*

[1] ಶ್ರೀ ಗೌರಿ [2]ವಾಮಾ[3]ಂಗಾಲಿಂಗಿತ ಗಣನಾಥ
[4][ನಾ][5]ಗರ ಶಶಿರವಿದಲೆಗ
ಯೋಗಿಜನಾನಂದ ಅಸಗೋಡ ಶಂಭು ನೀ
ನಾಗುಮಾಡೆನಗೆ ಸನ್ಮತಿಯ[6]         ||೧||  (|||೧-೨)

[7]ಧರೆಗೆ ಪೊಸತು ಮಾಡುವೆನೆಂದು ಸಿರುಮೇಂದ್ರ
ಅರಿಸಿನ [8]ಬಳೆ[9] ಕಪ್ಪುಗಳನು
[10]ಕೆರಸಿ[11] ಮೊರನು ಸಿಂಬೆ ಕರಿಮಣಿ ಕಡಗವ
ನರಸಿಂಹಗೆ ತರಿಸಿದನು                 ||೨||

ಓಲೆಯ ಬರೆಸಿ ನರಸಿಂಹರಾಯನಿಗೆಂದು
ಹೇಳಿದ ಸಿರುಮಭೂವರನು
ಕೇಳಿ ಒಕ್ಕಣಿಕೆಯನಿಕ್ಕಿ ಬರೆದ ಬೇಗ
ಲೋಲ ಪ್ರಧಾನಿ ಕಲ್ಲರಸ               ||೩||

ಶ್ರೀಮತು ಬಿರಿದು ಬಿರಿದು ಗಂಡರಗೂಳಿ ಗಜಸಿಂಹ ನಿ
ಸ್ಸೀಮರ ಭೀಮ ಲಲಾಮ
ಭೂಮಿಪಾಲಕ ನರಸಿಂಹಗೆ ಸಿರುಮೇಂದ್ರ
ಪ್ರೇಮದಿ ಕಳುಹಿದ ಕಾರ್ಯ            ||೪||

ಗಂಡರ ಗಂಡನು ನರಸಿಂಹರಾಯನ
ಗಂಡನು ಅವ[ನ] ಪೆತ್ತಂಥ
ಗುಂಡರಾಜನ ಗಂಡ ಸಿರುಮಭೂವರ ಪ್ರ
ಚಂಡ ವಿಕ್ರಮಗೆಣೆಯುಂಟೆ              ||೫||

ಅರಿರಾಯರ ಗಂಢ ಆಹವಕತಿ ಲೆಂಡ
ಪರರಾಯರಿಗೆದೆಶೂಲ
ಧುರಗಲಿ ಧೀರ ಶರಭಭೇರುಂಡ ಸಿರುಮ ಎಂದು
ಬರೆದನೋಲೆಯ ಕಲ್ಲರಸ              ||೬||

ಬಾಗೂರ ಕೊಂಡ ಬಿಂಕದ ನರಸಿಂಹರಾಯ
ಹೋಗದೆ ನಿನ್ನ ಪಟ್ಟಣಕೆ
ಈಗಲೆ ಬಹುದು ನೀ ಬೂದಿಯಹಾಳಿಗೆ
ಆಗ ವಾಲೆಯ ಕಳುಹಿದನು             ||೭||

ಕಟ್ಟಿಸಿದುಡುಗೊರೆ ಬರೆದೋಲೆ ಸಹವಾಗಿ
ಭಟ್ಟರ ತಿಪ್ಪನ ಕೈಯ್ಯ
ಕೊಟ್ಟು ಕಳುಹಿದನು ನರಸಿಂಹರಾಯಗೆ
ದಿಟ್ಟ ಸಿರುಮ ಬೇಗದಲಿ                 ||೮||

ಕಳುಹಲು ಭಟ್ಟರ ತಿಪ್ಪ ಬಾಗೂರಿಗೆ
ತಳುಹಿಲ್ಲದೈದಿ ಬಂದವನು
ಛಲದಂಕ ನರಸಿಂಹರಾಯ ಭಾಪುರೆ ಎಂದು
ಒಲಿದು ಕೊಂಡಾಡಿದ ಭಟ್ಟ             ||೯||

ತಂದುಡುಗೊರೆ ವಾಲೆ ಬಳೆ ಕಪ್ಪು ಕಡಗವ
ಮುಂದಿರಿಸಿದ ನರಸಿಂಹನ
ಇಂದೀಗ ಬರಲೆಂದು ಸಿರುಮೇಂದ್ರ ಕಳುಹಿದ
ನೆಂದು ಬಿನ್ನೈಸಿದ ಭಟ್ಟ                  ||೧೦||

ತಳಿಗಿಸಿತ್ತು ನಿತ್ತು ನಡೆ ಚಪ್ಪರ
ಕೆಲದಷ್ಟಗಳು ತನ್ನ ನಿನ್ನ
ಸಿರುಮಭೂವರ ಪಟ್ಟಣರಾಜಿಸು
ನರಸಿಂಹಗೆ ಬಿನ್ನೈಸಿದನು[12]                       ||೧೧||

ಕೊಂಡಾಡಿದ ಭಟ್ಟನ ನೋಡಿ ಮೀಸರ
ಗಂಡ ಸಾಳುವ ನರಸಿಂಹ
ದಿಂಡು ದಿಂಡಿನ ಉಡುಗೊರೆಯಿತ್ತು ಸಿರುಮನ
ಲೆಂಡತನಕೆ ಬೆರಗಾದ[13]               ||೧೨||

ಕರೆಸಿದ ಪ್ರಧಾನಿ ಈಶ್ವರಿನಾಯಕನ
ನರಸಿಂಹಭೂಪ ಬೇಗದಲಿ
ಕರಸಿ ಕೊಟ್ಟ ವಾಲೆಯನೋದಿಸೆನಲಾಗಿ
ಹರುಷದಿ ಪಿಡಿದೋದಿದನು             ||೧೩||

ಶ್ರೀಮತು ಬಿರಿದು ಗಂಡರಗೂಳಿ ಗಜಸಿಂಹ ನಿ
ಸ್ಸೀಮ ವರ ಭೀಮಲಲಾಮ
ಭೂಮಿಪಾಲಕ ಸಿರುಮೇಂದ್ರ ನರಸಿಂಹಗೆ
ಪ್ರೇಮದಿ ಕಳುಹಿದ ಕಾರ್ಯ            ||೧೪|| (|||೩-೪)

ಗಂಡರ ಗಂಡನು ನರಸಿಂಹರಾಯನ
ಗಂಡನು ಅವನ ಪೆತ್ತಂಥ
ಗುಂಡರಾಜನ ಗಂಡ ಸಿರುಮಭೂವರ ಪ್ರ-
ಚಂಡ ವಿಕ್ರಮಗೆಣೆಯುಂಟೆ              ||೧೫|| (|||೩-೫)

ಆರಿರಾಯರ ಗಂಡ ಆಹ[ವಕತಿ] ಲೆಂಡ
ಪರರಾಯರಿಗೆದೆಶೂಲ
ಧುರಗಲಿ ಧೀರ ಶರಭಭೇರುಂಢ ಸಿರುಮ ಎಂದು
ಬರೆದ ಓಲೆಯನೋದಿದರು             ||೧೬|| (|||೩-೬)

ಕೇಳುತ ನರಸಿಂಹರಾಯನು ಆ ಮಾತ
ತಾಳಿದನಾಗ ಕೋಪವನು
ದಾಳಿಲಿ ಗೊಲ್ಲನ ಹಿಡಿಯಾಳ ಹಿಡಿತಹೆ
ಹಾಳು ಮಾಡುವೆ ಬೂದಿಹಾಳ         ||೧೭||

[14]ಕೇಳಿ ಈಶ್ವರಿನಾಯಕ[15] ಬೂದಿಹಾಳನು
ಧೂಳಿಕೋಟೆಯ ಮಾಡಿಕೊಂಬಾ
ಆಳೆಷ್ಟು ಆನೆ ಕುದುರೆ ಎಷ್ಟು ಅವನಿಗೆ
ಹೇಳೆಂದು ನರಸಿಂಹ ನುಡಿದ          ||೧೮||

ಮೂರು ಸಾವಿರ ಆಳು *[16][ಮುನ್ನೂರು]*[17] ಕುದುರೆಯ
ಊರೇನು ರಾಜ್ಯವೇನವನ
ಶೂರತ್ವವುಳ್ಳವನೆನೆ ನರಸಿಂಹ ಕೇಳಿ
ಮೀರಿ ಕೋಪದಲುರಿದೆದ್ದ೧೦[18]          ||೧೯||

ನಡೆಯಿತು ಕರಿ ತುರಗವು ಕಾಲಾಳೆಲ್ಲ
ಹಿಡಿಯದೆ ಹಲವು ಬಗೆಯಲಿ
ಸಡಗರದಲಿ ಸಾಲಿಟ್ಟವು ಸತ್ತಿಗೆ
ಹಿಡಿದವು ಮಾನ್ಯ ಮನ್ನೆರಿಗೆ            ||೨೦||

ಧರೆ ಮೊಳಗಿತು ನಭ ನಡುಗಿತು ಕುಲಗಿರಿ
ತೊಲಗದೆಕ್ಕಲ ಹೋಳಾಗೆ
ಉಲಿವ ವಾದ್ಯದ ರವಸದಿ ನರಸಿಂಹರಾಯ
ಬಲು ಬಲ ಸಹಿತ ತೆರಳಿದನು          ||೨೧||

ಹರಿದಾರಿಯಲಿ ಬಂದು ಬಲ್ಲಾಳಪುರದಲ್ಲಿ
ನರಸಿಂಹ ದಂಡ ಬಿಡಿಸಿದನು
ಕರೆ[ಸೆ] ಈಶ್ವರನಾಯ್ಕನಿಲ್ಲಿಂದಿತ್ತಲಿ
ಸಿರುಮನ ಸೀಮೆಯೆಂದೊ *[19][ರೆದ]*[20]         ||೨೨||

ಆಡಿದ ನರಸಿಂಹರಾಯನಾಕ್ಷಣದಲಿ
ನಾಡ ಪಂಥದ ಗೊಲ್ಲನಿರವ
ಕಾಡಿನ ಗಿಡ ೧೧[21][ತರು ಬಾಣ]೧೧[22] ಬಿಲ್ಲುಗಳಾಗಿ
ಆಡು ಆನೆಗಳ ಮುರಿವವು              ||೨೩||

*[23]ಕಲ್ಲೆಲ್ಲ*[24] ಕನಕವು ನವರತ್ನ ಪದ್ಮವು
ಹುಲ್ಲೆಗಳ ಝಲ್ಲಿಯ ಮೃಗವು
ಹುಲ್ಲೆ ಮೂವರ  ಕಚ್ಚಿ ಕೊಲ್ಲುವವಂತಲ್ಲಿ
ಗೊಲ್ಲ ಸಿರುಮನ ಸಾಹಸದಿ            ||೨೪||

ಮೈಮರದಿರಬೇಡ ರಾಯ ದಂಡನು ಹೊಕ್ಕು
ಒಯ್ವನು ಸೆರೆಸೂರೆ ಮಾಡಿ
ಹುಯ್ಯಲು ಮಾಡಿ ಹೊರಡೆ ಗೊಲ್ಲ ಸಿರುಮನು
ಹೊಯಿಸುವ ತಲೆಗಳೆಲ್ಲವನು          ||೨೫||

ಕೇಳಿ ಭೀತಿಯನು ನರಸಿಂಹರಾಯನು ತನ್ನ
ಆಳು ಕುದುರೆ ಅರಸಗಳ
ಬಾಳ *[25][ಜ]*[26]ತನ ಈಶ್ವರನಾಯಕ ಗೊಲ್ಲನ
ಹೇಳುತಹರೆ ಸಾಹಸವನು              ||೨೬||

ಆಡಿದ ಮಾತಿಗೆ ಕುದುರೆ ೧೨[27]ಕಾಲಾ೧೨[28]ಳೆಲ್ಲ
ಜೋಡನಿಳುಹದೆ ರಾವುತರು
ಪಾಡು ಪಂಥಗಳ ಬಿಟ್ಟೆಲ್ಲ ಗೊಲ್ಲನ
ನಾಡ ಹೊಕ್ಕೆವು ಕೆಟ್ಟವೆನುತ           ||೨೭||

ಬೆಚ್ಚಿ ಬೆದರುತಿರೆ ಬೆಳಗಾಗಿ ನರಸಿಂಹ
ಎಚ್ಚತ್ತು ಕೂಚೆ ಮಾಡಿಸಿದ
ನಿಶ್ಚಯಿಸಿ ಬಲ್ಲಾಳಪುರದಿಂದ ಮುಂದಕ್ಕೆ
ಅಚ್ಚಾಳು ಸಹ ತೆರಳಿದನು              ||೨೮||

ಮಂದಿ ಕುದುರೆ ಆನೆ ದಳವೆದ್ದು ನಡೆಯಲು
ಕೆಂಧೂಳ ಮುಸುಕಿತಂಬರಕೆ
ಛಂದ ಛಂದದ ನೇಜೆ ಠೆಕ್ಕೆ ಎತ್ತಿತು ಮುಂದೆ
ಹಿಂದೆ ಬರುವ ಭರವಸಕೆ                ||೨೯||

ಪಾಯದಳವು ಸಹ ನರಸಿಂಹರಾಯನು
*[29][ಕೈಯಿಗನೂರ]*[30] ತೆವರಿನಲಿ
ಬಂದು ಪೌಜ ಮಾಡಲಿ ಬೇಗ ಕಂಡರು
ಛಂದದಿಂದಲಿ ಬೂದಿಹಾಳ+[31]          ||೩೦||

ಸುತ್ತಣ ಕೋಟೆಗೆ ಎತ್ತಿದ ತೋರಣ
ಅತ್ಯಂತ ಬಿರಿದ ಬಿಂಕದಲಿ
ಮೃತ್ಯು ಬಾಯಿದೆರದೊಲು ಬೂದಿಹಾಳು ದಂ
ಡೆತ್ತಿ ಬರಲು ನುಂಗುವಂತೆ             ||೩೧||

ಇರಲಿತ್ತ ಬೂದಿಹಾಳ ವೀರ ಸಿರಿಯ ಕಂಡು
ನರಸಿಂಹನ ಮನ್ನೆಯರು
ಧರೆಯೊಳು ಕಣ್ಣಹಬ್ಬವ ಕಂಡೆವೆನುತಲಿ
ಸಿರಬಾಗಿ ಕರಗಳ ಮುಗಿದು            ||೩೨||

ಬ್ರಹ್ಮ ಸೃಷ್ಟಿಸುವ ಪಟ್ಟಣಕೆ ಇದರ ಪ್ರತಿ
ನಿರ್ಮಿಸುವರೆ ಬೇರಿಲ್ಲ
ಪೆರ್ಮೆಯೊಳಹ ಬೂದಿಹಾಳ ದೂರದಿ ನೋಡಿ
ವರ್ಮವ ತೊಟ್ಟ ನರಸಿಂಹ             ||೩೩||

ಸುಡಿಸುವೆ ಬೂದಿಹಾಳನು ಕಡಿಸುವೆ ಸಿರುಮನ
ಒಡನೊಕ್ಕಲಾಗಿ ಇದ್ದವರ
ಹಿಡಿಸುವೆ ಸೆರೆ ಕೋಳನೆಂದು ನರಸಿಂಹ ತನ್ನ
ಪಡೆ ಸಹ ಪಂಥದಿ ನಡೆದ               ||೩೪||

ಹಿಂಡು ಹಿಂಡಾಗಿ ಕೈಯಿಗನೂರ ತೆವರಿಲಿ
ದಂಡು ಬಿಟ್ಟಿರಲಿದಿರಾಗಿ
ಕಂಡು ಬೇಹಿನ ಆಳು ಸಿರುಮಗೆ ಹೇಳಲು
ಲೆಂಡವಿಕ್ರಮನನುವಾದ೧೩[32]                       ||೩೫||

ಪಟ್ಟೆಯ ದಟ್ಟಿ ದುಪ್ಪಟಿ ಚಂದ್ರಗಾವಿಯ
ಉಟ್ಟನು ಸಿರುಮಭೂವರನು
ಅಷ್ಟದಿಕ್ಕಿನ ರಾಯರ ಗಂಡನೆಂಬ
ಮೆಟ್ಟಿದನುಲಿವ ಪೆಂಡೆಯವ            ||೩೬||

ಶಂಕೆಯಿಲ್ಲದೆ ನರಸಿಂಹನ ಗಂಡನೆಂಬ
ಕಂಕಣವನು ಧರಿಸಿದನು
ಬಿಂಕವ ಮುರಿವೆನೆನುತ ನರಸಿಂಹನೆಂದು
ಅಂಕಕೆ ಶೃಂಗಾರವಾದ                  ||೩೭||

ಆರಿರಾಯರ ಗಂಡ ಆಹವಕತಿ ಲೆಂಡ
ಪರರಾಯರಿಗೆದೆಶೂಲ
ಧುರಧೀರ ಶರಭ ಭೇರುಂಡ ಸಿರುಮ ಎಂದು
ಒರಲಿತು ಕಹಳೆ ಮೂದಲಿಸಿ            ||೩೮||

ಬಂದರು ವೀರದಿ ವಿಕ್ರಮರೆಲ್ಲ
ಛಂದದಿ ಶೃಂಗಾರವಾಗಿ
ತಂದೆಯ ಚರಣಕೆರಗಿ ಕಾಚ ಮಲ್ಲಣ್ಣ
ನಿಂದರು ಸಿರುಮನೋಲಗದಿ          ||೩೯||

ಹಿರಿಯೂರ ಕಸವನ ಗಂಡನೆಂಬುವದೊಂದ
ಕರಿಯ ಹುಲ್ಲೆಯ ತರಿಸಿದನು
ದೊರೆರಾಯ ಮಲ್ಲಗೆ ಕೊಡಿಸಿದ ಸಿರುಮೇಂದ್ರ
ಹರುಷದಿಂದಲಿ ನಸುನಗುತ           ||೪೦||

ಪರಬಲಭೀಮ ಕಾಚಯ್ಯಗೆ ಕೊಡಿಸಿದ
ಗರುಡಪಕ್ಷಿಯ ಬೇಗದಲಿ
ನರಸಿಂಹನ ಗಂಡನೆಂಬ ತೇಜಿಯ
ಇರದೇರಿದ ಸಿರುಮೇಂದ್ರ               ||೪೧||

ಸುತ್ತಣ ರಾಯರ ಗಂಡನೆಂಬುವದೊಂದು
ಸತ್ತಿಗೆಯನು ಹಿಡಿಸಿದನು
ಮೊತ್ತದ ಮೋಸದ ಮಾನ್ಯರ ಗಂಡನೆಂದು
ಎತ್ತಿತು ಬಿರಿದಿನ [ಢಾ]ಲು               ||೪೨||

ಗಿಡಿಬಿಡಿ  ಹೊಡೆವ ತಂಬಟ ನಿಸ್ಸಾಳವು
ಜಡಿವ ಕಹಳೆ ಲೆಗ್ಗೆವರಿಯ
ಕೆಡೆ ಕೆಡೆಯೆಂದು ಭೋರಿಡುವ ಹೆಗ್ಗಾಳೆಯು
ಗಡಣದಿಂದಲಿ ಹೊರವಂಟ             ||೪೩||

ಛಪ್ಪನ್ನದೇಶ ಕೋಳಾಹಳನೆನಿಸುವ
ತಪ್ಪದೆ ಸಿರುಮಭೂಪತಿಯು
ಕಪ್ಪುಗೊರಳನ ಪಾದವೆ ಗತಿ ಎನುತಲಿ
ಉಪ್ಪರಿಸಿದ ರಣದೊಳಗೆ               ||೪೪||

ಪಂತಿ ಊಟದ ಬಲು ಪಂಥದೆಕ್ಕಟಿಗರು
ಹೊಂತಕಾರಿಗಳು ಕೊಮಾರರನು
ಮುಂತೆ ಕರಸಿಕೊಂಡು ಹೊರಟು ಸಿರುಮೇಂದ್ರ
ನಿಂತನು ಬೂದಿಹಾಳ ಮುಂತೆ        ||೪೫||

ಒಗ್ಗಿಲಿ ನಡೆದು ಬಂದುದು ವೀರಭಟರೆಲ್ಲ
ವೆಗ್ಗಳ ಸಿರುಮನ ಬಲವು
ಕೊಬ್ಬಿದ ನರಸಿಂಹನ ಭಟರನು ಬೇಗ
ಇಬ್ಭಾಗ ಮಾಳ್ಪೆನೆಂದೆನುತ೧೪[33]      ||೪೬||

ಮೀಟು ಮೀಟಾದ ಬಂಟರನಾದು ಕಬ್ಬಿನ
ತೋಟದೊಳಗೆ ಅಡಗಿಸಿದ
ಪಾಠಕರುಲಿಯೆ ತುರಗಮನೇರಿ ಸಿರುಮೇಂದ್ರ
ದಾಟಿ ಮುಂದಕೆ ಮೂದಲಿಸಿ            ||೪೭||

ಕೆಡೆ ಕೆಡೆ ಎಂದು ಕಹಳೆಯನಿಕ್ಕಿ ಪವುಜನು ಮಾಡಿ
ನಡೆದನುದ್ಧಟೆಯಿಂದ ಸಿರುಮ
ಸುಡಿಸುತ್ತ ಪೆಟಲಿಲಿ ನರಸಿಂಹನ ಚೂಣಿ
ಕಿಡಿ ಕಿಡಿಯಾಗೀಡಾಡಿದನು                        ||೪೮||

ಚೆಂಡು ಲಗ್ಗೆಯ ತಾಗಿದಂತೆ ನರಸಿಂಹನ
ದಂಡ ತಾಕಿದ ಸಿರುಮೇಂದ್ರ
ಹಿಂಡು ಕುರಿಯೊಳು ಹೆಬ್ಬುಲಿ ಹೊಕ್ಕಂತೆ
ಕಂಡ ಕಡೆಗೆ ಕಡಿದಿರಿಯೆ                ||೪೯||

ಅಂಬ ಕುಸಿಕಿರಿದೆತ್ತಿ ಲಾಘಿಸಿ ಬಿಲ್ಲನು
ತುಂಬ ತಗೆದು ತಿರುಹುತಲಿ
ಕಂಬದೂರ ಭೈರನೆಚ್ಚರೆ ಕುದುರೆಯು
ಡೊಂಬ ಲಾಗವ ಹೊಯಿದಂತೆ        ||೫೦||[1] *+ಶ್ರೀ ಗುರುಭ್ಯೋನಮಃ ಪದನು(ಶಿ)

[2] ಮಾಲಾ(ಶಿ)

[3] ಮಾಲಾ(ಶಿ)

[4] ಸಾ (ಶಿ)

[5] ಸಾ (ಶಿ)

[6] , ಇದು ಮೊದಲನೆಯ ಸಂಧಿಯ ಎರಡನೆಯ ಪದ್ಯವಾಗಿದೆ. “ಪ್ರತಿಯಲ್ಲಿ ಇದು ಇಲ್ಲ (ಸಂ)

[7] +ರಾಗಭೈರವಿ ()

[8] ಬೇಳೆ (ಶಿ)

[9] ಬೇಳೆ (ಶಿ)

[10] ಕೆರೆ (ಶಿ)

[11] ಕೆರೆ (ಶಿ)

[12] ಪದ್ಯಶಿಪ್ರತಿಯಲ್ಲಿ ಇಲ್ಲ, ತುಂಬ ಅಶುದ್ಧವಾಗಿದೆ. (ಸಂ)

[13] . ಇಲ್ಲಿಂದ ಮುಂದಿನ ಪದ್ಯಗಳು ಪ್ರತಿಯಲ್ಲಿ ಇಲ್ಲ (ಸಂ).

[14] x ()

[15] x ()

[16] *_* ಮೂವತ್ತು (ಶಿ)

[17] *_* ಮೂವತ್ತು (ಶಿ)

[18] ೧೦ ಪದ್ಯಪ್ರತಿಯಲ್ಲಿ ಇಲ್ಲ (ಸಂ)

[19] *_*ಬ್ಬ (ಶಿ,).

[20] *_*ಬ್ಬ (ಶಿ,).

[21] ೧೧೧೧ ತುರು ಬೇಡು (ಶಿ)

[22] ೧೧೧೧ ತುರು ಬೇಡು (ಶಿ)

[23] ** ಕಾಡೆಲ್ಲ ()

[24] ** ಕಾಡೆಲ್ಲ ()

[25] *_* x (ಶಿ, )

[26] *_* x (ಶಿ, )

[27] ೧೨೧೨x(ಶಿ)

[28] ೧೨೧೨x(ಶಿ)

[29] *_* ಕೈಗಿ ನಡುವಿನ (ಶಿ, )

[30] *_* ಕೈಗಿ ನಡುವಿನ (ಶಿ, )

[31] + ಪದ್ಯಪ್ರಾಸ ತಪ್ಪಿದೆ (ಸಂ).

[32] ೧೩ ಮುಂದಿನಪಟ್ಟಿಯ ದಟ್ಟಿ . . . . ”  ಎಂಬ ಪದ್ಯ ಮೊದಲುಗೊಂಡುಛಪ್ಪನ್ನದೇಶ . . . .” ಒಳಗೊಂಡ ಪದ್ಯಗಳುಪ್ರತಿಯಲ್ಲಿ ಇಲ್ಲ (ಸಂ).

[33] ೧೪ ಪದ್ಯಪ್ರತಿಯಲ್ಲಿ ಇಲ್ಲ (ಸಂ).