*

[1]ಮುತ್ತಿಗೆ ಬಾಗೂರಿಗಾಗಲು ಸಿರುಮನು
ಹೆತ್ತ ಮಗನ ಕಾಚಯ[2]
ಉತ್ತಮ ಕೋಟೆ *[3][ಗೆ ಕಳು]*[4] ಹುವ ಕಥೆಯನು
ಚಿತ್ತೈಸಿ[5] ಸಕಲ ಸಜ್ಜನರು               ||೧||

ಬಕ್ಕಟ ಬಯಲಿಗೆ ಗೋವಿಂದನಾಯಕ
ಸಿಕ್ಕಿದ ಬಾಗೂರಿನೊಳಗೆ
[6]ಹೊಕ್ಕು ಬಿಡಿಸುವದರ ಕಳುಹಬೇಕೆನುತಲಿ
ಅಕ್ಕಟೆನುತ ಸಿರುಮೇಂದ್ರ[7]           ||೨||

[8]ತನ್ನ ಕೊಮಾರರೊಳುನ್ನಿಸಿ ಕರೆದನು
ಮನ್ನಿಸಿ ಕಂದ ಕಾಚಯನ
ಕನ್ನಗಾಳಗವು ನಿನಗೆ ಬಾಗೂರಿಗೆ
ಚೆನ್ನಿಗ ಸಿರುಮ ಹೋಗೆನಲು           ||೩||

ಸಿಡಿಲ ಮರಿ[9][ಯು][10] ಸಿಂಹದ ಶಿಶು ಗಡಣದಿ
ಒಡನೆದ್ದು ಕಂದ ಕಾಚಯ್ಯ
ನುಡಿದ [11]ಪಂಥದಲಿ ತಂದೆಗೆ ಕಾಚಯ್ಯ
ಕಡುಗಲಿ ಹೋಗುವೆನೆಂದ[12]                      ||೪||

ಮಗನ ಸಾಹಸಕೆ ತರ್ಕೈಸಿ ಓಲಗದೊಳು
ಬೊಗಸೆ ಕರ್ಪುರದ ವೀಳ್ಯವನು
[13]ಸುಗುಣ ಕೊಮಾರ ಕಾಚಗೆ ಕೊಟ್ಟು ಸಿರುಮೇಂದ್ರ
ಮುಗುಳು[14] ನಗೆಯ ನಗುತಿರ್ದ     ||೫||

ಎಂಟು ದೆಸೆಗೆ ಗಂಡಬೇರುಂಡ ಸಿಂಹದ
ಘಂಟೆಯ ಕೊರಳ[15] ಕಾಚಯ್ಯ
ಬಂಟರೊಳಗೆ ಮಣಿಕಟ್ಟು ನೀ ಮುತ್ತಿನ
ಕಂಠ[16]ಮಾಲೆಯ ಕೊಳ್ಳೊ ಮಗನೆ  ||೬||

ರಂಗ ಮಾಣಿಕದ ಪೊಂಗಲು ಕಟಕುಂಗುರ
[17]ವಂಗಚಿತ್ತವ ಕೊಟ್ಟನವಗೆ
ಶೃಂಗಾರ ಮಾಡಿ ಕೊಮಾರ ಕಾಚನ ರಣ
ರಂಗಕೆ[18] ಸಿರುಮಭೂವರನು         ||೭||

ತವಕದಿ ಕಾಚ ಪಯಣವಾಗಿ ಬಾರೆಂದು
ಅವನ ಮನೆಗೆ ಕಳುಹಿದನು
[19]ನವರತ್ನ ಚಾವಡಿಯಿಂದ ಸಿರುಮ ತನ್ನ
ಯುವತಿಯ[20] ಕೂಡ ಹೇಳಿದನು     ||೮||

ರಾಕ್ಷಸ ನರಸಿಂಹ ಬಾಗೂರ ಮುತ್ತಿದ
ಸಿಕ್ಕಿದ ಗೋವಿಂದನೊ೧೦[21]ಳಗೆ
ಚಿಕ್ಕಾಯಿ ಅವನ ಕೂಟಕೆ ಪಯಣ ಮಾಡಿ೧೦[22]
ಮಕ್ಕಳೊಳಗೆ ಕಾಚಯ*[23][ನು]*[24]    ||೯||

ಎಂದ ಮಾತನು ಕೇಳಿ ನೊಂದು ಹಮ್ಮೈಸುತ
೧೧[25]ಚಂದ್ರನ ರಾಹು ಕೊಂದಂತೆ
ಮುಂದರಿಯದೆ ಕಂದ೧೧[26] ಕಾಚನ ಸಿರುಮೇಂದ್ರ
ಇಂದು ನೀ ಕ[ಳು]ಹಲು ಬಹುದೆ?     ||೧೦||

ಹುಟ್ಟಲೊಡನೆ ಎನ್ನ ಮಗನಾದದರ ಕೈಯ
ಕೊಟ್ಟು ಕಾಣಿಸಿದೆ ನೀನೆಂದು
ಮುಟ್ಟಿಸಿದೆ ನನಗೆ ಕಷ್ಟದ [ಸು]ದ್ದಿಯನೆಂದು
ಕೆಟ್ಟೆನೆನುತ ಮರಗಿದಳು                ||೧೧||  ||೪-೧೧೨||

ಅರೆಗಡಿದುರಗನಂದದಿ ಮಿಡಿಮಿ ೧೫[27] . . . .೧೫[28]ಡುಕುತ
ದೊರೆ ಜಲ್ಮವೇಕೆ ಸುಡಲೆಂದು
ಭರದಿಂದ ಮದನ ಕಂಬವ ಹಾಯ್ದತ್ತಳು
ಸಿರುಮನ ರಾಣಿ ಚಿಕ್ಕಮ್ಮ               ||೧೨|| ||೪-೧೧೩||

ಮಸೆದಲಗೆದೆಯೊಳೂ ಮುರಿಮೊನೆಗೊಂ೧೬[29][ಡಂತೆ] ಬಸುರ ಹೊಸೆದು ಯೊಯಿಕೊಳುತ
ಹಸುಳೆ ಕಾಚ೧೬[30]ನ ಮರುಕದಿ ಚಿಕ್ಕರಸಿ ತನ್ನ
೧೭[31][ಬಸಿದಳು ಕಂಬನಿ]೧೭[32] ಕುಚಕೆ              ||೧೩||

ಘನಶೋಕಜಲದಿ ೧೮[33]ನೆನೆದು ದಿವ್ಯಾಂಬರ
ವನಿತೆ ಚಿಕ್ಕಮ್ಮ ಗೋಳಿಡುತ೧೮[34]
ಮನನೊಂದು ಸಿರುಮನ ಪಾದಕ್ಕೆರಗಿ ೧೯[35]ಎನ್ನ೧೯[36]
ಮನೆಗೆ ಮಗನ ಕರೆಸಯ್ಯ              ||೧೪||

೨೦[37]ಕಣ್ತುಂಬಿ ನೋಡುವೆ ಕಂದ ಕಾಚಯ್ಯನ
ಹುಣ್ಣಿವೆ ಚಂದ್ರ ೨೦[38]ನಂತಿಹನ
ಉಣಹೇಳಿ ಕರಸೆಂದು ೨೧[39][ವೀರ]೨೧[40] ಸಿರುಮನೊಳು
ಬಣ್ಣಿಸಿ ಬಾಯ್ಬಿಡುತಿಹಳು               ||೧೫||

ಅಳಲು ೨೨[41]. . . .೨೨[42] ನಳಿನ ೨೨[43]. . . .೨೨[44] ವಾರಿ
೨೩[45]ತಳತಳನಿಳಿವವ ತೊಡೆದು
ಬಳಲ೨೩[46]ದಿರೆಂದು ಸಿರುಮ ಚಿಕ್ಕರಸಿಯ
ನಳಿತೋಳನಪ್ಪಿ ಸಂತೈಸಿ             ||೧೬|| ೪-೧೧೪||

ಬೇಗ ಸಿರುಮ ೨೪[47]ಕರೆ ಕಳುಹಲು ಕಾಚೆಯ
ಆಗ ತನ್ನರಮನೆಯೊಳಗೆ
ಬಾಗೂರ ಪಯಣ೨೪[48] ಬಂಟರಿಗುಡುಗೊರೆ
ಲಾಗಿನಿಂದಲಿ ಕೊಡುತಿರ್ದ             ||೧೭||

ಪಟ್ಟೆಯ ದಟ್ಟಿ ದುಪ್ಪಡಿ ಚಂದ್ರಗಾವಿಯ
೨೫[49]ನುಟ್ಟು, ಕಟ್ಟುವ ಝಲ್ಲಿಗಳ
ಕೊಟ್ಟ ಬದ್ದಿಗೆದಾರ ಮುತ್ತಿ೨೫[50]ನ ಗೊಂಡೆವ
ಕೊಟ್ಟ ಬಂಟರಿಗೆ ಕಾಚಯ್ಯ             ||೧೮||

ಚಿನ್ನದ ಬಟ್ಟಲೊಳಗೆ ಗಂಧ ವೀಳ್ಯವ
೨೬[51]ಮನ್ನಿಸಿ ಪರಿವಾರಕಿಕ್ಕಿ
ಇನ್ನು ಸಂದೇಹವಿಲ್ಲ ೨೬[52]ವೆನುತೊಳಯಕ ಪೋಗಿ
ತನ್ನ ತನುವ ಸಿಂಗರಿಸಿದ               ||೧೯||

ಧುರಧೀರ ಕಾಚಯ್ಯ ದೊರೆ ೨೭[53]ಗಾಸೆಯನುಟ್ಟು
ಮುರಿದು ಚಿತ್ರದ ಚಿಮ್ಮುರಿಯ೨೭[54]
ಬಿರಿದಿನ ಕಾಲಪೆಂಡೆಯ ಪಾದರಸಪಳಿ
ಪರಬಲಾಂತಕನಿಟ್ಟುಕೊಂಡ           ||೨೦||

ಅರ್ಧನಾರಿಯ ಕಸ್ತುರಿ೨೮[55] ಬೊಟ್ಟು ನೊಸಲೊಳು
ತಿದ್ದಿಟ್ಟು ಕಾಚಭೂವರನು
ಮುದ್ದು೨೮[56] ಮುಖವ ಶೃಂಗರಿಸಿ ಕನ್ನಡಿ ನೋಡಿ
ಎದ್ದನು ತಾಯರಮನೆಗೆ*               ||೨೧|| ||೪-೧೦೬||

ಬಂದನು ಎರಡು ಕೈಯಿಂದಲಿ ಹಿಡಿಹೊನ್ನ
ತಂದಿಕ್ಕಿ ತಾಯ ಪಾದದಲಿ
ವಂದಿಸಿ ೨೯[57]ಅಡ್ಡಬೀಳಲು೨೯[58] ತಾಯ ಪಾದಕ್ಕೆ
ಕಂದನನೆತ್ತಿ ಹರಸಿದಳು                 ||೨೨||

ಆಯುವಂತನು ಆಗೊ ವೀರಸಿರಿಯ ಬಾಳೊ
ನಾಯಕರೊಳು ಗುಣಮಣಿಯೆ
ಕಾಯಜ ಕಾಚ ಮಂಡೆಯ ಹೂವು ಬಾಡದೆ
ಬಾಯೆಂದು ಮಗನ ಹರಸಿದಳು       ||೨೩||

ಇಂದುಮುಖಿಯ ಊಳಿಗದ ಹೆಮ್ಮಕ್ಕಳು
ಬಿಂದಿಗುದಕ ಪಡುಗವನು
ತಂದಿಟ್ಟು ಕಾಚನ ಪಾದವ ತೊಳೆದ೩೦[59]ರು೩೦[60]
ಚಂದನಗಂಧಿಯರೆಲ್ಲ                    ||೨೪|| ||೪-೧೦೮||

ಕರೆತಂದರೊಳಯಿಕೆ ಮುತ್ತಿನ ಗದ್ದುಗೆ ಮೇಲೆ
ಅರಸು ಕಾಚನ ಕುಳ್ಳಿರಿಸಿ
ಹರಿವಾಣ ತಟ್ಟೆ ಬಟ್ಟಲ ಮುಂದಿಟ್ಟರು
ದೊರೆವೆಣ್ಗಳೆಲ್ಲರು ಸಹಿತ                ||೨೫|| ||೪-೧೦೯||

ಎಡೆ ಮಾಡಿದರು ಷಡುರಸನ್ನಾಮೃತವನು
ಸಡಗರದಲಿ ಸಖಿಜನರು
ಒಡಗೂಡಿ ಸಿರುಮನ ಮಡದಿ ಚಿಕ್ಕಮ್ಮನು
ಪಿಡಿದು ತುತ್ತನು ಕಾಚನೊಡನೆ        ||೨೬|| ||೪-೧೨೦||

ಕಂದ ಕಾಚಯ್ಯ ನಿನ್ನ ಸುಳುಹ ಕಾಣೆವು ನಾವು
ಇಂದು ಕಂಡೆವು ನಿನ್ನ ಮುಖವ
ಚಂದ ಚಂದದಲಿ ಭಾವಿಸಿ ನೋಡಿ ಮಾತಾಡಿ
ಒಂದಾಗಿ ಊಟವ ಮಾಡಿ               ||೨೭|| ||೪-೧೨೧||

ಕರವ ತೊಳೆದು ಕರ್ಪುರವೀಳ್ಯವ ಕೊಟ್ಟು
ಸಿರುಮನ ಹೆಮ್ಮಕ್ಕಳ್ಳೆಲ್ಲ
ಧುರಗಲಿಯಾಗೆಂದು ವೀರಗಂಕಣಗಟ್ಟಿ
ಹರಸಿ ತುಂಬಿದರು ಸೀಸೆಯನು       ||೨೮|| ||೪-೧೨೨||

ಖಂಡೆಯ ಸಿರಿಯಾಗಿ ಕಂದ ಕಾಚಯ್ಯ ಕಡಿ
ಹಿಂಡು ಮನ್ನೆಯರ ಸಾಲ್ದಲೆಯ
ಚಂಡನಾಡು ನರಸಿಂಹನಸಮದಂಡ
ದಂಡಿಗೆಗಳ ಮಾಡು ಹುಯ್ಯಲನು    ||೨೯||

ಸಿಕ್ಕಿದ ಗೋವಿಂದನಾಯಕ ಕೂಟಕೆ ಹೋಗಿ
ದೊಕ್ಕನೆ ನರಸಿಂಹನವರ
ಲಕ್ಷ ಹೆಣನ ಕೊಂದಲ್ಲದೆ ಬಾಗೂರ
ಒಕ್ಕಲ ಕೊಡದಿರೊ ಮಗನೆ೩೧[61]       ||೩೦||

ಪ್ರಾಣದೆಸೆಯ ಮಾಡಿ ಗೋವಿಂದನೊಡನಾಡಿ
ಕಾಣಬೇಡವೋ ನರಸಿಂಹನ
ಕ್ಷೋಣಿ ಹೆಣನ ಕೊಂದಲ್ಲದೆ ಬಾಗೂರ
ಓಣಿಯ [ಪೊಗ]ದಿರು ಮಗನೆ          ||೩೧||೩೨

ಹುಲ್ಲಮನೆಯ ಕಟ್ಟಿ ಬಾಳುವರೆಲ್ಲಕೆ
ಗೊಲ್ಲನು ಹೇಡಿ ಎಂಬವರು
ಗೊಲ್ಲನ ವಂಶಕೆ ಕೊರತೆಯ ತಂದರೆ
ಕಲ್ಲಗಾಣಕೆ ಹಾಕಿಸುವೆನು               ||೩೨||

ದಿಂಡುರುಳಿಸಿ ನರಸಿಂಹನ ದಂಡನು
ರುಂಡ ಮುಂಡವ ತುಂಡುಗಡಿದು
ಬಂಡಿಲಿ ಹೇರಿ ನಿಲ್ಲದೆ ಬಾಗೂರ
ಖಂಡಿಯ ಕೊಡದಿರು ಮಗನೆ          ||೩೩||

ಚಿತ್ತೈಸೆನುತಲಿ ಉತ್ತಮ ಸತಿಯರು
ಹೆತ್ತ ತಾಯಿ ಚಿಕ್ಕಮ್ಮ
ಎತ್ತಿ ಕೈ ಮುಗಿದು ಕಳುಹಲು ಕಾಚೇಂದ್ರನು
ಮತ್ತೆ ಹೊರಟನರಮನೆಯ             ||೩೪||

ಆಸೆಯಿಲ್ಲದೆ ನಿರಾಸೆಮಠಕೆ ಹೋಗಿ
ಭಾಸುರ ಕೋಟಿಪ್ರಕಾಶ
ಈಶಲಾಂಛನ ಮಹಂತಿಗೆ ಶರಣೆನೆ
ಲೇಸಾಗಲೆಂದರು ಕಾಚಯಗೆ          ||೩೫||

ಹಸ್ತ ಪರುಶ ಮಾಡಿ ಹರಸಿ ವಿಭೂತಿಯ
ಮಸ್ತಕವೆತ್ತಿ ಕಾಚಯ್ಯಗೆ
ವಿಸ್ತರ ನೊಸಲಿಗೆ ಧರಿಸಿ ವಿಭೂತಿಯ
ವಸ್ತು ಮಹಂತು ಕಳುಹಿತ್ತು೩೩[62]        ||೩೬||

ಮೃಡನ ಕಿಡಿಗಣ್ಣಲಿ ಪುಟ್ಟಿದ ಕುವರನ
ಗುಡಿಗೆ ನಡೆದು ಬಂದು ಕಾಚ
ಹಿಡಿಹೊನ್ನ ಕಾಣಿಕೆಯಿಕ್ಕಿ ವೀರೇಶನೆ
ಕೊಡು ಎಂದು ಕೂರ್ತು ಪುಷ್ಪವನು೩೪[63]                                  ||೩೭||

ಕೊಂಡಾಡುತಿಹನ ಭಕ್ತಿಗೆ ಮೆಚ್ಚಿ ವೀರೇಶ
ಇಂಡೆ ದಂಡೆಯ ಪರಿದಿಟ್ಟ
ಕಂಡುಬ್ಬಿ ತೆಗದು ಪ್ರಸಾದವ ಕಾಚಯ್ಯ
ಮಂಡೆಯ ಮೇಲಿಟ್ಟುಕೊಂಡ           ||೩೮||

ದೇವರೆ ಗತಿಯೆಂದು ನಡೆತಂದು ಸಿರುಮನ
ಚಾವಡಿಗೆ ಕಾಚಯ್ಯ ಬಂದ
ಜೀವದಾಸೆಯ ಹಂಗಿಲ್ಲದ೩೫[64] ಬಂಟರ
ಆ ವೇಳೆಯಲ್ಲಿ ಕರೆಸಿದನು              ||೩೯||

ಕರ್ಪುರ ವೀಳ್ಯವ ತರಿಸಿದ ಸಿರುಮೇಂದ್ರ
ಒಪ್ಪದಿಂದಲಿ ಕಾಚಯಗೆ
ಎಪ್ಪತ್ತೇಳು ಮಂದಿ ಬಂಟರ ಹೆಸರನು
ತಪ್ಪದೆ ಹೇಳಿಕೊಂಡು ಬರುವೆ         ||೪೦||[1] [* “ಶಿ” ಪ್ರತಿಯ ಮಾರ್ಜನ್ನಿನಲ್ಲಿ “ಬಾಗೂರಿಗೆ ಕಾಚಯ್ಯನ ಕೊಟ್ಟು, ಕಳುಹಿದ ಪ್ರಸಂಗ” ಎಂದು ಬರೆಯಲಾಗಿದೆ. ಆಮೇಲೆ “ಶ್ರೀ ಗುರುಭ್ಯೋನಮಃ ಪದನು” ಎಂದು ಪ್ರಾರಂಭವಾಗುತ್ತದೆ. ೧೫,೧೬,೧೭ನೆಯ ಗರಿಗಳು ಅರ್ಧ ಮುರಿದಿರುವುದರಿಂದ ಇಲ್ಲಿಂದ ೨೧ನೆಯ ಪದ್ಮದ ವರೆಗಿನ ಯಾವ ಪದ್ಮವೂ ಪೂರ್ಣ ಸಿಗುವುದಿಲ್ಲ (ಸಂ),

[2] ೧-೧ x (ಶಿ)

[3] *-* x (ಶಿ, ಹ)

[4] *-* x (ಶಿ, ಹ)

[5] ೧-೧ x (ಶಿ)

[6] ೨-೨ x (ಇ)

[7] ೩-೩ ಕನ್ನಗಳಾಳಗವು ನಿನಗೆ ಬಾಗೂರಿಗೆ ಮನ್ನಿಸಿ ಕಂದ ಕಾಚಯ್ಯನ ತನ್ನ ಕುಮಾರರೊಳ (ಶಿ)

[8] ೩-೩ ಕನ್ನಗಳಾಳಗವು ನಿನಗೆ ಬಾಗೂರಿಗೆ ಮನ್ನಿಸಿ ಕಂದ ಕಾಚಯ್ಯನ ತನ್ನ ಕುಮಾರರೊಳ (ಶಿ)

[9] ೪-೪ ಯ(ಶಿ)

[10] ೪-೪ ಯ(ಶಿ)

[11] ೫-೫ x (ಶಿ)

[12] ೫-೫ x (ಶಿ)

[13] ೬-೬ x (ಶಿ)

[14] ೬-೬ x (ಶಿ)

[15] ೭-೭ x (ಶಿ)

[16] ೭-೭ x (ಶಿ)

[17] ೮-೮ x (ಶಿ)

[18] ೮-೮ x (ಶಿ)

[19] ೯-೯ x (ಶಿ)

[20] ೯-೯ x (ಶಿ)

[21] ೧೦-೧೦ x (ಶಿ)

[22] ೧೦-೧೦ x (ಶಿ)

[23] *-* ನ(ಶಿ,ಹ)

[24] *-* ನ(ಶಿ,ಹ)

[25] ೧೧-೧೧ x (ಶಿ)

[26] ೧೧-೧೧ x (ಶಿ)

೧೨-೧೨ x(ಶಿ)

೧೩-೧೩ x(ಶಿ)

೧೪-೧೪ x(ಶಿ)

[27] ೧೫-೧೫ x(ಶಿ)

[28] ೧೫-೧೫ x(ಶಿ)

[29] ೧೬-೧೬ x(ಶಿ)

[30] ೧೬-೧೬ x(ಶಿ)

[31] ೧೭-೧೭ ಕಂಬನಿಯ ಬಸಿದಳು (ಶಿ), ಬಿಸಿ ಕಂಬನಿಯ ಬಸಿದಳು (ಹ)

[32] ೧೭-೧೭ ಕಂಬನಿಯ ಬಸಿದಳು (ಶಿ), ಬಿಸಿ ಕಂಬನಿಯ ಬಸಿದಳು (ಹ)

[33] ೧೮-೧೮ x(ಶಿ)

[34] ೧೮-೧೮ x(ಶಿ)

[35] ೧೯-೧೯ x(ಶಿ)

[36] ೧೯-೧೯ x(ಶಿ)

[37] ೨೦-೨೦ x(ಶಿ)

[38] ೨೦-೨೦ x(ಶಿ)

[39] ೨೧-೨೧ x(ಶಿ, ಹ)

[40] ೨೧-೨೧ x(ಶಿ, ಹ)

[41] ೨೨-೨೨ x(ಶಿ, ಹ)

[42] ೨೨-೨೨ x(ಶಿ, ಹ)

[43] ೨೨-೨೨ x(ಶಿ, ಹ)

[44] ೨೨-೨೨ x(ಶಿ, ಹ)

[45] ೨೩-೨೩ x(ಶಿ)

[46] ೨೩-೨೩ x(ಶಿ)

[47] ೨೪-೨೪ x (ಶಿ)

[48] ೨೪-೨೪ x (ಶಿ)

[49] ೨೫-೨೫ x (ಶಿ)

[50] ೨೫-೨೫ x (ಶಿ)

[51] ೨೬-೨೬ x (ಶಿ)

[52] ೨೬-೨೬ x (ಶಿ)

[53] ೨೭-೨೭ x (ಶಿ)

[54] ೨೭-೨೭ x (ಶಿ)

[55] ೨೮-೨೮ ದು x (ಶಿ) *೧೫,೧೬,೧೭ನೆಯ ಗರಿಗಳು ಅರ್ಧದಷ್ಟು, ಮುರಿದಿರುವುದರಿಂದ ಈ ಸಂಧಿಯ ಆರಂಭದಿಂದ ಇಲ್ಲಿಯವರೆಗಿನ ಪದ್ಯಗಳು ಪೂರ್ಣರೂಪದಿಂದ “ಶಿ” ಪ್ರತಿಯಲ್ಲಿ ಸಿಗುವದಿಲ್ಲ (ಸಂ)

[56] ೨೮-೨೮ ದು x (ಶಿ) *೧೫,೧೬,೧೭ನೆಯ ಗರಿಗಳು ಅರ್ಧದಷ್ಟು, ಮುರಿದಿರುವುದರಿಂದ ಈ ಸಂಧಿಯ ಆರಂಭದಿಂದ ಇಲ್ಲಿಯವರೆಗಿನ ಪದ್ಯಗಳು ಪೂರ್ಣರೂಪದಿಂದ “ಶಿ” ಪ್ರತಿಯಲ್ಲಿ ಸಿಗುವದಿಲ್ಲ (ಸಂ)

[57] ೨೯-೨೯ x (ಶಿ)

[58] ೨೯-೨೯ x (ಶಿ)

[59] ೩೦-೩೦ ಳುx(ಶಿ)

[60] ೩೦-೩೦ ಳುx(ಶಿ)

[61] ೩೧ ಈ ಪದ್ಯದ ಬಳಿಕ “ದಿಂಡುರುಳಿಸಿ . . . .” ಎಂದು ಪ್ರಾರಂಭವಾಗುವ ಪದ್ಯ (೨-೩೪) “ಹ” ಪ್ರತಿಯಲ್ಲಿ ಇದೆ (ಸಂ), ೩೨ ಈ ಪದ್ಯ “ಹ” ಪ್ರತಿಯಲ್ಲಿ ಇಲ್ಲ (ಸಂ).

[62] ೩೩. ಈ ಪದ್ಯದ ಉತ್ತರಾರ್ಧ “ಶಿ” ಪ್ರತಿಯಲ್ಲಿ ಇಲ್ಲ (ಸಂ)

[63] ೩೪ ಈ ಪದ್ಯದ ಪೂರ್ವಾರ್ಧ “ಶಿ” ಪ್ರತಿಯಲ್ಲಿ ಇಲ್ಲ (ಸಂ)

[64] ೩೫-೩೫ x(ಶಿ)