ಭಗವದಾಟೋಪವದು
ಮೆಯ್ಯಾಂತು ನಿಂತಂತೆ,
ಪ್ರೇಮ, ದಯೆ, ಸತ್ಯ, ಸೌಂದರ್ಯ
ಭವ್ಯಸಾಕಾರಗೊಂಡಂತೆ,
ಗಗನದೌದಾರ್ಯಮಂ
ಕಡಲ ಗಾಂಭೀರ್ಯಮಂ
ಹಿಡಿದು ಕಡೆದಿಟ್ಟಂತೆ,
ಶೋಭಿಸುವ ಬೆಳ್ಗೊಳದ ಗೋಮಟೇಶ,
ನೀನೆನಗೊಂದು ಮಹಾಕಾವ್ಯಂ,
ದಿವ್ಯಹರಕೆಯೊಲಿರುವ ನಿರ್ವಾಣಯೋಗೀಶ
ನೀ ನಿತ್ಯ ಭೂವ್ಯೋಮ ಪೂಜ್ಯಂ.