ಗೋವಿಂದ ಪೈ ರವರು ಕನ್ನಡದ ಹೆಸರಾಂತ ವಿಮರ್ಶಕರೂ, ಕವಿಗಳೂ ಆಗಿದ್ದರು. ರಾಷ್ಟ್ರಕವಿ ಪ್ರಶಸ್ತಿಗೆ ಭಾಜನರಾದವರು. ಅನೇಕ ವಿಧದಲ್ಲಿ ಕನ್ನಡ ನಾಡು ನುಡಿಗಳ ಹೇಳಿಗೆಗೆ, ಏಕೀಕರಣಕ್ಕೆ ಕೆಲಸ ಮಾಡಿದವರಲ್ಲಿ ಮುಖ್ಯರು. ಇವರು ಹುಟ್ಟಿದ್ದು ಮಂಗಳೂರಿನಲ್ಲಿ ಬೆಳೆದದ್ದು ಮಂಜೇಶ್ವರದಲ್ಲಿ. ಇವರು ಮಂಗಳೂರಿನ ಬಾಪೈ ಮನೆತನಕ್ಕೆ ಸೇರಿದವರು. ಗೋವಿಂದ ಪೈ ರವರನ್ನು ಗುರುತಿಸುವುದು ಮುಖ್ಯವಾಗಿ ಸಂಶೋಧಕರಾಗಿ. ಆದರೆ ಅವರ ಸಾಹಿತ್ಯ ಕೃಷಿ ಆರಂಭವಾದದ್ದು ಕಾವ್ಯಸೃಷ್ಟಿಯ ಮೂಲಕ. ಎಂಟನೆಯ ತರಗತಿಯಲ್ಲಿದ್ದಾಗಲೇ ‘ಸುವಾಸಿನಿ, ಪತ್ರಿಕೆಗೆ ಪೈ ಬರೆದು ಕಳುಹಿಸಿದ ಮೂರು ಪದ್ಯಗಳು ಬಹುಮಾನ ಪಡೆದವು. ಅವು ಕಂದದಲ್ಲಿದ್ದವು. ಆದರೆ ೧೯೧೧ ರ ಸುಮಾರಿಗೆ ಪೈಅವರು ಮೊದಲಬಾರಿಗೆ ಪ್ರಾಸಕ್ಕೆ ತಿಲಾಂಜಲಿ ಕೊಡುವುದರ ಮೂಲಕ ಕನ್ನಡ ಕಾವ್ಯ ಕ್ಷೇತ್ರದಲ್ಲಿ ಕ್ರಾಂತಿಯನ್ನೆಬ್ಬಿಸಿದರು. ಇದು ಕಾವ್ಯ ಚರಿತ್ರೆಯಲ್ಲಿ ಗೋವಿಂದಪೈಗಳು ಮಾಡಿದ ಮಹತ್ವದ ಸಾಧನೆ.

ಗೋವಿಂದ ಪೈರವರು ‘ಹೆಬ್ಬೆರಳು, ‘ಚಿತ್ರಭಾನು, ಮತ್ತು ‘ತಾಯಿ, ಎಂಬ ನಾಟಕಗಳನ್ನು ಬರೆದಿದ್ದಾರೆ. ಕುವೆಂಪುರವರ ‘ಬೆರಳ್ಗೆ ಕೊರಳ್, ಕೈಲಾಸಂ ರವರ ‘ಪರ್ಪಸ್,(ಇಂಗ್ಲಿಷ್ ನಲ್ಲಿ) ನಾಟಕಗಳಂತೆ ‘ಹೆಬ್ಬೆರಳು, ನಾಟಕವೂ ಸಹ ಏಕಲವ್ಯನ ಕಥೆಯನ್ನು ಒಳಗೊಂಡದ್ದಾಗಿದೆ. ಒಂದೇ ವಸ್ತುವನ್ನು ಆಯ್ದುಕೊಂಡಿದ್ದರೂ ಆಯಾ ಲೇಖಕರ ದೃಷ್ಟಿಕೋನಕ್ಕೆ ತಕ್ಕಂತೆ ಈ ಮೂರು ಕೃತಿಗಳು ಬಿನ್ನವಾಗಿವೆ. ಪೈರವರು ತಮ್ಮ ಕೃತಿಯಲ್ಲಿ ಆರ್ಯ ಮತ್ತು ಅನಾರ್ಯ ಘರ್ಷಣೆಯತ್ತ ಹೆಚ್ಚು ಗಮನ ಕೊಟ್ಟಿದ್ದಾರೆ. ‘ಕನ್ನಡದ ಮೊರೆ, ಎಂಬ ಸಂಕಲನದಲ್ಲಿ ಕೆಲವು ವ್ಯಕ್ತಿಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿವೆ.

ಗೋವಿಂದ ಪೈರವರ ಕಾವ್ಯ ಪ್ರಜ್ಞೆ ಮತ್ತು ಸಂಶೋಧನ ಪ್ರಜ್ಞೆಗಳನ್ನು ಕುರಿತು ಡಾ||ಆ.ನೆ.ಉಪಾಧ್ಯ ಅವರು ಹೀಗೆ ಅಬಿಪ್ರಾಯ ಪಟ್ಟಿದ್ದಾರೆ. “one more paint that strikes me is this may be by way of contrast that in M.Govindapai we have  a research  scholar who could compose poetry and also be an effective creative writer (M.Govindapai A man of setters,)”  ಗೋವಿಂದ ಪೈರವರು ಕನ್ನಡ, ಕೊಂಕಣಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಲೇಖನಗಳನ್ನು ಬರೆದಿದ್ದಾರೆ. ಇವರ ಸಂಶೋಧನೆಯ ಹರಹು ದೊಡ್ಡದು. ಹಳಗನ್ನಡ ನಡುಗನ್ನಡ ಸಾಹಿತ್ಯವನ್ನು ಕುರಿತು ಬರೆಯುವ ಗೋವಿಂದ ಪೈ ಭಾಷಾವಿಜ್ಞಾನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಗ್ರೀಕ್ ಪ್ರಹಸನದಲ್ಲಿ ಕನ್ನಡ ಶಬ್ದಗಳಿವೆ ಎಂದು ಪ್ರತಿಪಾದಿಸುವ ಇವರು ಕನ್ನಡದ ಪ್ರಾಚೀನತೆಯನ್ನು ಕ್ರಿಸ್ತಪೂರ್ವಕ್ಕೆ ಕೊಂಡೊಯ್ಯುತ್ತಾರೆ.

ನೃಪತುಂಗನ ಪಂಪನ ದೇಶ ಕಾಲಗಳ ವಿಚಾರ, ಬಸವೇಶ್ವರರ ಕಾಲನಿರ್ಣಯ, ಮತ ವಿಚಾರ, ಕುಮಾರವ್ಯಾಸನ ಮತವಿಚಾರ, ಇವು ಕೆಲವು ಪೈರವರ ಸಂಶೋಧನ ಲೇಖನಗಳು. ಪೈರವರು ಮಹಾವೀರ ಮತ್ತು ಬುದ್ದನ ಪರಿನಿರ್ವಾಣ ಕಾಲವನ್ನು ಕುರಿತು ಬಹುದೀರ್ಘವಾದ ಲೇಖನಗಳನ್ನು ಬರೆದಿದ್ದಾರೆ. ತುಳುನಾಡು ಮತ್ತು ಕರ್ನಾಟಕದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಇವರ ಸಂಶೋಧನ ಲೇಖನಗಳು ವಹಿಸುವ ಪಾತ್ರ ಗಮನಾರ್ಹವಾದುದು. ಧರ್ಮಗಳು, ದೇವಾಲಯಗಳು ರಾಜವಂಶಗಳ ಮತ್ತು ಶಾಸನಗಳ್ನು ಕುರಿತು ಪೈರವರು ಸಂಶೋಧನೆ ನಡೆಸಿದ್ದಾರೆ.

ಹೆರಾಚೆ ಕೃಷ್ಣ ಭಟ್ಟರು ಮತ್ತು ಮುರಳೀಧರ ಉಪಾಧ್ಯ ಹಿರಿಯಡಕ ಅವರಿಂದ ಸಂಪಾದಿತವಾಗಿ ೧೯೯೫ ರಲ್ಲಿ ಪ್ರಕಟವಾದ ‘ಗೋವಿಂದ ಪೈ ಸಂಶೋಧನ ಸಂಪುಟ, ಎಂಬ ಬೃಹತ್ ಗ್ರಂಥವು ಗೋವಿಂದ ಪೈಗಳ ಸಂಶೋಧನೆಯ ಆಳ -ವಿಸ್ತಾರಗಳಿಗೆ ಸಾಕ್ಷಿಯಾದೆ.

ಗೋವಿಂದ ಪೈ ರವರು ಹಿರಿಯ ತಲೆಮಾರಿಗೆ ಸೇರಿದ ಹಿರಿಯ ಕವಿ ಮತ್ತು ಹಿರಿಯ ಸಂಶೋಧಕರು. ಈ ಎರಡೂ ಕಾರಣಗಳಿಗಾಗಿ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅವರ ಹೆಸರು ಅಮರವಾಗಿದೆ. ತನು ಕನ್ನಡ, ಮನ ಕನ್ನಡ, ನುಡಿ ಕನ್ನಡ ಎಂದು ಹಾಡಿದ ರಾಷ್ಟ್ರಕವಿ ಗೋವಿಂದ ಪೈಗಳ ವ್ಯಕ್ತಿತ್ವ ದೊಡ್ಡದು. ೬.೯.೧೯೬೩ ರಂದು ತಮ್ಮ ಎಂಬತ್ತನೆಯ ವಯಸ್ಸಿನಲ್ಲಿ ಪೈರವರು ನಿಧನರಾದರು.

ಗೋವಿಂದ ಪೈರವರು ‘ಹೆಬ್ಬೆರಳು, ‘ಚಿತ್ರಭಾನು, ಮತ್ತು ‘ತಾಯಿ, ಎಂಬ ನಾಟಕಗಳನ್ನು ಬರೆದಿದ್ದಾರೆ. ಕುವೆಂಪುರವರ ‘ಬೆರಳ್ಗೆ ಕೊರಳ್, ಕೈಲಾಸಂ ರವರ ‘ಪರ್ಪಸ್,(ಇಂಗ್ಲಿಷ್ ನಲ್ಲಿ) ನಾಟಕಗಳಂತೆ ‘ಹೆಬ್ಬೆರಳು, ನಾಟಕವೂ ಸಹ ಏಕಲವ್ಯನ ಕಥೆಯನ್ನು ಒಳಗೊಂಡದ್ದಾಗಿದೆ. ಒಂದೇ ವಸ್ತುವನ್ನು ಆಯ್ದುಕೊಂಡಿದ್ದರೂ ಆಯಾ ಲೇಖಕರ ದೃಷ್ಟಿಕೋನಕ್ಕೆ ತಕ್ಕಂತೆ ಈ ಮೂರು ಕೃತಿಗಳು ಬಿನ್ನವಾಗಿವೆ. ಪೈರವರು ತಮ್ಮ ಕೃತಿಯಲ್ಲಿ ಆರ್ಯ ಮತ್ತು ಅನಾರ್ಯ ಘರ್ಷಣೆಯತ್ತ ಹೆಚ್ಚು ಗಮನ ಕೊಟ್ಟಿದ್ದಾರೆ. ‘ಕನ್ನಡದ ಮೊರೆ, ಎಂಬ ಸಂಕಲನದಲ್ಲಿ ಕೆಲವು ವ್ಯಕ್ತಿಚಿತ್ರಗಳು, ಆತ್ಮಕಥನಗಳು ಮತ್ತು ಭಾಷಣಗಳು ಅಡಕವಾಗಿವೆ.

ಗೋವಿಂದ ಪೈರವರ ಕಾವ್ಯ ಪ್ರಜ್ಞೆ ಮತ್ತು ಸಂಶೋಧನ ಪ್ರಜ್ಞೆಗಳನ್ನು ಕುರಿತು ಡಾ||ಆ.ನೆ.ಉಪಾಧ್ಯ ಅವರು ಹೀಗೆ ಅಬಿಪ್ರಾಯ ಪಟ್ಟಿದ್ದಾರೆ. “one more paint that strikes me is this may be by way of contrast that in M.Govindapai we have  a research  scholar who could compose poetry and also be an effective creative writer (M.Govindapai A man of setters,)”  ಗೋವಿಂದ ಪೈರವರು ಕನ್ನಡ, ಕೊಂಕಣಿ, ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಲೇಖನಗಳನ್ನು ಬರೆದಿದ್ದಾರೆ. ಇವರ ಸಂಶೋಧನೆಯ ಹರಹು ದೊಡ್ಡದು. ಹಳಗನ್ನಡ ನಡುಗನ್ನಡ ಸಾಹಿತ್ಯವನ್ನು ಕುರಿತು ಬರೆಯುವ ಗೋವಿಂದ ಪೈ ಭಾಷಾವಿಜ್ಞಾನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಗ್ರೀಕ್ ಪ್ರಹಸನದಲ್ಲಿ ಕನ್ನಡ ಶಬ್ದಗಳಿವೆ ಎಂದು ಪ್ರತಿಪಾದಿಸುವ ಇವರು ಕನ್ನಡದ ಪ್ರಾಚೀನತೆಯನ್ನು ಕ್ರಿಸ್ತಪೂರ್ವಕ್ಕೆ ಕೊಂಡೊಯ್ಯುತ್ತಾರೆ.

ನೃಪತುಂಗನ ಪಂಪನ ದೇಶ ಕಾಲಗಳ ವಿಚಾರ, ಬಸವೇಶ್ವರರ ಕಾಲನಿರ್ಣಯ, ಮತ ವಿಚಾರ, ಕುಮಾರವ್ಯಾಸನ ಮತವಿಚಾರ, ಇವು ಕೆಲವು ಪೈರವರ ಸಂಶೋಧನ ಲೇಖನಗಳು. ಪೈರವರು ಮಹಾವೀರ ಮತ್ತು ಬುದ್ದನ ಪರಿನಿರ್ವಾಣ ಕಾಲವನ್ನು ಕುರಿತು ಬಹುದೀರ್ಘವಾದ ಲೇಖನಗಳನ್ನು ಬರೆದಿದ್ದಾರೆ. ತುಳುನಾಡು ಮತ್ತು ಕರ್ನಾಟಕದ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಇವರ ಸಂಶೋಧನ ಲೇಖನಗಳು ವಹಿಸುವ ಪಾತ್ರ ಗಮನಾರ್ಹವಾದುದು. ಧರ್ಮಗಳು, ದೇವಾಲಯಗಳು ರಾಜವಂಶಗಳ ಮತ್ತು ಶಾಸನಗಳ್ನು ಕುರಿತು ಪೈರವರು ಸಂಶೋಧನೆ ನಡೆಸಿದ್ದಾರೆ.

ಹೆರಾಚೆ ಕೃಷ್ಣ ಭಟ್ಟರು ಮತ್ತು ಮುರಳೀಧರ ಉಪಾಧ್ಯ ಹಿರಿಯಪ್ಪ ಅವರಿಂದ ಸಂಪಾದಿತವಾಗಿ ೧೯೯೫ ರಲ್ಲಿ ಪ್ರಕಟವಾದ ‘ಗೋವಿಂದ ಪೈ ಸಂಶೋಧನ ಸಂಪುಟ, ಎಂಬ ಬೃಹತ್ ಗ್ರಂಥವು ಗೋವಿಂದ ಪೈಗಳ ಸಂಶೋಧನೆಯ ಆಳ -ವಿಸ್ತಾರಗಳಿಗೆ ಸಾಕ್ಷಿಯಾದೆ.