ಪಲ್ಲವಿ : ಗೋಪಿಗೆ ಒಲಿದ ಗೋಪಾಲ ವಸುದೇವ ಸುತದೇವ

ಪೀತಾಂಬರ ಧರ ಹೇ ದೇವ ಕರುಣಾ ರಸವನು ನೀಸೂಸು

ಚರಣ :  ಗೆಲ್ಲಲಾರೆನು ಮಾಯೆಯನು ಗೆಲಿಸುವ ಭಾರವು ನಿನ್ನದೇ
ಒಳದನಿ ಆಲಿಸು ಹೇ ದೇವ ! ಪ್ರಾರ್ಥನೆ ಮಾಡುವೆ ಪ್ರಭುದೇವ

ಲೀಲಾಮಾನುಷ ವಿಗ್ರಹನೇ ಭಕುತರ ಸಂಕಟ ನೀ ಹರಿಸು
ದಯಾಸಾಗರ ಜಗದ್ರಕ್ಷಕ ಮುಕುಂದ ಮಾಧವ ಮುನಿ ವಿನುತ

ಗೋವಿಂದಾ ಗೋಪಾಲಾ ಮಾಧವ ಕೃಷ್ಣಾಚ್ಯುತ ವಂದೇ
ಪಾಲನ ಚತುರ ಪರಮಾತ್ಮ ಜಯಜಯ ಕೃಷ್ಣಾ ಜಯದೇವ