ಸಂಜೆಯ ಹೊತ್ತಿಲಿ ಮಂಜುಗತ್ತಲೆಯೊಳು
ಪಂಜಿನ ಬೆಳಕಿಲಿ ನಡೆದು
ಮುಂಚೂಣಿವಾದ್ಯ ಕೊಳಲು ತಪ್ಪಡೆ ಕಹಳೆ
ರಂಜಿಸಿ ಬಿರಿದ ಸಾರಿದರು              ||೯೪||

ಬಂದನು ಅರೆಯಕಟ್ಟೆಯ ತೆವರಿಲಿ ನಿಂದು
ಮಂದಿ ಸಹಿತ ಕಾಚಯ್ಯ
ಮುಂದೆ ಬಾಗೂರಿಗೆ ನಾವು ಹೋಗುವರೆ
ಚೆಂದ ಹೇಗೆಂದು ಕೇಳಿದನು            ||೯೫||

ಅಡಗಿ ಹೋಗುವ ನಾವು ಕಾಚಣ್ಣ ವಾದ್ಯದ
ಗೊಡವೆ ಬೇಡೆಂದ ಗುಜ್ಜಲೋಬ
ಬಿಡು ಸಲ್ಲ ನಿನಗೀ ಮಾತೆಂದು ಕೋಪಿಸಿ
ನುಡಿದನವಗೆ *

[1][ಮರು]*[2] ಸೊಲ್ಲ     ||೯೬||

ಅಡಗಿ ಹೋಹುದೊಂದು ಲಾವುಗೆ ಗುಜ್ಜಲೋಬ
ಉಡುಗಿ ಹೋಗುವದೊಂದು ಬುರುಲಿ
ಅಡಗಿ ಹೋಗುವನ ಮಗನಲ್ಲವೆಂದು ಕಾಳೆ
೪೬ಹಿಡಿ೪೬ಎಂದ ಕಾಚ ಭೂವರನು     ||೯೭||

ಆಳಿದೊಡೆಯ ಕಾಚಗಿಂದಲಿ ಬೇಗದಿ
ಸಾರಿ ಹಿಡಿದ ದೇವುಗನು
ಸಾಳುವ ನರಸಿಂಹನ ಪಾಳೆಯದೊಳು
. . . . . ಕಹಳೆಯನು೪೭[3]                  ||೯೮||

ಕಂಡನು ಬಾಗೂರ ಸುತ್ತ ನರಸಿಂಹನ
ದಂಡು ತಾ ಬಿಟ್ಟಿರಲಾಗಿ
ಖಂಡೆಯ ಕಿತ್ತು ಝಡಿದು ಕಾಚನು ನೆರೆ
ಗಂಡು ಮುಂದಕೆ ಮೂದಲಿಸಿ           ||೯೯||

*[4][ಬೊಗ್ಗನೆ]*[5] ಹರೆಯ ಹೊಯಿಸುತ ಲಗ್ಗೆಮಾಡುತ
ನುಗ್ಗೇಳ ತಳಿಗಳ ಕಿತ್ತು
ಉಗ್ಫಡಿಸಿಯೆ ನರಸಿಂಹನ ಪಾಳ್ಯವ
ಕಗ್ಗೊ[ಲೆ ಬಿ]ದ್ದು ಕಡಿದರು               ||೧೦೦||

ಸೆಳೆದು ಗುಡಾರವ ಹರಿದು ಸೂರೆಯ ಮಾಡಿ
ಖೋಲಲೊ ಎಂದು ಬೊಬ್ಬಿರಿದು
ಹಲವು ಮುಖದಿ ಹೊಕ್ಕು ನರಸಿಂಹನವರನು
ಬಲವ ಸಂಹರವ ಮಾಡಿದರು          ||೧೦೧||

ಕಿಚ್ಚೊಟ್ಟಿ ಕರಡವ ಸುಡುವ ಪರಿಯಂತೆ
ಕೊಚ್ಚಿ ಕಾಲಾಳ ಮೇಲಾಳ
ಚುಚ್ಚಿ ನೆಗೆಹಿ ೪೮[6]ಚಿತ್ರಹಳ್ಳಿ೪೮[7] ಯ ಪರಿವಾರ
ಎಚ್ಚು ಹೆಸರ ಹೇಳುವರು                ||೧೦೨||

ಹಕ್ಕರಿಕೆಯನು ಬಗದು ಹೊಕ್ಕವನಲ್ಲೆ
ಕುಕ್ಕಲಿರಿದು ಕೊಲ್ಲುವರು
ಮಿಕ್ಕು ಮೀರಿ ಅಡ್ಡಯಿಸಿ ಬಂದ[ವರನು] ೪೯[8]ಕುಕ್ಕರ ಬೀಳ೪೯[9] ಲಿರಿದರು          ||೧೦೩||

ತೋಳು ಕೊರಳು ಖಂಡಿಸಲಾಕ್ಷಣದೊಳು
ಹೋಳಾಗಿ ಬೀಳಲಿರಿದರು
ಬೋಳೆಯ ಪರಿವಾರ ಹೆಸರುಗಳ ಹೇಳಿ
ಕಾಳಗದಿ ಬೊಬ್ಬಿ[ರಿ]ದು                 ||೧೦೪||

ತುಂಡ ತುಂಡಿಗೆ ಬೀಳಲೆಸೆವುತ ಬಂಟರು
ಗುಂಡಿಲವರ ಪರಿವಾರ
ದಂಡಿನೊಳಗೆ ಚಲ್ಲವರಿದು ಕೆಡಹಿದರು
ರುಂಡ ಮುಂಡವ ಬೀಳಲಿರಿದು        ||೧೦೫||

ಬಾಳ ಜಡಿದು ಕಾಚೇಂದ್ರ ನರಸಿಂಹನ
ಪಾಳೆಯ ಹೊಕ್ಕು ಕಡಿವುತ್ತ
ಕೋಳ ಹಿಡಿದು ಬೀಳಲಿರಿದು ಹೆಸರುಗಳ
ಹೇಳುತ ಬಲು ಬಂಟರೈದಿ              ||೧೦೬||

ಅರಿತೆವರಿ೫೦[10]ಯೆ೫೦[11] ವೆಂದೆನಬೇಡಿ ಸಿರುಮನ
ವರವುಳ್ಳ ಕೊಮಾರ ಕಾಚಯ್ಯ
ಇರಿದು ತರಿದು ದಾರಿ ಬಿಡಿಸಿ ಪಾಳ್ಯದೊಳು
ಕುರುಹುದೋರುತಲಿ ನಡೆದನು       ||೧೦೭||

ಎವೆ ಹಳಚದ ಮುನ್ನ ನರಸಿಂಹನವರನು
ಕಿವಿ ಮೂಗ ಕೊಯ್ಸಿ ಕೆಲಬರನು
ತಿವಿದು ಕಡಿದು ರಣಭೂತಕೆ ಕಾಚೇಂದ್ರ
ಸವಿದುತ್ತ ಮಾಡಿ ನೀಡಿದನು           ||೧೦೮||

ಧಾರುಣಿಯೊಳೊಡಗಲಿ ಈ ಪರಿಯಂತೆ
ಧಾರುಣಿ ಅಡಿಮೇಲಾದಂತೆ
ಭೋರೆಂದು ನರಸಿಂಹ[ನ] ಪಾಳೆಯದೊಳು
ದಾರಿಯ ಬಿಡಿಸಿದ ಕಾಚ                 ||೧೦೯||

ಲೂಟಿಯಿಂದಲಿ ಮುಂದಕೆ ದಾಂಟಿ ಕಾಚೇಂದ್ರ
ಕೋಟೆಯ ದಂಡಿಗೆ ಬಂದು
ಚೀಟನಂಬಿಗೆ ಕಟ್ಟಿ ಗುಜ್ಜಲೋಬನ ಕೈಯ್ಯ
ಕೋಟೆ೫೧[12]ಯ ಮೇಲಕೆಸೆಸಿದ೫೧[13]    ||೧೧೦||

ಎಚ್ಚಂಬಲಿ ಬಂದ ಓಲೆಯನೋದಿಸಿ
ಹೆಚ್ಚಿ ಗೋವಿಂದನಾಯಕನು
ಮುಚ್ಚಿದ ಬಾಗೂರ ಕದವ ತೆರೆಸಿ ಹೊರಟು
ಆಶ್ಚರಿಯಲಿ ಬಂದನವನು              ||೧೧೧||

ಸಬ್ಬದಳದ ಮೇಲೆ ೫೨[14]ಹೆಬ್ಬುಲಿ೫೨[15] ಕಾಚಯ್ಯ
೫೩[16]ಒಬ್ಬನೆ೫೩[17] ಬಹರೇನೊ ಮಗನೆ
ತಬ್ಬಿ ಕರೆದುಕೊಂಡು ಊರೊಳೆಯಕ (ಹೋದ] ಉಬ್ಬಿ ಗೋವಿಂದನಾಯಕನು          ||೧೧೨||

ಇರಲಿತ್ತ ಬೆಳಗಾಗಲಾಕ್ಷಣ ಸುದ್ದಿಯ
ನರಸಿಂಹ ಕೇಳಿ ಕೋಪದಲಿ
ಕರೆಸಿ ಈಶ್ವರಿನಾಯಕ೫೪[18] ನಿಗೆಂದನು ಕಾಚ
ನಿರದೆ ಬಾಗುರ ಹೊಕ್ಕುದೆಂತು೫೪[19]  ||೧೧೩||

ಕಾಣೆವರಿಯೆವು ಕಾಚ ಬಾಗೂರ ಹೊಕ್ಕುದ
ಕೇಣದಿ ನಾ ಬಿಡಿಸುವೆನು
ಕ್ಷೋಣಿಪ ನರಸಿಂಹ ವೈರಿಗೆ ವಜ್ರದ
ಸಾಣೆ ನಿಮ್ಮ ಪಾದಯುಗಳ            ||೧೧೪||

ಹೊಕ್ಕನು ಕಾಚ ಬಾಗೂರೊಳಯಕೆ ಬಂದು
ಸಿಕ್ಕಿದ ನಮ್ಮ ಬಲೆಯೊಳಗೆ
ಮಿಕ್ಕು ಮೀರಿ ಸೊಕ್ಕಿದವನ ಹಿಡಿದು ಸೆರೆಯ
ನಿಕ್ಕುವೆ ನಿಮ್ಮ ಪಾದದಲಿ               ||೧೧೫||

ನುಡಿದ ಪಂಥಕೆ ಮೆಚ್ಚಿ ನರಸಿಂಹರಾಯನು
ಕೂಡಿಸಿ ಕರ್ಪುರ ವೇಳೆಯವ
ನಡೆಯೆಂದು ಕಳುಹಿದ ಈಶ್ವರಿನಾಯಕನ
ಒಡನೆ ಕಾಳಗಕನುಮಾಡಿ              ||೧೧೬||

ಕೂಡಿದ ೫೫[20]ಮನ್ನೆಯರ೫೫[21] ಈಶ್ವರಿನಾಯಕ
ರೂಢಿಗುನ್ನತವೆಂಬಂತೆ
ಈಡು ಪಾಡಿನಲಡ್ಡೈಸಿ ಫೌಜವನಿಕ್ಕಿ
ನೋಡಿದ ಬಾಗೂರ ಸುತ್ತ               ||೧೧೭||

ಇಂದ್ರಾಗ್ನಿ ಯಮ ನೈಋತ್ಯ ವರುಣ ವಾಯು
ಹೊಂದಿದ ಕೌಬೇರ ಈಶಾನ್ಯ
ಮುಂದೆ ಕೋಟೆಯ ಹಂಚಿ ನಡೆದ೫೬[22][ನೀ]೫೬[23]ಶ್ವರ ಗೋ
ವಿಂದ ಎನುತ ತವಕದಲಿ                ||೧೧೮||

ಸುತ್ತ ಮೋಹರಿ೫೭[24]ಸಿರ್ದ೫೭[25] ನಟ್ಟ ತಳಿಯ ಕಿತ್ತು
ಒತ್ತಿ ಅಗುಳ ಸಾರಿದರು
ಹತ್ತಿ ಕೋಟೆಯ ಮೇಲೆ ಕಡಿದಾಡುತಿರಲಾಗಿ
ಎತ್ತುಗಲ್ಲುಗಳ ಹಾಕಿದರು               ||೧೧೯||

ಶಂಕೆಯಿಲ್ಲದೆ ಹೊರಗೆಂಟು ದಿಕ್ಕಿನಲಿ
ಡೆಂಕಣಿಗಳ ಹೂಡಿಸಿದರು
ಬಿಂಕ ಮುರಿದು ಬಾಗೂರೊಳು ಗೋವಿಂದ
ಮಂಕಾಗಿ ಮೈಮರೆದಿರ್ದ               ||೧೨೦||

ಕಂದಿದ ಗೋವಿಂದನಾಯಕನ ಮುಖ ನೋಡಿ
ಕಂದ ಕಾಚಯ್ಯ ಕಂಡೊಡನೆ
ಇಂದಿನ ಕಾಳಗ ನನಗೆ ಸಲುವದೆಂದು
ನಿಂದು ಕೈಮುಗಿದು ೫೮[26]ಬೇ೫೮[27]ಡಿದನು                                  ||೧೨೧||

ಕಲಹಕೆ ಕಳುಹಿಸಿಕೊಂಡು ಕಾಚಯ ತನ್ನ
ಬಲು ಬಂಟರು ಸಹವಾಗಿ
ಅಲಗುವಿಡಿದು ಆಳುವೇರಿಯ ಹತ್ತಿತು
ಮಲೆತು ನಿಂತಿತು ಕಾಳಗಕೆ೫೯[28]       ||೧೨೨||೬೦

ಹತ್ತಿ ಕೋಟೆಯ ಮೇಲೆ ಕಡಿದಾಡುತಿರಲಾಗ
ಎತ್ತುಗಲ್ಲುಗಳ ಹಾಕಿದರು
ಇತ್ತ ಕವಿದಲ್ಲಿ ಆಳುವೇರಿಯನೇರುವಾಗ
ಮತ್ತಿರಿದಿರಿದು ನೂಕಿದರು೬೦[29]         ||೧೨೩||

ಗೊಲ್ಲ ಕಾಚನ ಬಂಟರೆಂದು ಹೆಸರುಗಳ
ಬಿಲ್ಲವರೆಚ್ಚು ಹೇ೬೧[30]ಳಿದರು೬೧[31]
ಬಲ್ಲಿದ ಹರಿಗೆಯವರ ತಲೆಯ ಹೊಯಿತಂದು
೬೨[32]ಅಲ್ಲಿ೬೨[33] ನಿವಾಳಿ ಹಾಕಿದರು       ||೧೨೪||

ಟೆಂಟಣಿಸುವ ಎದೆ ಮೆಟ್ಟಿ೬೩[34] ಗಂಟಲ ಕೊಯ್ವ
ಬಂಟರಿಗಾ೬೪[35]ಗ ಕಾಚಯ್ಯ೬೪[36]
ಕಂಠಮಾಲೆಯ ಕೊಟ್ಟ ಕರ್ಣದೊಳಿಟ್ಟಿರ್ದ
ಒಂಟಿಯ ತೆಗೆದಿತ್ತನಾಗ                 ||೧೨೫||

ಉರಿಯ ಬಾಣವು ಬರಸಿಡಿಲಿನ ೬೫[37]ರವದಲಿ೬೫[38]
ಧರಣಿ೬೬[39]ಸದ್ದನು೬೬[40] ಮಾಡುವಂತೆ
ಧುರಗಲಿ ವಿಕ್ರಮ ಕಾಚನ ಪರಿವಾರ
ಮೊರೆದೆಲ್ಲ ಮೋಹರಿಸಿದರು          ||೧೨೬||

ಸುತ್ತ ಮೊಹರದಲಿ ಎತ್ತಿ ಲಗ್ಗೆಯ ಮಾಡಿ
ಕೊತ್ತಳಗಳ ಬೀಳಲಿಡಿಸಿ
ಚಿತ್ತ ಹೆದರದೆ ಈಶ್ವರಿನಾಯಕ ಬೆಂ-
ಬತ್ತಿ ಬಂದಗಳ ದಂಡೆಯಲಿ            ||೧೨೭||

ಕೋಟೆ ಬಿರ್ದಾ ಠಾವಿಗೆ ಕಾಚಯ್ಯನು೬೭[41]
ಮೀಟುಳ್ಳ ಮನ್ನೆಯರ ೬೮[42]ಕೂಡಿ೬೮[43]
ಲೂಟಿಯಿಂದಲಿ ಬಂದ ನರಸಿಂಹನವರನು
ಕೋಟಲೆಗೊಳಿಸಿ ಕಡಿದನು             ||೧೨೮||

ಕೊತ್ತಳದೊಳಗಾಗ ನಿಂದ ಕಾಚಯ್ಯಗೆ
ಎತ್ತಿದವೆರಡು ಸತ್ತಿಗೆಯು
ಸುತ್ತ ಮುತ್ತಿದ ದಂಡ ನೋಡುತ ನಿಂದನು
ಮತ್ತೆ ಮೂದಲಿಸಿ ಮನದೊಳು         ||೧೨೯||

ನೀಲನನೇರಿ ಕೊಮಾರ ಕಾಚಯ್ಯಗೆ
ಮೇಲೆ ಚಾಮರವ ಢಾಳೈಸಿ
ಸಾಲುಮನ್ನೆರ ಗಂಡ ನೋಡು ನೋಡೆನುತಲಿ
ಲೀಲೆಯಿಂದೆದ್ದು ಕಡಿದರು               ||೧೩೦||

ಕಾದುವ ಶೌರ್ಯವ ಕಂಡನು ಅವನೊಬ್ಬ
ಮೂದಲಿಸಿಯೆ ಬಂದು ನಿಂದ
ಹಾದು ತರ್ಕೈಸಿ ವೀಳ್ಯವ ಕೊಟ್ಟು ವಿರುಪನ
ಕಾದೆಂದು ಕಾಚಯ್ಯ ಕಳುಹೆ           ||೧೩೧||

ಚಂದ ಚಂದದಲಿ ಕೋಟಿಯನೇರಿ ನಿಂದಾಗ
ಬಂದು ಕಡಿದಾಡುತ್ತಿ[ರ]ಲು
ನಿಂದರು ನರಸಿಂಹನವರು ಕಂಗೆಟ್ಟಾಗ
ಹಿಂದಕೆ ತಿರುಗಿ ಓಡಿದರು*[44]                       ||೧೩೨||

ಒಡೆಯನ ಶೌರ್ಯವ ಕಂಡನವನೊಬ್ಬ
ಕಡುಗಲಿ ಸರಪಳಿ ವಿರುಪ
ಮಡದಿ ಮಕ್ಕಳು ನಿಮ್ಮ ಹೆಸರೆಂದು ಎನುತಲಿ
ಒಡನೆ ಕೋಟೆಯ ಧುಮುಕಿದನು      ||೧೩೩||

ಸಬ್ಬ ದಳದ ಮೇಲೆ ಒಬ್ಬನೆ ವಿರುಪಯ್ಯ
ಹೆಬ್ಬುಲಿಯಂತೆ ಹೋರುತಲಿ
ತಬ್ಬಿಬ್ಬುಗೊಳ್ಳದೆ ನರಸಿಂಹನವರನು
ಉಬ್ಬಿ ಕಡಿದನು ಬೇಗದಲಿ              ||೧೩೪||

ಕತ್ತಿಯ ಹೊಯಿಲಿಗೆ ಕಿಡಿಕಿಡಿ ಹಾರುತ
ಹತ್ತುತಿರ್ದವು ಮೈಯ ಗಾಯ
ಕತ್ತಿ ಕೈದುಗಳು ಮುರಿಯಲಾಕ್ಷಣದೊಳು
ಕಿತ್ತುಕೊಂಡರು ವಂಕಿಗಳ               ||೧೩೫||

ಮುಂದಲೆ ಮುಂದಲೆಗಳ ಪಿಡಿದಿರಿದಾಡಿ
ಸಂಧಿಸಿ ೬೯[45]ಸಲೆ೬೯[46] ತಿವಿದಾಡಿ
ಬಂದು ಮುತ್ತಿತು ಸರಪಳಿ ವಿರುಪಯ್ಯನ
ನಿಂದು ಎಲ್ಲರ ಕಡಿವುತಲಿ               ||೧೩೬||

ನರಸಿಂಹರಾಯನ ಬಿಲ್ಲಾಳೆಕ್ಕಟಿಗರು
ಧು[ರ]ಗಲಿ ವಿರುಪನ ಮುತ್ತಿ
ಭರದಿಂದಲೆಸೆಯಲು ಮೈಮುತ್ತಿ ರಣದೊಳು
ಗರುಡನ ಗೆರೆಯಂದದಲಿ               ||೧೩೭||

ಹತ್ತುಸಾವಿರ ೭೦[47]ಪಡೆಯ೭೦[48] ತೆಲುಗರೆಲ್ಲರು ಬಂದು
ಮುತ್ತಿ ನಿಂದರು ವಿರುಪಯನ
ಮತ್ತೆ ಮೂದಲಿಸಿ ತಿವಿಯಲಾಕ್ಷಣದೂಳು
ಸತ್ತು ಧರಣಿಗೊರಗಿದನು                ||೧೩೮||

ಕಂಡೆನೊ ಕಂಡೆನೊ ಕಲಿ ವಿರುಪಯ್ಯ ನಿನ್ನ
ರುಂಡ ಮುಂಡವ ಬೀಳಲಿರಿದು
ತುಂಡೇಳ ಬೀಳಲಿರಿದು ನರಸಿಂಹನ ನೆರೆ
ಗಂಡು ಮೂದಲಿಸಿ ಕಾಚಯ್ಯ           ||೧೩೯||

ಕೊತ್ತಳದೊಳಗಿರ್ದ ಕಾಚಭೂವರನಾಗ
ಮತ್ತೆ ಕೋಟೆಯ ಧುಮುಕಿದನು
ಸತ್ತ ಹೆಣನ ಕಂಡು ವಿರುಪ ಬಿದ್ದಿರಲಾಗಿ
ಎತ್ತಿ ಹಿಡಿದನು ಬೇಗದಲಿ                ||೧೪೦||

ಕಾಳಗದೊಳು ಕಾಚ ಕಡಿದಾಡುತಿರಲಾಗ
ಪಾಳಯದೊಳಗೆ ಗುಲ್ಲೆದ್ದು
ಕೋಳುಹೋಗುವ ಬಂಟ ನಾನಲ್ಲವು ಕೇಳಿ
ಸಾಳುವ ಧೀ[ರ] ರಣದೊಳಗೆ         ||೧೪೧||

ಒಡೆಯನ ಶೌರ್ಯವ ಕಂಡರು ಬಂಟರು
ಕಡುಗಲಿಗಳು ಮೂದಲಿಸಿ
ತಡೆಯದೆ ಕೋಟೆಯ ಧುಮುಕಿ ಬಂದಾಗಳೆ
ನಡೆದರು ಕಾಚನ ಬಲಕೆ                 ||೧೪೨||

ಕಾಳಗದೊಳು ಕಾಚ ಕಡಿದಾಡುತಿರಲಾಗಿ
ಸಾಳುವ ನರಸಿಂಹನವರು
ಕೋಳ ಹಿಡಿಯದೆ ಬಿಟ್ಟೋಡಿ[ತು] ದೆಸೆಗೆಟ್ಟು
ಭಾಳಲೋಚನ ಬಲ್ಲನೆನುತ            ||೧೪೩||

ಆಳಿದೊಡೆಯ ಕಾಚ ಸರಪಳಿ ವಿರುಪನ
ಬಾಳ ಜತನವೆಂದೆನುತ
ಪಾಳಯವೆಲ್ಲ ತಲೆವಿಡಿದು ನಿಂದಾಗ
ಆಳುವೇರಿಗೆ ಬಂದು ನಿಂದು            ||೧೪೪||

ಸತ್ತ ಹೆಣನ ಹರಿಗೆಯೊಳು ಹಾಕಿನ್ನು
ಮತ್ತೆ ಹೊತ್ತರು ವಿರುಪಯನ
ಅರ್ತಿಯಿಂದಲಿ ಪಾಳೆಯದೊಳಯಕೆ ಹೊತ್ತು
೭೧[49]ಮತ್ತೆ ಇಳುಹಿ ನಿಂದರೆಲ್ಲ೭೧[50]      ||೧೪೫||

ಕಾದುವ ಶೌರ್ಯವ ಕಾಣದೆ ಗೋವಿಂದ
ವೇದನೆಗೊಂಡ ಮನದೊಳಗೆ
ಬಂದು ಸೆಟ್ಟಿಗಳು ಏಕಾಂತವಾಡಿದರು
ಇಂದು ಕಾಬೆವು ನರಸಿಂಹನ           ||೧೪೬||

ಕರಸಿ ಬ್ರಾಹ್ಮಣ ನಿಯೋಗಿ ನರಸಿಂಹನ
ಭರದಿ ಸಂಧಿಸಿ ಮಾತನಾಡು
ಧುರಗಲಿ ಕಲ್ಲರಸಯ್ಯ ಬಂದನು ಬೇಗ
ನರಸಿಂಹರಾಯನ ಕಂಡ               ||೧೪೭||

ಬಂಡು ಮಾಡಲಿಬೇಡ ಬಾಗೂರ ಪ್ರಜೆಯನು
ಗಂಡುಗಲಿಯು ನರಸಿಂಹ
ಕಂಡು ಬದುಕೇನೆಂದು ಗೋವಿಂದ ಕಳುಹಿದ ಭೂ
ಮಂಡಲಪತಿಯೆ ಕೇಳೆಂದ              ||೧೪೮||

ಬಲ್ಲಿದ ಈಶ್ವರಿನಾಯಕ ಬಂದಹನೆ
ಎಲ್ಲ ಮನ್ನೇರು ಸಹವಾಗಿ
ಗೊಲ್ಲ ಸಿರುಮನ ಮಗ ಕಾಚನ ಕೊಟ್ಟರೆ
ನಿಲ್ಲದೆಲ್ಲವು ಸಂತವೆಂದ                 ||೧೪೯||

ಹತ್ತು ಸಾವಿರ ಹೊನ್ನ ಕೊಟ್ಟೇವು ಎನುತಲಿ
ಮತ್ತೆ ಸಂಧಿಗೆ ಮಾತನಾ[ಡೆ] ಒತ್ತಿಲಿ ನಂದಿರ್ದ ಈಶ್ವರಿನಾಯಕ
ಕತ್ತವ ಹಿಡಿದು ನೂಕಿಸಿದ                ||೧೫೦||

ಕಲ್ಲರಸನು ಬಂದು ಹೊಕ್ಕನಾ ಬಾಗೂರ
ಝಲ್ಲೆನುತಲಿ ಮನದೊಳಗೆ
ಗೊಲ್ಲ ಕಾಚನ ಕೊಟ್ಟರೆ ಸಂತವೆಂದು ರಾಯ
ನಿಲ್ಲದೆನ್ನನು ಕಳಿಹಿದನು                 ||೧೫೧||[1] *-* ಮೂರು (ಶಿ, ಹ), * – * x (ಶಿ)

[2] *-* ಮೂರು (ಶಿ, ಹ), * – * x (ಶಿ)

[3] ೪೭ ಈ ಪದ್ಯ “ಹ” ಪ್ರತಿಯಲ್ಲಿ ಇಲ್ಲ (ಸಂ.),

[4] * – * ಭೋಗಿನ (ಶಿ, ಹ)

[5] * – * ಭೋಗಿನ (ಶಿ, ಹ)

[6] ೪೮-೪೮ ಚಿತ್ರಾವಳಿ (ಶಿ)

[7] ೪೮-೪೮ ಚಿತ್ರಾವಳಿ (ಶಿ)

[8] ೪೯-೪೯ (ಶಿ)

[9] ೪೯-೪೯ (ಶಿ)

[10] ೫೦-೫೦ ತೆ(ಶಿ)

[11] ೫೦-೫೦ ತೆ(ಶಿ)

[12] ೫೧-೫೧ ವಳಯಕೆ ಇಡಿಸಿದನು (ಶಿ)

[13] ೫೧-೫೧ ವಳಯಕೆ ಇಡಿಸಿದನು (ಶಿ)

[14] ೫೨-೫೨ ಒಬ್ಬನೆ (ಶಿ)

[15] ೫೨-೫೨ ಒಬ್ಬನೆ (ಶಿ)

[16] ೫೩-೫೩ ಹೆಬ್ಬುಲಿ (ಶಿ)

[17] ೫೩-೫೩ ಹೆಬ್ಬುಲಿ (ಶಿ)

[18] ೫೪-೫೪ …. ಪೊಕ್ಕ ಪರಿಯ ಹೇಗೆಂದು ಕೇಳಿದನು (ಶಿ)

[19] ೫೪-೫೪ …. ಪೊಕ್ಕ ಪರಿಯ ಹೇಗೆಂದು ಕೇಳಿದನು (ಶಿ)

[20] ೫೫-೫೫ ಮನ್ಯರ (ಶಿ)

[21] ೫೫-೫೫ ಮನ್ಯರ (ಶಿ)

[22] ೫೬-೫೬ ರೀ (ಶಿ, ಹ)

[23] ೫೬-೫೬ ರೀ (ಶಿ, ಹ)

[24] ೫೭-೫೭ ಸುತ್ತ (ಶಿ).

[25] ೫೭-೫೭ ಸುತ್ತ (ಶಿ).

[26] ೫೮-೫೮ ನೋ (ಶಿ)

[27] ೫೮-೫೮ ನೋ (ಶಿ)

[28] ೫೯-೫೯ ಮತ್ತು (ಶಿ)

[29] ೬೦ “ಶಿ” ಪ್ರತಿಯಲ್ಲಿ ಈ ಎರಡೂ ಪದ್ಯಗಳು ಒಂದಾಗಿವೆ (ಸಂ)

[30] ೬೧-೬೧ ಳು ವರು (ಶಿ)

[31] ೬೧-೬೧ ಳು ವರು (ಶಿ)

[32] ೬೨-೬೨ ಎಲ್ಲ (ಶಿ)

[33] ೬೨-೬೨ ಎಲ್ಲ (ಶಿ)

[34] ೬೩+ ಕೊರಳುಗಳ (ಶಿ)

[35] ೬೪-೬೪ ಗೆ(ಶಿ)

[36] ೬೪-೬೪ ಗೆ(ಶಿ)

[37] ೬೫-೬೫ ರಭಸವು (ಶಿ)

[38] ೬೫-೬೫ ರಭಸವು (ಶಿ)

[39] ೬೬-೬೬ ಶ ಲಗ್ಗೆ (ಶಿ)

[40] ೬೬-೬೬ ಶ ಲಗ್ಗೆ (ಶಿ)

[41] ೬೭+ ತನ್ನ (ಶಿ)

[42] ೬೮-೬೮ ಕರಸಿ (ಶಿ).

[43] ೬೮-೬೮ ಕರಸಿ (ಶಿ).

[44] * ಈ ಪದ್ಯ “ಹ” ಪ್ರತಿಯಲ್ಲಿ ಇಲ್ಲ (ಸಂ)

[45] ೬೯-೬೯ ಸಂಧಿಸಿ (ಶಿ)

[46] ೬೯-೬೯ ಸಂಧಿಸಿ (ಶಿ)

[47] ೭೦-೭೦ ಗಾಢೆಯ (ಶಿ)

[48] ೭೦-೭೦ ಗಾಢೆಯ (ಶಿ)

[49] ೭೧-೭೧ ಮತ್ತಿಳುಹಿದರು ಕಾಚಯ್ಯನ (ಶಿ)

[50] ೭೧-೭೧ ಮತ್ತಿಳುಹಿದರು ಕಾಚಯ್ಯನ (ಶಿ)