ಒಡನೆ ರಾಹುತರು ಬಿದ್ದೇಳದ ಮುನ್ನಲಿ
ತುಡುಕಿ ಚೂಣಿಯಲಿ ಮುಂದಲೆಯ
ಪಿಡಿದು ಕಡಿದು ಸಿರುಮೇಂದ್ರ ಚಿತ್ತೈಸೆಂದು
ನುಡಿದು ನಿವಾಳಿ ಹಾಕಿದರು ||೫೧||
ಸಿರುಮನ ಪರಿವಾರದುರುವಣೆಯನು ಕಂಡು
ನರಸಿಂಹನ ಮನ್ನೆಯರು
ಕರಿ ತುರಗವು ಬಿಲ್ಲ ಹರಿಗೆ ಸಬಳಿಗರು
ಇರದೆಲ್ಲ ಮೋಹರಿಸಿದರು ||೫೨||
ಎಲ್ಲಿ ಹೊಕ್ಕರೆ ಬಿಡಬೇಡ ಬೂದಿಯಹಾಳ
ಗೊಲ್ಲ ಸಿರುಮನೆಂದೆನುತ
ಬಲ್ಲಿದ ನರಸಿಂಹರಾಯನ ರಾಹುತ
ರೆಲ್ಲರೊಂದಾಗಿ ಏರಿದರು ||೫೩||
ಕಂಡನು ನರಸಿಂಹನುರವಣೆಯ ಪ್ರ
ಚಂಡ ಸಿರುಮಭೂವರನು
ಪುಂಡರೀಕನೆಂಬ ತೇಜಿಯನೇರಿ ತನ್ನ
ಖಂಡೆವ ಕಿತ್ತು ನಡೆದನು ||೫೪||
ಬೀಗಿ ಬರುವ ಪರಿವಾರವ ನಿಲಿಸುತ
ಹೋಗದಿರಿ ಹುಸಿ ಹುಸಿ ಎನುತ
ಕೂಗಿ ಬೊಬ್ಬಿರಿದು ಹತ್ತೆಂಟು
ತಾಗಹೊಯಿದು ಹೊಳಚಿದನು ||೫೫||
ಜರಿದು ಹೋಗಲು ಶಿರ ಹರಿದು ಶೋಣಿತದೊಳು
ಸುರಿದು ಕರುಳ ಗಾಯದಲಿ
ನರಳುತ ಹೊ[ರಳುತ ಬಿದ್ದ]ರು ರಣದೊಳು
ಸಿರುಮನ ಕೈಚಳಕದಲಿ ||೫೬||
*[1]ಕೆಂಡದೊಸಂತವನಾಡಿದಂತಾಯಿತ್ತು*[2]
ರುಂಡಮುಂಡವು ತುಂಡುಗಡಿದು
ಹಿಂಡು ಭೂತಕೆ ಔತಣ ಸಿರುಮನ ರಣ
ಮಂಡಲದೊಳು ಪೊಸತೆನಿಸಿ ||೫೭||
ಕಿಚ್ಚುಗಳಿಗೆ ಹೆಚ್ಚಿ ನಲಿವಂತೆ ಸಿರುಮನ
ಮೆಚ್ಚಿನ ಕೈಜೀತದವರು
ಎಚ್ಚರಂಬಿನ ಮಳೆ ಸುರಿವಂತೆ ತೆಲುಗರ
ಕೊಚ್ಚಿದರು ಓಡುವಂತೆ ||೫೮||
ಕಡಲು ಕದಡಿದಂತೆ ರಾಯನ ದಂಡೆಲ್ಲ
ಕಡುಗಲಿ ಸಿರುಮನ ಭಟರು
ಗಡೆ ಹಡಪವು ಮೊಟ್ಟೆ ಗಡಿಗೆಯನೊಡೆ ಹಾಯ್ಕಿ
ಅಡವಿ ಗಿಡಕೆ ಓಡಿದರು ||೫೯||
ಘಾಸಿಯಾದೆವು ಕೆಟ್ಟವೆನುತಲೋಡುವರನ್ನು
ರೋಷದಿ ನರಸಿಂಹ ಕಂಡು
ಮೀಸೆಯ ಮುರಿದು೧೫[3] ಅವಡಗಚ್ಚಿ ತುರಗವ
ಸಾಸಿ೧೫[4]ರ ಮುಖದೊಳೇರಿದನು ||೬೦||
ಬಂದ ದಂಡನು ಚೂಣಿಯಲಿ ಮುಂದುಗೆಡಿಸಿದ
ಹಿಂದಕೆ ತೆಗಸಿ ಹುಯ್ಯಲನು
ನಿಂದು ಕಬ್ಬಿನ ತೋ[ಟ]ದೊಳು ಅಡಗಿದ ಬಲು
ಮಂದಿಯ ಹೊರಡ ಹೇಳಿದನು ||೬೧||
ಹಸಿದ ಹುಲಿಯು ಹೊಂಚಿ ಹೊಯಿದು ಹುಲ್ಲೆಗಳನು
ಅಸುವ ಕೆಡಹಿ ಹಿಂ[ಡುವಂ]ತೆ
ಕುಸುರಿದರಿದರು ನರಸಿಂಹನಸಮ೧೬[5]ದಂಡನು೧೬[6]
ದೆಸೆಯುಳ್ಳ ಸಿರುಮನ ಭಟರು ||೬೨||
ಹುತ್ತವನೇರಿ ಹುಲ್ಲನು ಕಚ್ಚಿ ಮರಗಳ
ಹತ್ತಿ ೧೭[7]ಪ್ರಾಣವ ಕಾಯೆನುತ೧೭[8]
ಕತ್ತಿ ಕೈದುವ ಬಿಟ್ಟು ಜಲವ ಹೊಕ್ಕವರನು
ಮತ್ತೆ ಮನ್ನಿಸಿ ಬಿಡಿಸಿದನು ||೬೩||
ಕಡಿದರು ಕಾಲಾಳ ಹಿಡಿದರು ತುರಗವ
ಗಡೆಯ ಹೊರೆಯ ಕಟ್ಟಿ[ದರು]
ತುಡುಕಿ ಬಂಗಾರ ಪೆಟ್ಟಿಗೆ ಪಟ್ಟೆ ಝಲ್ಲಿಯ
ಒಡೆಯ ಸಿರುಮಗೊಪ್ಪಿಸಿದರು ||೬೪||
ಸಾಳುವ ನರಸಿಂಹರಾಯನ ಪಾಳ್ಯದ
ಸೂಳೆಯರನು ಸೆರೆವಿ[ಡಿದು]
ಕೋಳ ಹಿಡಿದು ಕೊಂಡೊಂದಾಳು ಸಿಕ್ಕದೆ ಬೂದಿ
ಹಾಳ ಹೊಕ್ಕನು ಗೊಲ್ಲ ಸಿರುಮ ||೬೫||
ಮುಂಚೂಣಿಯ ಗೆದ್ದು ಹೋದ ಸಿರುಮನೆದ್ದು
ಕ[ಂಜ]ಸಖನು ನರಸಿಂಹ
ಅಂಜದೆ ಉದಯಾದ್ರಿ ಅಡರಿದ ಹೊತ್ತಿಲಿ
ಮಂಜು ಗಿರಿಯ ಕವಿದಂತೆ ||೬೬||
ಮೀನಿಗೆ ಮೀನ್ಬುಲಿ ಜೋಡಿಸಿ
. . . . . . . . ಸಹಿತ ನರಸಿಂಹ
ಏನು ಎಳ್ಳನಿತು ಕಾಣಿಸದಂತೆ ಬೂದಿಹಾಳ
ತಾನು ಮುತ್ತಿದ ಸುತ್ತ ಬಳಸಿ೧೮[9] ||೬೭||
ಶಂಕೆಯಿಲ್ಲದೆ ರಾಮಘಟೆ . . . . . . ನಡೆತಂದು
ಲೆಂಕೇಲಿ ಬಂದು ಬಿಟ್ಟಂತೆ
ಬಿಂಕದಲಿ ಬೂದಿಹಾಳ ಕೋಟೆಯ ಸುತ್ತ
ಅಂಕಕೆ ಬಂದು ಬಿಡುವಾಗ ||೬೮||
ಕುಡುಮು ತಂಬಟ ಗಿಡಿಬಿ[ಡಿ]೧೮[10]ನಾಗಸ೧೮[11]ರದೊಳು
ನುಡಿವ ತಪ್ಪಟೆ ಕೊಂಬು ಕೊಳಲು
ಹಿಡಿದ ಕಹಳೆಯ ಧ್ವನಿಯನು ಗೊಲ್ಲ ಸಿರುಮನ
ಮಡದಿ ಚಿಕ್ಕಮ್ಮ ಕೇಳಿದಳು ||೬೯||
ಸಿರುಮನ ಬಿರುದಿನ [ಕ]ಹಳೆಯಲ್ಲವು ಎಂದು
ಹರಿದುಪ್ಪರಿಗೆಯನೇರಿದಳು
ಪರಿಪರಿ ಪವುಜಿಕ್ಕಿ ಬೂದಿಹಾಳ ಹೊರಗೆಲ್ಲ
ನರಸಿಂಹನ ದಂಡಿರಲು ||೭೦||
ಸಿರಿಯ[ಕಂ]ಡೆನು ಸೌಭಾಗ್ಯವ ಕಂಡೆನು
ಧರೆಗೆ ಪರ್ವತ ತಿರುಮಲೆಯ
ಪರುಷೆಯ ಕಂಡೆನು ಪರ್ವತಲಿಂಗನ
ವರದಿ ಸಿರುಮನ ಸಾಹಸದಿ ||೭೧|| (||೬.೩)
ಬೂದಿಹಾಳು ಪುಣ್ಯಕ್ಷೇತ್ರವು ಸಿರುಮನ
ಪಾದವ ಕಾಬ ಮಾನ್ಯರಿಗೆ
ಮೇದಿನಿಯೊಳು ಮಲೆವರ ಕರಿಸಿಂಹ ನೇ
*[12][ರಾದ]*[13] ವೈರಿಗೆ ವಜ್ರ[ದಂ]ಡ ||೭೨||
ಮಾನ್ಯ ಸಿರುಮನ ರಾಣಿ ಚಿಕ್ಕಮ್ಮನು
ತನ್ನ ಮನದಣಿಯ ನೋಡಿದಳು
ಮನ್ನಿಸಿದಳು ನರಸಿಂಹನ ಮನದೊಳು
ಮಾನ್ಯ ಮಾರ್ಬಲ ಕವು[ತುಕವ] ||೭೩||
ಉಣ್ಣಲಿಕ್ಕುವೆನೆಂದು ರಣದಲಿ ಸಿರುಮಗೆ
ಮಣಿದು ಬಿನ್ನಹವ ಮಾಡಿದಳು
ಕಣಜದಕ್ಕಿಯ ತೆಗದಡಿಗೆ೧೯[14] ಯನಾಯತ ಮಾಡಿ
ಕಣಕ ಕಡಲೆ ಬೆಲ್ಲಗಳನು೧೯[15] ||೭೪||
ಪಂಚ ಕಜ್ಜಾಯ ಪಾಯಸ ಬೋನ ಫಲವಸ್ತು
ಮಿಂಚುವ ಬಗೆಯು ಮೇಲೋಗರವ
ಅಂಚೆಗಮನೆ ಅಡಿಗೆಯ ಮಾಡಿ ವಿಷಗಳ
ವಂಚನಿಲ್ಲದೆ ತುಂಬಿದಳು ||೭೫||
ಕಾಳಕೂಟದ ವಿಷಗಳನಿಕ್ಕಿ ಅಡಿಗೆಯ
ಬಾಳ ಪರಿಯಲಿ ಸಂಭ್ರಮಿಸಿ
ಜೋಳಿ ಜೋಳಿಯ ಹೆಡಿಗೆಯ ತುಂಬಿ ಮುಸುಕಿಟ್ಟು
೨೦[16]ಹಾಳತೆ೨೦[17]ಗಳ ಹಾಸಿದರು ||೭೬||
ಹದಿನಾರು ವರುಷದ ಹರೆಯದ ಕೊಮರರ
ಚದುರೆ ಚಿಕ್ಕಮ್ಮ ಕರಸಿದಳು
ಮುದದಿಂದ ಛಂದ ಛಂದದ ಸೀರೆಗಳನಾಗ
ಮದಗಜಗಮಗೆ ಉಡಿಸಿದಳು ||೭೭||
ಮುಡಿಗಳನಿಕ್ಕಿ ನಿರಿಯನಿಟ್ಟು ಪಂಥದಿ
ಕಡಗಲಿಗಳು ಒಂದಾಗಿ
ಹೆಡಗೆಗಳನು ಹೊತ್ತು ನಡೆದರೊಗ್ಗೊಡೆಯದೆ
ಮಡದಿಯರಂತೆ ಮೋಹರಿಸಿ ||೭೮||
ಬಂದರು ಊರ ಹೊರಟು ದೇವಿಗೆರೆಗಾಗಿ
ನಿಂದರು ಬಳಸಿ ಕೋಡಿಯಲಿ
ತಂದಿಳುಹಿದರು ಕಣಗಿಲ ತೋಪಿನ ಸುತ್ತ
ಚಂದ ಚಂದದ ಹೆಡಿಗೆಗಳ ||೭೯||
ರಂಗವಾಲೆಯ ಹೊಯಿದು ಬುತ್ತಿಗಳನೆ ಇಕ್ಕಿ
ಹಿಂಗದೆ ಧೂಪದೀಪಗಳ
ವಿಂಗಡದಲಿ ಗಂಧಾಕ್ಷತೆ ವೀಳ್ಯವ
ಸಂಗ್ರಾಮದೆಡೆಯ ಪೂಜಿಸಲು ||೮೦||
ಮೂರು ಜಾವದ ವ್ಯಾಳ್ಯದಲಿ ರಂಗವ ಹೊಯಿದು
ಸೇರಿಸಿ ಬಾಳೆಲೆ ಹಾಸಿ
ನಾರಿಯರಂತೆಡೆಮಾಡಿದರು ನಲವಿಂದ
ಕಾರುಣಿಕವ ಮಾಡುತಿರಲು ||೮೧||
ಕಂಡರು ನರಸಿಂಹರಾಯನ ಸುಭಟರು ಪ್ರ
ಚಂಡ ಸಿರುಮನವರು ಬಂದು
ದುಂಡುದೇವರ ಪೂಜಿಸುವ ಬೆಡಗನಾಗಿ
ಕಂಡುರವಣಿಸಿತೊಗ್ಗಿನಲಿ ||೮೨||
ಕರಿ ತುರಗವು ಕಕ್ಕಟ ಈಟಿ ಸಬಳವು
ಹರಿಗೆ ಬಿಲ್ಲಿನ ಪೆಟಲವರು
ಪರಿವಾರ ಬೊಬ್ಬಿರಿದೊದಗಿ ಬರಲು ಕಂಡು
ಸಿರುಮನವರು ಚಲ್ಲುವರಿದು ||೮೩||
ಹೆಡಿಗೆಗಳನು ಬಿಟ್ಟು ಉಡಿಗೆಗಳನು ಬೇಗ
ಎಡದ ಕೈಯ್ಯಲವಚುತಲಿ
ಮುಡಿಗಳ ಕೆದರಿ ಬಾಯ್ಗಳ ಹೊಯಿಕೊಳುತಲಿ
ಕಡುಗಲಿಗಳು ಬರಲಿತ್ತ ||೮೪||
ಎಡೆಗಳ ಕಂಡು ಒಬ್ಬರಿಗೊಬ್ಬರ ನೂಕಿ
ಹೆಡಿಗೆಗಳನು ಸೂರೆಮಾಡಿ
ಕಡುಬು ಕಜ್ಜಾಯ ಪಾಯಸನುಂಡು ಮದಸೊಕ್ಕಿ
ಕಡಿದಾಡಿದರು ತಮ್ಮೊಳಗೆ ||೮೫||
ಹುಚ್ಚು ಹಿಡಿದು ಪಾಳ್ಯಯದೊಳಗೆಚ್ಚಾಡಿ
ಕಚ್ಚುವರಾನೆ ಕುದುರೆಯ
ಕಿಚ್ಚುಗಳನು ತಂದು ತಮ್ಮ ಗೂಡಲಿಗಿಕ್ಕೆ
ಬೆಚ್ಚಿ ಬೆದರೆ ಪಾಳಯವು ||೮೬||
ದಂಡಿನೊಳಗೆ ಗಲಭೆಯ ಕೇಳಿ ನರಸಿಂಹ
ಮಂಡಲಪತಿ ಹೊರಹೊರಟ
ಲೆಂಡಾಟವೇನೆಂದು ಬಿನ್ನೈಸಲು ಗಂಗಯ್ಯ
ಕಂಡಾ ಸ್ಥಿತಿಯನೆಲ್ಲವನು ||೮೭||
ಹುಚ್ಚಡಿಗೆಯನಟ್ಟು ದೇವರ ಪೂಜಿಸಿ
ಕೆಚ್ಚೆದೆ ಸಿರುಮನ ಭಟರು
ಹೆಚ್ಚಿನ ಕವುಟಳೆ ಮಾಡಿ ಪಾಳಯದೊಳ
ಗಾಶ್ಚರಿಯನ್ನು ಮಾಡಿದರು ||೮೮||
ಇನ್ನಾವ ತೆರನಿದಕೆನುತ ಗಂಗಯ್ಯನ
ಮನ್ನಣೆಯಲಿ ಕೇಳಲೊಡನೆ
ಹೊನ್ನವಳ್ಳಿಯ ವೇದರಾಜ ಬಲ್ಲನು ಎಂದು
ಬಿನ್ನೈಸಿದ ನರಸಿಂಹಗೆ ||೮೯||
ಕರೆಸಿದ ವೇದರಾಜನ ನರಸಿಂಹರಾಯ
ತೆರನಾವುದಿದಕೆನಲವನು
ತರಿಸಿದ ಗಿಂಡಿಯಲುದಕವ ಮಂತ್ರಿಸಿ ಕೊಡೆ
ಪರಿವಾರಕ್ಕೆ ತಳಿಯಲು ||೯೦||
ಬಿದ್ದುರುಳಿ*[18][ದ]*[19] ಮೂರು ಸಾವಿರ ಪರಿವಾರ
ಎದ್ದರು ಕೊರೆಜೀವದವರು
ನಿದ್ರೆ ತಿಳಿದ ತೆರನಂದದಿ ಪಾಳ್ಯವು
ಸದ್ದು ಮಾಡದೆ ಸುಮ್ಮನಾಯ್ತು ||೯೧||
ಹೆಣ್ಣುಗಳರಸಿ ನೋಡಿದಳು ಪಾಳಯದೊಳು
ಕಣ್ಣುಗೆಟ್ಟುದ ಕಂಡು ನಗುತ
ಬಣ್ಣದುಪ್ಪರಿಗೆಯೊಳು ನಿಂದು ಕಳುಹಿದೊಡೆ
ಡೊಣ್ಣೆಯ ಪರಿವಾರದವನು ||೯೨||
ಮೊರ ಮೊಗೆ ಕವಣೆ ಒನಕೆ ಡೊಣ್ಣೆ ಸೊಪ್ಪೆಯ
ಕೊರೆವ ಕುಡುಗೋಲನೆ ಪಿಡಿದು
ಭರದಿ ಕೋಲುಗಳವರೂರ ಬಾಗಿಲೊಳು ನಿಲಿಸಿ
ವೀರ ಸಿರುಮ ನೋಡೆನುತ ||೯೩||
ಹೊಲೆ ಮಾದಿಗರು ಕೀಸುಗತ್ತಿ ಕೊಂಬು ಮೊಳೆಗಳನು
ಬಲದ ಕೈಯ್ಯಲಿ ಪಿಡಿಕೊಂಡು
ಮಲತು ಸಿರುಮ ನೋಡು ನೋಡೆಂದು ನರಸಿಂಹನ
ಬಲವ ಕಲಕಿ ಕೊರೆವರು ||೯೪||
ಇರಿ ತರಿ ಕೊರೆ ನೆತ್ತರ ಸುರಿ ಎನುತಲಿ
ಒರಲಿ ಬೊಬ್ಬಿಟ್ಟು ಖೋಯೆನುತ
ಮೊರದಲ್ಲಿ ಹೊಯ್ದರು ನರಸಿಂಹನವರನು
ಬರಸಿಡಿಲಿನ ರವಸದಲಿ ||೯೫||
ಬಣಜಿಗರಟ್ಟಿಹೊಯಿದರು ಅಟ್ಟಗೋಲಿಂದ
ಹೆಣದೊಟ್ಟಿಲುಗಳ ಒಟ್ಟಿದರು
ಕಣಿಕೆಯ ಕೊರೆವಂತೆ ಕುಡುಗೋಲುಗಳಿಂದ
ದಣಿಯೆ ತರಿದರೊಕ್ಕಲಿಗರು ||೯೬||
[1] *- * ಖೆಂಡವವಸವಂತಾಯಿತ್ತು (ಶಿ).
[2] *- * ಖೆಂಡವವಸವಂತಾಯಿತ್ತು (ಶಿ).
[3] ೧೫–೧೫ x(ಶಿ)
[4] ೧೫–೧೫ x(ಶಿ)
[5] ೧೬–೧೬ x(ಶಿ)
[6] ೧೬–೧೬ x(ಶಿ)
[7] ೧೭–೧೭ x(ಶಿ).
[8] ೧೭–೧೭ x(ಶಿ).
[9] ೧೮–೧೮ x(ಶಿ)
[10] ೧೮–೧೮ x(ಶಿ) * – * (ಶಿ, ಹ)
[11] ೧೮–೧೮ x(ಶಿ) * – * (ಶಿ, ಹ)
[12] * – * ವಾದಿ (ಶಿ, ಹ)
[13] * – * ವಾದಿ (ಶಿ, ಹ)
[14] ೧೯–೧೯ x(ಶಿ)
[15] ೧೯–೧೯ x(ಶಿ)
[16] ೨೦–೨೦ x(ಶಿ).
[17] ೨೦–೨೦ x(ಶಿ).
[18] * – * ತು (ಶಿ, ಹ).
[19] * – * ತು (ಶಿ, ಹ).
Leave A Comment