ಇರಿದ ಘಾಯಕೆ ಬಿದ್ದ ಕೊರೆಹೆಣಗಳ ಕಣ್ಣ
ಬಿರಿ ನೆರೆ ಬಿಟ್ಟು ಬಾಯಿಗಳ
ತೆರೆದು ಮೊರೆಯಿಟ್ಟು ಬೀಳೆ ರಾಯನ ದಂಡು
ಒರಲಿತು ಮುರಿದು ಮುಂಗೆಟ್ಟು೧೩

[1]    ||೪೬||

ಹಾಕಿದರು ಹರಿಗೆ ಬಿಲ್ಲು ಸಬಳವ
ನೂಕು ಠಾಕಿಲಿಯೆ . .. . . . . . . . .
. . . ಯೆದೆ ಬಂದೆವೊ ಬೂದಿಹಾಳಿಗೆ ವಿಧಿಯೆಂದು
ಭೂಕಿಸುತೊಡನೆ ಬೆನ್ನಿತ್ತು              ||೪೭||

ಮುರಿದು ಬರಲು ಕ . . . . .  ರಸಿಂಹರಾಯ ತನ್ನ
ಸರ್ವದಳವು ವಾಡವು ಸಹಿತ
ಉರಿಬಿ ಸಿರುಮನವರ ಊರ ಬಾಗಿಲಿಗೆ
ನುರುಬಿ . . . . . . . . . . . . ನಿಲಿಸಿದರು                                  ||೪೮||

ಹುಲಿಯ ಮುಖವನು ಹೊಗಗೊಡದೆ ತಿರುಗಿದರು
ಚಲದಂಕ ಕುಮಾರನಾಯಕರು
ಎಲಲೊ ತೊಲಗುಯೆಂದೊಬ್ಬೊಬ್ಬನ
ಬಲು ಬಿರಿದ ಸೆಳೆಕೊಳ್ಳೆನುತ          ||೪೯||

ಹೊಕ್ಕಿರಿದೊಕ್ಕಲಿಕ್ಕುತ ಲೆಕ್ಕವಿಲ್ಲದೆ
ಸಿಕ್ಕಿಸಿ ಹಿಡಿಯಾಳ ಹಿಡಿದು
ಸೊ . . . . . . .ರಾಯನ ಬಿರಿದಿನ
ರೆಕ್ಕೆಯ ಸೆಳೆಕೊಳ್ಳೆನುತ                ||೫೦||

ಗಂಡಭೇರುಂಡ ಕರಿಸಿಂಹದ ಗುಟ್ಟು
. . . . . . . . . . .ಳಯ ಬಂದಂತೆ
ಹಿಂಡು ಬಿರಿದು ಠೆಕ್ಕೆಯ ಸಹಿತ ಕೊಮಾರಮಲ್ಲ
ಲೆಂಡ ಸಿರುಮಗೊಪ್ಪಿಸಿದ               ||೫೧||

ಮುದ್ದು ಮಲ್ಲಣ . . . . . .ನಗುತ ಸಿರುಮ ತನ್ನ
ಕಂದ ಮಲ್ಲಣ ಬಾಯೆಂದು
ಸಂದಿತ್ತು ಪಂಥವೆಂದುಡುಗೊರೆ ವೀಳ್ಯ
ಗಂಧ ಪರಿಮಳವಿಕ್ಕು . . . . . . . . .                          ||೫೨||

ಮಿಗೆ ವೈರಿಯ ಬಾಯೊಲು ಮಾಡಿಸಿ ತಾ
ನುಗುಳುವ ಪಡುಗವ ತೆಗೆಸಿ
ಜಗ ಬಿರಿದಿನ ಠಕ್ಕೆಯದ ತುಡಿಗೆ ಕಟ್ಟಿ
ನೆಗಹಿಸಿದನು ಸಿ . . . . . . . . . .       ಜಜ೫೩||

ಢಾಳಿಪ ಸನ್ನೆಯದೊಳು ಮೃತಾ ಸರ್ವ
ಸೂಳೈಸಲು ಊರು ಸುತ್ತ
ಕಾಳೆಯ ಹಿಡಿಸಲು ಮೇರಲು ಕಂಡರು
ಸಾಳುವ . . . . . . . . . . . . . . . . . .                         ||೫೪||

ಲಕ್ಷ ಪಾಯದಳ ಬೂದಿಹಾಳ ಕೋಟೆಯ
ದಿಕ್ಕು ದಿಕ್ಕನೆ ಹಂಚಿಕೊಂಡು
ಸೊಕ್ಕಿದ ಗೊಲ್ಲ ಸಿರುಮ ನಮ್ಮ ಠೆಕ್ಕೆವ
ಸಿಕ್ಕದೆ ಕೊಡಬೇಗಲಾಗ . . . . . . . . . .                                ಜಜ೫೫||

[ಅಡ]ರಿ ಕೊತ್ತಳ ಕೋಟೆ ತೆನೆಗಳ ಸಂದಿಲಿ
ತುಡುಕಿ ಚೂಣೆಯಲಿ ಮುಂದಲೆಯ
ಪಿಡಿದಿರಿದಾಡು . . . .ಕೊಡು ನೆಳ್ಜರ ಕವ
ಕಡೆ . . . . . . . .ಲು                       ||೫೬||

ಉರಿಕೊಂಡ ಕರ್ಪುರವ ಉಡುಗಿ ಕಟ್ಟದರುಂಟೆ
ಕಲಿ ಕಾಲಿಡವರೆ ಬಿಡುವುದೆದೆ
ನರಸಿಂಹರಾಯನ ಬಿರಿದಿನ *[2][ಠೆಕ್ಕೆವ]*
ಸಿರುಮನ . . . . . . . .ಕ್ಕೆ ಬರುವವೆ                          ||೫೭||

ಎಂದ ನುಡಿಗೆ ಭುಗಿಲೆಂದು ರಾಯನ ದಳ
ಇಂದು ಹಿಡಿದು ಗೊಲ್ಲ ಸಿರುಮನ
ಹಿಂದು . . . . . . .ದಕೆ ಕುರುಹುಗಳ ಮಾಡುವೆನೆಂದು
ಒಂದಾಗಿ ಲೆಗ್ಗೆ ಮಾಡಿದರು             ||೫೮||

ಅಗ್ಗಳೆಯ ಮನ್ನೆಯರು ನರಸಿಂಹರಾಯಗೆ
. . . . . . . . . . . . .ಧನವಾಡಿ
ಒಗ್ಗಲಿ ಹೊರಕೋಟೆ ಹುಲಿಮುಖಗಳ ಹೊತ್ತ
ನುಗ್ಗದೆ ಕಡಿದಾಡಿದರು                   ||೫೯||

. . . . . . . . . ನಿಲೆಂದು ಹೊರಕರಿಬೆಯಲು
ಸಿರುಮನ ಕಪೂರ ನಾಯಕರು
ಥರಥರದಲ್ಲಿ ಒಳಕೋಟೆ ಕೊತ್ತಳಗಳ
ಸರಿಮಾಡಿ ಹಂಚಿಕೊ. . . . . . . . . . . . . .                              ||೬೦||

ಒತ್ತಿ ನರಸಿಂಹನವರೊಳಕೋಟೆಯ
ಹತ್ತಲು ಸಿರುಮಣ್ಣನವರು
ಬತ್ತೀಸಾಯುಧದಲ್ಲಿ ಇರಿದಗಳಿಗೆ ಹಾಕಿ
ಎತ್ತುಗಳಿ . . . . . . . . . .ದರು          ||೬೧||

ಮಂಡಿಸಿ ತಲೆವಿಲ್ಲುಗೊಂಡಾಗ ಕೋಟೆಯ
ದಂಡೆಗೆ ಸೇರಿಕೊಂಡಿರಲು
ಭಂಡಿಯ ಗಾಲಿಯ ನೂಂಕಿ ತೆಲುಗರ
ದಂಡನಿಳಿಯೆ ಕೆಡಹಿದರು               ||೬೨||

ಮೈಜೋಡ ತೊಟ್ಟು ಮಾರಾಂತು ಕೊತ್ತಳಗಳ
ಹುಯ್ಯಲಿಡುತ ಹತ್ತುತಿರಲು
ಕೈದುಗಾರರು ಬೀಸುದೊಲೆಯ ಬಿಡಲು ಮೇಲೆ
ಹೊಡೆದಪ್ಪಳಿಸಿ ಬಿದ್ದರೆಲ್ಲ                ||೬೩||

ಕುದಿವೆಣ್ಣೆ ಸುಣ್ಣ ಮಳಲ ಕಾಸಿ ಹೊಯ್ದೆಲ್ಲ
ಬಿದ್ದುರಿಯಲು . . . . . . . . ಕೈ ಕಳೆಯ
ಹೆದರಿ ಕಂಗೆಟ್ಟು ಕಣ್ಮುಚ್ಚಿ ಮುಂಗಾಣದೆ
ಬೆದರಿ ಬಿದ್ದಿಹರಗಳೊಳಗೆ               ||೬೪||

ಕೊರಡು ಖಂಡಿಸಿದುರಿದಾ . . . . . .ರಿಸುವ ಶ್ರೋಣಿತ
ಹೊರ ಸುತ್ತಿನಗಳೊಳು ತುಂಬಿ
ತೆರಹಿಲ್ಲದುರುವ ಧೂಮದಿ ಬಿದ್ದ ಕೊರೆವೆಣ
ಒರಲು . . . . . . . . . . ಳಿಗೇಳುತ್ತಿರಲು                                  ||೬೫||

ಅಗಳೊಳು ಹೊರಗೆ ಹೆಣನ ಹಡಿಕೆಗಳಿಂದ
ಹೊಗಬಾರದು ಹಗಲಿರುಳ
ಜಗಳ ಇಂದಿಗೆ ಸಾ . . . . . . . . .ರಾಯ
ದುಗುಡದಿ ಪಾಳಯಕೆ ಬಂದ           ||೬೬||

ಕೋಳು ಹೊಯಿದು ಗೆಡು ಕೋಟೆ ಆಳೆಷ್ಟು ಸತ್ತಿತು
ಹೇಳು ಈಶ್ವರಿನಾಯಕ . . . . . . . .  . .
ಭಾಳಲಿಪಿಯ ತೊಡೆದ ಬ್ರಹ್ಮನುಕ್ಕುಡದಿಹದಿ
ಏಳು ಸಾವಿರ ಸತ್ತಿತೆಂದ                ||೬೭||

ವಿಪರೀತ ಕಾಳಗ ಇಳೆಯೊಳಾಯಿತು . . . . . . . .
ತಪನೋಡಿ ಆಕಾಶದಿಂದ
ಉಪಮಿಸಿಂದಿಗೆ ಬಾಳ್ದಲೆಯ ಕಾಯುವೆನೆಂ
ದಪರಾಂಬುಧಿಯ ಸೇರಿದನು          ||೬೮||

ಆ . . . . . . . .ಥವ ನೋಡಿ ಮೆಲ್ಲಡಿಗೂಡಿ
ಮುಗಿದವಂಬುಜಮುಖ ಬಾಡಿ
ಮಿಗೆ ಸಂಜೆಗೆಂಪನು ಸೂಡಿಯಾ ಮಿಹನೆನುದೆ
. . . . . .ಮೂ ಒಡದಳು ತಮ್ಮತ್ತಗೂಡಿ                                   ||೬೯||

ಇಳೆಗೆ ಆಕಾಶದಿ ನೆಳಲ ಕತ್ತಲೆಯೊಳು
ತಳಿತ ನಕ್ಷತ್ರ ಮಧ್ಯದಲಿ
ಹೊಳೆವ ಚಂದ್ರನ ಕಿರಣವು ನರಸಿಂಹನ
ಬಳದ ಮಂದಿಯ ನೋಡುವಂತೆ     ||೭೦||

ಹಿಡಿದ ಪಂಜುಗಳೆಡೆಯಾಡೆ ಪಾಳೆಯದೊಳಾ
ಸುಡಿ . . . .  . . . . .ವ ಹೆಣ ಲೆಕ್ಕವಿಲ್ಲ
ಮಿಡು ಮಿಡುಕಲು ಗಾಯವ ಕಾಸಿ ಕಟ್ಟುವ
. . . . . . . . . . . . . . . . . . .           ||೭೧||

ಸಾಳುವ ನರಸಿಂಹರಾಯನ ಪಾಳ್ಯದ
ಗೋಳ ನೋಡಿ. . . . .ದ ಸಿರುಮ
ಆಳವೇರಿಯ ಹತ್ತಿ ಕಾಳೆಯ ಹಿಡಿಸಿದ
ಕಾಳಗ ಕದನಪ್ರಚಂಡ                   ||೭೨||

ಅರಿರಾಯದಲ್ಲಣ ಪರರಾಯ ಮ . . . . .
ಧೀರ ಶರಭಶಾರ್ದೂಲ
ಸಿರುಮಭೂವರಗಿಳೆಯೊಳು ಸಮನಿಲ್ಲವೆಂದು
ಒರಲಿತು ಕಾಳೆ ಮೂದಲಿಸಿ ||೭೩||

ಕಾಳೆ . . . . .ಕೇಳುತ ನರಸಿಂಹನ
ಪಾಳೆಯ ಬೇಳುವೆಗೊಂಡು
ಏಳಲಮ್ಮದೆ ಮಲಗಿರೆ ಕಂಡು ಸಿರುಮೇಂದ್ರ
ಆಳೋಚಿಸಿದ ಬ . . . . . . .ನು        ||೭೪||

ಕರೆಸಿದ ತನ್ನ ಪ್ರಧಾನ ಕಲ್ಲರಸಗೆ
ಪರಿಮಳ ವೀಳ್ಯವ ಕೊಡಿಸಿ
ಬರಹೇಳು ಹಳೆಯ ಪೈಕವನೆಂದಾ . . . . .ರಲು
ಉರವಣಿಸಿತು ಕಲಿ ಭಟರು             ||೭೫||

ಬಂದನು ನಡೆಗೋಟೆಯ ಮಲ್ಲ ತೋಡೆಯ ಸಂಗ
ಬಂದನು ಸಿಡಿಲ ಮರಿಯಾ
ಬಂದನು ಹೆಗ್ಗೇರ ಭದ್ರ ಉಗ್ರದ ರುದ್ರ
ಬಂದ ಮಾಸಾಳ ಹಮ್ಮೀರ              ||೭೬||

ಬಂದನು ಕಾಲಭೈರವ ಜುಂಜ ಧುರಧೀರ
ಬಂದನು ಚೊಕ್ಕನ ಬುಳಿಗ
ಬಂದನು ರೂಢಿಯ ಹರಿಗೆಯ ಕಲಿವೀರ
ಬಂದನು ಬಿರಿದಿನ ದಂಡ                ||೭೭||

ಬಂದನು ತುಳುವರ ಪೆಮ್ಮ ಕೆಂಡದ ಬೊಮ್ಮ
ಬಂದನು ಕೆಂಡ . . . . . . . . . .ತಿಮ್ಮ
ಬಂದನು ಹಗಲು ಕಗ್ಗೊಲೆಯ ಮಾದಿಗ ಜಂಪ
ಬಂದರು ವೀರಾದಿ ಭಟರು              ||೭೮||

ರಣಬೋಧೆ ಏಕೆ ಬಲಿಂ . . . . . . .ಸುಭಟರು
ಬಣಗು ಭೂತದ ಕೈಸೆಳೆದು
ನೆಣನ ಹಿರಿದು ಹಿರಿತಿಂಬ ನಲಿವ ಬಲು
ರಣವಕ್ಕಿಯಂತೊದಗಿದರು             ||೭೯||

. . . . . . ಟ್ಟಿರೊದಗಳು ಕಂಡು ಸಿರುಮೇಂದ್ರ
ಉಬ್ಬಿ ನಲಿದು ಹರುಷದಲಿ
ಹೆಬ್ಬುಲಿಗಳ ಜಂಗುಳಿಯಂತೆ ಮುಸುಕಿತ್ತು
ಉ . .  . . . . .ಯ ಭಟರು  ||೮೦||

ಕಡುಗಲಿ ಭಟರು ಕಗ್ಗೊಲೆಗೆ ಹೋಗುವರೆಲ್ಲ
ಹಿಡಿ ಕರ್ಪುರ ವೀಳೆಯವಾ
ನಡೆಗೋಟೆಯ ಮಲ್ಲ ಬಂ. . . . . . .ಡಿಯಲಾಗ
ತಡೆದನು ತುಳುವರ ಪೆಮ್ಮ            ||೮೧||

ತುಳುವನ ಗುಂಡಿಗೆಯನು ಬಲ್ಲೆ ಹೊಯ್ಯಲಿ
ಗಳುಕುವಾ . . . . . . ದು ನೆರೆ ಜಂಪಾ
ಹೊಳಕೆಯ ಮಾಸಾಳು ಬಂದು ನಡೆದನಾಗ
ಸೆಳೆಗತ್ತಿ ಮಾದಿಗ ಜಂಪ                ||೮೨||

ಕಗ್ಗೊಲೆಯೊಳು ಮಾರಿಯ . . . .ಣುವೆಯಲಂದು
ಮುಗ್ಗಿ ಬೀಳಲು ನಾನಿವನ
ಸ್ವರ್ಗ ಪರಿಯಲೆತ್ತಿ ತಂದೆ ಸಿರುಮಯೆಂದು
ನುಗ್ಗು ನುರಿಯ ತಮ್ಮ ನುಡಿದ         ||೮೩||

. . . . .ಡೆಯನ ಮುಂದೆ ಪಂಥವನಾಡಿ ಹುಯ್ಯಲ
ಕಡೆಯ ನೋಡದೆ ಬರಿಮಾತ
ನುಡಿವರ ಗಂಡ ನಾನೆನುತ ಚೊಕ್ಕನ ಬುಳ್ಳ
ನಡೆದು ಬೇಡಿದ ವೀಳೆಯವ            ||೮೪||

ಬಟ್ಟು ಗಂಟಿನ ವೀಳೆಯವನಾಂತು ಬೇಡುವ
ಕಿರುಕುಳ ಬಂಟರ ಗಂಡ
ಬರಸಿಡಿಲಿನ ಭದ್ರ ಬಂದು . . . . . . .ನಾಗ
ಜರೆದುಬ್ಬಿ ನಡೆದನೋಲಗದಿ           ||೮೫||

ಗಬ್ಬಿನ ಪಂಥವೇತಕೆ ನಿನಗೆಯೆಂದು
ಹೆಬ್ಬುಲಿ ಕೆಂಡದ ಬಸವ
ಇಬ್ಬರ ಹೊಣಕೆಯ ಬರಸು ನರಸಿಂಗನ
ಸಬ್ಬ ದಳಕೆ ಸಿರುಮೇಂದ್ರ               ||೮೬||

ಆನೆ ಕುದುರೆ ಸೇನೆಯ ಕಡಿದೊಟ್ಟುವೆ
ನಾನಿಂದಿನಿರುಳು ಕಗ್ಗೊಲೆಯ
ಜೇನಕಲ್ಲ ಬೈಚಣ್ಣ ನುಡಿಯೆ ಕಂಡು
ಮೀನಿಗ ಲಕ್ಕಯ್ಯ ತಡದ                ||೮೭||

ತೊರೆಯನೀಸುವ ಹರುಗೋಲಪ್ಪ ತೆರನಂತೆ
ಸರ್ವ ದಂಡಿನ ಬುದ್ಧಿಯನು
ಹೊರವಂಟು ಬಾಳುವ ದಿನವುಂಟು ನಮಗಿನ್ನು
ಮೆರವೆನು ವೀರಗಾಳಗವ               ||೮೮||

ಅರೆಬಿರಿದಿನ ಚೋಹದ ನಡೆಗೋಟೆಯ
ಮೆರೆವ ಗುಬ್ಬಿಯ ಜಗಝಂಪ
ತುರುಗಿದ ಝಲ್ಲಿ ಎಳವ ಸರಪಣಿಗಳ
ಹರಿಗೆಯಕಾರರ ಕರೆಸಿ                  ||೮೯||

ತನ್ನ ಪ್ರಾಣಕೆ ಸರಿಮಿಗಿಲೆಂಬ ಭಟರಿಗೆ
ಮನ್ನಿಸಿ ಸಮ ವೀಳ್ಯವಿತ್ತು
ಭಿನ್ನವಿಲ್ಲದೆ ಕಗ್ಗೊಲೆಗೆ ಕಳುಹಿದ
ಚೆನ್ನಿಗ ಸಿರುಮಭೂವ[ರ]ನು           ||೯೦||

ಕಡುಗಲಿ ಸಿರುಮಗೆರಗಿ ಬಂಟರು ಮುಂದೆ
ನಡೆದರೊಗ್ಗಾಗಿ ಸುಭಟರು
ಉಡಿದಾರಗಳ ಕಿತ್ತು ಕಡಿದಲೆಗಳ ಹೊತ್ತು
ಜಡಿವ ೧೪[3]ಕಾರ್ಗತ್ತಲೆಯೊಳಗೆ೧೪[4]    ||೯೧||

ಕಾರ ಮಿಂಚಿನ ಬಳಗದವೊಲು ಸುಭಟರು
ಸೇರಿ ರಾಯನ ಪಾಳೆಯವ
ದಾರೆ ಕಿಗ್ಗಟ್ಟಿ ಸುರಗಿಗಳ ಕಿತ್ತೆತ್ತಿ
ಧೀರರು ನಡೆದರೊಗ್ಗಿನಲಿ               ||೯೨||

ಮಹರಾತ್ರಿಯಲಿ ಬೂದಿಹಾಳಿನ ಸಿರುಮನ
ಸಾಹಸದ ಎಕ್ಕಟಿಗರು
ಕಾಹು ಮಾಡದೆ ಊರ ಹೊರಡಿಸಿ ದಂಡನು
ನುಗ್ಗುನುರಿಯ ಮಾಡೆಂದ              ||೯೩||

ಅಗ್ಗಳೆ ಸಿರುಮನ ವೀರಾಧಿವೀರರು
ಉಗ್ರದಿಂದಲಿ ಹೊರಟರು
ಸ್ವರ್ಗದ ಬಾಗಿಲ ಕಿತ್ತೆತ್ತಿ ಹೊಕ್ಕಂತೆ
ಕಗ್ಗೊಲೆಯಲಿ ರಾಯನವರ             ||೯೪||

ಸಿಡಿಲ ರವಸದಂತೆ ತಮ್ಮೊಳು ತಾವಾಡಿಸಿ
ದೊಡನೆರಗುವ ತೆರನಂತೆ
ಗುಡಿ ಗಜ ತುರಗ ಕಾಲಾಳು ಪವುಜನೆಲ್ಲ
ಕಡಿದೊಟ್ಟಿದರು ಬೇಸರದೆ೧೫[5]          ||೯೫||

ಏಳಲೀಸದೆ ಬೀಳಲಿರಿದು ಮಲಗಿದರ
ತೋಳ್ತೊಡೆ ನಡು ಹರಿಯ ಹೊಯ್ದು
ಸೀಳೆ ಹೊಟ್ಟೆಯ ಕರ್ಗಳಳ ಚೆಲ್ಲಿ ತೆಲುಗರ
ಪಾಳ್ಯವ ಧುಮ್ಮೇಳಲಿರಿದು೧೫[6]          ||೯೬||

ಕರಿಗಳ *[7][ಹಿಂಡ ಒತ್ತರಿಸಿ]*[8] ಕೋಪದಿ ಕೇ
ಸರಿಯೊಳು ಸೆಣಸುವಂದದಲಿ
ಸಿರುಮನ ಭಟರು ಮೂದಲಿಸಿರಿದಾಡಿತು
ನರಸಿಂಹನ ಭಟರೊಡನೆ               ||೯೭||

ಮುಂದಲೆಗಳ ಪಿಡಿದಿರಿದಾಡಿತು ತಮ್ಮ
ಕಂದುವೆಗಳ ಬಲಿಬಲಿದು
ಮುಂದುವರಿಯಗೊಡದವರ ತರುಬಿದರು
ಚಂದದಿ ರಾಯನ ಭಟರು               ||೯೮||

ಉರುಬಿ ಹೊಕ್ಕರು ಕಲಿ ಮಾಸಾಳು ಪಂಥದಿ
ಕುರಿವಿಂಡ ತೋಳ ಹೊಕ್ಕಂತೆ
ಕರುಳ ಹಿರಿದು ಖಂಡಗಳ ತೆಗೆದೀಡಾದಿ
ಮರುಳ ತಂಡವ ತಣಿಸಿದರು          ||೯೯||

ಒಬ್ಬರೊಚ್ಚೆರಸಿ ಒಬ್ಬರು ಚೀರಿ ಮೊರೆಯಿಟ್ಟು
ಬೊಬ್ಬುಳಿಗೊಂಡು ತೆಲುಗರು
ತಬ್ಬಿಕೊಂಡರು ಗಿಡ ಮರಗಳ ಹೊಕ್ಕು
ಸಬ್ಬ ದಂಡೆಲ್ಲ ಬೆದರಿತು                 ||೧೦೦||[1] ೧೩ಶಿಪ್ರತಿಯಲ್ಲಿ ಇಲ್ಲಿಂದ ಮುಂದೆ ನಾಲ್ಕು ಗರಿಗಳು (೯೯, ೨೦, ೭೧, ೭೨) ಕಳೆದುಹೋಗಿವೆ. ಹೀಗಾಗಿಹಾಕಿದರು ಹರಿಗೆ . . . . . .” ಪದ್ಯದಿಂದಒಟ್ಟು ಗಂಟಿನಪದ್ಯ ಒಳಗೊಂಡ ಭಾಗವನ್ನುಪ್ರತಿಯಿಂದ ಸ್ವೀಕರಿಸಲಾಗಿದೆ (ಸಂ.)

[2] ** ಕೆರೆವ (ಹ).

[3] ೧೪-೧೪ ಖಡ್ಗವು ತಲೆಯೊಳು (ಶಿ)

[4] ೧೪-೧೪ ಖಡ್ಗವು ತಲೆಯೊಳು (ಶಿ)

[5] ೧೫ ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದುಮುಂದಾಗಿವೆ (ಸಂ.)

[6] ೧೫ ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದುಮುಂದಾಗಿವೆ (ಸಂ.)

[7] * – * ಹಿಂಡುವ ತರಿಸಿ (ಶಿ, ).

[8] * – * ಹಿಂಡುವ ತರಿಸಿ (ಶಿ, ).