ಪಲ್ಲವಿ : ಗೋಪ ಗೋಪಿಯರೇ ಓಡುತ ಬನ್ನಿ
ಬೃಂದಾವನವನು ನೋಡುವಾ

ಚರಣ :  ಕೊಳಲನೂದುತ ಗೋಪಾಲ ಕೃಷ್ಣನು
ನಾಟ್ಯವನಾಡುವ ನೋಡುವ ಬನ್ನಿ 

ಅಂಬರಕೆಗರುವ ಸಂಭ್ರಮ ತೋರುವ
ಪೀತಾಂಬರನ ನೋಡುವ ಬನ್ನಿ

ಗಂಧರ್ವರೆಲ್ಲರು ಗಾನವ ಮಾಡುವರು
ಯಕ್ಷ ಕಿನ್ನರರು ತಾಳವ ತಟ್ಟುವರು

ವಿಧ ವಿಧ ಹೂಗಳ ಸುರಿಮಳೆ ಸುರಿವುದು
ಪರಿಮಳ ಸೂಸುತ ಘಮಘಮಿಸುವುವು

ಕೊಳಲ ಕೃಷ್ಣನಿಗೆ ಜಯವನು ಹೇಳಿ
ಜಯವನು ಹಾಡುತ ನಾವೂ ಕುಡಿಯುವ