ಕಂಡು ಬಾಗೂರ ಸೆಟ್ಟಿಗಳೆಲ್ಲ ಸಹವಾಗಿ
ಮಂಡಲಪತಿಯೆ ನಾವಿನ್ನು
ಕೊಡು ಕಾಚನ ಕೈಸೆರೆಯ ನಮಗೆಯೆಂದು
ನುಡಿದನೀಶ್ವರಿ ನಾಯಕನು೭೨

[1]        ||೧೫೨||

ಎಂದ ಮಾತನು ಕೇಳಿ ೭೩[2]ನೊಂದು ಚಿಂತಿಸುತಲಿ೭೩[3]
ಬಂಧುಜನರ ಕರೆಸಿದನು
ಇಂದೆನ್ನ ೭೪[4]ಕಂದ ಕಾಚನ ಕೈಸೆರೆಯ ಗೋ೭೪[5]
ವಿಂದನಾಯಕ ಕೊಡೆನೆಂದ            ||೧೫೩||

ಅಪ್ಪಾಜಿ ಕೇಳೆನ್ನ ಗೋವಿಂದ ನೊಸಲೊಳು
ತಪ್ಪದಿದೆ ವಿಧಿಲಿಖಿತವೆಂದ
ಕಪ್ಪವ ಕೊಟ್ಟು ಬದುಕು ನರಸಿಂಹಗೆ
ಒಪ್ಪಿಸೆಂದನು ಕಾಚೇಂದ್ರಪತಿ         ||೧೫೪||

ಆರ ಮಗನ ನಾನಾರಿಗೆ ಕೊಡಲಪ್ಪ
ಧೀರ ಕಾಚಣ್ಣ ಬೂದಿಹಾಳ್ಗೆ[ಇ]ರದೆ ಹೋಗು ನಾವು ನರಸಿಂಹನ ಕಂಡು
ಧಾರುಣಿಯೊಳು ಬದುಕುವೆವು        ||೧೫೫||

ಎಂದ ಮಾತನು ಕೇಳುತ ಕಾಚಣ್ಣನು
ನೊಂದು ಮಮ್ಮಲನೆ ಮರುಗುತಲಿ
ಕುಂದದೆ ನರಸಿಂಹನೊಡನೆ ಯುದ್ಧವ ಮಾಡಿ
ಹಿಂದೆನಾ ಹೋಗುವೆನೆಂದ೭೫[6]         ||೧೫೬||

ಬಂದು ಹೋಗುವನಲ್ಲ ತಂದೆ ಸಿರುಮನಾಣೆ
ಸಂದೇಹ ಬೇಡ ನೋಡೆಂದ
ಮುಂದುಗೆಡಿಸಿ ನರಸಿಂಹನ ದಂಡನು ಪೆನು
ಗೊಂಡೆ ಬಾಗಿಲ ಹೊಗಿಸುವೆನು೭೬[7]   ||೧೫೭||

ಕಾಳಗಕಾಗಿ ನೀ ಬಂದುದಿಲ್ಲವೊ ಕಾಚ
ಸೂಳೆ ೭೭[8]ಬೆನಕಿ೭೭[9]ಗಾಗಿ ಬಂದೆ
ಹೇಳಿದ ಮಾತಿಗೆ ಹೋಗಲಿಲ್ಲವೊ ಎಂದು
ತಾಳಿದ ಮನದಿ ರೋಷವನು          ||೧೫೮||

ನಿನ್ನ ಪಟ್ಟಣದೊಳು ಹೆಣ್ಣೆಂಬರೆಲ್ಲರು
ನನ್ನ ತಾಯಿ ಸಮಾನ
ಬಿನ್ನೈಸಿ ನುಡಿದನು ಕಾಚ ಗೋವಿಂದಗೆ
ಮನ್ನಣೆಯಲಿ *[ಮರು]*ಮಾತ        ||೧೫೯||

ಹಿಂದಣ ಸತ್ಯಪ್ರಮಾಣಕೆ ಗೋವಿಂದ
ತಂದೆ ಸಿರುಮ ಕಳುಹಿದನು
ಕುಂದಿನ ಮಾ[ತ]ನಾಡಿದೆಯೆಂದು ಕಾಚಣ್ಣ
ನೊಂದೆದ್ದ ತನ್ನ ಮನದಲ್ಲಿ              ||೧೬೦||

ಎದ್ದು ಕೈಮುಗಿದು ಕಾಚ ಗೋವಿಂದಗೆ
ಬುದ್ಧಿಯ ಮಾತ ಹೇಳಿದನು
ಇದ್ದ ದಂಡನು ಕಡಿವುತ ಬೂದಿಹಾಳಿಗೆ
ನಿರ್ಧರದಲಿ ಪೋಪೆನೆಂದ              ||೧೬೧||

ಉಕ್ಕುವ ಕಂಬನಿ ಸಹಿತ ಗೋವಿಂದನು
ತರ್ಕೈಸಿ ಉಡುಗೊರೆ ಇತ್ತು
ಮಕ್ಕಳ ಮಾಣಿಕ ಕಂದ ಕಾಚಯ ನೀನು
ಸಿಕ್ಕದೆ ಪೋಗು ಬೂದಿಹಾಳಿಗೆ         ||೧೬೨||

ಎನ್ನೊಡನಿಂದು ಸಾವೊ ಬಂಟರು ಬನ್ನಿ
ಚಿನ್ನಗಾಳೆಯ ಹಿಡಿಸಿದನು
ಮನ್ನೆಯ ಕಾಚನ ಮುನ್ನೂರು ಪರಿವಾ[ರ] ಉನ್ನಿಸಿದರು ತಮತಮಗೆ              ||೧೬೩||

ಉಡುದಾರವ ಕಿತ್ತು ಮುಂಗೈಗೆ ಕಟ್ಟಿದರು
ಕಡುಗಲಿಗಳು ಪಂಥದಲಿ
ಸಿಡಿಲ ಸೆರೆಯ ಬಿಟ್ಟಂದದಿ ಬಂದರು
ಒಡೆಯ ಕಾಚನ ಎಡಬಲದಿ ||೧೬೪||

ಆಳುವೇರಿಯನೇರಿ ಕಾಚಯ್ಯ ಹಿಡಿಸಿದ
ಕಹಳೆಯನಾಗ ಬೇಗದಲಿ
ಸಾಳುವ ನರಸಿಂಹನ ಪಾಳ್ಯ ಜತನವೆಂದು
ಕೋಳುಗೊಂಬೆನು ಇಂದಿನಿರುಳೆ     ||೧೬೫||

ಚಂದ್ರಪುರದ ಬಾಗಿಲ ಸಾರಿಸಿ ಕಾಚ
ಬಂದನು ಆನೆವಾಳದಲಿ
ಹೊಂದಿದ ಬಾಗಿಲ ಹನುಮಗೆ ಶರಣೆಂದು
ಮಂದಿ ಸಹಿತ ಪೊರವೊಂಟ೭೮[10]      ||೧೬೬||

ತಳರು . . .ಯ ಮಾಡಿ ಬಂಟರು ನಡೆದರು
ಇಳಿವುತಿರ್ದುರು ಸೊಬಗಿನಲಿ
ಸೆಳೆದು ಗುಡಾರವ ಹರಿದು ಸೂರೆಯ ಮಾಡಿ
ಕೊಲಲೋ ಎಂದು ಬೊಬ್ಬಿರಿದು೭೯[11]  ||೧೬೭||

ನೆಟ್ಟ ತಳಿಯ ಕಿತ್ತು ಹೊತ್ತು ಸೂರೆಯ ಮಾಡಿ
ಅಷ್ಟಮದವು ಕವಿದಂತೆ
ಕುಟ್ಟಿ ಸಂಹರಮಾಡಿ ಬಂಟರು ನಡೆದರು
ಪಟ್ಟದಾನೆಯು ಕಾಚನ                  ||೧೬೮||

ಬಲ್ಲಿದ ಬಂಟರು ಕಡಿದಾಡುತಿರಲಾಗಿ
ಬಾಳೆ ಕದಳಿ ಬಿದ್ದಂತೆ
ಸಾಳುವ ನರಸಿಂಹನ ದಂಡಿನೊಳಗೆ ಹೊಕ್ಕು
ಬೀಳಲಿರಿದು ಕೆಡಹಿದರು                 ||೧೬೯||

ಆಳಾಳುಗಳ ಮೆಟ್ಟಿ ಹೊಯ್ಯುತ ನಡೆದನು
ಕಾಳೆಯನಾಯಕ ಕರಿಯ
ಘೋಳೆಂದು ನರಸಿಂಹನ ಪಾಳಯದೊಳು
ಕೋಳುಗೊಂಡನು ಗೊಲ್ಲ ಕಾಚ       ||೧೭೦||

ಕಲಕಿತು ಬಲವು ಅವರಿವರೆನ್ನದೆ
ಕೊಲಲೋ ಎಂದು ಬೊಬ್ಬಿರಿದು
ಅಲಗಿನ ಮೊನೆಯಲಿ ಹೊಯ್ಯಲು ಕಿಡಿಸೂಸಿ
ಬಲಗೈಯ್ಯ ಕತ್ತಿ ೮೦[12]ಬಿದ್ದೋಡೆ೮೦[13]    ||೧೭೧||

೮೧[14]ಅದ್ದಲಿಸುತ೮೧[15] ನರಸಿಂಹನವರು ಸ-
ಮುದ್ರದ ತೆರೆಗಳಂದದಲಿ
ಎದ್ದು ಬರಲು ಬೇಗ ಕಾಚನ ಬಂಟರು ಉ-
ಬ್ಬೆದ್ದು ಕಡಿಯೆ ಪರಬಲವ               ||೧೭೨||

ಒಡನೆ ಬೆರಸಿ ಬಹ ಪರಿವಾರ ಗುಜ್ಜಲೋಬ
ತಡೆಯ ಬಂದರೇನೋ ಹೇಳೊ
ಮಿಡಿಯ ಗಾಯವು ತಾಕಿ ಹಡಪದ ತಿಮ್ಮನು
ನಡೆಯಲಾರದೆ ಬರುತಹನೆ            ||೧೭೩||

ಹೇಳಿದ ಮಾತನು ಕೇಳುತ ಕಾಚಯ್ಯ
ಪಾಳೆಯಕಾಗಿ ತಿರುಗಿದನು
ಆಳುವ ಧನಿ ಬಂದು ಹಡಪದ ತಿಮ್ಮನ
ತೋಳುಗೈಯ್ಯಿಕ್ಕಿ ತಂದೊಡನೆ       ||೧೭೪||

ಗೆಜ್ಜೆ ಕಾಲಾಟದ ಹರಿಗೆಯ ಬಂಟರು
ವಜ್ರಾಂಗಿಯ ಜೋಡ ತೊಟ್ಟು
ಮಝ ಭಾಪುರಿ ಎಂದು ನಲಿದಾಡಿ ಬಂ*[16][ದ]*[17]ರು
ಹೆಜ್ಜೆ ಹೆಜ್ಜೆಗೆ ಬೀಳಲಿರಿದು               ||೧೭೫||

ನರಸಿಂಹನ ದಂಡ ಹೊರಟು ತಿಮ್ಮಯ್ಯನ
ಹರಿಗೆಯೊಳಗೆ ಹಾಕಿ ಹೊತ್ತು
ಬರುತ ಬೂದಿಯಹಾಳ ದಾರಿಯ ತಪ್ಪಿಸಿ
ಹರಿದರು ನೀರಗುಂದಕಾಗಿ             ||೧೭೬||

ಏರಿದ ವಾರುವ ಹರಿದಾಳು ಸಿಕ್ಕದೆ
ನೇರಲಗೇರಿಗೆ ಬಂದವರು
ಧೀರ ಕಾಚಯ್ಯನು ಮುಖಮಜ್ಜನ ಮಾಡಿ
ಮೀರಿ ನಡೆ[ದ] ಬೂದಿಹಾಳಿಗೆ         ||೧೭೭||

ಉಪ್ಪಿನಮಾಳಿಗೆ ಬಂದನು ಕಾಚಯ್ಯ
ತಪ್ಪದೆ ಕಹಳೆ ಹಿಡಿಸಿದನು
ಛಪ್ಪನ್ನ ದೇಶದ ನರಸಿಂಹನವರಿನ್ನು
ತೆಪ್ಪತ್ತುಗೊಂಡು ತಿಳಿಯರು            ||೧೭೮||

ಬಿದಿರಿನ ಕಹಳೆಯ ಕೇಳುತ ಕಾಚನೆಂ
ದರಿದನು ಸಿರುಮಭೂವರನು
ಅರಸಿ ಚಿಕ್ಕಾಯ ಕೂಡೆ ಹೇಳುತಲಾಗ
ಹೊರಚಾವಡಿಗೆದ್ದು ಬಂದ               ||೧೭೯||

ಹೊಕ್ಕು ಬಂದನು ತಂದೆ ಸಿರುಮೇಂದ್ರನೋಲಗಕೆ
ಎಕ್ಕಟಿಗರು ಸಹವಾಗಿ
ದೊಕ್ಕನೆ ಶರಣೆಂದು ನಿಂದ ಕಾಚನ ಕಂಡು
ಬೆಕ್ಕಸ ಬೆರಗಾದರೆಲ್ಲ                    ||೧೮೦||

ಮೋಸವ ಮಾಡಿ ಬಾಗೂರ ಗೋವಿಂದನ
ಆಸೆಯ ಕೆಡಿಸಿ ನೀ ಬಂದೆ
ದೇಶದೊಳಗೆ ಅಪಕೀರ್ತಿಯ ಮಾಡಿದೆ
ಹೇಸಿ ಬಂಟನು ಕಾಚಯ್ಯ               ||೧೮೧||

ಗೋವಿಂದನಾಯಕಗೆ ಹೇಳದೆ ಬಂದೆಯ
ಜೀವದಾಸೆಯಲಿ ಕಾಚಯ್ಯ
ಆವ ಪರಿಯಲಿಯಾದರೆ ಕಾಯ ಸ್ಥಿರವಲ್ಲ
ಸಾವು ತಪ್ಪದು ಕಂದ ನಮಗೆ          ||೧೮೨||

ಹೇಳದಿಳಿದು ಬಂಧ ಗೋವಿಂದನಾಯಕಗೆ
ಕೇಳಬೇಡವೊ ಸಿರುಮೇಂದ್ರ
ಸಾಳುವ ನರಸಿಂಹನ ದಂಡ ಕಡಿವೆನು
ವೀಳ್ಯವ ಪಾಲಿಸೆಂದ ಮಲ್ಲಣ್ಣ          ||೧೮೩||

ತೋರಿದ ಶೌರ್ಯ ಪ್ರತಾಪಗಳೆಲ್ಲವು
ನೀರಿನ ಹೋಮಗಳೆಂದ
ಧಾರುಣಿಯೊಳು ನಾವು ದಂಡಿನೊಳಗೆ ಹೋಗಿ
ಸೇರಿ ಸಾವೊನು ನಡೆಯೆಂದ          ||೧೮೪||

ಕಂದ ಕಾಚನ ಕೋಪವ ಕಂಡು ಸಿರುಮೇಂದ್ರ
ನೊಂದುಕೊಂಡನು ಮನದೊಳಗೆ
ಸಂದೇಹ ಬೇಡ ಮಲ್ಲಣ್ಣನ ಮಾತಿಗೆ
ಇಂದು ಕೋಪಿಸುವರೆ ಮಗನೆ         ||೧೮೫||

ಹಂದೆತನದಿ ಗೋವಿಂದಗೆ ಹೇಳದೆ
ಬಂದೆನಾದರೆ ನಿನ್ನ ಬಸುರ
ಬಂದ ಮಗನು ಅಲ್ಲ ತಂದೆ ಸಿರುಮ ಕೇಳು
ಸಂದೇಹ ಬೇಡ ನಿನ್ನಾಣೆ                ||೧೮೬||

ಹೀಗೆಂದು ಹೇಳೆ ಹಾಗಹುದೆಂದು ಸಿರುಮೇಂದ್ರ
ಮಾಗಿಯ ಕೋಗಿಲಂತಾದ
ಬಾಗೂರಲತ್ತಲಿ ನರಸಿಂಹರಾಯನು
ಆಗ ಈಶ್ವರಗೆ ಇಂತೆಂದ                ||೧೮೭||

ಬಲುಹಿಂದ ಬಲವ ಕಲಕಿ ಹೊಕ್ಕು ಬಾಗೂರ
ಕೊಲೆಗೇಡಿ ಸಿರುಮನ ಮಗನು
ಹುಲಿ ಹೊಕ್ಕು ಹುಲ್ಲೆಯ ಹಿಂಡ ಕಲಕಿದಂತೆ
ಗೆಲವಿಂದ ಹೋದ ಗೊಲ್ಲ ಕಾಚ        ||೧೮೮||

ಹೋಗಲಿ ಕಾಚನು ಕೇಳು ನರಸಿಂಹರಾಯ
ಬಾಗೂರ ಸಾಧ್ಯವ ಮಾಡಿ
ಬೇಗ ಬೂದಿಯಹಾಳ ಸೆರೆವಿಡಿವೆನು ಎಂದು
ಆಗ ಈಶ್ವರ ನುಡಿದನು                  ||೧೮೯||

ಈಶ್ವರನಾಯಕನ ನುಡಿಗೇಳಿ ನರಸಿಂಹ
ರೋಷದಿಂದಲಿ ನೋಡಿದನು
ಮೀಸೆಯ ತಿರುಹಿ ಬಾಗೂರ ಕೋಟೆಯ ನೋಡಿ
ವಾಸಿಯಿಂದಲಿ ನಡೆದನು               ||೧೯೦||

ಛಲವಿಕ್ಕಿ ಮಲತು ನಡೆದು ದೊರೆಗಳ ಮುಂದೆ
ಕಲಹಕೆ ಕಲಿಗಳೇರಿದರು
ಅಲಗಾಯುಧವ ಕಿತ್ತು ಅಡರಿತಾಕ್ಷ*[18][ಣ]*[19]ದೊಳು
ಅಳುಕದೆ ಹರಿಗೆಯ ಭಟರು             ||೧೯೧||

ಏನು ಎಳ್ಳನಿತು ಕಾಣಿಸದಂತೆ ಬಾಗೂರ
ಜೇನ ಹುಳುಗಳು [ಮುತ್ತಿದಂತೆ] ಆನೆ ಕುದುರೆ ಸೇನೆ ಕವಿಯೆ ಸಮರದೊಳು
ಏಳು ಬೀಳುತ ಕಾದುತಿರಲು           ||೧೯೨||[1] ೭೨ ಈ ಪದ್ಯ “ಶಿ” ಪ್ರತಿಯಲ್ಲಿ ಇಲ್ಲ. ಇಲ್ಲಿ ಪ್ರಾಸ ತಪ್ಪಿದೆ. ಎರಡು ಪದ್ಯಗಳು ಒಂದಾಗಿರಬಹುದು (ಸಂ)

[2] ೭೩-೭೩ದನು ಗೋವಿಂದ (ಶಿ)

[3] ೭೩-೭೩ದನು ಗೋವಿಂದ (ಶಿ)

[4] ೭೪-೭೪ ಕಾಚನ ಕೈಯಾರೆ ಗೋ (ಶಿ).

[5] ೭೪-೭೪ ಕಾಚನ ಕೈಯಾರೆ ಗೋ (ಶಿ).

[6] ೭೫ ಪದ್ಯ  “ಪ್ರತಿಯಲ್ಲಿ ಮಾತ್ರವಿದೆ (ಸಂ)

[7] ೭೬ ಪದ್ಯಶಿಪ್ರತಿಯಲ್ಲಿ ಮಾತ್ರವಿದೆ (ಸಂ)

[8] ೭೭೭೭ ಜನರಿ(ಶಿ), *_*ಮೂರು (ಶಿ,).

[9] ೭೭೭೭ ಜನರಿ(ಶಿ), *_*ಮೂರು (ಶಿ,).

[10] ೭೮. ಪದ್ಯದ ಉತ್ತರಾರ್ಧಶಿಪ್ರತಿಯಲ್ಲಿ ಇಲ್ಲ (ಸಂ)

[11] ೭೯. ಪದ್ಯದ ಪೂರ್ವಾರ್ಧಶಿಪ್ರತಿಯಲ್ಲಿ ಇಲ್ಲ (ಸಂ).

[12] ೮೦೮೦ ಬಿದ್ದಾನೆ (ಶಿ)

[13] ೮೦೮೦ ಬಿದ್ದಾನೆ (ಶಿ)

[14] ೮೧೮೧ ಆಧರಿಸುತ (ಶಿ)

[15] ೮೧೮೧ ಆಧರಿಸುತ (ಶಿ)

[16] *-* (ಶಿ, )

[17] *-* (ಶಿ, )

[18] *_*  x(ಶಿ, ).

[19] *_*  x(ಶಿ, ).