ಕಣ್ಣಿನಿಂದ ನೋಡು
ಕತ್ಲಾತು – ಕತ್ತಲಾಯಿತು
ಕತಂತ್ರ – ಕುತಂತ್ರ
ಕನ್ನಕಾಳಿ – ಒಂದು ಉಸಿರು ವಾದ್ಯ
ಕನ್ಯಾತೆಗಿ – ವಧುವನ್ನು ಗೊತ್ತುಮಾಡು
ಕುಂಟು – ಕಪಟತನ
ಕರಿಬ್ಯಾಟ – ಯುಗಾದಿಯಲ್ಲಿ ಆಡುವ ಪ್ರಾಣಿ ಬೇಟೆ
ಕಲಿಯಾಂಗ – ಒಂದುಗೂಡುವಂತೆ, ಸೇರುವಂತೆ
ಕಲ್ಲಿನಿಂದ ಬಿಗಿ – ಕಲ್ಲು ಬೀರು
ಕವಾಜಿ – ಕುರುಡು
ಕಾಲಾಗ – ದೆಸೆಯಿಂದ
ಕಾಲು ಕಿತ್ತು – ಪಲಾಯನ ಮಾಡು
ಕಾಶೀ ನಡುಕಟ್ಟು – ಬೇಟೆ ಮತ್ತು ಸಮರಕ್ಕೆ ಹೋಗುವಾಗ ನಡುವಿಗೆ ಬಿಗಿದುಕೊಳ್ಳುವ ಪಟ್ಟ
ಕಿರಿಬೆಳ್ಳು – ಕಿರುಬೆರಳು
ಕಿಲಿಬಿಲಿ – ವಿಲಿವಿಲಿ
ಕೀಲುಗುರ್ರಂ – ಮಾಯದ ಯಾಂತ್ರಿಕ ಕೀಲು ಕುದುರೆ
ಕುಚಾಷ್ಟಿ – ವ್ಯಂಗ್ಯವಾದ ತಮಾಷೆ
ಕುಟಾಗ – ಒಂದಿಗೆ, ಜೊತೆಗೆ, ಸಂಗಡ
ಕುದ್ರಿ ಕಾಲಾಗ – ಕುದುರೆಯ ಸಲುವಾಗಿ
ಕುದ್ರಿ ಬಿಚಾರ – ಕುದುರೆ ತಡಿ
ಕುಬ್ಸ – ಕುಪ್ಪಸ
ಕುಮಲು – ಸಂಕಟ, ಉರಿ
ಕುರಿ ಖಂಡ – ಕಾಲ್ಪನಿಕ ದೇಶ
ಕುವ್ವಾಟ – ತಮಾಷೆ, ಗೇಲಿ
ಕೂಸುಗಂಡ – ಕೂಸಿನ ವಯಸ್ಸಿನ ಗಂಡ
ಕೆಟ್ಟ ಕಾಡಿಗ್ಗಣ್ಣು – ನೋಡಿದರೆ ಕೆಡಕಾಗುವವರ ದೃಷ್ಟಿ
ಕೇಳಬೇಕಾರೆ – ಕೇಳಿದೊಡನೆ
ಕೈವಾಸ – ಕೈವಶ
ಕೊಳಗಲಿ – ಕೊಳಗದಾಲಿ
ಕೊಳ್ಳಬಿದ್ದು – ಕೊರಳನ್ನು ತಬ್ಬಿಕೊಂಡು
ಕೊಳ್ಳಾಗ – ಕೊರಳಿನಲ್ಲಿ
ಕೊಳ್ಡು – ಕೊರಡು
ಕಂಜೂರ – ಒಂದು ವಿಧದ ಬಾಕು, ಚೂರಿ
ಕಂದ – ಮೂಟೆ
ಕುಂದ್ರಲಿಕ್ಕೆ – ಕುಳಿತುಕೊಂಡಿರಲು
ಕುಂದ್ರಾಕರ – ಕುಳಿತುಕೊಳ್ಳುತ್ತಿರುವಾಗ
ಕ್ವಾಣ್ಯಾಗ – ಜೇಲು ಕೋಣೆಯಲ್ಲಿ
ಖರ್ಯಾ – ನಿಜ
ಗಜಭೂಪ – ಆನೆಯ ಬಲ ಉಳ್ಳವ
ಗಡಕ್ಕನೆ – ಥಟ್ಟನೆ
ಗಡಪು ಗಡದ್ದಾದವೂ – ಯಶಸ್ವಿಯಾಗಿ ಮಾಯವಾದವು
ಗಮಗಡ್ಲಿ ಅಕ್ಕಿ – ಅಕ್ಕಿಯ ಒಂದು ಕಾಲ್ಪನಿಕ ಜಾತಿ
ಗವ್ವಾರ – ಗವ್ಹರ
ಗಾಬರಿ – ಭಯ
ಗಾರಗಚ್ಚಿನ ಬಾವಿ – ಗಾರೆಗಚ್ಚು ಮಾಡಿದ ಬಾವಿ
ಗಾವುದ – ನಾಲ್ಕು ಮೈಲು ದೂರ
ಗುರುಲಗ್ನ – ಶುಭ ಮುಹೂರ್ತ
ಗುರ್ತು – ಪರಿಚಯ
ಗುಲಾಪು – ಅಲಂಕಾರದ ದುಂಡನೆಯ ಗಾಜಿನ ಗೋಲಕ
ಗುಳೇದಾರ್ರು – ಗುಳೇ ಬಂದವರು, ವಲಸೆ ಬಂದವರು
ಗೊಬೇ – ಗಟ್ಟಿಯಾಗಿ ರೋಧಿಸುವುದು
ಗೊರ್ಕಿ – ಗೊರಕೆ
ಗೌಡೇರು – ಅರಮನೆಯ ಕೆಲಸಗಿತ್ತಿಯರು
ಗಂಜಿ ಸೀರಿ – ಶುಭ್ರವಾದ ಬಿಳಿ ಸೀರೆ
ಗುಂಬಿ ಗೆಜ್ಜೆ , ಗುಂಬಿ ಗೆರಸಿ – ದೊಡ್ಡ ಬಿದುರು ಪುಟ್ಟ
ಘಾತ ಮಾಡ್ಯಾರೆ – ಮೋಸ ಮಾಡಿದ್ದಾರೆ
ಚಡ್ಡು ಹೊಡೆದು – ತೊಡೆ ತಟ್ಟಿಕೊಂಡು
ಚನ್ನಂಗಿ ಬ್ಯಾಳಿ – ತೊಗರಿ ಬೇಳೆ ಒಂದು ಜಾತಿ
ಚರಗಿ ತೊಗೊಂಡು ಹೋಗು – ಮಲ ವಿಸರ್ಜ ನೆಗೆ ಹೋಗು
ಚುಟಿಗಿ ಹಾಕು – ಆಗ ಹುಟ್ಟಿದ ಕೂಸಿಗೆ ಸೂಜಿ ಕಾಸಿ ಬರೆ ಹಾಕುವುದು
ಚಂಗೂಟ – ತಲೆಗೆ ಸುತ್ತಿಕೊಳ್ಳುವ ಹರಕು ಬಟ್ಟೆಯ ತುಂಡು
ಜಗೇಬೀಳು – ಜೋತು ಬೀಳು
ಜಗ್ಗೈತಿ – ಬಹಳವಿದೆ
ಜಣಿಕ್ಯಾಡತಾವ – ಜೋಲಾಡುತ್ತಿವೆ
ಜರದುಬಿಟ್ಟ – ಖಿನ್ನವಾದ
ಜಲ್ಮ – ಜನ್ಮ
ಜಲ್ಮರ್ಸೀಲೆ – ಜೀವಂತವಾಗಿ
ಜಾಗ್ಗಳು – ಸ್ಥಳಗಳು
ಜೀವರ್ಸಿಲೆ – ಜೀವಸಹಿತ
ಜುಟಾಸು – ನಿರಾಕರಿಸು
ಜೋಗ್ಗಳು – ಜೋಗಿಗಳು
ಠಾಕಣ ಕುದುರಿ – ಜಾತಿಯ ವಿದೇಶೀ ಕುದುರೆ
ಠಿಶ ಮುರುಗ – ಕೆಲಸ ಮಾಡದ
ತಗಳಮ್ಮ – ತೆಗೆದುಕೊಳ್ಳಮ್ಮ
ತಗಂಬಂದು – ತೆಗೆದುಕೊಂಡು ಬಂದು
ತಡಿತಪ್ಪಡಿ – ಅಸಹಾಯಕರು, ದುರ್ಬಲರು?
ತಾತ್ಪರ್ಯವೇನು – ಉದ್ದೇಶವೇನು
ತಾಮಸ ಬಂದು – ಎಚ್ಚರತಪ್ಪಿ
ತಾಳಲಿ – ಲೋಹದ ಕೈ ತಾಳಗಳಿಂದ
ತಾಳಿ ಮೂರ್ತ – ಮಾಂಗಲ್ಯ ಧಾರಣೆಯ ಮುಹೂರ್ತ
ತುರ್ತುಪರಿಸ್ಥಿತಿ – ಅವಸರ
ತೇಲಿಕಂತ – ತೇಲುತ್ತಾ
ತಂಕ – ತನಕ
ತಾಂಬ – ತೆಗೆದುಕೊಂಡು ಬಾ
ತೊಂಡಲುಗಳು – ಮದುವಣಗಿತ್ತಿಯ ತಲೆಗೆ ಹಾಕುವ ದಂಡೆಯ ಎರಡೂ ಪಕ್ಕದಲ್ಲಿ ತೂಗಿಬಿಡುವ ಅಲಂಕಾರಿಕ ಕುಚ್ಚುಗಳು
ದಿನಾಲಿ – ಪ್ರತಿ ದಿನ
ದಿಮ್ಮನಿಶ್ಯಾಳು – ಗರ್ಭಿಣಿ
ದುಪ್ಪಿ – ಒಂದು ಜಾತಿ ಪ್ರಾಣಿ
ದೊಡ್ಡ ಬ್ಯಾನಿ – ಹೆರಿಗೆಯ ಮುನ್ನ ಆಗುವ ವಿಶೇಷ ನೋವು
ದೈನಾಸ ಪಡು – ದೈನುಅ ತೋರು
ದೌಡು – ಅವಸರ
ದಂಡ ಪತ್ರಿ – ಒಂದು ಜಾತಿಯ ಪವಿತ್ರ ಪೂಜ ಯೋಗ್ಯ ವನಸ್ಪತಿ ಗಿಡದ ಎಲೆ
ನನ್ನ ತಾವ – ನನ್ನ ಹತ್ತಿರ
ನಸುಗ್ಹರಿ – ಬೆಳಗಾನು
ನಸುಗ್ಹರಿತು – ಬೆಳಗಾಯಿತು
ನಾಮಕರಣ ನೋಡು – ಜನ್ಮ ನಕ್ಷತ್ರ ನೋಡು
ನಿಲ್ಲಬೇಕಾದ್ರೆ – ನಿಂತಾಗ
ನಿಂತಬಟ್ಟಲ್ಲೆ – ನಿಂತಲ್ಲೆ, ನಿಂತ ಸ್ಥಳದಲ್ಲೆ
ನೀಚತಾಳಲ್ಲ – ನೀಸುತ್ತಾಳಲ್ಲ, ಅನುಭವಿಸುತ್ತಾಳಲ್ಲ
ನೀಲಾವತ್ತಿಗಿ – ನಡೆಯುವ ಘಟನೆಗಳನ್ನು ಕಣ್ಗಾಣಿಸುವ ಮಾಂತ್ರಿಕ ಹೊತ್ತಿಗೆ
ನೀಲವಾಡಿ ಬಾಗಿಲು – ಒಂದು ವಿಶಿಷ್ಟ ಆಕಾರದ ಮುಂಬಾಗಿಲು
ನುಚ್ಚಿಗೆ ಹೊಡದು – ನುಚ್ಚಿನಳತೆಗೆ ಕಾಳುಕಡಿ ಬೀಸು
ನೆಡನತ್ತಿ – ನಡುನೆತ್ತಿ
ನೆಪ್ಪ – ನೆನಪು
ನೆಳ್ಳು – ನೆರಳು
ನೋಡ್ಲಿಕ್ಕೆ – ನೋಡಿ
ಪಕ್ಕಾಮಾಡಿಕೊ – ಅಧಿಕೃತವಾಗಿ ಮನವರಿಕೆ ಮಾಡಿಕೊ
ಪಗಡೊ ಬಜಾರ – ನಗರದ ಮುಖ್ಯ ಬಜಾರು, ರಾಜಬೀದಿ
ಪಡಿಪಾಟ್ಲು – ತೊಂದರೆ, ಕಷ್ಟ
ಪತಿಭಾಗ – ಪತಿಯ ಎಡಭಾಗ
ಪತ್ತೇವು – ಹುಡುಕಿ ಕಂಡು ಹಿಡಿ
ಪರ್ವಿಲ್ಲ – ಪರವಾಯಿಲ್ಲ
ಪಾಟಣಿಗಿ – ಮೆಟ್ಟಿಲು
ಪೇರಾಟ – ಕುದುರೆಯ ಆಡಿಸುವ ಕ್ರೀಡೆ
ಪಂಜಿ – ಸೆಳೆ – ಮೈಲಿಗಿ ಪಂಚೆ ತೊಳೆ
ಪಿಂಡಾಂಡ – ಹುಟ್ಟುವ, ಹುಟ್ಟಿದ ಶಿಶು, ಜೀವಿ
ಪ್ರೀತಿಯಿಂದ ವೀಳ್ಯಾಕೊಡು – ಮನ ಒಪ್ಪಿ ಆಹ್ವಾನಿಸು
ಬಗಸಿ – ಬೊಗಸೆ
ಬಜಂತ್ರಿ – ವಾದ್ಯದ ಓಲಗ
ಬಟ್ಟು ಮಾಡು – ಬೆರಳಿನಿಂದ ಎತ್ತಿ ತೋರಿಸು
ಬರಾನು – ಬರೋಣ
ಬರಾಸು – ಭರವಸೆ
ಬಾರ್ಲು – ಮುಖ ಅಡಿಯಾಗಿ
ಬೋರ್ಲು – ಬೋರಲು
ಬರ್ಬೇಕಾರೆ – ಬರಬೇಕಾದರೆ
ಬರುತ್ಲ – ಬರುತ್ತಲೆ
ಬಳಕ, ಬಾಳಕ – ಧಾನ್ಯವನ್ನು ಸಂಗ್ರಹಸಿಡ್ವ ಪುಟ್ಟ ಕರ್ಚಿ
ಬಹಿರೂಪದಲ್ಲಿ – ಬಹಿರಂಗವಾಗಿ
ಬಾಣಿ – ಬೇಟೆಯ ಆಯುಧ
ಬಾಣಗಿತ್ತಿ – ಅಡಿಗೆ ಮಾಡುವಾಕೆ
ಬಾರ್ಲ ಬೀಳು – ಸತ್ತು ಹೋಗು
ಬಿಗದ್ಲು – ಬಿಗಿಯಾಗಿ ಕಟ್ಟಿಕೊಂಡಳು
ಬಿಟ್ನ – ಬಿಟ್ಟೆನು
ಬಿಡಿಸ್ಯಾನೊ – ಬಿಡಿಸಿದನು
ಬುಳ್ಡಿ – ಬುರುಡೆ
ಬೆಳಗಾಕ – ಬೆಳಲಿಕ್ಕೆ
ಬೇಡ್ಕಿಜನ – ಬೇಟೆಯಾಡುವ ಬೇಡರು
ಬೇಸ್,ಬೇಸಿ – ಭೇಷ, ಚನ್ನಾಗಿ, ಚಂದಾಗಿ
ಬೈರಾಟ – ಕುದುರೆ ಸವಾರನ ಕಸರತ್ತಿನ ಆಟ
ಬೋರಾಡಿಕೊಂತ – ಆರ್ಭಟಿಸುತ್ತಾ
ಬಂದಾನ – ಸಂಕಷ್ಟ
ಬಂದೂರವಾಗು – ಭದ್ರವಾಗಿ
ಭಾಳ – ಬಹಳ
ಬ್ಯಾನಸ್ತರು – ರೋಗಿಗಳು
ಬ್ಯಾನಿ ತಗುಲ್ಯಾವೆ – ಹೆರಿಗೆಯ ಮುನ್ನಿನ ವೇದನೆಯಾಗುವುದು
ಬಂಧೇ – ಬಂಧುವೇ?
ಭರಾಸು – ಭರವಸೆ
ಭಲ್ಲೇವು – ಭಲ್ಲೆ
ಭಾಕರಿ – ರೊಟ್ಟಿ
ಭೈರವು – ಕುದುರೆಯ ಪೇರಾಟ
ಭೈರು ವಾದ್ಯ – ಭೇರಿ
ಮಕ ಇಳೇ ಬಿಟ್ಲು – ಖಿನ್ನಳಾದಳು, ನಿರಾಶಳಾದಳು
ಮಗನಿಗೆ ತಗದ – ಮಗನಿಗೆ ಗೊತ್ತುಮಾಡಿದ
ಮಗಳೈದಾಳ – ಮಗಳಿದ್ದಾಳೆ
ಮಜಲ್ ಮಾಡಿಕೊಂತ – ಮದಾಲಸಿ ಮಾಡುತ್ತಾ
ಮದ್ವಿರಾಜ – ಮದುವೆಯಾದ ಗಂಡ
ಮನೆಗಾರ – ಮನೆಯಲ್ಲಾದರೂ
ಮರಸೋಟ – ರಾಕ್ಷಸರ ಪ್ರಾಣವನ್ನು ಅವಿ ತಿಟ್ಟಿರುವ ಮಣ್ಣಿನ ಮಾಂತ್ರಿಕ ಗೊಂಬಿ
ಮರಿಬೀಳು – ಮೊರೆಹೋಗು, ಆಶ್ರಯಬೇಡು
ಮಲ್ಲನೂರು – ಬಲ್ಲಾಳುಗಳು, ಶಕ್ತಿಶಾಲಿಗಳು
ಮಹಾಮಡದಿ – ಪಟ್ಟದ ರಾಣಿ ಹಿರಿಯ ಹೆಂಡತಿ
ಮಹಂತ – ವಿಪರೀತ, ಬಹಳ, ವಿಶೇಷ, ಅತೀ
ಮಳಿಬೈಲಾತು – ಮೋಡ ಸರಿದು ಮಳೆನಿಂತಿತು
ಮಾಡೇರ – ಮಾಡಿದ್ದಾರೆ
ಮಾಡ್ನ್ಯಾಗ – ಗೋಡೆಯ ಗೂಡಿನಲ್ಲಿ
ಮಾತು ಕೇಳಬೇಕು – ಹೇಳಿದಂತೆ ನಡೆದು ಕೊಳ್ಳಬೇಕು
ಮುಜರೆ – ಸಲಾಮು
ಮುಡದಾರ – ಶವ
ಮೂರ್ತ – ಮುಹೂರ್ತ
ಮೂರೇಟು – ಮೂರು ಸಲ
ಮೈಮಾ – ಮಹಿಮೆ
ಮಂದಿಲ – ರುಮಾಲು
ಮುಂಡಾಸ – ತಲೆಗೆ ಸುತ್ತುವ ರುಮಾಲು
ಮ್ಯಾಳ – ವಾದ್ಯ ವಾದಕರ ಸಮೂಹ
ಯಕ್ಕಿಎಲಿ – ಜರ್ದಾ ತಂಬಾಕು ಸೇದಲು ಉಪಯೀಗಿಸುವ ಒಂದು ಗಿಡದ ಎಲೆ
ಯತ್ಲಾಗ – ಯಾವ ಕಡೆಗೆ
ಯತ್ಲಾಗರ – ಯಾವ ಕಡಿಗಾದರೂ
ಯದಕ – ಏತಕ್ಕಾಗಿ, ಏಕೆ
ಯಮ್ಮ – ಅಮ್ಮಾ, ಮಹಿಳೆ, ಸ್ತ್ರೀ ಎಂಬುದರ ಗೌರವ ವಾಚಕ
ಯಾಕಾಗ್ವಲ್ದಾಕ – ಹಾಗೆಯೇ ಆಗಲಿ
ಯೋಗ್ಗಳು – ಯೋಗಿಗಳು
ಯಂತ್ರ – ಮಂತ್ರ ಮಾಟಗಳಿಂದ ಕೊರಳಲ್ಲಿ ಅಥವಾ ರಟ್ಟೆಗೆ ಕಟ್ಟಿಸಿಕೊಳ್ಳುವ ಅಂತ್ರ
ಯಂಗ, ಯಾಂಗ – ಹೇಗೆ
ರಗಳಿ – ಜಗಳ
ರಾಜತ್ವ – ರಾಜ್ಯಭಾರ
ರಾಜ ಮಂಚ – ಸಿಂಹಾಸನ
ರೆಪ್ಪಗುಟ್ಟಿಗೊಂತ – ನಾಗಾಲೋತದಿಂದ ಓಡುತ್ತಾ
ರೋಜಗಾರ್ – ದಿನಗೂಲಿ
ರುಂಬಾಳ – ರುಮಾಲ
ಲಗೂನ ಮಾಡಿ – ಬೇಗ
ಲಿಖಿತ – ಹಣಿಬರೆಹ
ಲೋಪ್ – ನಾಶ
ಲಂಬಾಟ – ಜಂಜಾಟ
ವಕ್ಕೊಂಬಾ – ತೊಳೆದುಕೊಂಡು ಬಾ
ವತ್ತಿಗೆ – ಪಂಚಾಂಗ
ವತ್ತು – ಹೊತ್ತು, ಸಮಯ
ವರ್ಷಂಬೋದ್ರಾಗ – ವರ್ಷವಾಗುವುದರಲ್ಲಿ
ವಸ್ತ್ಯಾಗ – ವಸ್ತಿಮಾಡಿರುವಾಗ, ಉಳಿದುಕೊಂಡಿರುವಲ್ಲಿ ಬಿಡಾರ ಹೂಡಿರುವಲ್ಲಿ
ವಸ್ತಿಆದ್ರು – ಬಿಡಾರ ಮಾಡಿದರು
ವೀಳ್ಯಾಕೊದು – ಅಧಿಕೃತವಾಗಿ ಆಹ್ವಾನಿಸು
ವೃಕ್ಷಾಳಿ ಮರ – ಒಂದು ಜಾತಿಯ ಮರ
ವೋಸರಲಿ – ವಂಶ ಸುಟ್ಟು ನಾಶವಾಗಲಿ ವ್ಯಾಳ್ಯಾ – ವೇಳೆ
ಶ್ರಮ – ಶವ
ಸಣ್ಣಮಕ ಮಾಡು – ಖಿನ್ನವಾಗು
ಸಣ್ಣಾಗಿ – ಅರದು – ನುಣ್ಣಗಾಗುವಂತೆ ತೆಯ್ದು
ಸನೇಕ – ಹತ್ತಿರಕ್ಕೆ
ಸಮೋಕ್ಷ – ಸಮಕ್ಷಮ
ಸರೋವರ – ಸರುವು, ಕೊಳ್ಳಮ್ ಕೊನ್ನಾರ, ಎರಡು ಗುಡ್ಡಗಳ ಮಧ್ಯೆಯ ತಗ್ಗು ಪ್ರದೇಶ, ಗುಡ್ಡದ ವಬ್ಬಿ
ಸರುವು – ಸರ್ತಿ, ಸಲ
ಸರ್ವತಿನ್ಯಾಗ – ನಡು ರಾತ್ರಿಯಲ್ಲಿ
ಸವಾಲ್ ಕೀಲು – ಕಿಬ್ಬದಿಯ ಕೀಲು
ಸಾಕ್ಷಿ ವೀಳ್ಯ – ಕನ್ಯಾ ನಿಶ್ಚಯದ ಕಾಲದಲ್ಲಿ ದೈವಕ್ಕೆ ವಿತರಿಸುವ ವೀಳ್ಯ ಸಾಧಕ – ಗರಡಿಯ ಸಾಮು, ಕಸರತ್ತಿನ ಸಾಧನೆ
ಸಾವಾಸ – ಸಹವಾಸ, ಒಡನಾಟ
ಸಾಸ್ವಿಕಟ್ಟಿ – ಲಗ್ನ ಮಂಟಪದಲ್ಲಿ ವಧೂವರರನ್ನು ಕುಳ್ಳಿರಿಸುವ ಎತ್ತರದ ಪೀಠದ ಕಟ್ಟೆ
ಸಿದ್ದೇರ ದಂಡು – ವಲಸೆ ಬಂದಿರುವ ಆಫ್ರಿಕಾದ ಕಟ್ಟಾಳುಗಳಾದ ಸಿದ್ಧಿ ಜನಾಂಗದ ಪಡೆ
ಸುದ್ಧ – ಶುದ್ಧ, ಪವಿತ್ರ, ನಿರ್ಮಲ
ಸೈಲು – ಸಡಿಲ
ಸೊನ್ನಿ ಕೊಡು – ಬಡಿ, ಹೊಡೆ
ಸೋಸಿ ನೋಡು – ಪರಾಂಬರಿಸಿ ನೋಡು
ಸೌಡು – ಬಿದುವು
ಸಂಗಾಟ – ಸಂಗಡ
ಸಂಪೂರು-?
ಸಂಸಾರ ಲಂಬಾತ – ಗೃಹಸ್ಥ ಜೀವನದ ಹೊರೆ
ಸ್ವಲ್ಪರ – ಸ್ವಲ್ಪವಾದರೂ
ಹತಾರು – ಶಸ್ತ್ರಾಸ್ತ್ರ
ಹರದಾರಿ , ಹರ್ದಾರಿ – ಮೂರು ಮೈಲು
ಹವಣಿಕಿ ಮಾತು – ಅಜ್ಜು ಹಾಕು, ಹೊಂಚು ಹಾಕು
ಹಸ್ತುತ್ತು – ಹಸಿದಿತ್ತು
ಹಳ್ಳಬಿಲ್ಲು – ಗುರಿಯಿಟ್ಟು ಕಲ್ಲಿಹರಳನ್ನು ಪ್ರಯೋಗಿಸುವ ಸಾಧನ, ಕ್ಯಾಟರ್ ಪಿಲ್ಲರ್?
ಹಾಕಬೇಕಾರ – ಹಾಕುತ್ತಲಿರುವಾಗ
ಹಿರ್ಯಾ – ಹಿರಿಯ, ಯಜಮಾನ
ಹುಡುಗ್ಗ – ಹುಡುಗನಿಗೆ
ಹುಡುಕ್ಕೊಂತಾ ಹುಡುಕುತ್ತಾ ಹುರಿಕೊಯ್ಯ – ಆಗ ಹುಟ್ಟಿದ ಕೂಸಿನ ಹೊಕ್ಕುಳ ಬಳ್ಳಿಯನ್ನು ಕೊಯ್ದು ತೆಗೆವುದು
ಹೊಕ್ಕೀ – ಹೋಗುತ್ತೀ
ಹೋಗ್ಬೇಕಾರ – ಹೋಗುತ್ತಿರುವಾಗ, ಹೋಗಬೇಕಿದ್ದರೆ
ಹೊಟ್ಟುರಿ – ಮತ್ಸರದ ಸಂಕಟ
ಹೊನ್ನಿನ ಕಂದ – ಬಂಗಾರದ ದೊಡ್ಡ ಗಟ್ಟಿಗಳು?
ಹೊಯ್ಕೊಳ್ಳು – ಗಟ್ಟಿಯಾಗಿ ರೋಧಿಸು ಹೊರಾಕ – ಹೊರಗಡಿಗೆ
ಹೆಂಗ – ಹೇಗೆ, ಹಾಗೆ, ಹಾಗೆಯೇ
ಹೊಂಟ – ಹೊರಟ
ಹೊಂಟಿತು – ಹೊರಟಿತು
Leave A Comment