ಹದಿನೆಂಟು ಜಾತಿಯಲವರಿವರೆನ್ನದೆ
ಕದನದಿ ನರಸಿಂಹನವರ
*

[1][ತ]*[2]ದಕಿ ಸವರಿದರು ರಣರಂಗದೊಳು ಬಲು
ಕುದುರೆ ಕಾಲಾಳ ಕತ್ತರಿಸಿ              ||೯೭||

ಬಿಡಲೀಸದೆ ಗುಡಿ ಹೊಯ್ಯಲೀಸದೆ ತಳಿಯ
ನಡೆಯಲೀಸದೆ ಕಡಿಕಡಿದು
ಹಿಡಿದು ಕೆಲರ ಮೂಗು ಕೊಯ್ದುಬಿಟ್ಟರು ನಿಮ್ಮ
ಒಡೆಯಗೆ ಹೋಗಿ ಹೇಳೆನುತ          ||೯೮||

ಬಿಟ್ಟರು ರಾಯನ ಮೂಗೆಂದು ಸುಣ್ಣದ
ಬೊಟ್ಟಿಟ್ಟು ಕೆಲಕೆಲಬರಿಗೆ
ತಟ್ಟು ಸೀಳಿದರಟ್ಟೆ ಹೊಯ್ದು ಕೆಡವಿ ತಲೆ
ಕುಟ್ಟಿ ದಣಿದು ತಿರುಗಿದರು              ||೯೯||

ಬರಿಯೊಳಿರಿದು ತಿರುಗೆ ಕಂಡು ನರಸಿಂಹ
ನಾರಾಯಣ ಬಲ್ಲನೆನುತ
ಊರ ಬಾಗಿಲ ಹೊಗಲೇರಿ ಬೆನ್ನಟ್ಟಿದ
ಸೇರುವೆ ದೊರೆಗಳು ಸಹಿತ            ||೧೦೦||

ಅಡವಾಗಿ ನರಸಿಂಹ ನಿಂದು ಈಶ್ವರನಾಯಕ
ಬಿಡಿಸು ಪಾಳಯವೆನ್ನಲೊಡನೆ
ಗುಡಿ ಗುಡಾರವ ಹೊಯಿಸುತ ಗಿಡುಮರಗಳ
ಕಡಿದು ತಳಿಯ ನಡಿಸಿದರು            ||೧೦೧||

ಹಲವು ಸೂರ್ಯನ ಪ್ರಭೆ ನೆಲೆದಪ್ಪಿ ಬೂದಿಹಾಳ
ನೆಲನನಾವರಿಸಿ ನಿಂದಂತೆ
ಚೆಲುವಿಕೆಯಿಂದಲಿ ಹೊನ್ನ ಕಳಸಗಳಿಕ್ಕಿ
ಬಲಿದು ಕೆಂಪಿನ ದುಮ್ಮಾನಗಳು      ||೧೦೨||

ಹೊಯಿದವು ಸಾಗರದಂತೆ ಐಶ್ವರಿಯಾಗಿ
ಬಯಿಗಿನ ವೇಳೆಯದಲ್ಲಿ
ಹುಯ್ಯ2೧[3]ಲ ನಿಲಿಸಿ2೧[4] ಮನ್ನೇರು ಸಹ ದಂಡನು
ಪದುಮಸಖನು ಮೇಲೆ ನೋಡಿ*      ||೧೦೩||

ಬಳಲಿದ ಮಂದಿ ಮನ್ನೆಯರ ದೊರೆ ರಾಹುತರ
ಕಳುಹಿದನವರ ಬೀಡಾರಕೆ
ಹೆಳಹಿ ದುಗುಡವೇರಿ ದುಮ್ಮಾನದೊಳಯಿಕೆ
ಘಳಿಲನೆದ್ದನು ನರಸಿಂಹ೨೨[5]                        ||೧೦೪||

ಸಮದನದಲಿ ಬಂದು ಬಿಟ್ಟಿಹ ದಂಡನು
ಪದುಮಸಖನು ಮೇಲೆ ನೋಡಿ
ಬೆದರಿ ರಥವ ದುವ್ವಾಳಿಸಿ ಪಡುವಣ
ನದಿಯೊಳು ಹೋಗಡಗಿದನು                     ||೧೦೫||

ಸತ್ಯದಿ ಬೂದಿಹಾಳ ಮುತ್ತಿದವನ ಬೆಂ
ಬತ್ತಿ ಹುಯ್ಯಲು ಬಂದಂತೆ
ಸುತ್ತಣ ದೇಶ ದಿಗ್ಗಳೆಯ ಕಾಣಿಸದೆ ಹೆ-
ಗ್ಗತ್ತಲೆ ಕವಿಯಿತಾಕ್ಷಣದಿ                 ||೧೦೬||

ದ್ವಂದೈಸಿದ ತಮದೊಳು ನರಸಿಂಹನ
ಮಂದಿ ಬೆದರಿ ಬೆಚ್ಚುತಿರಲು
ಇಂದುಳಿದರೆ ಸಿರುಮನ ಬಸುರಿಲಿ ಎಲ್ಲ
ಬಂದೆವೀ ರಾತ್ರಿಗಳೆದರೆ                 ||೧೦೭||

ನೊಸಲ ಬರೆಹವ ನಳನಸಖನವನಿಂತು
ಪೊಸತು ಮಾಡಿದ ಬಗೆವೆರಸಿ
ಮುಸುಕಿದರಂಧಕಾಲಕೆ ಚಂದ್ರೋದಯ
ಪಸರಿಸಿ ಕಿರಣ ಪ್ರಜ್ವಲಿಸೆ               ||೧೦೮||

ಬೆದರು ಬಿಟ್ಟಿತು ನರಸಿಂಹನ ಪಾಳಯಕೆ
ಮದವೆದ್ದು ಸಿರುಮನೂರಳಗೆ
ಕದನ ಕೋಳಾಹಳ ಸುತ್ತ ಕೊತ್ತಳಕೆಲ್ಲ
ಮುದದಿ ಪಹರೆಯ ಕಾವಲಿರಿಸಿ        ||೧೦೯||

ಅರಮನೆಯ ಮಧ್ಯದುಪ್ಪರಿಗೆಯನಿಳಿದಳು
ಸರಸಿಜವದನೆ ಚಿಕ್ಕಮ್ಮ
ಸಿರುಮೇಂದ್ರನೊಡನೆ ಮಜ್ಜನ ಭೋಜನಮಾಡಿ
ಹರುಷದಿ ನಿದ್ರೆಗೈದಿರಲು                ||೧೧೦||

ಕಮಲಸಖನ ದಾಳಿ ಬರುತದೆ ಹಿಮರಾಜ
ತಿಮಿರ ಸಹಿತಲಡಗೆನುತ
ಸುಮ್ಮಾನದಿ ತಾಮ್ರಚೂಡ ಹುಯ್ಯಲು ಮಾಡೆ
ನಿಮಿಷ ಕೂಗಿತು ಮುಂಜಾವದಲಿ     ||೧೧೧||

ಉದಯಾದ್ರಿಯನಡರಲು ರಾಯನ ದಂಡು
ಬದುಕಿದೆವೆಂದೆದ್ದರೆಲ್ಲ
ಒದಗಿದ ಹುಯ್ಯಲುಗಳು ಕಹಳೆ ಸಹ ಭೇರಿ
ಕುದುರೆ ಕಾಲಾಳು ಸಂಭ್ರಮಿಸಿ        ||೧೧೨||

ಗಿರಿಗಳಂದದ ಮದಕರಿಗೆ ರಂಚಿಕೆ ಹಣ್ಣಿ
ತುರಗ ಸಂದೋಹ ಮಾಡಿದರು
ನರಸಿಂಹರಾಯನ ಸರಿದೊರೆಗಳೆಲ್ಲರು
ಪರಿಯಂತೆ ಪವುಜ ಮಾಡಿದರು       ||೧೧೩||

ಈ ಪರಿಯಲಿ ನರಸಿಂಹ ಸಿರುಮನೊಳು
ವ್ಯಾಪಿಸಿ ತಾ ಕಾದುತಿರಲು
ಭೂಪ ಕಾಕಿಯ ವಿಶ್ವರಾಜನೋಲಗದೊಳು
ಭಾಪುರೆ ಎಂಬ ಭಟರುಲಿಯೆ           ||೧೧೪||

ಎಡವಂಕ ಬಲವಂಕದೆಕ್ಕಟಿಗರು ಸಹ
ಕಡುಗಲಿಗಳು ಇರುತಿರಲು
ನುಡಿದನೊರ್ವನು ನರಸಿಂಹ ಸಿರುಮನೊಳು
ಬಿಡದೆ ಕಾದಲು ನಾಲ್ಕು ಮಾಸ       ||೧೧೫||

ನೆಲದಂಡ ಹೊಯಿದನು ಬಲುಗಾಳಗದೊಳು
ಛಲದಂಕ ಭಟರ ನೀಗಿದನು
ತೊಲಗಲೀಯದೆ ಕಾದುತಹನೆಂದು ಪೇಳಲು
ತಲೆಯ ತೂಗಿದ ವಿಶ್ವರಾಜ            ||೧೧೬||

ಗೊಲ್ಲಗೆ ನಾಲ್ಕು ತಿಂಗಳು ದಂಡ್ಯಾತಕೆ
ಬಲ್ಲಿದನಲ್ಲ ನಮ್ಮ ಭಾವ
ಎಲ್ಲೆಯ ಕಾಳಗ ತನಗೇತಕೆನುತಲಿ
ಅಲ್ಲಿ ಮಂತ್ರಿಗಳೊಳು ನುಡಿದ          ||೧೧೭||

ನಾಳಿನ ದಿನ ದಂಡ ಸಾಗಬೇಕೆನುತಲಿ
ಹೇಳಿದ ಬಲುಮಂತ್ರಿಯೊಡನೆ
ಪಾಳೆಯವೆಲ್ಲಕೆ ಸಾರೆನೆ ಕೈಮುಗಿ
ದೋಲಗದಿಂದ ಬಂದವರು             ||೧೧೮||

ನಿಂದು ಬೇಗದಿ ಪಾಳೆಯದಿಂದ ಸಾರೆನೆ
ಮಂದಿ ಕುದುರೆ ಸಂಭ್ರಮಿಸಿ
ಬಂದು ಬಿನ್ನೈಸಿದ ಬಲು ಬುದ್ಧಿ ಪ್ರಧಾನ
ಕಂದರ್ಪರೂಪ *[6][ವಿಶ್ವ]*[7] ರಾಜೇಂದ್ರನು                             ||೧೧೯||

ಘಳಲನೆ ನುಡಿಗೇಳಿ *[8][ವಿಶ್]*[9] ರಾಜೇಂದ್ರನು
ನಳಿನಮುಖಿಯರೊಡಗೂಡಿ
ಪ್ರಳಯಕಾಡೆಂಬ ಪಟ್ಟಣವನೆ ಹೊರವಂಟು
ತಳುಹದೈದಿದ ಬೂದಿಹಾಳ್ಗೆ            ||೧೨೦||

ಬಿಟ್ಟಲ್ಲಿ ಬಿಡದೆ ಬಂದರು ಏಳು ಪಯಣವ
ರಟ್ಟಾಡಿ *[10][ವಿಶ್ವ]*[11] ರಾಜೇಂದ್ರ
ಕಟ್ಟಾಳು ಅಯಿವತ್ತು ಸಾವಿರ ಸಹವಾಗಿ
ದಿಟ್ಟ ನರಸಿಂಹನಿದ್ದೆಡೆಗೆ                 ||೧೨೧||

ಬಂದನು ಕರಿಘಟೆ ಸಹ ವಿಶ್ವರಾಜೇಂದ್ರ
ಮಂದಿ ಕುದುರೆ ದಳಗೂಡಿ
ನಿಂದು ಪೌಜನು ಮಾಡೆ ನರಸಿಂಹದಂಡು
ಹಂದೆಗೊಂಡೆಲ್ಲ ಓಡಿದರು              ||೧೨೨||

ಸೇನೆ ಮುರಿಯೆ ಕಂಡು ಮಾನವ ನರಸಿಂಹ
ಆನೆಯನೇರಿ ಬರಲೊಡನೆ
ಏನೆಲೆ *[ವಿಶ್ವ]*ರಾಜನೆ ಎಂದು ಕೇಳಲು
ತಾನು ಫೌಜ ಮಾಡಿಸಿದನು            ||೧೨೩||

ಮಂದಿ ಕುದುರೆ ಇದಿರಾಗಿ ನಡಸಿ ಕರ
ತಂದರು [ವಿಶ್ವ]ನೃಪನ
ಬಂದು ಕಂಡನು ನರಸಿಂಹನ [ವಿಶ್ವ] ಛಂದದುಲುಪೆಯುಡುಗೊರೆಯ        ||೧೨೪||

ಕಾಣಿಕೆಗಳನಿಕ್ಕಿ ಕಂಡನು ರಣದಲಿ
ಕ್ಷೋಣಿಪ ನರಸಿಂಹನೃಪನ
ನಾಣ್ಯ ನಾಣ್ಯದ ಉಡುಗೊರೆಯಿತ್ತು ಕಳುಹಲು
ಕೇಣವಿಲ್ಲದೆ ದಂಡು ಬಿಡಿಸಿ              ||೧೨೫||

ಇಳಿಯಿತು ಸರ್ವ ಜೋಡೆಲ್ಲ ಪಾಳೆಯದೊಳು
ಹೊಳಯಿ ಹೊಯ್ದವು ದಮ್ಮಾನ
ಘಳಿಲನೆ [ವಿ]ಶ್ವರಾಜನು ಸುಖವಿರುತಿರೆ
ನಳಿನಸಖನು ತವಕದಲಿ                ||೧೨೬||

ಇಳಿದನು ಪಶ್ಚಿಮಾದ್ರಿಗೆ ಶಶಿ ಕಳೆಯೇರಿ
ಬಳಲಿದ ಮಂದಿ ಮನ್ನೆಯರು
ಇಳೆಗೊರಗಿರಲಿತ್ತ ಒಲಿದು ಕುಕ್ಕಟ ಕೂಗೆ
ಹೊಳಹುದೋರಿದ ರವಿರಾಜ          ||೧೨೭||

ನಲವಿಂದಲೆದ್ದು ನಾಲ್ದೆಸೆಯಲ್ಲಿ ದಳವೆಲ್ಲ
ಉಲಿದು ಮೋಹರಿ[ಸೆ] ಫೌಜಿಕ್ಕಿ
ಬಲುಹುಳ್ಳ ನರಸಿಂಹನೊಳು ಛಲ ಬೇಡೆಂದು
ಉಲಿದು ಮೂದಲಿ[ಸೆ] ಕಹಳೆಗಳು    ||೧೨೮||

ಇಳೆ ಬೆಸಲಾದಂತೆ ಬೂದಿಹಾಳ ಹೊರಗೆಲ್ಲ
ಕಲಿ ದಳವೊಡ್ಡಿ ನರಸಿಂಹ
ಬೆಳಗಾಗಲೂರೊಳು ಕಲಿ ಸಿರುಮೇಂದ್ರನು
ಹೊಳೆವ ಚಾವಡಿಗೆದ್ದು ಬಂದ          ||೧೨೯||

ಮೇಲುಗುಲಾಯವಿಕ್ಕಿ ಮೆರೆವಂಟಿ ಕುಟುಕಿನ
ಕಾಲ ಪೆಂಡೆ ಕಂಠಮಾಲೆ
ಸಾಲಿಯ ಹಚ್ಚಡ ಮಲಗುಮೂಡಿಗೆಗಳಿಂದ
ಲೋಲ ಸಿರುಮ ಬಂದು ಕುಳಿತ       ||೧೩೦||

ದೆಶೆಯುಳ್ಳ ಮನ್ನೆಯ ಸಿರುಮಭೂವರ ಬಂದು
ಬಿಸಿಲ ಚಾವಡಿಯಲ್ಲಿ ಕುಳಿತ
ಉಸುರಿದನೊಂದು ಸುದ್ದಿಯ ಗಿಂಡಿಯ ತಿಮ್ಮ
ಹೊಸ ವಾರ್ತೆಯನಾಕ್ಷಣದಿ            ||೧೩೧||

ನಿನ್ನೆಯ್ದೆ ಬಂದನು ಪ್ರಳಯಕಾಡಿನ ದೊರೆ
ತನ್ನ ಮಾರ್ಬಲ ಸಹವಾಗಿ
ಬಿನ್ನೈಸಿದನು ನಿಮ್ಮೊಳು ಕಾಳಗವಂತೆ
ತನ್ನ ಹೆಸರು ವಿಶ್ವರಾಜ                  ||೧೩೨||

ಮುಟ್ಟಿದ ಬೇಹಿನ ಸುದ್ದಿಯ ಹೇಳಿದ
ಕಟ್ಟಾಳು ಗಿಂಡಿಯ ತಿಮ್ಮ
ದಿಟ್ಟಸಿ ಸಿರುಮ[ಗೆ] ಕೈಮುಗಿದು ಬಿನ್ನೈಸಿದ
ಹುಟ್ಟಿದ ಸುದ್ದಿ ವಾರ್ತೆಯನು           ||೧೩೩||

ತಪ್ಪದೆ ಸುದ್ದಿಯ ಹೇಳಿದ ತಿಮ್ಮಗೆ
ಕರ್ಪೂರ ವೀಳ್ಯವ ಕೊಡಿಸಿ
ಸರ್ಪಭೂಷಣನೊಬ್ಬ ಗತಿ ಎಂದು ಸಿರುಮ ಕಂ-
ದರ್ಪ ಮಂತ್ರಿಯ ಕರೆಸಿದನು          ||೧೩೪||

ಎಕ್ಕಟಗರು ಪರಿವಾರ ಮೋಹದ ತನ್ನ
ಮಕ್ಕಳೆಲ್ಲರ ಕರೆಸಿದನು
ದೊಕ್ಕನೆ ಬಂದು ತಂದೆಗೆ ವಂದಿಸಿ ಬೇಗ
ಚಿಕ್ಕ ಕೊಮಾರ ವೀರಣ್ಣ                 ||೧೩೫||

ಮುತ್ತಿನ ಚವುಕುಳಿ ಸುತ್ತಿದ ಚಿಮ್ಮುರಿ
೨೩[12]ಕತ್ತರಿಸಿದ೨೩[13] ಕೊನೆ ಮೀಸೆ
ಇತ್ತರ ಮುಪ್ಪಟೆ ಹಚ್ಚಡ ಕೈಯ್ಯಂಬು
ಮತ್ತೆ ಕುಮಾರ ವೀರ ಕುಳಿತ          ||೧೩೬||

ಮುರಿದ ಮೀಸೆಯು ಕೆಂಗರಿಗಣ್ಣು ಬವರಿಯು
ತರದಲಿ ಸಾಣೆ ಬಂಡೆಗಳು
ದೊರೆ ಕಟಕುಗಳ ಬೊಂಬೆಯ ಹಚ್ಚಡ ಹೊದ್ದು
ಗರುವ ಕುಮಾರ ಮಲ್ಲ ಕುಳಿತ        ||೧೩೭||

ಎಳೆಯ ಮೊದಲ ದಟ್ಟಿ ಸುಲಿಪಲ್ಲು ಹಚ್ಚಡ
ಥಳಥಳಿಸುವ ಕಂಠಮಾಲೆ
ಹೊಳೆವ ಬೆಳ್ಳಿಯ ಪರಜಿನ ಖಂಡೆಯದಿಂದ
ಚೆಲುವ ಹಿರಿಯ ಸೂ[ನು ಕು]ಳಿತ೨೪[14]                       ||೧೩೮||

ಗಂಧಗಾವಿಯ ಧಟ್ಟಿ ಚಂದ್ರಗಾವಿಯ ಹಚ್ಚಡ
ಮಾಂದಳಿರಿನ ಠೋಪಾಯಿ
ಛಂದದಿ ಪಿಡಿದಾ ಸುರಗಿ ಕಾಚೇಂದ್ರನು
ಬಂದು ಕುಳಿತ ಚಾವಡಿಯಲ್ಲಿ           ||೧೩೯||

ಮಡಿಲಲ್ಲಿ ಜಮದಾಡೆ ಕೈಯಲ್ಲಿ ಗಿಡುಗನು
ಕಡುತಾಸನದ ಹಚ್ಚಡವು
ಮಡಿದು ಸುತ್ತಿದ ಜಡೆ ಬಿಟ್ಟು ಕೊನೆಗಳಿಂದ
ಒಡನೆ ಅಳಿಯ ತಿಪ್ಪ ಕುಳಿತ           ||೧೪೦||

ಕಂಕುಳ ಕಠಾರಿ ಕೈಯ್ಯಲಿ ಚಿಪುಲೆಯ ಹಕ್ಕಿ
ಶಂಖಡಸಿದ ಹಚ್ಚಡವು
ಬಿಂಕದಿ ಮೆಟ್ಟಿದ ಚಿಮ್ಮಾಳಗಿಂದ ನಿ-
ಶ್ಯಂಕ ಬೆಲಗೂರ ಭೈರ ಕುಳಿತ        ||೧೪೧||

ಅರಸುಮಕ್ಕಳು ರಾಣೆಯ ರಾಹುತ ತಂಡ
ಪರಿವಾರ ಕಟ್ಟಿಗೆಯವರು
ತರತರ ಪಾಠಕ ವಿದ್ಯಾ . . . . . . . ರೆಲ್ಲ
ನೆರೆದರೋಲಗದಿ ಚೌಭಟರು          ||೧೪೨||

ಕೇಳಿದನಾಗ ಸಿರುಮಭೂಪ ಇಂದಿನ
ಕಾಳಗಕನುವಹರಾರು
ಪಾಳ್ಯದೊಳು ವಿಶ್ವರಾಜಗೆ ಸಲುವಂತ
. . . . . . . . ಳಿ ಕಾಳಗಕನುವಾಗಿ      ||೧೪೩||

ಎಕ್ಕಟಿಗರು ಪರಿವಾರ ಮಕ್ಕಳು ಸಹ
ದೊಕ್ಕನೆ ಕುಳಿತಿರೆ ಕಂಡು
ಚಿಕ್ಕ ಕುಮಾರ ವೀರಣ್ಣ ಬೇಗದಿ ಬಂದು
೨೫[15]ಒತ್ತಲಿ೨೫[16]ನಿಂದ ಸಿರುಮನ         ||೧೪೪||

ಕೇಳೆನ್ನ ತಂದೆ ಸಿರುಮೇಂದ್ರ ಇಂದಿನ
ಕಾಳಗಕೆನಗೆ ವೀಳ್ಯವನು
ವಾಲಗದೊಳು ಬೇಡಿ ಕೈಮುಗಿದಿರೆ ಕಂಡ
೨೬[17]ಲೋಲ೨೬[18] ಕೋಮಾರ ವೀರಣ್ಣನ            ||೧೪೫||

ಕಡುಗಲಿ ವೀರಣ್ಣ ಕೊಳ್ಳು ಕಂಠಮಾಲೆಯ
ಖಡೆಯ ಪೆಂಡೆಯ ಕೊಟ್ಟನವಗೆ
ಉಡುಗೊರೆ ವೀಳ್ಯವ ಕೊಟ್ಟು೨೭[19] ಸಿರುಮ ಬೇ೨೭[20]
ನಡೆಯೆಂದು *[21]ಕಳುಹಲು ಬೇಗ*[22]   ||೧೪೬||

ಕಳುಹಿಕೊಂಡು ಬಂಟರುಗಳು ಸಹವಾಗಿ
ಘಳಿಲನೆ ತಾಯರಮನೆಗೆ
ಬೆಳಗಿದ ಕನ್ನಡಿಯಂದದಿ ಬಂದವ
ನಳಿನಾಕ್ಷಿಯ ಪಾದಕೆರಗಿ               ||೧೪೭||

ಮರಿಯಾನೆಯೊಳು ಮನ್ನೆಯ ಗಜಸಿಂಹ
ಅರಿರಾಯ ತಿಮಿರಮಾರ್ತಂಡ
ಧುರಧೀರ ಶರಭಭೇರುಂಡ ಚೆನ್ನಿಗವೀರ
ಧುರವ ನೀ ಗೆಲಹೋಗೊ ಮಗನೆ     ||೧೪೮||

ಮಡದಿವೆಂಗಳ ಮುಡಿಮಾಣಿಕ ಚಿಕ್ಕಮ್ಮ
ಉಡುಗೊರೆ ವೀಳ್ಯವ ಕೊಡಲು
ಕಡುಗಲಿ ಚೆನ್ನಿಗ ವೀರಣ್ಣ ಕೈಕೊಂಡು
ನಡೆದು ಬರಲು ಮುಂದೆ ಶಕುನ       ||೧೪೯||[1] * – * (ಶಿ,)

[2] * – * (ಶಿ,)

[3] ೨೧೨೧ ಲೆನಿಸಿ (ಶಿ) *ಇಲ್ಲಿ ಪ್ರಾಸ ತಪ್ಪಿದೆ. ಬಹುಶಃ ಇದು ೧೦೫ನೆಯ ಪದ್ಯದ ಎರಡನೆಯ ಚರಣವಾಗಿದೆ (ಸಂ).

[4] ೨೧೨೧ ಲೆನಿಸಿ (ಶಿ) *ಇಲ್ಲಿ ಪ್ರಾಸ ತಪ್ಪಿದೆ. ಬಹುಶಃ ಇದು ೧೦೫ನೆಯ ಪದ್ಯದ ಎರಡನೆಯ ಚರಣವಾಗಿದೆ (ಸಂ).

[5] ೨೨ ಪದ್ಯಶಿಪ್ರತಿಯಲ್ಲಿ ಇಲ್ಲ (ಸಂ).

[6] * – * ಈಶ್ವರನ (ಶಿ, )

[7] * – * ಈಶ್ವರನ (ಶಿ, )

[8] * – * ಈಶ್ವ (ಶಿ, )

[9] * – * ಈಶ್ವ (ಶಿ, )

[10] * – * ಈಶ್ವ (ಶಿ, )

[11] * – * ಈಶ್ವ (ಶಿ, )

[12] ೨೩೨೩ ಕಪ್ಪುವೊತ್ತಿದ (ಶಿ)

[13] ೨೩೨೩ ಕಪ್ಪುವೊತ್ತಿದ (ಶಿ)

[14] ೨೪ ಪದ್ಯಪ್ರತಿಯಲ್ಲಿ ಇಲ್ಲ (ಸಂ.).

[15] ೨೫೨೫ x(ಶಿ)

[16] ೨೫೨೫ x(ಶಿ)

[17] ೨೬೨೬ x(ಶಿ)

[18] ೨೬೨೬ x(ಶಿ)

[19] ೨೭೨೭ x(ಶಿ)

[20] ೨೭೨೭ x(ಶಿ)

[21] * – * ಕಳುಹುತ ()

[22] * – * ಕಳುಹುತ ()