೧ ಇರುಳು ಹಗಳು ಕಡಿತಂದ ತಲೆಗಳನು ಹಿಂಡು ಸಿಡಿಲ ಸೆರೆಬಿಟ್ಟಂತೆ ಡೆಂಕಣಿ ಕಲ್ಲ ಮಳೆ ಕರೆದಂತೆ ಬೂದಿಯಹಾಳ ಜೋಗಿ ವೇಷವ ತಾಳಿ ಹೋಗಬೇಕೆನುತಲಿ ಇತ್ತ ಜೋಗಿ ವೇಷವ ತಾಳಬೇಕೆಂದು ಬಂದು ಜೋಗಿಯರಾಗಿ ನಿಂದು ಮಾತನಾಡಿಯೆ ಕಾಳಿಂಗ ಗೋದಿವಣ್ಣಿಗೆ ಶಂಖಪಾಳನು ಹೂವಿನ ಪೆಟ್ಟಿಗೆ ಕಾವುಡಿಯನು ಮಾಡಿ ಕಟ್ಟಾಳು ಮಲ್ಲಣ್ಣ ಕಿನ್ನರಿಯ ನು[ಡಿ]ಸಲು ನಾಗಸರವು ಬೆಲಗೂರ ಭೈರವಗೆ ಸುಲಿಪಲ್ಲು ಮುಖಭಸ್ಮ ಕಿರಿಜಡೆಯಿಂದಲಿ ಎಲ್ಲಿಂದ ಬಂದಿರೊ ಜೋಗೇರ ನೀವೆಂದು ಸಂತೋಷವಾಗಿ ಸಿರುಮಭೂವರನಾಗ ನರಸಿಂಹ ಕಾದದೆ ಸುಮ್ಮನಿಹನೆ ಎಂದು ಒಂದೊಂದು ಪರಿಯ ವೇಷವ ತಾಳಿ ನರಸಿಂಹನ ತಂದೆಯ ಕೈಯ್ಯ ಕಳುಹಿಸಿಕೊಂಡಾಗ ಬತ್ತಿ[ಸಾ]ಯುಧವನು ಅಡಕವ ಮಾಡಿನ್ನು ಬಂದನು ಸಂಜೆಗತ್ತಲೆಯೊಳು ಪಾಳ್ಯಕೆ ಆದಿಭೈರವ ನಿಮ್ಮ ರಕ್ಷಿಸಬೇಕೆಂದು ಸೀಗ್ರ ಕಾಂಬೋಧಿ ಶಂಕರಾಭರಣವ ನಾಗಸರವ ಬೆಲಗೂರ ಭೈರವನು ಮಂದಿ ಕುದುರೆ ಬೂದಿಹಾಳೊಳಗೆಷ್ಟುಂಟು ಎಂದ ಮಾತನು ಕೇಳಿ ನರಸಿಂಹರಾಯನು ಇತ್ತಲಿ [ನ]ರಸಿಂಹ ಈಶ್ವರಿನಾಯಕ . . . . . ನ ತಪ್ಪಿಸಿ ಒಂದನೊಲ್ಲೆನು ಪಾಯಸ ಬೋನ ಊಟವ ಮಾಡಿದರು ತಮ್ಮ ಗಲಭೆದ್ದು ತಮ್ಮೊಳು ತಾವಿರಿದಾಡಿತು ಮಧ್ಯರಾತ್ರೆಯೊಳು ಗಲಭೆದ್ದು ನರಸಿಂಹನು ಜೋಗಿಯರೆಂದು ಬಂದರು ಕೇಳು ನರಸಿಂಹ ಎಂದ ಮಾತನು ಕೇಳಿ ನರಸಿಂಗರಾಯಗೆ ಜೋಗಿಗಳಂದದಿ ಕಡಿದರೆಂಬುದ ಕೇಳಿ ಆ ಮಾತು ಹೊರಡಲಾಕ್ಷಣ ಈಶ್ವರಿನಾಯಕ ಸರಿಸವ ಮಾಡಿ ಬೂದಿಹಾಳೊಳಯಕೆ ಹೆಗ್ಗಣಗಳ ಬಂಧಿಸಿದಂತೆ ಸಿರುಮನ ಕನ್ನವ ನರಸಿಂಗ ಕೊರಸಿ ಕಾಮಾಟದ ನರಸಿಂಹ ಮೂರುರಾಯರ ಗಂಡನೆಂದೆಂಬ ಹೃದಯದೆಣಿಕೆಯನರಿದು ನರಸಿಂಹನ ಅಂತರಂಗವನರಿತನು ಎಂದು ತನ್ನಯ ಇನ್ನು ಸಿರುಮನ ನಂಬಿ ನಚ್ಚಿದ ಬಂಟರ ಎಂದು ಬೂದಿಯಹಾಳ ಕೋಟೆಯ ಹೊರಗಲ್ಲಿ [1] ೧+ ಶ್ರೀ ಗುರು ವಿರೂಪಾಕ್ಷಲಿಂಗಾಯ ನಮಃ | ಪದನು (ಶಿ), + ಶ್ರೀ ಶಾರದಾಗುರುಭ್ಯೋ ನಮಃ| ರಾಗ ವರಾಳಿ (ಹ) [2] ೨. ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದು ಮುಂದಾಗಿವೆ (ಸಂ). [3] ೨. ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದು ಮುಂದಾಗಿವೆ (ಸಂ). [4] ೩. “ಹ” ಪ್ರತಿಯಲ್ಲಿ ಈ ಪದ್ಯವಿಲ್ಲ. ಇದರ ಬಳಿಕ “ಶಿ” ಪ್ರತಿಯಲ್ಲಿ x x ತೂರ್ಯಗದ ಕ್ರಮದಲಿ ನಿಲಿಸದವಲ್ಲಿ ಕಥೆಯ ಏಕಮುಖತೆಗೆ ಅಡ್ಡಿಯೆನಿಸುವುದರಿಂದ ಈ ಪದ್ಯಗಳನ್ನು ಅಡಿಯಲ್ಲಿ ಇಟ್ಟುಕೊಂಡಿದ್ದೇವೆ. (ಸಂ). ಈ ಬಳಿಕ “ಹ” ಪ್ರತಿಯಲ್ಲಿ ಕೆಳಗಿನ ಪದ್ಯಗಳಿವೆ. ಕಥೆಯ ಏಕಮುಖತೆಗೆ ಅಡ್ಡಿ ಮಾಡುವುದರಿಂದ ಇವುಗಳನ್ನು ಅಡಿಯಲ್ಲಿ ಕೊಟ್ಟಿದ್ದೇವೆ. ಊರ ಸುತ್ತಲು ಸೆರೆವಿನಲಿಡುವ ಸೂತ್ರ ಸಾಲು ಸೇತುವೆಗಟ್ಟಿ ಬರಲು ಸಿರುಮ ನೋಡಿ ತನ್ನೊತ್ತಿಲಿಹ ಬಲು ಬಿರುದು ಬಾವುಲಿಗಳ ಆಕಾಶ x ದೂ ಬಂದಂತೆ x x ಬರದಲ್ಲಿ ಕಂಬ ಸೂತ್ರದ ಕಡುಗಲಿ ಸಿರುಮನ ನಡೆಚಪ್ಪರವನು ಮೂಗಿಗೆ ಬೆರಳಿಟ್ಟು ತಲೆದೂಗಿ ನರಸಿಂಹ “ಹ” ಪ್ರತಿಯಲ್ಲಿ ಈ ಪದ್ಯ ಮುಗಿಯುತ್ತಲೇ “ಆ ಮಾತು ಹೊರಡಲಾಕ್ಷಣದ . . . ||೧೩|| ” ಎಂಬ ಪದ್ಯ ಪ್ರಾರಂಭವಾಗುತ್ತದೆ. (ಸಂ). [5] ೪“ಶಿ” ಪ್ರತಿಯಲ್ಲಿ ಪದ್ಯದ ಉತ್ತರಾರ್ಧ ಲಿಪಿಕಾರನ ವಿಸ್ಮೃತಿಯಿಂದ ಬಿಟ್ಟು ಹೋಗಿದೆ (ಸಂ). [6] ೫–೫ ಮೂವತ್ತು (ಶಿ, ಹ) [7] ೫–೫ ಮೂವತ್ತು (ಶಿ, ಹ)
ಸಡಗರವೆಂಟು ದಿಕ್ಕಿನಲಿ
ತಡೆಯದೆ ಸಿರುಮ ಡೆಂಕಣಿಗಳ ಹೂಡಿಸಿ
ಇಡಿಸಿದ ಹೊರ ಪಾಳೆಯಕೆ ||೧||
ಸಿರುಮ ಚಿನ್ಮುಕ ಡೆಂಕಣಿಯಲಿ
ಮರಳಿ ಪಾಳೆಯಕಿಡಿಸಲು [ನರ]ಸಿಂಹ
ಕರ ಸೋಜಿಗಬಡುತಿರ್ದ ||೨||
ಗುಂಡು ಎರಗಿ ಬಿದ್ದ ಭರಕೆ
ದಂಡೆಲ್ಲ ಗಡಬಡಿಸಿತು ಇತ್ತೆರದಲಿ
ದಿಂಡುಗೆಡೆದು ಉರುಳಿದರು೨[2] ||೩||
ಗೊಲ್ಲ ಸಿರುಮನುಪಮಿಯಲಿ
ನಿಲ್ಲಬಾರದು ಪಾಳೆಯ ನರಸಿಂಗನು
ಅಲ್ಲಿ ಹಿಂದಕೆ ತೆಗಸಿ[ದನು]೨[3] ||೪||
ಆಗ ಮಲ್ಲಣ್ಣನಾಡಿದನು
ಈಗ ಕತ್ತಿಗೆ ಔತಣವಿಲ್ಲೆನುತಲಿ
ಆಗ ಯೋಚನೆಯ ಮಾಡಿದನು೩[4] ||೫||
ಅರ್ತಿಯಿಂದಲಿ ಕರಸಿದನು
. . . . . . . . . . . . . . . . . . . . . .
. . . . . . . . . . . . . . . . . . . . . . ೪[5] ||೬||
ಒಂದೊಂದು ಪರಿ ಮುದ್ದುನುಡಿಯ
ತಂದುಕೊಟ್ಟರು ದೇಶಿಕಟ್ಟು ಬಾಯಿಕಟ್ಟುಗಳ
ತಂದು ಕುಮಾರಮಲ್ಲನಿಗೆ ||೭||
ಏಳೆಂಟು ಬಗೆಯ ಪಾವುಗಳ
ಬಾಳವಾಗಿಯೆ ಪೆಟ್ಟಿಗೆ ತುಂಬಿ ಮಲ್ಲಣ್ಣ
ಹೇಳಿ ಬೆಲಗೂರ ಭೈರವಗೆ ||೮||
ಮಾವ ಬೆಲಗೂರ ಭೈರವಗೆ
ಈ ವಿಧದಿ ಅಳಿಯ ತಿಪ್ಪಯ್ಯಗೆ ಬೇಗದಿ
ಕಾವುಡಿಗಳ ಮಾಡಿದರು ||೯||
ಜಟ್ಟಿಗ ತಮ್ಮ ಸೋಮಣ್ಣ
ಪೆಟ್ಟಿಗೆಯನು ಹೊತ್ತು ಅಳಿಯ ತಿಪ್ಪಯ್ಯನು
ದಿಟ್ಟ ಬೆಲಗೂರ ಭೈರವನು ||೧೦||
ಆಗ ಜೋಗೇರ ಸಿಂಗಿನಾದ
ಬೇಗದಿ ಹೊರವಂಟು ಸಿರುಮನಿದ್ದೆಡೆಗಾಗ
ಸಾಗಿ ಬಂದರು ಹರುಷದಲಿ ||೧೧||
ಉಲಿವ ಸಿಂಗಿನಾದಗಳು
ಗೆಲುವಿಂದ ಬಂದರು ಸಿ[ರು]ಮನಿದ್ದೆಡೆಗಾಗ
ಒಲಿದು ಜೋಗೇರ ತೆರದಿಂದ ||೧೨||
ಗೊಲ್ಲ ಸಿರುಮ ಕೇಳಿದನು
ಬಲ್ಲಿದ ನಿಮ್ಮ ಕುಮಾರ ಮಲ್ಲನು ಎಂದು
ಅಲ್ಲಿ ಹೇಳಿದರು ಬೇಗದಲಿ ||೧೩||
ಚಿಂತೆಯಿಲ್ಲದೆ ಮನದೊಳಗೆ
ಕಂತುರೂಪನು ಕುಮಾರ ಮಲ್ಲಣ್ಣಗೆ
ಅಂತು ವೀಳ್ಯವ ಕೊಡಿಸಿದನು ||೧೪||
ಧುರಧೀರ ಸಿರುಮಭೂವರನು
ಧರೆಯೊಳು ಚೋದ್ಯವ ನೋಡುವೆನೆಂದಾಗ
ಗರುವ ಕೊಮಾರ ಮಲ್ಲ ನುಡಿದ ||೧೫||
ಅಂದವನು ಕೆಡಿಸುವೆನು
ಮುಂದುಗೆಡಿಸುವೆನೆಂದು ಕುಮಾರ ಮಲ್ಲ
ತಂದೆಯ [ಕಾಲ್ಗೆರಗಿದನು] ||೧೬||
ಬಂದನು ತನ್ನರಮನೆಗೆ
ಒಂದೊಂದು ಪರಿ ಜೋಗಿ ವೇಷವ ತಾಳಿದ
ಅಂದವನಾರು ಬಣ್ಣಿಪರು ||೧೭||
ಮತ್ತೆ ಹೊರಟನರಮನೆಯ
ಅರ್ತಿ ವಿಲಾಸವ ನೋಡುವೆನೆಂದು ರವಿರಾಜ
ಇತ್ತ ರಥವನೇರಿದನು ||೧೮||
ನಿಂದರು ನರಸಿಂಹನೆಡೆಯ
ಇಂದುಧರನು ನಿಮ್ಮ ರಕ್ಷಿಸುವನೆಂದು
ತಂದು ಕೊಟ್ಟರು ವಿಭೂತಿಯನು ||೧೯||
ಮೇದಿನಿಪತಿಯ ಹರಸಿದರು
ಮೂದೇವರ ಕರುಣದಿ ಜೋಗೇರು ಬಂದು
ಓದಿ ಆಳಾಪ ಮಾಡಿದರು ||೨೦||
ಭೋರೆಂಬ ಕಿನ್ನರಿಯೊಳಗೆ
ಧುರಧೀರ ಕುಳಿತು ನುಡಿಸಲಾಗಿ ನರಸಿಂ
ಹರಾಯ ತಾ ತಲೆದೂಗಿದನು ||೨೧||
ಜೋಗಿಯರಂತೆ ನುಡಿಸುತ
ಬೇಗ ಸಂತೋಷವ ಮಾಡೆ ನರಸಿಂಹರಾಯ
ಕೇಳಿದನಾಗ ಸುದ್ದಿಯನು ||೨೨||
ಎಂದನು ಗೊಲ್ಲ ಸಿರುಮಗೆ
ಚೆಂದದಿ ೫[6][ಮುನ್ನೂರು]೫[7] ಕುದುರೆ ಮೂರುಸಾವಿರಾಳು
ಎಂದು ಬಿನ್ನಹವ ಮಾಡಿದರು ||೨೩||
ಅಂದು ನಿಶ್ಚಯವ ಮಾಡಿದನು
ನಿಂದು ಕುದುರೆಯ ಲಾಯದೊಳಗೆ ತಾನಿಂತು
ಚಂದದಿಂದಲಿ ಕೊಡಿಸಿದನು ||೨೪||
ಮತ್ತೆ ಜೋಗೆರಿಗೆ ಬುತ್ತಿಗಳ
ಚಿತ್ತಜರೂಪನು ತರಿಸಿಕೊಡುವೆನೆಂದು
ಅರ್ತಿಯಿಂದಲಿ ಕೇಳಿದನು ||೨೫||
ಮಿಕ್ಕುದನೊಲ್ಲೆವೆಂದೆನುತ
ಸಕ್ಕರೆ ಹಾಲು ಹಣ್ಣನು ತರಿಸಿದಾರಾಗ
ಅಕ್ಕಿ ತುಪ್ಪವ ಕೊಡಿಸಿದರು ||೨೬||
ಆಯಮಾನವ ನೋಡಿದರು
ಖೋಯೆಂದು ಕುದುರೆಯ ಲಾಯಗಳನು ಹೊಕ್ಕು
ರಾಯನೇರುವ ತೇಜಿ ಇರಿದು ||೨೭||
ಹೊಲಬನರಿಯದೆ ತೆಲುಗರು
ಹಲವು ಪರಿಯ ಹಾವು ಕಚ್ಚಿ ಸತ್ತಿತು
ಕಲಿ ನರಸಿಂಹಗುಸುರಿದರು ||೨೮||
ಎದ್ದು ಬಂದನು ನಿಮುಷದಲಿ
ಹೊದ್ದಿರ್ದ ಈಶ್ವರನಾಯಕ ಕೇಳಿದ
ಕದ್ದು ಕಡಿದ ಮಲ್ಲಣ್ಣ ||೨೯||
ಆಗ ಕುಮಾರ ಮಲ್ಲಣ್ಣ
ಸಾಗಿ ಕಡಿದು ಹೋದರು ಬೂದಿಹಾಳಿಗೆ
ಬೇಗ ಹೇಳಿದ ನರಸಿಂಹಗೆ ||೩೦||
ಅಂಧಕಾರವು ಪರಿದಂತೆ
ಚಂದ್ರನು ಪಶ್ಚಿಮಕಿಳಿಯಲಾಗಲು ರವಿ
ಬಂದಡರಿದ ಪೂರ್ವಕ್ಕೆ ||೩೧||
ಯೋಗಿಗಳಂತೆ ಧ್ಯಾನಿಸುತ
ಬೇಗದಿ ನೆಲಗನ್ನವ ಊರೊಳಯಕೆ
ಆಗ ಕೊರಸ ಹೇಳಿದನು ||೩೨||
ಕಾಮಾಟದವರನು ಕರಸಿ
ತಾಮಸವಿಲ್ಲದೆ ಹಾರೆ ಗುದ್ದಲಿ ಕೊಟ್ಟು
ಭೂಮಿಯಡಿಯ ತೋಡಿಸಿದ ||೩೩||
ಕೊರಕೊಂಡು ಬಹ ಕನ್ನವನು
ಸಿರುಮ ತಾ ಕೇಳಿ ಇದಿರುಗನ್ನಗಳನು
ಕರ ವೇಗ ತೆಗಸುತ್ತೈದಿದನು ||೩೪||
ಉಗ್ರದ ಕಾಮಾಟದವರು
ನುಗ್ಗಿಸಿದರು ಹೊಗೆಗಳನಿಕ್ಕಿ ತೆಲುಗರ
ನುಗ್ಗೇಳ ಪಟಿಪಟಿಲಿರಿದು ||೩೫||
ಮುನ್ನೂರಾಳನೆ ಕೊಂದುಕೊಂಡ
ಇನ್ನು ಕೆಣಕದಿರಿ ಗೊಲ್ಲ ಸಿರುಮನನೆಂದು
ಚಿನ್ನಗಾಳೆಗಳು ಸಾರಿದವು ||೩೬||
ಬಿರಿದಿನ ಕಾಲ ಪೆಂಡೆಯವ
ತರಿಸಿನ್ನು ಗೊಲ್ಲ ಸಿರುಮಗೆ ಕೊಟ್ಟು ತಾ
ತಿರುಗುವೆನೆಂದೆಣಿಸಿದನು ||೩೭||
ಚದುರ ಪ್ರಧಾನ ಈಶ್ವರನು
ಕದುಬಲೀಸದೆ ಮೂರು ದಿನ ತಾಳಬೇಕಂದು
ಮುದದಿ ಬಿನ್ನೈಸಿ ಕೈಮುಗಿದ ||೩೮||
ಚಿಂತೆಯ ಬಿಟ್ಟ ನರಸಿಂಹ
ಸಂತೋಷದುಡುಗೊರೆಯಿತ್ತು ಈಶ್ವರ ನೀ
ನೆಂತಿರ ಹೇಳಿದಂತಿಹೆನು ||೩೯||
ಸನ್ಮಾನದಲಿ ಕರಸುವೆನು
ಬಿನ್ನಹ ಮಾಡಿ ಹೆಳಹಿ ತಂದು ನರಸಿಂಹ
ನಿನ್ನ ಪಾದವ ಕಾಣಿಸುವೆನು ||೪೦||
ನಿಂದು ಈಶ್ವರಿನಾಯಕನು
ಇಂದು ಸಾರಿದೆ ಸಿರುಮನ ಬಿಟ್ಟು ಬೇಗದಿ
ಬಂದವರನು ಪಾಲಿಸುವೆನು ||೪೧||
x x x ಚಾರ್ಯದಿ ನರಸಿಂಹ
ಹದಿನಾರು ತೆರದಿ ಜಾಣ್ಮೆಯಲಿ
ಇದಿರು ಡೆಂಕಣಿಗಳ ಹೂಡಿಸಿ ಬೂದಿಹಾಳ
ಕದವ ಮುರಿಯಲಿಡಿಸಿದನು ||೬||
ಎಂಬ ಪದ್ಯವಿದೆ. “ಹ” ಪ್ರತಿಯಲ್ಲಿ ಇದಕ್ಕೆ ಪ್ರತಿಯಾಗಿ ಕೆಳಗಿನ ಪದ್ಯವಿದೆ.
ಹದಿನಾರು ಬಗೆ ನರಸಿಂಹ
ಇದಿರು ಡೆಂಕಣಿಗಳ ಹೂಡಿಸಿ ಬೂದಿಹಾಳ
ಕದವ ಮುರಿಯಲಿಡಿಸಿದನು ||೫||
ಹಾರಿತೆನುತ ನರಸಿಂಹ
ಭೂರಿ ಸೇತುವೆ ನಡೆ ಚಪ್ಪರಗಳನಿಕ್ಕಿ
ಕಾರುಣಿಕ x x x ಕೋಟೆಯೆಂದ ||೬||
ಮೇಲ ಸೇತುವೆಯನೊಡ್ಡಿಸಿದ
ಆಳು ಕುದುರೆ ಅಸಮಾನ ಮಾಡಿದ ಗೊಲ್ಲ
ಕಾಳಗ ಕೆಂಡ ನರಸಿಂಹ ||೭||
x x ಬೊಂಬೆಯು ಹರಿಗೆಯವರು
ಸನ್ನೆನಾಳೆಗಕ ಸಾಳುವ ನರಸಿಂಹ ಬಿಟ್ಟು
ತನ್ನೆವೆ ಹಳಚದೆ ನೋಡಿ ||೮||
ಭೂಕಲಿ ಸಿರುಮನ ಭಟರು
ತಾಕ ಹೊಯಿದರೆ ಒಡಲ ಹರಿಯೆ ರಕ್ತವೊನಲಿ
ಕಾಕಿನಿಯರು ಯೀಂಟುತಿರು ||೯||
ಬೊಂಬೆ ಕಡಿದಾಡಿ ಮಡಿದಂತೆ
ನಂಬಿದ ನರಸಿಂಹರಾಯನವರನೆಲ್ಲ
ನಿಂಬಿಲ್ಲದೆ ಉರುಳಿದರು ||೧೦||
ಕೆಡಹಿ ಕೆಡಹಿ ಕಾದುತಿರಲಿ
ನಡನಡಗುತ ನರಸಿಂಹನು ಅವನು
ನುಡಿಯಲಮ್ಮದೆ ಸುಮ್ಮನಿರಲು ||೧೧||
ಯೋಗಿಗಳಂತೆ ಧ್ಯಾನಿಸಿದ
ಆxಚಿಸಿ ನೆಲನ ಗನ್ನದ ಊರೊಳಯಿಕೆ
ಬೇಗ ಕೊರಸ ಹೇಳಿದರು ||೧೨||
Leave A Comment