[1]ಕೃತ[ಯು]ಗ ದ್ವಾಪರ ಕಲಿಯುಗಕೆ ಶತಪತ್ರ[ಮಿತ್ರ] ಸುತನುಪಮಿಸಿದನು ಸಮರಸಾಹಸಕೆ
ಸತಿ ಪತಿ ತನುಜನನುಜರ . . . . .ಜೋಕೆ
ಮತನದಿ ಬೂದಿಹಾಳ ಸಿರುಮನ ಮಗ(ಮ)ಲ್ಲ
ಕಾ[2]ದಿ[3]ರಿದಿ[ದಿ]ರಾದ ಧುರಕೆ ಶಿವ               ||೧||

ನೆಲದಲ್ಲಿ ಬಲ . . . . .ತ ಕೈದುವ ಜಡಿದು
ಘಲಿರೆಂಬ ಗೆಜ್ಜೆಯ ಹರಿಗೆಯ ಜಾಡಿಸಿ ಪಿಡಿದು
ಬಲು ಬಿರುದಿನ ಬೂ. . . .ಸರ. . . . .ಲಿ ನಡದು
ಎಲೆಲೊ ತೊಲಗು ತೊಲಗು ತೊಲಗೆನುತಲಿ
ಸಿರುಮನ ಕುಮಾರ ಮಲ್ಲಣ್ಣ ಧು. . . . . .ವ
ಭರವ ಕಾಣುತಲಿ ಪ್ರಧಾನ ಮಲ್ಲರಸ ||೨||

ಬೆರೆಸಿದನತಿ ಹಿತವನು ತಳವಾರ ಲಿಂಗರಸ
ಸಿರುಮನ ಮನ ಮಿ..ಮೊನೆ…ದೆ…ಹರುಷ
ಧೀರುರೆ ಧೀರುರೆ ಮಝ ಭಾಪುರೆಯೆನುತಲಿ
ನರಸಿಂಹಗೆ ನಿಂದ ಸರಸ ಶಿವಲೀಲೆ             ||೩||

ಕುಂಜ[ರ ಕೊಲ್ಲು]ವ ಕೇಸರಿಯೆಂಬಂತೆ
ಮಂಜಿನ ಮಾಡುವನು ಕಲಕುವವನ ಬಗೆಯಂತೆ
ಕಂಜಸಖನ ಫಣಿಯಟ್ಟಿ ಹೊಯ್ದು . . . . . .ತೆ
ರಂಜಿಸಿ ಕುಮಾರಮಲ್ಲ ಹೊಕ್ಕಿರಿದನು ನರಸಿಂಹನ ದಳವಂತೆ                ||೪||

ಝಲ್ಲಿಯ ಸಬಳದ ತೆಲುಗರು ಹರಿಗೆ ಬಿಲ್ಲವರು
ಎ[ಲ್ಲ]ರೊಂದಾಗಿ ಮೋಹರಿಸಿ ರಾಯ ರಾಹುತರು
ಗೊಲ್ಲ ಮಲ್ಲ ಕಲ್ಲರಸ ಲಿಂಗರಸನೆಂಬವರು
ನಿಲ್ಲದೆ ಹೊಯ್ದೆಲ್ಲರ ಬೇಗ ಸಮರದಿ ಕಲ್ಲ . . . . ಕ ನಿಂದವರು                  ||೫||

ಅಡ್ಡ ಹುಯ್ದು ಮೊನೆಯಲಗಿಲಿರಿದು ಲಾಗಿಸುತ
ಒಡ್ಡಿ ಕಾದು ಕಲ್ಲರಸ ಕೈದುವ. . . . . . .
ದೊಡ್ಡ ದೊಡ್ಡ ರಾಹುತರ ಕಡಿದು ಮರ್ದಿಸುತ
ಜಡ್ಡು ಕೊಮಾರರ ಗಂಡ ಮಲ್ಲ ನೋಡೆಂದು ಕೂಗಿ . . .ಸುತಾ                ||೬||

ಮತ್ತಗಜ ಕುಂಭಸ್ಥಳ ಶುಂಡಿಲಗಳನು
ಕತ್ತರಿಸಿ ಬೀಳ ಹೊಯ್ದನು
ನೆಟ್ಟೆಲುಗಳು . . . . . .ನಾಲ್ದೆಸೆಯಲೋಡುವ ಮಂದಿಗಳನು
ತತ್ತನೆದರಿಯುತ ಮಲ್ಲಭೂಪ ನೋಡೆಂದು
ಕಲ್ಲರಸನು ಲಿಂಗರಸ . . . . ದ ಹೆಜ್ಜೆಯ ಕೀಳದೆ ಮಲ್ಲನೆಡಬಲದಿ ||೭||

ಅಟಿ ಸಬಳಿಗರೊತ್ತಿರಿಯಲು ತೆಲುಗ . . . .ಭರದಿ
ಕಟ್ಟಿದ ಕಠಾರವ . . . . .ನಡೆದ ಸಡಗರದಿ
ದಿಟ್ಟ ಕಲ್ಲರಸ ಲಿಂಗರಸ ಮುಂದಲೆಗಳ
ಪಿಡಿವಿಡಿದಿರಿದು ಸಂಗರದಿ ಶಿವ                    ||೮||

ಸಂಧಿ[ಸಿ ಕಲ್ಲ]ರಸ ಲಿಂಗರಸನೆಂಬವರು
ಬಂದು ಕೊಮಾರ ಮಲ್ಲನೆಡಬಲದಲಿ ಬೀಳಲವರು
ಕಣ್ಣೊಳಲಾಗಿ ನೋಡುತ ನರಸಿಂಹನೆಕ್ಕಟಿಗರು
ಹಿಂದು ಮುಂದೆಣಿಸದೆ ಮನ್ನೆ ಮಾರ್ಬಲವೆಲ್ಲ
ಒಂದೆ ಮೋಹರದೊಳೇರಿದರು ಶಿವ              ||೯||

ಹೊಸ ಭ . . . . .ಗೆನುಂ ಮಯ್ಯೊಳು ಪಕವು ಮೂಡಿ
ಮಿಸುಕುವ ಅಗ್ನಿಗೆ ಸಹಬಲವಾಗಿನ್ನು ಕೂಡಿ
ಹಸಿದ ಹುಲ್ಲೆಯಂತೆ ಹೊಂಚಿ ನಡವ . . . . . .ವದೊಂದು ಮೋಡಿ
ಮಸೆದಲಗವ ಹರಿಗೆಯ ಪಿಡಿದಾಡುವ ಕೊಮಾರಮಲ್ಲನ ನೋಡಿ ಶಿವ      ||೧೦||

ಏಳು ಸ. . . . .ನಿ ಜಗವ ನುಂಗುವಂತೆ
ಕಾಳೀಶ ಉರಿಹೊಗೆ ನೆಗೆದು ಗಗನಕೆತ್ತುವಂತೆ
ದಾಳಿಟ್ಟು ಬಿಟ್ಟು ಗಾಳಿ ಬರಸಿಡಿಲೆರಗಿ…ವ ನರಸಿಂಹನವರೆರಗಿದಲ್ಲಿ
ಶಿವಸಭೆ ಕಣ್ಮುಚ್ಚುವಂತೆ ಶಿವ                      ||೧೧||

ಹೊಕ್ಕು ತರಿದು ಜವನಿಹ ಬಾಣಸಿಗನಂದಾದದಲ್ಲಿ
ಲೆಕ್ಕ. . . .ದೆ ಕಡಿದೊಡೆನಲಸಿದ ಕಂಡವನು
ಹಿಕ್ಕಿದ ಹೆಕ್ಕೊಡಲುಗಳ ಬಗಿದು ಕರುಳುವನು
ಇಕ್ಕಿದನೆಂಟುದೆಸೆಯ ತಕೆ ಬಲು ವಿಕ್ರಮ ಕುಮಾರ ಮಲ್ಲಗನು                ||೧೨||

ಹರಿದು ಹಬ್ಬುವ ಮುಗಿಲೊಳಗಣ ಬಳ್ಳಿ ಮಿಂಚಿನಂತೆ
ಸರಸದಿ . . . . . .ಸಿರಿವನಿತೆ ಮೋಹಿಸಲಿ
ಉರುಳಗಡಿದ ಕರಿ ತುರಗ ಕಾಲಾಳುವೆಂದೆನಲಿ
ಧರೆಯೊಳು ಬೂದಿಹಾಳ ಸಿರುಮನ . . . . .ಮಲ್ಲ
ನರಸಿಂಹರಾಯನಿದಿರಿನಲಿ ಶಿವಲೀಲೆ           ||೧೩||

ಕಡೆಗಣ್ಣು ಕೆಂಪೇರಿ ಮನದಲ್ಲಿ ಮುಂಕೊಂಡು
ನಿಡುಹುಬ್ಬು ಕುಡಿಮೀಸೆ ಕುಣಿದವು ಕಾಹುರಗೊಂಡು
ನಡೆದು ಹೊಯ್ದಿ ರಣಭೂಮಿಯೊಳಗೆ ಪುಟಿಚೆಂಡು
ಮ. . . . .ನಿಯದೆ ಮಲ್ಲ ವೈರಿಯ ತಾಗಿದ
ದೃಢಗಲಿ ವಜ್ರದ ಗುಂಡೊ ಶಿವ                    ||೧೪||

ದಿಂಡುಹೊಯ್ದು ಮುಂಡ . . . . .ಜ್ಜೆಯ ತೊಲಗು
ಮಂಡೆ ಮಯ್ಯೊಳು ಸು ತಾಳಿಸಿದನು ಕೈಯಲಾಗ
ಕಂಡವರೆದೆ ಬಿಲ್ಲಿ . . . . . .ಡುವ ವಿಲಾಗ
ತಾಂಡಕ್ಕೆ ಹೆದರದೆ ಹೆಬ್ಬಲದೊಳು ಮಲ್ಲ
ಗಂಡೆಬ್ಬಿಸಿದನುಗಲಾಗ                              ||೧೫||

ಬಿಲ್ಲಮ . . . . .ಯಲು . . . . .ಯವರು ಖೋಯೆನುತ
ಬಲ್ಲೆದಲಿರಿಯಿರಿ ಕಡಿ ಬರುವ ರಾಹುತರನೆಂದೆನುತ
ನಿಲ್ಲದೆ ಗದೆಯಲಿರಿಸುಡಿ . . . .ಲ್ಲ ಲೆಂದೆನುತ
ಎಲ್ಲರು ಕಡಿ ಕಡಿ ಬಿಡಬೇಡವೆನುತಲಿ
ಗೊಲ್ಲ ಮಲ್ಲನನೆಂದೆನುತ                           ||೧೬||

ಕದಲಗೆ . . . . .ಯ ಹೂಡಿದ ಹರಿಗೆಯ ಮರೆಯ
ಹದುಳದೆ ಬಂದೊಬ್ಬಸ ಬಳಿಗ ಮಲ್ಲನನಿರಿಯಾ
ಎದೆಯಲಿ ತಕಿ ಬೆನ್ನಿಲಿ . . . . .ಂದುದವನರಿಯಾ
ಇದಿರಾಂತ ಕರಿಶಿರಕೆರಗುವ ಸಿಂಹ
ಹೆದರದೆ ನಿಂದ ಹೆಮ್ಮರೆಯ ಶಿವ                  ||೧೭||

ಬಿಟ್ಟ ಕಣ್ಣಿನ ಬಿಂಕ ಬಿಗುಹುಗುಂದದ. . . . .
ನೆಟ್ಟಲೆ ಹಳಚದೆ ನೋಡುವ ನೋಟ ಮೋಸವೆಂದು
ಅಟ್ಟಿ ತುಡುಕಿ ಬಂದು ಹಿಡಿದು ಹೊಯ್ಯುವನಿವನೆಂದು . . . ದೆ
ನರಸಿಂಹನವರೆಲ್ಲ                        ||೧೮||

ಕಟ್ಟ ಕಡೆಗೆ ಬಂದು ನಿಂದು
ಕಾದಿದ ಗಾಯದ . . . . ಲಿ ಸೊರಗದೆ ಕೂಗಿ
ಆದಿ ರುದ್ರನವತಾರವು ನೋಡಲಿದಿರಾಗಿ
ಮೇದಿನಿಗೊರಗದೆ ಕಾಯವಲತು ಜೀವವಾಗಿ . . . .
ಮುದೇವರ ಪಾದಗಳನು ನೆನೆಯುತ
ಆಗಮವಿಡಿದೆದ್ದ ತ್ಯಾಗಿ ಶಿವ                                    ||೧೯||

ಅದೆ ಬಂದ ಬಂದನೆನುತ ತಮತಮಗೆಲ್ಲ
ಕುದುರೆ ರಾಹುತ . . . . . .ಜೋಡು ಹರಿಗೆ ಸಬಳ ಕೈಯ್ಯವಿಲ್ಲ
ಉದುರಿಸಿ ಬಾಡುತ ಹಮ್ಮೈಸುತ ಬೀಳುತೆಲ್ಲ
ಅದ ಕಂಡು ನಗೆಮುಖ ಕಳೆಗುಂದದೆ ರಣದೊಳಿರ್ದನು
ಗೊಲ್ಲಮಲ್ಲ ಶಿವ               ||೨೦||

ಉರುವಿನ ಗಾಯ ತಾಗಲು ಮನದಲಿ ತಾ ಕಂಡು
ಉರಿ . . . . . . .ದು ಆ ಕ್ಷಣ ತನ್ನ ವಂಶದ ಹಿಂಡು
ಭರದಿಂದ ಬಿದಿರ್ದ ಮಂತ್ರಿಗಳನೆ ಎತ್ತಿಕೊಂಡು
ಎರಗಿಬಿದ್ದನು . . ಮಲ್ಲನು ನೆರೆಗಲಿ ವಜ್ರದ ಗುಂಡು                               ||೨೧||[4]

. . . . . . . . . . . . . . . . . . . . . . . . . . .
. . . . . . . . . . . . . . . . . . . . . . . . . . .
. . . . . . . . . . . . . . . [5][ಶೂ]ದ್ರಕ ವೀರಗೆ
ಮಿಗಿಲಾಗಬಹುದೆಂದು ನುಡಿದ                    ||೨೨||

ಕಡಿ ಎಂದ ನರಸಿಂಗರಾಯನ ದಂಡನು
ಕಡುಗಲಿ ಮನ್ಯೆ ಮನ್ಯೆಯರು
ಬಿಡ . . . . . .ರಾಸಿಯನೊಟ್ಟಿ ಮಲ್ಲೇಂದ್ರ
ನುಡಿದು ಪಚಾರಿಸಿ ಕೂಗಿದನು                     ||೨೩||

ಬೊಬ್ಬಿರಿವುತ ಕೂಗಿ ಹೇಳಿದ ಮಲ್ಲಣ್ಣ
ನೊಬ್ಬನಿವನೆ ಜಗದಲ್ಲಿ
ಕೊಬ್ಬಿದ ನರಸಿಂಹನ ಬರಹೇಳೆಂದು
ಸರ್ಬದಳದೊಳು ಮೂದಲಿಸೆ                      ||೨೪||

ಕ[ವಿ]ದರು ಆನೆ ಕುದುರೆ ಕಾಲಾಳೆಲ್ಲ
ಇವ ಸಿಕ್ಕಿದ ಹಿಡಿ ಎನುತ
ಕಿವಿಯಲಿ ಕೇಳಿ ಈ ಮಾತನು ಮಲ್ಲಣ್ಣ
ಅವರ ನೋಡಿದ ಕೋಪದಲಿ                       ||೨೫||

ಕಡೆಗಣ್ಣ ಕೆಂಪೇರಿ ಮನದಲ್ಲಿ ರೋಷದಿ
ನಿಡುಹುಬ್ಬು ಕುಡಿಮೀಸೆ ಕುಣಿಯೆ
ಕಡಿದನು ನರಸಿಂಗರಾಯನ ಪರಿವಾರವ
ಪೊಡವಿಪ ಮಲ್ಲನ್ಯಪಾಲ                            ||೨೬||

ಕಡಿದನು ತಲೆಗಳ ಇಡಿದನು ಮತ್ತೆ
ಓಡಿಬಂದನು ಮಂತ್ರಿಗಳ
ನೋಡಿದ ಸುತ್ತ ಬಳಸಿ ಸಂಗ್ರಾಮಕೆ
ಪಾಡು . . . . . . ತಿರುಗಿದನು                       ||೨೭||

ಕಾಣುತ ನರಸಿಂಹರಾಯನ ದಂಡೆಲ್ಲ
ಕೇಣವಿಲ್ಲದೆ ನಡೆತಂದು
ಹೂಣಲಿಂದು ಸಿಕ್ಕಿದನಿರಿನಿರಿ ಎಂದು
ಮಾಣದೆ ಆರ್ಭಟಿಸುತಲಿ                            ||೨೮||

ಏಳು ಸಮುದ್ರದ ಜಗ ನುಂಗವಂದದಿ
ಕಾಳಗತ್ತಲೆ ಕವಿದಂತೆ
ಸಾಳುವ ನರಸಿಂಹರವರೇರಿದಡೆ ಕೆಂ
ಧೂಳ ಮುಸುಕಿತಂಬರದಿ                           ||೨೯||

ಬಿಲ್ಲವರ ಕರ [ಸೀಳೊ] ಹರಿಗೆಯವರ ಹೊಯ್
ಬಲ್ಲೆದಲಿ ಕಡಿ ಎನುತ
ನಿಲ್ಲದೆ ಕಡಿಯಲಿ ತಿವಿ ಸುಡು ಪೆಟಲಲಿ
ಗೊಲ್ಲನ ಮಗನನೆಂದೆನುತ                        ||೩೦||

ಮುತ್ತಿದ ನರಸಿಂಹ[ರಾ]ಯನ ದಂಡನು
ಅರ್ತಿಲಿ ನೋಡಿ ಮಲ್ಲಣ್ಣ
ಮತ್ತೆ ಮಂತ್ರಿಗಳು ಬಿಡದೆ ಸವರಿ
ಒತ್ತಿ ಕಡಿದ ರಣದೊಳಗೆ                             ||೩೧||

ಎಡೆಮಾಡಿ ಮರುಳವಿಂಡುವ ತಣಿಸಿದ
ಪೊಡವಿಪ ಮಲ್ಲನ್ಯಪಾಲ
ಕಡಿವೆಡೆವಿಡದೆ ನೆತ್ತರೊಗಲು ವೆಗ್ಗಳ
ಬಿಡದೆ ಆಹುತಿ ಭೂತಗಳಿಗೆ                        ||೩೨||

ಬರವೇಳೊ ಸಾಳುವ ನರಸಿಂಹರಾಯನ
ಹಿರಿಯರ ಕಾಲದ ಕೊಲೆಯ
ಪರಿಹರಿಸುವೆ ಕಾದಿ ತನ್ನ ಹೊಟ್ಟೆಯ ಸೀಳಿ
ಕರುಳ ಕಾಲಿಗೆ ಕಟ್ಟಿ ಮೆರವೆ                        ||೩೩||

ಎಂದ ಮಾತಿಗೆ ನರಸಿಂಹ ಕೋಪವ ತಾ[ಳೆ] ದೂರ
ದಿಂದಲೀಶ್ವರನಾಯ್ಕ ಭರ
ದಿಂದ ಸಬಳವ ಪಿಡಿದುಕೊಂಡು ಮಲ್ಲನ
ಉರವ ತಿವಿದನಾಕ್ಷಣದಿ                             ||೩೪||

ಇರಿದ ಘಾಯಕೆ ಕರುಳ್ಸುರಿಯೆ ಮಲ್ಲೇಂದ್ರನು
ಕರದ ಬಲ್ಲೆಹವನು ನೆಗಹಿ
ನರಸಿಂಹಗೆ ಹೇಳೆಂದು ಹೊಯ್ದನು
ಧುರದಿ ಇಶ್ವರನಾಯಕನ                           ||೩೫||

ಅತ್ತ ಗಾಯದಿ ಈಶ್ವರಿನಾಯ್ಕ ತಿರುಗಲು
ಇತ್ತ ಘಾಯದಿ ಮಲ್ಲೇಂದ್ರ
ಹಿತ್ತರಿಸುತ ರಕ್ತವು ತೊಟ್ಟಿಡುತ
ಮತ್ತೆ ಬಂದನು ಮಂತ್ರಿ ಎಡೆಗೆ                     ||೩೬||

ತಾಕಿದ ಘಾಯದಿ ಸೊಕ್ಕದೆ ಸೊರಗದೆ
ಕೂಗುತ ಕುಮಾರ ಮಲ್ಲ
ಕೂಗುತ ಕಂಡೆವ ಹೊರಜಾಳಿಗೆ
ಬೇಗದಿ ಮಂತ್ರಿಗಳೆಡೆಗೆ                             ||೩೭||

ಗಾಯ ಸೊಕ್ಕಿಲಿ ಕುಮಾರ ಮಲ್ಲಣ್ಣನು
ಖೋ ಎಂದು ಕೂಗಿ ಬೊಬ್ಬಿರಿದ
ಸಾಳುವ ನರಸಿಂಗರಾಯನ ಬರಹೇಳೊ
ಕಾಳಗಕೆನ್ನೊಡನೆನುತ                              ||೩೮||

ದಂಡಿನ ಮರೆಹೊಕ್ಕು ಬದುಕಿದನಲ್ಲದೆ
ಕಂಡರೆ ನಿಮ್ಮ ನರಸಿಂಹನ
ಗುಂಡಿಗೆ ಸೀಳಿ ರಕ್ತವ ಕುಡಿವೆ ಮರುಳ್ಗಳಿಗೆ
ರುಂಡಮಾಲೆಯ ಹಾಕುವೆನು                      ||೩೯||

ಗಂಡನು ನಿಮ್ಮ ನರಸಿಂಹನ ಪೆತ್ತವನ
ಗುಂಡರಾಜನ ಗಂಡನೆಂದು
ಕೊಂಡಾಡಿಸಿಕೊಂಡವ ನಾನೀನ ಎಂದು ಪ್ರ
ಚಂಡ ಸಿರುಮನ ಕುಮಾರ                         ||೪೦||

ಹೀಗಾಡಿಕೊಳ್ವನೆನುತ ಮಲ್ಲಣ್ಣನು
ಬೇಗದಿ ನಿಮ್ಮ ನರಸಿಂಹಗೆ
ಹೋಗಿ ಹೇಳಿರೊ ನನ್ನೊಳು ಕಾದಲೆನುತಲಿ
ಕೂಗಿದ ಕುಮಾರ ಮಲ್ಲ                             ||೪೧||

ಸಲುವದು ನಿನಗೀ ಬಿರಿದು ಮಾರ್ಬಲವಂತ
ಛಲದಂಕ ಮನ್ನೇರ ಗಂಡ
ಕುಲದೀಪ ಕೊಮಾರ ಮಲ್ಲ ನೀನಹುದೆಂದು
ಬಲವೆಲ್ಲ ಕೊಂಡಾಡಿದರು                           ||೪೨||

ಭೀಮನೊ ಅರ್ಜುನನೊ ಕರ್ಣನೊ ಇವ ರಘು
ರಾಮನೊ ರಾವಳನೊ
ಭೂಮಿಯೊಳಗೆ ಸರಿಗಾಣೆವೆಂದೆನುತಲಿ
ಆ ಮಹಾಬಲವೆಲ್ಲ ಹೊಗಳೆ                        ||೪೩||

ಹೋ ಎಂದು ಸೊಕ್ಕಿಲಿ ಕುಮಾರ ಮಲ್ಲಣ್ಣ
ಕಾಯವ ಮರದನಾಕ್ಷಣದಿ
ಆಯದಿ ಎಚ್ಚತ್ತು ಕಣ್ದೆರೆದನು
ಹಾಯೆನುತೆದ್ದು ನಡೆದನು                          ||೪೪||[1] ೧ + ಶ್ರೀ ಶಾರದಾ ಗುರುಭ್ಯೋನಮಃ| ಶ್ರೀ ವೀರಭದ್ರದೇವರ ಶ್ರೀ ಪಾದವೇ ಗತಿ ಮತಿ| ರಾಗ ಅಹರಿ| ಪದನು (ಹ), “ಹ” ಪ್ರತಿಯ ಮಾರ್ಜಿನ್ನಿನಲ್ಲಿ “ಶಿವಲೀಲೆ” ಎಂದು ಬರೆಯಲಾಗಿದೆ (ಸಂ) “ಹ” ಪ್ರತಿಯಲ್ಲಿ ೫ನೆಯ ಸಂಧಿಯು ಗರಿಯೊಂದರ ಬೆನ್ನಿನ ಕೊನೆಗೆ ಮುಗಿಯುತ್ತಲೇ ಮುಂದುವರೆಯುವ ಹೊಸ ಗರಿಯ ಆರಂಭದಿಂದಲೇ ಇಲ್ಲಿಯ ಇಪ್ಪತ್ತೆರಡುವರೆ ಪದ್ಯಗಳನ್ನು (ಛಂದ?) ಬರೆಯಲಾಗಿದೆ. ಇವು ಕೃತಿಯ ಭಾಗವೋ ಈ ಕಾಳವನ್ನು ಕುರಿತು ಬರೆದ ಅನ್ಯಕೃತ ಪದ್ಯಗಳೋ ಸ್ಪಷ್ಟವಾಗುವುದಿಲ್ಲ (ಸಂ)

[2] ೨-೨ ದು (ಶಿ, ಹ).

[3] ೨-೨ ದು (ಶಿ, ಹ).

[4] ಕಥೆಯ ಏಕಮುಖತೆಗೆ ಅಡ್ಡಿಯಾಗುವುದರಿಂದಪ್ರತಿಯಲ್ಲಿಯ ಪದ್ಯಗಳನ್ನು ಅಡಿಯಲ್ಲಿ ಕೊಟ್ಟಿದ್ದೇವೆ (ಸಂ).] ವೇಳೆಯಲ್ಲಿ ಈಶ್ವರ ಪಾರ್ವತಿಯನು ಕರೆಸಿ
ಯೋಚಿಸಿದನು ತಾನು ಪ್ರಮರ್ಥಗಣಂಗಳನು ವೆರಸಿ
ಭಾಸುರತೇಜ ಪ್ರಕಾಶ ಪುಹೈಕ . . . . .ನೆತ್ತರಸಿ
ದೇಶಕಗ್ಗಳೆಯನಾಗಬೇಕೆಂದು ಗೊಲ್ಲ . . . . .ಸಿ ಹೂವಿನ ಮಳೆಗರಸಿ ||೨೨||

ವೇಳೆಯೊಳಜ ಹರಿ ಇಂದ್ರರುದ್ರನು ಸಹಿತ
ಪಾವಕಾಕ್ಷ ಪಾರ್ವತಿ ಗಂಗೆ . . . . . . . . . . .

[5] . “ಶಿಪ್ರತಿಯಲ್ಲಿ ೬ನೆಯ ಸಂಧಿಗೆ ಸಂಬಂಧಿಸಿದ ಇಲ್ಲಿಯ ವರೆಗಿನ ಪದ್ಯಗಳನ್ನೊಳಗೊಂಡ ಗರಿಗಳು ಇಲ್ಲ. ಅಲ್ಲಿ ಪದ್ಯಕ್ಕೆ ೨೧ ಅಂಕಿ ಕೊಡಲಾಗಿದೆ. ಆಮೇಲೆ ೨೨, ೨೩ ಹೀಗೆ ಮುಂದುವರಿಯುತ್ತದೆ (ಸಂ).